ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-09-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ: 95/2021 ಕಲಂ. 379 ಐಪಿಸಿ : ಇಂದು ದಿನಾಂಕ: 03/09/2021 ರಂದು 1-30 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್. ಪಿ.ಎಸ್.ಐ(ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರು ಠಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 03/09/2021 ರಂದು 12-30 ಪಿಎಮ್ ಸುಮಾರಿಗೆ ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ-10 ಮತ್ತು ಸಾಬರೆಡ್ಡಿ ಪಿ.ಸಿ-379 ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಹತ್ತಿಕುಣಿ ಕ್ರಾಸ ಮುಖಾಂತರ ಗಂಗಾನಗರ ಕ್ರಾಸ ಕಡೆಗೆ ಹೋಗುತ್ತಿರುವಾಗ 1-00 ಪಿಎಮ್ ಸುಮಾರಿಗೆ ಗಂಗಾನಗರ ಹಳ್ಳದ ಬ್ರಿಡ್ಜ ಕಡೆಯಿಂದ ಗಂಗಾನಗರ ಕ್ರಾಸದಲ್ಲಿ ನಮ್ಮ ಎದುರುಗಡೆ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಆಗ ಚಾಲಕನು ಟ್ರಾಕ್ಟರನ್ನು ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ನಾವು ಹತ್ತಿರ ಹೋಗಿ ಟ್ರಾಕ್ಟರನ್ನು ಪರಿಶೀಲಿಸಲಾಗಿ ಒಂಊಓಆಖಂ 475 ಆ ಕಂಪನಿಯ ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಬಿ.1101 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಟ್ರಾಕ್ಟರದಲ್ಲಿ ಮರಳು ತುಂಬಿದ್ದು ಟ್ರಾಕ್ಟರ ಚಾಲಕನು ಟ್ರಾಕ್ಟರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 1-15 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ ಇಂಜಿನ ನಂ.ಕೆಎ.33.ಟಿಬಿ.1101 ನೇದ್ದು ಹಾಗೂ ಟ್ರಾಲಿ ನಂಬರ ಇರುವುದಿಲ್ಲ. ಅ.ಕಿ.3,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 1-30 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.95/2021 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 87/2021 ಕಲಂ, 87 ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ:03/09/2021 ರಂದು 10.40 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಅಯ್ಯಪ್ಪ ಪಿಎಸ್ಐ ಗೋಗಿ ಠಾಣೆ ಸಾಹೇಬರು ಒಬ್ಬ ಆರೋಪಿತರು ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 03/09/2021 ರಂದು ಮಹಲ್ ರೋಜಾ ಯಕ್ಕಿಗಡ್ಡಿ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ-ಬಾಹರ ಅಂತ ದೈವಲೀಲೆಯ ಜೂಜಾಟ ಆಡುತ್ತಿದ್ದಾಗ ದಾಳಿ ಮಾಡಿ ಕ್ರಮ ಜರುಗಿಸಲು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸಿಬ್ಬಂದಿಯವರೊಂದಿಗೆ & ಪಂಚರ ಸಮಕ್ಷಮ ದಾಳಿ ಮಾಡಿ 07 ಜನರನ್ನು ಹಿಡಿದಿದ್ದು ಆರೋಪಿತರಿಂದ ಮತ್ತು ಕಣದಲ್ಲಿಂದ ನಗದು ಹಣ ರೂ. 11530=00 ರೂ. ಹಾಗು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಂಚನಾಮೆ ಪ್ರಕಾರ ಜಪ್ತಿ ಮಾಡಿಕೊಂಡು 10.40 ಪಿಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ವರದಿ ಹಾಜರಪಡಿಸಿದ್ದರಿಂದ ವರದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ 87/2021 ಕಲಂ 87 ಕೆ.ಪಿ. ಆ್ಯಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಗೋಗಿ ಪೊಲೀಸ್ ಠಾಣೆ
ಗುನ್ನೆ ನಂ: 86/2021 ಕಲಂ, 78(3) ಕೆ.ಪಿ.ಆ್ಯಕ್ಟ್ : ಇಂದು ದಿನಾಂಕ: 03/09/2021 ರಂದು 09.05 ಪಿ.ಎಮ್ ಕ್ಕೆ ಠಾಣೆಯ ಎಸ್.ಹೆಚ್.ಡಿ ಕರ್ತವ್ಯದಲ್ಲಿದ್ದಾಗ ಶ್ರೀ. ಶ್ರೀನಿವಾಸ ಅಲ್ಲಾಪೂರ ಆರಕ್ಷಕ ವೃತ್ತ ನೀರಿಕ್ಷಕರು ಶಹಾಪೂರ ಒಬ್ಬ ಆರೋಪಿ ಮತ್ತು ಜಪ್ತಿಪಂಚನಾಮೆ ಮುದ್ದೇಮಾಲು ದೊಂದಿಗೆ ಠಾಣೆಗೆ ಬಂದು ಕ್ರಮ ಕೈಕೊಳ್ಳುವಂತೆ ಸೂಚಿಸಿ ವರದಿ ನೀಡಿದ್ದು ವರದಿಯ ಸಾರಾಂಶವೆನೆಂದರೆ, ಇಂದು ದಿನಾಂಕ: 03/09/2021 ರಂದು ಚಾಮನಾಳ ಗ್ರಾಮದ ಗುಂಡಾಪೂರ ಕ್ರಾಸ್ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಕಾ ಜೂಜಾಟದ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದಿದ್ದರಿಂದ ಮಾನ್ಯ ನ್ಯಾಯಾಲಯ ದಿಂದ ದಾಳಿ ಮಾಡಲು ಅನುಮತಿ ಪಡೆದುಕೊಂಡು, ನಂತರ ಸಿಬ್ಬಂದಿಯವರು ಮತ್ತು ಪಂಚರ ಸಮಕ್ಷಮದಲ್ಲಿ ದಾಳಿ ಕುರಿತು ಹೋಗಿ ಆರೋಪಿತನಾದ ಚಂದ್ರೇಶೇಖರ ತಂದೆ ಸೀನು @ ಶಿವರಾಮ ಜಾಧವ ವಯಾ:28 ಉ: ಒಕ್ಕಲುತನ ಜಾ: ಲಂಬಾಣಿ ಸಾ: ಚಾಮನಾಳ ತಾಂಡಾ ತಾ: ಶಹಾಪೂರ ಜಿ: ಯಾದಗಿರಿ ಈತನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಬಾಂಬೆ, ಕಲ್ಯಾಣ ಮಟಕಾ ಚೀಟಿ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ 07.30 ಪಿಎಂ ಕ್ಕೆ ದಾಳಿ ಮಾಡಿ ಹಿಡಿದು ಸದರಿಯವನಿಂದ ನಗದು ಹಣ 5500/- ರೂ. ಹಾಗೂ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ನನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕಲಂ, 78(3) ಕೆ.ಪಿ.ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿದ ವರದಿಯ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 86/2021 ಕಲಂ, 78 (3) ಕೆ.ಪಿ. ಆಕ್ಟ್ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಕೊಡೆಕಲ್ ಪೊಲೀಸ ಠಾಣೆ
ಗುನ್ನೆ ನಂ. 50/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:03.09.2021 ರಂದು 5:00 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ದಿನಾಂಕ:03.09.2021 ರಂದು 2:00 ಪಿ.ಎಮ್.ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಬೀಟ್ ಸಿಬ್ಬಂದಿಯಾದ ಸಂಗನಗೌಡ ಹೆಚ್.ಸಿ-16 ರವರು ನನಗೆ ತಿಳಿಸಿದ್ದು ಏನೆಂದರೆ ಕಕ್ಕೇರಾ ಪಟ್ಟಣದ ಯುಕೆಪಿ ಕ್ಯಾಂಪ್ ಮುಂದಿನ ಬಲಶೆಟ್ಟಿಹಾಳ-ಶಾಂತಪೂರ ಕ್ರಾಸ್ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಮುಂಬಯಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 4:55 ಪಿ.ಎಂಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:50/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.
ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಸೋಮಣ್ಣ ತಂದೆ ನಂದಪ್ಪ ದೇಸಾಯಿ ವ:20 ವರ್ಷ, ಉ:ಕಿರಾಣಿ ಅಂಗಡಿ ವ್ಯಾಪಾರ, ಜಾ:ಹಿಂದೂ ಬೇಡರ ಸಾ|| ಕಕ್ಕೇರಾ ತಾ||ಸುರಪೂರ ಜಿ||ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=1650/- ರೂ
2) ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ

 

ಕೊಡೇಕಲ್ ಪೊಲೀಸ ಠಾಣೆ
ಗುನ್ನೆ ನಂ. 49/2021 ಕಲಂ: 78(3) ಕೆ.ಪಿ ಆಕ್ಟ್ : ಇಂದು ದಿನಾಂಕ:03.09.2021 ರಂದು 1:35 ಪಿ.ಎಮ್.ಕ್ಕೆ ಸರಕಾರಿ ತಪರ್ೆ ಶ್ರೀ ಬಾಷುಮಿಯಾ ಪಿಎಸ್ಐ ಕೊಡೆಕಲ್ಲ ಪೊಲೀಸ್ ಠಾಣೆ ರವರು ನೀಡಿದ ಜ್ಞಾಪನ ಪತ್ರದ ಸಾರಾಂಶ ಏನೆಂದರೆ, ನಾನು ಇಂದು ದಿನಾಂಕ:03.09.2021 ರಂದು 1:00 ಪಿ.ಎಮ್.ಕ್ಕೆ ಕೊಡೇಕಲ್ಲ ಪೊಲೀಸ್ ಠಾಣೆಯಲ್ಲಿದ್ದಾಗ ಕಕ್ಕೇರಾ ಬೀಟ್ ಸಿಬ್ಬಂದಿಯಾದ ಸಂಗನಗೌಡ ಹೆಚ್.ಸಿ-16 ರವರು ನನಗೆ ತಿಳಿಸಿದ್ದು ಏನೆಂದರೆ ಕಕ್ಕೇರಾ ಪಟ್ಟಣದ ಶ್ರೀ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ನಿಂತು ಹೋಗಿ ಬರುವ ಸಾರ್ವಜನಿಕರನ್ನು ಕರೆದು ಇದು ಕಲ್ಯಾಣಿ ಮಟಕಾ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಸಾರ್ವಜನಿಕರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆಗಳನ್ನು ಬರೆದು ಕೊಡುತ್ತಿರುವ ಬಗ್ಗೆ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿದ್ದು ಸದರಿ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸದರಿ ಪ್ರಕರಣವು ಅಸಂಜ್ಞೇಯ ಅಪರಾಧವಾಗುತ್ತಿದ್ದುದರಿಂದ ಆರೋಪಿತನ ಮೇಲೆ ಗುನ್ನೆ ದಾಖಲಿಸಿಕೊಳ್ಳಲು ಮತ್ತು ಸ್ಥಳಕ್ಕೆ ಹೋಗಿ ದಾಳಿ ಮಾಡಿ ತನಿಖೆಯನ್ನು ಕೈಗೊಳ್ಳಲು ಅನುಮತಿಗಾಗಿ ಮಾನ್ಯ ನ್ಯಾಯಾಲಯಕ್ಕೆ ಪತ್ರ ಬರೆದು ಈ-ಮೇಲ್ ಮುಖಾಂತರ ರವಾನಿಸಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಅನುಮತಿಯನ್ನು ನೀಡಿದ ಪ್ರತಿಯು ಈ-ಮೇಲ್ ಮುಖಾಂತರ 1:30 ಪಿ.ಎಂಕ್ಕೆ ವಸೂಲಾಗಿದ್ದು ಕಾರಣ ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರವನ್ನು ಈ ಕೂಡಾ ಲಗತ್ತಿಸಿದ್ದು ನಿಮಗೆ ಈ ಬಗ್ಗೆ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಕೊಡೆಕಲ್ಲ ಪೊಲೀಸ್ ಠಾಣಾ ಗುನ್ನೆ ನಂ:49/2021 ಕಲಂ:78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ.ಆರೋಪಿಯ ಹೆಸರು & ವಿಳಾಸ ಈ ಕೆಳಗಿನಂತೆ ಇರುತ್ತವೆ ಅಂತಾ ಮಾನ್ಯರಲ್ಲಿ ಮಾಹಿತಿ ಸಲ್ಲಿಸಲಾಗಿದೆ.
ಮೈನುದ್ದೀನ್ ತಂದೆ ನಿಜಾಮುದ್ದೀನ್ ಖಾಜಿ ವ:55 ವರ್ಷ, ಉ:ಒಕ್ಕಲುತನ, ಜಾ:ಮುಸ್ಲಿಂ, ಸಾ|| ಕಕ್ಕೇರಾ ತಾ||ಸುರಪೂರ ಜಿ||ಯಾದಗಿರಿ
ಜಪ್ತು ಪಡಿಸಿಕೊಂಡ ಮುದ್ದೆಮಾಲು.
1) ನಗದು ಹಣ=2460/- ರೂ
2) ಒಂದು ಬಾಲ್ ಪೆನ್ ಅ.ಕಿ=00=00 ರೂ
ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಅ.ಕಿ=00=00 ರೂ

 

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂ: 206/2021 ಕಲಂ 279, 338, 304 (ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 02/09/2021 ರಂದು ರಾತ್ರಿ 11.50 ಪಿ.ಎಂ.ಕ್ಕೆ ದೇವದುರ್ಗ ಪೊಲೀಸ್ ಠಾಣೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾಗಿದ್ದರಿಂದ ಇಂದು ದಿನಾಂಕ: 03/09/2021 ರಂದು ದೇವದುರ್ಗ ಸರಕಾರಿ ಆಸ್ಪತ್ರೆಗೆ ಬೇಟಿ ಕೊಟ್ಟು, ಫಿಯರ್ಾದಿ ಶ್ರೀ ರಾಜೇಶ ತಂ/ ಬಾಬು ಬರ್ಮನ್ ಸಾ|| ಆರ್. ಹೆಚ್. ಕಾಲೋನಿ.ನಂ.2,ಬೆಂಗಾಲಿ ಕ್ಯಾಂಪ್, ತಾ||ಸಿಂಧನೂರ, ರವರನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಹೇಳಿಕೆ ಪಡೆಯುವಾಗ ಮೃತಳ ವಿಳಾಸ ಪಡೆಯುವಲ್ಲಿ ವಿಳಂಬವಾಗಿದ್ದು, 2.00 ಪಿ.ಎಂ. ಇಂದ 3.00 ಪಿ.ಎಂ. ವರೆಗೆ ಲ್ಯಾಪಟ್ಯಾಪನಲ್ಲಿ ಹೇಳಿಕೆ ಪಡೆದುಕೊಂಡು 4.00 ಪಿ.ಎಂ.ಕ್ಕೆ ಠಾಣೆಗೆ ಬಂದು ಸದರಿ ಹೇಳಿಕೆ ಸಾರಾಂಶ ಏನೆಂದರೆ, ನಾನು ಮೇಲ್ಕಾಣಿಸಿದ ವಿಳಾಸದ ನಿವಾಸಿತನಿದ್ದು, ಒಕ್ಕಲುತನ ಮತ್ತು ಪಶ್ಚಿಮ ಬಂಗಾಳದ ಜನರಿಗೆ ಬತ್ತ ನಾಟಿ ಕೆಲಸ ಮಾಡಲು ಕನರ್ಾಟಕಕ್ಕೆ ಕರೆಯಿಸಿ ಕೂಲಿಕೆಲಸ ಮಾಡಿಸುವ ಕೆಲಸವನ್ನು ಮಾಡಿಕೊಂಡು ಉಪ ಜೀವನ ಸಾಗಿಸುತ್ತೇನೆ. ಹೀಗಿದ್ದು, ಕಳೆದ ಒಂದು ವರೆ ತಿಂಗಳ ಹಿಂದೆ ಪಶ್ಚಿಮ ಬಂಗಾಳದಿಂದ ಸುಮಾರು 25 ಜನ ಕೂಲಿ ಕೆಲಸದಾಳುಗಳನ್ನು ಕರೆಯಿಸಿದ್ದು, ಅವರು ದೇವದುರ್ಗ ಕ್ರಾಸ ಹತ್ತಿರ ವಾಸವಾಗಿದ್ದರು. ಸದರಿಯವರಿಂದ ಸಗರ, ಹತ್ತಿಗುಡೂರ ಸೀಮಾಂತರದಲ್ಲಿ ಕೂಲಿಕೆಲಸ ಮಾಡಿಸಿರುತ್ತೇನೆ. ನಿನ್ನೆ ದಿನಾಂಕ: 02/09/2021 ರಂದು ಕೂಲಿ ಆಳು ಶ್ರೀಮತಿ ಮುಂಗಲಿ ಗಂ/ ಹರಿ ಸರೇನ, ವ|| 43 ವರ್ಷ, ಜಾ|| ಆದಿವಾಸಿ, ಉ|| ಕೂಲಿಕೆಲಸ ಸಾ|| ದೇವಿಪುರ, ತಾ||(ಥಾನಾ) ಮೆಮೊರಿ, ಜಿ|| ಬರ್ದಮಾನ, (ಪಶ್ಚಿಮ ಬಂಗಾಳ ರಾಜ್ಯ) ಈಕೆಯು ನಾನು ನನ್ನ ಊರಿಗೆ ಹೋಗುತ್ತೇನೆ ನನಗೆ ದೇವದುರ್ಗಕ್ಕೆ ಬಿಟ್ಟು ಬಾ ಅಂತಾ ಅಂದಿದ್ದಕ್ಕೆ 09.00 ಪಿ.ಎಂ. ಸುಮಾರಿಗೆ ನನ್ನ ಮೋಟರ ಸೈಕಲ್ ನಂ. ಕೆಎ-36 ಇ.ಎಸ್.-2581 ನೇದ್ದರಲ್ಲಿ ಹಿಂದೆ ಕೂಡಿಸಿಕೊಂಡು ದೇವದುರ್ಗ ಕ್ರಾಸನಿಂದ ದೇವದುರ್ಗಕ್ಕೆ ಹೊರಟಿದ್ದಾಗ 9.15 ಪಿ.ಎಂ. ಸುಮಾರಿಗೆ ಹತ್ತಿಗೂಡುರ - ದೇವದುರ್ಗ ರೋಡಿನ ಮೇಲೆ ಬಿರನೂರ ಕ್ರಾಸ್ ದಾಟಿ ಅಂದಾಜು 1 ಕಿ.ಮೀ ಅಂತರದಲ್ಲಿ ಎಮ್.ಕೊಳ್ಳುರ ಗ್ರಾಮದ ಕಡೆಗೆ ಹೋಗುವ ರೋಡಿನಲ್ಲಿ ಹೊರಟಿದ್ದಾಗ ಎದುರಿನಿಂದ ಒಂದು ಟಿಪ್ಪರ್ನ ಚಾಲಕನು ತನ್ನ ಟಿಪ್ಪರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಎಂ.ಕೊಳ್ಳೂರ ಕಡೆಯಿಂದ ನಡೆಸಿಕೊಂಡು ಬಂದು, ನನ್ನ ಮೋಟರ ಸೈಕಲಕ್ಕೆ ಡಿಕ್ಕಿಪಡಿಸಿದ ಪರಿಣಾಮ ನಾವಿಬ್ಬರೂ ಮೋಟರ ಸಮೇತವಾಗಿ ರಸ್ತೆಯ ಎಡ ಸೈಡಿನಲ್ಲಿ ಬಿದ್ದೆವು, ಮುಂಗಲಿ ಗಂಡ ಹರಿ ಸರೇನ ಇವರಿಗೆ ತಲೆಗೆ ಮತ್ತು ಅಲ್ಲಿ ರಕ್ತಗಾಯವಾಗಿದ್ದು, ನನಗೆ ತಲೆಗೆ ಒಳಪೆಟ್ಟು, ಬಲಗೈ ತರಚಿದಗಾಯ, ಬೆನ್ನಿ ಎಡಭಾಗದಲ್ಲಿ ಭಾರೀ ಒಳಪೆಟ್ಟು, ಎಡಗಾಲ ಮೊಳಕಾಲಿಗೆ ತರಚಿದಗಾಯಗಳಾಗಿರುತ್ತವೆ. ಯಾರೋ 108 ಕ್ಕೆ ಫೋನ್ ಮಾಡಿದ್ದರಿಂದ 108 ಅಂಬ್ಯೂಲೈನ್ಸ್ ಬಂದು ನಮ್ಮಿಬ್ಬರಿಗೆ ಹಾಕಿಕೊಂಡು ದೇವದುರ್ಗ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದಾಗ ಮುಂಗಲಿ ಇವಳು ರಾತ್ರಿ 10.00 ಪಿ.ಎಂ. ಸುಮಾರಿಗೆ ಅಪಘಾತದಲ್ಲಿ ತನಗೆ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ಮೃತಪಟ್ಟಿರುತ್ತಾಳೆ. ಅಪಘಾತವಾದ ಸಮಯದಲ್ಲಿ ರಾತ್ರಿಯಾಗಿದ್ದರಿಂದ ಟಿಪ್ಪರ ನಂಬರ ಮತ್ತು ಅದರ ಚಾಲಕನನ್ನು ನೋಡಿರುವುದಿಲ್ಲ. ಈ ಅಪಘಾತಕ್ಕೆ ಕಾರಣನಾದ ಡಿಕ್ಕಿ ಪಡಿಸಿ ಓಡಿ ಹೋದ ಅಪರಿಚಿತ ಟಿಪ್ಪರ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ. 206/2021 ಕಲಂ 279, 338, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಯಾಕ್ಟ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ. 128/2021 ಕಲಂ 363,504,506ಸಂಗಡ 34 ಐ.ಪಿ.ಸಿ : ಇಂದು ದಿನಾಂಕ 03.09.2021 ರಂದು 1500 ಗಂಟೆಗೆ ಇ-ಮೇಲ್ ಮೂಲಕ ಫಿಯರ್ಾದ ಅಜರ್ಿದಾರರಾದ ಶ್ರೀಮತಿ ವೀಣಾ ಕೊಂ. ಅರುಣ ದಾಣಿ ವಯಾ 65 ವರ್ಷಉದ್ಯೋಗ ಮನೆಗೆಲಸ ಸಾ| ಮನೆ ನಂ 166, ಸಿದ್ಧೇಶ್ವರ ಪಾರ್ಕ ಹತ್ತಿರ ವಿದ್ಯಾನಗರ ಹುಬ್ಬಳ್ಳಿ ತಾ| ಹುಬ್ಬಳ್ಳಿ ಜಿಲ್ಲಾ ಧಾರವಾಡ ಇವರ ಅಜರ್ಿ ವಸೂಲಾಗಿದ್ದರ ಸಾರಾಂಶವೇನಂದರೆ ನಿನ್ನೆ ತಾ|31.08.2021 ರಂದು ನನ್ನ ಮಗನಾದ ಪವನ ತಂದೆ ಅರುಣ ದಾಣಿ ಇವನು ಕೆಂಭಾವಿ ಪೋಲಿಸ್ ಠಾಣೆಯ ಪೋಲಿಸ್ ಕರೆಯ ಮೇರೆಗೆ ಹೇಳಿಕೆ ಪಡೆಯುವದಾಗಿ ಕರೆದಿದ್ದರಿಂದ ನನ್ನ ಮಗನು ತಾ| 31.08.2021 ರಂದು ಮುಂಜಾನೆ ಒಂದು ಭಾಡಿಗೆ ಕಾರನ್ನು ಮಾಡಿಕೊಂಡು, ಸದರ ಗಾಡಿಯು ಟೊಯೊಟಾ ಇಟಿಯೊಸ್ ಗಾಡಿಯಾಗಿದ್ದು ಅದರ ನಂ. ಏಂ 29 ಃ1335ನೆ ಇದ್ದು ಅದರ ಚಾಲಕನಾದ ಸಚಿನ ವಿಜಯ ಇಟಿ ಮತ್ತು ನನ್ನ ಮಗನ ವಕೀಲರಾದ ಬಸವರಾಜ ಧಾರವಾಡ ಅವರನ್ನು ಕೂಡಾ ಕರೆದುಕೊಂಡು ಕೆಂಭಾವಿ ಪೋಲಿಸ್ ಠಾಣೆಗೆ ಹೋಗಿದ್ದರು. ಅಲ್ಲಿ ಮುಂಜಾನೆಯಿಂದ ಸಾಯಂಕಾಲದವರೆಗೆಕೆಂಭಾವಿ ಪೋಲಿಸ್ ಠಾಣೆಯ ಪೋಲಿಸರು ನನ್ನ ಮಗನ ವಿಚಾರಣೆ ಮಾಡಿ ನೀನು ಹೋಗಬಹುದು ಅಂತಾ ಹೇಳಿದ್ದರಿಂದ ನನ್ನ ಮಗನು ಅವನ ವಕೀಲರು ಮತ್ತು ಚಾಲಕರೆಲ್ಲರೂ ಸೇರಿ ಕೆಂಭಾವಿ ಪೋಲಿಸ್ ಠಾಣೆಯ ಮುಂದೆಯೇ ನಿಲ್ಲಿಸದ್ದ ತಾವು ತಂದಿದ್ದ ಸದರ ವಾಹನದಲ್ಲಿ ಕುಳಿತು ಕೊಂಡಾಗ, ಅಲ್ಲಿ ಒಮ್ಮಿಂದೊಮ್ಮಲೆ 5 ಜನರು ಬಂದು ನನ್ನ ಮಗನನ್ನು ಜೋರಾ ಜುಲುಮೆಯಿಂದ ಕಾರಿನಿಂದ ಎಳೆದುಕೊಂಡು ಅವರು ತಂದಂತಹ ಕಾರಿನಲ್ಲಿ ಕರೆಯಿಸಿಕೊಂಡು ಹೋಗಿರುವುದಾಗಿ ಚಾಲಕ ಸಚಿನನಿಂದ ತಿಳಿಯಿತು. ಆ ವೇಳೆಯಲ್ಲಿ ನನ್ನ ಮಗನ ವಕೀಲರಾದ ಬಸವರಾಜ ಮತ್ತು ಚಾಲಕನು ಅವನನ್ನು ಯಾಕೆ ಕರೆದುಕೊಂಡು ಹೋಗುತ್ತಿರಿ ಅಂತಾ ಕೇಳಿದ್ದಕ್ಕೆ, ಅದಕ್ಕೆ 5 ಜನರಲ್ಲಿ ಮಲ್ಲಿಕಾಜರ್ುನ ರೆಡ್ಡಿ, ಉಮೇಶ ರೆಡ್ಡಿ, ಮಹೆಶ ರೆಡ್ಡಿ, ಕೃಷ್ಣಾ ಹೊಸಮನಿ ಮತ್ತು ಗ್ಯಾಂಗ್ನಮ್ಮನ್ನು ಏನಂತ ತಿಳಿದಿದ್ದಿರಿ ನಮ್ಮ ಹಿಂದೆ ರಾಜುಗೌಡರು ಇದ್ದಾರೆ ಪೋಲಿಸ್ ಠಾಣೆಯು ನಮ್ಮದೆ ಇದೆ ನೀವೆನು ಹರಿದುಕೊಳ್ಳುತ್ತಿರಿ ಹರಕೊಳಿ ಅಂತಾ ಅವಾಚ್ಯ ಶಬ್ದಗಳಿಂದ ನನ್ನ ಮಗನಿಗೆ ಬೈದಾಡಿದ್ದು ಅಲ್ಲದೇ ಇವನನ್ನು ಬಿಡುವದಿಲ್ಲ ಅವನಿಗೆ ಕೊಲೆ ಮಾಡುತ್ತೇವೆ ನೋಡಿರಿ ಅಂತಾ ಬೆದರಿಸಿ ಹೆದರಿಸಿ ಅವನನ್ನು ಜೋರು ಜುಲುಮೆಯಿಂದ ಎಳೆದುಕೊಂಡು ತಮ್ಮ ಕಾರಿನಲ್ಲಿ ಹಾಕಿಕೊಂಡು ಹೋಗಿದ್ದು ಇರುತ್ತದೆ.ಆ ಸಮಯದಲ್ಲಿ ಚಾಲಕನು ಮತ್ತು ನನ್ನ ಮಗನು ಅಲ್ಲಿಯೇ ಇದ್ದ ಪೋಲಿಸರಿಗೆ ನೀವಾದರೂ ಅವರಿಗೆ ಈ ರೀತಿ ಮಾಡಬಾರದು ಅಂತಾಹೇಳಿರಿ ಅಂತಾ ಪೋಲಿಸರಿಗೆ ಹೇಳಿದರೂ ಪೋಲಿಸರು ಕ್ಯಾರೆ ಅನ್ನದೆ ಮೂಕ ಪ್ರೇಕ್ಷಕರಂತೆ ಸುಮ್ಮನೆ ನೋಡುತ್ತ ನಿಂತಿದ್ದು ಇದೆ.ಮುಂದೆ ದಾರಿ ಕಾಣದೆ ಚಾಲಕ ಮತ್ತು ವಕೀಲರು ಮರಳಿ ಹುಬ್ಬಳ್ಳಿಗೆ ಬಂದು ಈ ವಿಷಯವನ್ನು ನನ್ನ ಮುಂದೆಚಾಲಕ ಸಚಿನ್ ಹೇಳಿದ್ದು ಇರುತ್ತದೆ. ಅದಕ್ಕೆ ನಾನು ಈ ಫಿಯರ್ಾದಿಯನ್ನು ಸಲ್ಲಸಿರುತ್ತೆನೆ.ನನ್ನ ಮಗನನ್ನು ಮಲ್ಲಿಕಾಜರ್ುನ ರೆಡ್ಡಿ, ಮಹೆಶ ರೆಡ್ಡಿ, ಉಮೇಶ ರೆಡ್ಡಿ, ಕೃಷ್ಣಾ ಹೊಸಮನಿ ಮತ್ತು ಅವರ ಗ್ಯಾಂಗ್ ಯಾವ ವೇಳೆಯಲ್ಲಿ ಏನು ಮಾಡುತ್ತಾರೊ ತಿಳಿಯದಾಗಿದೆ. ನನ್ನ ಮಗನಿಗೆ ಜೀವದ ಬೆದರಿಕೆ ಇರುವದರಿಂದ ಅವನು ಜೀವಂತವಾಗಿ ಉಳಿಯುತ್ತಾನೆ ಇಲ್ಲವೊ ನನಗೆ ತಿಳಿಯದಾಗಿದೆ. ಕಾರಣ ನನ್ನ ಮಗನನ್ನು ಬೇಗ ಕರೆದುಕೊಂಡು ತಂದು ನನಗೆ ಒಪ್ಪಿಸಬೇಕು ಮತ್ತು ಮಲ್ಲಿಕಾಜರ್ುನ ರೆಡ್ಡಿ ಉಮೇಶ ರೆಡ್ಡಿ, ಮಹೆಶ ರೆಡ್ಡಿ, ಕೃಷ್ಣಾ ಹೊಸಮನಿ ಹಾಗೂ ಸಹಚರರ ಮೇಲೆ ಕ್ರಮ ಜರುಗಿಸಬೇಕು. ಈ ಹಿಂದೆಯು ಸಹ ಅನೇಕ ಬಾರಿ ಮಲ್ಲಿಕಾಜರ್ುನ ರೆಡ್ಡಿ, ಉಮೇಶ ರೆಡ್ಡಿ ನನಗೆ ಮತ್ತು ನನ್ನ ಗಂಡನಿಗೆ ಹಲವಾರು ಬಾರಿ ಜೀವ ಬೆದರಿಕೆ ಹಾಕಿದ್ದು ನಮ್ಮ ಜೊತೆ ಬಂದವರ ಮೊಬೈಲ್ಗಳಿಗೆ 'ಬೋಳಿ ಮಕ್ಕಳೆ ನರಕ ತೊರಿಸ್ತಿವಿ, ಜಸ್ಟ ವೆಟ್ & ಸಿ' ಮತ್ತು 'ಇನ್ನೊಂದು ಎಫ್ ಆಯ್ ಆರ್ ಹಾಕ್ತಾ ಇದಿನಿ' ಅಂತಾ ಮೆಸೆಜ್ ಹಾಗೂ ಫೋನ್ ನಲ್ಲಿ ಮಾತಾಡಿದ್ದು ಇರುತ್ತದೆ.ನಾನು ಹೆಣ್ಣು ಮಗಳಿದ್ದು ಹಿರಿಯ ನಾಗರಿಕಳಾಗಿದ್ದು ಮಪ್ಪಾವಸ್ಥೆಯ ಬೇನೆಯಿಂದ ಬಳಲುತ್ತಿದ್ದೆನೆ. ನನಗೆ ಪೋಲಿಸ್ ಠಾಣೆಗೆ ಬರಲು ಅಸಾಧ್ಯವಾದ ಕಾರಣ ಈ ಫಿಯರ್ಾದಿಯನ್ನು ಮಿಂಚಂಚೆ(ಇಮೇಲ್) ಮೂಲಕ ಕಳುಹಿಸಿದ್ದು ಇರುತ್ತದೆ.ಕಾರಣ ಮನ್ಯರು ನನ್ನ ಮಗನನ್ನು ಬೇಗನೆತಂದು ನನಗೆ ವಹಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 128/2021 ಕಲಂ 363,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-09-2021 05:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080