ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-01-2022

ಯಾದಗಿರಿ ಮಹಿಳಾ ಪೊಲೀಸ ಠಾಣೆ

ಇಂದು ದಿನಾಂಕ: 03.01.2022 ರಂದು ರಾತ್ರಿ 8.15 ಗಂಟೆಗೆ ಪಿರ್ಯಾಧಿ ಶ್ರೀಮತಿ ಪ್ರೀಯಾ @ ನಾಗವೇಣಿ  ಗಂಡ ವಿನಯ ತೊಂಡೆಹಾಳ, (ತಂದೆ ಬಸವರಾಜ ಯಲ್ಹೇರಿ) ವಯಾ-32 ವರ್ಷ, ಜಾತಿ-ಲಿಂಗಾಯತ (ಪಾಕನಾಕ ರೆಡ್ಡಿ) ಉ-ಸಾಪ್ಟ್ ವೇರ್ ಇಂಜಿನೀಯರ್, ಸಾ-ನವನಂದಿ ನಿಲಯ, ಮನೆ ನಂ.5-1-143/8 ಬಸವೇಶ್ವರ ನಗರ, ಯಾದಗಿರಿ ಇವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರ ಸಾರಂಶವೇನೆಂದರೆ ಬೆಂಗಳೂರಿನ ಮನೆ ನಂ: A6-182, DLF WESTEND HEIGHTS, Begur-hulimavu Link Road Akshaya Nagar, Bengaluru-560068   ರಲ್ಲಿ ವಾಸವಿರುವ, ಮೂಲತಃ ಬಳ್ಳಾರಿ ನಗರದ ನಿರಂಜನ್ ತೊಂಡೆಹಾಳ್ ರವರ ಮಗನಾದ ವಿನಯ ತೊಂಡೆಹಾಳ್ ರವರ ಜೊತೆ ನನಗೆ ದಿನಾಂಕ: 08-03-2018 ರಂದು ರಾಯಚೂರು ಜಿಲ್ಲೆಯ ಚಂದ್ರ ಮೌಳೇಶ್ವರ ದೇವಸ್ಥಾನದ ಹತ್ತಿರವಿರುವ ಲೋಹರ ಗಲ್ಲಿಯ ಸಂತೋಷಿ ಹೋಮ್ ಟೆಲ್ ನಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ.   

            ಮದುವೆಯ ಸಮಯದಲ್ಲಿ ನಮ್ಮ ತಂದೆಯವರು ವರದಕ್ಷಿಣೆಯಾಗಿ ವರನಿಗೆ 20  ತೊಲೆ (200 ಗ್ರಾಂ)  ಬಂಗಾರ, 2.5 ಕೆ.ಜಿ ಬೆಳ್ಳಿಯ ಸಾಮಾನುಗಳು, ಹಾಗೂ ಒಂದು ಜೊತೆ ಸೂಟ್  ಬಟ್ಟೆಗೆ ರೂ. 40,000/- ನಗದು ಕೊಟ್ಟಿರುತ್ತಾರೆ. ಮದುವೆಗಾಗಿ ಸುಮಾರು 10,00,000/- (ಹತ್ತುಲಕ್ಷ) ಹಣವನ್ನು ಖರ್ಚು ಮಾಡಿರುತ್ತಾರೆ.  ಮದುವೆಯಾದ ನಂತರ ನಾನು ನನ್ನ ಗಂಡ ವಿನಯ ತೊಂಡೆಹಾಳ್  ರವರ ಮನೆ  ನಂ: ಬೆಂಗಳೂರಿನ A6-182, DLF WESTEND HEIGHTS, Begur-hulimavu Link Road Akshaya Nagar, Bengaluru-560068 ರಲ್ಲಿ  ನನ್ನ ಅತ್ತೆ ವಿಶಾಲಾಕ್ಷಿ, ಮಾವ ನಿರಂಜನ್ ರವರ ಜೊತೆ ವಾಸವಾಗಿದ್ದೇನು. ನನ್ನ ಗಂಡ Aon ಕಂಪನಿಯಲ್ಲಿ ಪೈನಾನ್ಸಿಯಲ್ ಅನಾಲಿಸ್ಟ್ ಅಂತ ಕೆಲಸ ಮಾಡುತ್ತಿದ್ದು ನಾನು ಸಹ Wipro ಕಂಪನಿಯಲ್ಲಿ ಸಾಪ್ಟ್ ವೇರ್ ಇಂಜಿನೀಯರ್ ಅಂತ ಕೆಲಸ ಮಾಡುತ್ತಿದ್ದೆನು ನಂತರ ನನ್ನ ಗಂಡ, ಅತ್ತೆ, ಮಾವ ಇವರು ಮದುವೆಯಾದ ನಂತರ ನನ್ನನ್ನು ಒಂದು ತಿಂಗಳು ಚೆನ್ನಾಗಿ ನೋಡಿಕೊಂಡಿದ್ದು, ನಂತರದ ದಿನಗಳಲ್ಲಿ ನನಗೆ ಬರುವ ಸಂಬಳದ ಹಣವನ್ನು ಪೂರ್ತಿಯಾಗಿ ತಮಗೆ ಕೊಡಲು ಕೇಳಿದರು. ನಾನು ಸಂಬಳದಲ್ಲಿ ರೂ.10,000/- (ಹತ್ತುಸಾವಿರ) ರೂಪಾಯಿ ಮನೆಯ ಖರ್ಚಿಗೆ ಕೊಡುತ್ತೇನೆ, ಉಳಿದ ಹಣವನ್ನು ನನ್ನ ಸೇವಿಂಗ್ಸ್ ಅಕೌಂಟನಲ್ಲಿ ಇಟ್ಟುಕೊಳ್ಳುತ್ತೇನೆ, ಮುಂದೆ ಒಳ್ಳೇಯದು, ಕೆಟ್ಟದ್ದು ಅಂತ ಬಂದಾಗ ಬಳಸಲು ಬರುತ್ತದೆ ಅಂತ ಹೇಳಿದೆನು.ಅದಕ್ಕೆ ಅವರು ನಾನು ಸಂಬಳದ ಪೂರ ಹಣವನ್ನು ಕೊಡದಿದ್ದದ್ದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮೂವರು ಸೇರಿಕೊಂಡು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲು  ಪ್ರಾರಂಭಿಸಿದರು.

       ನಾನು ಮನೆಗೆ ತರಕಾರಿ ಅಥವಾ ಇತರೆ ವಸ್ತುಗಳನ್ನು ತಂದಾಗ ನನ್ನ ಅತ್ತೆ, ಮಾವ ಇದು ಏನು ಚೆನ್ನಾಗಿದೆ ಅಂತ ತೆಗೆದುಕೊಂಡು ಬಂದಿದ್ದೀಯಾ, ಈಗಾಗಲೇ ಅವು ಕೊಳೆತು ಹೋಗಿವೆ  ಎಂದು ನನ್ನನ್ನು  ಹಿಯಾಳಿಸಿ, ಅವಮಾನಿಸಿ  ಮಾನಸಿಕ ಹಿಂಸೆ ನೀಡುತ್ತಿದ್ದರು. ನಾನು ಅಡುಗೆ ಮಾಡಿದ ನಂತರ ಅವರ ಪರವಾನಿಗೆ ಪಡೆಯದೇ ಊಟ ಮಾಡಿದರೆ ನನ್ನ ಅತ್ತೆ, ಮಾವ  ನೀನು ಒಂದು ಹೆಣ್ಣಾ?, ನಿನ್ನ ಗಂಡನನ್ನು ಬಿಟ್ಟು ಮೊದಲೇ ಊಟ ಮಾಡುತ್ತೀಯಾ ?, ನಮ್ಮ ಮನೆ ಬಿಟ್ಟು ಹೋಗು ಅಂತ ಅವಾಚ್ಯ ಶಬ್ಧಗಳಿಂದ ಬೈಯುತ್ತಿದ್ದರು. 

            ಕೆಲವೊಂದು ಸಾರಿ ನನಗೆ ಅನ್ನ-ನೀರು ಕೊಡುತ್ತಿರಲಿಲ್ಲಾ.ಇದರಿಂದ ನಾನು ಬೇಸತ್ತು ದಿನಾಂಕ:16-10-2018 ರಂದು  ಬೆಂಗಳೂರು  ನಗರದ ಹುಳಿಮಾವು ಪೊಲೀಸ್ ಸ್ಟೇಷನ್  ನಲ್ಲಿ ನನ್ನ ಗಂಡ ಹಾಗೂ ಅತ್ತೆ, ಮಾವನ ವಿರುದ್ಧ ದೂರು ಕೊಟ್ಟಿದ್ದೇನು. ಸದರಿ ಪೊಲೀಸ್ ಅಧಿಕಾರಿಗಳು ನನ್ನ ಗಂಡ, ಅತ್ತೆ, ಮಾವ ಇವರಿಗೆ ಠಾಣೆಗೆ  ಕರೆಯಿಸಿ ಬುದ್ದಿವಾದ ಹೇಳಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ಕಳಿಸಿದ್ದರು.

      ನಂತರ ದಿನಾಂಕ: 28-11-2018 ರಂದು ಬೆಳಿಗ್ಗೆ 9.00 ಗಂಟೆ ಸಮಯದಲ್ಲಿ ನಾನು ಪಾತ್ರೆಗಳನ್ನು ತೊಳೆದು ಕೆಲಸಕ್ಕೆ ಹೋಗುತ್ತಿದ್ದಾಗ, ನನ್ನ ಅತ್ತೆ ಮತ್ತು ಮಾವ  ನಿನಗೆ ಸರಿಯಾಗಿ ಪಾತ್ರೆಗಳನ್ನು ತೊಳೆಯಲು ಬರುವುದಿಲ್ಲ, ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ, ಅಂತ ನನ್ನ ಜೊತೆ ಜಗಳ ಮಾಡಿದ್ದು, ನಾನು ಕೆಲಸವನ್ನು ಮುಗಿಸಿಕೊಂಡು ಸಾಯಂಕಾಲ ಮನೆಗೆ ಬಂದಾಗ, ನನ್ನ ಗಂಡ ಅತ್ತೆ ಮತ್ತು ಮಾವ ಮೂವರು ಸೇರಿ ನನ್ನ ಜೊತೆ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ಬೈದು, ನನಗೆ ನನ್ನ ಗಂಡ  ಕೈಯಿಂದ ಕಪಾಳಕ್ಕೆ ಹೊಡೆದು, ಮನೆಯಿಂದ ಆಚೆಗೆ ಹಾಕಿದರು. ನಾನು ಅಲ್ಲಿಂದ ತವರು ಮನೆ ಯಾದಗಿರಿ  ಬರುವ ಸಂಬಂಧ ಮೇಜೆಸ್ಟೀಕ್ ಬಸ್ ನಿಲ್ದಾಣಕ್ಕೆ ಹೋದೆನು. ನನ್ನ ಜೊತೆಯಲ್ಲಿ ಬಂದಿದ್ದ  ನನ್ನ ಗಂಡ ನನಗೆ ಇನ್ನು ಮುಂದೆ ನಾವೀಬ್ಬರು ಹೊಸ ಜೀವನ ಶುರು ಮಾಡೋಣ ಅಂತ ಹೇಳಿ, ನನ್ನನ್ನು ವಾಪಾಸ್ ಮನೆಗೆ ಕರೆದುಕೊಂಡು ಹೋದರು.

         ಸ್ವಲ್ಪ ದಿನ ನನ್ನನ್ನು ಸರಿಯಾಗಿ ನೋಡಿಕೊಂಡು ನಂತರ ನನ್ನ ಗಂಡ, ಅತ್ತೆ-ಮಾವ ಎಲ್ಲರೂ ಸೇರಿಕೊಂಡು ಮತ್ತೆ ನಾನು ದುಡಿದ ಸಂಬಳದ ಪೂರ್ತಿ ಹಣವನ್ನು ಕೊಡಲು ನನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು. ದಿನಾಂಕ: 10-12-2018 ರಂದು ನಾನು ಹುಳಿಮಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದು, ಸದರಿ ಪೊಲೀಸ್ ಠಾಣೆಯಲ್ಲಿ ಹಿರಿಯರು ರಾಜಿ ಸಂದಾನ ಮಾಡಿ, ನನ್ನ ಅತ್ತೆ-ಮಾವ ಗಂಡನಿಗೆ ಬುದ್ದಿ ಹೇಳಿ, ಮುಚ್ಚಳಿಕೆ ಬರೆಯಿಸಿಕೊಂಡ ನಂತರ ದೂರನ್ನು ವಾಪಾಸ ಪಡೆದಿದ್ದು ಇರುತ್ತದೆ. ನಂತರ ನಾನು ಗರ್ಭವತಿಯಾಗಿದ್ದು ಮಾರ್ಚ ತಿಂಗಳ 2019 ರಲ್ಲಿ ಸೀಮಂತ ಕಾರ್ಯ ಮುಗಿದ ನಂತರ ನನ್ನ ತಂದೆ ತಾಯಿಯವರು ನನ್ನನ್ನು ಯಾದಗಿರಿಗೆ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ ದಿನಾಂಕ: 25-07-2019 ರಂದು ನಾನು ಯಾದಗಿರಿಯ ಆದರ್ಶ ಹಾಸ್ಪೀಟಲ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೇನೆ. ಜನೇವರಿ 2020 ರಲ್ಲಿ ನಮ್ಮ ಮಗುವಿಗೆ 5 ತಿಂಗಳು ತುಂಬಿದ್ದು, ನನ್ನನ್ನು ಮತ್ತು ನನ್ನ ಮಗುವನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ನಮ್ಮ ತಂದೆಯವರು ನನ್ನ ಗಂಡನಿಗೆ ಪೋನ್ ಮುಖಾಂತರ ತಿಳಿಸಿದ್ದು, ಅದಕ್ಕೆ  ನನ್ನ ಗಂಡನು ಈಗ  ಬೆಂಗಳೂರಿನಲ್ಲಿ ಕೋವಿಡ್ ಇದೆ ಬರುವದು ಬೇಡ ಎಂದು ಹೇಳಿದರು.  ದಿನಾಂಕ:15-03-2020 ರಂದು ಲಾಕಡೌನ್  ಇದ್ದಕಾರಣ ಕಂಪನಿಯು ವರ್ಕಫ್ರಮ್ ಹೋಮ್ ಘೋಷಣೆ ಮಾಡಿದ್ದರಿಂದ ನಾನು ನನ್ನ ತವರು ಮನೆಯಲ್ಲಿ ಇದ್ದುಕೊಂಡು ಕರ್ತವ್ಯ ಮಾಡುತ್ತಿದ್ದೇನು.ದಿನಾಂಕ 03-09-2021 ರಂದು ನನ್ನ ಗಂಡ, ಅತ್ತೆ, ಮತ್ತು ಮಾವ ರವರು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಂದಿದ್ದು, ಆಗ ನಮ್ಮ  ಹಿರಿಯರಾದ ಬಾಪುಗೌಡ ದದ್ದಲ್, ಪ್ರವೀಣಕುಮಾರ ತಂದೆ ಮಲ್ಲಿಕಾರ್ಜುನ್ ಗೋಡಗೇರಿ, ಶಿವಕುಮಾರ ತಂದೆ ಬಸವರಾಜಪ್ಪ ಇಡ್ಲೂರು, ಶರಣಗೌಡ ತಂದೆ ಬಸವರಾಜಪ್ಪ ಯಲ್ಹೇರಿ ರವರ ಸಮಕ್ಷಮದಲ್ಲಿ ಅವರು ನನಗೆ  ಮತ್ತು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತೆವೆಂದು ಹೇಳಿ ಬೆಂಗಳೂರಿಗೆ ಕರೆದುಕೊಂಡು ಹೋದರು. 

        ನಾನು ಬೆಂಗಳೂರಿಗೆ ಹೋದಾಗ ನನ್ನ ಗಂಡ, ಅತ್ತೆ, ಮಾವ ರವರು ನನ್ನ ಜೊತೆ ನಾಲ್ಕು ದಿನ ಚೆನ್ನಾಗಿ ನಡೆದುಕೊಂಡು ಐದನೇಯ ದಿನಕ್ಕೆ ನಿನ್ನ 2 ವರ್ಷದ ಸಂಬಳ  ರೂ. 15,00,000/- (ಹದಿನೈದು ಲಕ್ಷ ) ಹಣವನ್ನು ನಮಗೆ ಕೊಡು ಎಂದು  ಜಗಳ ಮಾಡಿದ್ದು, ನಂತರ ನಾನು ಮನೆ ಖರ್ಚಿಗೆ ಹಾಗೂ ಮಗಳ ಓದಿನ ಸಲುವಾಗಿ ಸಂಬಳದ ಅರ್ಧ ಹಣವನ್ನು ಖರ್ಚಿಗಾಗಿ ಕೊಡುತ್ತೇನೆಂದು ಹೇಳಿದ್ದು,  ಅದಕ್ಕೆ ನನ್ನ ಗಂಡ, ಅತ್ತೆ, ಮತ್ತು ಮಾವ ನಿನ್ನ ಪೂರ್ತಿ ಸಂಬಳವನ್ನು ನಮಗೆ ಕೊಟ್ಟು, ನಾವು ಹೇಳಿದಂಗೆ ಕೇಳಿಕೊಂಡು ನಮ್ಮ ಮನೆಯಲ್ಲಿ ಇರು, ಇಲ್ಲದಿದ್ದರೇ  ನಮ್ಮ ಮನೆಯಿಂದ ಆಚೆ ಹೋಗು ಅಂತ ಹೇಳಿದರು.ನನಗೆ ನನ್ನ ಗಂಡ ನೀನು ಮತ್ತು ನಿನ್ನ ಮಗಳು ಬಂದು ನಮ್ಮ ಮನೆಯಲ್ಲಿ ಬಿಟ್ಟಿ ಊಟ ಮಾಡಿಕೊಂಡು ಸೆಟ್ಲ್ ಆದ್ರಿ ಅಂತ ನನಗೆ ಹಿಯಾಳಿಸುತ್ತಿದ್ದರು. ನಾನು ನನ್ನ ಮಗಳು ಆರುಶಿ ಜೊತೆ ಅಪಾರ್ಟಮೆಂಟ್ ಆವರಣದಲ್ಲಿ ಬೆಳಿಗ್ಗೆ, ಸಾಯಂಕಾಲ ವಾಕಿಂಗ್ ಹೋದರೂ ಸಹ ನನ್ನ ಗಂಡ ಮತ್ತು ಮಾವ ಹಿಂಬಾಲಿಸಿಕೊಂಡು ಬಂದು  ನನ್ನನ್ನು ಸಂಶಯ ದೃಷ್ಟಿಯಿಂದ ನೋಡುತ್ತಿದ್ದರು. ನಾನು ಮನೆಗೆ ಬಂದ ನಂತರ ನನ್ನ ಅತ್ತೆ-ಮಾವ ಮತ್ತು ಗಂಡ ಜಗಳ ಮಾಡುತ್ತಿದ್ದರು. ನನ್ನ ಮಗಳು ಆರುಶಿ ಊಟ ಮಾಡಿದರೇ ನಿನ್ನ ಮಗಳು  ಜಾಸ್ತಿ ಊಟ ಮಾಡುತ್ತಾಳೆ ಎಂದು  ಹಿಯಾಳಿಸಿ ಮಾತನಾಡುತ್ತಿದ್ದರು.

            ಬೆಂಗಳೂರಿಗೆ ಹೋದ ಒಂದುವರೆ ತಿಂಗಳ ನಂತರ ಅಂದರೆ ದಿನಾಂಕ:26-10-2021 ರಂದು ಬೆಳಿಗ್ಗೆ 7:30 ರಿಂದ 8:00 ಗಂಟೆಗೆ ನಾನು ಅಡುಗೆ ಮಾಡುತ್ತಿದ್ದಾಗ ನನ್ನ ಮಗಳು ಆರುಶಿ ನನ್ನ ಅತ್ತೆಯ ಕಡೆಗೆ ಹೊಗಲಿಲ್ಲ. ಆಗ ನನ್ನ ಅತ್ತೆ ನನ್ನ ಮಗಳನ್ನು ಸಿಟ್ಟಿನಿಂದ ತಳ್ಳಿದಾಗ ಆಕೆಯ ತಲೆ ಗೊಡೆಗೆ ಬಡಿದು ಜೋರಾಗಿ ಅಳುತ್ತಿದ್ದಳು.  ಆಗ ನಾನು ನನ್ನ ಮಗಳನ್ನು ಬೆಡ್ ರೂಮಿಗೆ ಕರೆದುಕೊಂಡು ಹೋಗಿ ಸಮದಾನ ಪಡಿಸುತ್ತಿದ್ದಾಗ, ನನ್ನ ಗಂಡ, ಅತ್ತೆ-ಮಾವ ಮೂವರು ಸೇರಿ ಒಳಗೆ ಬಂದು, ಬೆಡ್ ರೂಮ್ ಬಾಗಿಲು ಹಾಕಿ, ನನ್ನ ಜೊತೆ ಜಗಳ ಮಾಡಿದರು. ಆಗ ನನ್ನ ಗಂಡ ನನ್ನನ್ನು ಕುತ್ತಿಗೆ ಹಿಡಿದು ಬಾತರೂಮಿನಲ್ಲಿ ಕೂಡಿ ಹಾಕಿದ್ದು, ಹತ್ತು ನಿಮಿಷಗಳ ನಂತರ ಬಾತರೂಮ ಬಾಗಿಲು ತೆಗೆದರು. ಈ ಮೂರು ಜನರು ನನಗೆ ಚಿತ್ರ ಹಿಂಸೆ ನೀಡಿ, ನಾನಾಗೀ ನಾನೇ  ಆತ್ಮಹತ್ಯೆ ಮಾಡಿಕೊಳ್ಳುವಂತೆ ತೊಂದರೆ ಕೊಟ್ಟಿದ್ದರಿಂದ ನಾನು ಆ ದಿನ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ, ಆದರೆ ನನ್ನ ಮಗಳ ಸಲುವಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಬದಲಿಸಿದೆನು.

         ನಂತರ ದಿನಾಂಕ: 01-11-2021 ರಂದು ನಾನು ದೀಪಾವಳಿ ಹಬ್ಬದ ಸಂಬಂಧ ಯಾದಗಿರಿ ನನ್ನ ತವರು ಮನೆಗೆ ಬರುವ ಕಾಲಕ್ಕೆ ಮನೆಯಲ್ಲಿ ನನ್ನ ಪರಸನಲ್ ತೋಷಿಬಾ ಕಂಪನಿಯ ಲ್ಯಾಪಟಾಪ್ ನ್ನು ಹಾಗೂ ನನ್ನ ಮತ್ತು ಮಗಳ ಉಡುಗೆ-ತೊಡುಗೆಗಳನ್ನು ಬಿಟ್ಟು ಬೆಂಗಳೂರಿನಿಂದ ಗಂಡನ ಜೊತೆಯಲ್ಲಿ ಕಾರಿನಲ್ಲಿ ಬರುತ್ತಿದ್ದಾಗ ನನ್ನ ಗಂಡನು ನನಗೆ ನಿನ್ನ ಮತ್ತು ಮಗಳ ಮೈಮೇಲೆ ಇರುವ ಬಂಗಾರದ ಸಾಮಾನುಗಳನ್ನು ಬಿಚ್ಚಿ ಕೊಡು ನಾನು ಅವುಗಳನ್ನು ಸೇಫ್ ಲಾಕರ್ ನಲ್ಲಿ ಇಡುತ್ತೇನೆಂದು  ಹೇಳಿದಾಗ ನಾನು ನನ್ನ  ಮತ್ತು ಮಗಳ ಮೈಮೇಲಿದ್ದ  55 ಗ್ರಾಂ ತಾಳಿ ಚೈನು, 40 ಗ್ರಾಂ ಕೈಬಳೆ, ತಲಾ 10 ಗ್ರಾಂ ನ ಎರಡು ಉಂಗುರ, ನೆಕ್ಲೆಸ್ 50 ಗ್ರಾಂ, ಹಾಗೂ ನನ್ನ ಮಗಳ ಆರು ಬಂಗಾರದ ಬಳೆಗಳು, ಉಂಗುರಗಳು, ಎರಡು ಬಂಗಾರದ ಚೈನುಗಳು ಎಲ್ಲವನ್ನು ಬಿಚ್ಚಿಕೊಟ್ಟೆನು.

          ದಿನಾಂಕ: 02-11-2021 ರಂದು ಬೆಳಿಗ್ಗೆ ಸುಮಾರು 10:00 ಗಂಟೆಯಿಂದ 10:30 ಗಂಟೆಯ ಅವಧಿಯಲ್ಲಿ ನನ್ನ ಮಾವನವರು ಸಹ ಯಾದಗಿರಿಗೆ ಬಂದು, ಯಾವುದೋ ಒಂದು ಲಾಡ್ಜನಲ್ಲಿ ಉಳಿದುಕೊಂಡು ನನ್ನ ಗಂಡನಿಗೆ ಪದೇ ಪದೇ ಕರೆ ಮಾಡುತ್ತಿದ್ದರು. ಆಗ ನನ್ನ ಗಂಡನು, ನನ್ನ ಜೊತೆಗೆ ಹಾಗು ನಮ್ಮ ತಂದೆ ತಾಯಿಯವರ ಜೊತೆ ವಿನಾಃಕಾರಣ ಜಗಳ ಮಾಡಿ ನನ್ನನ್ನು ಬೆಂಗಳೂರಿಗೆ  ಕರೆದುಕೊಂಡು ಹೋಗದೇ ತವರು ಮನೆಯಲ್ಲಿಯೇ ಬಿಟ್ಟು ಹೊರಟು ಹೋದರು.

          ನಂತರ ದಿನಾಂಕ: 14-11-2021 ರಂದು ನನಗೆ ನನ್ನ ಗಂಡನು ಬೆಂಗಳೂರಿಗೆ ಬರಲು ತಿಳಿಸಿ, ನನಗೆ ರೈಲ್ವೆ ಟಿಕೆಟ್ ಬುಕ್ ಮಾಡಿರುತ್ತೇನೆ ಅಂತ ತಿಳಿಸಿದನು. ಆಗ ನಾನು ಒಬ್ಬಳೇ ಮಗುವಿನ ಜೊತೆಗೆ ಬೆಂಗಳೂರಿಗೆ ಬರಲು ಆಗುವುದಿಲ್ಲ, ನೀವು ಯಾದಗಿರಿಗೆ ಬಂದು ನನ್ನ ಮತ್ತು ಮಗುವನ್ನು ಕರೆದುಕೊಂಡು ಹೋಗಿ ಅಂತ ಹೇಳಿದೆನು. ಅದಕ್ಕೆ ಅವರು ಟ್ರೆನ್ ಟಿಕೆಟ್ ಕ್ಯಾನ್ಸಲ್ ಮಾಡಿದರು. ಈ ಮೊದಲು ನನ್ನ ಗಂಡನು ನಿನಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುತ್ತೇನೆ, ನೀನು ಆಫೀಸಿಗೆ ಹೋಗಿ ಸಹಿ ಮಾಡುವ ಅವಶ್ಯಕತೆ ಇಲ್ಲ, ಮನೆಯಲ್ಲಿ ಖಾಲಿ ಪೇಪರಗೆ ಸಹಿ ಮಾಡಿ ಕೊಡು ನಾನು ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಂಡು ಬರುತ್ತೇನೆಂತ ಹೇಳಿ ನನ್ನಿಂದ ಖಾಲಿ ಪೇಪರಗೆ ಸಹಿ ಮಾಡಿಸಿಕೊಂಡು ತಮ್ಮಲ್ಲಿ ಇಟ್ಟುಕೊಂಡಿರುತ್ತಾರೆ.

       ನಂತರ ದಿನಾಂಕ: 26-11-2021 ರಂದು ನಾನು ಯಾದಗಿರಿಯ ನನ್ನ ತಂದೆಯ ಮನೆಯಲ್ಲಿ ಇದ್ದರೂ ಕೂಡ ನನಗೆ ತೊಂದರೆ ಕೊಡುವ ಉದ್ದೇಶದಿಂದ ಬೆಂಗಳೂರಿನ ನನ್ನ ಆಫೀಸಿಗೆ ಡೈವರ್ಸ ನೋಟಿಸ್ ಕಳಿಸಿದ್ದು, ನನ್ನ ಗಂಡ ವಿನಯ ತಂದೆ ನಿರಂಜನ ತೊಂಡೆಹಾಳ  ಹಾಗೂ ನನ್ನ ಮಾವ ನಿರಂಜನ ತಂದೆ ಲಿಂಗನಗೌಡ ತೊಂಡೆಹಾಳ ಹಾಗೂ ನನ್ನ ಅತ್ತೆ ವಿಶಾಲಾಕ್ಷಿ ಗಂಡ ನಿರಂಜನ ತೊಂಡೆಹಾಳ

          ಈ ಮೂವರು ಜನರು ಸೇರಿ ನನ್ನ ತಂದೆಯಿಂದ ನನ್ನ ಮದುವೆ ಕಾಲಕ್ಕೆ ವರದಕ್ಷಿಣೆ ಪಡೆದುಕೊಂಡು ನನ್ನನ್ನು ಮದುವೆಯಾಗಿ, ನನಗೆ ಸರಿಯಾಗಿ ನೋಡಿಕೊಳ್ಳದೇ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿರುತ್ತಾರೆ.  ನಾನು ದುಡಿದ ಸಂಬಳದ ಎಲ್ಲಾ ಹಣವನ್ನು ಅವರಿಗೆ ಕೊಡಬೇಕು ಅಂತ ಕೇಳಿದ್ದು  ನಾನು ಅವರಿಗೆ ಪೂರ್ತಿ ಸಂಬಳ ಕೊಡಲು ನಿರಾಕರಿಸಿದ್ದನ್ನು ಮನಸ್ಸಿನಲ್ಲಿಟ್ಟುಕೊಂಡು ನನಗೆ  ಅವಾಚ್ಯ ಶಬ್ದಗಳಿಂದ ಬೈದು,ಹೊಡಿ ಬಡಿ ಮಾಡಿ ದೈಹಿಕ ಮಾನಸಿಕ ಹಿಂಸೆ ನೀಡಿರುತ್ತಾರೆ. ಆದ್ದರಿಂದ ಈ ಮೂವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ವಿನಂತಿ. ನನ್ನ ಗಂಡ ವಿನಯ ರವರ ಮೊಬೈಲ್ ನಂ:  ನನ್ನ ಮಾವ ನಿರಂಜನ್ ರವರ ಮೊಬೈಲ್ ನಂ: ಹಾಗೂ ನನ್ನ ಅತ್ತೆ ವಿಶಾಲಾಕ್ಷಿ ರವರ ಮೊಬೈಲ್ ನಂ:  ಅಂತ  ಇರುತ್ತದೆ ಅಂತ ಕೊಟ್ಟ ದೂರಿನ ಸಾರಂಶದ ಮೇಲಿಂದ ಠಾಣೆಯಲ್ಲಿನ ಗುನ್ನೆ ನಂ: 01/2022 ಕಲಂ: 498(ಎ), 504, ಐ.ಪಿ.ಸಿ ಮತ್ತು 3, 4 ಡಿ.ಪಿ.ಎಕ್ಟ್ ಮತ್ತು ಸಂ/  34 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತದೆ.ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ 02/2022 ಕಲಂ: 143, 147, 148, 498(ಎ), 323, 324, 354,326, 342, 504, 506 ಸಂ.149 ಐಪಿಸಿ : ಇಂದು ದಿನಾಂಕಃ 03/01/2022 ರಂದು 6.00 ಪಿ.ಎಂ ಕ್ಕೆ ಶ್ರೀಮತಿ ಶಿವಲೀಲಾ ಗಂಡ ಪ್ರಭುಗೌಡ ಕಮತಗಿ ವಯಸ್ಸು;31 ವರ್ಷ ಉ:ಮನೆಕೆಲಸ ಜಾ:ಹಿಂದು ರೆಡ್ಡಿ ಸಾ:ಬೋನಾಳ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಸಾರಾಂಶವೇನೆಂದರೆ, ನನಗೆ 2011 ರಲ್ಲಿ ನನ್ನ ದಿವಂಗತ ತಂದೆ ಮತ್ತು ತಾಯಿಯಾದ ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶರಣಗೌಡ ನಗನೂರ ಇವರು ಬೋನಾಳದ ಪ್ರಭುಗೌಡ ತಂದೆ ನಾಗರೆಡ್ಡೆಪ್ಪ ಕಮತಗಿ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ನಂತರ ಪ್ರಾರಂಭದಲ್ಲಿ ನಮ್ಮ ಸಂಸಾರ ಚೆನ್ನಾಗಿಯೇ ಇತ್ತು. ಈ ಸಮಯದಲ್ಲಿ ನಮ್ಮ ವೈವಾಹಿಕ ಸಂಸಾರದಲ್ಲಿ ಇಬ್ಬರು ಹೆಣ್ಣು ಮಕ್ಕಳು ಇರುತ್ತಾರೆ. ನಂತರ ಕ್ರಮೇಣವಾಗಿ ನನ್ನ ಗಂಡ ಹಾಗೂ ಗಂಡನ ಮನೆಯವರಿಂದ ಪ್ರತಿ ದಿನ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡಹತ್ತಿದರು. ನನ್ನ ಗಂಡನು ಅವರ ಇವರ ಮಾತು ಕೇಳಿ ನನಗೆ ಹೊಡೆ ಬಡೆ ಮಾಡಿ ಹಿಂಸೆ ಕೊಡುತ್ತಿದ್ದನು. ನೀವು ನನಗೆ ಹೀಗೆಕೆೆ ಹಿಂಸೆ ಕೊಡುತ್ತಿದ್ದಿರಿ ನಾನೇನು ಮಾಡಿನಿ ಎಂದು ಪ್ರಶ್ನೆ ಮಾಡಿದಾಗ ನನ್ನನ್ನು ಅವಮಾನಿಸುವುದು ಮತ್ತು ಅನುಮಾನದಿಂದ ನೋಡುವುದು ಹೆಚ್ಚುತ್ತಲೆ ಇತ್ತು ಅದರಲ್ಲಿ ಕಳೆದ 2 ವರ್ಷಗಳಿಂದ ನನ್ನ ಮಾನ ತೆಗೆಯುವ ಉದ್ದೇಶದಿಂದ ನನ್ನನ್ನು ಅನುಮಾನಾಸ್ಪದದಿಂದ ನೋಡುವುದು ಮತ್ತು ಅನೈತಿಕ ಸಂಬಂಧವನ್ನು ಸೃಷ್ಟಿಸಿದ್ದರಿಂದ ನನಗೆ ಅಕ್ಕ ಪಕ್ಕದವರ ಜೊತೆ ಮಾತಾನಾಡುವುದು ತುಂಬಾ ಕಷ್ಟವಾಗಿತ್ತು. ಇಂತಹ ಜೀವನದಿಂದ ಕುಗ್ಗಿ ಮಾನಸಿಕವಾಗಿ ನನ್ನ ಪ್ರಾಣ ಕಳೆದುಕೊಳ್ಳಬೇಕೆಂದು ಅನಿಸಿತ್ತು, ಆದರೆ ನನ್ನ ಮಕ್ಕಳ ಮುಖ ನೋಡಿಕೊಂಡು ಸುಮ್ಮನಿರುವಂತಾಯಿತು. ಆದರೂ ಇದು ಅತೀ ಹೆಚ್ಚಾಗಿ ಪ್ರತಿ ದಿನ ಚಿತ್ರ ಹಿಂಸೆ ಪ್ರಾರಂಭಿಸಿ ನನ್ನನ್ನು ಮನೆಯಿಂದ ಹೊರ ಹಾಕಬೇಕು ಇಲ್ಲಾ ಕೊಲೆ ಮಾಡಬೇಕು ಎಂದು ದುರುದ್ದೇಶದಿಂದ ದಿನಾಂಕ:27/12/2021 ರಂದು ರಾತ್ರಿ 11 ಗಂಟೆಗೆ ನಾನು ಮನೆಯಲ್ಲಿ ಮಲಗಿರುವಾಗ ನನ್ನ ಗಂಡನಾದ 1) ಪ್ರಭುಗೌಡ ತಂದೆ ನಾಗರೆಡ್ಡೆಪ್ಪ ಕಮತಗಿ, ಮೈದುನನಾದ 2) ಬಸನಗೌಡ ತಂದೆ ನಾಗರೆಡ್ಡಪ್ಪ ಕಮತಗಿ, ಅತ್ತೆಯಾದ 3) ಚನ್ನಮ್ಮ ಗಂಡ ನಾಗರೆಡ್ಡೆಪ್ಪ ಕಮತಗಿ, ಹಾಗೂ ನನ್ನ ಗಂಡನ ಸಂಬಂದಿಕರಾದ 4) ನಾನಾಗೌಡ ತಂದೆ ಪರಮಣ್ಣ ಕಮತಗಿ, 5) ಅರುಣಕುಮಾರ ತಂದೆ ಸಿದ್ದಣ್ಣಗೌಡ ಬಿರಾದಾರ ಸಾ:ತುಂಬಿಗಿ, 6) ರವಿ ತಂದೆ ಸಿದ್ದಣ್ಣಗೌಡ ಬಿರಾದಾರ ಸಾ:ತುಂಬಿಗಿ, 7) ಸಿದ್ದಣ್ಣಗೌಡ ತಂದೆ ಪರಮಣ್ಣಗೌಡ ಕಮತಗಿ, 8) ವಿರೇಶ ತಂದೆ ಬಸವಂತ್ರಾಯ ಬಸರೆಡ್ಡಿ ಈ 8 ಜನ ನಾನು ನಿದ್ರೆಯಲ್ಲಿ ರಾತ್ರಿ ಮಲಗಿರುವಾಗ, ಎಲ್ಲರು ನಾನು ಮಲಗಿರುವ ರೂಮನಲ್ಲಿ ಬಂದು ನನ್ನನ್ನು ಎಬ್ಬಿಸಿ ಏಕಾಏಕಿ ಇವರು ಅನುಮಾನ ಪಡುತ್ತಿದ್ದ ವಿಷಯ ಇಟ್ಟುಕೊಂಡು ಜೋರಾಗಿ ನನಗೆ ಕೂದಲು ಹಿಡಿದು ಎಳೆದು ಕಾಲಿನಿಂದ ಒದಿಯುವುದು, ಅವಾಚ್ಯ ಶಬ್ದಗಳಿಂದ ಬೈಯುವುದು ಮಾಡುತ್ತಾ ನನಗೆ ನನ್ನ ಗಂಡ ಪ್ರಭುಗೌಡ ಇತನು ರಾಡಿನಿಂದ ಎಡಗೈಗೆ ಹೊಡೆದು ಭಾರಿ ಗುಪ್ತಗಾಯ ಮಾಡಿದನು, ಬಸನಗೌಡ ಇತನು ಬಡಿಗೆಯಿಂದ ಹಣೆಯ ಎಡಗಡೆ ಹೊಡೆದು ಗುಪ್ತಗಾಯ ಮಾಡಿ ಚಿತ್ರ ಹಿಂಸೆ ಕೊಟ್ಟು ರೂಮನಲ್ಲಿ ಕೂಡಿ ಹಾಕಿದರು. ನಂತರ ನಮ್ಮ ಮನೆಯವರೆಲ್ಲರು ಕೂಡಿ ದಿನಾಂಕ:28/12/2021 ರಂದು ಬೆಳಿಗ್ಗೆ 06:00 ಗಂಟೆಗೆ ನನಗೆ ಹೊರಗಡೆ ಎಳೆದುಕೊಂಡು ಬಂದು ಮನೆಯ ಮುಂದಿನ ಲೈಟ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಕಾಲಿನಿಂದ ಒದಿಯುವುದು, ಕೈಯಿಂದ ಕಪಾಳಕ್ಕೆ ಹೊಡೆಯುವುದು, ಬಡಿಗೆಯಿಂದ ಮೈಕೈಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈಯುತ್ತಾ ಇದ್ದಾಗ ವಿಷಯ ತಿಳಿದು ನನ್ನ ಅಣ್ಣ ಸಿದ್ದನಗೌಡ ತಂದೆ ಶರಣಗೌಡ ಮಾಲಿ ಪಾಟೀಲ್, ಸಂಬಂದಿ ರಾಮನಗೌಡ ತಂದೆ ಶಂಕರಗೌಡ ದುಮದ್ರಿ ಇಬ್ಬರು ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ಇವರು ಬಂದು ಬಿಡಿಸಿದ್ದಕ್ಕೆ ನಿನ್ನ ಜೀವ ಸಹಿತ ಬಿಟ್ಟಿವಿ ಸೂಳಿ ಇಲ್ಲಂದರ ನಿನ್ನ ಜೀವ ಸಹಿತ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಮನೆಯಲ್ಲಿ ಹೊದರು.ನಂತರ ನನಗೆ ನನ್ನ ಅಣ್ಣ ಮತ್ತು ನಮ್ಮ ಸಂಬಂದಿ ಇಬ್ಬರು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಸುರಪುರ ತಂದು ಸೇರಿಕೆ ಮಾಡಿದರು. ನಂತರ ವೈಧ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖಳಾಗಿ ಇಂದು ಠಾಣೆಗೆ ತಡವಾಗಿ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿ, ರಾಡಿನಿಂದ ಬಡಿಗೆಯಿಂದ ಹೊಡೆ ಬಡೆ ಮಾಡಿ, ಮನೆಯಲ್ಲಿ ಕೂಡಿ ಹಾಕಿ, ಜೀವ ಭಯ ಹಾಕಿದ ಮೇಲೆ ಹೇಳಿದ 8 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 02/2022 ಕಲಂ: 143, 147, 148, 498(ಎ), 323, 324, 326, 354, 342, 504, 506, ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 01/2022 ಕಲಂ: 323, 324, 326, 448, 504, 506 ಸಂ.34 ಐಪಿಸಿ : ಇಂದು ದಿನಾಂಕಃ 03/01/2022 ರಂದು 11.15 ಎ.ಎಂ ಕ್ಕೆ ಸುರಪುರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ಸಿ ಮಾಹಿತಿ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಉಪಚಾರಪಡೆಯುತ್ತಿದ್ದ ಗಾಯಾಳು ಶ್ರೀಮತಿ ದೇವಕ್ಕೆಮ್ಮ ಗಂಡ ಶಿವಪ್ಪ ದೊಡ್ಡಿ ವಯಸ್ಸು: 45 ಜಾ|| ಬೇಡರ ಉ|| ಮನೆಗೆಲಸ ಸಾ|| ಕನರ್ಾಳ ಇವರ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ಈ ಮೊದಲಿಂದಲು ನಮ್ಮ ಕುಟುಂಬದ ಮದ್ಯ ಮತ್ತು ನಮ್ಮೂರ ಮರಲಿಂಗಪ್ಪ ಕನ್ನೆಳ್ಳಿ ಇವರ ಕುಟುಂಬದ ಮದ್ಯ ಸುಮಾರು ವರ್ಷಗಳಿಂದ ಹಳೆ ವೈಷಮ್ಯವಿದ್ದು, ಇದೇ ವಿಷಯವಾಗಿ ಆಗಾಗ ತಂಟೆ ತಕರಾರು ಮಾಡುತ್ತಾ ಬಂದಿರುತ್ತಾರೆ. ಹೀಗಾಗಿ ಸುಮಾರು 2 ವರ್ಷಗಳಿಂದ ನಾನು, ನನ್ನ ಮಕ್ಕಳೊಂದಿಗೆ ಕನರ್ಾಳ ಬಿಟ್ಟು, ಸುರಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತೇನೆ. ನನ್ನ ಮಗಳಾದ ಕುಮಾರಿ. ರಂಗಮ್ಮ ಇವಳು ಒಬ್ಬಳೆ ಕನರ್ಾಳ ಗ್ರಾಮದ ನಮ್ಮ ಮನೆಯಲ್ಲಿ ವಾಸವಿದ್ದಳು. ನಮ್ಮೂರಿನಲ್ಲಿ ಹನುಮಾನ ಕಾತರ್ಿಕೋತ್ಸವವು ಪ್ರತಿವರ್ಷದಂತೆ ಈ ವರ್ಷವೂ ಇದ್ದುದರಿಂದ, ದಿನಾಂಕ: 01/01/2022 ರಂದು ಕನರ್ಾಳ ಗ್ರಾಮಕ್ಕೆ ನಾನು, ನನ್ನ ಮಕ್ಕಳಾದ ತಿಮ್ಮಣ್ಣ, ನಾಗರಾಜ ಮತ್ತು ತಿಮ್ಮಣ್ಣನ ಹೆಂಡತಿಯಾದ ಲಕ್ಷ್ಮೀ ಎಲ್ಲರೂ ಹೋಗಿದ್ದೆವು. ಹೀಗಿದ್ದು ಇಂದು ದಿನಾಂಕ: 03/01/2022 ರಂದು ಬೆಳಿಗ್ಗೆ 8:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಮೊಮ್ಮಗನಿಗೆ ಆಡಿಸುತ್ತಾ ಕುಳಿತಿದ್ದಾಗ, ನಮ್ಮೂರಿನ ಮರಿಲಿಂಗಪ್ಪನ ಸಂಬಂದಿಕರಾದ 1) ಹಣಮಂತಿ ಗಂಡ ಗುರಪ್ಪ ಗಡ್ಡೆಸುಗುರ 2) ನಿಂಗವ್ವ ಗಂಡ ಮುದಕಪ್ಪ ಮ್ಯಾಗೇರಿ ಸಾ|| ಹೇಮನೂರ ಹಾಲವಸ್ತಿ|| ಕನರ್ಾಳ 3) ದೇವಮ್ಮ ಗಂಡ ನಾಗಪ್ಪ ಗಡ್ಡೆಸುಗೂರ 4) ದ್ಯಾವಮ್ಮ ಗಂಡ ತಿಮ್ಮಪ್ಪ ಕನ್ನೆಳ್ಳಿ ಇವರೆಲ್ಲರು ಕೂಡಿಕೊಂಡು ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಬಂದವರೇ, ಏನಲೇ ಬೋಸಡಿ ಸೂಳಿ ನೀನು ನಮ್ಮೂರಿಗೆ ಯಾಕೇ ಬಂದೀದಿ ಸೂಳಿ, ನಮಗೆ ಎದುರುಹಾಕಿಕೊಂಡು ಹೇಗೆ ಊರಲ್ಲಿ ಸಂಸಾರ ಮಾಡುತ್ತೀರಿ ನೋಡೆ ಬಿಡುತ್ತೇವೆ ಅಂತ ಅವಾಚ್ಯವಾಗಿ ಬೈಯುತ್ತಿದ್ದಾಗ, ನಾನು ಏಕೆ ಏನಾಯಿತು, ಯಾಕೇ ಈ ರೀತಿ ಬೈಯುತ್ತಿದ್ದೀರಿ ಅಂತ ಅಂದಾಗ ಅವರಲ್ಲಿಯ ಹಣಮಂತಿ ಗಂಡ ಗುರಪ್ಪ ಇವಳು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ತಲೆಯ ಎಡಭಾಗಕ್ಕೆ ಮತ್ತು ಬಲಭಾಗಕ್ಕೆ ಹೊಡೆದು ಭಾರಿ ರಕ್ತಗಾಯಪಡಿಸಿದಳು. ನಿಂಗವ್ವ ಗಂಡ ಮುದಕಪ್ಪ ಇವಳು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಎಡಗಾಲ ತೊಡೆಗೆ ಹೊಡೆದು ಗುಪ್ತಗಾಯಪಡಿಸಿದಳು. ದೇವಮ್ಮ ಗಂಡ ನಾಗಪ್ಪ ಇವಳು ಕೈಯಲ್ಲಿದ್ದ ಬಡಿಗೆಯಿಂದ ಎಡಭುಜಕ್ಕೆ ಹೊಡೆದು ಗುಪ್ತಗಾಯಪಡಿಸಿದಳು. ದ್ಯಾವಮ್ಮ ಗಂಡ ತಿಮ್ಮಯ್ಯ ಇವಳು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಎಡಗೈ ಮೊಳಕೈ ಹತ್ತಿರ, ಎಡಗಣ್ಣಿಗೆ ಹತ್ತಿರ ಹೊಡೆದು ತರಚಿದ ಗಾಯಪಡಿಸಿದಳು. ನಂತರ ಎಲ್ಲರು ಕೂಡಿ ನನಗೆ ನೆಲಕ್ಕೆ ಕೆಡವಿ ಕಾಲಿನಿಂದ ಹೊಟ್ಟೆಗೆ, ಬೆನ್ನಿಗೆ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಸತ್ತೆನೆಪ್ಪೋ ಅಂತ ಚೀರಾಡುತ್ತಿದ್ದಾಗ ಮನೆಯಲ್ಲಿದ್ದ ನನ್ನ ಮಕ್ಕಳಾದ ತಿಮ್ಮಣ್ಣ, ನಾಗರಾಜ, ರಂಗಮ್ಮ, ಸೊಸೆಯಾದ ಲಕ್ಷ್ಮೀ ಗಂಡ ತಿಮ್ಮಣ್ಣ ಮತ್ತು ನಾನು ಚೀರಾಡುವ ಶಬ್ದ ಕೇಳಿ ಬಂದ ನನ್ನ ಅಣ್ಣ ಮಾನಶಪ್ಪ ತಂದೆ ಹಣಮಯ್ಯ ದೇಸಾಯಿ ಎಲ್ಲರೂ ಬಂದು ನನಗೆ ಹೊಡೆಯುವದನ್ನು ನೋಡಿ ಬಿಡಿಸಿಕೊಂಡರು. ನಂತರ ಅವರೆಲ್ಲರು ಹೊಡೆಯುವದನ್ನು ಬಿಟ್ಟು ಹೋಗುವಾಗ ಎಲೇ ಬೋಸಡಿ ಇವತ್ತು ನಿಮ್ಮ ಪ್ರಾಣ ಉಳಿದಿದೆ. ಇಂದಲ್ಲ ನಾಳೆ ನಿನ್ನ ಜೀವ ನಮ್ಮ ಕೈಯಲ್ಲಿದೆ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಂತರ ನನ್ನ ಮಕ್ಕಳಾದ ತಿಮ್ಮಣ್ಣ ಮತ್ತು ನಾಗರಾಜ ಇಬ್ಬರು 108 ವಾಹನದಲ್ಲಿ ನನಗೆ ಹಾಕಿಕೊಂಡು ಉಪಚಾರ ಕುರಿತು ಸುರಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಆದ್ದರಿಂದ ಮೇಲ್ಕಾಣಿಸಿದ 04 ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಹೇಳಿಕೆ ನೀಡಿದ್ದು, ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 12.30 ಪಿಎಮ್ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 01/2022 ಕಲಂ: 323, 324, 326, 448, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

ಇತ್ತೀಚಿನ ನವೀಕರಣ​ : 04-01-2022 04:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080