ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 04-07-2021

ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 72/2021 ಕಲಂ: 306, 149 ಐ.ಪಿ.ಸಿ : ಇಂದು ದಿನಾಂಕ 03/07/2021 ರಂದು 8-15 ಪಿಎಂ ಮಲ್ಲಪ್ಪ ತಂದೆ ಗುರಪ್ಪ ಪೂಜಾರಿ (ಆಲ್ದಾಳ) ವಯ|| 46 ವರ್ಷ ಉ|| ಒಕ್ಕಲುತನ ಜಾ|| ಕುರುಬರ ಸಾ|| ದರ್ಶನಾಪೂರ ತಾ|| ಶಹಾಪೂರ ಇದ್ದು, ಠಾಣೆಗೆ ಹಾಜರಾಗಿ ಟೈಪ ಮಾಡಿಸಿದ ಅಜರ್ಿ ಸಾರಾಂಶವೆನೆಂದರೆ, ನನಗೆ ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿಯಾದ ಮಹಾದೇವಿ ಇವಳು ಮೃತಪಟ್ಟಿದ್ದು, ಅವಳ ಹೊಟ್ಟೆಯಿಂದ ಗುರುರಾಜ ವಯ: 19 ವರ್ಷ ಮಂಜುನಾಥ ವಯ|| 18 ವರ್ಷ, ಪ್ರೇಮ ವಯ|| 16 ವರ್ಷ ಹೀಗೆ ಮೂರು ಜನ ಮಕ್ಕಳಿರುತ್ತಾರೆ. 2 ನೇ ಹೆಂಡತಿಯಾದ ಲಕ್ಷ್ಮೀ ಇವರಿಗೆ ಬೀರಲಿಂಗ ವಯ|| 2 ವರ್ಷ ಒಂದು ಗಂಡು ಮಗು ಇದ್ದು ಮೊದಲ ಹೆಂಡತಿ ಸತ್ತ ನಂತರ 2 ನೇ ಮದುವೆ ಆಗಿದ್ದೇನು. ನನ್ನ 2 ನೇ ಮಗನಾದ ಮಂಜುನಾಥ ತಂದೆ ಮಲ್ಲಪ್ಪ ಪೂಜಾರಿ (ಆಲ್ದಾಳ) ವಯ|| 18 ವರ್ಷ ಉ|| ಪಿ.ಯು.ಸಿ 2 ನೇ ವರ್ಷದ ವಿದ್ಯಾಭ್ಯಾಸ (ವಿಜ್ಞಾನ ವಿಭಾಗ) ಸಾ: ದರ್ಶನಾಪೂರ ಈತನು ವಿಜಯಪೂರದ ಸರಕಾರಿ ಪಿ.ಯು. ಕಾಲೇಜಿಲ್ಲಿ ಓದುತ್ತಿದ್ದ, ಈ ವರ್ಷ ಕರೋನಾ ಪ್ರಯುಕ್ತ ಲಾಕ್ಡೌನ್ನಿಂದ ಶಾಲೆ ಬಂದ್ ಆಗಿದ್ದರಿಂದ ಮನೆಯಲ್ಲೇ ಮತ್ತು ತನ್ನ ವಾರಿಗೆಯವರೊಂದಿಗೆ ಓದುತ್ತಿದ್ದನು, ಶಾಲೆ ಆರಂಭವಾಗುತ್ತಿವೆ ನಾನು ಓದಬೇಕು ಅಂತಹ ನಮ್ಮ ಊರಲ್ಲಿಯ ತನ್ನ ವಾರಿಗೆಯವರ ಜೊತೆ ನಮ್ಮೂರ ಸರಕಾರಿ ಬಾಲಕರ ವಸತಿ ನಿಲಯದ ಮೇಲೆ ಮಲಗಲು ಹೋಗುತ್ತಿದ್ದನು. ಹೀಗೆ ಹೊದಾಗ ದಿನಾಂಕ:20/01/2021 ರಂದು ರಾತ್ರಿ ನನ್ನ ಮಗನಾದ ಮಂಜುನಾಥ ತಂದೆ ಮಲ್ಲಪ್ಪ ಪೂಜಾರಿ (ಆಲ್ದಾಳ) ವಯಾ:18 ವರ್ಷ ಈತನು ನಮ್ಮ ಊರಿನ ಬಾಲಕರ ವಸತಿ ನಿಲಯದ ಕಂಪೌಂಡ ಗೇಟ್ನ ಹತ್ತಿರ ಒಂದು ಗಿಡಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ನಮಗೆ ದಿನಾಂಕ:21/01/2021 ರಂದು ಬೆಳಿಗ್ಗೆ 06.00 ಎ.ಎಂ ಸುಮಾರಿಗೆ ಗೊತ್ತಾಗಿ ನಾನು ನೋಡಿ ನನ್ನ ಮಗನು ನೇಣು ಹಾಕೊಂಡು ಮೃತಪಟ್ಟಿರುವ ಬಗ್ಗೆ ಮತ್ತು ಆತನ ಸಾವಿನ ವಿಷಯದಲ್ಲಿ ನಮಗೆ ಸಂಶಯ ಇದೆ ಅಂತಾ ಲಿಖಿತ ಪಿಯರ್ಾದಿ ನೀಡಿದ್ದು ಅದರಂತೆ ಗೋಗಿ ಪೊಲೀಸ್ ಠಾಣೆ ಯುಡಿಆರ್ ನಂ: 02/2021 ಕಲಂ: 174 (ಸಿ) ಸಿ.ಆರ್.ಪಿ.ಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.ನನ್ನ ಮಗನ ಸಾವಿನ ಬಗ್ಗೆ ಈಗ ಹೇಳುವದೇನಂದರೆ, ನಮ್ಮೂರಿನ ಅಶೋಕ ತಂದೆ ಭೀಮಾಶಂಕರ ಬಂಗಾರಿ ವಯಾ: 19 ವರ್ಷ ಮತ್ತು ಭೀಮಣ್ಣ ತಂದೆ ಕೆರೆಪ್ಪ ಮಕಾಶಿ ವಯಾ: 18 ವರ್ಷ ಇಬ್ಬರು ಖಾಸ ಗೆಳೆಯರಿದ್ದು, ಅವರಿಬ್ಬರು ನನ್ನ ಮಗನು ಶಾಲೆಯಲ್ಲಿ ಜಾಣನಿದ್ದ ಬಗ್ಗೆ ಒಳಗೋಳಗೆ ಹೊಟ್ಟೆಕಿಚ್ಚು ಪಡುತ್ತಾ ನನ್ನ ಮಗನ ಬಗ್ಗೆ ಅಸಹನೆಯಿಂದ ಇರುತ್ತಿದ್ದರು. ಯಾರಾದರು ನನ್ನ ಮಗನಿಗೆ ಹೊಗಳಿದರೆ ಇವರಿಬ್ಬರಿಗೆ ಸಿಟ್ಟು ಬರುತ್ತಿತ್ತು, ಅದನ್ನು ನಾನು ಮತ್ತು ನನ್ನ ಮಗ ಗುರುರಾಜ ಮತ್ತು ನಮ್ಮ ಅಳಿಯ ಮಲ್ಲಿಕಾಜರ್ುನ ಇವರು ನೋಡಿದ್ದೇವು. ಈ ನಡುವೆ ಲಾಕಡೌನ ಸಂಬಂಧವಾಗಿ ನಮ್ಮ ಮಗ ಮಂಜುನಾಥ ಈತನು ನಮ್ಮ ಊರಲ್ಲಿ ಇದ್ದಾಗ, ಅಶೋಕ ಮತ್ತು ಭೀಮಣ್ಣ ಇಬ್ಬರ ಮನೆಗೆ ಹೊಗುವದು ಬರುವದು ಮಾಡಿದ್ದು, ಆ ಸಮಯದಲ್ಲಿ, ಭೀಮಣ್ಣ ತಂದೆ ಕೆರೆಪ್ಪ ಮಕಾಶಿ ಇವರ ಮನೆಯಲ್ಲಿ ಇರುವ ಭೀಮರೆಡ್ಡಿ ಇವರ ಅತ್ತೆಯ ಮಗಳಾದ ಪ್ರೇಮಾ ತಂದೆ ರಾಮಣ್ಣ ಬಿರಾದಾರ ಸಾ: ಜೈನಾಪೂರ ಇವಳ ಜೋತೆಯಲ್ಲಿ ನನ್ನ ಮಗನಾದ ಮಂಜುನಾಥ ಈತನು ಮಾತಾಡುವದು ನಗಾಡುವದು ಮಾಡಿದ್ದನ್ನು, ನೋಡಿದ ಅಶೋಕ ತಂದೆ ಭೀಮಾಶಂಕರ ಬಂಗಾರಿ ಮತ್ತು ಭೀಮಣ್ಣ ಮಕಾಶಿ ಇವರುಗಳು ಮಂಜುನಾಥನು ಪ್ರೇಮಾ ಇವಳಿಗೆ ಪ್ರೀತಿ ಮಾಡುತ್ತಿದ್ದಾನೆ ಅವಳಿಗೆ ಓಡಿಸಿಕೊಂಡು ಹೊಗುವವನಿದ್ದಾನೆ ಅಂತಾ ಮಲ್ಲಪ್ಪ ತಂದೆ ಭೀಮರಾಯ ಮಕಾಶಿ ಸಾ; ದರ್ಶನಾಪೂರ, ರಾಯಪ್ಪ ತಂದೆ ಭೀಮರಾಯ ಮಕಾಶಿ ಸಾ: ದರ್ಶನಾಪೂರ, ಮತ್ತು ಪ್ರೇಮಾ ಇವಳ ತಂದೆಯಾದ ರಾಮಣ್ಣ ಬಿರಾದಾರ ಸಾ: ಜೈನಾಪೂರ ಇವರಿಗೆ ಇಲ್ಲ-ಸಲ್ಲದ್ದು ಹೇಳಿರುತ್ತಾರೆ.
ಹೀಗೆ ದಿನಾಂಕ: 21/01/2021 ರಂದು ನನ್ನ ಮಗನು ವಿಜಯಪೂರ ಕ್ಕೆ ಕಾಲೇಜಿಗೆ ಹೊಗುತ್ತಿದ್ದಾನೆ ಅಂತಾ ಗೊತ್ತಾಗಿ ಅಶೋಕ ಮತ್ತು ಭೀಮಣ್ಣ ಇಬ್ಬರು ನಾವು ಇಲ್ಲೆ ಉಳದಿದ್ದೇವೆ ಈತನಿಗೆ ಹೇಗಾದರೂ ಮಾಡಿ ಕಾಲೇಜಿ ಹೊಗುವದನ್ನು ತಪ್ಪಿಸಬೇಕು ಅಂತಾ ನನ್ನ ಮಗನಿಗೆ ದಿನಾಂಕ:20/01/2021 ರಂದು 08.30 ಪಿಎಂ ಸುಮಾರಿಗೆ ಅಶೋಕ ತಂದೆ ಭೀಮಾಶಂಕರ ಬಂಗಾರಿ ಮತ್ತು ಭೀಮಣ್ಣ ತಂದೆ ಕೆರೆಪ್ಪ ಮಕಾಶಿ ಇಬ್ಬರು ಸಾ: ದರ್ಶನಾಪೂರ ಇವರುಗಳು ಪೋನ ಮಾಡಿ ತಮ್ಮ ಹತ್ತಿರ ಬಾ ಅಂತಾ ಕರೆಯಿಸಿಕೊಂಡಿದ್ದು, ನನ್ನ ಮಗನು ಮನೆಯಲ್ಲಿ ಇದ್ದಾಗ ಅಶೋಕ ಈತನ ಜೋತೆಯಲ್ಲಿ ಮಾತಾಡಿ ಮನೆಯಿಂದ ಹೊರಗೆ ಹೊಗುತ್ತಾ ಬರುತ್ತೇನೆ ಅಂತಾ ಅನ್ನುವದನ್ನು ನನ್ನ ಹೆಂಡತಿಯಾದ ಲಕ್ಷ್ಮೀ ಇವಳು ಕೇಳಿಸಿಕೊಂಡಿದ್ದಾಳೆ,ನಂತರ ನನ್ನ ಮಗನನನ್ನು ಅಶೋಕ ಮತ್ತು ಭಿಮಣ್ಣ ಮಕಾಶಿ ಇವರುಗಳು 08.45 ಪಿಎಂ ಸುಮಾರಿಗೆ ನಮ್ಮೂರಿನ ಸರಕಾರಿ ಬಾಲಕರ ವಸತಿ ನಿಲಯದ ಕರೆದುಕೊಂಡು ಹೋಗಿ 1) ಅಶೋಕ ತಂದೆ ಭೀಮಾಶಂಕರ ಬಂಗಾರಿ ವಯಾ:19 ವರ್ಷ ಜಾ: ಕಬ್ಬಲಿಗ ಸಾ: ದರ್ಶನಾಪೂರ 2) ಭೀಮರಡ್ಡಿ ತಂದೆ ಕೆರೆಪ್ಪ ಮಕಾಶಿ ವಯಾ:18 ವರ್ಷ ಉ: ವಿದ್ಯಾಥರ್ಿ ಜಾ: ಕಬ್ಬಲಿಗ ಸಾ: ದರ್ಶನಾಪೂರ 3) ಮಲ್ಲಪ್ಪ ತಂದೆ ಭೀಮರಾಯ ಮಕಾಶಿ ವಯಾ:35 ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ದರ್ಶನಾಪೂರ 4) ರಾಯಪ್ಪ ತಂದೆ ಭೀಮರಾಯ ಮಕಾಶಿ ವಯಾ:45 ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ದರ್ಶನಾಪೂರ 5) ರಾಮಣ್ಣ ಬಿರಾದಾರ ವಯಾ:48 ವರ್ಷ ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ಜೈನಾಪೂರ ಇವರೆಲ್ಲರೂ ಕೂಡಿ ನನ್ನ ಮಗನಾದ ಮಂಜುನಾಥ ಈತನಿಗೆ ಪ್ರೇಮಾ ಇವಳೊಂದಿಗೆ ಲವ್ ಮಾಡುತ್ತಿಯಾ ಅಂತಾ ಕೇಳಿ ನನ್ನ ಮಗನಾದ ಮಂಜುನಾಥ ಈತನಿಗೆ ಹೊಡೆದು ಖಲಾಸ್ ಮಾಡುತ್ತೇವೆ ಮಗನೆ ನಿನ್ನ ಕಾಲೇಜಿಗೆ ಬಂದು ನಿಮ್ಮ ಪ್ರೀನ್ಸಿಪಾಲ ರವರಿಗೆ ವಿಷಯ ತಿಳಿಸಿ ನಿನಗೆ ಕಾಲೇಜಿನಿಂದ ಹೊರಗೆ ಹಾಕಿಸುತ್ತೇವೆ ಮಗನೆ ಅಂತಾ ಹೆದರಿಸಿ ಜಗ್ಗಾಡಿ ಹೆದರಿಸಿದ್ದು, ನೀನು ಪ್ರೇಮಾ ಜೋತೆಯಲ್ಲಿ ಪ್ರೀತಿಸುತ್ತಿದ್ದಿಯಾ ಅಂತಾ ಸುಳ್ಳು ಸುದ್ದಿ ಎಬ್ಬಿಸಿ ನನ್ನ ಮಗನಿಗೆ ಹೆದರಿಸುವದನ್ನು ಮಾಡಿದ್ದಾರೆ. ಈ ವಿಷಯ ಇಲ್ಲಿಗೆ ಬಿಡದೆ ಊರಲ್ಲಿ ದೊಡ್ಡವರಿಗೆ ತೋರಿಸುತ್ತೇವೆ ಅಂತಾ ಹೆದರಿಸಿ ಮಗನೆ ಊರಲ್ಲಿ ನಿನಗೆ ಮಾನ ಮಯರ್ಾದೆ ಕಳೆದು ನಿನಗೆ ನಮ್ಮ ತಂದೆ ತಾಯಿಯವರಿಗೆ ಊರ ಮುಂದೆ ಕಟ್ಟಿಸಿ ಊರವರೆಲ್ಲರೂ ನಿನ್ನ ಮುಖಕ್ಕೆ ಉಗುಳಿ ಹೊಡೆಯುವಂತೆ ಮಾಡುತ್ತೇವೆ ಅಂತಾ ಹೆದರಿಸಿದ್ದರಿಂದ ನನ್ನ ಮಗನು ಅಂದೆ ರಾತ್ರಿ ಸಮಯದಲ್ಲಿ ಯಾರು ನೋಡದ ವೇಳೆಯಲ್ಲಿ ಅಂದರೆ, 20/01/2021 ರಂದು 10.00 ಪಿಎಂ ದಿಂದ 21/01/2021 ರ ಬೆಳಗಿನ 06.00 ಎಎಂ ಮಧ್ಯದ ಅವಧಿಯಲ್ಲಿ ನಮ್ಮೂರ ಬಾಲಕರ ವಸತಿ ನಿಲಯದ ಕಂಪೌಂಡ ಗೇಟ್ನ ದಕ್ಷಿಣ ಭಾಗದಲ್ಲಿ ಹೊರಗೆ ಮರದ ಕೊಂಬೆಗೆ ಒಂದು ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ಇವರೆಲ್ಲರು ಹೆದರಿಸಿದ ವಿಷಯ ನನ್ನ ಮಗನಾದ ಗುರುರಾಜ ಮತ್ತು ನಮ್ಮ ಅಳಿಯ ಮಹಾದೇವಪ್ಪ ಪೂಜಾರಿ ಇಬ್ಬರು ನಿನ್ನೆ ದಿನಾಂಕ: 02/07/2021 ರಂದು 08.30 ಪಿಎಂ ಸುಮಾರಿಗೆ ನಮ್ಮೂರಿನ ಶಾಲೆಯ ಹತ್ತಿರ ಕುಳಿತಾಗ ಅಲ್ಲಿ ಬಂದು ಕುಳಿತಿದ್ದ ಅಶೋಕ ತಂದೆ ಭೀಮಾಶಂಕರ ಬಂಗಾರಿ ಮತ್ತು ಭೀಮರೆಡ್ಡಿ ಇಬ್ಬರು ಯಾರು ಇರುವದಿಲ್ಲ ಅಂತಾ ತಿಳಿದು ನಾವು ಮೇಲಿನ ಎಲ್ಲಾ ವಿಷಯ ವಿಷಯ ಮಾತಾಡಿಕೊಂಡು ತಾವು ಐದು ಜನರು ಕೂಡಿ ನನ್ನ ಮಗ ಮಂಜುನಾಥನಿಗೆ ಹೆದರಿಸಿದ್ದರಿಂದ ಮಂಜುನಾಥ ಆತ್ಮ ಹತ್ಯ ಮಾಡಿಕೊಂಡಿದ್ದು, ನಾವು ಎಲ್ಲರೂ ಕೂಡಿ ಹೆದರಿಸಿದ ವಿಷಯ ಯಾರೀಗೂ ಗೊತ್ತಾಗಿಲ್ಲ, ಪೋಲಿಸ್ ಠಾಣೆೆಗೆ ಕರೆದು ವಿಚಾರಿಸಿದರೂ ನಾನು ಏನು ಹೇಳುವದಿಲ್ಲ ನೀನು ಹೇಳ ಬೇಡ, ನಿಮ್ಮ ಕಾಕಾ ಮಲ್ಲಪ್ಪ ಮಕಾಶಿ, ರಾಮಪ್ಪ ಮಕಾಶಿ ಮತ್ತು ನಿಮ್ಮ ಮಾವನವರಾಧ ರಾಮಣ್ಣ ಬಿರಾದಾರ ಇವರಿಗೆ ಕೂಡ ನಮಗೆ ಏನು ಗೊತ್ತಿಲ್ಲ ಅಂತಾ ಹೇಳು ಎಂದು ಅಶೋಕ ಈತನು ಭೀಮರೆಡ್ಡಿಗೆ ಹೇಳಿ ಮಾತಾಡಿಕೊಳ್ಳುವದನ್ನು ಕೇಳಿಸಿಕೊಂಡ್ಡಿದ್ದು ನನ್ನ ಮಗ ಗುರುರಾಜ ಮತ್ತು ಮಹಾದೇವಪ್ಪ ಇವರುಗಳು ನನಗೆ ತಿಳಿಸಿರುತ್ತಾರೆ. ನಾವು ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ದಿನಾಂಕ:03/07/2021 ರಂದು ಠಾಣೆಗೆ ಬಂದು ಅಜರ್ಿ ನೀಡಿರುತ್ತೇನೆ.ಕಾರಣ 1) ಅಶೋಕ ತಂದೆ ಭೀಮಾಶಂಕರ ಬಂಗಾರಿ ವಯಾ:19 ವರ್ಷ ಜಾ: ಕಬ್ಬಲಿಗ ಸಾ: ದರ್ಶನಾಪೂರ 2) ಭೀಮರಡ್ಡಿ ತಂದೆ ಕೆರೆಪ್ಪ ಮಕಾಶಿ ವಯಾ:18 ವರ್ಷ ಉ: ವಿದ್ಯಾಥರ್ಿ ಜಾ: ಕಬ್ಬಲಿಗ ಸಾ: ದರ್ಶನಾಪೂರ 3) ಮಲ್ಲಪ್ಪ ತಂದೆ ಭೀಮರಾಯ ಮಕಾಶಿ ವಯಾ:35 ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ದರ್ಶನಾಪೂರ 4) ರಾಯಪ್ಪ ತಂದೆ ಭೀಮರಾಯ ಮಕಾಶಿ ವಯಾ:45 ಉ: ಒಕ್ಕಲುತನ ಜಾ: ಕಬ್ಬಲಿಗ ಸಾ:ದರ್ಶನಾಪೂರ 5) ರಾಮಣ್ಣ ಬಿರಾದಾರ ವಯಾ:48 ವರ್ಷ ಉ: ಒಕ್ಕಲುತನ ಜಾ: ಕಬ್ಬಲಿಗ ಸಾ: ಜೈನಾಪೂರ ಇವರು ನನ್ನ ಮಗ ಮಂಜುನಾಥನು ರಾಮಣ್ಣನ ಮಗಳಾದ ಪ್ರೇಮಾ ಬಿರಾದಾರ ಸಾ: ಜೈನಾಪೂರ ಹಾ: ವ: ದರ್ಶನಾಪೂರ ಇವಳ ಜೋತೆಯಲ್ಲಿ ಪ್ರೀತಿ ಮಾಡುತ್ತಿದ್ದಾನೆ ಅಂತಾ ನನ್ನ ಮಗನಿಗೆ ಹೆದರಿಸಿದ್ದರಿಂದ ನನ್ನ ಮಗನು ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ. ನನ್ನ ಮಗನು ನೇಣು ಹಾಕಿಕೊಂಡು ಮೃತಪಡಲು ಸದರಿ ಐದು ಜನರು ಹೆದರಿಸಿ ಪ್ರೇರೇಪಣೆ ಮಾಡಿರುತ್ತಾರೆ ಆದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಜರುಗಸಬೇಕು ಅಂತಾ ಫಿಯರ್ಾದಿಯ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ : 72/2021 ಕಲಂ 306, 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಿ ಇರುತ್ತದೆ

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 115/2021 ಕಲಂ:323, 366, 342, 354, 504, 506 ಐಪಿಸಿ : ಇಂದು ದಿನಾಂಕಃ 03/07/2021 ರಂದು12 ಪಿ.ಎಮ್ ಕ್ಕೆ ಶ್ರೀಮತಿ ಗುರುಬಾಯಿಗಂಡತಿಮ್ಮಣಗೌಡ ಮಾಲಿಪಾಟೀಲ್ ವ|| 30 ವರ್ಷಜಾ|| ಬೇಡರು ಉ|| ಮನೆಗೆಲಸ ಸಾ|| ಲಿಂಗದಳ್ಳಿ ಎಸ್.ಕೆ.ಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮೂರ ನಮ್ಮಜನಾಂದವನಾದ ಶರಣಪ್ಪತಂದೆ ಭೀಮಣ್ಣ ಮಕಾಶಿ ಇವನು ಸುಮಾರು 4-5 ತಿಂಗಳ ಹಿಂದ ನನ್ನ ನೆಗೆಣಿಗೆಕೆಟ್ಟದೃಷ್ಠಿಯಿಂದ ನೊಡಿ ಕೈ ಮಾಡಿಕರೆಯುತ್ತಿದ್ದಾಗ ನಾನು ನೋಡಿ ಅವನಿಗೆ ಬುದ್ದಿವಾದ ಹೇಳಿ ನಾನು ನಮ್ಮ ಮನೆಯಲ್ಲಿ ಹೇಳಿ ಬೈಸುತ್ತೇನೆಅಂತಾ ಅಂದಿಕ್ಕೆ ಆತನುಯಾರಿಗೂ ಹೇಳ ಬೇಡ ನಾನು ಇನ್ನೊಮ್ಮೆ ಈ ರೀತಿ ಮಾಡುವದಿಲ್ಲ ಅಂದಾಗ ನಾನು ನಮ್ಮ ಮರ್ಯಾದಿಗೆಅಂಜಿ ಮನೆಯಲ್ಲಿಯಾರಿಗೂ ಹೇಳಿರುವದಿಲ್ಲ. ಹಿಗಿದ್ದುಇಂದು ದಿನಾಂಕ:03/07/2021 ರಂದು ಮುಂಜಾನೆ 5:45 ಎ.ಎಂ ಕ್ಕೆ ನಾನು ಮತ್ತು ನನ್ನ ನೆಗೆಣಿರೇಣಮ್ಮಗಂಡ ಬಸನಗೌಡ ಮಾಲಿಪಾಟೀಲ್ ವ|| 27 ವರ್ಷಇಬ್ಬರುಕೂಡಿ ಶೌಚಾಲಯಕ್ಕೆ ಹೊಗಿ ಮರಳಿ ಮನೆಗೆ ಬರುವಾಗ ಶರಣಪ್ಪ ಮಕಾಶಿ ಇವರ ಮನೆಯ ಮುಂದೆ 6:00 ಎ.ಎಂ ಕ್ಕೆ ಇದ್ದಾಗ ಶರಣಪ್ಪಇತನು ನನ್ನ ನೆಗೆಣಿಗೆಕೈಹಿಡಿದು ಎಳೆದುಕೊಂಡು ಹೊಗುವಾಗ ನಾನು ಯಾಕೆ ಆಕಗೆ ಕೈಹಿಡಿದ ಬಿಡತಿಇಲ್ಲಅಂದಿದಕ್ಕೆ ನನಗೆ ಕೈಯಿಂದ ಹೊಡೆದು ಏನೆಲೆ ಸೂಳೆ ನೀನು ನಿಮ್ಮ ಮನೆಯವರಿಗೆ ಹೇಳಿ ಬೈಸುತ್ತಿಅಂತಾಅವಮಾನ ಮಾಡಿ, ಇವತ್ತ ನಿಮ್ಮ ಮನೆಯರುಯಾರದರೂ ಬಿಡಿಸಿಕೊಂಡು ಹೊಗಲು ಬಂದರೆಅವರಜೀವ ಹೊಡೆಯದೆ ಬಿಡುವುದಿಲ್ಲ ಅಂತಾ ಹೇಳಿ ನನ್ನ ನೆಗೆಣಿಗೆಅಪರಹಣ ಮಾಡಿಕೊಂಡುತನ್ನ ಮನೆಯಲ್ಲಿ ಎಳೆದುಕೊಂಡು ಹೊಗಿ ಮನೆಯತಲಬಾಗಿಲು ಹಾಕಿಕೊಂಡಾಗ ನಾನು ಗಾಬರಿಯಾಗಿ ಮನೆಗೆ ಬಂದು ನನ್ನಗಂಡತಿಮ್ಮಣಗೌಡ ಹಾಗೂ ನನ್ನ ನೆಗೆಣಿಗಂಡನಾದ ಬಸನಗೌಡಇವರಿಗೆ ಹೇಳಿದಾಗ ನಾನು ಮತ್ತು ನನ್ನಗಂಡತಿಮ್ಮಣಗೌಡ, ಹಾಗೂ ಮೈದುನ ಬಸನಗೌಡ ಮೂರುಜನರುಕೂಡಿ ಅವನ ಮನೆಗೆ ಹೊಗಿ ಬಾಗಿಲು ಬಡಿದರು ಬಾಗಿಲು ತಗೆಯಲಿಲ್ಲ. ನಂತರ ನನ್ನಗಂಡನು 112 ವಾಹನಕ್ಕೆ ಕಾಲ ಮಾಡಿದಾಗ 7 ಎ.ಎಂಕ್ಕೆ 112 ವಾಹನ ಬಂದಾಗ ಶರಣಪ್ಪಇತನು ಮನೆಯ ಬಾಗಿಲು ತಗೆದು ಓಡಿ ಹೋದನು. ನಂತರ ನನ್ನ ನೆಗೆಣಿ 112 ವಾಹನದಲ್ಲಿಠಾಣೆಗೆಕರೆದುಕೊಂಡು ಬಂದರು. ನಂತರ ನನಗೆ ಕೈಯಿಂದ ಹೊಡೆದಿದ್ದರಿಂದಯಾವುದೇಗಾಯವಾಗಿರುವದಿಲ್ಲ ನಾನು ಆಸ್ಪತ್ರೆಗೆ ತೋರಿಸಿರುವದಿಲ್ಲ. ನಾನು ಠಾಣೆಗೆ ಬಂದುದೂರುಅಜರ್ಿ ನೀಡಿರುತ್ತೇನೆ. ಕಾರಣ ನನಗೆ ಕೈಯಿಂದ ಹೊಡೆದುಅವಾಚ್ಯವಾಗಿ ಬೈದುಜೀವದ ಬೇದರಿಕೆ ಹಾಕಿ ಅವಮಾನ ಮಾಡಿ ಮತ್ತು ನನ್ನ ನೆಗೆಣಿರೇಣಮ್ಮ ಇವಳಿಗೆ ಕೈಹಿಡಿದು ಎಳೆದುಕೊಂಡು ಅಪಹರಣ ಮಾಡಿಅಕ್ರಮ ಬಂದನದಲ್ಲಿಇಟ್ಟ ಶರಣಪ್ಪಇತನ ಮೇಲೆ ಕಾನೂನು ಕ್ರಮಜರುಗಿಸಲು ಮಾನ್ಯರವರಲ್ಲಿ ವಿನಂತಿಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 115/2021 ಕಲಂ:323, 366, 342, 354, 504, 506 ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಇತ್ತೀಚಿನ ನವೀಕರಣ​ : 04-07-2021 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080