ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-06-2022


ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ, 32, 34 ಕೆ.ಇ ಆ್ಯಕ್ಟ್ : ಇಂದು ದಿನಾಂಕ: 03/06/2022 ರಂದು 02.15 ಪಿಎಮ್ ಕ್ಕೆ ಪಿಎಸ್.ಐ ಗೋಗಿ ಪೊಲೀಸ ಠಾಣೆ. ರವರು ಅಬಕಾರಿ ದಾಳಿಯಿಂದ ಮರಳಿ ಬಂದು ಮುದ್ದೇಮಾಲು ಮತ್ತು ಜಪ್ತಿಪಂಚನಾಮೆ ತಂದು ಹಾಜರ್ ಪಡಿಸಿ ಸಾರಾಂಶವೆನೆಂದರೆ, ಇಂದು ದಿನಾಂಕ: 03/06/2022 ರಂದು 12.10 ಪಿಎಮ್ ಕ್ಕೆ ಠಾಣೆಯಲ್ಲಿ ಇದ್ದಾಗ ಗೋಗಿ ಪೇಠ ಕಡೆಯಿಂದ ಹಾರಣಗೇರಾ ಕಡೆಗೆ ಒಬ್ಬ ವ್ಯಕ್ತಿ ಇಂದು ತನ್ನ ಮೋಟರ್ ಸೈಕಲ್ ಮೇಲೆ ಅಕ್ರಮ ಮದ್ಯವನ್ನು ಮಾರಾಟ ಮಾಡಲು ಅಕ್ರಮವಾಗಿ ಸಾಗಿಸುವದಾಗಿ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಸಿಪಿಐ ಶಹಾಪೂರ ರವರಿಗೆ ಬಾತ್ಮಿ ವಿಷಯ ತಿಳಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಮಾನ್ಯ ಸಿಪಿಐ ಸಾಹೇಬರು ಶಹಾಪೂರ ರವರ ನೇತೃತ್ವದಲ್ಲಿ ಠಾಣೆಯ ಸರಕಾರಿ ಜೀಪ್ ನಂ: ಕೆಎ-33 ಜಿ-0161 ನೇದ್ದರಲ್ಲಿ ಅದರ ಚಾಲಕ ಜಲಾಲ ಈತನೊಂದಿಗೆ 12.30 ಪಿಎಮ್ ಕ್ಕೆ ಗೋಗಿ ಠಾಣೆಯಿಂದ ಹೊರಟು ಹಾರಣಗೇರಾ ರೋಡಿನ ಹಾಜಿಪೀರ್ ದಗರ್ಾದ ಸಮೀಪ ಹೋಗುತ್ತಿದ್ದಾಗ ಜೀಪಿನ ಮುಂದೆ ಒಬ್ಬ ಮೋಟರ್ ಸೈಕಲ್ ಸವಾರ ತನ್ನ ಮೋಟರ್ ಸೈಕಲ್ ಮೇಲೆ ಕೆಲವು ರಟ್ಟಿನ ಬಾಕ್ಸ್ಗಳನ್ನು ಇಟ್ಟು ಅದಕ್ಕೆ ಹಗ್ಗದಿಂದ ಕಟ್ಟಿಕೊಂಡು ಹೊರಟಿದ್ದ. ಆಗ ನಾನು ನಮ್ಮ ಜೀಪ್ ಚಾಲಕನಿಗೆ ಸದರಿ ಮೋಟರ್ ಸೈಕಲ್ಲಿಗೆ ಓವರ್ ಟೇಕ್ ಮಾಡಿ ಮುಂದೆ ನಿಲ್ಲುವಂತೆ ತಿಳಿಸಿದಾಗ ಜೀಪ್ ಚಾಲಕ್ ಓವರ್ ಟೇಕ್ ಮಾಡಿ ಮುಂದೆ ಹಾಜಿ ಪೀರ್ ದಗರ್ಾದ ಮುಂದೆ 12.40 ಪಿ.ಎಮ್ ಕ್ಕೆ ಜೀಪ ನಿಲ್ಲಿಸಿರು. ಎಲ್ಲರೂ ಕೆಳಗೆ ಇಳಿದು ನಾವು ಸದರಿ ಮೋಟರ್ ಸೈಕಲ್ ನಿಲ್ಲಿಸಿ ನೋಡಲಾಗಿ ನಂಬರ ಹಾಕಿಸದ ಹೀರೋ ಸ್ಪ್ಲೆಂಡರ್ ಪ್ಲಸ್ ಮೋ/ಸೈ ಇದ್ದು ಅದರ ಹಿಂದಿನ ಸೀಟಿನ ಮೇಲೆ ಇಟ್ಟಿದ್ದ ಬಾಕ್ಸ್ಗಳನ್ನು ನೋಡಲಾಗಿ ಅದರಲ್ಲಿ ಮದ್ಯ ತುಂಬಿದ ಬಾಟಲಿಗಳು ಇದ್ದವು. ಆಗ ನಾವು ಪಂಚರ ಸಮಕ್ಷಮ ಸದರಿ ಮದ್ಯ ಹಾಗು ಅದರ ಸಾಗಾಟಕ್ಕಾಗಿ ಸರಕಾರದಿಂದ ಪರವಾನಿಗೆಯ ಬಗ್ಗೆ ವಿಚಾರಿಸಲಾಗಿ ಸದರಿಯವನು ತನ್ನ ಹತ್ತಿರ ಯಾವುದೇ ಪರವಾನಿಗೆ ಇರುವುದಿಲ್ಲ ಅಂತ ತಿಳಿಸಿದನು. ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಶಶಿಕಾಂತ ತಂದೆ ಭೀಮಾಶಂಕರ ಲೋಣಿ,ವ:25ವರ್ಷ, ಜಾ:ಲಿಂಗಾಯತ, ಉ:ಕೂಲಿ ಕೆಲಸ, ಸಾ:ನೀಲೂರ ಹಾ.ವ:ಗೋಗಿ ಅಂತ ತಿಳಿಸಿ ಸದರಿ ಮದ್ಯದ ಬಾಕ್ಸ್ಗಳನ್ನು ಹಳ್ಳಿಗಳಲ್ಲಿ ಮಾರಾಟ ಮಾಡಲು ಹೊರಟಿರುವುದಾಗಿ ತಿಳಿಸಿದನು. ನಂತರ ಆರೋಪಿತನ ಮೋ/ಸೈ ಮೇಲೆ ಇದ್ದ ಮದ್ಯದ ಬಾಕ್ಸ್ಗಳನ್ನು ಕೆಳಗೆ ಇಳಿಸಿ ಪರಿಶೀಲಿಸಲಾಗಿ ಕ್ರ.ಸಂ 10 ರಲ್ಲಿನ ಮುದ್ದೆಮಾಲು ಜಪ್ತಿ ಪಡಿಸಿಕೊಡು ಆರೋಪಿತನ ವಿರುದ್ದ ಕ್ರಮ ಜರುಗಿಸದ ಬಗ್ಗೆ.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 79/2022 ಕಲಂ:143, 147, 504, 341, 323, 506 ಸಂ 149 ಐಪಿಸಿ : ದಿನಾಂಕ:03/06/2022 ರಂದು 2-30 ಪಿಎಮ್ ಕ್ಕೆ ಶ್ರೀ ಮಹೇಶ ತಂದೆ ಈಶ್ವರಪ್ಪ ಬದ್ದೆಳ್ಳಿ, ವ:21, ಜಾ:ಹೊಲೆಯ, ಉ:ಒಕ್ಕಲುತನ ಸಾ:ಡ್ರೈವರ ಸಾ:ನಾಯ್ಕಲ್ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ನಾನು ಟ್ರ್ಯಾಕ್ಟರ ಡ್ರೈವರ ಕೆಲಸ ಮಾಡಿಕೊಂಡು ವಾಸವಾಗಿರುತ್ತೇನೆ. ನಾನು ಮತ್ತು ನಮ್ಮೂರ ನಮ್ಮ ಜಾತಿಯ ಬಸಪ್ಪ ತಂದೆ ರಾಮಣ್ಣ ಕಣಜಿಕರ ಇವರ ಮಗಳಾದ ರೇಷ್ಮಾ ಇಬ್ಬರೂ ಸುಮಾರು 2 ವರ್ಷಗಳ ಹಿಂದೆ ಪರಸ್ಪರ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದು, ನಾವು ಗಂಡ-ಹೆಂಡತಿ ಅನ್ಯೋನ್ಯವಾಗಿರುತ್ತೇವೆ. ನಮಗೆ ಈಗ ಒಂದು ವರ್ಷದ ಗಂಡು ಮಗು ಇರುತ್ತದೆ. ನಾವು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದನ್ನು ನನ್ನ ಹೆಂಡತಿ ಅಣ್ಣನಾದ ಬಸಲಿಂಗಪ್ಪ ಮತ್ತು ಅವನ ದೊಡ್ಡಪ್ಪನ ಮಕ್ಕಳಾದ ಶರಣಪ್ಪ ತಂದೆ ಲಕ್ಷ್ಮಣ ಮತ್ತು ಇತರರು ವಿರೋಧಿಸುತ್ತಾ ಬಂದಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ:02/06/2022 ರಂದು ನಾನು ಬೆಳಗ್ಗೆಯಿಂದ ಟ್ರ್ಯಾಕ್ಟರ ಕ್ರಾಸ ಕುಂಟಿ ಹೊಡೆಯಲು ಡ್ರೈವರ ಕೆಲಸಕ್ಕೆ ಹೋಗಿ ಮದ್ಯಾಹ್ನದ ವರೆಗೆ ನಾನು ಕ್ರಾಸ ಕುಂಟಿ ಹೊಡೆದು ಮದ್ಯಾಹ್ನ ಮನೆಗೆ ಬಂದು ಜಳಕ ಮಾಡಿ ಮನೆಯಲ್ಲಿ ದಿನಾಲೂ ಊಟ ಮಾಡಿ ಬ್ಯಾಸರ ಆಗಿದ್ದರಿಂದ ಇವತ್ತು ಹೊರಗಡೆ ಊಟ ಮಾಡಿದರಾಯಿತು ಅಂತಾ ನಮ್ಮ ಗ್ರಾಮದ ಯಾದಗಿರಿ-ಶಹಾಪೂರ ಮೇನ ರೋಡ ಅಪ್ನಾ ದಾಭಾಕ್ಕೆ ಊಟ ಮಾಡಲು ಬಂದೆನು. ಊಟ ಇನ್ನು ರೆಡಿಯಾಗಲು ಲೇಟ ಆಗುತ್ತದೆ ಎಂದು ಹೇಳಿದ್ದರಿಂದ ನಾನು ಸ್ವಲ್ಪ ಹೊತ್ತು ಹೊರಗಡೆ ತಿರುಗಾಡಿ ನಂತರ ಸಂಜೆ 5 ಗಂಟೆ ಸುಮಾರಿಗೆ ಧಾಬಾಕ್ಕೆ ಬಂದು ಊಟ ಮಾಡಿ 5-30 ಪಿಎಮ್ ಸುಮಾರಿಗೆ ದಾಭಾದಿಂದ ಹೊರಗಡೆ ಬಂದೆನು. ನಾನು ಧಾಬಾದ ಮುಂದಿದ್ದ ನನ್ನ ಮೋಟರ್ ಸೈಕಲ್ ಚಾಲು ಮಾಡಬೇಕೆಂದು ಹೋಗುತ್ತಿದ್ದಾಗ ಸದರಿ ಧಾಬಾದ ಮುಂದೆ ನನ್ನ ಹೆಂಡತಿ ದೊಡ್ಡಪ್ಪನ ಮಕ್ಕಳಾದ 1) ಶರಣಪ್ಪ ತಂದೆ ಲಕ್ಷ್ಮಣ ಕಣಜಿಕರ, 2) ಮಲ್ಲಿಕಾಜರ್ುನ ತಂದೆ ಲಕ್ಷ್ಮಣ ಕಣಜಿಕರ, 3) ಯಲ್ಲಪ್ಪ ತಂದೆ ಲಕ್ಷ್ಮಣ ಕಣಜಿಕರ, 4) ಮೌನೇಶ ತಂದೆ ಲಕ್ಷ್ಮಣ ಕಣಜಿಕರ, 5) ಹೊನ್ನಪ್ಪ ತಂದೆ ಲಕ್ಷ್ಮಣ ಕಣಜಿಕರ ಮತ್ತು ನನ್ನ ಹೆಂಡತಿ ಅಣ್ಣನಾದ 6) ಬಸಲಿಂಗಪ್ಪ ತಂದೆ ಬಸಪ್ಪ ಕಣಜಿಕರ ಎಲ್ಲರೂ ಸಾ:ನಾಯ್ಕಲ್ ಇವರೆಲ್ಲರೂ ಸೇರಿ ಗುಂಪು ಕಟ್ಟಿಕೊಂಡು ಬಂದವರೆ ನನಗೆ ಅಕ್ರಮವಾಗಿ ತಡೆದು ನಿಲ್ಲಿಸಿ, ಈ ಭೋಸುಡಿ ಮಗ ನಮ್ಮ ಮನೆ ಹೆಣ್ಣು ಮಗಳಿಗೆ ಎಬ್ಬಿಸಿಕೊಂಡು ಹೋಗಿ ಲಗ್ನ ಮಾಡಿಕೊಂಡು ನಮ್ಮ ಮಯರ್ಾದಿ ಕಳದಾನ ಇವನಿಗೆ ಇವತ್ತು ಒಂದು ಗತಿ ಕಾಣಿಸಿ ಬಿಡೋಣ ಎಂದು ಜಗಳ ತೆಗೆದವರೆ ಯಲ್ಲಪ್ಪ ಮತ್ತು ಮೌನೇಶ ಇಬ್ಬರೂ ನನ್ನ ಎರಡು ಕೈಗಳನ್ನು ಒತ್ತಿ ಹಿಡಿದುಕೊಂಡಾಗ ಶರಣಪ್ಪನು ಕಾಲನಿಂದ ಎದೆಗೆ ಒದ್ದು ಒಳಪೆಟ್ಟು ಮಾಡಿದನು. ಹೊನ್ನಪ್ಪನು ಕಾಲಿನಿಂದ ನನ್ನ ಹೊಟ್ಟೆಗೆ ಬಲವಾಗಿ ಒದ್ದು ಒಳಪೆಟ್ಟು ಮಾಡಿದನು. ಮಲ್ಲಿಕಾಜರ್ುನನು ಕೈ ಮುಷ್ಟಿ ಮಾಡಿ ಹಣೆಗೆ ಗುದ್ದಿದನು. ಬಸಲಿಂಗಪ್ಪನು ಎಡ ಕಪಾಳಕ್ಕೆ ಹೊಡೆದನು. ಆಗ ಜಗಳವನ್ನು ಅಲ್ಲಿಯೇ ಧಾಬಾಕ್ಕೆ ಬಂದಿದ್ದ ಭೀಮರಾಯ ತಂದೆ ನೀಲಕಂಠರಾಯ ಬದ್ದೆಳ್ಳಿ ಮತ್ತು ನಾಗರಾಜ ತಂದೆ ಲಕ್ಷ್ಮಣ ಕಣಜಿಕರ ಇವರಿಬ್ಬರೂ ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡಿರುತ್ತಾರೆ. ಆಗ ನಾನು ಅಲ್ಲಿಂದ ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿ ಉಪಚಾರ ಪಡೆದಿರುತ್ತೇನೆ. ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದರು. ಆಗ ನಾನು ನಮ್ಮ ಹಿರಿಯರಿಗೆ ವಿಚಾರಣೆ ಮಾಡಿ ಠಾಣೆಗೆ ಬಂದು ದೂರು ಕೊಡುತ್ತೇನೆ ಎಂದು ಹೇಳಿರುತ್ತೇನೆ. ನಂತರ ಅವರು ರಾಜಿ ಸಂದಾನಕ್ಕೆ ಬರಬಹುದು ಎಂದು ಇಲ್ಲಿಯವರೆಗೆ ಕಾಯ್ದರು ಅವರು ಬರಲಿಲ್ಲ. ಆಗ ನಾನು ನಮ್ಮ ಹಿರಿಯರಿಗೆ ವಿಚಾರಿಸಿದಾಗ ಅವರು ನೀನು ಠಾಣೆಗೆ ಹೋಗಿ ದೂರು ಕೊಡು ಹೋಗು ಎಂದು ಹೇಳಿದ್ದರಿಂದ ಈಗ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಡುತ್ತಿದ್ದೆನೆ. ಕಾರಣ ಹಳೆ ದ್ವೇಷದಿಂದ ಬಂದು ನನಗೆ ತಡೆದು ನಿಲ್ಲಿಸಿ, ಕೈಯಿಂದ ಹೊಡೆದು, ಕಾಲಿನಿಂದ ಒದ್ದು, ಜೀವ ಬೆದರಿಕೆ ಹಾಕಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 79/2022 ಕಲಂ:143, 147, 504, 341, 323, 506 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ: 87 ಕೆ.ಪಿ.ಆಕ್ಟ್ 1963 : ಇಂದು ದಿನಾಂಕ:03/06/2022 ರಂದು 7-15 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಪೊಲೀಸ್ ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ದಿನಾಂಕ:03/06/2022 ರಂದು ನಾನು ಮತ್ತು ಸಿಬ್ಬಂದಿಯವರಾದ 1) ಮಲ್ಲಪ್ಪ ಹೆಚ್.ಸಿ 72, 2) ಮಹೇಂದ್ರ ಪಿಸಿ 254, 3) ಗೋವಿಂದ ಪಿಸಿ 16 ಮತ್ತು 4) ಸಾಬರೆಡ್ಡಿ ಪಿಸಿ 290 ರವರೆಲ್ಲರೂ ಠಾಣೆಯಲ್ಲಿದ್ದಾಗ ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ಮತ್ತು ಸಿ.ಪಿ.ಐ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ವಡಗೇರಾ ಸೀಮಾಂತರದ ಹೊರ ವಲಯದಲ್ಲಿರುವ ಫಕೀರಸಾಬ ದಗರ್ಾದ ಮುಂದುಗಡೆ ಬಯಲು ಪ್ರದೇಶದ ಸಾರ್ವಜನಿಕ ಖಾಲಿ ಜಾಗದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಇಟ್ಟು ಅಂದರ-ಬಾಹರ ಎಂಬ ಇಸ್ಪಿಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರಿಗೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದ್ದರಲ್ಲಿ ಕೂಡಿಸಿಕೊಂಡು 4-15 ಪಿಎಮ್ ಕ್ಕೆ ವಡಗೇರಾ ಪೊಲೀಸ್ ಠಾಣೆಯಿಂದ ಹೊರಟು 4-30 ಪಿಎಮ್ ಕ್ಕೆ ವಡಗೇರಾ ಹೊರ ವಲಯದ ಫಕೀರಸಾಬ ದಗರ್ಾದಿಂದ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಅಲ್ಲಿಂದ ಸ್ವಲ್ಪ ದೂರ ನಡೆದುಕೊಂಡು ಹೋಗಿ ಸದರಿ ಫಕೀರಸಾಬ ದಗರ್ಾವನ್ನು ಮರೆಯಾಗಿ ನೋಡಲಾಗಿ ಅಲ್ಲಿ ಖಾಲಿ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ-ಬಾಹರ ಎನ್ನುವ ಇಸ್ಪಿಟ್ ಜೂಜಾಟವನ್ನು ಹಣ ಪಣಕ್ಕಿಟ್ಟು ಆಡುತ್ತಿದ್ದರು. ಪಂಚರ ಸಮಕ್ಷಮ ನಾವು 4-45 ಪಿಎಮ್ ಕ್ಕೆ ಒಮ್ಮೆಲೆ ಇಸ್ಪಿಟ್ ಜೂಜಾಟ ಆಡುತ್ತಿದ್ದ ಜನರ ಮೇಲೆ ದಾಳಿ ಮಾಡಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ 6 ಜನರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದವರನ್ನು ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅವರು ತಮ್ಮ ಹೆಸರು 1) ಬಸವರಾಜಪ್ಪ ತಂದೆ ಅಂಬ್ರಪ್ಪ ಹೈಯಾಳ, ವ:68, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ವಡಗೇರಾ ಅಂತಾ ಹೇಳಿದ್ದು ಸದರಿಯವನು ತಾನು ಪಣಕ್ಕೆ ಇಟ್ಟ ನಗದು ಹಣ 1170/- ರೂ ಮತ್ತು 21 ಇಸ್ಪೀಟ್ ಎಲೆಗಳು ಇದ್ದದ್ದನ್ನು ಹಾಜರಪಡಿಸಿದನು. 2) ಮರೆಪ್ಪ ತಂದೆ ಬಸಣ್ಣ ಚಿನ್ನಿ, ವ:60, ಜಾ:ಪದ್ಮಶಾಲಿ, ಉ:ಕೂಲಿ ಸಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1590/- ರೂ, ಹಾಜರಪಡಿಸಿದನು. 3) ಮರೆಪ್ಪ ತಂದೆ ಮಲ್ಲಪ್ಪ ಕಾಡಂನೋರ, ವ:60, ಜಾ:ಕುರುಬರ, ಉ:ಒಕ್ಕಲುತನ ಸಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1460/- ರೂ, ಹಾಜರಪಡಿಸಿದನು. 4) ಮಹಿಬೂಬ ತಂದೆ ಪೀರಸಾಬ ಕಸಾಬ, ವ:44, ಜಾ:ಮುಸ್ಲಿಂ, ಉ:ಕೂಲಿ ಸಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 980/- ರೂ, ಹಾಜರಪಡಿಸಿದನು. 5) ಪರಶುರಾಮ ತಂದೆ ನಿಂಗಪ್ಪ ಗಡ್ಡೆಪ್ಪನೋರ, ವ:36, ಜಾ:ಕುರುಬರ, ಉ:ಒಕ್ಕಲುತನ ಸಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1350/- ರೂ, ಹಾಜರಪಡಿಸಿದನು. 6) ಮೌನೇಶ ತಂದೆ ನರಸಪ್ಪ ನಾಟೇಕಾರ, ವ:28, ಜಾ:ಹೊಲೆಯ (ಎಸ್.ಸಿ), ಉ:ಕೂಲಿ ಸಾ:ವಡಗೇರಾ ಅಂತಾ ಹೇಳಿ ತಾನು ಪಣಕ್ಕೆ ಇಟ್ಟ ನಗದು ಹಣ 1090/- ರೂ, ಹಾಜರಪಡಿಸಿದನು. ಜೂಜಾಟದ ಸ್ಥಳದಲ್ಲಿ ಎಲ್ಲರ ಮಧ್ಯೆ 31 ಇಸ್ಪಿಟ್ ಎಲೆಗಳು ಮತ್ತು 2060/- ರೂ. ಹೀಗೆ ಒಟ್ಟು 9700/- ರೂ. ನಗದು ಹಣ ಮತ್ತು 52 ಇಸ್ಪೀಟ್ ಎಲೆಗಳು ದೊರೆತ್ತಿದ್ದು, ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ಜಪ್ತಿ ಪಡಿಸಿಕೊಂಡರು. ಸದರಿ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ವರದಿ ಸಲ್ಲಿಸುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 80/2022 ಕಲಂ: 87 ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 95/2022 ಕಲಂ: 457 380 ಐ.ಪಿ.ಸಿ : ಇಂದು ದಿನಾಂಕ 03.06.2022 ರಂದು 3 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಶಿವಲಾಲಸಿಂಗ್ ತಂದೆ ಚಂದುಸಿಂಗ್ ರಜಪೂತ ವಯಾ|| 45 ವರ್ಷ ಜಾ|| ರಜಪೂತ ಉ|| ಒಕ್ಕಲುತನ ಸಾ|| ಯಾಳಗಿ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ನನ್ನ ಮಗಳಾದ ಮೀನಾಕ್ಷಿ ಇವಳಿಗೆ ಮಲ್ಲಾ ಗ್ರಾಮದ ಭೀಮಸಿಂಗ್ ತಂದೆ ಶಿವಲಾಲಸಿಂಗ್ ರಜಪೂತ ಇವರಿಗೆ ಕೊಟ್ಟು ಮದುವೆ ಮಾಡಿದ್ದು ನನ್ನ ಅಳಿಯನಾದ ಭೀಮಸಿಂಗ್ ಇವರು ಖಾಸಗಿ ಶಿಕ್ಷಕರಾಗಿದ್ದು ಆದ ಕಾರಣ ನನ್ನ ಅಳಿಯನು ಕೆಂಭಾವಿ ಪಟ್ಟಣದ ಅಂಚೆ ಕಛೇರಿಯ ಹತ್ತಿರ ಇರುವ ಮಲ್ಲಿಕಾಜರ್ುನ ತಂದೆ ನಾಗಪ್ಪ ಕುಂಬಾರ ಇವರ ಮನೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇರುತ್ತಾರೆ. ಸದ್ಯ ನನ್ನ ಹೆಂಡತಿಯಾದ ಭುವನೇಶ್ವರಿ ಇವರಿಗೆ ಆರಾಮವಿಲ್ಲದ ಕಾರಣ ನನ್ನ ಮಗಳು ಮೀನಾಕ್ಷಿ ಹಾಗು ಅಳಿಯ ಭೀಮಸಿಂಗ್ ಇಬ್ಬರೂ ಕೂಡಿಕೊಂಡು ನನ್ನ ಹೆಂಡತಿಯನ್ನು ಆಸ್ಪತ್ರೆಗೆ ತೋರಿಸಿಕೊಂಡು ಬಂದರಾಯಿತು ಅಂತ ದಿನಾಂಕ 29.05.2022 ರಂದು ಮಿರಾಜ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಹೋಗುವಾಗ ಮನೆ ಕೀಲಿ ಹಾಕಿಕೊಂಡು ಹೋಗಿದ್ದರು. ಮನೆಯ ಕೀಲಿ ಕೈಯನ್ನು ನನ್ನ ಮಗನಾದ ಸಚಿನ ಈತನ ಕೈಯಲ್ಲಿ ಕೊಟ್ಟು, ಹೋಗಿ ಬರುವದು ಮಾಡು ಅಂತ ಹೇಳಿ ಹೋಗಿದ್ದರು. ಅದರಂತೆ ಮಗನಾದ ಸಚಿನ ಈತನು ನಿನ್ನೆ ದಿನಾಂಕ 02.06.2022 ರಂದು ಬೆಳಿಗ್ಗೆ 11 ಗಂಟೆಗೆ ಮಗಳ ಮನೆಗೆ ಹೋಗಿ ಕಸ ಗೂಡಿಸಿ ಮನೆ ಕೀಲಿ ಹಾಕಿ ಬಂದಿದ್ದನು. ಹೀಗಿದ್ದು ಇಂದು ದಿನಾಂಕ: 03.06.2022 ರಂದು ನನ್ನ ಮಗನಾದ ಸಚಿನ ಈತನು ನನ್ನ ಮಗಳ ಮಗಳಾದ ಆರಾಧ್ಯ ಇವಳಿಗೆ ಹೇಮರಡ್ಡಿ ಶಾಲೆಗೆ ಬಿಟ್ಟು ಬರಲು ಕೆಂಭಾವಿಗೆ ಬಂದು ಶಾಲೆಗೆ ಬಿಟ್ಟು ನಮ್ಮ ಮಗಳು ಹಿಡಿದ ಬಾಡಿಗೆ ಮನೆಗೆ ಹೋಗಿ ಕಸ ಗೂಡಿಸಿ ಬಂದರಾಯಿತು ಅಂತ 10.45 ಎಎಮ್ಕ್ಕೆ ಮನೆಗೆ ಹೋದಾಗ ಮನೆಯ ಬಾಗಿಲು ತೆರೆದಿದ್ದು ಆಗ ಆತನು ಪಕ್ಕದ ಮನೆಯವರಿಗೆ ವಿಚಾರಿಸಲಾಗಿ ಅವರೂ ನಾವು ಏನೂ ನೋಡಿರುವದಿಲ್ಲ. ಅಂತ ತಿಳಿಸಿದ್ದು ಹಾಗು ಆತನು ಅಡುಗೆ ಮನೆಯಲ್ಲಿ ಹೋಗಿ ನೋಡಲು ಆ ಕೋಣೆಯಲ್ಲಿದ್ದ ಅಲಮಾರಿ ಸಹ ತೆರೆದಿರುತ್ತದೆ ಆಗ ಕೂಡಲೇ ನನಗೆ ಪೋನ ಮಾಡಿ ಬರಬೇಕು ಅಂತ ತಿಳಿಸಿದಾಗ ನಾನು ಬಂದು ನೋಡಲಾಗಿ ಮಗಳ ಮನೆಯ ಬಾಗಿಲ ಕೀಲಿ ಮುರಿದಿದ್ದು ಅಲ್ಲದೇ ಮನೆಯ ಒಳಗಿನ ಕೋಣೆಯಲ್ಲಿದ್ದ ಅಲಮಾರಿ ಸಹ ತೆರೆದಿತ್ತು ನಂತರ ನನ್ನ ಮಗಳಾದ ಮೀನಾಕ್ಷಿ ಇವಳಿಗೆ ಪೋನ ಮಾಡಿ ನಡೆದ ಘಟನೆ ತಿಳಿಸಿದಾಗ ಮಗಳು ಮೀನಾಕ್ಷಿ ಇವಳು ಗಾಬರಿಯಾಗಿ ಅಲಮಾರಿಯಲ್ಲಿ ಅಂದಾಜು ಎರಡುವರೆ ತೊಲೆಯ ಬಂಗಾರದ ತಾಳಿಚೈನ ಅಂದಾಜು ಕಿಮ್ಮತ್ತು 1,25,000/-ರೂ, ಹಾಗು 10,000/- ರೂ ನಗದು ಹಣ ಇಟ್ಟಿದ್ದು ಅವು ಅಲಮಾರಿಯಲ್ಲಿ ಇವೆ ಹೇಗೆ ನೋಡು ಅಂತ ಅಂದಾಗ ನಾನು ಅಲಮಾರಿ ತುಂಬೆಲ್ಲಾ ಹುಡುಕಾಡಿದರು ಯಾವದೇ ಬಂಗಾರದ ತಾಳಿ ಚೈನ ಹಾಗು ಹಣ ಸಿಗಲಿಲ್ಲ. ಕಾರಣ ಮೇಲ್ಕಾಣಿಸಿದ ಬಂಗಾರದ ಸಾಮಾನು ಹಾಗು ನಗದು ಹಣ ನೇದ್ದವುಗಳನ್ನು ದಿನಾಂಕ: 02.06.2022 ರಂದು ಬೆಳಿಗ್ಗೆ 11 ಗಂಟೆಯಿಂದ ದಿ: 03.06.2022 ರ ಬೆಳಗಿನ 10.45 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯಲ್ಲಿನ ಅಲಮಾರಿಯಲ್ಲಿದ್ದ ಬಂಗಾರದ ಸಾಮಾನು ಹಾಗು ಹಣ ಕಳವು ಮಾಡಿಕೊಂಡು ಹೋಗಿದ್ದು, ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 95/2022 ಕಲಂ 457,380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 143, 147, 148, 355, 323, 324, 354(ಬಿ), 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 03.06.2022 ರಂದು ಸಾಯಂಕಾಲ 6 ಗಂಟೆಗೆ ಪದ್ಮಾವತಿ ಗಂಡ ಶಿವಪ್ಪ ಕಾವಲಿ, ವ|| 45 ವರ್ಷ, ಜಾ|| ಬೇಡರ, ಉ|| ಹೊಲಮನೆಕೆಲಸ, ಸಾ|| ನಾಗರಬಂಡಾ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ಫಿಯರ್ಾದಿದಾರಳ ಹೊಲಕ್ಕೆ ಹೋಗುವ ದಾರಿಗೆ ತೆಗ್ಗಿನಲ್ಲಿ ಮಳೆ ನೀರು ನಿಂತ ಕಾರಣ ಫಿಯರ್ಾದಿ ಹಾಗೂ ಅವಳ ಸಂಬಂಧಿಕರು ಸದರಿ ದಾರಿಗೆ ಮೊರಂ ತುಂಬಿಸಬೇಕೆಂಬ ಉದ್ದೇಶದಿಂದ ದಾರಿಗೆ ಹೊಂದಿಕೊಂಡಿದ್ದ ಜಾಲಿ ಗಿಡಗಳನ್ನು ಕಟ್ ಮಾಡಲು ದಿನಾಂಕ 01.06.2022 ರಂದು ಹೋಗಿರುತ್ತಾರೆ. ಆಪಾದಿತರು ತಕರಾರು ಮಾಡಿದ್ದರಿಂದ ನಿನ್ನೆ ದಿನಾಂಕ 02.06.2022 ರಂದು ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಗ್ರಾಮದ ಮುಖಂಡರ ಸಮಕ್ಷಮ ನ್ಯಾಯ ಪಂಚಾಯತಿಗೆ ಕುಂತಾಗ ಆಪಾದಿತರು ಅಕ್ರಮಕೂಟ ರಚಿಸಿಕೊಂಡು ಫಿಯರ್ಾದಿ ಹಾಗೂ ಅವರ ಸಂಬಂಧಿಕರ ಮೇಲೆ ಹಲ್ಲೇ ಮಾಡಿದಲ್ಲದೆ ಫಿಯರ್ಾದಿದಾರಳ ವಸ್ತ್ರ ಕಳಚುವ ಉದ್ದೇಶದಿಂದ ಅವಳ ಸೆರಗು ಹಿಡಿದು ಎಳೆದಾಡಿ ಸಾರ್ವಜನಿಕವಾಗಿ ಅಪಮಾನಗೊಳಿಸಿದ್ದಾರೆಂಬ ವಗೈರೆ ಆಪಾದನೆ.

 

ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 66/2022 ಕಲಂ 143, 147, 323, 324, 354, 504, 506 ಸಂಗಡ 149 ಐಪಿಸಿ : ದಿನಾಂಕ: 03.06.2022 ರಂದು 6-30 ಪಿ.ಎಮ್ ಕ್ಕೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೇನೆಂದರೆ ದಿನಾಂಕ 02.06.2022 ರಂದು ಬೆಳಿಗ್ಗೆ 9.00 ಗಂಟೆ ಸುಮಾರಿಗೆ ಫಿಯರ್ಾದಿದಾರರ ಜಮೀನಿನಿಂದ ದೇವಪ್ಪ ತಂದೆ ಹಣಮಂತ ಕಾವಲಿ ಇವರ ಮನೆಯವರೆಗೆ ನಡೆದ ಕಚ್ಚಾ ರೋಡ ಕೆಲಸ ಗುತ್ತಿಗೆ ಹಿಡಿದು ಮಾಡಿಸುವ ವಿಷಯದಲ್ಲಿ ಆರೋಪಿತರೆಲ್ಲರೂ ಜಗಳ ತೆಗೆದು ಆರೋಪಿ ದೇವಪ್ಪ ತಂದೆ ಹಣಮಂತ ಈತನು ಫಿಯರ್ಾದಿ ಗಂಡ ನಾಗಪ್ಪನಿಗೆ ನೆಲಕ್ಕೆ ಕೆಡವಿದ್ದು, ಮಲ್ಲಯ್ಯ ತಂದೆ ಹಣಮಂತ ಕಲ್ಲಿನಿಂದ ಮೊಣಕಾಲಿಗೆ, ಬೆನ್ನಿಗೆ ಗುದ್ದಿರುತ್ತಾನೆ. ಫಿಯರ್ಾದಿಗೆ ಶಿವಪ್ಪ ತಂದೆ ಹಣಮಂತ ಕೂದಲು ಹಿಡಿದು ನೆಲಕ್ಕೆ ಕೆಡವಿದ್ದು, ಬಸವರಾಜ ತಂದೆ ಬುಗ್ಗಯ್ಯ ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿರುತ್ತಾನೆ. ಆರೋಪಿತರಾದ ಮೋನಪ್ಪ ತಂದೆ ಶಿವಪ್ಪ, ತಾಯಪ್ಪ ತಂದೆ ಶಿವಪ್ಪ, ಇವರು ಫಿಯರ್ಾದಿ ಮಗ ಹಣಮರೆಡ್ಡಿ ಇವನಿಗೆ ಕಲ್ಲಿನಿಂದ ಸೊಂಟಕ್ಕೆ, ಎದೆಗೆ, ಬೆನ್ನಿಗೆ ಕಲ್ಲಿನಿಂದ ಹೊಡೆದಿರುತ್ತಾರೆ. ಫಿಯರ್ಾದಿ ಗಂಡ ಮತ್ತು ಮಗ ಅಲ್ಲಿಂದ ಓಡಿ ಹೋದಾಗ ಫಿಯರ್ಾದಿ ಒಬ್ಬಳೇ ಸಿಕ್ಕಾಗ ಉಳಿದ ಆರೋಪಿತರೆಲ್ಲರೂ ಕೂಡಿ ಬಾಯಿಗೆ ಬಂದಂತೆ ಬೈದು, ಹೊಡೆಬಡೆ ಮಾಡಿರುತ್ತಾರೆ ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 66/2022 ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು

ಇತ್ತೀಚಿನ ನವೀಕರಣ​ : 04-06-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080