ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-01-2023ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ : 03/2023 ಕಲಂ 279, 304(ಎ) ಐ.ಪಿ.ಸಿ: ಇಂದು ದಿನಾಂಕ: 03/01/2023 ರಂದು ರಾತ್ರಿ 10.00 ಪಿ.ಎಂ.ಕ್ಕೆ ಶ್ರೀ ಬಸವರಾಜ ತಂ/ ಲಚಮಯ್ಯ ಗುತ್ತೇದಾರ, ಸಾ|| ಕಾಕಂಡಕಿ, ತಾ|| ಜೇವಗರ್ಿ, ಜಿ|| ಕಲಬುಗರ್ಿ, ಹಾ.ವ|| ವೆಂಕಟೇಶ್ವರ ನಗರ, ಶಹಾಪೂರ, ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ನಾನು ಸುಮಾರು 06 ವರ್ಷಗಳಿಂದ ಶಹಾಪೂರದ ರೇಣುಕಾ ವೈನ್ಸ್ನಲ್ಲಿ ಮ್ಯಾನೇಜರ್ ಅಂತಾ ಕೆಲಸ ಮಾಡಿಕೊಂಡು ಉಪ ಜೀವನ ಸಾಗಿಸುತ್ತೇನೆ. ಹೀಗಿದ್ದು, ಇಂದು ದಿನಾಂಕ: 03/01/2023 ರಂದು ಸಾಯಂಕಾಲ 6.00 ಪಿ.ಎಂ. ಸುಮಾರಿಗೆ ನಮ್ಮ ಮಾಲೀಕ ಉಮೇಶ ತಂ/ ರಾಮಯ್ಯ ಕಟ್ಟಿಮನಿ, ವ|| 42 ವರ್ಷ, ಜಾ|| ಇಳಿಗ, ಉ|| ವ್ಯಾಪಾರ, ಸಾ|| ಮದ್ದರಿಕಿ, ತಾ|| ಶಹಾಪೂರ, ಜಿ|| ಯಾದಗಿರಿ ರವರು ವಿಭೂತಿಹಳ್ಳಿಯಲ್ಲಿ ಸ್ವಲ್ಪ ಕೆಲಸ ಇದೆ ಹೋಗಿ ಬರೋಣ ಬಾ ಅಂತಾ ಹೇಳಿ ತನ್ನ ಮೋಟರ ಸೈಕಲ್ ನಂ. ಕೆಎ-33 ಯು-4822 ನೇದ್ದರ ಹಿಂಭಾಗದಲ್ಲಿ ನನ್ನನ್ನು ಕೂಡಿಸಿಕೊಂಡು ವಿಭೂತಿಹಳ್ಳಿಗೆ ಕರೆದುಕೊಂಡು ಹೋಗಿದ್ದರು. ವಿಭೂತಿಹಳ್ಳಿಯಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಶಹಾಪೂರ ಕಡೆಗೆ ಹೊರಟಿದ್ದಾಗ, ರಾತ್ರಿ 7.45 ಪಿ.ಎಂ. ಸುಮಾರಿಗೆ ಶಹಾಪೂರ-ಸುರಪುರ ರಸ್ತೆಯಲ್ಲಿರುವ ಜಬಿ ಕಲ್ಯಾಣ ಮಂಟಪ ಇನ್ನೂ 50 ಮೀಟರ ಅಂತರದಲ್ಲಿದ್ದಾಗ ನನಗೆ ಫೋನ್ ಕಾಲ್ ಬಂದಿದ್ದರಿಂದ ನಾನು ನನ್ನ ಮಾಲೀಕರಿಗೆ ಮೋಟರ ಸೈಕಲ್ ನಿಲ್ಲಿಸಿ ನಾನು ಫೋನಿನಲ್ಲಿ ಮಾತನಾಡಿಕೊಂಡು ಬರುತ್ತೇನೆ ನೀವು ಚಾಂದ್ ಪೆಟ್ರೋಲ್ ಬಂಕ ಹತ್ತಿರ ನಿಲ್ಲಿ ಅಂತಾ ಹೇಳಿದಾಗ ನನ್ನ ಮಾಲೀಕ ಉಮೇಶ ಕಟ್ಟಿಮನಿ ರವರು ನನಗೆ ಮೋಟರ ಸೈಕಲ್ ಇಂದ ಇಳಿಸಿ ಮೋಟರ ಸೈಕಲ್ ಚಲಾಯಿಸಿಕೊಂಡು ಹೋಗುತ್ತಾ ಜಬಿ ಕಲ್ಯಾಣ ಮುಂದೆ ಇದ್ದಾಗ ವಿಭೂತಿಹಳ್ಳಿ ಕಡೆಯಿಂದ ಒಂದು ಸರಕಾರಿ ಅಂಬ್ಯೂಲೈನ್ಸ್ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ಮುಂದೆ ಹೊರಟಿದ್ದ ಉಮೇಶ ಮಾಲೀಕರ ಮೋಟರ ಸೈಕಲ್ಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ನಿಯಂತ್ರಣ ತಪ್ಪಿ ರಸ್ತೆಯ ಆಚೆಗೆ ಹೋಗಿ ಪಲ್ಟಿಯಾಗಿ ಬಿದ್ದಿತು. ನಾನು ಓಡಿ ಹೋಗಿ ನೋಡಲಾಗಿ ಉಮೇಶ ಮಾಲೀಕರಿಗೆ ಬಲಗೈ ಮೊಳಕೈಗೆ ಭಾರಿ ಒಳಪೆಟ್ಟಗಿತ್ತು. ಅಂಬ್ಯೂಲೈನ್ಸ್ ಹತ್ತಿರ ಹೋಗಿ ನೋಡಲಾಗಿ ಅಂಬ್ಯೂಲೈನ್ಸ್ ಚಾಲಕನಿಗೆ ತಲೆಯ ಬಲಭಾಗದಲ್ಲಿ ಭಾರೀ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ. ರಸ್ತೆಯಲ್ಲಿ ಹೋಗಿ ಬರುವ ವಾಹನಗಳ ಹೆಡ್ ಲೈಟ್ ಬೆಳಕಿನಲ್ಲಿ ಸದರಿ ಅಂಬ್ಯೂಲೈನ್ಸ್ ನಂಬರ ನೋಡಲಾಗಿ ಕೆಎ-33 ಜಿ-0258 ಅಂತಾ ಇರುತ್ತದೆ. ಸ್ವಲ್ಪ ಸಮಯದ ನಂತರ ಒಂದು ಖಾಸಗಿ ವಾಹನದಲ್ಲಿ ಗಾಯಾಳುಗಳಿಗೆ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಹೋಗಿ ಗಾಯಾಳುಗಳಿಗೆ ಉಪಚಾರ ಕುರಿತು ಸೇರಿಕೆ ಮಾಡಿದಾಗ ಸದರಿ ಅಂಬ್ಯೂಲೈನ್ಸ್ ಚಾಲಕನ ಹೆಸರು ರಾಜಕುಮಾರ ತಂ/ ಶ್ರೀಶೈಲ್ ಪತ್ತಾರ, ವ|| 42 ವರ್ಷ, ಜಾ|| ವಿಶ್ವಕರ್ಮ, ಉ|| ಚಾಲಕ ಸಾ|| ಸಗರ(ಬಿ) ಅಂತಾ ಗೊತ್ತಾಯಿತು. ರಾತ್ರಿ 8.14 ಪಿ.ಎಂ.ಕ್ಕೆ ಸದರಿ ರಾಜಕುಮಾರ ತಂ/ ಶ್ರೀಶೈಲ್ ಪತ್ತಾರ ಸಾ|| ಸಗರ(ಬಿ) ಈತನು ಅಪಘಾತದಲ್ಲಿ ತನಗೆ ಆದ ಗಾಯಗಳಿಂದ ಚೇತರಿಸಿಕೊಳ್ಳದೇ ಮೃತಪಟ್ಟಿರುತ್ತಾನೆ.      ಕಾರಣ ಅಪಘಾತಕ್ಕೆ ಕಾರಣನಾದ ಸರಕಾರಿ ಅಂಬ್ಯೂಲೈನ್ಸ್ ನಂ. ಕೆಎ-33 ಜಿ-0258 ನೇದ್ದರ ಚಾಲಕ ರಾಜಕುಮಾರ ತಂ/ ಶ್ರೀಶೈಲ್ ಪತ್ತಾರ ಸಾ|| ಸಗರ(ಬಿ) ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.03/2023 ಕಲಂ 279, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಭೀ.ಗುಡಿ ಪೊಲೀಸ ಠಾಣೆ:-
ಗುನ್ನೆ ನಂ: 01/2023 ಕಲಂ 279, 337 ಐ.ಪಿ.ಸಿ: ದಿನಾಂಕ:03/01/2023 ರಂದು 06.30 ಎ.ಎಮ್. ಸುಮಾರಿಗೆ ಫಿಯರ್ಾದಿ ತಂದೆ ಕೆ.ವೆಂಕಟೇಶ ತಂದೆ ಸೋಮರಾಜ ಈತನು ತನ್ನ ಟ್ರ್ಯಾಕ್ಟರ  ನಂ:ಕೆಎ-32, ಟಿ.ವಿ-7077 ನೇದ್ದನ್ನು ನಡೆಸಿಕೊಂಡು ಸಾದ್ಯಾಪೂರ ಕಡೆಗೆ ಶಹಾಪೂರ ಕಲಬುರಗಿ  ರೋಡಿನ ಮೇಲೆ  ಅರಳಳ್ಳಿ ಕ್ರಾಸನಲ್ಲಿ ಇರುವ ನಂದಿ ಕಾಟನ ಮಿಲ್ ಹತ್ತಿರ ಹೊರಟಾಗ ಹಿಂದಿನಿಂದ ಆರೋಪಿತನು ತನ್ನ ಟಿಪ್ಪರ ನಂ:ಕೆಎ-32, ಎಎ-0332 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡಿಸಿಕೊಂಡು ಬಂದಿದ್ದರಿಂದ ಟಿಪ್ಪರ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದರಿಂದ ಸದರಿ ಗಾಯಾಳುವಿನ ತಲೆಯ ಹಿಂಬದಿಗೆ ಮತ್ತು ಬೆನ್ನಿಗೆ ತರಚಿದ ರಕ್ತ ಗಾಯಗಳಾಗಿದ್ದು ಆರೋಪಿತನವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳುವಬಗ್ಗೆ ದೂರು.
 

ಇತ್ತೀಚಿನ ನವೀಕರಣ​ : 05-01-2023 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080