ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 04-12-2022
ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 131/2022 ಕಲಂ 457, 380 ಐಪಿಸಿ : ದಿನಾಂಕ 03.12.2022 ರಂದು ಮಧ್ಯಾಹ್ನ 12.30 ಗಂಟೆಗೆ ನರಸಪ್ಪ ತಂದೆ ಭೀಮಪ್ಪ ಗುಡ್ಲ, ವ|| 28 ವರ್ಷ, ಜಾ|| ಕಬ್ಬಲಿಗ, ಉ|| ಆರ್ಸಿಪಿಜಿ ಸೆಕ್ಯೂರಿಟಿ ಸೂಪ್ರವೈಸರ್ ಯಾದಗಿರಿ, ಸಾ|| ಮಾದ್ವಾರ ಗ್ರಾಮ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ 26.11.2022 ರಂದು ಸಂಜೆ 5 ಗಂಟೆಗೆ ಬಾಡಿಯಾಳ ಗ್ರಾಮದಲ್ಲಿರುವ ಇಂಡಸ್ ಟವರ್ ಐಡಿ ನಂಬರ 1094144 ಮತ್ತು ಸೈಟ್ ಐಡಿ ನಂಬರ ಃಆಙಂಐ-1 ನೇದ್ದರಿಂದ ನಮ್ಮ ಟೆಕ್ನಶನ್ ಆದ ಸಾಬಣ್ಣ ತಂದೆ ಯಂಕಪ್ಪ ಬಾಗಲಿ ಬಾಡಿಯಾಳ ಗ್ರಾಮ ಈತನು ನನಗೆ ಕರೆಮಾಡಿ ತಿಳಿಸಿದ್ದೆನೆಂದರೆ ತಾನು ಸದರಿ ಸೈಟ್ಗೆ ಭೇಟಿ ಕೊಟ್ಟಾಗ 24 ಬ್ಯಾಟರಿ ಬ್ಯಾಂಕ್ ಸೆಲ್ಗಳ ಪೈಕಿ 23 ಸೆಲ್ಗಳು ಕಳ್ಳತನ ಆಗಿರುತ್ತವೆ ಅಂತಾ ತಿಳಿಸಿದ.
    ನಾನು ದಿನಾಂಕ 27.11.2022 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾಡಿಯಾಳ ಸೈಟಿಗೆ ಹೋಗಿ ಪರಿಶೀಲಿಸಿದಾಗ ಶೆಲ್ಟರನ ಬೀಗ ಮುರಿದಿತ್ತು ಶೆಲ್ಟರ ಒಳಗಡೆಯಿದ್ದ ಚಾಲ್ತಿಯಲ್ಲಿಲ್ಲದ ಹಳೆ ಬ್ಯಾಟರಿ ಬ್ಯಾಂಕ ಸೆಲ್ಗಳ ನಟ್ ಬೋಲ್ಟಗಳನ್ನು ಬಿಚ್ಚಿ 24 ಸೆಲ್ಗಳ ಪೈಕಿ 23 ಬ್ಯಾಟರಿ ಸೆಲ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಂಡುಬಂತು. ಈ ಘಟನೆಯ ಬಗ್ಗೆ ನಮ್ಮ ಕಂಪನಿಯ ಮೇಲಾಧಿಕಾರಿಗಳಿಗೆ ತಿಳಿಸಿ ಕೇರ್ ಟೇಕರ್ ಮಹೇಶ ಘಂಟಿ, ಈಖಇ ಮತ್ತು ಟೆಕ್ನಿಶನ್ನೊಂದಿಗೆ ಸಮಾಲೋಚನೆ ಮಾಡಿ ಬಾಡಿಯಾಳ ಗ್ರಾಮದಲ್ಲಿ ವಿಚಾರಿಸಿದ್ದು ಎಲ್ಲಿಯೂ ಯಾವ ಮಾಹಿತಿ ಸಿಗದಿದ್ದರಿಂದ ತಡವಾಗಿ ಇಂದು ಠಾಣೆಗೆ ಬಂದು ಫಿಯರ್ಾದಿ ನೀಡಿರುತ್ತೇನೆ. ಕಾರಣ ದಿನಾಂಕ 25.11.2022 ರಂದು ಸಾಯಂಕಾಲ 7 ಗಂಟೆಯಿಂದ ದಿನಾಂಕ 26.11.2022 ರ ಬೆಳಿಗ್ಗೆ 6 ಗಂಟೆಯ ಮಧ್ಯದ ಅವಧಿಯಲ್ಲಿ ಬಾಡಿಯಾಳ ಗ್ರಾಮದ ಇಂಡಸ್ ಟವರ್ನಲ್ಲಿದ್ದ ಸುಮಾರು 30,000 ರೂಪಾಯಿ ಬೆಲೆಬಾಳುವ 23 ಬ್ಯಾಟರಿ ಸೆಲ್ಗಳನ್ನು ಕಳುವು ಮಾಡಿದ ಕಳ್ಳರ ವಿರುದ್ದ ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.
ಯಾದಗಿರಿ ಗ್ರಾಮಿಣ  ಪೊಲೀಸ್ ಠಾಣೆ
ಗುನ್ನೆ ನಂ: 167/2022 ಕಲಂ 78 (3) ಕೆ.ಪಿ ಕಾಯ್ದೆ: 03-12-2022 ರಂದು ಸಾಯಂಕಾಲ 06-30 ಗಂಟೆಗೆ ಶ್ರೀ ಬಾಪುಗೌಡ ಪಿ.ಐ ಯಾದಗಿರಿ ಸಿ.ಇ.ಎನ್ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಹತ್ತಿಕುಣಿ ಗ್ರಾಮದ ಸಕರ್ಾರಿ ಶಾಲೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 5400=00 ರೂಪಾಯಿಗಳು, ಮಟಕಾ ಬರೆದ ಚೀಟಿ  ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.167/2022 ಕಲಂ.78(3) ಕೆ.ಪಿ ಕಾಯ್ದೆ  ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ : 169/2022 ಕಲಂ: 323, 324, 504, 506 ಸಂ 34 ಐಪಿಸಿ: ಇಂದು ದಿನಾಂಕ 03/12/2022 ರಂದು 4.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ನಾಗೇಶರಾವ ತಂದೆ ಶಂಕರರಾವ ಕುಲಕಣರ್ಿ ವ|| 50 ಜಾ|| ಹಿಂದೂ ಬ್ರಾಹ್ಮಣ ಉ|| ವ್ಯಾಪಾರ ಮತ್ತು ಒಕ್ಕಲುತನ ಸಾ|| ಅಗ್ನಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಅಜರ್ಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, ನಾನು ಒಕ್ಕಲುತನ ಕೆಲಸ ಮತ್ತು ಅಗ್ನಿ ಗ್ರಾಮದಲ್ಲಿ ಫಟರ್ಿಲೈಜರ್ ಅಂಗಡಿ ಇಟ್ಟುಕೊಂಡು ಫಟರ್ಿಲೈಜರ ವ್ಯಾಪಾರ ಮಾಡುತ್ತಿದ್ದೇನೆ. ನಾನು ಫಟರ್ಿಲೈಜರ ಅಂಗಡಿಯಲ್ಲಿ ಗೊಬ್ಬರ, ಕ್ರಿಮಿನಾಶಕ ಔಷಧಿ ಮತ್ತು ಬೀಜವನ್ನು ರೈತರಿಗೆ ನಗದು ವ್ಯಾಪಾರ ಮತ್ತು ಉದ್ರಿ ವ್ಯಾಪಾರ ಮಾಡುತ್ತಿದ್ದು ಕೆಲವು ಜನ ರೈತರು ಬೆಳೆ ಬಂದ ಮೇಲೆ ಹಣ ಕೊಡುತ್ತೇವೆ ಅಂತಾ ಕೇಳಿದವರಿಗೆ ಉದ್ರಿಯಾಗಿ ಬೀಜ ಗೊಬ್ಬರ ಕೊಡುತ್ತಿದ್ದು ಅದರಂತೆ ನಮ್ಮೂರ ಪರಮಣ್ಣ ತಂದೆ ಬಸಪ್ಪ ಹೂಗಾರ ಎಂಬುವವರಿಗೆ 1 ವರ್ಷದ ಹಿಂದೆ ಬೆಳೆ ಬಂದ ಮೇಲೆ ಹಣ ಕೊಡುತ್ತೇನೆ ಅಂತಾ ಹೇಳಿದ್ದರಿಂದ 17535/- ರೂಪಾಯಿ ಬೆಲೆಯ ಕ್ರಿಮಿನಾಶಕ ಔಷಧಿಯನ್ನು ಕೊಟ್ಟಿದ್ದು ಪರಮಣ್ಣನು ನನಗೆ ಇಲ್ಲಿಯವರೆಗೂ ಹಣ ಕೊಟ್ಟಿಲ್ಲ ಮತ್ತು ಕೇಳಿದರೂ ಹಣ ಕೊಡುತ್ತಿಲ್ಲ. ಹೀಗಿದ್ದು ದಿನಾಂಕ 24/11/2022 ರಂದು 6.00 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಹೊಲದಲ್ಲಿ ಕೆಲಸ ಮಾಡಲು ಬಂದ ನಮ್ಮೂರ ಭೀಮಪ್ಪ ತಂದೆ ಮಾನಪ್ಪ ತೋಟದ ಇಬ್ಬರೂ ಕೂಡಿ ಹೊಲದಲ್ಲಿ ಕೆಲಸ ಮುಗಿಸಿ ಮರಳಿ ಮನೆಗೆ ಹೋಗಬೇಕೆಂದು ಬೀರಪ್ಪನ ಗುಡಿಯ ಹತ್ತಿರ ಹೋಗುತ್ತಿದ್ದಾಗ ನಮ್ಮೂರ 1) ಪರಮಣ್ಣ ತಂದೆ ಬಸಪ್ಪ ಹೂಗಾರ ವ|| 48ವರ್ಷ ಜಾ|| ಕುರುಬರ ಉ|| ಒಕ್ಕಲುತನ 2) ಶಿವಪ್ಪ ತಂದೆ ಪರಮಣ್ಣ ಹೂಗಾರ ವ|| 22ವರ್ಷ ಜಾ|| ಕುರುಬರ ಉ|| ಒಕ್ಕಲುತನ ಇಬ್ಬರೂ ಕೂಡಿ ಬೀರಪ್ಪನ ಗುಡಿಯ ಹತ್ತಿರ ಭೇಟಿಯಾದರು. ಆಗ ನಾನು ಪರಮಣ್ಣನಿಗೆ ನನ್ನ ಹಣ ಕೊಡು ಅಂತಾ ಕೇಳಿದರೂ 2 ದಿನದಲ್ಲಿ ಕೊಡುತ್ತೇನೆ 4 ದಿನದಲ್ಲಿ ಕೊಡುತ್ತೇನೆ ಅಂತಾ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಿಯಾ ಏಕೆ ಅಂತಾ ಕೇಳಿದಾಗ ಪರಮಣ್ಣನು ಏನಲೇ ನಾಗೆ ಬ್ರಾಹ್ಮಣ ಸೂಳೆಮಗನೇ ನಿನ್ನ ಹಣ ನಾನು ಮುಳುಗಿಸಿಕೊಳ್ಳುತ್ತೀನೇನು ಕೊಡುತ್ತೇನೆ ಸ್ವಲ್ಪ ಟೈಮ್ ಕೊಡು ಅಂದ್ರೆ ಕೊಡಲ್ಲ ಮಗನೇ ನಿನ್ನ ಹಣ ಕೊಡದಿದ್ದರೆ ಏನು ಮಾಡಿಕೊಳ್ಳುತ್ತಿಯಾ ನೋಡತೀನಿ ಮಗನೇ ಅಂದವನೇ ನನ್ನ ಜೊತೆಗೆ ಜಗಳಕ್ಕೆ ಬಂದು ಪರಮಣ್ಣನು ಅಲ್ಲಿಯೇ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಪರಮಣ್ಣನ ಮಗನಾದ ಶಿವಪ್ಪನು ತನ್ನ ಕೈಯಲ್ಲಿದ್ದ ಒಂದು ಕಬ್ಬಿಣದ ರಾಡಿನಿಂದ ನನ್ನ ಎಡಗೈಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ನಾನು ಸತ್ತೆನೆಪ್ಪೋ ಅಂತಾ ನೆಲಕ್ಕೆ ಬಿದ್ದಾಗ ಪರಮಣ್ಣನು ಕಾಲಿನಿಂದ ಒದ್ದು ಎಲೇ ಸೂಳೆ ಮಗನೇ ಬ್ರಾಹ್ಮಣ ಊರಲ್ಲಿ ನಿನ್ನದು ಒಂದೇ ಮನೆ ಇದ್ದರೂ ಇಷ್ಟೊಂದು ಹಾರಾಡುತ್ತಿಯಾ ನಾವು ಸಾಕಷ್ಟು ಜನ ಇದ್ದರೂ ನಿನಗೆ ಏನೂ ಮಾಡುತ್ತಿಲ್ಲ ಅಂತಾ ಧಿಮಾಕು ಮಾಡುತ್ತಿಯಾ ಮಗನೇ ನೀನು ಸೊಕ್ಕಿನಿಂದ ಮೆರೆಯಬೇಡ ಮಗನೇ ಅನ್ನುತ್ತಾ ಹೊಡೆಯುತ್ತಿದ್ದಾಗ ನನ್ನ ಜೊತೆಗೆ ಇದ್ದ ನಮ್ಮೂರ ಭೀಮಪ್ಪ ತಂದೆ ಮಾನಪ್ಪ ತೋಟದ ಮತ್ತು ಅಲ್ಲಿಯೇ ರಸ್ತೆಯ ಮೇಲೆ ಹೋಗುತ್ತಿದ್ದ ಪರಶುರಾಮ ತಂದೆ ನಿಂಗಪ್ಪ ಬಡಿಗೇರ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ಇಲ್ಲದಿದ್ದರೆ ನನಗೆ ಇನ್ನೂ ಹೊಡೆಯುತ್ತಿದ್ದರು. ಅವರು ನನಗೆ ಹೊಡೆಯುವುದು ಬಿಟ್ಟು ಎಲೇ ಬೋಸಡಿ ಮಗನೇ ಇನ್ನೊಮ್ಮೆ ನಮಗೆ ಫಟರ್ಿಲೈಜರ ಬಾಕಿ ಹಣ ಕೇಳಿದರೆ ನಿನಗೆ ಜೀವ ಸಹಿತ ಹೊಡೆದು ಹಾಕುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಗಾಯವಾಗಿದ್ದರಿಂದ ಒಂದು ಖಾಸಗಿ ವಾಹನದಲ್ಲಿ ಕೆಂಭಾವಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಉಪಚಾರ ಕುರಿತು ಭಾಗ್ಯವಂತಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವಿಜಯಪೂರಕ್ಕೆ ಹೋಗಿ ಚಿಕಿತ್ಸೆ ಪಡೆದು ಹಿರಿಯರಿಗೆ ವಿಚಾರಿಸಿಕೊಂಡು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನನ್ನ ಹತ್ತಿರ ಬೆಳೆಗೆ ಸಿಂಪಡಿಸಲು ಕ್ರಿಮಿನಾಶಕ ಔಷದಿಯನ್ನು ಖರೀದಿಸಿಕೊಂಡು ಹೋಗಿದ್ದ ಹಣವನ್ನು ಕೊಡು ಅಂತಾ ಕೇಳಿದ್ದಕ್ಕಾಗಿ ನನ್ನೊಂದಿಗೆ ಜಗಳ ತೆಗೆದು ಕೈಯಿಂದ, ರಾಡಿನಿಂದ, ಕಲ್ಲಿನಿಂದ ಹೊಡೆದು ತಲೆಗೆ ರಕ್ತಗಾಯ, ಬೆನ್ನಿಗೆ ಗುಪ್ತಗಾಯ ಮಾಡಿ, ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ಪರಮಣ್ಣ ಮತ್ತು ಶಿವಪ್ಪ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 169/2022 ಕಲಂ 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ : 168/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 03/12/2022 ರಂದು 2.30 ಪಿಎಂ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ(ಕಾ.ಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ಹಣಮಂತ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 03/12/2022 ರಂದು 12.20 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ಮಾಲಗತ್ತಿ ಗ್ರಾಮದ ಕನಕದಾಸ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಶಿವರಾಜ ಹೆಚ್.ಸಿ 85, ಪ್ರಭುಗೌಡ ಪಿಸಿ 361 ಮತ್ತು ಬಸವರಾಜ ಪಿಸಿ 363 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 12.30 ಪಿಎಂ ಕ್ಕೆ ಹೊರಟು ಮಾಲಗತ್ತಿ ಗ್ರಾಮದ ಕನಕದಾಸ ವೃತ್ತದ ಹತ್ತಿರ 12.55 ಪಿಎಂ ಕ್ಕೆ ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 1.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ವೀರೇಶ ತಂದೆ ಭೀಮರಾಯ ನಾಯ್ಕೊಡಿ ವ|| 28 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಮಾಲಗತ್ತಿ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 840/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 1.00 ಪಿಎಂ ದಿಂದ 2.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 168/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ: 205/2022 ಕಲಂ 78 (3) ಕೆ.ಪಿ ಆಕ್ಟ್ .: ಇಂದು ದಿನಾಂಕ 03/12/2022 ರಂದು, ಸಾಯಂಕಾಲ 19-30 ಗಂಟೆಗೆ  ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಚನ್ನಯ್ಯ ಎಸ್. ಹಿರೇಮಠ್ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ  ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ,  ಇಂದು ದಿನಾಂಕ 03/12/2022 ರಂದು, ಸಾಯಂಕಾಲ 16-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ಪೊಲೀಸ್ ಠಾಣಾ ವ್ಯಾಪಿ ಹಳಿಸಗರ ಏರಿಯಾದ ಹನುಮಾನ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ  ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಶ್ರೀ ಭಾಗಣ್ಣ ಪಿ.ಸಿ 194, ಧರ್ಮರಾಜ ಪಿ.ಸಿ 45, ಮಹಾದೇವ ಪಿ.ಸಿ 334, ಸಿದ್ರಾಮಯ್ಯ ಪಿ.ಸಿ 258  ಹಾಗೂ  ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಮಲ್ಲಪ್ಪ ತಂದೆ ಹಣಮಂತ ಚಂಡು, ವಯಸ್ಸು 25 ವರ್ಷ, ಜಾತಿ ಕಬ್ಬಲಿಗ, ಉಃ ಮಟಕಾ ನಂಬರ ಬರೆದುಕೊಳ್ಳುವುದು ಸಾಃ ಹಳಿಸಗರ ಶಹಾಪೂರ. ಈತನಿಗೆ ಹಿಡಿದು ಅವನ ಹತ್ತಿರವಿದ್ದ ನಗದು ಹಣ 1150-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ  ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡಿದ್ದು ಸದರಿ ಹಣವು ಬುಕ್ಕಿ ಪರಶುರಾಮ ಹೈಯ್ಯಾಳಕರ್ ಸಾಃ ಶಹಾಪೂರ  ಈತನಿಗೆ ಜಮಾ ಮಾಡಿ ಕೊಡುತಿದ್ದು  ಆತನು 100 ರೂಪಾಯಿಗೆ 10 ರೂಪಾಯಿ ಕಮೀಷನ್ ಕೊಡುತಿದ್ದನು ಅಂತಾ ತಿಳಿಸಿದ್ದು, ಸದರಿ ಆರೋಪಿತರಿಬ್ಬರ   ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 205/2022 ಕಲಂ 78(3) ಕೆ.ಪಿ ಆಕ್ಟ್  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು. 

ಇತ್ತೀಚಿನ ನವೀಕರಣ​ : 09-12-2022 04:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080