ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-11-2021

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 147/2021 ಕಲಂ. 143,147,323,341,504, ಸಂಗಡ 149.ಐ.ಪಿ.ಸಿ ಕಾಯ್ದೆ : ದಿನಾಂಕ 03-11-2021 ರಂದು 5-40 ಪಿ.ಎಮ ಕ್ಕೆ ಮಲ್ಲಿಕಾಜರ್ುನ ತಂದೆ ಕೃಷ್ಣಪ್ಪ ಹೊಸಮನಿ ವ:20 ವರ್ಷ ಉ:ಆಟೊ ಚಾಲಕ ಜಾ:ಹೊಲೆಯ ಸಾ:ಯಡ್ಡಳ್ಳಿ ತಾ:ಜಿ:ಯಾದಗಿರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೇನೆಂದರೆ ದಿನಾಂಕ 31/10/2021 ರಂದು ನಾನು ಮತ್ತು ನನ್ನ ಸಹೊದರನಾದ ಸಿದ್ದಪ್ಪ ತಂದೆ ಶಂಕ್ರಪ್ಪ,ಮೈಬೂಬ ತಂದೆ ಚಾಂದ ಸಾಬ ಮತ್ತು ಹಣಮಂತ ತಂದೆ ಶರಣಪ್ಪ ಇವರು ರಾತ್ರಿ 9:00 ಗಂಟೆಯ ಸುಮಾರಿಗೆ ಹತ್ತಿಕುಣಿ ಕ್ಯಾಂಪ ಕಡೆಗೆ ಕರೆದುಕೊಂಡು ಹೊಗಿದ್ದು ಹತ್ತಿಕುಣಿ ಕ್ಯಾಂಪ ಬಳಿ ಪರಿಚಯ ವಿರುವ ಕಿರಾಣಿ ಅಂಗಡಿಯ ಹತ್ತಿರ ನೀರಿನ ಬಾಟಲ್ ಕರಿದಿಗೆ ಆಟೊ ನಿಲ್ಲಿಸಿರುತ್ತೆನೆ ಆಗ ಶರಣಪ್ಪ ತಂದೆ ಹಣಮಂತ ತಮ್ಮಣ್ಣನವರ ಕುಡಿದ ಅಮಲಿನಲ್ಲಿ ಬಂದು ಏ ಮಗನೆ ಸಮಯವಾಗಿದೆ ಇಲ್ಲಿ ಏತಕೆ ಗಾಡಿ ನೀಲ್ಲಿಸಿರುವೆ ಎಂದು ಅವಾಚ್ಯವಾಗಿ ನಿಂದಿಸಿ ನನ್ನ ಜಾತಿಯನ್ನು ಕೇಳಿದಾಗ ನಾನು ಹೊಲೆಯ ಎಂದು ಹೇಳಿದಾಗ ಲೇ ಮಕ್ಕಳೆ ಬೇಗ ಹೊಗೊಕೆ ಆಗಲ್ವ ಎಂದು ಕಪಾಳಕ್ಕೆ ಕೈಯಿಂದ ಹೊಡೆದನು ನನ್ನ ಜೊತೆಗೆ ಇದ್ದ ಸಿದ್ದಪ್ಪ ಇತನು ಬಿಡಿಸಲು ಬಂದಾಗ ಅವನಿಗೆ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿ ನೂಕಿ ಕೊಟ್ಟಾಗ ಅವನು ನೆಲಕ್ಕೆ ಬಿದ್ದನು ಆಗ ನಾವು ಇಬ್ಬರೂ ಆಟೊ ಹತ್ತಿ ಮುಂದೆ ಊರಿನ ಸಿಮೆಯ ಹತ್ತಿರ ಬಂದಾಗ ಶರಣಪ್ಪ ತಂದೆ ಹಣಮಂತ ಇತನು ಕೆಲವು ಜನರನ್ನು ಕರೆದು ಅಕ್ರಮ ಕೂಟ ರಚನೆ ಮಾಡಿಕೊಂಡು ಬಂದು ನಮ್ಮನ್ನು ತಡೆದು ಹೊಡೆಯಲು ಪ್ರಾರಂಬಿಸಿದರು ಆಗ ನನಗೆ ಹೊಟ್ಟೆಯ ಎಡಬಾಗದ ಕೇಳಗಡೆ ತರಚಿದ ಗಾಯ ಮತ್ತು ಎಡಗೈ ಮುಂಗೈಗೆ ತರಚಿದ ಗಾಯ ಮತ್ತು ನನ್ನ ಜೊತೆಗೆಯಿದ್ದ ಸಿದ್ದಪ್ಪ ಇತನಿಗೆ ಮುಖಕ್ಕೆ ಕೈಯಿಂದ ಹೊಡೆದು ಗುಪ್ತ ಗಾಯ ಮಾಡಿದ್ದು ಬಲಗಣ್ಣಿಗೆ ಗುಪ್ತ ಗಾಯವಾಗಿರುತ್ತದೆ ಆಗ ನನ್ನೊಂದಿಗೆ ಬಂದಿರುವ ಮೈಬೂಬ ಮತ್ತು ಹಣಮಂತ ಇಬ್ಬರೂ ಈ ಜಗಳವನ್ನು ಬಿಡಿಸಿರುತ್ತಾರೆ.ಮತ್ತು ನಮ್ಮ ಅಣ್ಣನಾದ ಅಜರ್ುನ ಇತನು ಸದರಿ ಜಗಳದ ವಿಷಯ ಕೇಳಿ ಅಲ್ಲಿಗೆ ಬಂದು ನಮಗೆ ಉಪಚಾರ ಕುರಿತು ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರ ನಲ್ಲಿ ಸೇರಿಕೆ ಮಾಡಿದ್ದು ನಾವು ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ಠಾಣೆಗೆ ಬಂದು ದೂರು ಸಲ್ಲಿಸಲು ತಡವಾಗಿರುತ್ತದೆ ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿರುತ್ತದೆ. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 147/2021 ಕಲಂ 143, 147,341, 323, 504.ಸಂ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೋಂಡು ತನಿಖೆ ಕೈಕೊಂಡೆನು.

 

ಸೈದಾಪೂರ ಪೊಲೀಸ ಠಾಣೆ
160/2021 ಕಲಂ. 279, 338 ಐಪಿಸಿ : ದಿನಾಂಕ. 03.11.2021 ರಂದು 11.30 ಗಂಟೆಗೆ ಸರಕಾರಿ ಆಸ್ಪತ್ರೆ, ಸೈದಾಪೂರದಿಂದ ಫೋನ ಮೂಲಕ ಎಮ್.ಎಲ್.ಸಿ ವಸೂಲಾದ ಮೇರೆಗೆ ನಾನು ಸದರಿ ಆಸ್ಪತ್ರಗೆ ಭೇಟಿ ನೀಡಿ ಫಿಯರ್ಾದಿ ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ, ದಿನಾಂಕ. 03.11.2021 ರಂದು ಬೆಳಿಗ್ಗೆ 11.20 ಗಂಟೆಗೆ ಶಾಲೆಗೆ ಇಂಟರವೆಲ ಬಿಟ್ಟ ಸಮಯದಲ್ಲಿ ರೋಡಿನ ಕಡೆಗೆ ಬಂದಾಗ ಕರಿಬೆಟ್ಟ ಕ್ರಾಸ ಕಡೆಯಿಂದ ಬಂದ ಬೊಲೆರೋ ಮ್ಯಾಕ್ಷಿ ಟ್ರಕ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ರಸ್ತೆಯ ಮೇಲೆ ಹೊರಟಿದ್ದ ನನ್ನ ಬಲಗಾಲಿನ ಮೇಲೆ ಹಾಯಿಸಿಕೊಂಡು ಹೋಗಿದ್ದರಿಂದ ಸದರಿ ಅಪಘಾತ ಸಂಭವಿಸಿರುತ್ತದೆ ಅಪಘಾತಪಡಿಸಿದ ಬೋಲೆರೋ ವಾಹನ ಮತ್ತು ಅದರ ಚಾಲಕನ ಹೆಸರು, ವಿಳಾಸ ವಿಚಾರಿಸಲಾಗಿ ವಾಹನ ನಂಬರ ಕೆ.ಎ-33, ಎ-3881 ಮತ್ತು ಚಾಲಕನ ಹೆಸರು ಇಮಾಮಸಾಬ ತಂದೆ ಅಲ್ಲಿಸಾಬ ಮುಲ್ಲಾನ್ನೋರ ವಯ|| 35 ವರ್ಷ, ಜಾ|| ಮುಸ್ಲಿಂ, ಉ|| ಡ್ರೈವರ ಸಾ|| ಸಣ್ಣ ಸಂಬ್ರ ತಾ|| ಗುರುಮಠಕಲ ಜಿ|| ಯಾದಗಿರಿ ಅಂತ ಗೊತ್ತಾಗಿರುತ್ತದೆ. ಅಪಘಾತಪಡಿಸಿ ಭಾರಿ ರಕ್ತಗಾಯ ಮಾಡಿದ ಬೊಲೆರೋ ವಾಹನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 160/2021 ಕಲಂ. 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ ಠಾಣೆ
ಗುನ್ನೆ ನಂ: 82/2021 ಕಲಂ. 323, 324, 504, 506 ಸಂ. 34 ಐಪಿಸಿ : ದಿನಾಂಕ:02/11/2021 ರಂದು ಪಿರ್ಯಾಧಿಯ ಮಗನಾದ ಮಲ್ಲಣ್ಣ ಇತನು ತನ್ನ ಮಗ ಮನೋಜ ವಯ:3 ವರ್ಷ ಇತನಿಗೆ ಸಂಗಡ ಕರೆದುಕೊಂಡು ಹೆಬ್ಬಾಳ(ಕೆ) ಗ್ರಾಮದ ಭೀಮಣ್ಣ ಗುಂತಾ ಇವರ ಮನೆಕಟ್ಟುವ ಕೆಲಸಕ್ಕೆ ಹೋಗಿ ಕೆಲಸ ಮಾಡುತ್ತಿರುವಾಗ ಅದೇ ಗ್ರಾಮದ ನಂದಪ್ಪ ತಂದೆ ಕಾಮರಾಯ ಬಿರಾದಾರ ಇತನು ಅಲ್ಲಿಗೆ ಬಂದಿದ್ದು,ಪಿರ್ಯಾದಿಯ ಮಗ ಇತನು ನಂದಪ್ಪನಿಗೆ ಮಾಮ ನನಗೆ ಕೊಡುವ 30000/- ರೂ. ಕೊಡು ಅಂತಾ ಕೇಳಿದ್ದಾಗ ಏನಲ್ಲೇ ಭೊಸಡಿ ಮಗನ್ಯಾ.. ಎಲ್ಲಿಬೇಕ್ಕಲ್ಲಿ ರೋಕ್ಕಾ.. ಕೇಳತ್ತಿ ಅಂತಾ ಹೊಡೆಬಡೆ ಮಾಡಿದ್ದು, ಹಾಗೂ ಪರಮಣ್ಣ ತಂದೆ ಕಾಮರಾಯ ಬಿರಾದಾರ ಇತನು ಮಲ್ಲಣ್ಣನಿಗೆ ಹೊಟ್ಟೆಗೆ ಜಾಡಸಿ ಒದ್ದಿದ್ದು, ಕಾಮರಾಯ ತಂದೆ ಶಂಕ್ರಪ್ಪ ಬಿರಾದಾರ ಇತನು ಬಡಿಗೆಯಿಂದ ಹೊಡೆದಿದ್ದು ಇರುತ್ತದೆ. ನಂದಪ್ಪನು ಕಲ್ಲಿನಿಂದ ಮಲ್ಲಣ್ಣನಿಗೆ ಹೊಡೆಯಲು ಹೋದಾಗ ಆ ಕಲ್ಲು ಮಲ್ಲಣ್ಣನ ಮಗನಾದ ಮನೊಜನ ತಲೆಯ ಎಡಭಾಗಕ್ಕೆ ಪೆಟ್ಟು ಬಿದಿದ್ದರಿಂದ ಜ್ಞಾನ ತಪ್ಪಿ ಬಿದ್ದಿದ್ದು, ಪಿರ್ಯಾದಿಯು ಮಗ & ಮೊಮ್ಮಗನಿಗೆ ಇಲಾಜು ಕುರಿತು ಹುಣಸಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಅಲ್ಲದೇ ಆರೋಪಿತರು ದೂರವಾಣಿ ಮೂಲಕ ಜೀವ ಬೇದರಿಕೆ ಹಾಕಿರುತ್ತಾರೆ ಅಂತಾ ದೂರಿನ ಸಾರಾಂಶವಿರುತ್ತದೆ.

 

 

ಭೀಗುಡಿ ಪೊಲೀಸ ಠಾಣೆ
ಗುನ್ನೆ ನಂ: 84/2021 ಕಲಂ 87 ಕೆಪಿ ಯ್ಯಾಕ್ಟ : ದಿನಾಂಕ 03/11/2021 ರಂದು 05:00 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಅಣಬಿ ಗ್ರಾಮದಲ್ಲಿನ ಶರಣಯ್ಯತಂದೆ ನಾಗಯ್ಯಗುತ್ತೆದಾರಈತನ ಹೊಟೆಲ್ ಹತ್ತಿರ ಸಾರ್ವಜನಿಕಖುಲ್ಲಾಜಾಗದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, 5.15 ಪಿ.ಎಮ್.ಕ್ಕೆ ಪ್ರಕರಣ ದಾಖಲಿಸಿ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 06.00 ಪಿ.ಎಮ್ ಕ್ಕೆ ದಾಳಿ ಮಾಡಿ ದಾಳಿಯಲ್ಲಿ ಸಿಕ್ಕ 10 ಜನಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 18550/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 04-11-2021 11:02 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080