ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-12-2021

ಯಾದಗಿರ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 63/2021 ಕಲಂ 279, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 03/12/2021 ರಂದು ಸಮಯ 5-15 ಪಿ.ಎಂ.ಕ್ಕೆ ಯಾದಗಿರಿ ಜಿಜಿಎಚ್ನಿಂದ ರಸ್ತೆ ಅಪಘಾತದ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮಾಡಿ ತಿಳಿಸಿದ್ದರಿಂದ ವಿಚಾರಣೆ ಕುರಿತು ಆಸ್ಪತ್ರೆಗೆ ತೆರಳಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ವಿಚಾರಣೆ ನಂತರ, ಗಾಯಾಳುವಿನ ಹೆಂಡತಿಯಾದ ಪಿಯರ್ಾದಿ ಶ್ರೀಮತಿ ವಿದ್ಯಾಶ್ರೀ ಗಂಡ ಮನೋಜಕುಮಾರ ಬಡಿಗೇರ ವಯ;25 ವರ್ಷ, ಜಾ;ಪ.ಜಾತಿ(ಹೊಲೆಯ), ಉ;ಹಾಸ್ಟೆಲ್ ಕುಕ್, ಸಾ;ಚಿರಂಜೀವಿ ನಗರ ಯಾದಗಿರಿ ರವರು ಘಟನೆ ಬಗ್ಗೆ ತಮ್ಮದೊಂದು ಹೇಳಿಕೆ ಪಿಯರ್ಾದು ನೀಡಿದ್ದನ್ನು ಸಮಯ 5-30 ಪಿ.ಎಂ.ದಿಂದ 6-30 ಪಿ.ಎಂ.ದ ವರೆಗೆ ಪಡೆದುಕೊಂಡಿದ್ದರ ಸಾರಾಂಶವೇನೆಂದರೆ ನಾನು ಹಾಸ್ಟೆಲ್ ಕುಕ್ ಅಂತಾ ಕೆಲಸ ಮಾಡಿಕೊಂಡು ನನ್ನ ಕುಟುಂಬದೊಂದಿಗೆ ಉಪ ಜೀವಿಸುತ್ತೇನೆ. ಇಂದು ದಿನಾಂಕ 03/12/2021 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನನ್ನ ಗಂಡನಾದ ಮನೋಜಕುಮಾರ ತಂದೆ ದೊಡ್ಡಪ್ಪ ಬಡಿಗೇರ ವಯ;26 ವರ್ಷ, ಇವರು ಮದುವೆ ಸಮಾರಂಭದ ಡೆಕೋರೇಶನ್ ಕೆಲಸ ಮಾಡಲು ನಮ್ಮ ಮೋಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-33, ಎಸ್-4087 ನೇದ್ದನ್ನು ತೆಗೆದುಕೊಂಡು ಹೋಗಿದ್ದು ಇರುತ್ತದೆ. ಹೀಗಿದ್ದು ನಾನು ಮನೆಯಲ್ಲಿದ್ದಾಗ ಸಮಯ 10-30 ಎ.ಎಂ. ದ ಸುಮಾರಿಗೆ ನಮಗೆ ಪರಿಚಯ ಇರುವ ಅಂಬೇಡ್ಕರ್ ನಗರದ ಶ್ರಿ ಪರಶುರಾಮ್ ತಂದೆ ಮಲ್ಲಪ್ಪ ಒಡೆಯರ್ ಇವರು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ ಈಗಷ್ಟೇ ನಾನು ಮತ್ತು ನನ್ನ ಸ್ನೇಹಿತನಾದ ತಿಮ್ಮಣ್ಣ ತಂದೆ ಹಣಮಂತ ರಾಯಚೂರಕರ್ ಇಬ್ಬರು ಹೊಸಳ್ಳಿ ಕ್ರಾಸ್ ಹತ್ತಿರ ನಿಂತಿದ್ದಾಗ ಅದೇ ಸಮಯಕ್ಕೆ ನಾವು ನೋಡು ನೋಡುತ್ತಿದ್ದಂತೆ ಹೊಸ ಬಸ್ ನಿಲ್ದಾಣದ ಕಡೆಯಿಂದ ನಿನ್ನ ಗಂಡನಾದ ಮನೋಜಕುಮಾರ ಈತನು ತನ್ನ ಮೋಟಾರು ಸೈಕಲನ್ನು ಹೊಸ ಬಸ್ ನಿಲ್ದಾಣದ ಕಡೆಯಿಂದ ಗಂಜ್ ಕಡೆಗೆ ಹೊರಟಿದ್ದಾಗ ಹೊಸಳ್ಳಿ ಕ್ರಾಸ್ ಕಡೆಯಿಂದ ಜಿಲ್ಲಾಸ್ಪತ್ರೆ ಕಡೆಗೆ ಹೊರಟಿದ್ದ ಒಂದು ಬುಲೆರೋ ಜೀಪ್ ವಾಹನ ನಂ.ಕೆಎ-33, ಎ-7526 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ರಸ್ತೆಯನ್ನು ಕ್ರಾಸ್ ಮಾಡುವಾಗ ನಿನ್ನ ಗಂಡನ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿರುತ್ತಾನೆ. ಆಗ ನಾವಿಬ್ಬರು ಘಟನಾ ಸ್ಥಳದ ಹತ್ತಿರಕ್ಕೆ ಹೋಗಿ ನೋಡಲಾಗಿ ಸದರಿ ಅಪಘಾತದಲ್ಲಿ ನಿನ್ನ ಗಂಡನಿಗೆ ಬಲಗೈ ಭುಜಕ್ಕೆ, ಎದೆಗೆ ಭಾರೀ ಗುಪ್ತಗಾಯವಾಗಿದ್ದು ಮತ್ತು ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ. ಈ ಅಪಘಾತವು ಇಂದು ದಿನಾಂಕ 03/12/2021 ರಂದು ಸಮಯ 10 ಎ.ಎಂ.ದ ಸುಮಾರಿಗೆ ಜರುಗಿರುತ್ತದೆ. ಅಪಘಾತಪಡಿಸಿದ ಜೀಪ್ ಚಾಲಕನು ಘಟನಾ ಸ್ಥಳದಲ್ಲಿದ್ದು ನಿನ್ನ ಗಂಡನು ನಡೆಸಿಕೊಂಡು ಬಂದ ಮೊಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-33, ಎಸ್-4087 ನೇದ್ದು ಇರುತ್ತದೆ. ನಾವುಗಳು ನಿನ್ನ ಗಂಡನಿಗೆ ಅಪಘಾತಪಡಿಸಿದ ಜೀಪಿನಲ್ಲಿಯೇ ಉಪಚಾರ ಕುರಿತು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ನೀವು ಕೂಡಲೇ ಯಾದಗಿರಿ ಸಕರ್ಾರಿ ಬರಬೇಕು ಅಂತಾ ತಿಳಿಸಿರುತ್ತಾರೆ ಆಗ ನನಗೆ ಗಾಬರಿಯಾಗಿ ಒಂದು ಖಾಸಗಿ ಆಟೋದಲ್ಲಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ನೋಡಲು ನನ್ನ ಗಂಡನು ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದು ಆತನಿಗೆ ನಾನು ಘಟನೆ ಬಗ್ಗೆ ವಿಚಾರಿಸಲು ನನಗೆ ಈ ಮೇಲೆ ಪೋನಿನಲ್ಲಿ ತಿಳಿಸಿದಂತೆ ಘಟನೆ ಜರುಗಿದ್ದು ನಿಜ ಇರುತ್ತದೆ. ನಾವುಗಳು ನನ್ನ ಗಂಡನಿಗೆ ಉಪಚಾರ ಕೊಡಿಸುತ್ತಿದ್ದಾಗ ಅಪಘಾತಪಡಿಸಿದ ಬುಲೆರೋ ಜೀಪ್ ಚಾಲಕನು ಆಸ್ಪತ್ರೆಯಿಂದ ತನ್ನ ಜೀಪ್ ಸಮೇತ ಓಡಿ ಹೋಗಿರುತ್ತಾನೆ, ನಾವುಗಳು ಆತನನ್ನು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಹೀಗಿದ್ದು ಇಂದು ದಿನಾಂಕ 03/12/2021 ರಂದು ಬೆಳಿಗ್ಗೆ 10 ಎ.ಎಂ.ದ ಗಂಟೆ ಸುಮಾರಿಗೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಹತ್ತಿರ ನನ್ನ ಗಂಡನ ಮೊಟಾರು ಸೈಕಲ್ ಸ್ಕ್ಯೂಟಿ ನಂಬರ ಕೆಎ-33, ಎಸ್-4087 ನೇದ್ದನ್ನು ನಡೆಸಿಕೊಂಡು ಹೊರಟಿದ್ದಾಗ ಬುಲೆರೋ ಜೀಪ್ ವಾಹನ ನಂ.ಕೆಎ-33, ಎ-7526 ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನನ್ನ ಗಂಡನ ಮೊಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಘಟನೆ ಜರುಗಿದ್ದು ನನ್ನ ಗಂಡನಿಗೆ ಯಾದಗಿರಿಯಲ್ಲಿ ಉಪಚಾರ ನೀಡಿದ ವೈದ್ಯರು ಹೆಚ್ಚಿನ ಉಪಚಾರಕ್ಕಾಗಿ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ್ದು, ಈ ಘಟನೆ ಬಗ್ಗೆ ನಮ್ಮ ಮನೆಯಲ್ಲಿ ವಿಚಾರಿಸಿ ತಡವಾಗಿ ಪಿಯರ್ಾದಿ ನೀಡುತ್ತಿದ್ದು, ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ 6-45 ಪಿ.ಎಂ.ಕ್ಕೆ ಬಂದು ಪಿಯರ್ಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 63/2021 ಕಲಂ 279, 338 ಐಪಿಸಿ ಸಂ. 187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 173/2021 ಕಲಂ 379 ಐಪಿಸಿ : ಇಂದು ದಿನಾಂಕ: 03.12.2021 ರಂದು ಮಧ್ಯಾಹ್ನ 3.00 ಗಂಟೆಗೆ ಶ್ರೀ ಶ್ರೀ ಲಿಂಗರಾಜ ತಂದೆ ಕುಪ್ಪೇರಾಯ ವಯ|| 31 ವರ್ಷ ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಯಾದಗಿರಿ ಜಿಲ್ಲೆ ಸಾ|| ಹಟ್ಟಿ ತಾ|| ಲಿಂಗಸೂಗುರ ಜಿ|| ರಾಯಚೂರ ಇವರು ಸೈದಾಪೂರ ಠಾಣೆಗೆ ಹಾಜರಾಗಿ ಒಂದು ಜಪ್ತಿಪಂಚನಾಮೆಯನ್ನು ಹಾಜರಪಡಿಸಿ ಬೆಲೆ ಬಾಳುವ ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಗೌಡಗೇರಾ ಹಳ್ಳದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಜಮೀನ ಸವರ್ೇ ನಂ. 65 ರಲ್ಲಿ ಸಂಗ್ರಹಿಸಿದ್ದು ಸದರಿ ಜಮೀನು ಮಾಲಿಕರಾದ ಶ್ರೀಮತಿ ಹಣಮವ್ವ ಗಂಡ ಹಣಮಂತ ಸಾ|| ಗೌಡಗೇರಾ ಇವರ ಮೇಲೆ ಸೂಕ್ರ ಕ್ರಮ ಕೈಗೊಳ್ಳಲು ವರದಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 173/2021 ಕಲಂ 379 ಐಪಿಸಿ ಮತ್ತು 21(3),(4) ಮತ್ತು 22 ಎಮ್.ಎಮ್.ಆರ್.ಡಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಕೆಂಭಾವಿ ಪೊಲೀಸ ಠಾಣೆ
ಗುನ್ನೆ ನಂ 172/2021 ಕಲಂ: 504,506 ಐಪಿಸಿ : ಇಂದು ದಿನಾಂಕ: 03.12.2021 ರಂದು 1415 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರೀ ಪದ್ಮೇಶ ತಂದೆ ಸಿದ್ದಪ್ಪ ಅಗ್ನಿ[ಪೂಜಾರಿ] ವ|| 26 ಜಾ|| ಕುರಬರ ಉ|| ಕೂಲಿಕೆಲಸ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಹೀಗಿರುವಾಗ ಅಂದಾಜು ಎರಡು ತಿಂಗಳುಗಳ ಹಿಂದೆ ನಮ್ಮೂರಿನ ಕೃಷ್ಣಾರಡ್ಡಿ ತಂದೆ ಗೋಪಾಲರಡ್ಡಿ ಹೊಸ್ಮನಿ ವ|| 30 ಇವನು ನನಗೆ ಪೋನ ಮಾಡಿ ಭಯೋತ್ಪಾದಕನ ರೀತಿಯಲ್ಲಿ ಹಲವು ಕೆಟ್ಟ ಶಬ್ದಗಳನ್ನು ಬಳಸಿ ಕೊಲೆ ಬೆದರಿಕೆ ಹಾಕಿ ಲೇ ಪದ್ಮೇಶ ಎಲ್ಲಿದ್ದೀಯಾ ಬೋಸಡಿ ಸೂಳೇ ಮಗನೇ ರಾಜಾ ವೆಂಕಟಪ್ಪನ ಫೋಟೋ ಹಾಕಿ ಮೆರೆತಿದ್ದೀಯಾ ನಾನು ರಾಹುಗೌಡನ ಅಭಿಮಾನಿ ರಾಜುಗೌಡನನ್ನು ಬಿಟ್ಟು ಯಾರ ಫೊಟೋ ಹಾಕಬಾಎದು , ನಿನ್ನ ತಲೆ, ಕಾಲು ತುಣುಕು, ತುಣುಕು ಮಾಡಿ ಹಾಕುತ್ತೇನೆ ಎಂದು ದಬಾಯಿಸಿದ್ದಾನೆ. ಇದು ಜಾಲತಾಣದಲ್ಲಿ ದಾಖಲಾಗಿದೆ. ಇದನ್ನು ತಾವು ಅತ್ಯಂತ ಸೂಕ್ಷ್ಮವಾಗಿ ಪರಿಗಣಿಸಬೇಕು. ಇದೇ ರೀತಿ ಸಾಕಷ್ಟು ಸಲ ನನಗೆ ಭಯೋತ್ಪಾದನೆ ಹಾಕಿದ್ದಾನೆ. ನೀನು ಪೋನ ರಿಕಾರ್ಡ ಮಾಡಿದರೆ ನಿನ್ನನ್ನು ಜೀವಂತ ಉಳಿಸುವದಿಲ್ಲ ಹಾಗು ದಿನಾಂಕ 28.11.2021 ರಂದು ರಾತ್ರಿ 10 ಗಂಟೆಗೆ ಮುದನೂರಿನ ನಮ್ಮ ಮನೆಯಲ್ಲಿದ್ದಾಗ ಪುನಃ ಮನೆಗೆ ಬಂದು ಕೈಯಲ್ಲಿ ಕತ್ತಿ, ಹಾಗು ಬಡಿಗೆ ಹಿಡಿದುಕೊಂಡು ಬಂದು ನಿನ್ನ ಮುಗಿಸಿಯೇ ಬಿಡುತ್ತೇನೆಂದು ನನ್ನ ಹತ್ತಿರ ಬಂದಾಗ ರಾತ್ರಿಯಲ್ಲಿ ತಪ್ಪಿಸಿಕೊಂಡು ಓಡಿ ಹೋಗಿದ್ದು ಇಲ್ಲವಾದಲ್ಲಿ ನನ್ನನ್ನು ಖಂಡೀತವಾಗಿ ಅಪಹರಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದ. ಹಾಗು ಅದೇ ಗ್ರಾಮದ ಮುಖಂಡರಾದ 1] ಪ್ರಶಾಂತ ಸಾಹುಕಾರ 2] ಸಿದ್ದಣಗೌಡ ಪಡೆಕನೂರ ನನಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ. ಇಲ್ಲದಿದ್ದರೇ ನನ್ನ ಜೀವನ ಉಳಿಯುತ್ತಿರಲಿಲ್ಲ. ದಯವಿಟ್ಟು ನನಗೇ ಮುದನೂರಿನಲ್ಲಿ ಜೀವಿಸುವದು ಹಾಗು ಹೊಲಮನೆಗೆ ತಿರುಗಾಡುವದು ತುಂಬಾ ಕಷ್ಟವಾಗಿದ್ದು ಯಾವ ಸಮಯದಲ್ಲಿ ನನ್ನ ಜೀವ ಹೋಗುತ್ತದೆಯೋ ಎಂಬ ಭಯ ಕಾಡುತ್ತಿದೆ. ದಿನಾಲು ಕೃಷ್ಣಾರಡ್ಡಿ ಎಂಬವ ಭಯೋತ್ಪಾದಕನ ರೀತಿಯಲ್ಲಿ ವರ್ತನೆ ಮಾಡುತ್ತಿರುವದರಿಂದ ಮಾನ್ಯರವರಾದ ತಾವುಗಳು ಅವನ ವಿರುದ್ದ ತೀವ್ರ ಕಠಿಣವಾದ ಕಾನೂನು ಕ್ರಮ ಜರುಗಿಸಿ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಪ್ರಾರ್ಥನೆ. ಅಂತ ಅಜರ್ಿ ನೀಡಿದ್ದು ಸದರಿ ಪಿರ್ಯಾದಿ ಅಜರ್ಿಯು ಅಸಂಜ್ಞೆಯ ಅಪರಾಧವಾಗಿದ್ದು, ಕಾರಣ ಪ್ರಕರಣ ದಾಖಲಿಸಲು ಪರವಾನಿಗೆ ಕುರಿತು ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿದ್ದು ಮಾನ್ಯ ನ್ಯಾಯಾಲಯು 5 ಪಿ ಎಮ್ ಕ್ಕೆ ಪ್ರಕರಣ ದಾಖಲಿಸಲು ಪರವಾನಿಗೆ ನೀಡಿದ್ದು ಕಾರಣ ಮರಳಿ ಠಾಣೆಗೆ ರಾತ್ರಿ 08.15 ಪಿಎಮ್ ಕ್ಕೆ ಬಂದು ಸದರಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 172/2021 ಕಲಂ 504,506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 04-12-2021 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080