ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-10-2022
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 117/2022 ಕಲಂ: 279, 338 ಐಪಿಸಿ : ಇಂದು ದಿನಾಂಕ:03/10/2022 ರಂದು 6-45 ಪಿಎಮ್ ಕ್ಕೆ ಶ್ರೀ ಶಿವರಾಜ ತಂದೆ ಗಂಗಣ್ಣ ಪುಟ್ಟಿ, ವ:36, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ನಾಲ್ವಡಗಿ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ನಮ್ಮಣ್ಣನ ಮಗನಾದ ಗಂಗಾಧರ ತಂದೆ ಈಶಪ್ಪ ಪುಟ್ಟಿ ಸಾ:ನಾಲವಡಗಿ ಈತನು ಪಿ.ಯು.ಸಿ ದ್ವಿತಿಯ ವರ್ಷ ಪಾಸಾಗಿ ಈಗ ಸಿ.ಇ.ಟಿ ಬರೆದಿದ್ದು, ಸದ್ಯ ಮನೆಯಲ್ಲಿ ಇರುತ್ತಾನೆ. ಹೀಗಿದ್ದು ದಿನಾಂಕ:30/09/2022 ರಂದು ಸಾಯಂಕಾಲ ಸಮಯದಲ್ಲಿ ನಾನು ಮನೆಯಲ್ಲಿದ್ದಾಗ ನಮ್ಮಣ್ಣನ ಮಗನಾದ ಗಂಗಾಧರನು ನನ್ನ ಬಳಿ ಬಂದು ಕಾಕಾ ನಾಯ್ಕಲದಲ್ಲಿ ಒಂದು ಪಾರ್ಸಲ್ ಬಂದಿದೆ ಹೋಗಿ ತರಬೇಕಾಗಿದೆ. ನಿಮ್ಮ ಮೋಟರ್ ಸೈಕಲ್ ಕೊಡಿ ಎಂದು ಕೇಳಿದಾಗ ನಾನು ನನ್ನ ಹತ್ತಿರ ಇದ್ದ ನಮ್ಮ ಸಂಬಂಧಿಕರ ಮೋಟರ್ ಸೈಕಲ್ ನಂ. ಕೆಎ 33 ವ್ಹಿ 9184 ನೇದನ್ನು ಕೊಟ್ಟಾಗ ಅವನು ಮೋಟರ್ ಸೈಕಲ್ ತಾನೆ ಚಲಾಯಿಸಿಕೊಂಡು ನಾಯ್ಕಲ್ ಕ್ಕೆ ಹೊದನು. ನಾನು ಮನೆಯಲ್ಲಿದ್ದೆನು. ಸದರಿ ನಮ್ಮಣ್ಣನ ಮಗ ನಾಯ್ಕಲಕ್ಕೆ ಹೋದವನು ಬಹಳ ಹೊತ್ತಾದರು ಮರಳಿ ಬರದ ಕಾರಣ ನಾನು ಅವನ ಮೊಬೈಲ್ ನಂಬರಕ್ಕೆ ಕರೆ ಮಾಡಿದಾಗ ನಾಯ್ಕಲ್ ಸಮೀಪ ಗದ್ದೆ ಲೀಜು ಮಾಡುವ ನಮ್ಮ ಪರಿಚಯದ ರಾಮಕೃಷ್ಣ ತಂದೆ ಸುಬ್ಬರಾವ ಎಂಬುವರು ಕರೆ ಸ್ವಿಕರಿಸಿ ನಿಮ್ಮ ಹುಡುಗನಿಗೆ ರಾಮಲಿಂಗೇಶ್ವರ ಮಠದ ಹತ್ತಿರ ಮೋಟರ್ ಸೈಕಲಗಳ ಅಪಘಾತವಾಗಿದೆ ಎಂದು ಹೇಳಿದನು. ಆಗ ನಾನು ಮತ್ತು ನಮ್ಮಣ್ಣ ಈಶಪ್ಪ ಇಬ್ಬರೂ ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ನಮ್ಮಣ್ಣನ ಮಗ ಗಂಗಾಧರನಿಗೆ ಮೋಟರ್ ಸೈಕಲ್ ಅಪಘಾತದಲ್ಲಿ ಎಡಗಡೆ ಹಣೆಗೆ ಭಾರಿ ರಕ್ತಗಾಯ, ಮೂಗಿಗೆ ಪೆಟ್ಟಾಗಿ ಮೂಗಿನಿಂದ ರಕ್ತ ಬಂದಿದ್ದು, ಬಾಯಿಗೆ ಪೆಟ್ಟಾಗಿ ಹಲ್ಲು ಮುರಿದಿತ್ತು. ಆಗ ಅಲ್ಲಿಯೇ ಇದ್ದ ರಾಮಕೃಷ್ಣನಿಗೆ ಕೆಳಿದಾಗ ಅವನು ನಾನು ರಸ್ತೆ ಪಕ್ಕದಲ್ಲಿ ಗದ್ದೆಗೆ ನೀರು ಬಿಡುತ್ತಿದ್ದಾಗ 6-30 ಪಿಎಮ್ ಸುಮಾರಿಗೆ ನಿಮ್ಮ ಹುಡುಗನು ಮೋಟರ್ ಸೈಕಲ್ ಚಲಾಯಿಸಿಕೊಂಡು ನಾಯ್ಕಲ್ ಕಡೆ ಹೋಗುತ್ತಿದ್ದಾಗ ಎದುರುಗಡೆಯಿಂದ ಮೋಟರ್ ಸೈಕಲ್ ನಂ. ಕೆಎ 33 ಇಬಿ 4895 ನೇದರ ಸವಾರ ಅರುಣ ತಂದೆ ಜೈರಾಮ ರಾಠೋಡ ಸಾ:ನಾಲ್ವಡಗಿ ತಾಂಡಾ ಈತನು ತನ್ನ ಮೋಟರ್ ಸೈಕಲ್ ಅನ್ನು ನಾಯ್ಕಲ್ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಮ್ಮ ಹುಡುಗ ಗಂಗಾಧರನಿಗೆ ಡಿಕ್ಕಿಪಡಿಸಿದನು. ನಾನು ಬಂದು ಗಾಯಾಳುಗಳಿಗೆ ನೋಡುತ್ತಿದ್ದಾಗ ಆತನ ಮೊಬೈಲ್ ಕರೆ ಬಂದಿದ್ದು ನೋಡಿ ಸ್ವಿಕರಿಸಿ ನಿಮಗೆ ಅಪಘಾತದ ಸುದ್ದಿಯನ್ನು ಹೇಳಿದೆನು ಅಂತಾ ಅಂದನು. ನಮ್ಮಣ್ಣನ ಮಗನಿಗೆ ಅಪಘಾತ ಪಡಿಸಿದ ಹುಡುಗನಿಗೆ ನೋಡಲಾಗಿ ಅವನಿಗೆ ಹಣೆಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅರುಣ ತಂದೆ ಜೈರಾಮ ರಾಠೋಡ ಸಾ:ನಾಲ್ವಡಗಿ ತಾಂಡಾ ಎಂದು ಹೇಳಿದನು. ಅವನ ಮೋಟರ್ ಸೈಕಲ್ ನಂ. ನೋಡಲಾಗಿ ಕೆಎ 33 ಇಬಿ 4895 ಇತ್ತು. ಸದರಿ ಅಪಘಾತವು ನಾಯ್ಕಲ್-ಇಬ್ರಾಹಿಂಪೂರ ರೋಡ ರಾಮಲಿಂಗೇಶ್ವರ ಮಠದ ಹತ್ತಿರ ರೋಡಿನ ಮೇಲೆ ಜರುಗಿರುತ್ತದೆ. ನಂತರ ನಾವು ನಮ್ಮಣ್ಣನ ಮಗನಿಗೆ ಉಪಚಾರ ಕುರಿತು ಯಾದಗಿರಿಯ ಶರಣಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೇವು. ಅಲ್ಲಿ ವೈದ್ಯಾಧಿಕಾರಿಗಳು ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದಾಗ ನಾವು ನಮ್ಮ ಹಿರಿಯರಿಗೆ ವಿಚಾರ ಮಾಡಿ ದೂರು ಕೊಡುವುದಿದ್ದರೆ ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ತಿಳಿಸಿರುತ್ತೇವೆ. ಈಗ ನಮ್ಮ ಹಿರಿಯರಿಗೆ ವಿಚಾರಿಸಿದಾಗ ಪೊಲೀಸ್ ಕೇಸು ಮಾಡಿ ಎಂದು ಹೇಳಿದ್ದರಿಂದ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಪಘಾತಪಡಿಸಿದ ಮೋಟರ್ ಸೈಕಲ್ ಸವಾರ ಅರುಣ ತಂದೆ ಜೈರಾಮ ರಾಠೋಡ ಸಾ:ನಾಲ್ವಡಗಿ ತಾಂಡಾ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 117/2022 ಕಲಂ: 279, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 146/2022, ಕಲಂ, 341, 323, 504.506. ಸಂ. 34 ಐ ಪಿ ಸಿ : ಇಂದು ದಿನಾಂಕ 03-10-2022 ರಂದು ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಯಿಂದ ಗಾಯಾಳು ಎಮ್.ಎಲ್.ಸಿ. ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುದಾರಳ ಹೇಳಿಕೆ ಪಡೆದುಕೊಂಡು ಮರಳಿ ಮದ್ಯಾಹ್ನ 12-30 ಗಂಟೆಗೆ ಬಂದು ಹೇಳಿಕೆ ಸಾರಂಶವೇನೆಂದರೆ, ಇಂದು ದಿನಾಂಕ: 03-10-2022 ರಂದು ಬೆಳಿಗ್ಗೆ 08-00 ಗಂಟೆಗೆ ನಾನು ನನ್ನ ಗಂಡ ಚನ್ನಬಸಪ್ಪ ಮತ್ತು ನನ್ನ ಮಗ ನಿಂಗಪ್ಪ ಎಲ್ಲರು ಕೂಡಿ ನಮ್ಮ ಹೊಲಕ್ಕೆ ಶೇಂಗಾ ಬಿತ್ತಲು ಹೋಗಿದ್ದು ನಾವು ಹೊಲದಲ್ಲಿ ಶೇಂಗಾ ಬಿತ್ತುತ್ತಿರುವಾಗ ಕರೆಂಟ್ ಬಂದಿದ್ದರಿಂದ ನನ್ನ ಮಗ ನಿಂಗಪ್ಪ ಈತನು ಗಳೆ ನಿಲ್ಲಿಸಿ ಮೋಟರ ಚಾಲು ಮಾಡಲು ಹೋದನು ನನ್ನ ಗಂಡ ಚನ್ನಬಸಪ್ಪ ಈತನು ಶೇಂಗಾ ಹೊಲದ ಕುಂಟಿ ಹೊಡೆಯಲು ಗಳೆ ಕಟ್ಟಿಕೊಂಡು ಬರಲು ಹೋದನು ಆಗ ನಾನು ಒಬ್ಬಳೆ ಶೇಂಗಾ ಬಿತ್ತುವ ಗಳೆದ ಹತ್ತಿರ ಇದ್ದೆನು, ಅದೆ ಸಮಯಕ್ಕೆ ನಮ್ಮ ಪಕ್ಕದ ಹೋಲದವರಾದ 1) ಶಾಂತಪ್ಪ ತಂದೆ ಸಾಬಣ್ಣ ಡೊಂಕನೋರ, 2) ರಡ್ಡೆಪ್ಪ ತಂದೆ ಸಾಬಣ್ಣ ಡೊಂಕನೋರ, 3) ರೇಣಮ್ಮ ಗಂಡ ಶಾಂತಪ್ಪ ಡೊಂಕನೋರ, 4) ಬಸಮ್ಮ ಗಂಡ ಶಾಂತಪ್ಪ ಡೊಂಕನೋರ ಇವರೆಲ್ಲರು ಕೂಡಿಕೊಂಡು ಬಂದು ಲೇ ಸೂಳೆ ಮಕ್ಕಳೆ ಇದು ನಮ್ಮ ಹೊಲ ಇದೆ ನೀವು ಯಾಕೆ ಬಿತ್ತನೆ ಮಾಡುತಿದ್ದಿರಿ ಸುಳೆ ಮಕ್ಕಳೆ ಅಂತಾ ಬೈದಾಗ ಆಗ ನಾನು ಇದು ನಮ್ಮ ಹೊಲ ಇದೆ ಅಂತಾ ಹೇಳಿದ್ದಕ್ಕೆ ರೇಣಮ್ಮ ಬಸಮ್ಮ ಇವರಿಬ್ಬರು ನನಗೆ ಲೇ ರಂಡಿ ಸೂಳೆ ಮಗಳೆ ಇದು ನಮ್ಮ ಸೇರಿ ಸಂಬಂದಿ ಶಿವಮ್ಮಳ ಹೊಲ ಇದೆ ನಿವು ಯಾಕೆ ಬಿತ್ತನೆ ಮಾಡುತ್ತಿರಿ ಅಂತಾ ಬೈದು ರೇಣಮ್ಮ ಈಕೆಯು ಕೈಯಿಂದ ಕಪಾಳಕ್ಕೆ ಹೊಡೆದು ನೆಲಕ್ಕೆ ಬಿಳಿಸಿದಾಗ ಬಸಮ್ಮ ಈಕೆಯು ಲೇ ಮುದಿ ಸೂಳೆ ನಮ್ಮ ಹೊಲದಲ್ಲಿ ಬಂದು ಬಿತ್ತನೆ ಮಾಡಲು ನಿಮಗೆ ಎಷ್ಟು ಸೊಕ್ಕು ಅಂತಾ ಬೈದು ಕೂದಲು ಹಿಡಿದು ಎಳದಾಡಿರುತ್ತಾಳೆ. ನನಗೆ ಹೊಡೆಯುವದನ್ನು ನೋಡಿ ನನ್ನ ಮಗ ಬಂದಾಗ ಆತನಿಗೆ ಶಾಂತಪ್ಪ ಈತನು ಕೈಯಿಂದ ಎದೆಗೆ ಹೊಡೆದಿರುತ್ತಾನೆ ಆಗ ನನ್ನ ಗಂಡ ಚನ್ನಬಸಪ್ಪ ಈತನು ಜಗಳ ಬಿಡಿಸಲು ಬಂದಾಗ ಆತನಿಗೆ ರೆಡ್ಡಪ್ಪ ಈತನು ಲೇ ಸುಳೆ ಮಕ್ಕಳೆ ಇನ್ನೊಂದು ಸಲ ಈ ಹೊಲದ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೇದರಿಕೆಹಾಕಿರುತ್ತಾರೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 147/2022, ಕಲಂ: 143, 147, 148, 323, 324, 307, 354, 504, 506 ಸಂ.149 ಐ.ಪಿ.ಸಿ : ದಿನಾಂಕ: 03-10-2022 ರಂದು ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ ಅವರು ಪಿಯರ್ಾಧಿ ನಿಡಿದ ಸಾರಂಶವೆನೆಂದರೆ. ದಿನಾಂಕ: 03-10-2022 ರಂದು ಬೆಳಿಗ್ಗೆ 08-15 ಗಂಟೆ ಸುಮಾರಿಗೆ ನಾನು ನನ್ನ ತಾಯಿ ಶರಣಮ್ಮ ಮತ್ತು ನಮ್ಮ ಅಣ್ಣತಮ್ಮರಾದ ಮಲ್ಲಪ್ಪ ತಂದೆ ಹೊನ್ನಿಕೇರಪ್ಪ, ಮಹೇಶ ತಂದೆ ಅಮಾತೆಪ್ಪ, ಅಮಾತೆಪ್ಪ ತಂದೆ ಮಲ್ಲಪ್ಪ, ಎಲ್ಲರು ನಮ್ಮ ಮನೆಯ ಹತ್ತಿರ ಆರೋಪಿತರೆಲ್ಲರು ಕೂಡಿಕೊಂಡು ಕೈಯಲ್ಲಿ ಕೊಡಲಿ ಮತ್ತು ಕಟ್ಟಿಗೆಯ ಬಡಿಗೆಗಳನ್ನು ಹಿಡಿದುಕೊಂಡು ಬಂದು ಲೆ ಸೂಳೆ ಮಕ್ಕಳೆ ನಮ್ಮ ಸಿದ್ದಲಿಂಗಮ್ಮಳ ಹೆಸರಿನಲ್ಲಿರುವ ಹೊಲವನ್ನು ನೀವು ಯಾಕೆ ನಿಮ್ಮ ಹೆಸರಿಗೆ ಮಾಡಿಸಿಕೊಂಡಿರಿ ಸೂಳೆ ಮಕ್ಕಳೆ ಅಂತಾ ಬೈಯುತ್ತಿರುವಾಗ ಆಗ ನಾನು ಅವರಿಗೆ ನಮ್ಮ ತಾಯಿಯ ಹೆಸರಿನಲ್ಲಿರುವ ಹೊಲವನ್ನು ನಮ್ಮ ಹೆಸರಿಗೆ ಮಾಡಿಸಿಕೊಂಡರೆ ನಿಮಗೇನು ಅಂತಾ ಕೇಳಿದ್ದಕ್ಕೆ ಅವರಲ್ಲಿ ಮಲ್ಲಪ್ಪ ತಂದೆ ಸಿದ್ದಯ್ಯ ಇವನು ಲೇ ಸೂಳೆ ಮಗನೆ ಆ ಹೊಲ ನಮ್ಮ ಅತ್ತೆ ಹೆಸರಿನಲ್ಲಿತ್ತು ಮಗನೆ ಅಂತಾ ಬೈದು ನನಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲಿನಿಂದ ನನ್ನ ತಲೆಗೆ ಹೊಡೆದಾಗ ನಾನು ತಪ್ಪಿಸಿಕೊಂಡಾಗ ಆ ಎಟು ನನ್ನ ಮೇಲಕಿಗೆ ಬಿದ್ದು ಗಾಯವಾಗಿರುತ್ತದೆ, ಮತ್ತು ಕಲ್ಲಿನಿಂದ ಹೊಡೆದು ಬಲಗೈಗೆ, ಬಲಗಾಲಿನ ಹೆಬ್ಬರಳಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, ಮತ್ತು ಹೊಟ್ಟೆಗೆ ಸೊಂಟಕ್ಕೆ ಹೊಡೆದು ಗುಪ್ತ ಪೆಟ್ಟು ಮಾಡಿರುತ್ತಾನೆ, ಆಗ ನಮ್ಮ ಮಹೇಶ ಇವನು ಯಾಕೆ ಹೊಡೆಯುತ್ತಿರಿ ಅಂತಾ ಕೇಳಿದ್ದಕ್ಕೆ ಆತನಿಗೆ ಈ ಸೂಳೆ ಮಗನದ್ದು ಬಹಳ ಆಗಿದೆ ನಮ್ಮ ಮಾತು ಕೇಳುವದಿಲ್ಲ ಇವನಿಗೆ ಖಲಾಸ ಮಾಡಿದರೆ ಆರಾಮ ಇರುತ್ತೇವೆ ಅಂತಾ ಆತನಿಗೆ ಕೊಲೆ ಮಾಡುವ ಉದ್ದೇಶದಿಂದ ಮಲ್ಲಿಕಾಜರ್ುನ ಇವನು ಕೊಡಲಿಯಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಬೆನ್ನಿಗೆ ಸೊಂಟಕ್ಕೆ ಹೊಡೆದು ಒಳಪೆಟ್ಟು ಮಾಡಿ, ಎಡಗೈ ಹೆಬ್ಬರಳಿಗೆ ರಕ್ತಗಾಯ ಮಾಡಿರುತ್ತಾನೆ, ಆಗ ನಮ್ಮ ಮಲ್ಲಪ್ಪ ತಂದೆ ಹೊನ್ನಕೇರಪ್ಪ ಈತನು ಜಗಳದಲ್ಲಿ ಅಡ್ಡ ಬಂದಾಗ ಆತನಿಗೆ ಶರಣಬಸವ ಇವನು ಕಟ್ಟಿಗೆಯ ಬಡಿಗೆಯಿಂದ ತಲೆಗೆ, ಹೊಟ್ಟೆಗೆ, ಮೋಣಕಾಲಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ, ಆಗ ಅಮಾತೆಪ್ಪ ತಂದೆ ಮಲ್ಲಪ್ಪ ಈತನು ಅಡ್ಡ ಬಂದಾಗ ಆತನಿಗೆ ಮಲ್ಲಪ್ಪ ತಂದೆ ಗುರುಲಿಂಗಪ್ಪ ಈತನು ಕೈಯಿಂದ ಎದೆಗೆ ಗುದ್ದಿ ಒಳಪೆಟ್ಟು ಮಾಡಿದಾಗ ಆಗ ಶರಣಮ್ಮ ಈಕೆಯು ಜಗಳದಲ್ಲಿ ಬಿಡಿಸಲು ಬಂದಾಗ ಆಕೆಗೆ ಮಲ್ಲಪ್ಪ ತಂದೆ ಸಿದ್ದಯ್ಯ ಈತನು ಕೈಯಿಂದ ಕಪಾಳಕ್ಕೆ ಹೊಡೆದು ಸೀರೆ ಮತ್ತು ಕುಪ್ಪಸ ಹಿಡಿದು ಎಳದಾಡಿ ಅವಮಾನ ಮಾಡಿ ಕೆಳಗೆ ಬಿಳಿಸಿದಾಗ ಗೌರಮ್ಮ, ಶಾಂತಮ್ಮ ಶಾಂಭವಿ ಇವರು ಆಕೆಗೆ ಕೂದಲು ಹಿಡಿದು ಎಳದಾಡಿ ಈ ಸುಳೆ ಮಕ್ಕಳದ್ದು ಸೊಕ್ಕು ಬಹಳ ಆಗಿದೆ ಇವರಿಗೆ ಖಲಾಸ ಮಾಡಿದರೆ ಆ ಹೊಲ ನಮಗೆ ಆಗುತ್ತದೆ ಅಂತಾ ಬೈದು ಲೇ ಸೂಳೆ ಮಕ್ಕಳೆ ಇಲ್ಲಿಗೆೆ ಸುಮ್ಮನಿದ್ದರೆ ಸರಿ ಇಲ್ಲದಿದ್ದರೆ ನಿಮಗೆ ಜೀವ ಖಲಾಸ ಮಾಡುತ್ತೇವೆ ಮಕ್ಕಳೆ ಅಂತಾ ಜೀವದ ಹಾಕಿದ್ದು ಇರುತ್ತದೆ ಅಂತಾ ಪಿಯರ್ಾಧಿ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 148/2022, ಕಲಂ: 143, 147, 148, 323, 324, 307, 354, 504, 506 ಸಂ.149 ಐ.ಪಿ.ಸಿ : ದಿನಾಂಕ: 03-10-2022 ರಂದು ಬೆಳಿಗ್ಗೆ 11-20 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿ ಅವರು ಪಿಯರ್ಾಧಿ ನಿಡಿದ ಸಾರಂಶವೆನೆಂದರೆ. ದಿನಾಂಕ: 03-10-2022 ರಂದು ಬೆಳಿಗ್ಗೆ 09-30 ಗಂಟೆ ಸುಮಾರಿಗೆ ನಾನು ಮತ್ತು ನಮ್ಮವರಾದ ಶರಣಬಸವ ತಂದೆ ಮಲ್ಲಯ್ಯ, ಮಲ್ಲಿಕಾಜರ್ುನ ತಂದೆ ನೀಲಕಂಠಪ್ಪ, ಗುರುರಾಜ ತಂದೆ ಮಲ್ಲಯ್ಯ, ಮಲ್ಲಮ್ಮ ಗಂಡ ನೀಲಕಂಠಪ್ಪ, ಮಲ್ಲಯ್ಯ ತಂದೆ ಗುರಲಿಂಗಪ್ಪ ಎಲ್ಲರು ಮನೆಯ ಹತ್ತಿರ ಕುಳಿತುಕೊಂಡಿರುವಾಗ ಆರೋಪಿತರೆಲ್ಲರು ಕೂಡಿಕೊಂಡು ಕೈಯಲ್ಲಿ ಕಲ್ಲು, ಕಟ್ಟಿಗೆಯ ಬಡಿಗೆ, ಕೊಡಲಿಯನ್ನು ಹಿಡಿದುಕೊಂಡು ಬಂದು ಲೇ ಸೂಳೆ ಮಕ್ಕಳೆ ನಮ್ಮ ಹೊಲದ ಮೇಲೆ ನಿವು ಯಾಕೆ ಕೊರ್ಟಗೆ ಹಾಕಿರಿ ಸೂಳೆ ಮಕ್ಕಳೆ ನಿಮ್ಮ ಸೋಕ್ಕು ಬಹಳ ಆಗಿದೆ ಅಂದು ಅವರಲ್ಲಿ ತಾಯಪ್ಪ ಈತನು ನನಗೆ ಕೊಲೆ ಮಾಡುವ ಉದ್ದೇಶದಿಂದ ಕೊಡಲಿಯಿಂದ ತಲೆಯ ಎಡಭಾಗಕ್ಕೆ ಒಡೆದು ರಕ್ತಗಾಯ ಮಾಡಿ ಬೆನ್ನಿಗೆ ಒಳಪೆಟ್ಟು ಮಾಡಿದನು, ಬಲಗೈ ರಟ್ಟಿಗೆ ರಕ್ತಗಾಯ, ಎಡಗೈ ಮುಷ್ಟಿಗೆ ಒಳಪೆಟ್ಟು ಮಾಡಿದನು, ಆಗ ಶರಣಬಸವ ಈತನು ಅಡ್ಡ ಬಂದಾಗ ಆತನಿಗೆ ಮಲ್ಲಪ್ಪ, ಮಹೇಶ ಇವರು ಕಟ್ಟಿಗೆಯಿಂದ ತಲೆಯ ಎಡಭಾಗಕ್ಕೆ ಹೊಡೆದು ರಕ್ತಗಾಯ ಮಾಡಿ, ಬಲಗೈ ಮೋಣಕೈಗೆ ಒಳಪೆಟ್ಟು ಮಾಡಿರುತ್ತಾನೆ ಎಡಗಡೆ ರಟ್ಟಿಗೆ ಗುಪ್ತ ಪೆಟ್ಟು ಮಾಡಿದ್ದು, ಆಗ ಮಲ್ಲಿಕಾಜರ್ುನ ಈತನು ಜಗಳದಲ್ಲಿ ಅಡ್ಡ ಬಂದಾಗ ಆತನಿಗೆ ಅಮಾತೆಪ್ಪ, ಭೀಮಣ್ಣ ಇವರು ಅದೆ ಕೊಡಲಿಯಿಂದ ತಲೆಯ ಹಿಂದೆ ಹೊಡೆದು ರಕ್ತಗಾಯ ಮಾಡಿ ಬಲಗೈ ಮುಷ್ಟಿ ಮೇಲೆ ಹೊಡೆದು ರಕ್ತಗಾಯ, ಬಲಗಾಲಿನ ಮೊಣಕಾಲಿಗೆ ರಕ್ತಗಾಯ ಮಡಿರುತ್ತಾನೆ, ಗುರುರಾಜ ಈತನು ಬಿಡಿಸಲು ಬಂದರೆ ಆತನಿಗೆ ಕೀರಣಕುಮಾರ, ಹೊನ್ನಕೇರಪ್ಪ ಇವರು ಮತ್ತೆ ಅವರ ಕೈಯಿಂದ ಕೊಡಲಿಯನ್ನು ತೆಗೆದುಕೊಂಡು ತಲೆಗೆ ಹಿಂದೆ ಹೊಡೆದು ರಕ್ತಗಾಯ ಮಾಡಿ ಸೊಂಟಕ್ಕೆ ಮತ್ತು ಬಲಗೈಗೆ ಒಳಪೆಟ್ಟು ಮಾಡಿರುತ್ತಾರೆ, ಆಗ ಮಲ್ಲಮ್ಮ ಈಕೆಯು ಜಗಳದಲ್ಲಿ ಅಡ್ಡ ಬಂದಾಗ ಆಕೆಗೆ ನಾಗಪ್ಪ, ಮಹಾದೇವಪ್ಪ ಇವರು ಕೈಯಿಂದ ಹೊಡೆದು ಕುಪ್ಪಸ ಹಿಡಿದು ಎಳೆದಾಡಿ ಕುಪ್ಪಸ ಅರಿದು ಅವಮಾನ ಮಾಡಿರುತ್ತಾರೆ, ಆಗ ಮಲ್ಲಯ್ಯ ತಂದೆ ಗುರಲಿಂಗಪ್ಪ ಈತನು ಜಗಳದಲ್ಲಿ ಬಂದಾಗ ಆತನಿಗೆ ಖಂಡಪ್ಪ, ಅಜಯ ಇವರು ಕಲ್ಲಿನಿಂದ ತಲೆಗೆ, ಬಲಗೈಗೆ, ಬಲಗಾಲಿಗೆ ಮುಖಕ್ಕೆ ಹೊಡೆದು ಒಳಪೆಟ್ಟು ಮಾಡಿರತ್ತಾರೆ, ಉಳಿದವರು ಎಲ್ಲರು ಲೇ ಸೂಳೆ ಮಕ್ಕಳೆ ನಿಮಗೆ ಸೋಕ್ಕು ಬಹಳ ಆಗಿದೆ ಇವತ್ತು ನಮ್ಮ ಕೈಯಾಗ ಸಿಕ್ಕಿರಿ ಸುಳೆ ಮಕ್ಕಳೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಕೈಯಲ್ಲಿ ಕಟ್ಟಿಗೆ & ಬಡಿಗೆಯಿಂದ ಹೊಡೆಯುತ್ತ ಜೀವದ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಪಿಯರ್ಾಧಿ.