ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-04-2022


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ: 447, 323, 354, 504, 506 ಸಂ. 34 ಐಪಿಸಿ : ಇಂದು ದಿನಾಂಕಃ 03/04/2022 ರಂದು 01:30 ಪಿ.ಎಂ ಕ್ಕೆ ಪಿಯರ್ಾದಿದಾರರಾದ ಶ್ರೀಮತಿ ಹಣಮವ್ವ ಗಂಡ ತಮ್ಮಣ್ಣ ಕಮತಗಿ ವ|| 60 ವರ್ಷ ಜಾ|| ಕಬ್ಬಲಿಗ ಸಾ|| ವಾರಿಸಿದ್ದಾಪೂರ ತಾ|| ಸುರಪುರ ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ದೂರು ಅಜರ್ಿ ಸಲ್ಲಿಸಿದ ಸಾರಂಶವೆನೆಂದರೆ, ನನಗೆ 05 ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದು, 7 ಜನ ಮಕ್ಕಳಿಗೂ ಮದುವೆ ಮಾಡಿರುತ್ತೇನೆ. ವಾರಿಸಿದ್ದಾಪೂರ ಸೀಮಾಂತರದಲ್ಲಿ ನಮ್ಮ ಹೊಲ ಸವರ್ೇ ನಂ. 144 ನೇದ್ದರಲ್ಲಿ 9 ಎಕರೆ 29 ಗುಂಟೆ ಜಮೀನು ಇರುತ್ತದೆ. ಸದರಿ ಹೊಲವು ನನ್ನ ಮತ್ತು ನನ್ನ ಮಕ್ಕಳ ಹೆಸರಿನಲ್ಲಿ ಜಂಟಿಯಾಗಿ ಇರುತ್ತದೆ. ಈ ಹೊಲದಲ್ಲಿ ನಮ್ಮ ಅಣ್ಣ ತಮ್ಮಕಿಯಾದ ಮಹಾದೇವಪ್ಪ ತಂದೆ ಹೊನ್ನಪ್ಪ ಕಮತಗಿ ಇತನು ಈ ಹೊಲದಲ್ಲಿ ನಮಗೆ ಪಾಲ ಬರುತ್ತದೆ. ನಮಗೆ ಪಾಲ ಕೊಡುವವರೆಗೂ ಇಲ್ಲಿ ನೀವು ಕೆಲಸ ಮಾಡಬೇಡರಿ ಅಂತಾ ಅನ್ನುತ್ತಾ ಬಂದಾಗ ನಾವು ನಿಮ್ಮ ಹೆಸರಿನ ಕಾಗದ ಪತ್ರಗಳನ್ನು ತೊರಿಸಿರಿ ನಿಮಗೂ ಪಾಲ ಕೊಡುತ್ತೇವೆ ಅಂತಾ ಹೇಳಿ ಸುಮ್ಮನಿದ್ದೇವು. ಹಿಗಿದ್ದು ಇಂದು ದಿನಾಂಕ:03/04/2022 ರಂದು ಮುಂಜಾನೆ 9:30 ಎ.ಎಂ ಸುಮಾರಿಗೆ ನಾನು ಮತ್ತು ನನ್ನ ಮಗಳಾದ ಭಾಗಮ್ಮ ಗಂಡ ಮಲ್ಲಣ್ಣ ಸುಣಗಾರ ಇಬ್ಬರು ನಮ್ಮ ಹೊಲದಲ್ಲಿರುವ ನಮ್ಮ ಮನೆಯ ಮುಂದೆ ನಮ್ಮೂರಲ್ಲಿ ಸರಕಾರದಿಂದ ಕುಡಿಯುವ ನೀರಿನ ಸೌಕರ್ಯ ಮಾಡಿಕೊಡುತ್ತಿದ್ದಾಗ, ಇದೇ ರೀತಿ ನಮ್ಮ ಮನೆಗೂ ಸಹ ನೀರಿನ ವ್ಯವಸ್ಥೆ ಮಾಡಿಸಿಕೊಳ್ಳುತ್ತಿದ್ದಾಗ ಅದೇ ಸಮಯಕ್ಕೆ 1) ಮಹಾದೇವಪ್ಪ ತಂದೆ ಹೊನ್ನಪ್ಪ ಕಮತಗಿ, ಆತನ ಹೆಂಡತಿ 2) ನಾಗಮ್ಮ ಗಂಡ ಮಹಾದೇವಪ್ಪ ಕಮತಗಿ ಇಬ್ಬರು ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ಇಲ್ಲಿ ಏನು ಕೆಲಸ ಮಾಡಬೇಡರಿ ಅಂತಾ ಹೇಳಿದರೂ ಕೆಲಸ ಮಾಡುತ್ತಿರಿ ಎನಲೇ ಸೂಳೆ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಬೈಯುತ್ತಿ, ನಮ್ಮ ಮನೆಗೆ ಕುಡಿಯುವ ನೀರಿನ ನಳದ ವ್ಯವಸ್ಥೆ ಮಾಡಿಸುತ್ತಿದ್ದೇವೆ ಅಂತಾ ಅನ್ನುತ್ತಿದ್ದಾಗ ಮಹಾದೇವಪ್ಪ ಇತನು ನನಗೆ ಕೈಯಿಂದ ನನ್ನ ಬೆನ್ನಿಗೆ, ಬುಜಕ್ಕ ಹೊಡೆದು ಗುಪ್ತಗಾಯ ಮಾಡಿ, ನನ್ನ ಎದೆಯ ಮೇಲಿನ ಸೀರೆ ಸೆರಗು ಹಿಡಿದು ಎಳೆದಾಡಿ ಅವಮಾನ ಮಾಡಿದನು. ಬಿಡಿಸಲು ಬಂದ ನನ್ನ ಮಗಳು ಭಾಗಮ್ಮ ಇವಳಿಗೆ ನಾಗಮ್ಮ ಇಕೆಯು ಕೈಯಿಂದ ಕಪಾಳಕ್ಕೆ ಸ್ವಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದಳು. ಆಗ ಅಲ್ಲೆ ಹೊರಟಿದ್ದ ನಮ್ಮ ಅಣ್ಣ ತಮ್ಮಕಿಯವರಾದ ಮಹಾದೇವಿ ಗಂಡ ಮರೆಪ್ಪ ಕಮತಗಿ, ಮಲ್ಲಪ್ಪ ತಂದೆ ಹಣಮಂತ ಕಮತಗಿ ಇಬ್ಬರು ಜಗಳವನ್ನು ನೋಡಿ ಬಿಡಿಸಿಕೊಂಡರು. ಅವರು ನಮಗೆ ಹೊಡೆಯುವದನ್ನು ಬಿಟ್ಟು, ಇವತ್ತು ನಮ್ಮ ಕೈಯಲ್ಲಿ ಉಳಿದೀರಿ ಸೂಳೆಮಕ್ಕಳೆ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಬೆದರಿಕೆ ಹಾಕಿ ಅಲ್ಲಿಂದ ಹೋದರು. ನಮಗೆ ಅಷ್ಟೇನು ಗಾಯಗಳಾಗಿರದ ಕಾರಣ ನಾವು ಆಸ್ಪತ್ರೆಗೆ ತೋರಿಸಿರುವುದಿಲ್ಲ. ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನಮ್ಮ ಹೊಲದಲ್ಲಿ ಅತೀಕ್ರಮ ಪ್ರವೇಶ ಮಾಡಿ ನನಗೆ ಮತ್ತು ನನ್ನ ಮಗಳಿಗೆ ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ನೀಡಿದ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 51/2022 ಕಲಂ: 447, 323, 354, 504, 506, ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 52/2022 ಕಲಂ 279 ಐಪಿಸಿ : ಇಂದು ದಿನಾಂಕ:03/04/2022 ರಂದು 4:00 ಪಿ.ಎಂ. ಕ್ಕೆ ಶ್ರೀ ಸೂರ್ಯಕಾಂತ ತಂದೆ ಬಸವರಾಜ ನಾಟಿಕಾರ ವ|| 30 ವರ್ಷ ಜಾ|| ಕಬ್ಬಲಿಗ ಉ|| ಪೊಲೀಸ್ ಇಲಾಖೆ ಸಾ|| ದಸ್ತಾಪೂರ ತಾ|| ಕಮಲಾಪೂರ ಹಾ||ವ|| ಪೊಲೀಸ್ ಕ್ವಾಟ್ರಸ್ ವಿಜಯಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿಸಿದ ದೂರು ಅಜರ್ಿಯ ಸಾರಾಂಶವೆನೆಂದರೆ, ದಿನಾಂಕ:01/04/2022 ರಂದು ನಾನು ನಮ್ಮ ತಂದೆಯವರಾದ ಬಸವರಾಜ, ನನ್ನ ಗೆಳೆಯರಾದ ರಾಜಣ್ಣ ತಂದೆ ಬಸಣ್ಣ ನಾಟಿಕಾರ ಸಾ||ರಾಜವಾಳ ತಾ|| ಜೇವಗರ್ಿ ನಮ್ಮ ಕಾರ ಚಾಲಕ ಗುಂಡಪ್ಪ ತಂದೆ ರಾಜೇಂದ್ರ ನಾಟಿಕಾರ ಸಾ|| ಮರಗುತ್ತಿ ತಾ|| ಕಮಲಪುರ ಎಲ್ಲರು ಕೂಡಿ ಪೊಲೀಸ್ ದ್ವಜಾ ದಿನಾಚರನೆ ಅಂಗವಾಗಿ ಐ.ಆರ್.ಬಿ ಘಟಕ ಮುನಿರಾಬಾದನಲ್ಲಿ ನಮ್ಮ ತಂದೆಯವರಿಗೆ ಸನ್ಮಾನ ಕಾರ್ಯಕ್ರಮ ಇಟ್ಟಿಕೊಂಡಿದ್ದರಿಂದ ನಮ್ಮ ಕಾರ ನಂ. ಕೆಎ-32 ಝಡ್-1196 ನೇದ್ದರಲ್ಲಿ ಎಲ್ಲರು ಅಲ್ಲಿಗೆ ಹೊಗಿದ್ದೆವು. ಹಿಗಿದ್ದು ನಿನ್ನೆ ದಿನಾಂಕ:02/04/2022 ರಂದು ಮುಂಜಾನೆ 10:30 ಗಂಟೆಗೆ ಪೊಲೀಸ್ ದ್ವಜಾ ದಿನಾಚರಣೆಯ ಸನ್ಮಾನ ಕಾರ್ಯಕ್ರಮವನ್ನು ಮಗಿಸಿಕೊಂಡು, ನಾನು ಮತ್ತು ನನ್ನ ತಂದೆ ಬಸವರಾಜ, ಗೆಳೆಯ ರಾಜಣ್ಣ, ಕಾರ ಚಾಲಕ ಗುಂಡಪ್ಪ ಎಲ್ಲರು ಕೂಡಿ ಮರಳಿ ನಮ್ಮೂರಿಗೆ ಹೊಗುವಾಗ ಸುಮಾರು ಮದ್ಯಾಹ್ನ 02:00 ಗಂಟೆಗೆ ಸುರಪುರ-ಲಿಂಗಸೂಗುರ ಮುಖ್ಯೆ ರಸ್ತೆಯ ತಿಂಥಣಿ ಕಮಾನ ಹತ್ತಿರ ರೋಡಿನ ಮೇಲೆ ನಮ್ಮ ಕಾರ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಎಡದಿಂದ ಬಲಕ್ಕೆ ಕಟ್ಟಮಾಡಿದಾಗ ಕಾರ ರೊಡಿನ ಮೇಲೆ ಪಲ್ಟಿಯಾಗಿ ಬಿದ್ದಿತು. ಕಾರ ಸಂಪೂರ್ಣ ನುಜ್ಜುಗುಜ್ಜು ಆಗಿರುತ್ತದೆ. ಕಾರಿನ ಏರ್ ಬ್ಯಾಗ ಓಪನ್ ಆಗಿದ್ದರಿಂದ ನಮಗೆ ಯಾರಿಗೂ ಗಾಯಗಳು ಆಗಿರುವುದಿಲ್ಲ ನಾವು ಯಾರೂ ಆಸ್ಪತ್ರೆಗೆ ತೊರಿಸಿಕೊಂಡಿರುವುದಿಲ್ಲ. ಸದರಿ ಘಟನೆಯು ಕಾರ ಚಾಲಕನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದರಿಂದ ಈ ಘಟನೆ ಸಂಬವಿಸಿರುತ್ತದೆ. ನಮ್ಮ ತಂದೆಯವರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೆನೆ. ಕಾರಣ ನಮ್ಮ ಕಾರ ಚಾಲಕ ಗುಂಡಪ್ಪ ತಂದೆ ರಾಜೇಂದ್ರ ನಾಟೇಕಾರ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 52/2022 ಕಲಂ: 279 ಐಪಿಸಿ ನೇದ್ದರ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 04-04-2022 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080