ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 03-12-2021

ಗುರಮಠಕಲ್ ಪೊಲೀಸ ಠಾಣೆ
ಗುನ್ನೆ ನಂ:186/2021 ಕಲಂ 279,337,338, 304(ಎ) ಐಪಿಸಿ : ನಿನ್ನೆ ದಿನಾಂಕ 01.12.2021 ರಂದು ಬೆಳಿಗ್ಗೆ 10:45 ಗಂಟೆಗೆ ಫಿರ್ಯಾದಿ ಮತ್ತು ಗಾಯಾಳುದಾರರಾದ, ಮಲ್ಲಿಕಾಜರ್ುನ, ಭೀಮರಾಯ, ಹಾಗೂ ಚಂದ್ರಶೇಖರ ಕೂಡಿಕೊಂಡು ಆರೋಪಿತನಿಗೆ ಸೇರಿದ ಟ್ರ್ಯಾಕ್ಟರನಲ್ಲಿ ಪೇಚಿಂಗ ಕಲ್ಲುಗಳನ್ನು ಹಾಕಿಕೊಂಡು ಹೊಳಗೋಳ ಗ್ರಾಮದಿಂದ ಮಿನಾಸಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಟ್ರ್ಯಾಕ್ಟರ ಚಾಲಕನಾದ ಆರೋಪಿತ ನಾಗೇಶ ಈತನು ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಇಳಿಜಾರಿನಲ್ಲಿ ರಸ್ತೆಯ ತಿರುವಿನಲ್ಲಿ ಒಮ್ಮೇಲೆ ಕಟ್ ಹೊಡೆದಿದ್ದರ ಪರಿಣಾಮವಾಗಿ ಟ್ರ್ಯಾಲಿ ಪಲ್ಟಿಯಾಗಿ ಅಪಘಾತ ಸಂಭವಿಸಿದ್ದು ಸದರಿ ಅಪಘಾದಲ್ಲಿ ಭಾರಿ ಮತ್ತು ಸಾಧಾ ಸ್ವರೂಪದ ರಕ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ದೂರಿನ ಸಾರಾಂಶದ ಮೇಲಿಂದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ:186/2021 ಕಲಂ 279,337,338 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ನಂತರ ಸದರಿ ಪ್ರಕರಣದಲ್ಲಿ ಗಾಯಗೊಂಡಿದ್ದ ಎಲ್ಲಾರಿಗೆ ಹೆಚ್ಚಿನ ಉಪಚಾರಕ್ಕಾಗಿ ಕಲಬುರಗಿಯ ಸರಕಾರಿ ಆಸ್ಪತ್ರೆ ಸೇರಿಕೆ ಮಾಡಿದ್ದು ಅವರಲ್ಲಿ ಗಾಯಾಳು ಮಲ್ಲಿಕಾಜರ್ುನ ಈತನು ತನಗಾದ ಭಾರಿ ಸ್ವರೂಪದ ರಕ್ತಗಾಯಗಳಿಂದ ಗುಣಮುಖನಾಗದೇ ನಿನ್ನೆ ದಿನಾಂಕ 01.12.2021 ರಂದು ರಾತ್ರಿ 8:50 ಗಂಟೆಗೆ ಮೃತಪಟ್ಟಿದ್ದು ಆ ಬಗ್ಗೆ ಮೃತನ ತಂದೆಯವರಾದ ಬಸಣ್ಣ ತಂದೆ ಗುರುಲಿಂಗಪ್ಪ ನಿನ್ನೆಕಾರ ಸಾ||ಹುಳಗೋಳ ಈತನು ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ: 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಳ್ಳುವಂತೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮುಖಾಂತರ ನಿವೇದಿಸಿಕೊಂಡಿದ್ದು ಇರುತ್ತದೆ.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 243/2021 ಕಲಂ 406, 409 ಐ.ಪಿ.ಸಿ. : ಇಂದು ದಿನಾಂಕ: 02-12-2021 ರಂದು 02:15 ಪಿ.ಎಮ್.ಕ್ಕೆ ಫಿರ್ಯಾದಿ ಶ್ರೀ ಮಲ್ಲಿನಾಥ ತಂದೆ ಶಿವಣ್ಣ ನೀಲೂರ ವಯ: 38 ವರ್ಷ ಜಾ:ಎಸ್.ಸಿ ಉ: ವ್ಯವಸ್ಥಾಪಕರು ಫುಲರಟನ್ ಇಂಡಿಯಾ ಕ್ರಡಿಟ್ ಕಂಪನಿ ಲಿಮಿಟೆಡ್ (ಎಫ್.ಐ.ಸಿ.ಸಿ.ಎಲ್.) ಬ್ರ್ಯಾಂಚ್ ಶಹಾಪುರ ರವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೈಪ್ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ, ಬ್ರ್ಯಾಂಚಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟ್ರಾಂಜೆಕ್ಷನ್ ಆಫೀಸರ (ಕ್ಯéಾಷರ) ರಾಮಚಂದ್ರ ರವರು ದಿನಾಂಕ: 09-10-2021 ರಿಂದ ದಿನಾಂಕ: 23-11-2021 ರ ವರೆಗೆ ಬ್ರ್ಯಾಂಚಿಗೆ ಜಮಾ ಆದ ಒಟ್ಟು ಹಣದಲ್ಲಿ 15,40,221/- ರೂ. ಹಣವನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕಿಗೆ ನಂಬಿಕೆ ದ್ರೋಹ ಮಾಡಿ ಹೋಗಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.243/2021 ಕಲಂ. 406, 409 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲಸಿಕೊಂಡು ತನಿಖೆ ಕೈಗೊಂಡೆನು

ಇತ್ತೀಚಿನ ನವೀಕರಣ​ : 03-12-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080