ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-02-2022
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ: 15/2022.ಕಲಂ. ಕಲಂ. 323,324,354,448,504,506,ಸಂಗಡ 34 ಐ.ಪಿ.ಸಿ. : ಇಂದು ದಿನಾಂಕ: 04-02-2022 ರಂದು 10-30 ಎ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆಯಿಂದ ಒಂದು ಎಮ್.ಎಲ್.ಸಿ.ವಸುಲಾಗಿದ್ದು ಅದರಂತೆ ಜಿ.ಜಿ.ಎಚ್.ಗೆ ಹೋಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾಧಿದಾರಳನ್ನು ವಿಚಾರಿಸಿದಾಗ ಅವರು ನಾನು ಹೇಳಿಕೆಯನ್ನು ಠಾಣೆಗೆ ಬಂದು ನೀಡುತ್ತೆನೆ ಅಂತಾ ಹೇಳಿದ್ದು.ನಂತರ ಸಮಯ ಮದ್ಯಾಹ್ನ 12:30 ಗಂಟೆಗೆ ಫಿರ್ಯಾಧಿದಾರಳಾದ ಶ್ರೀ ಮತಿ ತಾಯಮ್ಮ ಗಂಡ ದಿ.ಶರಣಪ್ಪ ಹಳ್ಳಿಯರು ವ:50 ವರ್ಷ ಉ;ಕೂಲಿ ಕೆಲಸ ಜಾ:ಹೊಲೆಯರು(ಎಸ್.ಸಿ) ಸಾ:ಹೆಡಗಿಮದ್ರ ಇವರು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ, ನಾನು ಮೇಲ್ಕಂಡ ವಿಳಾಸದ ನಿವಾಸಿಯಾಗಿದ್ದು, ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ಉಪಜೀವಿಸುತ್ತೆನೆ. ನನ್ನ ಗಂಡನು ಒಂದು ವರ್ಷದ ಹಿಂದೆ ಮೃತನಾಗಿದ್ದು ನನಗೆ ಆರು ಜನ ಗಂಡು ಮಕ್ಕಳಿದ್ದು ಅವರಲ್ಲಿ ಇಬ್ಬರು ಮಕ್ಕಳು ಹೊಟ್ಟೆಪಾಡಿಗೆ ದುಡಿಯಲು ಬೆಂಗಳೂರಿಗ ಹೊಗಿರುತ್ತಾರೆ.ಈಗ ಮನೆಯಲ್ಲಿ ನಾನು ಮತ್ತು ನನ್ನ ನಾಲ್ಕು ಜನ ಮಕ್ಕಳ ಜೊತೆಗೆ ಕೂಲಿ ಕೆಲಸ ಮಾಡಿಕೊಂಡು ಇರುತ್ತನೆ.ನನಗೆ ಹಿರಿಯರಿಂದ ಬಂದ 1 ಎಕರೆ 20 ಗಂಟೆ ಹೊಲವಿರುತ್ತದೆ ಅದರಲ್ಲಿ ಒಂದು ಬೊರವೆಲ್ ಇದ್ದು ಸದರಿ ಬೊರವೆಲ್ಗೆ ನಮ್ಮ ಊರಿನಿಂದ ಕಟ್ಟಿಗೆ ಕಂಬಕ್ಕೆ ವಿದ್ಯುತ್ತ ವೈರ್ ಕಟ್ಟಿ ನಮ್ಮ ಹೊಲಕ್ಕೆ ತಗೆದುಕೊಂಡು ಹೋಗಿದ್ದು ಇರುತ್ತದೆ. ಸದರಿ ಹೊಲದಲ್ಲಿ ಒಕ್ಕಲುತನ ಮಾಡುತ್ತಾ ಮತ್ತು ಬೇರೆಯವರ ಹೊಲಕ್ಕೆ ಹೋಗಿ ಕೂಲಿ ಕೆಲಸ ಮಾಡಿಕೊಂಡು ನಮ್ಮ ಗ್ರಾಮದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದು. ಹೀಗಿದ್ದು ನಿನ್ನೆ ದಿನಾಂಕ 02-02-2022 ರಂದು ಮದ್ಯಾಹ್ನ 1:00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಮಗನಾದ ಮಲ್ಲಪ್ಪ ತಂದೆ ಶರಣಪ್ಪ ಹಳ್ಳಿಯರ ಇಬ್ಬರೂ ನಮ್ಮ ಹೊಲದಲ್ಲಿ ಕೃಷಿ ಕೆಲಸ ಮಾಡಿಕೊಂಡ ಇದ್ದೆವು ಅದೇ ವೇಳೆಗೆ ನಮ್ಮ ಊರಿನವರಾದ ಬಸಣ್ಣ ತಂದೆ ಹಣಮಂತ ಓರುಂಚಾ ಸಾ:ಹೆಡಗಿಮದ್ರ ಇತನು ತನ್ನ ಟ್ರ್ಯಾಕ್ಟತ ಚಲಾಯಿಸಿಕೊಂಡು ಬಂದು ನಾವು ವಿದ್ಯುತ್ತ ವೈರಿಗೆ ಅಳವಡಿಸಿದ ಕಟ್ಟಿಗೆ ಕಂಬಗಳನ್ನು ಮುರಿದಿದ್ದು ಅದಕ್ಕೆ ಯಾಕ ಕಂಬಗಳು ಮುರಿದ್ದಿದ್ದಿಯಾ ಅಂತಾ ಕೇಳಿದ್ದಕ್ಕೆ ಆತನು ತನ್ನ ಕೈಯ್ಯಲ್ಲಿ ಬಡಿಗೆ ಹಿಡಿದುಕೊಂಡು ಬಂದವನೇ ನನಗೆ ಎಲೇ ಬೊಸಡಿ ಮಕ್ಕಳೆ, ಸೂಳೇ ಮಕ್ಕಳೆ ನಿನಗೆ ಹಾಗೂ ನಿನ್ನ ತಾಯಿಗೆ ಬಹಳ ಸೊಕ್ಕು ಬಂದಿದೆ, ನಿಮಗೆ ಇವತ್ತು ಒಂದು ಗತಿ ಕಾಣಿಸುತ್ತೆನೆ ಅಂತಾ ಅಂದವನೇ ತನ್ನ ಕೈಯ್ಯಲ್ಲಿದ್ದ ಬಡಿಗೆಯಿಂದ ನನಗೆ ಹೊಡೆಯಲು ಬಂದನು. ಆಗ ನಾನು ಅವನಿಗೆ ತಡೆಯಲು ಪ್ರಯತ್ನಿಸುತ್ತಿದ್ದಾಗ ಆ ಬಡಿಗೆ ನನ್ನ ಎದೆಗೆ ಬಡಿದು ಗುಪ್ತಗಾಯವಾಗಿರುತ್ತದೆ ಆಗ ಅಲ್ಲಿಯೇ ಇದ್ದ ನನ್ನ ಮಗ ಜಗಳಾ ಬಿಡಿಸಲು ಬಂದಾಗ ಅವನಿಗೆ ಜಗ್ಗಾಡಿ ನೆಲದ ಮೇಲೆ ಕೆಡವಿ ಎಳೆದಾಡಿ ಕಾಲಿನಿಂದ ಒದ್ದು ಮತ್ತು ಕೈಯಿಂದ ಮುಷ್ಟಿಮಾಡಿ ಹೊಡೆದಿರತ್ತಾನೆ ಆಗ ನಾನು ಮತ್ತು ನನ್ನ ಮಗ ಮತ್ತು ಊರ ಪ್ರಮುಖರು ಕೂಡಿಕೊಂಡು ಇದು ಊರ ಮಯರ್ಾದಿ ವಿಷಯವಾಗಿದ್ದು ಕೇಸು ಮಾಡುವದು ಬೇಡ ಅಂತಾ ತಿಳಿಸಿ ಹೇಳಿದ್ದರಿಂದ ನಾವು ಸುಮ್ಮನಾದೇವು.ಸದರಿ ವ್ಯಯಕ್ತಿ ಮತ್ತೆ ದಿನಾಂಕ.03-02-2022 ರಂದು ನಾನು ಮತ್ತು ನನ್ನ ಮಗ ಕೂಡಿಕೊಂಡು ರಾತ್ರಿ 9:30 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ಬಸಣ್ಣ ತಂದೆ ಹಣಮಂತ ಮತ್ತು ಮಲ್ಲಪ್ಪ ತಂದೆ ಚಂದ್ರಮ ಬಂಗಾರಿ ಜಾ:ಬೇಡರು ಸಾ;ಹೆಡಗಿಮದ್ರ ಇಬ್ಬರೂ ಕೂಡಿಕೊಂಡು ಬಂದು ಕುಡಿದ ಅಮಲಿನಲ್ಲಿ ಮನೆಯಲ್ಲಿ ಅಕ್ರವಾಗಿ ಪ್ರವೇಶಮಾಡಿ ಮತ್ತೆ ನನಗೆ ಮತ್ತು ನನ್ನ ಮಗನಿಗೆ ಎಲೇ ಬೊಸಡಿ ನಮ್ಮ ಮೇಲೆ ಊರಿನಲ್ಲಿ ಪಂಚಾಯಿತಿ ಮಾಡುತ್ತಿರಿ ನಿಮಗೆ ಸೊಕ್ಕು ಬಹಳ ಇದೆ ಅಂತಾ ಹೇಳಿ ನನ್ನ ಅವಮಾನವಾಗುವರಿತಿಯಲ್ಲಿ ಎಳದಾಡಿ ಕೈಯಿಂದ ಹೊಡೆದು ಮತ್ತು ನನ್ನ ಮಗನಿಗೆ ನೆಲಕ್ಕೆ ಹಾಕಿ ಒದ್ದಿದು ಆಗ ನಾವು ಚಿರಾಡುತ್ತಿರುವಾಗ ಅಲ್ಲಿಯೇ ಇದ್ದ ಪಕ್ಕದ ಮನೆಯವರು ಚನಬಸಮ್ಮ ಗಂಡ ತಿಪ್ಪಣ್ಣ ಮತ್ತು ಶಿವಪ್ಪ ತಂದೆ ಅಯ್ಯಪ್ಪ ಇವರಿಬ್ಬರೂ ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಮತ್ತೆ ಇವತ್ತು ಉಳಿದಿರಿ ಸೂಳೇ ಮಕ್ಕಳೇ ಇನ್ನೊಮೇ ಸಿಗರಿ ನಿಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಭಯ ಹಾಕಿ ಹೋದನು. ನಂತರ ಗಾಯ ಹೊಂದ್ದಿದ್ದ ನಾನು ಇಂದು ಉಪಚಾರಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೆನೆ. ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಆದ್ದರಿಂದ ನಮ್ಮ ಹಲ್ಲೆ ಮಾಡಿದವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿ ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಹೇಳಿಕೆ ನಿಜವಿದೆ.ಅಂತಾ ನೀಡಿದ ಹೇಳಿಕೆ ಸಾರಂಶದ ಮೇಲಿಂದ ಠಾಣೆ ನಂ: 15/2022 ಕಲಂ 323, 324, 448, 354, 504, 506.ಸಂಗಡ 34 ಐಪಿಸಿ. ಅಡಿಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ
ಗುನ್ನೆ ನಂ:12/2022 ಕಲಂ:341, 323, 504, 506, 302 ಸಂಗಡ 149 ಐ.ಪಿ.ಸಿ. : ಸದರಿ ಪ್ರಕರಣದಲ್ಲಿ ವಿಷ ಸೇವನೆ ಮಾಡಿದ ಶಾಂತಿಬಾಯಿ ಗಂಡ ಹರಿಶ್ಚಂದ್ರ ಪವಾರ್, ವಯ:60 ವರ್ಷ, ಸಾ||ಕುರಕುಂಬಳತಾಂಡಾ ಇವರು ಹೆಚ್ಚಿನ ಉಪಚಾರಕ್ಕಾಗಿ ಜಿಮ್ಸ್ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ:03/02/2022 ರಂದು 8:30 ಪಿ.ಎಮ್.ಕ್ಕೆ ಜಿಮ್ಸ್ ಕಲಬುರಗಿ ರವರಿಂದ ದೂರವಾಣಿ ಮೂಲಕ ಎಮ್.ಎಲ್.ಸಿ. ವಸೂಲಾಗಿದ್ದು, ಈ ಪ್ರಕರಣದ ಶಾಂತಿಬಾಯಿ ಗಂಡ ಹರಿಶ್ಚಂದ್ರ ಪವಾರ್, ವಯ:60 ವರ್ಷ, ಸಾ||ಕುರಕುಂಬಳತಾಂಡಾ ಇವರು 7:50 ಪಿ.ಎಮ್.ಕ್ಕೆ ಜಿಮ್ಸ್ ಕಲಬುರಗಿಯಲ್ಲಿ ಮೃತಪಟ್ಟ ಬಗ್ಗೆ ತಿಳಿಸಿದ್ದು, ಸದರಿ ಎಮ್.ಎಲ್.ಸಿ. ವಿಚಾರಣೆಗಾಗಿ ಶಿವಪುತ್ರ ಎ.ಎಸ್.ಐ. ರವರನ್ನು ನೇಮಕಮಾಡಿ ಕಳುಹಿಸಿದ್ದು, ಸದರಿಯವರು ಜಿಮ್ಸ್ ಕಲಬುರಗಿಗೆ ಭೇಟಿಕೊಟ್ಟು ಪ್ರಕರಣದ ಫಿಯರ್ಾದಿ ಆಕಾಶ ತಂದೆ ಹರಿಶ್ಚಂದ್ರ ಪವಾರ್, ವಯ:24 ವರ್ಷ, ಜಾತಿ:ಲಮಾಣಿ, ಉ||ವಿದ್ಯಾಥರ್ಿ, ಸಾ||ಕುರಕುಂಬಳ ತಾಂಡಾ, ತಾ||ಜಿ||ಯಾದಗಿರಿ ಇವರಿಗೆ ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಸದರಿ ಹೇಳಿಕೆಯ ಸಾರಾಂಶವೇನೆಂದರೆ, ನಾನು ನಮ್ಮ ಕುಟುಂಬದೊಂದಿಗೆ ವಿದ್ಯಾಭ್ಯಾಸ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತೇನೆ. ನಮ್ಮ ತಂದೆಯವರು ಮೂರು ಜನ ಅಣ್ಣತಮ್ಮಂದಿರಿದ್ದು, ಈ ಜನರಿಗೆ ಪಿತ್ರಾಜರ್ಿತ ಆಸ್ತಿಯಿಂದ ಅಶೋಕನಗರದಲ್ಲಿ ಹೊಲ ಮತ್ತು ಯಾದಗಿರಿಯ ಗಾಂಧಿ ನಗರದಲ್ಲಿರುವ ಪ್ಲಾಟುಗಳು ಭಾಗ ಆಗಿರುವುದಿಲ್ಲಾ. ಪಿತ್ರಾಜರ್ಿತ ಆಸ್ತಿ ಭಾಗ ಮಾಡುವ ಸಲುವಾಗಿ ನಮ್ಮ ಕಾಕನಾದ ಮನ್ನು@ಮನೋಹರ ಪವಾರ್ ಈತನಿಗೆ ಪಿತ್ರಾಜರ್ಿತ ಆಸ್ತಿ ಭಾಗ ಮಾಡು ಅಂತಾ ಸಮಾರು ವರ್ಷಗಳಿಂದ ಊರಿನ ಹಿರಿಯರ ಸಮಕ್ಷಮ ಕೂಡಿಸಿ ಕೇಳಿದರೂ ಕೂಡಾ ಅದಕ್ಕೆ ಆಸ್ತಿ ಭಾಗ ಮಾಡಲು ಒಪ್ಪಿಕೊಂಡಿರುವುದಿಲ್ಲಾ. ಮತ್ತು ನಾವು ಮನೆಯವರೆಲ್ಲರು ಕೂಡಿ ಪಿತ್ರಾಜರ್ಿತ ಆಸ್ತಿಯಲ್ಲಿ ಭಾಗ ಮಾಡಿಕೊಡು ಅಂತಾ ಕೇಳಿದರೆ ನೀವು ನನಗೆ ಯಾವುದೇ ಸಂಬಂಧವಿಲ್ಲ ಹೆದರಿಸಿದ ಬೈದು ಕಳುಹಿಸುತ್ತಿದ್ದನು. ನಾವು ಹಲವಾರು ಸಾರಿ ಆಸ್ತಿ ಭಾಗಮಾಡು ಅಂತಾ ಕೇಳಿದಾಗಲೆಲ್ಲಾ ಹೆದರಿಸಿ ಬೆದರಿಸಿ ಜೀವ ಬೆದರಿಕೆ ಹಾಕಿ ಅಂಜಿಸಿ ಕಳುಹಿಸುತ್ತಿದ್ದನು. ದಿನಾಂಕ:30/01/2022 ರಂದು ರವಿವಾರ ಬೆಳಗ್ಗೆ 09:00 ಗಂಟೆ ಸುಮಾರಿಗೆ ನಮ್ಮ ಚಿಕ್ಕಪ್ಪ ಮನ್ನುಪವಾರ್ ಈತನು ನಮಗೆ ತಿಳಿಸಿದ್ದೇನೆಂದರೆ, 11:00 ಗಂಟೆ ಸುಮಾರಿಗೆ ನಮ್ಮ ಮನೆಗೆ ಬನ್ನಿ ಆಸ್ತಿ ಬಗ್ಗೆ ಕುಂತು ಮಾತಾಡೋಣ ಅಂತಾ ಹೇಳಿದ್ದರಿಂದ ಅಂದು ಬೆಳಗ್ಗೆ 11:30 ಗಮಟೆ ಸುಮಾರಿಗೆ ನನ್ನ ತಂದೆ ಹರಿಶ್ಚಂದ್ರ ನನ್ನ ತಾಯಿ ಶಾಂತಿಬಾಯಿ ಇಬ್ಬರು ಕೂಡಿಕೊಂಡು ಆತನ ಮನೆಗೆ ಹೋದಾಗ ಮನ್ನು ಪವಾರ್ ಈತನು ಏ ಸೂಳಿ ಮಕ್ಕಳೇ, ರಂಡಿ ಮಕ್ಕಳೇ ಏನು ಆಸ್ತಿ ಕೇಳಕೆ ಬಂದಿರಲೇ ನನಗೆ ನೀವು ಸಂಬಂಧವಿಲ್ಲ ಅಂತಾ ಅವಾಚ್ಯವಾಗಿ ಬೈದು ಅಲ್ಲಿಯೇ ಇದ್ದ ಮನ್ನು ಪವಾರನ ಮಕ್ಕಳಾದ ಪ್ರೇಮ್, ಅನಿಲ್, ಕಿರಣ, ಭರತ ಹಾಗು ಮನ್ನು ಹೆಂಡತಿಯಾದ ಶಾಂತಿಬಾಯಿ ಮತ್ತು ಮನ್ನುಪವಾರ್ ಸಂಬಂಧಿಕರಾದ ಹೀರಾಸಿಂಗ್ ತಂದೆ ಬಾಷಾ ಎಸ್.ಹೊಸಳ್ಳಿತಾಂಡಾ ಮತ್ತು ಅವನ ಹೆಂಡತಿಯಾದ ಚಾಂದಿಬಾಯಿ@ಚಂದ್ರಕಲಾ ಇವರ ಮಕ್ಕಳಾದ ರಾಜು@ವಿಕ್ಕಿ, ವಿನೋದ, ಪ್ರಕಾಶ ಮತ್ತು ರಾಜು ಇವರೆಲ್ಲರು ಕೂಡಿ ನನ್ನ ತಾಯಿಗೆ ಕೈಕಾಲು ಹಿಡಿದು ಹಿಗ್ಗಾಮುಗ್ಗಾ ಎಳೆದಾಡಿ ಕೆಳಗಡೆ ಬೀಳಿಸಿ ಏ ಸೂಳೆ ಮಗಳಿಗೆ ಖಲಾಸ್ ಮಾಡಿರಿ ಕಿರಿಕಿರಿ ತಪ್ಪುತ್ತದೆ ಅಂತಾ ಬೈದು ಆಗ ಮನ್ನುಪವಾರ್ ಈತನು ಏ ಎಣ್ಣೆ ತಂಬರಲೇ ರಾಜು, ಎಣ್ಣೆ ಕುಡಿಸಿ ಖಲಾಸ್ ಮಾಡೋಣ ಅಂತಾ ಹೇಳಿದಾಗ ಆತನ ಮಾತಿನಂತೆ ರಾಜು ಈತನು ಮನೆಯಿಂದಿ ಎಣ್ಣೆ (ಔಷಧಿ) ತಂದನು. ಎಲ್ಲರು ನನ್ನ ತಾಯಿಗೆ ಕೈಯಿಂದ ಹೊಡೆಬಡೆ ಮಾಡಿ ಆಕೆ ಒದ್ದಾಡದಂತೆ ಬಿಗಿಯಾಗಿ ಹಿಡಿದುಕೊಂಡಾಗ ಮನ್ನು ಪವಾರ್ ಮತ್ತು ಚಾಂದಿಬಾಯಿ ಇವರಿಬ್ಬರು ನನ್ನ ತಾಯಿಗೆ ಒತ್ತಾಯಪೂರ್ವಕವಾಗಿ ವಿಷ ಕುಡಿಸಿರುತ್ತಾರೆ. ಈ ಎಲ್ಲಾ ಘಟನೆ ದೂರದಲ್ಲೇ ನೋಡಿರುತ್ತೇನೆ. ನನ್ನ ತಾಯಿ ಕೆಳಗಡೆ ಬಿದ್ದಾಗ ಓಡಿಬಂದೆ. ಆಗ ನಮ್ಮ ತಾಯಿ ಬಾಯಿಯಲ್ಲಿ ವಿಷ ಮತ್ತು ಬುರುಗು ಬರುತ್ತಿತ್ತು. ಈ ಘಟನೆ ನೋಡಿ ನನ್ನ ತಂದೆ ನಿಸ್ಸಹಾಯಕಾಗಿ ಬಿದ್ದಿದ್ದನು. ಆಗ ನಾನು 108 ಅಂಬುಲೆನ್ಸ್ಗೆ ಫೋನ್ ಮಾಡಿದೆನು. ಸ್ವಲ್ಪ ಸಮಯದಲ್ಲಿ ಅಂಬುಲೆನ್ಸ್ ಸ್ಥಳಕ್ಕೆ ಬಂತು. ಆಗ ನನ್ನ ತಾಯಿಗೆ ವೈದ್ಯಕೀಯ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿದ್ದು, ನನ್ನ ತಾಯಿ ಉಪಚಾರ ಪಡೆಯುತ್ತಿರುವಾಗ ಯಾದಗಿರಿ ಗ್ರಾಮೀಣ ಪೊಲೀಸರು ಬಂದು ನಮ್ಮ ತಾಯಿಗೆ ವಿಚಾರಿಸಿದಾಗ ಆಕೆ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ನಾನು ಘಟನೆ ಬಗ್ಗೆ ದೂರು ನೀಡಲು ಪೊಲೀಸರು ನನ್ನ ತಂದೆ ಮತ್ತು ನನ್ನ ಸಹಿಯನ್ನು ತೆಗೆದುಕೊಂಡಿರುತ್ತಾರೆ. ನನ್ನ ತಾಯಿ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿದ್ದು, ಫಿಯರ್ಾದಿಯಲ್ಲಿ ಏನು ಬರೆದುಕೊಂಡಿದ್ದಾರೋ ನನಗೆ ಗೊತ್ತಿರುವುದಿಲ್ಲಾ. ಅವರೆಲ್ಲರು ಬಂದು ನಮ್ಮ ಮೇಲೆ ಕೇಸು ಮಾಡಿ ನಿಮ್ಮನ್ನು ತುಂಡು ತುಂಡು ಕಡಿಯುತ್ತೇವೆ ಅಂತಾ ಬೆದರಿಕೆ ಹಾಕಿರುತ್ತಾರೆ. ಮರುದಿನ ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿ ಆಸ್ಪತ್ರೆಯಿಂದ ಕಲಬುರಗಿ ಜಿಲ್ಲಾ ಆಸ್ಪತ್ರೆಗೆ (ಜಿಮ್ಸ್) ಹೆಚ್ಚಿನ ಉಪಚಾರ ಕುರಿತು ವೈದ್ಯರ ಸಲಹೆಯ ಮೇರೆಗೆ 108 ಅಂಬುಲೆನ್ಸ್ದಲ್ಲಿ ತಂದು ಸೇರಿಕೆ ಮಾಡಿರುತ್ತೇನೆ. ಈ ಘಟನೆ ಬಗ್ಗೆ ಪೊಲೀಸರ ದೂರು ದಾಖಲಿಸಲು ಎರಡು ದಿನ ವಿಳಂಬ ಮಾಡಿರುತ್ತಾರೆ. ನಾನು ಮೇಲಾಧಿಕಾರಿಗಳಿಗೆ ಪದೇ ಪದೇ ಫೋನ್ಮಾಡಿ ವಾಟ್ಸಪ್ ಮಾಡಿ ಈಮೇಲ್ ಮಾಡಿದ ನಂತರ ಎಫ್.ಐ.ಆರ್. ನಂ:12/2022 ರಲ್ಲಿ ಪ್ರಕರಣ ದಾಖಲಾಗಿರುತ್ತದೆ. ನನ್ನ ತಾಯಿ ಕಲಬುರಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಚಾರ ಪಡೆಯುತ್ತಿದ್ದು, ವೈದ್ಯಕೀಯ ಉಪಚಾರ ಫಲಕಾರಿಯಾಗದೇ ದಿನಾಂಕ:03/02/2022 ರಂದು ರಾತ್ರಿ 7:50 ಪಿ.ಎಮ್. ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ನನ್ನ ತಾಯಿ ಶಾಂತಿಬಾಯಿ ಗಂಡ ಹರಿಶ್ಚಂದ್ರ ಪವಾರ್, ವಯ:60 ವರ್ಷ, ಸಾ||ಕುರಕುಂಬಳತಾಂಡಾ ಈಕೆಯ ಸಾವಿಗೆ ಕಾರಣೀಭೂತರಾದ ಈ ಮೇಲ್ಕಂಡ ಜನರ ಮೇಲೆ ನ್ಯಾಯಸಮ್ಮತವಾಗಿ ನ್ಯಾಯದೊರಕಿಸಿಕೊಡಲು ವಿನಂತಿ. ನಾನು ಹೇಳಿದಂತೆ ರಾಘವೇಂದ್ರ ತಂದೆ ಗುರಣ್ಣ ರಾಠೋಡ್, ಸಾ||ಗೊಬ್ಬೂರವಾಡಿ ತಾಂಡಾ ಇವರು ಬರೆದಿರುತ್ತಾರೆ. ಸದರಿ ಘಟನೆಯನ್ನು ಹಣಮಂತ ತಂದೆ ಖೇಮ್ಯಾ, ಮಹಾಂತೇಶ ತಂದೆ ಭೀಮಾ, ತಾರಾಸಿಂಗ್ ತಂದೆ ಸೀತಾರಾಮ್ ಹಾಗು ಇತರರು ನೋಡಿರುತ್ತಾರೆ ಅಂತಾ ಕೊಟ್ಟ ಹೇಳಿಕೆಯನ್ನು ಪಡೆದುಕೊಂಡು ಮೃತ ಶಾಂತಿಬಾಯಿ ಗಂಡ ಹರಿಶ್ಚಂದ್ರ ಇವರ ಶವಮಹಜರ ಪಂಚನಾಮೆಯನ್ನು ಜರುಗಿಸಿಕೊಂಡು ಮರಳಿ ಬಂದು ತಮ್ಮ ವರದಿಯೊಂದಿಗೆ ಫಿಯರ್ಾದಿದಾರರ ಹೇಳಿಕೆ, ಶವಮಹಜರ ಪಂಚನಾಮೆ, ಸಾಕ್ಷಿದಾರರ ಹೇಳಿಕೆಗಳನ್ನು ಹಾಜರಪಡಿಸಿರುತ್ತಾರೆ.
ಸದರಿ ಪ್ರಕರಣದ ಫಿಯರ್ಾದಿದಾರರು ತಮ್ಮ ಹೇಳಿಕೆಯಲ್ಲಿ ಆರೋಪಿತರೆಲ್ಲರು ಸೇರಿಕೊಂಡು ದಿನಾಂಕ:30/01/2022 ರಂದು 11:30 ಎ.ಎಮ್.ಕ್ಕೆ ಶಾಂತಿಬಾಯಿ ಇವಳಿಗೆ ಕೈಯಿಂದ ಹೊಡೆಬಡೆ ಮಾಡಿ ಆಕೆ ಒದ್ದಾಡದಂತೆ ಬಿಗಿಯಾಗಿ ಹಿಡಿದುಕೊಂಡು ಆರೋಪಿ ಮನ್ನು ಪವಾರ್ ಮತ್ತು ಚಾಂದಿಬಾಯಿ ಇವರಿಬ್ಬರು ತನ್ನ ತಾಯಿಗೆ ಒತ್ತಾಯಪೂರ್ವಕವಾಗಿ ವಿಷ ಕುಡಿಸಿದ್ದರಿಂದ ಶಾಂತಿಬಾಯಿ ಇವರು ಚಿಕಿತ್ಸೆ ಫಲಿಸದೇ ಮೃತಪಟ್ಟ ಬಗ್ಗೆ ತಿಳಿಸಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ:302 ಐ.ಪಿ.ಸಿ ಅಳವಡಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಲಾಗಿದೆ ಅಂತಾ ವಿನಂತಿ.
ಯಾದಗಿರಿ ನಗರ ಪೊಲೀಸ್ ಠಾಣೆ
ಗುನ್ನೆ ನಂ 20/2022 ಕಲಂ 379 ಐಪಿಸಿ : ದಿನಾಂಕ 04/02/2022 ರಂದು ನಾನು ನನ್ನ ಕಣ್ಣು ತೋರಿಸಿಲಿಕ್ಕೆಂದು ಯಾದಗಿರಿಗೆ ಬಂದೆನು. ನನ್ನ ಮಗನಾದ ಶಿವಶರಣಪ್ಪ ತಂದೆ ಪ್ರಕಾಶ ಸ್ವಾಮಿ ಈತನು ಯರಗೋಳದಲ್ಲಿ ಇದ್ದು, ಈತನು ಕೂಡ ನನಗೆ ತೋರಿಸಲಿಕ್ಕೆಂದು ಯಾದಗಿರಿಗೆ ಬಂದನು. ಯಾದಗಿರಿಯ ಮೀನಾಕ್ಷಿ ನೇತ್ರಾಲಯದಲ್ಲಿ ನನ್ನ ಕಣ್ಣು ತೋರಿಸಿಕೊಂಡೆನು. ನನ್ನ ತವರು ಮನೆಯರಗೋಳ ಗ್ರಾಮವಾಗಿದ್ದರಿಂದ ನಮ್ಮ ತಾಯಿಗೆ ಮೈಯಲ್ಲಿ ಅರಾಮ ಇಲ್ಲದ ಕಾರಣ ನಾನು ಯರಗೋಳ ಗ್ರಾಮಕ್ಕೆ ಹೋಗಿ ನಮ್ಮ ತಾಯಿಗೆ ಮಾತನಾಡಿಸಿಕೊಂಡು ಬಂದರಾಯಿತು ಅಂತಾ ನಾನು ಮತ್ತು ನನ್ನ ಮಗ ಶಿವಶರಣಪ್ಪ ಇಬ್ಬರು ಕೂಡಿ ಇಂದು ಮಧ್ಯಾಹ್ನ 01-00 ಪಿ.ಎಂ ಸುಮಾರಿಗೆ ಯಾದಗಿರಿಯ ಹೊಸಾ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ, ಜನರ ನೂಕು ನುಗ್ಗಲಿನಲ್ಲಿ ನನ್ನ ವೆನಿಟಿ ಬ್ಯಾಗ್ ಒಳಗೆ ಒಂದು ಕವರದಲ್ಲಿ ಇದ್ದ 1] ಒಂದು 45 ಗ್ರಾಂ. ಬಂಗಾರದ ಒಂದು ತಾಳಿ ಚೈನ್, ಅ.ಕಿ 2,02500/ ರೂಪಾಯಿಗಳು. 2] ಒಂದು 20 ಗ್ರಾಂ. ಬಂಗಾರ ಒಂದು ಎರಡೆಳೆ ಸರಾ, ಅ.ಕಿ 90,000/- ರೂ|| ಗಳು ಹಾಗೂ 3] ತಲಾ 5 ಗ್ರಾಂ. ಬಂಗಾರದ 2 ಸುತ್ತುಂಗರಗಳು, ಅ.ಕಿ 45,000/- ರೂಪಾಯಿಗಳು, ಹೀಗೆ ಒಟ್ಟು 3,37,500/- ರೂಪಾಯಿ ಕಿಮ್ಮತ್ತಿನ ಬಂಗಾರದ ಆಭರಣಗಳು ಯಾರೋ ಕಳ್ಳರು ಕಳ್ಳತನ ಮಾಡಿರುತ್ತಾರೆ. ನಂತರ ನಾನು ಬಸ್ ಹತ್ತಿ ಕುಂತು ನೋಡಿಕೊಂಡಾಗ ನನಗೆ ನನ್ನ ಬಂಗಾರ ಕಳ್ಳತನವಾಗಿದ್ದು ಗೊತ್ತಾಗಿದ್ದು, ಕೂಡಲೆ ನಾವು ಬಸ್ನಿಂದ ಕೆಳಗೆ ಇಳಿದು ಅಲ್ಲಿ ಸುತ್ತಾ ಮುತ್ತಾ ನನ್ನ ಬಂಗಾರ ನನ್ನ ಬಂಗಾರ ಅಂತಾ ಹುಡುಕಾಡಿದರು ಸಿಗಲಿಲ್ಲ. ನಂತರ ನನ್ನ ಮಗ ಶಿವಶರಣಪ್ಪ ಈತನು ನನ್ನ ಗಂಡ ಪ್ರಕಾಶ ಸ್ವಾಮಿ ಹಾಗೂ 1] ಮಂಜುನಾಥಸ್ವಾಮಿ ತಂದೆ ಕಲ್ಲಯ್ಯ ಸ್ವಾಮಿ ಮತ್ತು 2] ಶಿವಕುಮಾರ ತಂದೆ ಅಂಬೃತ ಹೂಗಾರ ಇವರಿಗೆ ವಿಷಯ ತಿಳಿಸಿದನು. ಅವರು ಕೂಡ ಸ್ಥಳಕ್ಕೆ ಬಂದಿದ್ದು, ಎಲ್ಲರು ಕೂಡಿ ನಾವು ಅಲ್ಲಿ ಅಲ್ಲಿ ಸಂಶಯಾಸ್ಪದ ವ್ಯಕ್ತಿಗಳಿಗೆ ನೋಡಿ ವಿಚಾರಿಸಲಾಗಿ ಕಳ್ಳತನ ಮಾಡಿದವರ ಬಗ್ಗೆ ಸುಳಿವು ಸಿಗಲಿಲ್ಲ. ಕಾರಣ ಇಂದು ದಿನಾಂಕ 04/02/2022 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ನಾನು ಹಾಗೂ ನನ್ನ ಮಗ ಇಬ್ಬರು ಕೂಡಿ ಯರಗೋಳ ಗ್ರಾಮಕ್ಕೆ ಹೋಗಲು ಯಾದಗಿರಿ ನಗರದ ಹೊಸಾ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ನನ್ನ ವೆನಿಟಿ ಬ್ಯಾಗದಲ್ಲಿ ಇದ್ದ ಈ ಮೇಲೆ ನಮೂದು ಮಾಡಿದ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ್ದು, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 20/2022 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಗುರಮಿಠಠಕಲ್ ಪೊಲೀಸ್ ಠಾಣೆ
ಗುನ್ನೆ ನಂ: 24/2022 ಕಲಂ 279, 337, 338 ಐಪಿಸಿ ಮತ್ತು ಕಲಂ: 192(1) ಐ.ಎಮ್.ವಿ ಆಕ್ಟ್ : ಇಂದು ದಿನಾಂಕ 04.02.2022 ರಂದು ಮಧ್ಯಾಹ್ನ 1:00 ಗಂಟೆಗೆ ಪರಮೇಶಪಲ್ಲಿ ಗೇಟ್-ಗುಂಜನೂರು ಗೇಟ್ಗಳ ನಡುವೆ ರೋಡಿನ ಮೇಲೆ ಯಾವುದೇ ನೊಂದಣಿ ಸಂಖ್ಯೆ ನಮೂದಿಸದೇ ಇರುವ ಸ್ಕೂಟಿಯ ಚಾಲಕನಾದ ರವಿಕುಮಾರ ಮತ್ತು ಮೋಟಾರು ಸೈಕಲ್ ನಂಬರ ಕೆಎ-33-ಇ.ಎ-1202 ನೇದ್ದರ ಚಾಲಕನಾದ ಜಲ್ಲಪ್ಪ ಇವರು ತಮ್ಮ-ತಮ್ಮ ವಾಹನಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಪರಸ್ಪರ ಮುಖಾ-ಮುಖಿಯಾಗಿ ಡಿಕ್ಕಿಪಡಿಸಿದ್ದರಿಂದ ಅಪಘಾತ ಸಂಭವಿಸಿದ್ದು ಅದರಿ ಅಪಘಾತದಲ್ಲಿ ಎರಡೂ ವಾಹನಗಳ ಚಾಲಕರಿಗೆ ಭಾರಿ ಹಾಗೂ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಆ ಬಗ್ಗೆ ಫಿರ್ಯಾದಿ ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 24/2022 ಕಲಂ 279, 337, 338 ಐಪಿಸಿ ಮತ್ತು ಕಲಂ: 192(1) ಐ.ಎಮ್.ವಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.
ಯಾದಗಿರಿ ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ:04/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 04/02/2022 ರಂದು ಬೆಳಿಗ್ಗೆ 10 ಎ.ಎಂ.ಕ್ಕೆ ಈ ಕೇಸಿನ ಪಿಯರ್ಾದಿಯ ಗಂಡನಾದ ಗಾಯಾಳು ರವೀಂದ್ರ ಇವರು ತಮ್ಮ ಮೋಟಾರು ಸೈಕಲ್ ನಂಬರ ಕೆಎ-32, ಎಸ್-5780 ನೇದ್ದನ್ನು ನಡೆಸಿಕೊಂಡು ಡಿ.ಎಚ್.ಓ ಕಾಯರ್ಾಲಯಕ್ಕೆ ಹೋಗುವಾಗ ಮಾರ್ಗ ಮದ್ಯೆ ಅಂಬೇಡ್ಕರ್ ನಗರದ ಹತ್ತಿರ ಮೋಟಾರು ಸೈಕಲ್ ಸ್ಕ್ಯೂಟಿ ನಂ.ಕೆಎ-09, ಎಚ್.ಎಸ್-3545 ನೇದ್ದರ ಸವಾರ ಆನಂದ ತಂದೆ ರಂಗಪ್ಪ ಕೊರವರ ಈತನು ತನ್ನ ಮೋಟಾರು ಸೈಕಲನ್ನು ಕೋಟರ್ು ರಸ್ತೆ ಕಡೆಯಿಂದ ಅಂಬೇಡ್ಕರ್ ನಗರದ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ತನ್ನ ಮುಂದೆ ಹೊರಟಿದ್ದ ಗಾಯಾಳುವಿನ ಮೋ.ಸೈಕಲ್ ನೇದ್ದಕ್ಕೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಮತ್ತೆ ಮುಂದೆ ಹೋಗಿ ಆಟೋ ನಂಬರ ಕೆಎ-33, ಎ-1124 ನೇದ್ದರ ಹಿಂದೆ ಡಿಕ್ಕಿ ಹೊಡೆದು ಬಿದ್ದಿರುತ್ತಾನೆ. ಸದರಿ ಅಪಘಾತದಲ್ಲಿ ಗಾಯಾಳು ರವಿಂದ್ರ ಇವರಿಗೆ ಬಲಗಡೆ ಭುಜಕ್ಕೆ ಭಾರೀ ಗುಪ್ತಗಾಯ, ತಲೆಗೆ ಭಾರೀ ಗುಪ್ತಗಾಯವಾಗಿ ಬಲಕಿವಿಯಿಂದ ರಕ್ತ ಹೊರಬಂದಿರುತ್ತದೆ.ಎದೆಯ ಎಡಪಕ್ಕೆಲುಬಿಗೆ ಕೂಡ ಗುಪ್ತಗಾಯವಾಗಿರುತ್ತದೆ, ಅಪಘಾತಪಡಿಸಿದ ಮೊಟಾರು ಸೈಕಲ್ ಸವಾರನಿಗೆ ಮುಖಕ್ಕೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತವೆ. ಆಟೋದಲ್ಲಿದ್ದ ಚಾಲಕನಿಗೆ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಆಟೋದ ಹಿಂದೆ ಡ್ಯಾಮೇಜ್ ಆಗಿರುತ್ತದೆ. ಅಪಘಾತಪಡಿಸಿದ ಮೋಟಾರು ಸೈಕಲ್ ಸ್ಕ್ಯೂಟಿ ನಂ.ಕೆಎ-09, ಎಚ್.ಎಸ್-3545 ನೇದ್ದರ ಸವಾರ ಆನಂದ ತಂದೆ ರಂಗಪ್ಪ ಕೊರವರ ಈತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 04/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು.
ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ಸಂಖ್ಯೆ 20/2022 ಕಲಂ 323, 324, 354, 448, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 04.02.2022 ರಂದು ಬೆಳಿಗ್ಗೆ 11 ಗಂಟೆಗೆ ಮಲ್ಲಮ್ಮ ಗಂಡ ಸಾಬಣ್ಣ ಮೇತ್ರಿ ಸಾ|| ನೀಲಹಳ್ಳಿ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಂಕ್ಷಿಪ್ತ ಸಾರಾಂಶವೇನೆಂದರೆ, ನಿನ್ನೆ ದಿನಾಂಕ 03.02.2022 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನನ್ನಗಂಡ ಸಾಬಣ್ಣ ಮೇತ್ರಿ ಈತನ ಮನೆಗೆ ಬಂದು ನನಗೆ ತಿಳಿಸಿದ್ದೇನೆಂದರೆ, ನವೀನ್ ತಂದೆ ಬಸಲಿಂಗಪ್ಪ ಗೌಡಿಗೇರಾ ಈತನು ನನ್ನಿಂದ ಈ ಮೊದಲು 4,500 ರೂಪಾಯಿ ಹಣ ಪಡೆದಿದ್ದ ಹಣ ಕೊಡಂತಾ ನಾನು ಮೇಲಿಂದ ಮೇಲೆ ಕೇಳಿದ್ದರಿಂದ ನವೀನ್ ನನಗೆ ಬೈದು ಗಲ್ಲಾ ಹಿಡಿದು ಜಗ್ಗ್ಯಾಡನ ಅಂತಾ ತಿಳಿಸಿದ್ದ.
ನಾವು ಗಂಡ-ಹೆಂಡತಿ ಊಟ ಮಾಡಿ ಮನೆಯಲ್ಲಿದ್ದಾಗ ರಾತ್ರಿ 10 ಗಂಟೆ ಸುಮಾರಿಗೆ ನವೀನ್ ತಂದೆ ಬಸಲಿಂಗಪ್ಪ ಗೌಡಿಗೇರಾ ಮತ್ತು ಬಸಲಿಂಗಪ್ಪ ತಂದೆ ದೊಡ್ಡ ಸಾಬಣ್ಣ ಗೌಡಿಗೇರಾ ಹಾಗೂ ಪವನ ತಂದೆ ಬಸಲಿಂಗಪ್ಪ ಗೌಡಿಗೇರಾ ಮೂರು ಜನರು ಕೂಡಿ ನಮ್ಮ ಮನೆಗೆ ಬಂದು ಸುಳೆ ಮಗನೆ, ರಂಡಿ ಮಗನೆ ಅಂತಾ ನನ್ನಗಂಡನಿಗೆ ಅಸಭ್ಯ ಶಬ್ದಗಳಿಂದ ಬೈದು ನನ್ನಗಂಡನಿಗೆ ಹೊಡೆಯ ಹತ್ತಿದರು. ಬಿಡಿಸಲು ಹೋದ ನನಗೂ ಸಹ ಕೈಯಿಂದ ಹೊಡೆದು ಕಾಲಿನಿಂದ ಒದ್ದರು. ನವೀನ್ ಈತನು ಕಟ್ಟಿಗೆಯಿಂದ ನನ್ನಗಂಡನ ಬೆನ್ನಿಗೆ ಮತ್ತು ಹಣೆಗೆ ಹೊಡೆದಿರುತ್ತಾನೆ. ನನ್ನಗಂಡ ಅಂಜಿ ಮನೆಯೊಳಗಡೆ ಓಡಿ ಹೋದರೂ ಸಹ ನವೀನ್ ನಮ್ಮ ಮನೆಹೊಕ್ಕಿ ನನ್ನಗಂಡನಿಗೆ ಮನೆಯೊಳಗಡೆ ಹೊಡೆದು ಹೊರಗೆ ಎಳೆದುಕೊಂಡು ಬಂದನು. ನಮ್ಮನ್ನು ಹೊಡೆಯುವದನ್ನು ನೋಡಿದ ನಮ್ಮೋಣೆಯ ಮಾಳಮ್ಮ ಗಂಡ ನಾಗಪ್ಪ ಜೇಗಾರ, ಲಕ್ಷ್ಮೀ ಗಂಡ ಮಲ್ಲಪ್ಪ ಮೇತ್ರಿ, ಮಲ್ಲಮ್ಮ ಗಂಡ ಮಹಾದೇವಪ್ಪ ಮೇತ್ರಿ, ಮರೆಮ್ಮ ಗಂಡ ಸಾಬಣ್ಣ ಕೋನಿ, ಮರೆಮ್ಮ ಗಂಡ ನರಸಪ್ಪ ಜೇಗಾರ ಇವರು ಬಂದು ನಮ್ಮನ್ನು ಪಕ್ಕಕ್ಕೆ ಎಳದುಕೊಂಡರು. ಆಗಲು ಸಹ ನವೀನ್ ಮತ್ತು ಅವನ ತಂದೆ ಹಾಗೂ ತಮ್ಮ ಎಲ್ಲರೂ ಕೂಡಿ ಸಾಬ್ಯ ನಿಂದು ಇನ್ನೂ ಮುಗಿದಿಲ್ಲ ಇವತ್ತ ಉಳಿದಿ ಎಂದಾದರೂ ಒಂದುದಿನ ನಿಂದು ಬಸ್ತಾನೆ ಮಾಡ್ತಿವಿ ಅಂತಾ ನನ್ನಗಂಡನಿಗೆ ಜೀವ ಬೆದರಿಕೆ ಹಾಕಿರುತ್ತಾರೆ ಅಂತಾ ಆಪಾದನೆ.
ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 21/2022 ಕಲಂ. 323, 354, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 04.02.2022 ರಂದು ಮಧ್ಯಾಹ್ನ 2.00 ಗಂಟೆಗೆ ಫಿಯರ್ಾದಿ ಶ್ರೀಮತಿ ಬನ್ನಮ್ಮ ಸಾ|| ನೀಲಹಳ್ಳಿ ಇವರು ಠಾಣೆಗೆ ಬಂದು ದೂರು ಅಜರ್ಿ ಹಾಜರಪಡಿಸಿದ ಸಾರಾಂಶವೇನೆಂದರೆ, ದಿನಾಂಕ 03.02.2022 ರಂದು ರಾತ್ರಿ 9.00 ಗಂಟೆ ಆರೋಪಿತರು ಫಿಯರ್ಾದಿ ಮನೆಗೆ ಬಂದು ಮನೆ ಮುಂದೆ ನಿಂತು ಫಿಯರ್ಾದಿ ಮಗ ನವೀನ ನಾಯಕ ಈತನ ಹೆಸರು ಹಿಡಿದು ಏ ನವೀನ್ಯಾ ಎಲ್ಲಿದ್ದೀ, ಹೊರಗೆ ಬಾ ಭೊಸಡಿ ಮಗನೇ ಅಂತ ಜೋರಾಗಿ ಕೂಗಿದಾಗ ನಾನು ಹೊರಗೆ ಬಂದು ನನ್ನ ಮಗ ಮನೆಯಲ್ಲಿಲ್ಲ ಯಾಕೇ ಆ ತರಹ ಕರೆಯುತ್ತೀದ್ದೀರಿ ಅಂತ ಕೇಳಿದ್ದಕ್ಕೆ ಸಾಬಣ್ಣ ತಂದೆ ಮಹಾದೇವಪ್ಪ ಇವನು ನನಗೆ ಬಾಯಿಗೆ ಬಂದಂತೆ ಏಕವಚನದಲ್ಲಿ ರಂಡೀ, ಸೂಳೇ, ನಿನ್ನ ಮಗ ನವೀನ ಇವನು ನನ್ನ ಹತ್ತಿರ ಈಗ 15 ದಿನದ ಹಿಂದೆ 2 ಸಾವಿರ ರೂಪಾಯಿ ತೆಗೆದುಕೊಂಡಿದ್ದು ಇಲ್ಲಿಯವರೆಗೆ ಕೊಟ್ಟಿಲ್ಲ ರಂಢೀ ಮಗ ಅಂತ ಬೈದಿದ್ದಕ್ಕೆ, ಫಿಯರ್ಾದಿ ಬಾಯಿ ಸರಿಯಾಗಿ ಇಟ್ಟುಕೊಂಡು ಮಾತನಾಡು ಅಂದಾಗ ಜಗಳ ತೆಗೆದು ನಿನ್ನ ಮಗ ಎಲ್ಲದ್ದಾನೆ ಹೇಳು ಕೊಡಲಿ ತೆಗೆದುಕೊಂಡು ಕಡಿದು ಬಿಡುತ್ತೇನೆ ಅಂತ ಬೈದು, ಧಮಕಿ ಹಾಕಿದ್ದು, ಫಿಯರ್ಾದಿ ಯಾಕೆ ನನ್ನ ಮಗ ಅಂತಹದ್ದೇನು ಏನು ಮಾಡಿದ್ದಾನೆ ಅಂತ ಕೇಳಿದರೆ ಲೇ ಸೂಳೇ ನಿನ್ನ ಸೊಕ್ಕು ಬಹಳ ಆಗಿದೆ ನಿನಗೆ ಇಲ್ಲಿಯೇ ಖಲಾಸ ಮಾಡುತ್ತೇನೆ ಅಂತ ಹೊಲಸು ಶಬ್ದಗಳಿಂದ ಬೈದಿದ್ದು, ಸಾಬಣ್ಣ ಫಿಯರ್ಾದಿ ಕೈ ಹಿಡಿದು ಜಗ್ಗಾಡಿ ಜಾಡಿಸಿ ನೂಕಿಸಿಕೊಟ್ಟು ಕೆಳಗೆ ಬೀಳಿಸಿ ಅವಮಾನ ಮಾಡಿದ್ದು, ಮಲ್ಲಪ್ಪ ತಂದೆ ಮಹಾದೇವಪ್ಪ ಇವನು ಕೈಯಿಂದ ಕಪಾಳಕ್ಕೆ ಹೊಡೆದು ಚಿನಾಲಿ ರಂಡೀ ಅಂತ ಬೈದಿರುತ್ತಾನೆ. ಹಣಮಂತ ತಂದೆ ಭೀಮಣ್ಣ ಮೇತ್ರಿ, ಸುಭಾಸ ತಂದೆ ಹಣಮಂತ ಇವರು ಈ ರಂಡೀನ ಖಲಾಸ ಮಾಡರಿ ಅವಾಗ ಆಕೆಯ ಮಗ ಬರುತ್ತಾನೆ ಅಂತ ಜೀವಬೆದರಿಕೆ ಹಾಕಿರುತ್ತಾರೆ. ಸದರಿ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಫಿಯರ್ಾದಿ ದೂರು ನೀಡಿದ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 21/2022 ಕಲಂ 323, 354, 504, 506 ಸಂಗಡ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 31/2022 ಕಲಂ 87 ಕೆ.ಪಿ.ಕಾಯ್ದೆ : ಇಂದು ದಿನಾಂಕ: 04/02/2022 ರಂದು 5:00 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಶ್ರೀ ಸರಕಾರಿ ತಪರ್ೆ ಪಿಯರ್ಾದಿ ಶ್ರೀ ಹಣಮಂತ ಪಿ.ಎಸ್.ಐ ಡಿ.ಸಿ.ಆರ್.ಬಿ ಘಟಕ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಸಾರಾಂಶವೇನೆಂದರೆ, ಇಂದು ದಿನಾಂಕ:04/02/2022 ರಂದು 12:30 ಪಿ.ಎಂ ಸುಮಾರಿಗೆ ಎಸ್.ಪಿ ಆಫೀಸ್ ಯಾದಗಿರಿಯಲ್ಲಿದ್ದಾಗ ಮಾನ್ಯ ಎಸ್.ಪಿ ಸಾಹೇಬರು ತಿಳಿಸಿದ್ದೆನೆಂದರೆ, ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸತ್ಯಂಪೇಟ್ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದಿದ್ದು ನೀವು ಹೊಗಿ ದಾಳಿ ಮಾಡಿರಿ ಅಂತಾ ತಿಳಿಸಿದರು, ನಂತರ ನಾನು ನಮ್ಮ ಆಫೀಸ್ನಲ್ಲಿದ್ದ ಸಿಬ್ಬಂದಿಯವರಾದ 1) ಶ್ರೀ ಶಶಿಕಾಂತ ಕುಲಕಣರ್ಿ ಎ.ಎಸ್.ಐ, 2) ಶ್ರೀ ನಟರಾಜ ಹೆಚ್ಸಿ-87, ಜೀಪ್ ಚಾಲಕರಾದ 3) ಶ್ರೀ ಚಂದ್ರಶೇಖರ ಎ.ಆರ್.ಎಸ್.ಐ ಯಾದಗಿರಿ ಇವರೆಲ್ಲರಿಗೂ ವಿಷಯ ತಿಳಿಸಿ, 1:00 ಪಿ.ಎಂ ಕ್ಕೆ ಸರಕಾರಿ ಜೀಪ್ ನಂ. ಕೆಎ-33 ಜಿ-0100 ನೇದ್ದರಲ್ಲಿ ನಾನು ಮತ್ತು ಸಿಬ್ಬಂದಿಯರು ಕೂಡಿ ಹೊರಟು 2:15 ಪಿ.ಎಂ ಕ್ಕೆ ಸುರಪುರ ಪೊಲೀಸ್ ಠಾಣೆಗೆ ಬಂದು ಠಾಣೆಯಲ್ಲಿದ್ದ ಶ್ರೀ ಹೊನ್ನಪ್ಪ ಸಿಪಿಸಿ-427, ಶ್ರೀ ಸಿದ್ರಾಮರೆಡ್ಡಿ ಸಿಪಿಸಿ-423 ಇವರಿಗೂ ಕೂಡ ವಿಷಯ ತಿಳಿಸಿ, ಹೊನ್ನಪ್ಪ ಪಿಸಿ ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದರಿಂದ ಹೊನ್ನಪ್ಪ ಸಿಪಿಸಿ ಇವರು ಇಬ್ಬರು ಪಂಚರಾದ 1) ಶರಣಪ್ಪ ತಂದೆ ಯಂಕಪ್ಪ ನಾಯ್ಕೋಡಿ ವ|| 22 ವರ್ಷ ಜಾ|| ಬೇಡರು ಉ|| ಕೂಲಿ ಕೆಲಸ ಸಾ|| ಸತ್ಯಂಪೇಟ್, 2) ನಬಿಸಾಬ ತಂದೆ ಮೈಹಿಬೂಬಸಾಬ ಮುಲ್ಲಾ ವ|| 34 ವರ್ಷ ಜಾ|| ಮುಸ್ಲಿಂ ಉ|| ವ್ಯಾಪಾರ ಸಾ|| ಲಕ್ಷ್ಮಿಪುರ ಇವರನ್ನು 2:45 ಪಿ.ಎಂ.ಕ್ಕೆ ಠಾಣೆಗೆ ಬರಮಾಡಿಕೊಂಡು ಬಂದಿದ್ದು ಸದರಿಯವರಿಗೆ ವಿಷಯವನ್ನು ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 3:00 ಪಿ.ಎಂ ಕ್ಕೆ ಸರಕಾರಿ ಜೀಪ್ ನಂ. ಕೆಎ-33 ಜಿ-0100 ನೇದ್ದರಲ್ಲಿ ಠಾಣೆಯಿಂದ ಹೊರಟು 3:25 ಪಿ.ಎಂ ಕ್ಕೆ ಸತ್ಯಂಪೇಠ್ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹನುಮಾನ ದೇವರ ಗುಡಿಯ ಹತ್ತಿರ ಸಾರ್ವಜನಿಕ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೆಲೆ ಅವರ ಮೇಲೆ 3:30 ಪಿ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 03 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಸಿದ್ದಪ್ಪ ತಂದೆ ನಾಗಪ್ಪ ಸತ್ಯಂಪೇಟ್ ವ|| 31 ವರ್ಷ ಜಾ|| ಬೇಡರು ಉ|| ವ್ಯಾಪಾರ ಸಾ|| ಸತ್ಯಂಪೇಟ್ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3300/- ರೂ.ಗಳು ವಶಪಡಿಸಿಕೊಳ್ಳಲಾಯಿತು. 2) ನಾಗರಾಜ ತಂದೆ ಗೋಪಣ್ಣ ಡೋಣ್ಣಿಗೇರಿ ವ|| 30 ವರ್ಷ ಜಾ|| ಬೇಢರು ಉ|| ವ್ಯಪಾರ ಸಾ|| ಡೊಣ್ಣಿಗೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಪರಶುರಾಮ ತಂದೆ ಭೀಮಣ್ಣ ಗುಡ್ಡಕಾಯ ವ|| 26 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಕುಂಬಾರಪೇಟ್ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 3600/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 11,800/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಮತ್ತು ಸ್ಥಳದಲ್ಲಿ ಇದ್ದ ಒಂದು ಇನೊವಾ ವಾಹನ ಸಂಖ್ಯೆ ಕೆಎ-33 ಎಂ-5180 ನೇದ್ದು ಅ.ಕಿ 10,00,000/- ರೂ. ಇದ್ದು, ಒಂದು ಪಲ್ಸರ 150 ಮೋಟರ್ ಸೈಕಲ್ ನಂ. ಕೆಎ-33 ಕ್ಯೂ-5968 ನೇದ್ದು ಅ.ಕಿ 50,000/- ರೂ. ಆಗುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 22,200/-ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 3:30 ಪಿ.ಎಮ್ ದಿಂದ 4:30 ಪಿ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 03 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 5:00 ಪಿ.ಎಂ ಕ್ಕೆ ಬಂದಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 31/2022 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.
ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 32/2022 ಕಲಂ: 279, 337, 338 ಐಪಿಸಿ : ಇಂದು ದಿ: 04/02/2022 ರಂದು 8:30 ಪಿ.ಎಮ್ ಕ್ಕೆ ಶ್ರೀಮತಿ ಸಿರೀನ್ ಬೇಗಂ ಗಂಡ ಇಫರ್ಾನ್ ಖುರೇಷಿ ವಯಸ್ಸು|| 27 ವರ್ಷ ಜಾ|| ಮುಸ್ಲಿಂ ಉ|| ಮನೆಗೆಲಸ ಸಾ|| ಗುರಗುಂಟಾ ತಾ|| ಲಿಂಗಸುಗುರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ದಿನಾಂಕ: 24/01/2022 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರು ಕೂಡಿ ಕಕ್ಕೇರಾದಲ್ಲಿ ನಮ್ಮ ಸಂಬಂದಿಕರ ಮದುವೆ ಇದ್ದ ನಿಮಿತ್ಯ ನಮ್ಮ ಭಾವನಾದ ಮಹಮ್ಮದ ರಫಿ ಇವರ ಮೋಟರ ಸೈಕಲ್ (ನಂಬರ ಇರುವದಿಲ್ಲ) ನೇದ್ದರ ಮೇಲೆ ಹೊರಟೆವು. ಹೀಗಿದ್ದು ಮದ್ಯಾಹ್ನ 2 ಗಂಟೆ ಸುಮಾರಿಗೆ ಸುರಪುರ-ಲಿಂಗಸುಗುರು ಮುಖ್ಯ ರಸ್ತೆಯ ಶಾಂತಪೂರ ಕ್ರಾಸ್ ಹತ್ತಿರ ರಸ್ತೆಯ ಮೇಲೆ ನಾವು ರೋಡಿನ ಎಡಬದಿಗೆ ಹೋಗುತ್ತಿರುವಾಗ ನಮ್ಮ ಹಿಂದಿನಿಂದ ಒಂದು 407 ಟೆಂಪೋದ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮೋಟರ್ ಸೈಕಲ್ಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮತ್ತು ನನ್ನ ಗಂಡ ಇಬ್ಬರು ರೋಡಿನ ಎಡಗಡೆ ಬಿದ್ದೆವು. ನನಗೆ ಎಡಗಾಲ ತೊಡೆಗೆ ಗುಪ್ತಗಾಯವಾಗಿದ್ದು, ನನ್ನ ಗಂಡನಿಗೆ ನೋಡಲಾಗಿ, ಆತನಿಗೆ ಎಡಗಾಲ ತೊಡೆಯ ಮೇಲೆ ಮತ್ತು ಎಡಗಡೆ ಹೊಟ್ಟೆಯ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ. 407 ಟೆಂಪೋ ಚಾಲಕನು ತನ್ನ ವಾಹನದ ನಿಯಂತ್ರಣ ತಪ್ಪಿ ಶಾಂತಪೂರ ಕ್ರಾಸಿನಲ್ಲಿರುವ ಮೌನೇಶ್ವರ ಕಟ್ಟೆಗೆ ಡಿಕ್ಕಿಪಡಿಸಿದನು. ಟೆಂಪೋ ನಂಬರ ನೋಡಲಾಗಿ ಕೆಎ-34 ಬಿ-0220 ಅಂತ ಇದ್ದು ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ಆತನ ಹೆಸರು ಮರಿಯಪ್ಪ ತಂದೆ ಯಂಕಪ್ಪ ಕಟ್ಟಿಮನಿ ಸಾ|| ಕವಿತಾಳ ತಾ|| ಸಿರವಾರ ಅಂತಾ ತಿಳಿಸಿದನು. ನಮ್ಮ ಮೋಟರ ಸೈಕಲ್ ಚೆಸ್ಸಿ ನಂಬರ ಒಃಐಊಂಘ128ಒ5ಈ30165 ಅಂತಾ ಇರುತ್ತದೆ. ನಂತರ ನಾನು ಮತ್ತು ನನ್ನ ಗಂಡ ಇಬ್ಬರು ಒಂದು ಖಾಸಗಿ ವಾಹನದಲ್ಲಿ ಲಿಂಗಸುಗುರಕ್ಕೆ ಉಪಚಾರ ಕುರಿತು ಹೊರಟು, ನನ್ನ ಮೈದುನನಾದ ಆದಮ್ಸಾಬ ತಂದೆ ಹಾಜಿಸಾಬ ಖುರೇಷಿ ಸಾ|| ಗುರಗುಂಟಾ ಈತನಿಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿ, ಲಿಂಗಸುಗುರಕ್ಕೆ ಬರಲು ತಿಳಿಸಿದೆನು. ನನ್ನ ಮೈದುನ ಆದಮಸಾಬ್ ಈತನು ಕೂಡ ಲಿಂಗಸುಗುರಗೆ ಬಂದಿದ್ದು, ಲಿಂಗಸುಗುರಿನ ಮಲ್ಲಿಕಾಜರ್ುನ ಇತಲಿ ಆಸ್ಪತ್ರೆಯಲ್ಲಿ ನಾನು, ನನ್ನ ಗಂಡ ಇಬ್ಬರು ಉಪಚಾರ ಪಡೆದುಕೊಂಡಿದ್ದು ಇರುತ್ತದೆ. ನನ್ನ ಗಂಡನಿಗೆ ವೈದ್ಯರು ಹೆಚ್ಚಿನ ಉಪಚಾರ ಕುರಿತು ಬೇರೆ ಕಡೆ ಹೋಗಲು ತಿಳಿಸಿದ್ದರಿಂದ ನಾನು ಮತ್ತು ನನ್ನ ಮೈದುನ ಇಬ್ಬರು ಕೂಡಿ ನನ್ನ ಗಂಡನಿಗೆ ಬಾಗಲಕೋಟದ ಕೆರೂಡಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ನನ್ನ ಗಂಡನಿಗೆ ಉಪಚಾರ ಪಡಿಸಿ, ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನಮಗೆ ಅಪಘಾತ ಪಡಿಸಿದ ಟೆಂಪೋ ವಾಹನ ನಂ. ಕೆಎ-34 ಬಿ-0220 ನೇದ್ದರ ಚಾಲಕ ಮರಿಯಪ್ಪ ತಂದೆ ಯಂಕಪ್ಪ ಕಟ್ಟಿಮನಿ ಸಾ|| ಕವಿತಾಳ ತಾ|| ಸಿರವಾರ ಈತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 32/2022 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಭೀಗುಡಿ ಪೊಲೀಸ್ ಠಾಣೆ
ಗುನ್ನೆ ನಂ: 15/2022 ಕಲಂ 87 ಕೆಪಿ ಯ್ಯಾಕ್ಟ : ಇಂದು ದಿನಾಂಕ 04/02/2022 ರಂದು 04.00 ಪಿ.ಎಮ್.ಕ್ಕೆ ಫಿಯರ್ಾದಿ ಠಾಣೆಯಲ್ಲಿದ್ದಾಗ ಶಿರವಾಳ ಸೀಮಾಂತರದಲ್ಲಿನ ಚನ್ನಪ್ಪಗೌಡ ಪೊಲೀಸ್ ಪಾಟೀಲ್ಇವರ ಹೊಲದಲ್ಲಿ ಕೆಲವು ಜನರುದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿಅಂದರ ಬಾಹರಅಂತಇಸ್ಪೇಟಜೂಜಾಟಆಡುತ್ತಿದ್ದ ಬಗ್ಗೆ ಬಾತ್ಮಿ ಬಂದಿದ್ದರಿಂದ, ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ 05.10 ಪಿ.ಎಮ್ ಕ್ಕೆ ದಾಳಿ ಮಾಡಿದಾಗ 08 ಜನರು ಸಿಕ್ಕಿದ್ದು 04 ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ 8 ಜನಆರೋಪಿತರಿಂದ ಹಾಗು ಕಣದಲ್ಲಿಂದ ನಗದುಒಟ್ಟು ಹಣ 7300/- ರೂ, 52 ಇಸ್ಪೇಟ ಎಲೆಗಳು ಜಪ್ತಿಪಡಿಸಿಕೊಂಡು ಠಾಣೆಗೆ ಬಂದು ಮುಂದಿನ ಕ್ರಮಕುರಿತು ವರದಿ ಸಲ್ಲಿಸಿರುತ್ತಾರೆ.