ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-07-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 76/2022 ಕಲಂ 279, 337, 338 ಐಪಿಸಿ 304(ಎ) ಐಪಿಸಿ : ಇಂದು ದಿನಾಂಕ 23.06.2022 ರಂದು ಸಾಯಂಕಾಲ 5.00 ಗಂಟೆಗೆ ಮಲ್ಲಪ್ಪ ತಂದೆ ಭೀಮರಾಯ ದನಕಾಯೋರ, ವ|| 28 ವರ್ಷ, ಜಾ|| ಮಾದಿಗ, ಉ|| ಒಕ್ಕಲುತನ, ಸಾ|| ಭೀಮನಳ್ಳಿ ಗ್ರಾಮ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಬಂದು ಹಾಜರುಪಡಿಸಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಕಲಂ 279, 337, 338 ಐಪಿಸಿ ಅಡಿಯಲ್ಲಿ ಬಸಪ್ಪ ಕುಂಬಾರ ಸಿ.ಹೆಚ್.ಸಿ-142 ರವರು ಪ್ರಕರಣ ದಾಖಲಿಸಿಕೊಂಡಿದ್ದರು. ರಸ್ತೆ ಅಪಘಾತ ಕಾಲಕ್ಕೆ ಗಾಯಗೊಂಡು ರಿಮ್ಸ್ ರಾಯಚೂರು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಭೀಮರಾಯ ತಂದೆ ಮಲ್ಲಪ್ಪ ದನಕಾಯೋರ, ವ|| 48 ವರ್ಷ, ಜಾ|| ಮಾದಿಗ, ಉ|| ಒಕ್ಕಲುತನ, ಸಾ|| ಭೀಮನಳ್ಳಿ ಗ್ರಾಮ ಈತನು ರಸ್ತೆ ಅಪಘಾತ ಕಾಲಕ್ಕೆ ಆದ ಗಾಯಗಳ ನೋವನುಭವಿಸಿ ಇಂದು ದಿನಾಂಕ 03.07.2022 ರಂದು 0030 ಗಂಟೆಗೆ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾನೆ. ಫಿಯರ್ಾದಿದಾರನ ಪುರವಣೆ ಹೇಳಿಕೆ ಪಡೆದು ಪ್ರಕರಣದಲ್ಲಿ 304(ಎ) ಐಪಿಸಿ ಕಾಯ್ದೆ ಕಲಂ ಅಳವಡಿಸಿಕೊಂಡು ತನಿಖೆ ಮುಂದುವರೆಸಿದ ಬಗ್ಗೆ ಮಾನ್ಯ ಹೆಚ್ಚುವರಿ ಜೆ.ಎಂ.ಎಫ್.ಸಿ ನ್ಯಾಯಾಲಯ ಯಾದಗಿರಿ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿದೆ.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 111/2022 ಕಲಂ 323, 324, 447, 504, 506 ಸಂ 34 ಐಪಿಸಿ : ಇಂದು ದಿನಾಂಕ 03/07/2022 ರಂದು 12.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಮಲ್ಲಪ್ಪ ತಂದೆ ಬಸಣ್ಣ ಅಂಗಡಿ ವ|| 34ವರ್ಷ ಜಾ|| ಹಿಂದೂ ಲಿಂಗಾಯತ ಉ|| ಒಕ್ಕಲುತನ ಸಾ|| ಹದನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ಹದನೂರ ಸೀಮಾಂತರದಲ್ಲಿ ನಮ್ಮದು ಹೊಲ ಸವರ್ೆ ನಂಬರ 50 ರಲ್ಲಿ 17 ಎಕರೆ 17 ಗುಂಟೆ ಹೊಲವಿದ್ದು ನಮ್ಮ ಅಜ್ಜನವರಾದ ಪುತ್ರಪ್ಪ ಮತ್ತು ನಮ್ಮ ತಂದೆಯ ಚಿಕ್ಕಪ್ಪನಾದ ಮಲ್ಲೇಶಪ್ಪ ಇಬ್ಬರಿಗೂ ಸದರಿ ಹೊಲದಲ್ಲಿ ಸರಿ ಸಮನಾದ ಪಾಲು ಬಂದಿದ್ದು ನಮ್ಮ ಅಜ್ಜನಾದ ಪುತ್ರಪ್ಪನಿಗೆ ನಮ್ಮ ತಂದೆಯಾದ ಬಸಣ್ಣನು ಏಕೈಕ ಮಗನಾಗಿದ್ದು, ಮಲ್ಲೇಶಪ್ಪನವರಿಗೆ ಶಿವಶರಣಪ್ಪ, ಸುರೇಶ ಮತ್ತು ಸಿದ್ದಣ್ಣ ಅಂತಾ 3 ಜನ ಮಕ್ಕಳಿದ್ದುದರಿಂದ ಸದರಿ ಹೊಲದಲ್ಲಿ ನಮ್ಮ ತಂದೆಯವರು ಜೀವಂತ ಇದ್ದಾಗ ಪಾಲು ಮಾಡಿಕೊಂಡು ಅರ್ಧ ಹೊಲವನ್ನು ನಾವು ಉಳುಮೆ ಮಾಡುತ್ತಾ ಬಂದಿದ್ದು ಅರ್ಧ ಹೊಲವನ್ನು ನಮ್ಮ ಕಾಕಾನವರು ಉಳುಮೆ ಮಾಡುತ್ತಾ ಬಂದಿರುತ್ತಾರೆ. ಸಂಪೂರ್ಣ ಹೊಲವು ನಮ್ಮ ತಂದೆಯವರ ಅತ್ತೆಯಾದ ಶಂಕ್ರೆಮ್ಮ ಇವರ ಹೆಸರಿನಲ್ಲಿ ಇದ್ದು ನಮ್ಮ ಅಜ್ಜಿಯವರು ತೀರಿಕೊಂಡಿದ್ದು ಮತ್ತು ನಮ್ಮ ತಂದೆಯವರೂ ಕೂಡಾ ತೀರಿಕೊಂಡಿರುತ್ತಾರೆ. ಹೀಗಿದ್ದು ದಿನಾಂಕ 02/07/2022 ರಂದು 4.30 ಪಿಎಂ ಸುಮಾರಿಗೆ ನಾನು ಹಾಗೂ ನನ್ನ ಹೆಂಡತಿಯಾದ ಲಕ್ಷ್ಮೀ ಗಂಡ ಮಲ್ಲಪ್ಪ ಅಂಗಡಿ ಇಬ್ಬರೂ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ಹೊಲದಲ್ಲಿ ಕಸ ತೆಗೆಯುತ್ತಾ ಇದ್ದೆವು. ಅದೇ ಸಮಯಕ್ಕೆ ನಮ್ಮ ಕಾಕಾನವರಾದ 1) ಶಿವಶರಣಪ್ಪ ತಂದೆ ಮಲ್ಲೇಶಪ್ಪ ಅಂಗಡಿ, 2) ಸುರೇಶ ತಂದೆ ಮಲ್ಲೇಶಪ್ಪ ಅಂಗಡಿ, 3) ಸಂಗಪ್ಪ ತಂದೆ ಮಲ್ಲೇಶಪ್ಪ ಅಂಗಡಿ ಹಾಗೂ 4) ಮಲ್ಲಿಕಾಜರ್ುನ ತಂದೆ ಶಿವಶರಣಪ್ಪ ಅಂಗಡಿ ಇವರು ನಾಲ್ಕೂ ಜನರು ಕೂಡಿ ಬಂದವರೇ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಾವು ಇದ್ದಲ್ಲಿಗೆ ಬಂದು ಏನಲೇ ಮಲ್ಲಪ್ಪ ನಿಮ್ಮದು ಸೊಕ್ಕು ಜಾಸ್ತಿಯಾಗಿದೆ ಏನು ನೀನು ಉಳುಮೆ ಮಾಡುತ್ತಿರುವ ಹೊಲ ಸದ್ಯ ನಮ್ಮ ಹೆಸರಿಗೆ ಇದೆ. ನೀನು ಇನ್ನು ಮೇಲೆ ಈ ಹೊಲದಲ್ಲಿ ಕಾಲು ಇಡಬಾರದು, ನೀವು ಬರಬಾರದು ಅಂತಾ ಹೇಳಿದರೂ ಏಕೆ ಬಂದಿರುವಿರಿ ಅಂತಾ ಬೈಯುತ್ತಿದ್ದಾಗ ನಾನು ಅವರಿಗೆ ನಮ್ಮ ಹೊಲದಲ್ಲಿ ನಾನು ಉಳುಮೆ ಮಾಡಿದರೆ ನಿಮಗೆ ಏನಾಗುತ್ತದೆ ಈ ಹೊಲ ನಿಮ್ಮದು ಏಕೆ ಆಗುತ್ತದೆ ಅಂತಾ ಕೇಳಿದಾಗ ನಾಲ್ಕೂ ಜನರು ಬಂದು ಕೈಯಿಂದ ನನಗೆ ಕಪಾಳಕ್ಕೆ ಬೆನ್ನಿಗೆ ಹೊಡೆಯಲು ಪ್ರಾರಂಭಿಸಿದರು. ಆಗ ಜಗಳ ಬಿಡಿಸಲು ಬಂದ ನನ್ನ ಹೆಂಡತಿಯಾದ ಲಕ್ಷ್ಮೀ ಇವಳಿಗೂ ಕೈಯಿಂದ ಬೆನ್ನಿಗೆ ಹೊಡೆದರು. ಶಿವಶರಣಪ್ಪ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ನನಗೆ ಹೊಡೆಯುತ್ತಿದ್ದಾಗ ನನ್ನ ಹೆಂಡತಿಯಾದ ಲಕ್ಷ್ಮೀ ಮತ್ತು ನಮ್ಮ ಹೊಲ ಪಾಲಿಗೆ ಮಾಡಿದ ಈರಣ್ಣ ತಂದೆ ಭೀಮರಾಯ ಅಂಗಡಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಮಕ್ಕಳೇ ಇನ್ನೊಮ್ಮೆ ಈ ಹೊಲದಲ್ಲಿ ಬಂದರೆ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನನಗೆ ಅಷ್ಟೊಂದು ಗಾಯಗಳಾಗದ ಕಾರಣ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವುದಿಲ್ಲ. ಈ ವಿಷಯದಲ್ಲಿ ನಾನು ಊರಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ 04 ಜನರು ಆಸ್ತಿ ವಿಷಯದಲ್ಲಿ ನನ್ನೊಂದಿಗೆ ಜಗಳ ತೆಗೆದು ಹೊಲದಲ್ಲ್ಲಿ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದು ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 111/2022 ಕಲಂ 323, 324, 447, 504, 506 ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶೋರಾಪೂರ ಪೊಲೀಸ್ ಠಾಣೆ:-
107/2022 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ : ಇಂದು ದಿನಾಂಕ:03/07/2022 ರಂದು 08:30 ಎ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ನಬಿಲಾಲ ಪಿ.ಎಸ್.ಐ ಸುರಪೂರ ಪೊಲೀಸ್ ಠಾಣೆ ಇವರು ಒಂದು ಟಿಪ್ಪರನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಹಾಜರುಪಡಿಸಿ ವರದಿ ನೀಡಿದ್ದರ ಸಾರಾಂಶವೇನೆಂದರೆ, ಇಂದು ದಿನಾಂಕ: 03/07/2022 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಯಾರೋ ಒಬ್ಬ ವ್ಯಕ್ತಿ ತನ್ನ ಟಿಪ್ಪರದಲ್ಲಿ ಸೂಗುರ ಸೀಮಾಂತರದ ಕೃಷ್ಣಾ ನದಿಯಲ್ಲಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಳ್ಳುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ ಶ್ರೀ ಸೂರ್ಯಕಾಂತ ಹೆಚ್ಸಿ-25, ಶ್ರೀ ಭೀಮರಾಯ ಹೆಚ್ಸಿ-55 ಇವರಿಗೆ ವಿಷಯ ತಿಳಿಸಿ ಭೀಮರಾಯ ಹೆಚ್ಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಭೀಮರಾಯ ರವರು ಇಬ್ಬರು ಪಂಚರಾದ 1) ಮಹಾದೇವಪ್ಪ ತಂದೆ ಮರೆಪ್ಪ ಹಳ್ಳದಮನಿ ವ|| 35 ವರ್ಷ ಜಾ|| ಬೇಡರ ಉ|| ಕೂಲಿ ಸಾ|| ಉದ್ದಾರ ಓಣಿ, ಸುರಪುರ ತಾ|| ಸುರಪುರ 2) ಪಿಡ್ಡಪ್ಪ ತಂದೆ ತಿಪ್ಪಣ್ಣ ನಾಟೇಕಾರ ವ|| 36 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ಗಾಂಧಿ ನಗರ, ಸುರಪುರ ತಾ|| ಸುರಪುರ ಇವರನ್ನು ಬೆಳಿಗ್ಗೆ 5:30 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಸಿಬ್ಬಂಧಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0094 ನೇದ್ದರಲ್ಲಿ ಕುಳಿತುಕೊಂಡು 5:45 ಎ.ಎಂ ಸುಮಾರಿಗೆ ಠಾಣೆಯಿಂದ ಹೊರಟು 6:30 ಎ.ಎಂ ಸುಮಾರಿಗೆ ಸೂಗುರ ಸಿಮಾಂತರ ಕೃಷ್ಣಾ ನದಿಯಿಂದ ಒಂದು ಟಿಪ್ಪರನಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದನ್ನು ನೋಡಿ ಮರೆಯಾಗಿ ನಿಂತುಕೊಂಡಾಗ ಕೃಷ್ಣಾ ನದಿ ಡಿಬ್ಬಿ ಏರುತ್ತಿದ್ದಂತೆ ನಮ್ಮ ಜೀಪ್ ನೋಡಿ ಟಿಪ್ಪರ ಚಾಲಕನು ಮರಳು ಅನ್ಲೋಡ ಮಾಡಿ ಟಿಪ್ಪರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ನಾನು ಹಾಗೂ ಪಂಚರು ಮತ್ತು ಸಿಬ್ಬಂದಿಯವರು ಟಿಪ್ಪರ್ ಹತ್ತಿರ ಹೋಗಿ ನೋಡಲಾಗಿ ಭಾರತ ಬೆಂಜ್ ಟಿಪ್ಪರ ಇದ್ದು, ಟಿಪ್ಪರ್ ನಂ. ಕೆಎ-33 ಎ-7116 ಅಂತ ಇದ್ದು, ಟಿಪ್ಪರನಲ್ಲಿದ್ದ ಅನ್ಲೌಡ ಮಾಡಿದ ಮರಳು ಅಂದಾಜು 12 ಘನ ಮೀಟರ್ ಮರಳು ಇದ್ದು ಅದರ ಅ.ಕಿ 9,600/- ರೂ. ಇರುತ್ತದೆ. ಭಾರತ್ ಬೆಂಜ್ ಟಿಪ್ಪರನ ಅ.ಕಿ 10,00,000/- ರೂ. ಇರುತ್ತದೆ. ಓಡಿ ಹೋದ ಚಾಲಕನ ಬಗ್ಗೆ ಭಾತ್ಮಿದಾರನಿಗೆ ವಿಚಾರಿಸಲಾಗಿ ಟಿಪ್ಪರ್ ಚಾಲಕನ ಹೆಸರು ದುರ್ಗಪ್ಪ ತಂದೆ ಬಸಪ್ಪ ಬೇವೂರ ಸಾ|| ನಿಂಗಾಪುರ ತಾ|| ಸುರಪುರ ಅಂತ ತಿಳಿಸಿದನು. ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಮುಂಜಾನೆ 6:30 ಎ.ಎಂ ದಿಂದ 7:30 ಎ.ಎಂ ದ ಅವದಿವರೆಗೆ ಜಪ್ತಿ ಪಂಚನಾಮೆ ಬರೆದುಕೊಂಡು ಟಿಪ್ಪರ ಮತ್ತು ಮರಳು ಜಪ್ತಿ ಪಡಿಸಿಕೊಂಡು ತಾಬಾಕ್ಕೆ ತಗೆದುಕೊಂಡಿದ್ದು ಇರುತ್ತದೆ. ಕಾರಣ ಸದರಿ ಟಿಪ್ಪರಗಳ ಚಾಲಕನು ಸಕರ್ಾರಕ್ಕೆ ಯಾವುದೇ ರಾಜಧನವನ್ನು ತುಂಬದೆ ಮತ್ತು ಸಂಬಂದಪಟ್ಟ ಇಲಾಖೆಯಿಂದ ಯಾವುದೇ ದಾಖಲಾತಿ (ಎಮ್.ಡಿ.ಪಿ) ಪಡೆದುಕೊಳ್ಳದೆ ಅಂದಾಜು 9,600/- ರೂ.ಗಳ ಕಿಮ್ಮತ್ತಿನ ಅಂದಾಜು 12 ಘನ ಮೀಟರ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿದ್ದು ಇರುತ್ತದೆ. ಸದರಿ ಟಿಪ್ಪರನ್ನು ಖಾಸಗಿ ಚಾಲಕನ ಸಹಾಯದಿಂದ ಠಾಣೆಗೆ 8:30 ಎ.ಎಂ ಕ್ಕೆ ತಂದು ಒಪ್ಪಿಸಿ, ಟಿಪ್ಪರ ಚಾಲಕ ಮತ್ತು ಮಾಲಿಕನ ಮೇಲೆ ಕಾನೂನು ಕ್ರಮ ಜರುಗಿಸಲು ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಜರುಗಿಸಲು ವರದಿಯೊಂದಿಗೆ ಜಪ್ತಿ ಪಂಚನಾಮೆಯನ್ನು ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 107/2022 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 57/2022 ಕಲಂ. 279 337 338 ಐಪಿಸಿ : ದಿನಾಂಕ:03/07/2022 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಹುಣಸಗಿ-ನಾರಾಯಣಪೂರ ರಸ್ತೆಯ ಮೇಲೆ ಹುಣಸಗಿ ತಹಶೀಲ್ ಕಾಯರ್ಾಲಯದ ಗೇಟ್ ಹತ್ತಿರ ರಸ್ತೆಯ ಮೇಲೆ ಆರೋಪಿತರಿಬ್ಬರೂ ತಮ್ಮ ಮೋಟಾರ್ ಸೈಕಲ್ಲಗಳನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ಎದುರು ಬದುರಾಗಿ ಡಿಕ್ಕಿ ಕೊಟ್ಟು ಮೋಟಾರ್ ಸೈಕಲ್ಲ ಸವಾರರು ಇಬ್ಬರೂ ಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಆರೋಪಿತ ನಂ:1 ನೇದ್ದವನ ಹಿಂದೆ ಕುಳಿತ ವ್ಯಕ್ತಿಯು ಸಹ ಕೆಳಗೆ ಬಿದ್ದಿದ್ದು, ಆರೋಫಿತರು ಇಬ್ಬರಿಗೆ ಭಾರಿ ರಕ್ತಗಾಯಗಳಾಗಿದ್ದು, ಇನ್ನೊಬ್ಬನಿಗೆ ಸಾದಾ ರಕ್ತಗಾಯಗಳಾಗಿದ್ದು, 3 ಜನರಿಗೆ ಇಲಾಜು ಕುರಿತು ಹುಣಸಗಿ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿದ್ದು, ಮಾನ್ಯ ವೈದ್ಯಾಧಿಕಾರಿಗಳು ಸರಕಾರಿ ಆಸ್ಪತ್ರೆ ರವರು ಠಾಣೆಗೆ ಪೋನ್ ಮುಖಾಂತರ ಎಮ್.ಎಲ್.ಸಿ ಮಾಹಿತಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಹೋಗಿ ಫಿರ್ಯಾದಿಯ ಹೇಳಿಕೆ ಪಡೆದುಕೊಂಡು ಠಾಣೆಗೆ 22.15 ಗಂಟೆಗೆ ಬಂದು ಫಿರ್ಯಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-07-2022 10:08 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080