ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-02-2022

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 28/2022 ಕಲಂ: 279, 304 (ಎ) ಐಪಿಸಿ ಮತ್ತು 187 ಐ.ಎಮ್.ವಿ ಆಕ್ಟ್ : ಇಂದು ದಿನಾಂಕ: 03-02-2022 ರಂದು 10-00 ಎ.ಎಮ್ ಕ್ಕೆ ಶ್ರೀ ಬಾಬು ತಂದೆ ಮಕ್ತುಮಸಾಬ ಸೈಯ್ಯದ್ ಸಾ: ತಂಗಡಗಿ ಇವರು ಠಾಣೆಗೆ ಹಾಜರಾಗಿ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನನ್ನ ಅಣ್ಣನ ಹಿರಿಯ ಮಗನಾದ ಮೌಲಾಲಿ ತಂದೆ ಅಬ್ದುಲಸಾಬ ಸೈಯ್ಯದ್ ವಯಃ 24 ವರ್ಷ ಇತನು ಚಿಕ್ಕಂದಿನಿಂದಲೂ ಮಾನಸಿಕ ಅಸ್ವಸ್ಥನಾಗಿದ್ದು ಕಲಬುರಗಿ, ಧಾರವಾಡ, ಸಾಂಗ್ಲಿ, ಹೈದ್ರಾಬಾದ ಮುಂತಾದ ಕಡೆ ಚಿಕಿತ್ಸೆ ಕೊಡಿಸಿದರೂ ಗುಣಮುಖನಾಗಿರಲಿಲ್ಲ. ಆತನು ಆಗಾಗ ಮನೆಬಿಟ್ಟು ಊರೂರು ಅಲೆದಾಡಿ ಭಿಕ್ಷೆ ಬೇಡುತ್ತ ತಿರುಗಾಡುತ್ತಿದ್ದನು. ಕಳೆದ ಒಂದು ತಿಂಗಳ ಹಿಂದೆ ನನ್ನ ಅಣ್ಣ ಹಾಗು ಅತ್ತಿಗೆ ಇವರು ಮೌಲಾಲಿ ಇತನಿಗೆ ನಮ್ಮ ಮನೆಯಲ್ಲಿ ಬಿಟ್ಟು ಉಪಜೀವನಕ್ಕಾಗಿ ಬೆಂಗಳೂರಿಗೆ ಹೋಗಿದ್ದರು. ದಿನಾಂಕ: 29/01/2022 ರಂದು ರಾತ್ರಿ ನಾವು ಮಲಗಿದ್ದಾಗ ನನ್ನ ಅಣ್ಣನ ಮಗನಾದ ಮೌಲಾಲಿ ಇತನು ತನ್ನ ಮಾನಸಿಕ ಅಸ್ವಸ್ಥತೆಯಿಂದ ರಾತ್ರಿ ಸಮಯದಲ್ಲಿ ಎದ್ದು ಹೋಗಿದ್ದು, ನಂತರ ನಾನು ಆತನಿಗೆ ಯಾದಗಿರಿ, ಶಹಾಪೂರ, ಭೀಮರಾಯನಗುಡಿ, ಹತ್ತಿಗುಡೂರ ಮುಂತಾದ ಕಡೆ ಹುಡುಕಾಡಿದರೂ ಸಿಕ್ಕಿರಲಿಲ್ಲ. ಇಂದು ದಿನಾಂಕಃ 03/02/2022 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನಮ್ಮ ಸಂಬಂಧಿಕರಾದ ಮಕ್ತುಮಸಾಬ ತಂದೆ ರಾಜೆಸಾಬ ಸಾ: ಲಿಂಗದಹಳ್ಳಿ ಎಸ್.ಕೆ, ಇವರು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ಮಾನಸಿಕ ಅಸ್ವಸ್ಥನಾಗಿ ತಿರುಗಾಡುತ್ತಿದ್ದ ನಿನ್ನ ಅಣ್ಣನ ಮಗನಾದ ಮೌಲಾಲಿ ಇತನಿಗೆ ಸುರಪೂರ-ಲಿಂಗಸುಗೂರ ಮುಖ್ಯರಸ್ತೆಯ ಮೇಲೆ ಬಂಡೋಳ್ಳಿ ಆಶ್ರಯ ಕಾಲೋನಿ ಹತ್ತಿರ ಯಾವುದೋ ಒಂದು ವಾಹನ ಅಪಘಾತಪಡಿಸಿ ಹೋಗಿದ್ದರಿಂದ ಭಾರಿಗಾಯಗಳಾಗಿ ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದರಿಂದ ನಾನು ಅಲ್ಲಿಂದ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ಮೌಲಾಲಿ ಇತನ ತಲೆಗೆ, ಎಡಗಣ್ಣಿನ ಹತ್ತಿರ, ಬಲಗಲ್ಲಕ್ಕೆ ಹಾಗು ಬಲಗಾಲಿಗೆ ಭಾರಿರಕ್ತ ಗಾಯಗಳಾಗಿರುತ್ತವೆ. ಆಗ ಅಲ್ಲಿ ರಸ್ತೆಯಲ್ಲಿ ಹೊರಟಿದ್ದ ದುರಗಪ್ಪ ತಂದೆ ಹಣಮಪ್ಪ ಮೇಟಿ ಸಾ: ಬಂಡೋಳ್ಳಿ ಇತನು ನನಗೆ ತಿಳಿಸಿದ್ದೆನೆಂದರೆ, ಮೃತ ಮೌಲಾಲಿ ಇತನು ಕಳೆದ 4 ದಿನಗಳಿಂದ ಇಲ್ಲೆ ಬಂಡೋಳ್ಳಿ, ಶಾಂತಪೂರ, ತಿಂಥಣಿ ಮುಂತಾದ ಗ್ರಾಮಗಳಲ್ಲಿ ಭೀಕ್ಷೆ ಬೇಡುತ್ತ ತಿರುಗಾಡುತ್ತಿರುವದನ್ನು ನೋಡಿರುತ್ತೇನೆ ಅಂತ ತಿಳಿಸಿರುತ್ತಾನೆ. ಶವವನ್ನು ನೋಡಿದರೆ ಇಂದು ದಿನಾಂಕ: 03/02/2022 ರಂದು ಬೆಳಗಿನ 2-00 ಗಂಟೆಯಿಂದ 5-00 ಗಂಟೆಯ ಮದ್ಯೆ ಅಪಘಾತ ಆಗಿರುವಂತೆ ಕಂಡು ಬರುತ್ತದೆ. ಕಾರಣ ನನ್ನ ಅಣ್ಣನ ಮಗ ಮೌಲಾಲಿ ಇತನು ತನ್ನ ಮಾನಸಿಕ ಅಸ್ವಸ್ಥತೆಯಿಂದಾಗಿ ರಾತ್ರಿ ಸಮಯದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿಹೊಡೆದು ಹೋಗಿದ್ದರಿಂದ ಭಾರಿಗಾಯಗಳಾಗಿ ಮೃತಪಟ್ಟಿದ್ದು, ಅಪಘಾತಪಡಿಸಿ ಓಡಿ ಹೋಗಿರುವ ವಾಹನ ಚಾಲಕನನ್ನು ಪತ್ತೆ ಮಾಡಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2022 ಕಲಂ. 279, 304(ಎ) ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ವಡಗೇರಾ ಪೊಲೀಸ್ ಠಾಣೆ
ಗುನ್ನೆ ನಂ: 19/2022 ಕಲಂ:504, 323, 324, 506 ಸಂ 34 ಐಪಿಸಿ : ದಿನಾಂಕ:03/02/2022 ರಂದು 1-45 ಪಿಎಮ್ ಕ್ಕೆ ಶ್ರೀ ಮರೆಪ್ಪ ತಂದೆ ಸಿದ್ದಲಿಂಗಪ್ಪ ಹೆಡಗಿಮದ್ರಿ, ವ:50, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಾನು ಒಕ್ಕಲುತನದ ಜೊತೆಗೆ ಸುಮಾರು 7-8 ಎಮ್ಮೆಗಳನ್ನು ಸಾಕಿಕೊಂಡಿರುತ್ತೇನೆ. ನಮ್ಮ ಮನೆ ಬಾಜು ಸ್ವಲ್ಪ ದೂರದಲ್ಲಿ ನಮ್ಮೂರ ನಮ್ಮ ಜಾತಿಯ ಹೊನ್ನಪ್ಪ ತಂದೆ ದೊಡ್ಡ ಮುದುಕಪ್ಪ ಗೋಸಿ ಈತನ ಹೊಲ ಇರುತ್ತದೆ. ಸದರಿ ಹೊಲದಲ್ಲಿ ಜೋಳ ಬಿತ್ತಿರುತ್ತಾನೆ. ಹೀಗಿದ್ದು ನಿನ್ನೆ ದಿನಾಂಕ:02/02/2022 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಮಲ್ಲಮ್ಮ ಇಬ್ಬರೂ ನಮ್ಮ ಮನೆ ಮುಂದೆ ಇದ್ದಾಗ ನಮ್ಮೂರ 1) ಹೊನ್ನಪ್ಪ ತಂದೆ ದೊಡ್ಡ ಮುದುಕಪ್ಪ ಗೋಸಿ, 2) ದೊಡ್ಡ ಭೀಮಣ್ಣ ತಂದೆ ಸಣ್ಣ ಮುದುಕಪ್ಪ ಗೋಸಿ ಮತ್ತು 3) ಸಣ್ಣ ಭೀಮಣ್ಣ ತಂದೆ ದೊಡ್ಡ ಮುದುಕಪ್ಪ ಗೋಸಿ ಎಲ್ಲರೂ ಸಾ:ಕಾಡಂಗೇರಾ (ಬಿ) ಎಲ್ಲರೂ ಸೇರಿಕೊಂಡು ಬಂದವರೆ ನನಗೆ ಹೊನ್ನಪ್ಪನು ಎಲೆ ಭೊಸುಡಿ ಮಗನೆ ನಿನ್ನೆ ನಮ್ಮ ಜೋಳದ ಹೊಲದಲ್ಲಿ ಎಮ್ಮೆ ಕರ ಬಿಟ್ಟು ಜೋಳ ಮೇಯಿಸಿದಿ ಭೊಸುಡಿ ಮಗನೆ ಎಂದು ಜಗಳ ತೆಗೆದವನೆ ನನಗೆ ಕಾಲಿನಿಂದ ಎಡಗಡೆ ಎದೆಗೆ ಒದ್ದನು. ಜಗಳ ಬಿಡಿಸಲು ಬಂದ ನನ್ನ ಹೆಂಡತಿ ಯಲ್ಲಮ್ಮ ಇವಳಿಗೆ ನೀನು ನಡುವೆ ಬರುತ್ತಿ ಭೊಸುಡಿ ಎಂದು ಸದರಿ ಹೊನ್ನಪ್ಪನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗದುಕೊಂಡು ತೆಲೆಗೆ, ಬೆನ್ನಿಗೆ ಮತ್ತು ಎಡ ಕಾಲಿಗೆ ಹೊಡೆದು ಒಳಪೆಟ್ಟು ಮಾಡಿದನು. ದೊಡ್ಡ ಭೀಮಣ್ಣ ಮತ್ತು ಸಣ್ಣ ಭೀಮಣ್ಣ ಇವರು ನನಗೆ ಮತ್ತು ನನ್ನ ಹೆಂಡತಿಗೆ ಈ ಸೂಳೆ ಮಕ್ಕಳ ಸೊಕ್ಕು ಜಾಸ್ತಿಯಾಗ್ಯಾದ ಎಂದು ಅವಾಚ್ಯ ಬೈದರು. ಹೊನ್ನಪ್ಪನು ನನ್ನ ಹೆಂಡತಿ ಯಲ್ಲಮ್ಮಳಿಗೆ ಈ ಭೋಸುಡಿ ದಿನಾಲು ಎಮ್ಮೆ ಕರು ನಮ್ಮ ಹೊಲದಲ್ಲಿ ಬಿಡುತ್ತಾಳೆ ಎಂದು ಅವಾಚ್ಯ ಬೈದು ಕಾಲಿನಿಂದ ಹೊಟ್ಟೆಗೆ ಒದ್ದನು. ಆಗ ಜಗಳವನ್ನು ಅಲ್ಲಿಯೇ ಇದ್ದ ದೇವಪ್ಪ ತಂದೆ ಹಣಮಂತ ಸಿದ್ದಾಪೂರ ಮತ್ತು ಲಕ್ಷ್ಮೀ ಗಂಡ ದೇವಪ್ಪ ಹೈಯಾಳಕರ ಇಬ್ಬರೂ ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿರಿ ಭೊಸುಡಿ ಮಕ್ಕಳೆ ಇನ್ನೊಂದು ಸಲ ಎಮ್ಮೆ ಕರ ನಮ್ಮ ಹೊಲದಲ್ಲಿ ಬಿಟ್ಟರೆ ನಿಮಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಾವು ಇಬ್ಬರೂ ಗಂಡ-ಹೆಂಡತಿ ಅಲ್ಲಿಂದ ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾದೆವು. ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದರು. ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ವಡಗೇರಾ ಠಾಣೆ ಪೊಲೀಸರು ಬಂದಾಗ ನಾನು ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ದೂರು ಕೊಡುವುದಿದ್ದರೆ ಪೊಲೀಸ್ ಠಾಣೆಗೆ ಬಂದು ಕೊಡುತ್ತೇನೆ ಎಂದು ತಿಳಿಸಿರುತ್ತೇನೆ. ಕಾರಣ ಈಗ ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ವಿನಾಕಾರಣ ಎಮ್ಮೆ ಕರು ಹೊಲದಲ್ಲಿ ಹೋಗಿ ಜೋಳ ಮೇಯ್ದಿದೆ ಎಂದು ಜಗಳ ತೆಗೆದು, ಅವಾಚ್ಯ ಬೈದು ನನಗೆ ಮತ್ತು ನನ್ನ ಹೆಂಡತಿ ಯಲ್ಲಮ್ಮ ಇಬ್ಬರಿಗೆ ಹೊಡೆಬಡೆ ಮಾಡಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 19/2022 ಕಲಂ:504, 323, 324, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ. 23/2022 ಕಲಂ 457, 380 ಐ.ಪಿ.ಸಿ : ಇಂದು ದಿನಾಂಕ 03/02/2022 ರಂದು ಮುಂಜಾನೆ 11-30 ಗಂಟೆಗೆ ಫಿಯರ್ಾದಿ ಶ್ರೀ ರಾಜೇಶ್ ತಂದೆ ಶಿವಶರಣಪ್ಪ ಗೊಲಗೇರಿ, ವಯಸ್ಸು 29 ವರ್ಷ, ಜಾತಿ ಲಿಂಗಾಯತ, ಸಾಃ ಅನೆಗುಂದಿ ಓಣಿ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಿನ್ನೆ ದಿನಾಂಕ 02/02/2022 ರಂದು, ನಮ್ಮ ಸಂಬಂಧಿಕರಲ್ಲಿ ಮದುವೆ ಇದ್ದುದ್ದರಿಂದ ನಮ್ಮ ತಂದೆಯವರು ನಾನು ಮದುವೆಗೆ ಹೋಗುತ್ತೇನೆ ನೀನು ಅಂಗಡಿಗೆ ಹೋಗು ಅಂತಾ ಹೇಳಿದ್ದರು. ಆದ್ದರಿಂದ ನಾನು ಮುಂಜಾನೆ 09-00 ಗಂಟೆಗೆ ನಮ್ಮ ರಾಜೇಶ್ ಟ್ರೇಡ್ಸರ್್ ಅಂಗಡಿಗೆ ಹೋಗಿ ಅಂಗಡಿಯ ಶಟರ್ ತೆರೆದುಕೊಂಡು ತೆಂಗಿನ ಕಾಯಿ ವ್ಯಾಪಾರ ಮಾಡಿಕೊಂಡಿದ್ದೇನು. ಸಾಯಂಕಾಲ 6-30 ಗಂಟೆಯ ಸುಮಾರಿಗೆ ನಾನು ಅಂಗಡಿಯಲ್ಲಿದ್ದಾಗ ನನಗೆ ಮತ್ತು ನಮ್ಮ ತಂದೆಯವರಿಗೆ ಪರಿಚಯವಿದ್ದ ಶ್ರೀ ವಿಶ್ವನಾಥರಡ್ಡಿ ತಂದೆ ಧರ್ಮಣ್ಣಗೌಡ ಬಿರಾದಾರ, ಸಾಃ ಹೊತಪೇಠ ಇವರು ನಮ್ಮ ಅಂಗಡಿಗೆ ಬಂದು, ನಿಮ್ಮ ತಂದೆಯವರು ಕಾಣಸ್ತಾಯಿಲ್ಲಾ ಎಲ್ಲಿಗೆ ಹೋಗಿದ್ದಾರೆ ಅಂತಾ ವಿಚಾರಿಸಿ ನಿಮ್ಮ ತಂದೆಯವರ ಹತ್ತಿರ ನಾನು, ರೂಪಾಯಿ 4,60,000=00 ಹಣ ತೆಗೆದುಕೊಂಡಿದ್ದೇನು, ಮರಳಿ ಹಣ ಕೊಡಲು ಬಂದಿದ್ದೇನೆ ಅಂತಾ ಹೇಳಿ 4,60,000=00 (ನಾಲ್ಕು ಲಕ್ಷ ಅರವತ್ತು ಸಾವಿರ) ಹಣ ಕೊಟ್ಟಿದ್ದು ಸದರಿ ಹಣ ಒಂದು ಪ್ಲಾಸ್ಟೀಕ್ ಕ್ಯಾರಿಬ್ಯಾಗನಲ್ಲಿ ಹಾಕಿಕೊಂಡು ನನ್ನ ಕ್ಯಾಶ್ ಲಾಕರ್ದಲ್ಲಿ ಇಟ್ಟುಕೊಂಡಿದ್ದು ಇರುತ್ತದೆ. ರಾತ್ರಿ 9-00 ಗಂಟೆಯ ಸುಮಾರಿಗೆ 4,60,000=00 ಹಣವನ್ನು ಲಾಕರ್ನಲ್ಲಿ ಇಟ್ಟು ಅದಕ್ಕೆ ಬಿಗ್ ಹಾಕಿಕೊಂಡು ನಂತರ ಅಂಗಡಿಯ ಶಟರ್ ಬಿಗ್ ಹಾಕಿಕೊಂಡು ಮನೆಗೆ ಹೋಗಿರುತ್ತೇನೆ.
ಇಂದು ದಿನಾಂಕ 03/02/2022 ರಂದು ಬೆಳಗಿನ ಜಾವ 07-10 ಗಂಟೆಗೆ ನಮ್ಮ ಅಂಗಡಿಯ ಶಟರ್ ಮುರಿದಿದೆ ಅಂತಾ ಸುದ್ದಿ ಗೊತ್ತಾಗಿ ನಾನು, ನನ್ನ ತಂದೆ ಶಿವಶರಣಪ್ಪ ಮತ್ತು ತಮ್ಮ ವಿನಯ್ ಮೂರು ಜನ ನಮ್ಮ ಅಂಗಡಿಗೆ ಹೋಗಿ ನೋಡಲಾಗಿ ಅಂಗಡಿಯ ಬಲಭಾಗದ ಶಟರ್ ಮುರಿದಿದ್ದನ್ನು ಕಂಡು ಇನ್ನೊಂದು ಬದಿಗೆ ಇದ್ದ ಅಂಗಡಿಯ ಶಟರ್ ತೆಗೆದು ಒಳಗಡೆ ಹೋಗಿ ನೋಡಿದಾಗ, ಟೇಬಲ್ ಲಾಕರ್ನಲ್ಲಿಟ್ಟಿದ್ದ ಕೆಲವು ವಸ್ತುಗಳು ಮತ್ತು ಚಿಲ್ಲರ ಹಣ ಹೊರಗಡೆ ಬಿದ್ದಿದ್ದವು. ಆಗ ನಾನು ಟೇಬಲ್ ಲಾಕರ್ನಲ್ಲಿಟ್ಟಿದ್ದ ಹಣವನ್ನು ನೋಡಲಾಗಿ 4,60,000=00 ಹಣ ಇರಲಿಲ್ಲ. ಹಣವಿಟ್ಟಿದ್ದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಅಂಗಡಿಯಲ್ಲಿಯೇ ಬಿದ್ದಿತ್ತು. ಪುನಃ ಲಾಕರ್ನಲ್ಲಿ ಹಾಗೂ ಅಂಗಡಿಯಲ್ಲಿ ನೋಡಲಾಗಿ ನಮ್ಮ ಹಣ ಇರಲಿಲ್ಲ.
ದಿನಾಂಕ 02/02/2022 ರಂದಿ ರಾತ್ರಿ 9-10 ಗಂಟೆಯಿಂದ ದಿನಾಂಕ 03/02/2022 ರ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ನಮ್ಮ ತೆಂಗನಕಾಯಿ ಅಂಗಡಿಯ ಶಟರ್ ಮುರಿದು ಒಳಗಡೆ ಹೋಗಿ ಟೇಬಲ್ ಲಾಕರ್ನಲ್ಲಿಟ್ಟಿದ್ದ 4,60,000=00 ಹಣವನ್ನು ಕಳ್ಳತನ ಮಾಡಿಕೊಂಡು ಅಂತಾ ಫಿಯರ್ಾದಿಯವರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 23/2022 ಕಲಂ 457, 380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 24/2022 ಕಲಂ 78 (3) ಕೆಪಿ ಆಕ್ಟ್ : ಇಂದು ದಿನಾಂಕ: 03/02/2022 ರಂದು 3:15 ಪಿ.ಎಮ್ ಕ್ಕೆ ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 03/02/2022 ರಂದು ರಂದು 1.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ನಗರದ ಪೈರ್ ಆಫೀಸ್ ಹತ್ತಿರ ಕನ್ಯಾಕೋಳೂರಗೆ ಹೋಗುವ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಶ್ರೀ ಮುತ್ತಪ್ಪ ಪಿ.ಸಿ-118, ಶ್ರೀ ಧರ್ಮರಾಜ ಪಿ.ಸಿ-45 ಮತ್ತು ಶ್ರೀ ಭೀಮನಗೌಡ ಪಿ.ಸಿ-402 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಭೀಮನಗೌಡ ಪಿ.ಸಿ-402 ರವರಿಗೆ ದಾಳಿಗಾಗಿ ಇಬ್ಬರು ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ಅಣವೀರ ತಂದೆ ಮಲ್ಲಪ್ಪ ಕಟ್ಟಿಮನಿ ವಯಾ: 34 ವರ್ಷ ಜಾತಿ: ಪ.ಜಾತಿ ಸಾ: ಔರಾದ ತಾ: ಜೇವರಗಿ ಹಾಲಿವಸತಿ: ಹಳಿಪೇಠ ಶಹಾಪೂರ 2) ಶ್ರೀ ಆನಂದ ತಂದೆ ತುಳಜಪ್ಪ ವಯಾ: 36 ವರ್ಷ ಜಾತಿ: ಹಡಪದ ಉ: ಜಾತಿದಂದೆ ಸಾ; ಗಂಗಾನಗರ ಗುತ್ತಿಪೇಠ ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು ಮತ್ತು ಠಾಣೆಯ ಸಿಬ್ಬಂದಿಯವರಾದ ಮುತ್ತಪ್ಪ ಪಿ.ಸಿ-118, ಶ್ರೀ ಧರ್ಮರಾಜ ಪಿ.ಸಿ-45 ಮತ್ತು ಶ್ರೀ ಭೀಮನಗೌಡ ಪಿ.ಸಿ-402 ರವರೊಂದಿಗೆ ಠಾಣೆಯಿಂದ 1.30 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 1:40 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 1:45 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಲಿಂಗರಾಜ ತಂದೆ ಸಹಾದೇವಪ್ಪ ಹವಾಲ್ದಾರ ವಯ: 40 ವರ್ಷ ಜಾ: ಬೇಡರ ಉ: ಮಟಕ ಬರೆದುಕೊಳ್ಳುವದು ಸಾ: ಅಂಬಿಗರ ಚೌಡಯ್ಯ ಗುಡಿ ಹತ್ತಿರ ಗಂಗಾನಗರ ಹಳಿಸಗರ ಶಹಾಪುರ ಅಂತಾ ತಿಳಿಸಿದ್ದು ಸದರಿಯವನಿಗೆ ನೀನು ಮಟಕಾ ನಂಬರ ಬರೆದು ಯಾರಿಗೆ ಕೋಡುತ್ತಿ ಅಂತಾ ವಿಚಾರಿಸಲಾಗಿ ಆತನು ಭೀಮಣ್ಣ ತಡಬಿಡಿ ಸಾ: ಹಳಿಸಗರ(ಒದರಬಾವಿ ಓಣಿ) ಇವರ ಮೋ.ನಂ: 9901179302 ಇವರಿಗೆ ಪೋನ ಮೂಲಕ ನಂಬರ ಕೊಡುತ್ತೇನೆ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 2360 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿಗಳು ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 1:45 ಪಿ.ಎಮ್ ದಿಂದ 2:45 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ 2:55 ಪಿ.ಎಮ್.ಕ್ಕೆ ಬಂದು ವರದಿ ತಯಾರಿಸಿ 3:15 ಪಿ.ಎಮ್ ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸುತ್ತಿದ್ದು ಇರುತ್ತದೆ ಅಂತಾ ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 24/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ:29/2022 ಕಲಂ: 420, 494, 323, 504, 506 ಸಂ. 149 ಐಪಿಸಿ : ಇಂದು ದಿನಾಂಕ:03/02/2022 ರಂದು 5.30 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರಳಾದ ಶ್ರೀಮತಿ ರೇಖಾ @ ಲಕ್ಷ್ಮೀ ಗಂಡ ಮಲ್ಲಿನಾಥ ದೊಡ್ಡಮನಿ ವಯಾ|| 29 ಜಾ|| ಕುರುಬ ಉ|| ಮನೆಗೆಲಸ ಸಾ|| ಕನಗನಹಳ್ಳಿ ತಾ|| ಚಿತಾಪುರ ಹಾ.ವ|| ನಾಗರಳ್ಳಿ ತಾ|| ಯಡ್ರಾಮಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ನಾನು ಸುಮಾರು 10 ವರ್ಷಗಳ ಹಿಂದೆ ಕನಗನಹಳ್ಳಿ ಗ್ರಾಮದ ಮಲ್ಲಿನಾಥ ತಂದೆ ನೀಲಪ್ಪ ದೊಡಮನಿ ಈತನೊಂದಿಗೆ ಮದುವೆಯಾಗಿದ್ದು, ಮದುವೆಯಾದ ಸುಮಾರು 6 ತಿಂಗಳವರೆಗೆ ನಾವು ಚೆನ್ನಾಗಿ ಸಂಸಾರ ಮಾಡಿಕೊಂಡು ಅನ್ಯೂನ್ಯವಾಗಿದ್ದು ನಮ್ಮ ವೈವಾಹಿಕ ಜೀವನದಲ್ಲಿ ಒಂದು ಗಂಡು ಮಗು ಇರುತ್ತದೆ. ನಂತರದ ದಿನಗಳಲ್ಲಿ ಮಲ್ಲಿನಾಥ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಒತ್ತಾಯಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದರಿಂದ ದಿನಾಂಕ: 09/06/2019 ರಂದು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತೇನೆ. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಇರುತ್ತದೆ. ಅಲ್ಲದೆ ನನ್ನ ಗಂಡನು ಪೊಲೀಸ್ ಕಾನಸ್ಟೇಬಲ್ ಆಗಿ ವಡಗೇರಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೇಲ್ಕಾಣಿಸಿದ ಕೇಸಿಗೆ ಸಂಬಂದಪಟ್ಟಂತೆ ನನ್ನ ಗಂಡ ಮಲ್ಲಿನಾಥ ಈತನ ವಿರುದ್ದ ಇಲಾಖಾ ವಿಚಾರಣೆ ನಡೆದಿದ್ದು ಇರುತ್ತದೆ. ನನ್ನ ಗಂಡ ಮಲ್ಲಿನಾಥ ಈತನು ಹುರಸಗುಂಡಗಿ ಗ್ರಾಮದ ನಿಂಬೆಣ್ಣ ಇಟಗಿ ಇವರ ಮಗಳಾದ ಮಾಣಿಕಮ್ಮ @ ನಯನ ಇವಳೊಂದಿಗೆ ಎರಡನೇ ಮದುವೆಯಾಗಿದ್ದು, ಈ ಮದುವೆಯನ್ನು ಮಾಣಿಕಮ್ಮ ಇವಳ ತಂದೆಯಾದ ನಿಂಬೆಣ್ಣ ಇಟಗಿ, ತಾಯಿಯಾದ ಸರಸ್ವತಿ, ಮದ್ಯವತರ್ಿಯಾದ ಲಕ್ಷ್ಮೀ ಗಂಡ ಈರಣ್ಣ ಕವಾಲ್ದಾರ ಸಾ|| ಹುರಸಗುಂಡಗಿ ಇವರು ಮತ್ತು ನನ್ನ ಅತ್ತೆಯಾದ ಮರೆವ್ವ, ಮಾವನಾದ ನೀಲಪ್ಪ, ಭಾವ ಮಲ್ಲಿಕಾಜರ್ುನ, ನೆಗೆಣಿ ನಿಂಗಮ್ಮ ಗಂಡ ಮಲ್ಲಿಕಾಜರ್ುನ ಇವರೆಲ್ಲರು ಸೇರಿ ನಾನು ಬದುಕಿರುವಾಗಲೇ, ನನಗೆ ತಿಳಿಸದೇ ಮೋಸ ಮಾಡಿ ನನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಿರುತ್ತಾರೆ. ಹೀಗಿದ್ದು ದಿನಾಂಕ: 13/11/2021 ರಂದು ಇಲಾಖಾ ವಿಚಾರಣೆ ಕುರಿತು ನಾನು ಮತ್ತು ನನ್ನ ತಂದೆ ಶಿವಪ್ಪ, ತಾಯಿ ಶ್ರೀದೇವಿ ಮೂರು ಜನರು ಸುರಪುರ ಡಿಎಸ್ಪಿ ಆಫೀಸಿಗೆ ಬಂದಿದ್ದು, ಅದರಂತೆ ನನ್ನ ಗಂಡ ಮಲ್ಲಿನಾಥನು ಕೂಡ ಬಂದಿದ್ದನು. ನಂತರ ಸಾಯಂಕಾಲ 6 ಗಂಟೆ ಸುಮಾರಿಗೆ ಇಲಾಖಾ ವಿಚಾರಣೆ ಮುಗಿಸಿಕೊಂಡು ನಾನು, ನನ್ನ ತಂದೆ, ತಾಯಿ ಮೂವರು ಸುರಪುರ ಪೊಲೀಸ್ ಠಾಣೆ ಹತ್ತಿರ ಇರುವ ಟಿಪ್ಪು ಸುಲ್ತಾನ ಚೌಕ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ, ನನ್ನ ಗಂಡ ಮಲ್ಲಿನಾಥ ಈತನು ನಮ್ಮೊಂದಿಗೆ ಜಗಳ ತೆಗೆದು, ಏನಲೆ ರಂಡಿ ಇಷ್ಟೆಲ್ಲ ಕೇಸ್ ಮಾಡಿ ಏನ್ ಮಾಡಕೋತಿ ಮಾಡಕೋ ಸೂಳಿ ಅಂತ ಅವಾಚ್ಯವಾಗಿ ಬೈಯುತ್ತಾ, ನನಗೆ ಕೈಯಿಂದ ಕಪಾಳಕ್ಕೆ, ಬೆನ್ನಿಗೆ ಹೊಡೆಬಡೆ ಮಾಡುತ್ತಿರುವಾಗ ಅಲ್ಲಿಯೇ ಇದ್ದ ನನ್ನ ತಂದೆ, ತಾಯಿ ಇಬ್ಬರು ಬಿಡಿಸಿದರು. ಆಗ ಹೊಡೆಯುವದನ್ನು ಬಿಟ್ಟು ಹುರಸುಗಂಡಗಿ ಗ್ರಾಮದ ನಿಂಬೆಣ್ಣ ಇಟಗಿ ಇವರ ಮಗಳಾದ ಮಾಣಿಕಮ್ಮ ಇವಳೊಂದಿಗೆ ಎರಡನೇ ಮದುವೆ ಮಾಡಿಕೊಂಡಿರುತ್ತೇನೆ ಅವಳಿಗೂ ಒಂದು ಗಂಡು ಮಗು ಇರುತ್ತದೆ. ನಿಮಗೇನೂ ಮಾಡಿಕೊಳ್ಳಲಿಕ್ಕಾಗುವದಿಲ್ಲ ಇನ್ನೊಮ್ಮೆ ನನ್ನ ತಂಟೆಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದನು. ಈ ವಿಷಯವಾಗಿ ನಾನು ನನ್ನ ಮನೆಯಲ್ಲಿ ತಂದೆ ತಾಯಿಯೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಬಂದು ಈ ದೂರು ಸಲ್ಲಿಸಿರುತ್ತೇನೆ. ಕಾರಣ ನನಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದಲ್ಲದೆ, ನಾನು ಬದುಕಿರುವಾಗಲೇ ನನಗೆ ಮೋಸ ಮಾಡಿ, ನನಗೆ ತಿಳಿಸದೇ ಎರಡನೇ ಮದುವೆ ಮಾಡಿಕೊಂಡ ನನ್ನ ಗಂಡನಾದ 1) ಮಲ್ಲಿನಾಥ ತಂದೆ ನೀಲಪ್ಪ ದೊಡಮನಿ, ಮತ್ತು ಮೋಸ ಮಾಡಿ ಎರಡನೇ ಮದುವೆ ಮಾಡಿಸಿದ ಅತ್ತೆಯಾದ 2) ಮರೆವ್ವ ಗಂಡ ನೀಲಪ್ಪ ದೊಡಮನಿ, ಮಾವ 3) ನೀಲಪ್ಪ ತಂದೆ ನಾಗಪ್ಪ ದೊಡಮನಿ, ಭಾವ 4) ಮಲ್ಲಿಕಾಜರ್ುನ ತಂದೆ ನೀಲಪ್ಪ ದೊಡಮನಿ, ನೆಗೆಣಿ 5) ನಿಂಗಮ್ಮ ಗಂಡ ಮಲ್ಲಿಕಾಜರ್ುನ ದೊಡಮನಿ ಸಾ|| ಎಲ್ಲರು ಕನಗನಹಳ್ಳಿ ತಾ|| ಚಿತಾಪುರ ಮತ್ತು ನನ್ನ ಗಂಡನ ಎರಡನೇ ಹೆಂಡತಿ 6) ಮಾಣಿಕಮ್ಮ @ ನಯನ ಗಂಡ ಮಲ್ಲಿನಾಥ, ಮಾಣಿಕಮ್ಮ ಇವಳ ತಂದೆಯಾದ 7) ನಿಂಬೆಣ್ಣ ಇಟಗಿ, ಮಾಣಿಕಮ್ಮ ಇವಳ ತಾಯಿಯಾದ 8) ಸರಸ್ವತಿ ಗಂಡ ನಿಂಬೆಣ್ಣ ಮತ್ತು ಮದ್ಯವತರ್ಿಯಾದ 9) ಲಕ್ಷ್ಮೀ ಗಂಡ ಈರಣ್ಣ ಕವಲ್ದಾರ ಸಾ|| ಎಲ್ಲರೂ ಹುರಸಗುಂಡಗಿ ಇವರೆಲ್ಲರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 29/2022 ಕಲಂ: 420, 494, 323, 504, 506 ಸಂ.149 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 30/2022 ಕಲಂ. ಮನುಷ್ಯಕಾಣಿಯಾದ ಬಗ್ಗೆ 30/2022 ಕಲಂ. ಮನುಷ್ಯಕಾಣಿಯಾದ ಬಗ್ಗೆ : ದಿನಾಂಕ:03/02/2022 ರಂದು7:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಶ್ರೀಮತಿ ಶೋಭಾಗಂಡ ಸೂಗಯ್ಯಸ್ವಾಮಿ ಹಿರೇಮಠ ವ|| 35 ವರ್ಷಜಾ|| ಜಂಗಮ ಉ|| ಮನೆಕೆಲಸ ಫಿಯರ್ಾದಿ ಸಾರಾಂಸವೆನೆಂದರೆ, ಹಿಗಿದ್ದುದಿನಾಂಕ:28/01/2022 ರಂದು ಬೆಳಿಗ್ಗೆ 10-30 ಗಂಟೆ ಸುಮಾರಿಗೆ ನನ್ನಗಂಡನಾದ ಸೂಗಯ್ಯಸ್ವಾಮಿಈತನುಸುರಪುರದಲ್ಲಿ ಸ್ವಲ್ಪ ಕೆಲಸವಿದ್ದು, ಹೋಗಿ 10 ನಿಮಿಷದಲ್ಲಿ ಬರುತ್ತೇನೆಅಂತಾ ಹೇಳಿ ಮನೆಯಿಂದ ಹೋದರು. ನಂತರ 30 ನಿಮೀಷವಾದರೂ ನನ್ನಗಂಡ ಮನೆಗೆ ಬರದೆಇದ್ದಕಾರಣ ನಾನು ಪೋನ್ ಮಾಡಿದಾಗ ನನ್ನಗಂಡನ ಪೋನ್ ನಂಬರ್ ನೇದ್ದವುಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ನಂತರ ನಾನು ಅವರಕಾರ್ ಮಾಲಿಕರಾದಆರ್. ಕೆ. ಸೇಠರವರಿಗೆಕಾಲ್ ಮಾಡಿ ಕೇಳಿದಾಗ ಅವರು ನಿನ್ನಗಂಡನುಇಲ್ಲಿಗೆ ಬಂದಿರುವದಿಲ್ಲ ಅಂತಾ ತಿಳಿಸಿದರು. ಸಂಜೆಯಾದರೂ ಮನೆಗೆ ಬರದಿದ್ದಾಗ ನಾನು ಮತ್ತು ನನ್ನಮಕ್ಕಳಾದ ಶಿವಕುಮಾರ ಮತ್ತು ಸಮರ್ಥ ಹಾಗೂ ನಮ್ಮ ಮೈದುನನಾದ ಬನ್ನಯ್ಯಸ್ವಾಮಿತಂದೆ ಪ್ರಭಯ್ಯಸ್ವಾಮಿ ಹಿರೇಮಠ ನಾಲ್ಕು ಜನಕೂಡಿರಂಗಂಪೇಠ, ಹಸನಾಪೂರ, ದಿವಳಗುಡ್ಡ, ಸುರಪೂರ ನಗರದಲ್ಲಿ ಹುಡುಕಾಡಿದರೂ ಸಿಕ್ಕಿರುವದಿಲ್ಲ. ನಂತರ ಶಹಾಪೂರದಲ್ಲಿರುವ ನಮ್ಮ ಸಂಬಂಧಿಕರಾದ ಶಿವಕುಮಾರ ತಂದೆ ಸದಾಶಿವಯ್ಯ ಆದೋನಿ, ಭೀ-ಗುಡಿಯಲ್ಲಿರುವ ನನ್ನತಮ್ಮನಾದ ಸಂತೋಷತಂದೆ ಪವಾಡಯ್ಯ ಹಿರೇಮಠ, ಹಾಗೂ ಯಾದಗಿರಿಯಲ್ಲಿರುವ ನಮ್ಮಚಿಕ್ಕಪ್ಪನಾದ ಮಹಾನಂದಯ್ಯಸ್ವಾಮಿಆದೋನಿ ಇವರಿಗೆ ಪೋನ್ ಮಾಡಿ ಕೇಳಿದಾಗ ಅವರುಇಲ್ಲಿಗೆ ಬಂದಿರುವದಿಲ್ಲ ಅಂತಾ ತಿಳಿಸಿದರು. ನಾವು ಮನೆಯಲ್ಲಿಗಾಬರಿಯಲ್ಲಿದ್ದಾಗ ಸಾಯಂಕಾಲ 5:19 ಗಂಟೆ ಸುಮಾರಿಗೆ ನನ್ನ ಪೋನ್ ನಂಬರ್ ನೇದ್ದಕ್ಕೆಅಪರಿಚಿತ ನಂಬರ್ ನಿಂದಕಾಲ್ ಬಂದಿದ್ದು, ರಿಸೀವ್ ಮಾಡಿ ಮಾತಾಡಲಾಗಿ ನನ್ನಗಂಡನಾದ ಸೂಗಯ್ಯಸ್ವಾಮಿರವರೇಕಾಲ್ ಮಾಡಿದ್ದು, ಅವರು ಹೇಳಿದ್ದೆನೆಂದರೆ, ನಾನು ಆರಮದಿದ್ದಇದ್ದೆನೆ, ನಿವೇನು ಗಾಬರಿಯಾಗಬೇಡಿರಿ, ನಾನು ಮನೆಗೆ ಬರುತ್ತೇನೆಅಂತಾಅಂದವರೆಕಾಲ್ಕಟ್ ಮಾಡಿದರು. ನಂತರ ನಾನು ತಕ್ಷಣವೇ ಆ ನಂಬರಗೆಕಾಲ್ ಮಾಡಿದಾಗ ಆ ನಂಬರ್ ಬೇರೆಯವರು ರಿಸೀವ್ ಮಾಡಿದ್ದು, ರಾಂಗ್ ನಂಬರ್ಅಂತಾ ಹೇಳಿದರು. ನಂತರನಾವು ಎಲ್ಲಾಕಡೆ ಹುಡುಕಾಡಲಾಗಿ, ಎಲ್ಲಿಯೂ ಸಿಗದ ಕಾರಣಇಂದುತಡವಾಗಿಠಾಣೆಗೆಠಾಣೆಗೆ ಬಂದುದೂರು ಸಲ್ಲಿಸಿದ ಅಜರ್ಿಯ ಮೇಲಿಂದಠಾಣೆಗುನ್ನೆ ನಂ. 30/2022 ಕಲಂ: ಮನುಷ್ಯಕಾಣೆ ನೇದ್ದರಅಡಿಯಲ್ಲಿ ಪ್ರಕರಣದದಾಖಲು ಮಾಡಿಕೊಂಡುತನಿಖೆಕೈಕೊಂಡಿದ್ದುಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 25/2022 ಕಲಂ: 309 ಐಪಿಸಿ : ಇಂದು ದಿನಾಂಕ 03/02/2022 ರಂದು 5.00 ಪಿ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಪ್ಪ ಹುಣಚ್ಯಾಳ ವ|| 60ವರ್ಷ ಜಾ|| ಕುರುಬರ ಉ|| ಮನೆಗೆಲಸ ಸಾ|| ಕೆಂಭಾವಿ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನ್ನ ಮಗಳಾದ ನಿಂಗಮ್ಮಳಿಗೆ ಅಗ್ನಿ ಗ್ರಾಮದ ಸಿದ್ದಪ್ಪ ತಂದೆ ದೇವಪ್ಪ ಪೂಜಾರಿ ಈತನಿಗೆ ಕೊಟ್ಟು 18 ವರ್ಷಗಳ ಹಿಂದೆ ಮದುವೆ ಮಾಡಿದ್ದು ನಿಂಗಮ್ಮ ಮತ್ತು ಸಿದ್ದಪ್ಪ ದಂಪತಿಗಳಿಗೆ ಶಿವಲೀಲಾ ವ|| 17ವರ್ಷ ಮತ್ತು ರಾಜು ವ|| 10ವರ್ಷ ಎಂಬುವ 2 ಮಕ್ಕಳಿದ್ದು ಇಬ್ಬರೂ ಚನ್ನಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ಇತ್ತೀಚೆಗೆ 10 ತಿಂಗಳುಗಳ ಹಿಂದಿನಿಂದ ನನ್ನ ಮಗಳಾದ ನಿಂಗಮ್ಮ ಗಂಡ ಸಿದ್ದಪ್ಪ ಪೂಜಾರಿ ವ|| 40ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ಅಗ್ನಿ ಹಾ|| ವ|| ಕೆಂಭಾವಿ ಮತ್ತು ಅವಳ ಗಂಡನಾದ ಸಿದ್ದಪ್ಪ ತಂದೆ ದೇವಪ್ಪ ಪೂಜಾರಿ ಇವರಿಬ್ಬರ ನಡುವೆ ಜಗಳ ಬಂದು ನನ್ನ ಮಗಳಾದ ನಿಂಗಮ್ಮಳು 10 ತಿಂಗಳುಗಳಿಂದ ತನ್ನ ಎರಡು ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಮನೆಯಲ್ಲಿಯೇ ಇದ್ದಳು. ಅವಳ ಹಿರಿಯ ಮಗಳಾದ ಶಿವಲೀಲಾಳಿಗೆ ಶಾಲೆ ಕಲಿಯಲು ನಾಗರಬೆಟ್ಟ ಊರಿನಲ್ಲಿ ಬಿಟ್ಟಿದ್ದು ತನ್ನ ಮಗನಾದ ರಾಜು ಈತನಿಗೆ ಕರೆದುಕೊಂಡು ನಮ್ಮ ಮನೆಯಲ್ಲಿ ಇದ್ದಳು. ನಿಂಗಮ್ಮಳು 2-3 ತಿಂಗಳುಗಳಿಂದ ತನ್ನ ಗಂಡನಿಗೆ ಫೋನ್ ಮಾಡಿ ನನಗೆ ಮತ್ತು ಮಕ್ಕಳಿಗೆ ಕರೆದುಕೊಂಡು ಹೋಗು ಅಂತಾ ಹೇಳಿದರೆ ನಿಮ್ಮ ಮನಸ್ಸಿಗೆ ಬಂದಲ್ಲಿ ಇದ್ದು ಬಿಡ್ರಿ ನಾನು ಕರೆದುಕೊಂಡು ಹೋಗುವುದಿಲ್ಲ ಅಂತಾ ಹೇಳಿದ್ದನು. ಅಂದಿನಿಂದ ನನ್ನ ಮಗಳಾದ ನಿಂಗಮ್ಮಳು ಸ್ವಲ್ಪ ಬೇಜಾರದಿಂದ ಇರುತ್ತಿದ್ದಳು. ಅವಳಿಗೆ ನೀನು ಯಾವುದೇ ವಿಚಾರ ಮಾಡದೇ ಆರಾಮಾಗಿ ನಮ್ಮ ಮನೆಯಲ್ಲಿಯೇ ಇದ್ದು ಬಿಡು ಅಂತಾ ಸಮಾಧಾನ ಹೇಳಿದ್ದರಿಂದ ನಿಂಗಮ್ಮಳು ಸಮಾಧಾನವಾಗಿ ಇದ್ದಳು. ಹೀಗಿದ್ದು ಇಂದು ದಿನಾಂಕ 03/02/2022 ರಂದು ಮುಂಜಾನೆ 6.00 ಗಂಟೆಗೆ ಪ್ರತಿನಿತ್ಯದಂತೆ ನಾನು, ನನ್ನ ಮಗಳಾದ ನಿಂಗಮ್ಮ ಮತ್ತು ನಿಂಗಮ್ಮಳ ಮಗನಾದ ರಾಜು ಎಲ್ಲರೂ ಎದ್ದೆವು. ನಂತರ ನಿಂಗಮ್ಮಳು ಮನೆಯ ಕಸ ಮುಸುರಿ ಮಾಡಿ ಜಳಕ ಮಾಡಿ ಮುಂಜಾನೆ 8.30 ಗಂಟೆಯ ಸುಮಾರಿಗೆ ತನ್ನ ಮಗಳಾದ ಶಿವಲೀಲಾಳಿಗೆ ಮಾತನಾಡಿಸಿ ಬರಲು ನಾಗರಬೆಟ್ಟಕ್ಕೆ ಹೋಗಿ ಬರುತ್ತೇನೆ ಅಂತಾ ತಯಾರಾಗಿ ಹೇಳಿ ಮನೆಯಿಂದ ಹೋದಳು. ಅವಳು ಹೋದ 5 ನಿಮಿಷದ ನಂತರ ಅವಳ ಮಗನಾದ ರಾಜು ಈತನು ಮನೆಯಿಂದ ಹೊರಗಡೆ ಹೋದನು. ನಂತರ ನಾನು ಮನೆಯಲ್ಲಿದ್ದಾಗ 9.10 ಗಂಟೆಯ ಸುಮಾರಿಗೆ ನಮ್ಮೂರ ಅಂಬಿಕಾ ಗಂಡ ಷಣ್ಮುಖಪ್ಪ ಸಂಕದ ಇವಳು ನಮ್ಮ ಮನೆಗೆ ಬಂದು ನಿಮ್ಮ ಮಗಳಾದ ನಿಂಗಮ್ಮಳು ಕೆಂಭಾವಿ ಹತ್ತಿರ ಇರುವ ಐಬಿಸಿ ಕೆನಾಲ್ ನೀರಿನಲ್ಲಿ ಹಾರಿದ್ದಳು. ಅವಳು ಹಾರಿದ್ದನ್ನು ನೋಡಿ ತಕ್ಷಣ ಅಲ್ಲಿಯೇ ದಾರಿಯ ಮೇಲೆ ಹೋಗುತ್ತಿದ್ದ ನಮ್ಮೂರ ಶಿವಕುಮಾರ ತಂದೆ ಶರಣಪ್ಪ ಧರಿ ಮತ್ತು ಯಾಳಗಿ ಗ್ರಾಮದ ಬಸವರಾಜ ತಂದೆ ವೀರಭದ್ರಪ್ಪ ಕರಡಕಲ್ ಇವರು ಕೆನಾಲ್ ನೀರಿನಲ್ಲಿ ಹಾರಿ ಈಜಾಡಿ ನಿಂಗಮ್ಮಳಿಗೆ ಕೆನಾಲ್ ನೀರಿನಿಂದ ಹೊರಗೆ ತೆಗೆದು ಸಕರ್ಾರಿ ದವಾಖಾನೆಗೆ ಕರೆದುಕೊಂಡು ಹೋಗಿದ್ದಾರೆ ಅಂತಾ ಹೇಳಿದ್ದರಿಂದ ನಾನು ತಕ್ಷಣ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಹೋಗಿ ನೋಡಲಾಗಿ ನನ್ನ ಮಗಳಾದ ನಿಂಗಮ್ಮಳು ನೀರು ನುಂಗಿ ಸ್ವಲ್ಪ ಉಸಿರು ಬಿಗಿಯಾಗಿದ್ದರಿಂದ ಮಾತನಾಡದ ಸ್ಥಿತಿಯಲ್ಲಿದ್ದಳು. ಅವಳು ತನ್ನ ಗಂಡನು ಗಂಡನ ಮನೆಗೆ ಕರೆದುಕೊಂಡು ಹೋಗಿಲ್ಲ ಎಂಬ ನೋವಿನಿಂದ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು, ಅವಳಿಗೆ ಹೆಚ್ಚಿನ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಸುರಪೂರಕ್ಕೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ನಿಂಗಮ್ಮಳ ಮಗನಾದ ರಾಜು ಈತನು ಮುಂಜಾನೆ ಮನೆಯಿಂದ ಹೊರಗೆ ಹೋದವನು ಮನೆಗೆ ಬರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ. ನನ್ನ ಮಗಳಾದ ನಿಂಗಮ್ಮಳು ಯಾವುದೋ ವಿಷಯ ಮನಸ್ಸಿಗೆ ಹಚ್ಚಿಕೊಂಡು ಕೆನಾಲ್ ನೀರಿನಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ಅವಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 25/2022 ಕಲಂ 309 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 26/2022 ಕಲಂ: 279, 304(ಎ) ಐ.ಪಿ.ಸಿ : ಇಂದು ದಿನಾಂಕ 03/02/2022 ರಂದು 6.45 ಪಿ.ಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀ ಮಲ್ಲಿಕಾಜರ್ುನ ತಂದೆ ಭೀಮಪ್ಪ ಬಡಿಗೇರ ವ|| 42ವರ್ಷ ಜಾ|| ಹಿಂದೂ ಹೊಲೆಯ ಉ|| ಒಕ್ಕಲುತನ ಸಾ|| ಯಡಹಳ್ಳಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಲಿಖಿತ ಅಜರ್ಿಯನ್ನು ತಂದು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ಅಣ್ಣನಾದ ಮುದುಕಪ್ಪ ಬಡಿಗೇರ ಈತನ ಮಗಳಾದ ದೇವಮ್ಮಳಿಗೆ ಗೌಡಗೇರಾ ಗ್ರಾಮದ ಅಂಬ್ರೇಶ ಚಲುವಾದಿ ಈತನಿಗೆ ಕೊಟ್ಟು ಮದುವೆ ಮಾಡಿದ್ದು ದೇವಮ್ಮ ಮತ್ತು ಅಂಬ್ರೇಶ ಇವರಿಗೆ ಗುಂಡಪ್ಪ ಮತ್ತು ಆನಂದ ಎಂಬುವ 2 ಗಂಡು ಮಕ್ಕಳಿದ್ದು ಗುಂಡಪ್ಪ ವ|| 8ವರ್ಷ ಎಂಬುವ ಹುಡುಗನಿಗೆ ಶಾಲೆ ಕಲಿಯಲು ನಮ್ಮ ಮನೆಯಲ್ಲಿ ಬಿಟ್ಟು ಆನಂದ ಎಂಬುವ ಹುಡುಗಿಗೆ ತಮ್ಮೊಂದಿಗೆ ಕರೆದುಕೊಂಡು ಬೆಂಗಳೂರಿಗೆ ದುಡಿಯಲು ಹೋಗಿ ಅಲ್ಲಿಯೇ ಇರುತ್ತಾರೆ. ನಮ್ಮ ಅಣ್ಣನ ಮಗನಾದ ಹಣಮಂತ್ರಾಯ ತಂದೆ ಮುದುಕಪ್ಪ ಬಡಿಗೇರ ಈತನು ಇಂದು ದಿನಾಂಕ 03/02/2022 ರಂದು ನಮ್ಮ ಕಾರು ನಂ ಕೆಎ 04 ಡಿ 8542 ನೇದ್ದು ತೆಗೆದುಕೊಂಡು ಹಣಮಂತ್ರಾಯನ ತಾಯಿಗೆ ಬಿಟ್ಟು ಬರಲು ಹೂವಿನಹಳ್ಳಿ ಗ್ರಾಮಕ್ಕೆ ಹೋಗಿದ್ದು ತನ್ನ ಜೊತೆಗೆ ಕಾರಿನಲ್ಲಿ ತನ್ನ ಅಳಿಯನಾದ ಗುಂಡಪ್ಪ ತಂದೆ ಅಂಬ್ರೇಶ ಚಲುವಾದಿ ಈತನಿಗೆ ಕರೆದುಕೊಂಡು ಹೋಗಿ ಮರಳಿ ಯಡಹಳ್ಳಿ ಗ್ರಾಮಕ್ಕೆ ಬರುವಾಗ ಹಣಮಂತ್ರಾಯನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಕೆಂಭಾವಿಯಿಂದ 2 ಕಿಮೀ ದಾಟಿ ಕೆಂಭಾವಿ ಹಳ್ಳದ ಹತ್ತಿರ ರಸ್ತೆಯ ಮೇಲೆ ಎದುರು ದನಗಳು ಬರುತ್ತಿದ್ದು ಅವುಗಳನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಕಾರನ್ನು ಪಲ್ಟಿ ಮಾಡಿದ್ದರಿಂದ ಕಾರಿನಲ್ಲಿ ಇದ್ದ ಗುಂಡಪ್ಪನಿಗೆ ತಲೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿ ಬಿದ್ದಿದ್ದು ತಕ್ಷಣ ಸಕರ್ಾರಿ ಆಸ್ಪತ್ರೆ ಕೆಂಭಾವಿಗೆ ಕರೆದುಕೊಂಡು ಹೋಗಿ ಹೆಚ್ಚಿನ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ದಾರಿಯ ಮಧ್ಯದಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿ ಅಪಘಾತಕ್ಕೆ ಕಾರು ನಂಬರ ಕೆಎ 04 ಡಿ 8542 ನೇದ್ದರ ಚಾಲಕನಾದ ಹಣಮಂತ್ರಾಯ ತಂದೆ ಮುದುಕಪ್ಪ ಬಡಿಗೇರ ಸಾ|| ಯಡಹಳ್ಳಿ ಈತನ ಅತೀವೇಗ ಹಾಗು ಅಲಕ್ಷತನದ ಚಾಲನೆಯೇ ಕಾರಣವಿದ್ದು ಸದರಿ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 26/2022 ಕಲಂ 279, 304(ಎ) ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-02-2022 11:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080