ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-08-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ 126/2022 ಕಲಂ: 448, 323, 504, 506 ಐಪಿಸಿ : ಸುಮಾರು 2-3 ವರ್ಷಗಳ ಹಿಂದೆ ಫಿರ್ಯಾದಿಗೆ ಹಾಗೂ ಆರೋಪಿತನ ತಂದೆಗೆ ಬಾಯಿ ಮಾತಿನ ಜಗಳವಾಗಿದ್ದು ಆ ಕಾರಣಕ್ಕಾಗಿ ಆರೋಪಿತನು ಇಂದು ದಿನಾಂಕ 03.08.2022 ರಂದು ಸಮಯ 12:30 ಎ.ಎಮ್ ಸುಮಾರಿಗೆ ಫಿರ್ಯಾದಿಯ ಮನೆಗೆ ಹೋಗಿ ಚಿಕ್ಕಪ್ಪ ಬಾಗಿಲು ತೆಗಿ ಅಂತಾ ಕೂಗಿದಾಗ ಫಿರ್ಯಾದಿಯು ಎದ್ದು ಬಾಗಿಲನ್ನು ತೆಗೆದು ಈ ಹೊತ್ತಿನಲ್ಲಿ ಒಬ್ಬನೇ ಯಾಕೆ ಬಂದಿ ಅಂತಾ ವಿಚಾರಿಸಿದಕ್ಕೆ ಆರೋಪಿತನು ಫೀರ್ಯಾದಿಗೆ ನೂಕಿ ಕೊಟ್ಟು ಆತನ ಮನೆಯೊಗಳಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಆತನೊಂದಿಗೆ ಕುಸ್ತಿಗೆ ಬಿದ್ದು ಕೈಯಿಂದ ಹೊಡೆ-ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫೀರ್ಯಾದಿಯು ತನ್ನ ಹೆಂಡತಿ ಹಾಗೂ ತಮ್ಮನೊಂದಿಗೆ ವಿಚಾರ ಮಾಡಿದ ನಂತರ ತಡವಾಗಿ ಗಣಕೀಕೃತ ದೂರು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 126/2022 ಕಲಂ: 448, 323, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ.127/2022 ಕಲಂ: 341,323,504,506 ಸಂ. 34 ಐಪಿಸಿ : ದಿನಾಂಕಃ 02/08/2022 ರಂದು 11 ಎ.ಎಮ ಸುಮಾರಿಗೆ ಈ ಪ್ರಕರಣದಲ್ಲಿ ಫಿರ್ಯಾದಿ ಮತ್ತು ಆಕೆಯ ಹೆಂಡತಿ ಮತ್ತು ತಾಯಿ. ಮಗ. ಠಾಣೆಗೆ ಬಂದು ಒಂದು ಪಿಯರ್ಾದಿ ನೀಡಿದ್ದು ಅದರ ಸಾರಾಂಶವೇನಂದೆರೆ ಮನೆಯ ಪಾಲಿನ ವಿಷಯದಲ್ಲಿ ಪಿಯರ್ಾದಿ ಮತ್ತು ಆತನ ಹೆಂಡತಿ . ಮಗ. ತಾಯಿ ಎಲ್ಲಾರು ಮನೆಯಿಂದ ಹೊಲಕ್ಕೆ ಹೋಗುವಾಗ ಮನೆಯ ಹತ್ತಿರ ಇರುವ ರಸ್ತೆಯ ಮೇಲೆ ಅವರ ಸಂಬಂಧಿಕರಾದ. ಶರಣಪ್ಪ. ಮತ್ತು ಶೋಭಾ ಎಂಬುವರು ಬಂದು ಅಕ್ರಮವಾಗಿ ತಡೆದು ನಿಲ್ಲಿಸಿ ಅವಾಚ್ಚವಾಗಿ ಬೈಯ್ದು, ಕೈಯಿಂದ ಹೊಡೆದು. ಜೀವದ ಬೆದರಿಕೆಯನ್ನು ಹಾಕಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂಬರ 127/2022 ಕಲಂ 341.323.504.506. ಸಂ 34 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 94/2022 ಕಲಂ 323, 324, 354, 504, 506, ಸಂಗಡ 34 ಐಪಿಸಿ : ಇಂದು ದಿನಾಂಕ: 03.08.2022 ರಂದು ಸಾಯಂಕಾಲ 7-15 ಗಂಟೆ ಸುಮಾರಿಗೆ ಸೈದಾಪೂರ ಸಕರ್ಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂತು. ನಾನು ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತಿದ್ದ ಗಾಯಾಳು ಮರಲಿಂಗಮ್ಮ ಗಂಡ ನರಸಪ್ಪ ಆಶಪ್ಪನ್ನೋರ ವಯ|| 30 ವರ್ಷ ಜಾ|| ಮಾದಿಗ ಉ|| ಹೊಲಮನೆಕೆಲಸ ಸಾ|| ಕಿಲ್ಲನಕೇರಾ ಗ್ರಾಮ ಇವರಿಗೆ ವಿಚಾರಿಸಿ ಹೇಳಿಕೆ ಪಡೆದೆ. ಹೇಳಿಕೆ ಸಂಕ್ಷಿಪ್ತ ಸಾರಾಂಶವೇನೆಂದರೆ, ಮೊನ್ನೆ ರವಿವಾರ ದಿನ ನನ್ನ ಮಗ ಪ್ರಜ್ವಲ್ ಈತನು ನಮ್ಮ ಹೊಲಕ್ಕೆ ಹೋದಾಗ ನಮ್ಮ ಹೊಲದ ಪಕ್ಕದ ನಮ್ಮ ಹೊಲದ ಪಕ್ಕದ ಹೊಲದವರಾದ ನಿಂಗಪ್ಪ ತಂದೆ ಮರೆಪ್ಪ ಆಶಪ್ಪನ್ನೋರ ಈತನು ನನ್ನ ಮಗ ಪ್ರಜ್ವಲ್ ತಮ್ಮ ದನಗಳನ್ನು ಕಟ್ಟಿಹಾಕುವ ಹಗ್ಗವನ್ನು ಬಿಚ್ಚಿಕೊಂಡಿದ್ದಾನೆ ಅಂತ ನನ್ನ ಮಗನಿಗೆ ಹೊಡೆಬಡೆ ಮಾಡಿದ್ದ ವಿಷಯ ನನ್ನ ಮಗ ಅದೆ ದಿನ ಮನೆಗೆ ಬಂದು ತಿಳಿಸಿದ್ದ. ನೀನ್ಯಾಕೆ ಅವರ ಹಗ್ಗ ಮುಟ್ಟಲಿಕ್ಕೆ ಹೋಗಿದ್ದಿ ಅಂತ ನನ್ನ ಮಗನಿಗೆ ನಾನು ಮತ್ತು ನನ್ನ ಗಂಡ ಬೈದೆವು. ಅದಕ್ಕೆ ನನ್ನ ಮಗ ನಾನು ಹಗ್ಗ ಮುಟ್ಟಿಲ್ಲ ಯಾರು ಒಯ್ದರೋ ಏನೋ ನನ್ನನ್ನು ಸುಮ್ಮನೆ ಹೊಡೆದಿದ್ದಾನೆ ಅಂತ ಹೇಳಿದ್ದ. ನಿಂಗಪ್ಪ ಹೊಲದ ಹತ್ತಿರ ಸಿಕ್ಕಾಗ ಕೇಳಿದರಾಯಿತು ಅಂತ ನಾನು ಮತ್ತು ನನ್ನ ಗಂಡ ಸುಮ್ಮನಿದ್ದೆವು. ಎಂದಿನಂತೆ ನಾನು ಇಂದು ಬೆಳಿಗ್ಗೆ ನಮ್ಮ ಹತ್ತಿ ಹೊಲದಲ್ಲಿ ಕಳೆತೆಗೆಯಲು ಹೋಗಿದ್ದೆ. ಸಾಯಂಕಾಲ 4-30 ಗಂಟೆ ಸುಮಾರಿಗೆ ನನ್ನ ಇಬ್ಬರು ಮಕ್ಕಳಾದ ಪ್ರಜ್ವಲ್ ಮತ್ತು ನವೀನ ಹೊಲಕ್ಕೆ ಬಂದರು ನಾವು ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಬರುವಾಗ ನಮ್ಮ ಹಿಂದುಗಡೆಯಿಂದ ನಿಂಗಪ್ಪ ಮತ್ತು ಆತನ ಹೆಂಡತಿ ರೇಣುಕಾ ಬರುವದನ್ನು ನೋಡಿ ನಾನು ನಿಂತೆ. ಅವರು ನನ್ನ ಸಮೀಪ ಬಂದ ತಕ್ಷಣ ಇಂದು ದಿನಾಂಕ 03.08.2022 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಅವರಿಗೆ ನನ್ನ ಮಗ ಪ್ರಜ್ವಲಗೆ ಮೊನ್ನೆ ನೀವು ಯಾಕೇ ಹೊಡೆದಿ ಅಂತ ನಿಂಗಪ್ಪನಿಗೆ ಕೇಳಿದೆ. ಅದಕ್ಕೆ ಗಂಡ-ಹೆಂಡತಿ ಇಬ್ಬರೂ ನಿನ್ನ ಮಗ ನಮ್ಮ ದನಗಳಿಗೆ ಕಟ್ಟುವ ಹಗ್ಗ ಕಳುವು ಮಾಡಿಕೊಂಡು ಹೋಗಿದ್ದಾನೆ ನಿನ್ನ ಮಕ್ಕಳು ಕಳ್ಳರಿದ್ದಾರೆ ಅಂತ ಅಂದರು, ಅದಕ್ಕೆ ನಾನು ಸರಿಯಾಗಿ ಮಾತನಾಡ್ರಿ ಅಂತ ಅಂದ ತಕ್ಷಣ ಗಂಡ-ಹೆಂಡತಿ ಇಬ್ಬರೂ ನನಗೆ ಭೋಸಡಿ, ರಂಡಿ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನನ್ನ ತಲೆ ಕೂದಲು ಮತ್ತು ಸೀರೆ ಸೆರಗು ಹಿಡಿದು ಎಳೆದಾಡಿ ಕೈಯಿಂದ ಹೊಡೆದರು. ನಾನು ಅವರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುವಾಗ ನಿಂಗಪ್ಪ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದ. ನನ್ನನ್ನು ಹೊಡೆಯುವದನ್ನು ನೋಡಿದ ನನ್ನಿಬ್ಬರು ಮಕ್ಕಳು ನನ್ನ ಸಮೀಪ ಬಂದ ತಕ್ಷಣ ನಿಂಗಪ್ಪ ಅವರಿಗೂ ಸಹ ಕಟ್ಟಿಗೆಯಿಂದ ಹೊಡೆಯಲು ಹೋದ ನಮ್ಮ ಹುಡುಗರು ಅಂಜಿ ದೂರ ಹೋದರು. ನನ್ನ ತಲೆಗೆ ರಕ್ತಗಾಯವಾಗಿದ್ದನ್ನು ನೋಡಿದ ಗಂಡ ಹೆಂಡತಿ ಇಬ್ಬರೂ ರಂಡಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಮತ್ತು ನಿನ್ನ ಮಕ್ಕಳ ಜೀವ ತೆಗಿತೀವಿ ಅಂತ ಅಂಜಿಕೆ ಹಾಕಿದರು. ನನ್ನ ತಲೆ ಮಧ್ಯಭಾಗದಲ್ಲಿ ರಕ್ತಗಾಯವಾಗಿದ್ದರಿಂದ ನಾನು ಕೈಯಿಂದ ತಲೆ ಬಿಗಿ ಹಿಡಿದುಕೊಂಡು ನಾನು, ನನ್ನ ಮಕ್ಕಳು ಮನೆಗೆ ಬಂದ ನಂತರ ನನ್ನ ಗಂಡನಿಗೆ ಮತ್ತು ನನ್ನ ಅತ್ತೆಗೆ ವಿಷಯ ಹೇಳಿ ಅಟೋ ಒಂದರಲ್ಲಿ ಇಲ್ಲಿಗೆ ಅಂದರೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದಿದ್ದೇವೆ.
ನನ್ನ ಮಗನಿಗೆ ಯಾಕೆ ಹೊಡೆದಿರಿ ಅಂತ ಕೇಳಲು ಹೋದಾಗ 1.ನಿಂಗಪ್ಪ ತಂದೆ ಮರೆಪ್ಪ ಆಶಪ್ಪನ್ನೋರ ಉ|| ಒಕ್ಕಲುತನ 2. ರೇಣುಕಾ ಗಂಡ ನಿಂಗಪ್ಪ ಆಶಪ್ಪನ್ನೋರ ಇವರು ನನ್ನನ್ನು ಹೊಡೆದು ಗಾಯಗೊಳಿಸಬೇಕೆಂಬ ಉದ್ದೇಶದಿಂದ ನನ್ನ ಮೇಲೆ ಹಲ್ಲೆ ಮಾಡಿ ನನಗೆ ಗಾಯಗೊಳಿಸಿದ್ದಲ್ಲದೇ, ನನ್ನ ತಲೆ ಕೂದಲು ಮತ್ತು ಸೀರೆ ಸೆರಗು ಹಿಡಿದು ಎಳೆದಾಡಿ ನನ್ನ ಮಾನಭಂಗ ಮಾಡಿರುತ್ತಾರೆ. ಕಾರಣ ಸದರಿಯವರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ. ಘಟನೆ ನಮ್ಮ ಹೊಲದ ಸಮೀಪ ಕಾಲುದಾರಿ ಮೇಲೆ ನಡೆದಿದೆ.

ಇತ್ತೀಚಿನ ನವೀಕರಣ​ : 04-08-2022 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080