Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-03-2022


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:23/2022 ಕಲಂ: 279 338,304(ಂ) ಐಪಿಸಿ : ದಿನಾಂಕ:01.03.2022 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರು ಅಜರ್ಿಯ ಸಾರಾಂಶವೆನೆಂದರೆ, ಪಿಯರ್ಾದಿಗೆ ಅಳಿಯನಾಗಬೇಕಾದ ದೇವರಾಜ ತಂದೆ ಪರಸಪ್ಪ ಕುರಿ ಈತನು ತನ್ನ ಮೋಟರ್ ಸೈಕಲ್ ನಂ:ಕೆಎ-33 ಆರ್-1839 ನೇದ್ದರ ಮೇಲೆ ದಿನಾಂಕ:27.02.2022 ರಂದು ಗೆದ್ದಲಮರಿ-ರಾಜನಕೊಳೂರ ರಸ್ತೆಯ ಮೇಲೆ ರಾಜನಕೊಳೂರ ಸೀಮಾಂತರದ ರಾಚಯ್ಯ ಸ್ವಾಮಿ ರವರ ಹೊಲದ ಸಿಡಿಯ ಹತ್ತಿರ ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ತನ್ನ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ಬಿದ್ದಿದ್ದು, ಹಿಂದೆ ಮೊಟರ್ ಸೈಕಲ್ ಮೇಲೆ ಹೊರಟಿದ್ದ ಪಿಯರ್ಾದಿ ತಮ್ಮ ಮೋಟರ್ ಸೈಕಲ್ನ್ನು ನಿಲ್ಲಿಸಿ ಹೋಗಿ ನೋಡಲಾಗಿ ದೇವರಾಜನಿಗೆ ತಲೆಯ ಹಿಂಬದಿಗೆ ಭಾರಿ ರಕ್ತಗಾಯವಾಗಿದ್ದು ಮತ್ತು ಬಲಗೈ ಕಿರುಬೆರಳಿನ ಪಕ್ಕದ ಬೆರಳಿಗೆ ರಕ್ತಗಾಯವಾಗಿ ಪ್ರಜ್ಞಾಹೀನ ಸ್ಥಿತಿಗೆ ಹೋಗಿದ್ದು ದೇವರಾಜನು ನಡೆಯಿಸಿಕೊಂಡು ಬಂದ ಮೋಟರ್ ಸೈಕಲ್ ನಂಬರ ನೋಡಲಾಗಿ ಕೆಎ-33 ಆರ್-1839 ಇದ್ದು, ನಂತರ ಪಿಯರ್ಾದಿ ಹಾಗೂ ಸಂಗಡ ಇದ್ದವರು ಕೂಡಿ ದೇವರಾಜನಿಗೆ ಉಪಚಾರಕ್ಕಾಗಿ ರಾಜನಕೊಳೂರದ ಒಂದು ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಲಿಂಗಸೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆಮಾಡಿ ನಂತರ ದಿನಾಂಕ 28.02.2022 ರಂದು ಲಿಂಗಸೂರ ಸರಕಾರಿ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಉಪಚಾರಕ್ಕಾಗಿ ಬಳ್ಳಾರಿ ವೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರಕ್ಕಾಗಿ ಸೇರಿಕೆ ಮಾಡಿದ್ದು, ದಿನಾಂಕ 27.02.2022 ರಂದು ಮಧ್ಯಾಹ್ನ 12:45 ಗಂಟೆಯ ಸುಮಾರಿಗೆ ರಾಜನಕೊಳುರ-ಗೆದ್ದಲಮರಿ ರಸ್ತೆಯ ಮೇಲೆ ರಾಜನಕೊಳುರ ಸೀಮಾಂತರದ ರಾಚಯ್ಯ ಸ್ವಾಮಿ ರವರ ಹೊಲದ ಸಿಡಿಯ ಹತ್ತಿರ ತನ್ನ ಮೋಟರ್ ಸೈಕಲ್ ನಂ:ಕೆಎ-33 ಆರ್-1839 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ಮೋಟರ್ ಸೈಕಲ್ ಸಮೇತ ಬಿದ್ದುದರಿಂದ ತಲೆಯ ಹಿಂಬದಿಗೆ ಬಲಗೈ ಕಿರುಬೆರಳಿನ ಪಕ್ಕದ ಬೆರಳಿಗೆ ಭಾರಿ ರಕ್ತಗಾಯವಾಗಿದ್ದು ದೇವರಾಜ ಇತನು ಇನ್ನೂ ಬಳ್ಳಾರಿ ವೀಮ್ಸ್ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ದೇವರಾಜನಿಗೆ ಉಪಚಾರಕ್ಕಾಗಿ ಕರೆದುಕೊಂಡು ಹೋಗಿದ್ದರಿಂದ ದೂರು ಕೊಡಲು ತಡವಾಗಿದ್ದು ಈ ಅಪಘಾತವು ದೇವರಾಜ ತಂದೆ ಪರಸಪ್ಪ ಕುರಿ ಇತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಅವನ ಮೇಲೆೆ ಕಾನುನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಪಿಯರ್ಾದಿ ದೂರು ಅಜರ್ಿಯ ಸಾರಾಂಶದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಇಂದು ದಿನಾಂಕ:03.03.2022 ರಂದು ಬೆಳಿಗ್ಗೆ 08:00 ಗಂಟೆಗೆ ಪಿಯರ್ಾದಿ ಶ್ರೀ ನಂದಪ್ಪಗೌಡ ತಂದೆ ಬಸಪ್ಪ ಮಾಳಿ ವ:65 ಜಾ:ಹಿಂದೂ ಕುರುಬರ ಉ:ಒಕ್ಕಲುತನ ಸಾ:ಕಡದರಾಳ ತಾ:ಹುಣಸಗಿ ಜಿ:ಯಾದಗಿರಿ ಇವರು ಠಾಣೆಗೆ ಹಾಜರಾಗಿ ಪುರವಣಿ ಹೇಳಿಕೆ ಕೊಟ್ಟಿದ್ದು ಅದರ ಸಾರಾಂಶವೆನೆಂದರೆ, ದಿನಾಂಕ:27.02.2022 ರಂದು ಅಪಘಾತದಲ್ಲಿ ಗಾಯವಾಗಿದ್ದ ದೇವರಾಜ ತಂದೆ ಪರಸಪ್ಪ ಕುರಿ ವ:32 ವರ್ಷ ಜಾ:ಹಿಂದೂ ಕುರುಬರ ಸಾ:ಕಡದರಾಳ ತಾ:ಹುಣಸಗಿ ಈತನನ್ನು ಉಪಚಾರ ಕುರಿತು ವಿಮ್ಸ್ ಆಸ್ಪತ್ರೆ ಬಳ್ಳಾರಿ ರವರಲ್ಲಿ ಸೇರಿಕೆಮಾಡಿ ಉಪಚಾರ ಕೊಡಿಸುತ್ತಿದ್ದು, ಉಪಚಾರ ಫಲಿಸದೇ ಗಾಯಾಳು ದೇವರಾಜ ತಂದೆ ಪರಸಪ್ಪ ಕುರಿ ಈತನು ನಿನ್ನೆ ದಿನಾಂಕ:02.03.2022 ರಂದು ರಾತ್ರಿ 11:15 ಗಂಟೆಗೆ ಅಪಘಾತದಲ್ಲಿ ಆದ ಗಾಯಗಳಿಂದ ಗುಣಮುಖವಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಇತ್ಯಾದಿ ಪುರವಣಿ ಹೇಳಿಕೆ ಕೊಟ್ಟಿದ್ದು ಇರುತ್ತದೆ. ಕಾರಣ ಸದರಿ ಪ್ರಕರಣದಲ್ಲಿ ಕಲಂ.304(ಎ) ಐಪಿಸಿ ಅಳವಡಿಸಿಕೊಳ್ಳಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ಮಾನ್ಯರವರಲ್ಲಿ ವಿನಂತಿ.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 32/2022 ಕಲಂ: 87 ಕೆ.ಪಿ.ಆಕ್ಟ್ 1963 : ಇಂದು ದಿನಾಂಕ: 03/03/2022 ರಂದು 2-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ದಿನಾಂಕ: 03/03/2022 ರಂದು ನಾನು ಮತ್ತು ಸಿಬ್ಬಂದಿಯವರಾದ 1) ಗುಂಡಪ್ಪ ಹೆಚ್.ಸಿ 37, 2) ಮಹೇಂದ್ರ ಪಿಸಿ 254, 3) ಸಂಜೀವ ಪಿಸಿ-03, 4) ಹುಲಿಗೆಪ್ಪ ಪಿಸಿ 344, 5) ಗೋವಿಂದ ಪಿಸಿ 16 ಮತ್ತು 6) ಮಾಳಪ್ಪ ಪಿಸಿ 30 ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ಮತುಷ್ತ ಸಿ.ಪಿ.ಐ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಕ್ಯಾತ್ನಳ ಸೀಮಾಂತರದ ಯಲ್ಲಾಲಿಂಗ ಮಠದ ಮುಂದುಗಡೆ ಬಯಲು ಪ್ರದೇಶದ ಸಾರ್ವಜನಿಕ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 11-30 ಎಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು ಹೊರಟು 12 ಪಿಎಮ್ ಕ್ಕೆ ಕ್ಯಾತ್ನಳ ಸೀಮಾಂತರದ ಯಲ್ಲಾಲಿಂಗ ಮಠದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸದರಿ ಮಠವನ್ನು ಮರೆಯಾಗಿ ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಪಂಚರ ಸಮಕ್ಷಮ ನಾವು ಮತ್ತು ಸಿಬ್ಬಂದಿಯವರು 12-15 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದವರಲ್ಲಿ 11 ಜನರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಅವರಲ್ಲಿ ಮೂರು ಜನ ಓಡಿ ಹೋದರು. ವಶಕ್ಕೆ ಪಡೆದವರನ್ನು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ನಿಂಗಣ್ಣ ತಂದೆ ಭೀಮಣ್ಣ ಹಾಲಗೇರಾ, ವ:23, ಜಾ:ಕುರುಬರ, ಉ:ಒಕ್ಕಲುತನ ಸಾ:ಕ್ಯಾತ್ನಳ ತಾ:ವಡಗೇರಾ ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 670/- ರೂ ಮತ್ತು 21 ಇಸ್ಪೀಟ್ ಎಲೆಗಳು ಇದ್ದದ್ದನ್ನು ಹಾಜರಪಡಿಸಿದನು. 2) ಹಣಮಂತ ತಂದೆ ಭೀಮಣ್ಣ ಬಂದಳ್ಳಿ, ವ:30, ಜಾ:ಕುರುಬರ, ಉ:ಒಕ್ಕಲುತನ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 590/- ರೂ, ಹಾಜರಪಡಿಸಿದನು. 3) ನಿಂಗಪ್ಪ ತಂದೆ ಮಲ್ಲಪ್ಪ ಮಳ್ಳಳ್ಳಿ, ವ:32, ಜಾ:ಕುರುಬರ, ಉ:ಕೂಲಿ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 860/- ರೂ, ಹಾಜರಪಡಿಸಿದನು. 4) ಬಸಪ್ಪ @ ಬಸ್ಯಾ ತಂದೆ ಮಹಾದೇವಪ್ಪ ಗುರುಪಾದ, ವ:20, ಜಾ:ಉಪ್ಪಾರ, ಉ:ಕೂಲಿ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 910/- ರೂ, ಹಾಜರಪಡಿಸಿದನು. 5) ಮೈಲಾರಿ ತಂದೆ ಶರಣಪ್ಪ ಅಗಸರ, ವ:21, ಜಾ:ಅಗಸರ, ಉ:ಗಾರೆ ಕೆಲಸ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 450/- ರೂ, ಹಾಜರಪಡಿಸಿದನು. 6) ಹಣಮಂತ್ರಾಯ ತಂದೆ ಮಲ್ಲಪ್ಪ ಚಿಗಾನೂರ, ವ:28, ಜಾ:ಕುರುಬರ, ಉ:ಒಕ್ಕಲುತನ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 690/- ರೂ, ಹಾಜರಪಡಿಸಿದನು. 7) ಮಲ್ಲಪ್ಪ ತಂದೆ ಹಣಮಂತ ಮಳ್ಳಳ್ಳಿ, ವ:29, ಜಾ:ಕುರುಬರ, ಉ:ಗಾರೆ ಕೆಲಸ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 490/- ರೂ, ಹಾಜರಪಡಿಸಿದನು. 8) ಹಣಮಂತ ತಂದೆ ಮಲ್ಲಯ್ಯ ಕಾವಲಿ, ವ:25, ಜಾ:ಬೇಡರ, ಉ:ಕೂಲಿ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 330/- ರೂ, ಹಾಜರಪಡಿಸಿದನು. 9) ಭೀಮಣ್ಣ ತಂದೆ ಬಸನಗೌಡ ಹಳಿಮನಿ, ವ:24, ಜಾ:ಕುರುಬರ, ಉ:ಕೂಲಿ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 350/- ರೂ, ಹಾಜರಪಡಿಸಿದನು. 10) ಸಿದ್ದಣ್ಣ ತಂದೆ ಭೀಮರಾಯ ಮಡಗೋಣಿ, ವ:40, ಜಾ:ಕುರುಬರ, ಉ:ಒಕ್ಕಲುತನ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 660/- ರೂ, ಹಾಜರಪಡಿಸಿದನು ಮತ್ತು 11) ಮಂಜೂರಸಾಬ ತಂದೆ ಖಾಜಹುಸೇನಿ ಖುರೇಷಿ, ವ:28, ಜಾ:ಮುಸ್ಲಿಂ, ಉ:ವ್ಯಾಪಾರ ಸಾ:ಕ್ಯಾತ್ನಳ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 430/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 2590/- ರೂ. ಹೀಗೆ ಒಟ್ಟು 9020/- ರೂ. ನಗದು ಹಣ ಮತ್ತು 56 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಜಪ್ತಿ ಪಡಿಸಿಕೊಂಡರು. ಓಡಿ ಹೋದವರ ಹೆಸರು ವಿಳಾಸವನ್ನು ವಶಕ್ಕೆ ಪಡೆದುಕೊಂಡವರಿಗೆ ವಿಚಾರಿಸಿದಾಗ 12) ಸಾಬಣ್ಣ ತಂದೆ ತಿಪ್ಪಣ್ಣ ಮುಳಗಾರ, 13) ಸಿದ್ದಣ್ಣಗೌಡ ತಂದೆ ಜೊನ್ನಪ್ಪಗೌಡ ಬಿರೆದಾರ ಪಾಟಿಲ್ ಮತ್ತು 14) ಹುಲಗಪ್ಪ ತಂದೆ ಮಲ್ಲಪ್ಪ ಮಳ್ಳಳ್ಳಿ ಎಲ್ಲರೂ ಸಾ:ಕ್ಯಾತ್ನಳ ಈ ಮೂರು ಜನ ಇಸ್ಪೀಟ ದಾಳಿ ಕಾಲಕ್ಕೆ ಓಡಿ ಹೋದವರಾಗಿರುತ್ತಾರೆ ಎಂದು ಹೇಳಿದರು ಸದರಿ ನಗದು ಹಣ ಮತ್ತು ಇಸ್ಪೀಟ ಎಲೆಗಳನ್ನು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ, ಜಪ್ತಿ ಪಂಚನಾಮೆ ಕೈಕೊಳ್ಳಲಾಯಿತು. ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 32/2022 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ: 78(3) ಕೆ.ಪಿ.ಆಕ್ಟ್ 1963 : ದಿನಾಂಕ:03/03/2022 ರಂದು 8-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:03/03/2022 ರಂದು ಸಮಯ ಸಾಯಂಕಾಲ 4-30 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ರಾಜಕುಮಾರ ಹೆಚ್.ಸಿ 179 ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ಬೆಂಡೆಬೆಂಬಳ್ಳಿ ಗ್ರಾಮದ ಮುರಿಗೆಮ್ಮ ಸಾಹುಕಾತರ್ಿ ಇವರ ಕಿರಾಣಿ ಅಂಗಡಿ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ ಇಬ್ಬರು ಪಂಚರನ್ನು ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕರೆದುಕೊಂಡು ಹೊರಟು ಸಮಯ 5-15 ಪಿಎಮ್ ಸುಮಾರಿಗೆ ಬೆಂಡೆಬೆಂಬಳ್ಳಿ ಗ್ರಾಮದ ಮುರಿಗೆಮ್ಮ ಸಾಹುಕಾತರ್ಿ ಇವರ ಕಿರಾಣಿ ಅಂಗಡಿ ಹತ್ತಿರ ಹೋಗಿ ಜೀಪ ನಿಲ್ಲಿಸಿ, ಸದರಿ ಕಿರಾಣಿ ಅಂಗಡಿಯನ್ನು ಮರೆಯಾಗಿ ನಿಂತು ನೋಡಲಾಗಿ ಅದರ ಮುಂದುಗಡೆ ಸಿ.ಸಿ ರಸ್ತೆ ಬದಿ ಕಟ್ಟೆ ಮೇಲೆ ಒಬ್ಬ ವ್ಯಕ್ತಿ ಕುಳಿತು ರಸ್ತೆ ಮೇಲೆ ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 5-30 ಪಿಎಮ್ಕ್ಕೆ ನಾವು ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ತಿಮ್ಮಯ್ಯ ತಂದೆ ಸಣ್ಣ ಸಾಬಣ್ಣ ವಡ್ಡರ, ವ:45, ಜಾ:ವಡ್ಡರ, ಉ:ಒಕ್ಕಲುತನ ಸಾ:ಬೆಂಡೆಬೆಂಬಳ್ಳಿ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 2150/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಸದರಿ ಮುದ್ದೆಮಾಲನ್ನು ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು ಇರುತ್ತದೆ. ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 11/2022 ಕಲಂ 279, 304(ಎ), 283 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 03/03/2022 ರಂದು 7-45 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ ನಿಂದ ರಸ್ತೆ ಅಪಘಾತದ ಬಗ್ಗೆ ಡೆತ್/ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ಮಾಹಿತಿ ನೀಡಿದ್ದರಿಂದ ಮೇಲಾಧಿಕಾರಿಗಳ ಆದೇಶದಂತೆ ನಾನು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ವಿಚಾರಣೆ ನಂತರ ಮೃತನ ಮಗನಾದ ಪಿಯರ್ಾದಿ ಶ್ರೀ ಮಲ್ಲಿಕಾಜರ್ುನ ತಂದೆ ದೇವಿಂದ್ರಪ್ಪ ದೋರನಹಳ್ಳಿ ವಯ;27 ವರ್ಷ, ಜಾ;ಕುರಬರ, ಉ;ಜೀಪ್ ಚಾಲಕ, ಸಾ;ಮದ್ರಿಕಿ ತಾ;ಶಹಾಪುರ, ಜಿ;ಯಾದಗಿರಿ ಇವರು ಆಸ್ಪತ್ರೆಯಲ್ಲಿ ಹಾಜರಿದ್ದು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 8-30 ಪಿ.ಎಂ.ದಿಂದ 9-30 ಎ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಜೀಪ್ ಚಾಲಕ ಕೆಲಸ ಮಾಡಿಕೊಂಡು ನಮ್ಮ ಕುಟುಂಬದೊಂದಿಗೆ ಉಪಜೀವಿಸುತ್ತೇನೆ. ನಮ್ಮ ತಂದೆ-ತಾಯಿಗೆ ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿರುತ್ತೇವೆ., ಮನೆಗೆ ನಾನೇ ಹಿರಿಮಗನಿರುತ್ತೇನೆ. ಇಂದು ದಿನಾಂಕ 03/03/2022 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಮ್ಮನಾದ ನಾಗರಾಜ ಇಬ್ಬರು ಮನೆಯಲ್ಲಿದ್ದಾಗ ನನ್ನ ತಂದೆಯವರು ನಮ್ಮಿಬ್ಬರಿಗೆ ತಿಳಿಸಿದ್ದೇನೆಂದರೆ ನಾನು ದೋರನಹಳ್ಳಿಗೆ ಹೋಗಿ ಮಾವನಾದ ಜಟ್ಟೆಪ್ಪ ದೋರನಹಳ್ಳಿ ಈತನಿಗೆ ನನ್ನ ಸಂಗಡ ಕರೆದುಕೊಂಡು ಯಾದಗಿರಿಯ ಅಡತಿ ಅಂಗಡಿಗೆ ಹೋಗಿ ತೊಗರಿ ಮಾರಾಟದ ಬಗ್ಗೆ ವಿಚಾರಿಸಿಕೊಂಡು ಮರಳಿ ಬರುತ್ತೇನೆಂದು ಹೇಳಿ ನಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಎಸ್-6509 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 03/03/2022 ರಂದು ಸಾಯಂಕಾಲ 7-30 ಪಿ.ಎಂ.ಕ್ಕೆ ನಾನು ಮತ್ತು ನನ್ನ ತಮ್ಮನಾದ ನಾಗರಾಜ ಹಾಗೂ ನನ್ನ ತಾಯಿ ಲಕ್ಷ್ಮೀರವರು ನಮ್ಮ ಮನೆಯಲ್ಲಿದ್ದಾಗ ನಮ್ಮ ಸಂಬಂಧಿ ದೋರನಹಳ್ಳಿಯ ಜಟ್ಟೆಪ್ಪ ತಂದೆ ನಿಂಗಪ್ಪ ನಾಲವಾರ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ನಾನು ಇಂದು ಮದ್ಯಾಹ್ನದ ಸುಮಾರಿಗೆ ದೋರನಹಳ್ಳಿಯಲ್ಲಿದ್ದಾಗ ನಿಮ್ಮ ತಂದೆಯಾದ ದೇವಿಂದ್ರಪ್ಪನವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಎಸ್-6509 ನೇದ್ದನ್ನು ನಡೆಸಿಕೊಂಡು ನನ್ನ ಹತ್ತಿರ ಬಂದು ನನಗೆ ತಿಳಿಸಿದ್ದೇನೆಂದರೆ ನಮ್ಮ ಹೊಲದ ತೊಗರಿಯನ್ನು ಯಾದಗಿರಿಯ ಅಡತಿ ಅಂಗಡಿಗೆ ಹಚ್ಚಿದ್ದೇನೆ ಇನ್ನು ಮಾರಾಟ ಮಾಡಿಲ್ಲ, ನಡೀ ಏನಾಯಿತು ಅಂತಾ ವಿಚಾರಣೆ ಮಾಡಿಕೊಂಡು ಬರೋಣ ನೀನು ನನ್ನ ಸಂಗಡ ಬಾ ಅಂದಾಗ ನಾನು ನಿಮ್ಮ ತಂದೆಯ ಸಂಗಡ ಅದೇ ಮೋಟಾರು ಸೈಕಲ್ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡೆನು. ಆಗ ನಾವಿಬ್ಬರು ಯಾದಗಿರಿಗೆ ಬಂದು ಅಡತಿ ಅಂಗಡಿಗೆ ಹೋಗಿ ತೊಗರಿ ಮಾರಾಟದ ಬಗ್ಗೆ ವಿಚಾರಣೆ ಮಾಡಿಕೊಂಡು ಮರಳಿ ಸಾಯಂಕಾಲ 6-30 ಪಿ.ಎಂ.ಕ್ಕೆ ಯಾದಗಿರಿಯಿಂದ ಹೊರಟೆವು. ಮೋಟಾರು ಸೈಕಲನ್ನು ನಿಮ್ಮ ತಂದೆಯವರೇ ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಬೀಮಾ ನದಿಯ ಬ್ರಿಡ್ಜ್ ಸಮೀಪ ಮುಖ್ಯ ರಸ್ತೆಯ ಮೇಲೆ ಒಂದು ಲಾರಿಯ ಚಾಲಕನು ರಸ್ತೆ ಸಂಚಾರ ನಿಯಮಗಳ ಮುಂಜಾಗ್ರತೆ ಕ್ರಮ ಪಾಲಿಸದೇ, ತನ್ನ ಕಬ್ಬು ತುಂಬಿದ ಲಾರಿಯನ್ನು ರಸ್ತೆಯ ಮೇಲೆ ಯಾವುದೇ ಇಂಡಿಕೇಟರಗಳನ್ನು ಹಾಕದೇ, ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ಶಹಾಪುರ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ಅದೇ ಸಮಯಕ್ಕೆ ನಿಮ್ಮ ತಂದೆಯವರು ಮೋಟಾರು ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಿಂತಿದ್ದ ಲಾರಿ ನಂಬರ ಕೆಎ-56, 4238 ನೇದ್ದರ ವಾಹನದ ಹಿಂಭಾಗಕ್ಕೆ ಹೋಗಿ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಈ ಅಪಘಾತವು ಇಂದು ದಿನಾಂಕ 03/03/2022 ರಂದು ಸಾಯಂಕಾಲ 7 ಪಿ.ಎಂ.ಕ್ಕೆ ಜರುಗಿದ್ದು, ಸದರಿ ಅಪಘಾತದಲ್ಲಿ ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ಸಿಡಿದು ರಸ್ತೆ ಮೇಲೆ ಬಿದ್ದಾಗ ನನಗೆ ಹಣೆಗೆ ಗುಪ್ತಗಾಯ ಮತ್ತು ಅಲ್ಲಲ್ಲಿ ಸಣ್ಣಪುಟ್ಟ ತರಚಿದ ಗಾಯಗಳಾಗಿದ್ದು ಇರುತ್ತದೆ, ಎದ್ದು ನೋಡಲು ನಿಮ್ಮ ತಂದೆಗೆ ಹಣೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು, ತಲೆಗೆ ಭಾರೀ ಗುಪ್ತಗಾಯವಾಗಿ ಕಿವಿಗಳಲ್ಲಿ ರಕ್ತ ಬಂದಿದ್ದು, ಮುಖಕ್ಕೆ ಭಾರೀ ರಕ್ತಗಾಯ, ಮೂಗು ಕತ್ತರಿಸಿ ತುಂಡಾಗಿದ್ದು, ಬಲಗಣ್ಣು ಪೂರ್ಣ ನುಜ್ಜು-ಗುಜ್ಜಾಗಿರುತ್ತದೆ. ಅಂದಾಜು ಸಮಯ 07-05 ಪಿ.ಎಂ.ಕ್ಕೆ ನಿಮ್ಮ ತಂದೆಯವರಿಗೆ ಆದ ಭಾರೀ ಗಾಯಗಳ ಪೆಟ್ಟುಗಳ ಭಾದೆಯಿಂದ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಲಾರಿ ಚಾಲಕನು ನಮಗೆ ನೋಡಿ ಘಟನಾ ಸ್ಥಳದಿಂದ ಓಡಿ ಹೋಗಿರುತ್ತಾನೆ ಆತನನ್ನು ನಾನು ಮತ್ತೆ ನೋಡಿದರೆ ಗುತರ್ಿಸುತ್ತೇನೆ. ಆಗ ಘಟನಾ ಸ್ಥಳಕ್ಕೆ ಪೊಲಿಸರು ವಾಹನಗಳು ಬಂದಿದ್ದು, ಅವರು 108 ಅಂಬುಲೆನ್ಸ್ ಕರೆಸಿ ನನಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ ಹಾಗೂ ನಿಮ್ಮ ತಂದೆಯ ಮೃತದೇಹವನ್ನು ಯಾದಗಿರಿ ಶವಗಾರ ಕೋಣೆಗೆ ತಂದಿರುತ್ತಾರೆ ನೀವು ಕೂಡಲೇ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬರ್ರೀ ಅಂದಾಗ ನನಗೆ ಗಾಬರಿಯಾಗಿ ನನಗೆ ಬಂದ ಮಾಹಿತಿಯನ್ನು ನನ್ನ ತಮ್ಮ ನಾಗರಾಜ ಮತ್ತು ತಾಯಿಯಾದ ಲಕ್ಷ್ಮೀ ಇವರಿಗೆ ತಿಳಿಸಿ ಅವರಿಗೆ ಸಂಗಡ ಕರೆದುಕೊಂಡು ನಮ್ಮೂರಿನ ಶ್ರೀ ಕರುಣೇಶ್ವರ ತಂದೆ ವೆಂಕಟೇಶ ದೇವನೂರ ಮತ್ತು ರವಿ ತಂದೆ ದೇವಪ್ಪ ಕಲ್ಲಾ ಇವರಿಗೆ ಕೂಡ ಮಾಹಿತಿ ತಿಳಿಸಿ ಎಲ್ಲರೂ ಸೇರಿಕೊಂಡು ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನಮ್ಮ ಸಂಬಂದಿ ಜಟ್ಟೆಪ್ಪರವರು ಉಪಚಾರ ಹೊಂದುತ್ತಿದ್ದು, ಶವಗಾರ ಕೊಣೆಗೆ ಹೋಗಿ ನೋಡಲು ನನ್ನ ತಂದೆಯ ಮೃತದೇಹವನ್ನು ನಾನು ಮತ್ತು ನನ್ನ ತಮ್ಮ ನಾಗರಾಜ, ತಾಯಿ ಲಕ್ಷ್ಮೀ ಎಲ್ಲರೂ ಗುತರ್ಿಸಿರುತ್ತೇವೆ ನಮಗೆ ಈ ಮೇಲೆ ಪೋನಿನಲ್ಲಿ ನಮ್ಮ ಸಂಬಂಧಿ ಜಟ್ಟೆಪ್ಪರವರು ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ಹೀಗಿದ್ದು ಇಂದು ದಿನಾಂಕ 03/03/2022 ರಂದು ಸಮಯ 7 ಪಿ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಯಾದಗಿರಿ ಬೀಮಾ ನದಿಯ ಬ್ರಿಡ್ಜ್ ಹತ್ತಿರ ಮುಖ್ಯ ರಸ್ತೆ ಮೇಲೆ ಲಾರಿ ನಂ. ಕೆಎ-56, 4238 ನೇದ್ದರ ಚಾಲಕನು ರಸ್ತೆ ಸಂಚಾರ ನಿಯಮಗಳ ಮುಂಜಾಗ್ರತೆ ಕ್ರಮ ಪಾಲಿಸದೇ, ತನ್ನ ಕಬ್ಬು ತುಂಬಿದ ಲಾರಿಯನ್ನು ರಸ್ತೆಯ ಮೇಲೆ ಯಾವುದೇ ಇಂಡಿಕೇಟರಗಳನ್ನು ಹಾಕದೇ, ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ಶಹಾಪುರ ಕಡೆಗೆ ಮುಖ ಮಾಡಿ ನಿಲ್ಲಿಸಿದ್ದು, ಅದೇ ಸಮಯಕ್ಕೆ ನನ್ನ ತಂದೆಯವರು ಕೂಡ ಮೋಟಾರು ಸೈಕಲ್ ನಂ.ಕೆಎ-33, ಎಸ್-6509 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಲಾರಿಯ ಹಿಂಭಾಗಕ್ಕೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು, ಸದರಿ ಅಪಘಾತದಲ್ಲಿ ನನ್ನ ತಂದೆಗೆ ಭಾರೀ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದರಿಂದ ಗಾಯದ ಭಾದೆಯಿಂದ ಘಟನೆಯ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈ ಘಟನೆ ಬಗ್ಗೆ ಕಾನೂನಿನ ಮುಂದಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 9-45 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 11/2022 ಕಲಂ 279, 304(ಎ), 283 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

Last Updated: 04-03-2022 10:14 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080