Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-11-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 159/2022 ಕಲಂ: 457, 380 ಐಪಿಸಿ:ದಿನಾಂಕ 02.11.2022 ರ ಸಮಯ 23:00 ಗಂಟೆಯಿಂದ ದಿನಾಂಕ 03.11.2022 ರ 00:59 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯು ಬಾಡಿಗೆ ಇದ್ದ ಗುರುಮಠಕಲ್ ಪಟ್ಟಣದ ನಾನಾಪೂರ ಏರಿಯಾದ ಮನೆಯೊಗಳಗಿನ ಅಲಮಾರಿಯಲ್ಲಿ ಇಟ್ಟಿದ್ದ 1] 50 ಗ್ರಾಂ ತೂಕದ ತಾಳಿ ಸರ ಅ.ಕಿ-1,50,000/- ರೂ 2] 10 ಗ್ರಾಂ ತೂಕದ ಕೊರಳಲ್ಲಿಯ ಸರ ಅ.ಕಿ-45,000/- ರೂ 3] ನಗದು ಹಣ 90,000/- ರೂ ಹೀಗೆ ಒಟ್ಟು 2,85,000/- ರೂ ನೇದ್ದವುಗಳನ್ನು ಕಳ್ಳತನ ಮಾಡಿಕೊಂಡು ಹೊಗಿದ್ದು ಕಳುವಾದ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ವಿನಂತಿ ಅಂತಾ ಫಿರ್ಯಾದಿ ನೀಡಿದ ಗಣಕೀಕೃತ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ: 159/2022 ಕಲಂ: 457, 380 ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 53/2022 ಕಲಂ 279, 337, 338 ಐಪಿಸಿ: ಇಂದು ದಿನಾಂಕ 03/11/2022 ರಂದು 11-30 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ಮುಕುಂದಯ್ಯ ತಂದೆ ಯಂಕಪ್ಪ ದಾಸರ ವಯ;32 ವರ್ಷ, ಜಾ;ದಾಸರ, ಉ;ಖಾಸಗಿ ಕಂಪ್ಯೂಟರ್ ಆಪರೇಟರ್, ಸಾ;ಕ್ಯಾತನಾಳ ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಖಾಸಗಿಯಾಗಿ ಕಂಪ್ಯೂಟರ್ ಆಪರೇಟರ್ ಅಂತಾ ಯಾದಗಿರಿ ಜಿಲ್ಲಾ ಶಿಕ್ಷಣ ಇಲಾಖೆಯಲ್ಲಿ (ಡಿಸಿ ಕಾಯರ್ಾಲಯ) ಕೆಲಸ ಮಾಡಿಕೊಂಡು ಬಂದಿರುತ್ತೇನೆ. ನಾನು ದಿನಾಲು ಸೈದಾಪುರದಿಂದ ಯಾದಗಿರಿಗೆ ಕೆಲಸ ನಿಮಿತ್ಯ ಬರುವುದು ಹೋಗುವುದು ಮಾಡಿಕೊಂಡು ಬಂದಿರುತ್ತೇನೆ. ಹೀಗಿದ್ದು ದಿನಾಂಕ 31/10/2022 ರಂದು 5-30 ಪಿ.ಎಂ.ಕ್ಕೆ ನನ್ನ ಕೆಲಸ ಮುಗಿಸಿಕೊಂಡು ನಮ್ಮ ಶಿಕ್ಷಣ ಇಲಾಖೆಯಲ್ಲಿ ಎಸ್.ಡಿ.ಎ ಅಂತಾ ಕರ್ತವ್ಯ ನಿರ್ವಹಿಸುವ ಶ್ರೀ ಮಲ್ಲಿಕಾಜರ್ುನ ತಂದೆ ಅಯ್ಯಪ್ಪ ಹೆಡಗಿಮದ್ರಿ ಸಾ;ಯಾದಗಿರಿ ಇವರ ಮೋಟಾರು ಸೈಕಲ್ ಮೇಲೆ ಯಾದಗಿರಿಯ ಡಿಸಿ ಕಾಯರ್ಾಲಯದಿಂದ ಡಿಗ್ರಿ ಕಾಲೇಜವರೆಗೆ ಬಿಡಿ ಅಂದಾಗ ಆಯಿತು ಕೂಡು ಅಂದಾಗ ಅವರ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-5454 ನೇದ್ದರ ಮೇಲೆ ಹೊರಟೆವು. ಮೋಟಾರು ಸೈಕಲನ್ನು ಮಲ್ಲಿಕಾಜರ್ುನ ಇವರೇ ನಡೆಸಿಕೊಂಡು ಹೊರಟಿದ್ದಾಗ ಮಾರ್ಗ ಮದ್ಯೆ ಆರ್.ಟಿ.ಓ ಕಾಯರ್ಾಲಯದ ಹತ್ತಿರ ಸಮಯ ಸಾಯಂಕಾಲ 05-45 ಪಿ.ಎಂ.ಕ್ಕೆ ನಮ್ಮ ಮೋಟಾರು ಸೈಕಲನ್ನು ಮಲ್ಲಿಕಾಜರ್ುನ ಇವರು ಅತೀವೇಗ ಮತ್ತು ಅಲಕ್ಷ್ಯತನದಿಂದ ಒಮ್ಮೊಲೆ ರೈಟ್ ಟರ್ನ ಮಾಡಿದ್ದು, ಇನ್ನೇನು ಆರ್.ಟಿ.ಓ ಕಾಯರ್ಾಲಯದ ಕಡೆಗೆ ಹೊರಟಿದ್ದಾಗ ಅದೇ ಸಮಯಕ್ಕೆ ಒಬ್ಬ ಮೋಟಾರು ಸೈಕಲ್ ಸವಾರನು ತನ್ನ ಮೋಟಾರು ಸೈಕಲನ್ನು ಯಾದಗಿರಿ ಸುಭಾಷ್ ವೃತ್ತದ ಕಡೆಯಿಂದ ವಾಡಿ ರಸ್ತೆ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಾ ನಾನು ನೋಡು ನೋಡುತ್ತಲೇ ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಬಂದು ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ, ಡಿಕ್ಕಿ ಹೊಡೆದ ರಭಸಕ್ಕೆ ಎರಡು ಮೋಟಾರು ಸೈಕಲಗಳು ರಸ್ತೆ ಬದಿಗೆ ಹೋಗಿಬಿದ್ದವು, ಸದರಿ ಅಪಘಾತದಲ್ಲಿ ನನಗೆ ಎದೆಯ ಎಡಭಾಗಕ್ಕೆ ಗುಪ್ತಗಾಯವಾಗಿದ್ದು ಮತ್ತು ಎಡಗಾಲಿನ ತೊಡೆಗೆ ಗುಪ್ತಗಾಯವಾಗಿದ್ದು ಇರುತ್ತದೆ. ನಮ್ಮ ಮೋಟಾರು ಸೈಕಲ್ ನಡೆಸುತ್ತಿದ್ದ ಮಲ್ಲಿಕಾಜರ್ುನ ಇವರಿಗೆ ತಲೆಗೆ ಎಭಾಗಕ್ಕೆ ಭಾರೀ ರಕ್ತಗಾಯ, ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯ, ಎಡಪಕ್ಕೆಗೆ ಗುಪ್ತಗಾಯ, ಎಡಗಾಲಿನ ಮೊಣಕಾಲಿಗೆ ತರಚಿದ ಗಾಯಗಳಾಗಿರುತ್ತವೆ. ನಮಗೆ ಅಪಘಾತ ಪಡಿಸಿದ್ದ ಮೋಟಾರು ಸೈಕಲ್ ನಂಬರ ನೋಡಲಾಗಿ ಅದರ ನಂಬರ ಕೆಎ-33, ಇಬಿ-7028 ನೇದ್ದು ಇರುತ್ತದೆ. ಅದರ ಚಾಲಕನಿಗೆ ವಿಚಾರಿಸಲು ತನ್ನ ಹೆಸರು ಕೈಲಾಸ ತಂದೆ ಉದಯಕುಮಾರ ಚವ್ಹಾಣ ಸಾ;ಮಾಣಿಕ ಪ್ರಭು ಕಾಲನಿ, ಕಲಬುರಗಿ ಅಂತಾ ತಿಳಿಸಿರುತ್ತಾನೆ. ಈ ಅಪಘಾತದಲ್ಲಿ ಆತನಿಗೆ ತಲೆಗೆ, ಕುತ್ತಿಗೆಗೆ, ಭಾರೀ ಗುಪ್ತಗಾಯ, ಮುಖಕ್ಕೆ ತರಚಿದ ಗಾಯಗಳಾಗಿದ್ದು ಕಂಡು ಬಂದಿರುತ್ತದೆ. ಘಟನೆಯ ನಂತರ ಕೈಲಾಸ್ ಈತನು ಅರೆಪ್ರಜ್ಞಾವಸ್ಥೆಯಲ್ಲಿರುತ್ತಾನೆ. ಘಟನಾ ಸ್ಥಳಕ್ಕೆ ನಮಗೆ ಪರಿಚಯ ಇರುವ ಶ್ರೀ ಭರತಕುಮಾರ ತಂದೆ ಶರಣಪ್ಪ ಸಾ;ಯಾದಗಿರಿ ಹಾಗೂ ಶ್ರೀ ಮಲ್ಲಿಕಾಜರ್ುನ ತಂದೆ ಆಶಣ್ಣ ನಕಲರ ಸಾ;ಯಾದಗಿರಿ ಹಾಗೂ ಕೈಲಾಸನ ಸಂಬಂಧಿಕರಾದ ಹರೀಶ್ ತಂದೆ ಲಕ್ಷ್ಮಣ ರಾಠೋಡ ಸಾ;ಕಲಬುರಗಿ ಇವರು ಬಂದು ನಮಗೆ ವಿಚಾರಿಸಿದ್ದು ನಡೆದ ಘಟನೆ ಬಗ್ಗೆ ತಿಳಿಸಿರುತ್ತೇನೆ. ಆಗ ಒಂದು ಖಾಸಗಿ ಆಟೋದಲ್ಲಿ ನಾನು, ಮಲ್ಲಿಕಾಜರ್ುನ ಹಾಗೂ ಕೈಲಾಸ ಇವರಿಗೆ ಉಪಚಾರಕ್ಕಾಗಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನನಗೆ ಹೆಚ್ಚು ನೋವು ಕಂಡು ಬರದ ಕಾರಣ ಸಕರ್ಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿರುವುದಿಲ್ಲ. ಇಂದು ನನಗೆ ಮತ್ತೆ ಎದೆ ನೋವು ಕಾಣಿಸಿಕೊಳ್ಳುತ್ತಿದ್ದು ಆಸ್ಪತ್ರೆಗೆ ಕಳಿಸಿಕೊಡಲು ವಿನಂತಿ ಇರುತ್ತದೆ. ಹೀಗಿದ್ದು ಇಂದು ದಿನಾಂಕ 03/11/2022 ರಂದು ಈ ಘಟನೆಯ ಬಗ್ಗೆ ಕೈಲಾಸನ ಮನೆಯವರು ಹಾಗೂ ಮಲ್ಲಿಕಾಜರ್ುನನ ಮನೆಯವರು ದೂರು ನೀಡಲು ನನಗೆ ತಿಳಿಸಿದ ಮೇರೆಗೆ ಖುದ್ದಾಗಿ ಠಾಣೆಗೆ ಹಾಜರಾಗಿ ದಿನಾಂಕ 31/10/2022 ರಂದು ಸಾಯಂಕಾಲ 5-45 ಪಿ.ಎಂ.ಕ್ಕೆ ಯಾದಗಿರಿ ಆರ್.ಟಿ.ಓ ಕಾಯರ್ಾಲಯದ ಮುಂದೆ ಮುಖ್ಯ ರಸ್ತೆ ಮೇಲೆ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-5454 ನೇದ್ದರ ಸವಾರ ಹಾಗೂ ಮೋಟಾರು ಸೈಕಲ್ ನಂಬರ ಕೆಎ-33, ಇಬಿ-7028 ನೇದ್ದರ ಸವಾರರ ಅತೀವೇಗ ಮತ್ತು ಅಲಕ್ಷ್ಯತನದಿಂದ ಜರುಗಿದ್ದು ಅವರಿಬ್ಬರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ತಡವಾಗಿ ದೂರು ನೀಡಿದ್ದು ಇರುತ್ತದೆ ವಿನಂತಿ ಅಂತಾ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.53/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 191/2022 ಕಲಂ: 279, 337, 338 ಐ.ಪಿ.ಸಿ: ಇಂದು ದಿನಾಂಕ: 03/11/2022 ರಂದು ಸಾಯಾಂಕಾಲ 4-00 ಗಂಟೆಗೆ ಪಿರ್ಯಾದಿ ಶ್ರೀ ಮುಸ್ತಾಪ್ ಯು. ತಂದೆ ಉಸ್ಮಾನ ವಯಾ: 27 ಜಾತಿ: ಮುಸ್ಲಿಂ ಉ: ಖಾಸಗಿ ಕೆಲಸ ಸಾ: ಹಯ್ಯಾಳ(ಬಿ) ತಾ: ಶಹಾಪೂರ ಹಾ:ವ: ಪೈಬರ್-3 ಪುಟ್ಟರಂಗಪ್ಪ ಗಾರ್ಡನ ಪಿ.ಎಸ್.ಕೆ ನಾಯ್ಡು ರೋಡ ಕಾಕಸ್ಟೋನ ದೊಡ್ಡಿಗುಂಟಾ ಬೆಂಗಳೂರ-560005 ಮೋ.ನಂ: 6362786324 ಇದ್ದು, ಈ ಮೂಲಕ ಮಾನ್ಯರವರಲ್ಲಿ ಅಜರ್ಿ ಸಲ್ಲಿಸುವುದೇನಂದರೆ, ಹೀಗಿದ್ದು ನಾನು ಬೆಂಗಳೂರಿನಲ್ಲಿದ್ದಾಗ ನನ್ನ ಚಿಕ್ಕಮ್ಮಳಾದ ರಜಿಯಾ ಬೇಗಂ ಗಂಡ ಖಾಜಾಪಾಷಾ ವಯಾ: 34 ಉ: ಕೂಲಿಕೆಲಸ ಸಾ; ಗುತ್ತಿಪೇಠ ಶಹಾಪೂರ ರವರು ದಿನಾಂಕ: 27/10/2022 ರಂದು ಸಾಯಾಂಕಾಲ 5-00 ಗಂಟೆಗೆ ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ದಿನಾಂಕ:27/10/2022 ರಂದು ಬೆಳಿಗ್ಗೆ 11.00 ಗಂಟೆ ಸುಮಾರಿಗೆ ಶಹಾಪೂರದಿಂದ ಅಣಬಿ ರೋಜಾ ದಗರ್ಾಗೆ ಹೋಗುವ ಕುರಿತು ಶಹಾಪೂರ ನಗರದ ಆಟೋ ನಂ:ಕೆ.ಎ.33/ಎ-0581 ನೇದ್ದರಲ್ಲಿ ನಾನು ಮತ್ತು ನಿನ್ನ ತಮ್ಮನಾದ 1) ಖಾಸಿಂ ಯು ತಂದೆ ಉಸ್ಮಾನ ವಯಾ: 19 ಉ: ವಿದ್ಯಾಥರ್ಿ, ಹಾಗೂ ಅಕ್ಕಳ ಮೊಮ್ಮಕ್ಕಳಾದ 2) ಅಮನ ತಂದೆ ಇಬ್ರಾಹಿಂ ಶೇಖ ವಯಾ: 14 ವರ್ಷ ಉ: ವಿದ್ಯಾಥರ್ಿ ಸಾ: ಪುಣೆ 3) ಆದಿಲ್ ತಂದೆ ಇಬ್ರಾಹಿಂ ಶೇಖ ವಯಾ: 16 ವರ್ಷ ಉ: ವಿದ್ಯಾಥರ್ಿ ಸಾ: ಪುಣೆ ಎಲ್ಲರೂ ಕೂಡಿ ಆಟೋದಲ್ಲಿ ಕುಳಿತು ಹಳಿಸಗರ ದಾಟಿ ಕೆರೆಯ ಹತ್ತಿರ ರಸ್ತೆ ಮೇಲೆ ಹೋಗುವಾಗ ಆಟೋ ಚಾಲಕನಾದ ಸುನಿಲ್ ತಂದೆ ಶಾಂತಪ್ಪ ಕನ್ಯಾಕೋಳುರ ವಯಾ: 23 ಜಾತಿ: ಪ.ಜಾತಿ(ಮಾದಿಗ) ಉ: ಆಟೊಚಾಲಕ ಸಾ: ಶಿರವಾಳ ಈತನು ತನ್ನ ಆಟೋವನ್ನು ಅತೀವೆಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗುತ್ತಾ ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಆಟೋ ಮುಂದಿನ ಗಾಲಿ ಕಟ್ಟಾಗಿ ಆಟೋ ಎಡಬಾಗಕ್ಕೆ ಪಲ್ಟಿ ಆಗಿ ಬಿದ್ದಿದ್ದು, ನನಗೆ ಎಡಗೈ ಮುಷ್ಠಿ ಹತ್ತಿರ ಭಾರೀ ಒಳಪೆಟ್ಟು ಆಗಿದ್ದು ಮತ್ತು ಎಡಕಾಲು ಮೋಳಕಾಲಿಗೆ ರಕ್ತಗಾಯ ಆಗಿರುತ್ತದೆ, ನಿನ್ನ ತಮ್ಮನಾದ ಖಾಸಿಮ್ನಿಗೆ ಕಾಲಿಗೆ, ಎದೆಗೆ, ಕಪಾಳಗೆ ಗದ್ದಕ್ಕೆ, ಎಡಕೈ ಮéುಷ್ಠಿ ಹತ್ತಿರ ರಕ್ತಗಾಯ ಆಗಿದ್ದು, ಅಲ್ಲದೇ ಅಕ್ಕಳ ಮೊಮ್ಮಕ್ಕಳಾದ ಅಮನ ತಂದೆ ಇಬ್ರಾಹಿಂ ಶೇಖ ವಯಾ: 14 ವರ್ಷ ಸಾ: ಪುಣೆ ಈತನಿಗೆ ಹಣೆಗೆ ಮತ್ತು ಮೋಳಕಾಲಿಗೆ, ಮೋಳಕೈಗೆ ತರಚಿದ ರಕ್ತಗಾಯ ಆಗಿರುತ್ತದೆ, ಹಾಗೂ ಆದಿಲ್ ತಂದೆ ಇಬ್ರಾಹಿಂ ಶೇಖ ವಯಾ: 16 ವರ್ಷ ಸಾ: ಪುಣೆ ಈತನಿಗೆ ಬಲಕಾಲ ಹಿಂಬಡಿಗೆ ರಕ್ತಗಾಯ ಆಗಿರುತ್ತದೆ. ಆಟೋ ಚಾಲಕನಿಗೆ ಯಾವುದೆ ರಕ್ತ ಗಾಯಗಳು ಆಗಿರುವುದಿಲ್ಲ, ನಾವೆಲ್ಲರೂ ರಸ್ತೆ ಮೇಲೆ ಚಿರಾಡುವಾಗ ಆಟೋ ಚಾಲಕನಾದ ಸುನಿಲ್ ಈತನು ಅಲ್ಲೇ ರಸ್ತೆ ಮೇಲೆ ಹೋಗುತ್ತಿದ್ದ ಖಾಸಗಿ ವಾಹನದಲ್ಲಿ ಹಾಕಿಕೊಂಡು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಶಹಾಪೂರಗೆ ತಂದು ಸೇರಿಕೆ ಮಾಡಿರುತ್ತಾನೆ. ನಂತರ ನನಗೆ ಮತ್ತು ಖಾಸಿಂ ಇಬ್ಬರಿಗೂ ನಮ್ಮ ಸಂಬಂದಿಯಾದ ರಿಯಾಜ ತಂದೆ ಹನೀಪ್ ಕಂಠಿ ಸಾ: ಗುತ್ತಿಪೇಠ ಶಹಾಪೂರ ಇತನು ಬಂದು ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಮಣೂರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾನೆ ಅಂತಾ ತಿಳಿಸಿದ ಕೂಡಲೇ ನಾನು ಅಂದೇ ರಾತ್ರಿಯೇ ಬೆಂಗಳೂರಿನಿಂದ ಕಲಬುರಗಿಗೆ ಮಣೂರ ಆಸ್ಪತ್ರೆಗೆ ಬಂದು ನೋಡಲಾಗಿ, ಮೇಲೆ ಹೇಳಿದಂತೆ ಇಬ್ಬರಿಗೂ ರಕ್ತಗಾಯಗಳು ಆಗಿರುತ್ತವೆ. ಆದಿಲ್ ತಂದೆ ಇಬ್ರಾಹಿಂ ಶೇಖ ಮತ್ತು ಅಮನ ತಂದೆ ಇಬ್ರಾಹಿಂ ಶೇಖ ಇಬ್ಬರಿಗೆ ಅಷ್ಟೇನೂ ರಕ್ತ ಗಾಯಗಳು ಆಗಿರುವುದಿಲ್ಲ. ನಂತರ ಈ ವಿಷಯದ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ಇಂದು ದಿನಾಂಕ: 03/11/2022 ರಂದು ಠಾಣೆಗೆ ಬಂದು ಪಿರ್ಯಾದಿ ಅಜರ್ಿ ನೀಡಿರುತ್ತೇನೆ. ಕಾರಣ ಬಜಾಜ ಆಟೋ ನಂ: ಕೆ.ಎ.33/ಎ-0581 ನೇದ್ದರ ಚಾಲಕನಾದ ಸುನಿಲ್ ತಂದೆ ಶಾಂತಪ್ಪ ಕನ್ಯಾಕೋಳುರ ವಯಾ: 23 ಜಾತಿ: ಪ.ಜಾತಿ(ಮಾದಿಗ) ಉ: ಆಟೊಚಾಲಕ ಸಾ: ಶಿರವಾಳ ತಾ: ಶಹಾಪೂರ ಈತನು ಶಹಾಪೂರದಿಂದ ಹಳಿಸಗರ ದಾಟಿ ಕೆರೆಯ ಹತ್ತಿರ ರಸ್ತೆ ಮೇಲೆ ಹೋಗುವಾಗ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಆಟೋ ಎಡಭಾಗಕ್ಕೆ ಪಲ್ಟಿಯಾಗಿ ರಸ್ತೆ ಮೇಲೆ ಬಿದ್ದು ಭಾರಿ ಹಾಗೂ ಸಾದಾ ಗಾಯ ಪಡಿಸಿದ್ದು, ಸದರಿ ಬಜಾಜ ಆಟೋ ಚಾಲಕನ ಮೇಲೆ ಕಾನೂನ ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 191/2022 ಕಲಂ: 279, 337, 338 ಐಪಿಸಿ ಯಾಕ್ಟ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತೇನೆ.

ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: ಕಲಂ. 279 337 338 ಐಪಿಸಿ:ದಿನಾಂಕ:03/11/2022 ರಂದು ಮದ್ಯಾಹ್ನ 14.30 ಪಿ.ಎಮ್ ಸುಮಾರಿಗೆ ಫಿರ್ಯಾದಿಯ ಮಗನಾದ ತಿರುಪತಿ ಇತನು ತಾವು ಲೀಜಿಗೆ ಮಾಡಿದ ಹತ್ತಿ ಬೆಳೆಗೆ ಹೊಲಕ್ಕೆ ನೀರು ಬಿಡಲು ಹುಣಸಗಿ- ಬೆನಕನಹಳ್ಳಿ ರಸ್ತೆಯ ಮೇಲೆ ರಸ್ತೆಯ ಎಡಗಡೆ ನಡಡೆದುಕೊಂಡು ಹೊರಟಾಗ ಹೆಬ್ಬಾಳ(ಕೆ) ಗ್ರಾಮದ ಪಾದಗಟ್ಟಿಯ ಸಮೀಪ ರಸ್ತೆಯ ಮೇಲೆ ಆರೋಪಿತನಾದ ರಾಘವೇಂದ್ರ ಇತನು ಹೆಬ್ಬಾಳ(ಕೆ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ತನ್ನ ಹೋಟಲ್ ತೆರೆಯಲು ಬೆಳಗ್ಗೆ 6 ಗಂಟೆಗೆ ದೇವತಕಲ್ ಗ್ರಾಮದಿಂದ ಬರುವಾಗ ತನ್ನ ಮೋಟಾರ್ ಸೈಕಲ್ ನಂ: ಕೆಎ-33 ಇಬಿ-4815 ನೇದ್ದನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಗಡೆ ನಡೆದುಕೊಂಡು ಹೊಟರ ತಿರುಪತಿಗೆ ಜೊರಾಗಿ ಡಿಕ್ಕಿ ಕೊಟ್ಟಿದ್ದರಿಂದ ತಿರುಪತಿ ಇತನು ಕೆಳಗೆ ಬಿದ್ದು ತಲೆಗೆ & ಬಲಗಾಲಿಗೆ ಭಾರಿ & ಸಾದಾ ರಕ್ತಗಾಯಳಾದ ಬಗ್ಗೆ ಅಪರಾಧ.

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: ಕಲಂ.32, 34 ಕನರ್ಾಟಕ ಅಬಕಾರಿ ಕಾಯ್ದೆ: ದಿನಾಂಕ:03.11.2022 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ಆರೋಪಿತನು ಅಭಕಾರಿ ಇಲಾಖೆಯಿಂದಾ ಅಧೀಕೃತವಾಗಿ ಯಾವುದೇ ಪರವಾನಿಗೆಯನ್ನು ಪಡೆಯದೇ ತನ್ನ ಮನೆಯ ಹತ್ತಿರ ಅಕ್ರಮವಾಗಿ ಮದ್ಯ ಸಂಗ್ರಹಣೆ ಮಾಡಿಕೊಂಡು ಮಾರಾಟ ಮಾಡುತ್ತಿದ್ದು, ಈ ಮೇಲ್ಕಂಡ ಪಿಯರ್ಾದಿ ಹಾಗೂ ಪಂಚರು ಮತ್ತು ಸಿಬ್ಬಂದಿಯಾದ ಹೆಚ್ಸಿ-120, 132 ಪಿಸಿ-110, 83, 76 ರವರೊಂದಿಗೆ ದಾಳಿ ಮಾಡಿ ಆರೋಪಿತನ ಹತ್ತಿರ ಇದ್ದ ಕಾಲಂ ನಂ.10 ರಲ್ಲಿ ನಮೂದ ಮಾಡಿದ ಒಟ್ಟು 1575/-ರೂ ಕಿಮ್ಮತ್ತಿನ ಮದ್ಯವನ್ನು ಜಪ್ತಿ ಮಾಡಿದ್ದು ಅಂತಾ ಜಪ್ತಿ ಪಂಚನಾಮೆಯನ್ನು & ಪಿಎಸ್ಐ ರವರು ಕೊಟ್ಟ ಜ್ಞಾಪನ ಪತ್ರದ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

Last Updated: 05-11-2022 11:24 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080