ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-03-2022


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ.34/2022 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಂ.ವಿ ಯಾಕ್ಟ : ಇಂದು ದಿನಾಂಕ: 04/03/2022 ರಂದು 10.30 ಎ.ಎಂ.ಕ್ಕೆ ಶ್ರೀ ನಬಿ ತಂ/ ಖಾಜಾಪಿರ ಹಳೆಕಟ್ಟಿ, ಸಾ|| ಕುರಕುಂದಿ, ತಾ|| ವಡಗೇರಾ, ಜಿ|| ಯಾದಗಿರಿ. ರವರು ಇಂದು ಠಾಣೆಗೆ ಹಾಜರಾಗಿ ಒಂದು ಗಣಕೀಕರಿಸಿದ ದೂರು ಅಜರ್ಿಯನ್ನು ಸಲ್ಲಿಸಿದ್ದು, ಸದರಿ ಫಿಯರ್ಾದಿ ಸಾರಾಂಶ ಏನೆಂದರೆ, ದಿನಾಂಕ: 03/03/2022 ರಂದು ಯಂಕಂಚಿ ದಾವಲಮಲ್ಲಿಕ ದೇವರ ಕಾರ್ಯಕ್ರಮ ಇದ್ದುದ್ದರಿಂದ ನಾನು ಮತ್ತು ನನ್ನ ತಂದೆ, ತಾಯಿ, ಅಣ್ಣ ಮತ್ತು ತಮ್ಮಂದಿರೆಲ್ಲರೂ ಹೋಗಿ ದೇವರ ಕಾರ್ಯಕ್ರಮ ಮುಗಿದ ನಂತರ ನನ್ನ ತಂದೆಯವರಿಗೆ ಬೆಳಿಗ್ಗೆ ಬರಲು ಹೇಳಿ ಯಂಕಂಚಿಯಲ್ಲಿ ಬಿಟ್ಟು ನಾವೆಲ್ಲರೂ ಊರಿಗೆ ಬಂದಿದ್ದೆವು ಇಂದು ದಿನಾಂಕ: 04/03/2022 ರಂದು ಬೆಳಿಗ್ಗೆ 7.25 ಎಎಂ ಸುಮಾರಿಗೆ ಮುಮ್ತಾಜ್ ಅಹಮದ್ ತಂ/ ಅಬ್ದುಲ್ಲಾ ಚೌದರಿ ಸಾ|| ಶಹಾಪೂರ ರವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಾನು ಇಂದು ಬೆಳಿಗ್ಗೆ 6.30 ಎ.ಎಂ. ಸುಮಾರಿಗೆ ಶಹಾಪೂರ-ಬೆಂಗಳೂರು ಮುಖ್ಯ ರಸ್ತೆಯಲ್ಲಿರುವ ಧರ್ಶನಾಪೂರ ಆಸ್ಪತ್ರೆ ಮುಂದೆ ಇರುವ ನನ್ನ ಎಳೆನೀರು ಅಂಗಡಿಯ ಮುಂದೆ ಕಸ ಗುಡಿಸುತ್ತಿದ್ದಾಗ ಒಂದು ಸರಕಾರಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದರಿಂದ ಬಸ್ಸಿನ ಬಾಗಿಲಿನಿಂದ ಒಬ್ಬ ವ್ಯಕ್ತಿಯು ಬಸ್ಸಿನಿಂದ ಕೆಳಗೆ ಬಿದ್ದನು ಬಸ್ ಚಾಲಕನು ತನ್ನ ಬಸನ್ನು ನಿಲ್ಲಿಸದೇ ಹಾಗೇ ನಡೆಸಿಕೊಂಡು ಸ್ವಲ್ಪ ಮುಂದೆ ಹೋಗಿ ಬಸ್ ನಿಲ್ಲಿಸಿ ಕೆಳಗೆ ಇಳಿದು ನೋಡಿ ಪುನಃ ಬಸ್ ನಡೆಸಿಕೊಂಡು ಹೋದನು. ಆ ಸಮಯದಲ್ಲಿ ಬಸ್ ನಂಬರ ನೋಡಲಾಗಿ ಕೆಎ-33 ಎಫ್-395 ಅಂತಾ ಇದ್ದು ಪೂನಾ-ಶಹಾಪುರ ಬಸ್ ಇತ್ತು. ನಂತರ ನಾನು ಬಸ್ಸಿನಿಂದ ಬಿದ್ದ ವ್ಯಕ್ತಿಯ ಹತ್ತಿರ ಹೋಗಿ ನೋಡಲಾಗಿ ಈ ವ್ಯಕ್ತಿಯ ತಲೆಯ ಹಿಂದೆ ರಕ್ತ ಬರುತ್ತಿತ್ತು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಈ ವ್ಯಕ್ತಿಗೆ ಒಂದು ಅಟೋದಲ್ಲಿ ಹಾಕಿಕೊಂಡು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ 7.20 ಎ.ಎಂ ಸುಮಾರಿಗೆ ಉಪಚಾರ ಕುರಿತು ಸೇರಿಕೆ ಮಾಡಿ ಈ ವ್ಯಕ್ತಿಯ ಜೇಬಿನಲ್ಲಿನ ಚೀಟಿಯಲ್ಲಿದ್ದ ಮೊಬೈಲ್ ನಂಬರಿಗೆ ಕಾಲ ಮಾಡಿರುತ್ತೇನೆ. ಈ ವ್ಯಕ್ತಿಯು ಸುಮಾರು 60 ವರ್ಷ ವಯ್ಯಸಿನ ವ್ಯಕ್ತಿ ಇದ್ದು, ಬಿಳಿ ದೋತರಾ ಮತ್ತು ಬಿಳಿ ಶರ್ಟ ತೊಟ್ಟುಕೊಂಡಿದ್ದಾರೆ ಅಂತಾ ತಿಳಿಸಿದ ಕೂಡಲೆ ನನ್ನ ತಂದೆಯವರು ಯಂಕಂಚಿಯಿಂದ ಬರುವವರಿದ್ದುದರಿಂದ ಅವರೇ ಇರಬೇಕು ಅಂತಾ ನಾನು ಮತ್ತು ನನ್ನ ಅಣ್ಣ ಚಾಂದಪಾಶಾ ತಂ/ ಖಾಜಾಪಿರ ಹಳೆಕಟ್ಟಿ, ಇಬ್ಬರೂ ಕೂಡಿ ಶಹಾಪೂರ ಸರಕಾರಿ ಆಸ್ಪತ್ರೆಗೆ ಬಂದು ಗಾಯಾಳುವಿಗೆ ನೋಡಲಾಗಿ ಇವರು ನಮ್ಮ ತಂದೆ ಖಾಜಾಪೀರ ತಂ/ಖಾಸಿಂಸಾಬ ಹಳೆಕಟ್ಟಿ ಸಾ|| ಕುರುಕುಂದಿ ಇದ್ದು, ನನ್ನ ತಂದೆಯವರಿಗೆ ನೋಡಲಾಗಿ ಅವರಿಗೆ ತಲೆಯ ಹಿಂದೆ ರಕ್ತಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ, ಅಲ್ಲಿಯೆ ಇದ್ದ ಮುಮ್ತಾಜ್ಅಹಮದ್ ತಂ/ ಅಬ್ದುಲ್ಲಾ ಚೌದರಿ ಇವರಿಗೆ ವಿಚಾರಿಸಿದಾಗ ಮೇಲ್ಕಾಣಿಸಿದಂತೆ ಹೇಳಿದರು. ನಂತರ 9.05 ಎ.ಎಂ. ಸುಮಾರಿಗೆ ಅಪಘಾತದಲ್ಲಿ ಆದ ಗಾಯಗಳಿಂದ ಚೇತರಿಸಿಕೊಳ್ಳದೆ ನನ್ನ ತಂದೆ ಖಾಜಾಪೀರ ತಂ/ಖಾಸಿಂಸಾಬ ಹಳೆಕಟ್ಟಿ ಸಾ|| ಕುರುಕುಂದಿ ರವರು ಮೃತಪಟ್ಟಿರುತ್ತಾರೆ.
ಕಾರಣ ಅಪಘಾತಪಡಿಸಿ ನನ್ನ ತಂದೆ ಖಾಜಾಪೀರ ತಂ/ಖಾಸಿಂಸಾಬ ಹಳೆಕಟ್ಟಿ, ಸಾ|| ಕುರುಕುಂದಿ ಇವರ ಸಾವಿಗೆ ಕಾರಣನಾದ ಕೆ.ಎಸ್.ಆರ್.ಟಿ.ಸಿ ಬಸ್ ನಂ.ಕೆಎ-33 ಎಫ್-395 ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ.ನಂ.34/2022 ಕಲಂ 279, 304(ಎ) ಐಪಿಸಿ ಸಂಗಡ 187 ಐ.ಎಂ.ವಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ. ಮನುಷ್ಯ ಕಾಣೆಯಾದ ಬಗ್ಗೆ. : ಇಂದು ದಿನಾಂಕ 04.03.2022 ರಂದು ಮಧ್ಯಾಹ್ನ 2.00 ಗಂಟೆಗೆ ಶ್ರೀ ಮಹಾದೇವ ತಂದೆ ಸೂಗೂರಪ್ಪ ಗಡದೋರ ಸಾ|| ಬಾಡಿಯಾಳ ಇವರು ಠಾಣೆಗೆಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 16.02.2022 ರಂದು ಬೆಳಿಗ್ಗೆ 8.00 ಗಂಟೆಗೆ ನನ್ನ ತಮ್ಮ ಶರಣಪ್ಪ ಮಾರತಪಳ್ಳಿ ಯಲ್ಲಮ್ಮ ದೇವಿ ಜಾತ್ರೆಗೆ ಹೋಗುತ್ತೇನೆ ಅಂತ ಹೇಳಿ ಹೋದವನು ಇಲ್ಲಿಯವರೆಗೆ ಮನೆಗೆ ಬಂದಿರುವದಿಲ್ಲ. ನಾವು ನಮ್ಮ ತಮ್ಮ ಜಾತ್ರೆಯಿಂದ ಮನೆಗೆ ಬರದ ಕಾರಣ ಮಾರತಪಳ್ಳಿ, ರಾಯಚೂರ, ತಿಂಥಿಣಿ, ಹೈದ್ರಾಬಾದ ಕಡೆಗೆ ಹೋಗಿ ಹುಡುಕಾಡಿದೆವು. ಮತ್ತು ನಮ್ಮ ಸಂಬಂಧಿಕರಲ್ಲಿ ಎಲ್ಲಾ ಕಡೆಗೆ ವಿಚಾರಿಸಿದೆವು. ನಮ್ಮ ತಮ್ಮನ ಸುಳಿವು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ತಮ್ಮನ ಚಹರೆ ಸಾದಾರಣ ಮೈಕಟ್ಟು, ಗೋದಿ ಮೈಬಣ್ಣ, ನೆಟ್ಟನೆಯ ಮೂಗು ಹೊಂದಿದ್ದು, ಮೇಲಿನ ತುಟಿ ಹರಿದಿದ್ದು ಆಪರೇಷನ ಮಾಡಲಾಗಿದೆ. ಮನೆಯಿಂದ ಹೋಗುವಾಗ ಉದ್ದ ತೋಳಿನ ಬಿಳಿ ಅಂಗಿ ಮತ್ತು ಬಿಳಿಯ ಲುಂಗಿ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾನೆೆ. ಕಾಣೆಯಾದ ನನ್ನ ತಮ್ಮ ಶರಣಪ್ಪ ತಂದೆ ಸೂಗೂರಪ್ಪ ಗಡದೋರ ವಯ|| 28 ವರ್ಷ, ಜಾ|| ಕಬ್ಬಲಿಗ ಉ|| ವ್ಯವಸಾಯ ಸಾ|| ಬಾಡಿಯಾಳ ಇವನು ಎಲ್ಲಿಯಾದರು ಇರುವ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪತ್ತೆ ಮಾಡಿಕೊಡಬೇಕು ಅಂತ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 34/2022 ಕಲಂ. ಮನುಷ್ಯ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ನ: 24/2022 ಕಲಂ: 323, 504, 506, 427, 354 ಐಪಿಸಿ: ಇಂದು ದಿನಾಂಕ:04.03.2022 ರಂದು ಬೆಳಿಗ್ಗೆ 11:00 ಎ.ಎಮ್ ಕ್ಕೆ ಫಿಯರ್ಾದಿ ಶ್ರೀಮತಿ ನಂದಮ್ಮ ಗಂಡ ಭೀಮಪ್ಪ @ ಜೋಕೆಪ್ಪ ಮೂಲಿಮನಿ ವ:40 ವರ್ಷ ಉ:ಗೆದ್ದಲಮರಿ (ಎಸ್ಸಿ ಓಣಿ) ಅಂಗನವಾಡಿ ಸಹಾಯಕಿ ಜಾ:ಹಿಂದೂ ಮಾದರ ಸಾ:ಗೆದ್ದಲಮರಿ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಫಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಮ್ಮೂರ ಹರಿಜನ ಓಣಿಗೆ ಹೊಂದಿ ಜಮೀನು ಇರುವ ಹೊಳೆಮ್ಮ ಗಂಡ ಮಡಿವಾಳಪ್ಪ ಕುರಿ ಇವರ ಜಮೀನು ಸವರ್ೆ ನಂ:96/04 ನೇದ್ದರಲ್ಲಿ 1981-82 ನೇ ಸಾಲಿನಲ್ಲಿ ಸರಕಾರದ ವತಿಯಿಂದ ಒಂದು ನಮ್ಮ ಸಮಾಜದ ಸಮುದಾಯ ಭವನ ಹಾಗೂ ನಮ್ಮ ಸಮಾಜದ 10 ಜನರಿಗೆ ಜನತಾ ಮನೆಗಳು ಮಂಜೂರಾಗಿ ಕಟ್ಟಿದ್ದು, ಸದರಿ ಜಾಗೆಯನ್ನು ಹೊಳೆಮ್ಮ ರವರ ಗಂಡನಾದ ಮಡಿವಾಳಪ್ಪ ರವರಿಂದ ಒಂದು ಎಕರೆ ಎರಡು ಗುಂಟೆ ಜಮೀನನ್ನು ಸಮಾಜದ ಹತ್ತು ಜನರು ಖರೀದಿಸಿದ್ದು ಇದಕ್ಕೆ ಹೊಂದಿಯೇ ಇನ್ನೂ 18 ಗುಂಟೆ ಜಮೀನನ್ನು ನಮ್ಮೂರ ಅಂಬಲಪ್ಪ ತಂದೆ ಭೀಮಪ್ಪ ಲಿಂಗದಳ್ಳಿ ಇತನು ಹೊಳೆಮ್ಮ ರವರಿಂಧ ಖರೀದಿಸಿದ್ದು ಮಡಿವಾಳಪ್ಪ ರವರು ಸತ್ತ ನಂತರ 2014 ನೇ ಸಾಲಿನಲ್ಲಿ ಹತ್ತು ಜನರು ಒಬ್ಬೊಬ್ಬರು ಯಾಕೆ ನಮ್ಮ ಹೆಸರಿಗೆ ಮಾಡಿಸಿಕೊಳ್ಳುವದು ಒಬ್ಬರ ಹೆಸರಿಗೆ ಮಾಡಿಸಿಕೊಂಡರಾಯಿತು ಅಂತ ಹತ್ತು ಜನರ ಪೈಕಿ ಒಬ್ಬನಾದ ಅಂಬಲಪ್ಪ ತಂದೆ ಭೀಮಪ್ಪ ಲಿಂಗದಳ್ಳಿ ಇತನ ಹೆಸರಿನಲ್ಲಿ 10 ಜನರು ಖರೀದಿಸಿದ ಒಂದು ಎಕರೆ ಎರಡು ಗುಂಟೆ ಮತ್ತು ಅವನು ಖರೀದಿಸಿ 18 ಗುಂಟೆ ಜಮೀನು ಒಟ್ಟು 01 ಎಕರೆ 20 ಗುಂಟೆ ಜಮೀನನ್ನು ಹೊಳೆಮ್ಮ ರವರ ಹೆಸರಿನಿಂದ ಹುಣಸಗಿ ಉಪನೊಂದಣಿ ಕೇಂದ್ರದಲ್ಲಿ ಖರೀದಿ ನೊಂದಣಿ ಮಾಡಿಸಿದ್ದು ಇರುತ್ತದೆ. ಸದರಿ 10 ಜನರು ಖರೀದಿಸಿದ ಜಮೀನಿನಲ್ಲಿ ಸರಕಾರದವರು ನಿಮರ್ಿಸಿದ ನಮ್ಮ ಸಮಾಜದ ಸಮುದಾಯ ಭವನದಲ್ಲಿ ನಮ್ಮ ಸಮಾಜದವರು ಸಾಮೂಹಿಕ ಕಾರ್ಯಕ್ರಮಗಳನ್ನು ಮತ್ತು ಮದುವೆ ಇತರೆ ಕಾರ್ಯಕ್ರಮಗಳನ್ನು ಸಮಾಜದ ಎಲ್ಲರೂ ಇಲ್ಲಿಯವರೆಗೆ ಮಾಡುತ್ತಾ ಬಂದಿದ್ದು ಇರುತ್ತದೆ ಹೀಗಿದ್ದು ದಿನಾಂಕ 18.02.2022 ರಂದು ಮಧ್ಯಾಹ್ನ 12:00 ಗಂಟೆಯ ಸುಮಾರಿಗೆ ನಾನು ನಮ್ಮ ಸಮಾಜದ ಸಮುದಾಯ ಭವನದ ಹತ್ತಿರ ಹೋದಾಗ ನಮ್ಮೂರ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ ಇತನು ಸರಕಾರವು ನಿಮರ್ಿಸಿದ ಸಮುದಾಯ ಭವನದ ಚತ್ತನ್ನು ಕೆಡವಿ ಹಾಳು ಮಾಡಹತ್ತಿದ್ದು ಆಗ ನಾನು ಅವನಿಗೆ ಯಾಕೆ ಸಮುದಾಯ ಭವನವನ್ನು ಕೆಡುವ ಹತ್ತಿದಿ ಅಂತ ಅಂದಾಗ ಪರಸಪ್ಪನು ನಾನು ಈ ಜಾಗೆಯನ್ನು ಅಂಬಲಪ್ಪ ತಂದೆ ಭೀಮಪ್ಪ ಲಿಂಗದಳ್ಳಿ ಇತನಿಂದ ಖರೀದಿಸಿದ್ದು ಈ ಸಮುದಾಯ ಭವನ ನನ್ನ ಜಾಗೆಯಲ್ಲಿರುತ್ತದೆ ನಾನು ಇದನ್ನು ಕೆಡವುತ್ತೇನೆ ಕೇಳಲಿಕ್ಕೆ ನೀನು ಯಾರಲೇ ಸೂಳಿ ಅಂತ ಒದರಾಡ ಹತ್ತಿದ್ದು ಆಗ ನಾನು ಅವನಿಗೆ ಇದು ಸರಕಾರಿ ಜಾಗೆಯಲ್ಲಿದೆ ಇದು ಯಾರಿಗೂ ಸಂಬಂಧಪಟ್ಟಿದ್ದು ಇರುವದಿಲ್ಲ ಸಮುದಾಯ ಭವನವನ್ನು ಕೆಡವಬೇಡ ಅಂತ ಅಂದಾಗ ಪರಸಪ್ಪನು ಒಮ್ಮೇಲೆ ನನ್ನ ಮೈಮೇಲೆ ಬಂದು ಕೈಯಿಂದ ನನ್ನ ಎಡ ಕಪಾಳದ ಮೇಲೆ ಹೊಡೆದು ಮಾನಭಂಗ ಪಡಿಸುವ ಉದ್ದೇಶದಿಂದ ನಾನು ಉಟ್ಟ ಸೀರೆಯ ಸೆರಗನ್ನು ಹಿಡಿದು ಎಳೆದಾಡಿ ಕೈ ಹಿಡಿದು ಜಗ್ಗಾಡಿ ಮಾನಭಂಗ ಪಡಿಸಲು ಪ್ರಯತ್ನಿಸಿದ್ದು ಆಗ ನಾನು ಚೀರಾಡಲು ಅಲ್ಲಿಯೇ ಇದ್ದ ನನ್ನ ಗಂಢ ಭೀಮಪ್ಪ @ ಜೋಕೆಪ್ಪ ತಂದೆ ಸಂಗಪ್ಪ ಮೂಲಿಮನಿ ಮತ್ತು ನಮ್ಮೂರ ಬಸಪ್ಪ ತಾಯಿ ಆರ್ಯವ್ವ ಶೆಳ್ಳಗಿ, ರಾಮಪ್ಪ ತಾಯಿ ಬಸಮ್ಮ ಹಂದ್ರಾಳ, ಯಲ್ಲಪ್ಪ ತಂಧೆ ಶಿವಪ್ಪ ಕಡದರಗಡ್ಡಿ ಇವರೆಲ್ಲರೂ ಬಂದು ನನಗೆ ಮಾನಭಂಗ ಪಡಿಸುವದನ್ನು ಮತ್ತು ಹೊಡೆಯುವದನ್ನು ಬಿಡಿಸಿದ್ದು ಹೋಗುವಾಗ ಪರಸಪ್ಪನು ನನಗೆ ಸೂಳೆ ನಂದಿ ಇವತ್ತು ನನ್ನ ಕೈಯಲ್ಲಿ ಉಳಿದುಕೊಂಡಿದೀ ಇನ್ನೊಂದು ಸಲ ಸಿಕ್ಕಾಗ ನಿನಗೆ ಜೀವಂತ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕಿ ಹೋಗಿದ್ದು ನಾನು ಅಂದಿನಿಂದ ಇವತ್ತಿನವರೆಗೆ ಈ ಬಗ್ಗೆ ನನ್ನ ಗಂಡ ಹಾಗೂ ನಮ್ಮ ಸಮಾಜದ ಹಿರಿಯರಾದ ಬಸಪ್ಪ ತಾಯಿ ಆರ್ಯವ್ವ ಶೇಳ್ಳಗಿ, ರಾಮಪ್ಪ ತಾಯಿ ಬಸಮ್ಮ ಹಂದ್ರಾಳ, ಯಲ್ಲಪ್ಪ ತಂದೆ ಶೀವಪ್ಪ ಕಡದರಗಡ್ಡಿ ಇವರೊಂದಿಗೆ ವಿಚಾರ ಮಾಡಿ ತಡವಾಗಿ ಈ ದಿವಸ ಬಂದು ದೂರು ಕೊಡುತ್ತಿದ್ದು ಈ ಘಟನೆಯಲ್ಲಿ ಅಷ್ಟೇನೂ ಪೆಟ್ಟಾಗಿರುವದಿಲ್ಲ ಉಪಚಾರಕ್ಕಾಗಿ ಆಸ್ಪತ್ರೆಗೆ ಹೋಗುವದಿಲ್ಲ ನಮ್ಮ ಸಮಾಜದ ಸಮುದಾಯ ಭವನದ ಚತ್ತನ್ನು ಕಿತ್ತಿ ಹಾಳು ಮಾಡಿದ ಹಾಗೂ ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಭಂಗ ಪಡಿಸಲು ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿದ ಪರಸಪ್ಪ ತಂದೆ ಭೀಮಪ್ಪ ಸೊನ್ನಾಪೂರ ಇತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಫಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:24/2022 ಕಲಂ: 323, 504, 506, 427, 354 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 


ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 12/2021 ಕಲಂ 279 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ಇಂದು ದಿನಾಂಕ 04/03/2022 ರಂದು 2-30 ಪಿ.ಎಂ.ಕ್ಕೆ ಶ್ರೀ ರಮೇಶ @ ರಾಮು ತಂದೆ ದೇವಜಿ ರಾಠೋಡ ವಯ;35 ವರ್ಷ, ಜಾ;ಲಂಬಾಣಿ, ಉ;ಸಮಾಜಸೇವೆ, ಸಾ;ಗಾಂಧಿನಗರ ತಾಂಡ, ಯಾದಗಿರಿ ರವರು ಠಾಣೆಗೆ ಖುದ್ದಾಗಿ ಹಾಜರಾಗಿ ಒಂದು ಕನ್ನಡದಲ್ಲಿ ಟೈಪ್ ಮಾಡಿದ ಪಿಯರ್ಾದಿ ದೂರನ್ನು ನೀಡಿದ್ದು, ಪಿಯರ್ಾದಿ ದೂರಿನ ಸಾರಾಂಶವೇನೆಂದರೆ ಮಾನ್ಯರವರಲ್ಲಿ ಈ ಮೇಲ್ಕಾಣಿಸಿದ ವಿಷಯದಲ್ಲಿ ನಾನು ರಮೇಶ್ @ ರಾಮು ತಂದೆ ದೇವಜಿ ರಾಠೋಡ ವಯ;36 ವರ್ಷ, ಜಾ;ಲಂಬಾಣಿ, ಉ;ಸಮಾಜಸೇವೆ, ಸಾ;ಗಾಂಧಿನಗರ ತಾಂಡ, ಯಾದಗಿರಿ ತಮ್ಮಲ್ಲಿ ಈ ಮೂಲಕ ದೂರು ಅಜರ್ಿ ಸಲ್ಲಿಸುವುದೇನೆಂದರೆ ಇಂದು ದಿನಾಂಕ ಬೆಳಿಗಿನ ಜಾವ 4 ಎ.ಎಂ.ದ ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತನಾದ ಇಪರ್ಾನ್ ತಂದೆ ಭಾಷುಮಿಯಾ ಸಾ;ಗಾಂಧಿನಗರ ತಾಂಡ, ಯಾದಗಿರಿ ಇಬ್ಬರು ಕೂಡಿಕೊಂಡು ಬೆಳಗಿನ ವಾಕಿಂಗ್ ಕುರಿತು ಯಾದಗಿರಿ ನಗರದ ನಮ್ಮ ಗಾಂಧಿನಗರ ತಾಂಡಾ ಕ್ರಾಸ್, ಸೇವಾಲಾಲ್ ವೃತ್ತದ ಹತ್ತಿರ ನಾವಿಬ್ಬರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಸಮಯಕ್ಕೆ ಯಾದಗಿರಿ ಹಳೆ ಬಸ್ ನಿಲ್ದಾಣದ ಕಡೆಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಿದ್ದಾಗ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರ್ ಮತ್ತು ಡಿವೈಡರ್ ಮೇಲೆ ಇರುವ ಯಾದಗಿರಿ ನಗರ ಸಭೆಯ ವಿದ್ಯುತ್ ದೀಪದ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದಾಗ ಕಾರ್ ಪಲ್ಟಿಯಾಗಿರುತ್ತದೆ, ಈ ಅಪಘಾತದಲ್ಲಿ ಒಂದು ವಿದ್ಯುತ್ ದೀಪ್ ಕಂಬ ಹಾಗೂ ಡಿವೇಡರ್ ಡ್ಯಾಮೇಜ್ ಆಗಿರುತ್ತದೆ. ಆಗ ನಾವಿಬ್ಬರು ಹತ್ತಿರ ಬಂದು ನೋಡಲಾಗಿ ಕಾರ್ ಚಾಲಕನು ಗಡಿಬಡಿ ಮಾಡುತ್ತಾ ಕಾರಿನಿಂದ ಹೊರಗೆ ಬಂದಿದ್ದು, ಆತನಿಗೆ ನೋಡಲು ಸದರಿ ಅಪಘಾತದಲ್ಲಿ ಯಾವುದೇ ಗಾಯ, ವಗೈರೆ ಆಗಿರುವುದಿಲ್ಲ, ಅಪಘಾತಕ್ಕೀಡಾದ ಕಾರ್ ನಂಬರ ನೋಡಲಾಗಿ ಎಮ್.ಎಚ್-03, ಎ.ಎಮ್.-3648 ನೇದ್ದು ಇರುತ್ತದೆ. ಕಾರ್ ಚಾಲಕನಿಗೆ ನಾವು ಹೆಸರು ಮತ್ತು ವಿಳಾಸ ವಿಚಾರಿಸಬೇಕೆಂದಾಗ ಕಾರ್ ಚಾಲಕನು ಅವಸರ ಮಾಡುತ್ತಾ ನಮಗೆ ಏನನ್ನು ಹೇಳದೇ ಓಡಿ ಹೋದನು, ನಾವು ಆತನಿಗೆ ಮತ್ತೆ ನೋಡಿದರೆ ಗುತರ್ಿಸುತ್ತೇವೆ. ಕಾರಿನಲ್ಲಿ ನೋಡಲಾಗಿ ಅಂದಾಜು 50 ಲೀಟರ್ಗಳ ಪ್ಲಾಸ್ಟಿಕ್ ಕ್ಯಾನಗಳಲ್ಲಿ ಡಿಸೇಲ್ ಇದ್ದು ಅಪಘಾತದ ರಭಸಕ್ಕೆ ಕ್ಯಾನಗಳು ಒಡೆದು ಕಾರಿನ ತುಂಬೆಲ್ಲಾ ಮತ್ತು ರಸ್ತೆ ಮೇಲೆ ಡೀಸೆಲ್ ಸೋರಿರುತ್ತವೆ, ಅದೇ ಸಮಯಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯ ಗಸ್ತು ಪರಿಶೀಲನೆ ಜೀಪ್ ಬಂದಿರುತ್ತದೆ. ನಂತರ ಯಾದಗಿರಿ ಸಂಚಾರಿ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಬಂದು ವಿಚಾರಿಸಿ, ಕೂಡಲೇ ಫೈರ್ ಬ್ರಿಗೇಡ್ ಸ್ಥಳಕ್ಕೆ ಕರೆಯಿಸಿ ಕಾರಿನಲ್ಲಿದ್ದ ಡೀಸೆಲ್ ಕ್ಯಾನಗಳಲ್ಲಿದ್ದ ಡಿಸೆಲ್ ಕಾರಿನ ಒಳಗೆ ಮತ್ತು ರಸ್ತೆ ಮೇಲೆ ಡಿಸೇಲ್ ಚೆಲ್ಲಿದ್ದರಿಂದ ಮುಂದಿನ ಬೆಂಕಿ ಅವಘಡ ಸಂಭವಿಸಬಾರದೆಂದು ಮುಂಜಾಗ್ರತ ಕ್ರಮವಾಗಿ ನೀರು ಸಿಂಪರಣೆ ಮಾಡಿಸಿರುತ್ತಾರೆ. ರಸ್ತೆ ಮೇಲೆ ಕಾರ್ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುತ್ತದೆ ಅಂತಾ ಅಪಘಾತಕ್ಕೀಡಾದ ವಾಹನವನ್ನು ಕ್ರೇನ್ ಸಹಾಯದಿಂದ ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯವರು ತಮ್ಮ ಠಾಣೆಗೆ ರವಾನಿಸಿರುತ್ತಾರೆ. ಹೀಗಿದ್ದು ಇಂದು ದಿನಾಂಕ 04/03/2022 ರಂದು ಇಲ್ಲಿಯವರೆಗೆ ಠಾಣೆಗೆ ಅಪಘಾತಕ್ಕೀಡಾದ ಕಾರ್ ಚಾಲಕ ಮತ್ತು ಮಾಲೀಕರು ಯಾರು ಬರದ ಕಾರಣ, ನಾನು ತಡವಾಗಿ ಈ ಘಟನೆ ಬಗ್ಗೆ ಠಾಣೆಗೆ ಖುದ್ದಾಗಿ ಹಾಜರಾಗಿ ಈ ದೂರನ್ನು ಕನ್ನಡದಲ್ಲಿ ಗಣಕೀಕೃತ ಮಾಡಿಸಿ ಕೊಡುತ್ತಿದ್ದು ಇನೊವಾ ಕಾರ್ ನಂಬರ ಎಮ್.ಎಚ್-03, ಎ.ಎಮ್.-3648 ನೇದ್ದರ ಚಾಲಕನ ಅತೀವೇಗ ಮತ್ತು ಅಲಕ್ಷ್ಯತನದಿಂದ ವಾಹನ ಚಾಲನೆ ಮಾಡಿದ್ದರಿಂದ ಈ ಘಟನೆ ಜರುಗಿದ್ದು ಮತ್ತು ಘಟನೆಯ ನಂತರ ಕಾರ್ ಚಾಲಕನು ಸ್ಥಳದಲ್ಲಿ ಇರದೇ ಓಡಿ ಹೋಗಿದ್ದು ಆತನ ಮೇಲೆ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 12/2021 ಕಲಂ 279 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 34/2022 ಕಲಂ:504, 341, 323, 506 ಸಂ 34 ಐಪಿಸಿ : ದಿನಾಂಕ:04/03/2022 ರಂದು 7-35 ಪಿಎಮ್ ಕ್ಕೆ ಶ್ರೀಮತಿ ಸಿದ್ದಮ್ಮ ಗಂಡ ಮಹಾದೇವಪ್ಪ ನಾಟೇಕಾರ, ವ:34, ಜಾ:ಹೊಲೆಯ (ಎಸ್.ಸಿ), ಉ:ಕೂಲಿ ಸಾ:ಹುಲಕಲ್ (ಜೆ) ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದೇನಂದರೆ ನಾನು ಹೊಲಮನೆ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನನ್ನ ಗಂಡ ಮಹಾದೇವಪ್ಪ, ಜೆಟ್ಟೆಪ್ಪ ಮತ್ತು ಚಂದ್ರಾಮ ಈ ಮೂರು ಜನ ಖಾಸ ಅಣ್ಣತಮ್ಮಂದಿರು ಇರುತ್ತಾರೆ. ಸದರಿ ಮೂರು ಜನರಿಗೆ ಹೊಲ ಸವರ್ೆ ನಂ. 1 ಮತ್ತು 88 ರಲ್ಲಿ ಒಟ್ಟು 3 ಎಕರೆ 06 ಜಮೀನು ಇರುತ್ತದೆ. ಸದರಿ ಜಮೀನುಗಳು ನಮ್ಮ ಅತ್ತೆಯ ಹೆಸರಿನಲ್ಲಿದ್ದವನ್ನು ನಮ್ಮ ಅತ್ತೆ ಇದ್ದಾಗ ನನ್ನ ಗಂಡನ ಅಣ್ಣನಾದ ಜೆಟ್ಟೆಪ್ಪ ಮತ್ತು ಚಂದ್ರಾಮ ಇಬ್ಬರೂ ತಮ್ಮ ಹೆಸರಿನಲ್ಲಿ ಮಾಡಿಕೊಂಡಿರುತ್ತಾರೆ. ಅವರಲ್ಲಿ ಜೆಟ್ಟೆಪ್ಪನು ತೀರಿಕೊಂಡಿರುತ್ತಾನೆ. ನಾನು ಮತ್ತು ನನ್ನ ಗಂಡ ನಮಗೆ ಬರಬೇಕಾದ ಜಮೀನು ಭಾಗ ಮಾಡಿ ನನ್ನ ಗಂಡನ ಹೆಸರಿನಲ್ಲಿ ಮಾಡಿಸಿಕೊಡಿ ಎಂದು ಹೇಳುತ್ತಾ ಬರುತ್ತಿದ್ದೆವೆ. ನನ್ನ ಗಂಡನ ಅಣ್ಣನಾದ ಜೆಟ್ಟೆಪ್ಪನು ತೀರಿಕೊಂಡ ನಂತರ ಅವನ ಹೆಂಡತಿಯಾದ ಭೀಮವ್ವ ಜಮೀನು ತನ್ನ ಹೆಸರಿನಲ್ಲಿ ಮಾಡಿಕೊಂಡಿರುತ್ತಾಳೆ. ಅದಕ್ಕೆ ನಾನು ಮತ್ತು ನನ್ನ ಗಂಡ ಇಬ್ಬರೂ ನಮಗೆ ಬರಬೇಕಾದ ಜಮೀನು ಪಾಲು ಕೇಳಿದರೆ ನನ್ನ ಗಂಡನ ಅಣ್ಣನ ಹೆಂಡತಿಯಾದ ಭೀಮವ್ವ ಹಾಗೂ ಅವಳ ಮಕ್ಕಳಾದ ಹಣಮಂತ ಮತ್ತು ಅಂಬ್ರೇಶ ಇವರು ನಾವು ನಿಮಗೆ ಜಮೀನು ಕೊಡುವುದಿಲ್ಲ ಎಂದು ತಕರಾರು ಮಾಡುತ್ತಾ ಬಂದಿರುತ್ತಾರೆ. ಇತ್ತಿಚ್ಚೆಗೆ ನನ್ನ ಗಂಡನು ಹೊಟ್ಟೆಪಾಡಿಗೆ ದುಡಿಯಲು ಬೆಂಗಳೂರಿಗೆ ಹೋಗಿರುತ್ತಾನೆ. ನಾನು ನನ್ನ ಎರಡು ಸಣ್ಣ ಮಕ್ಕಳೊಂದಿಗೆ ಊರಲ್ಲಿಯೇ ಇರುತ್ತೇನೆ. ಹೀಗಿದ್ದು ದಿನಾಂಕ:26/02/2022 ರಂದು ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಸಣ್ಣ ಮಕ್ಕಳು ನಮ್ಮ ಅಂಗಳದಲ್ಲಿ ಆಟ ಆಡುತ್ತಿದ್ದರು. ನಾನು ನೀರು ತುಂಬಿಕೊಂಡು ನಮ್ಮ ಮನೆಗೆ ಬರುತ್ತಿದ್ದಾಗ ನಮ್ಮ ಮನೆ ಮುಂದೆ 1) ಭೀಮವ್ವ @ ಭೀಮಬಾಯಿ ಗಂಡ ಜೆಟ್ಟೆಪ್ಪ ನಾಟೇಕಾರ ಮತ್ತು ಅವಳ ಮಕ್ಕಳಾದ 2) ಹಣಮಂತ ತಂದೆ ಜೆಟ್ಟೆಪ್ಪ ನಾಟೇಕಾರ ಮತ್ತು 3) ಅಂಬ್ರೇಶ ತಂದೆ ಜೆಟ್ಟೆಪ್ಪ ನಾಟೇಕಾರ ಎಲ್ಲರೂ ಸಾ:ಹುಲಕಲ್ (ಜೆ) ಸೇರಿಕೊಂಡು ಬಂದವರೆ ನನಗೆ ತಡೆದು ನಿಲ್ಲಿಸಿ, ಎಲೆ ಭೊಸುಡಿ ನಮ್ಮ ಜಮೀನದಲ್ಲಿ ನಿನ್ನ ಗಂಡನ ಪಾಲು ಕೇಳುತ್ತಿ ನಿನ್ನ ಸೊಕ್ಕು ಜಾಸ್ತಿಯಾಗಿದೆ ಎಂದು ಅವಾಚ್ಯ ಬೈದು ಜಗಳ ತೆಗೆದು ಭೀಮಬಾಯಿ ಇವಳು ನನ್ನ ತೆಲೆ ಮೇಲಿನ ಕೂದಲು ಹಿಡಿದು ನೆಲಕ್ಕೆ ಬಗ್ಗಿಸಿ, ಕೈಯಿಂದ ತೆಲೆಗೆ ಮತ್ತು ಹೊಟ್ಟೆಗೆ ಗುದ್ದಿ ಒಳಪೆಟ್ಟು ಮಾಡಿದಳು. ಹಣಮಂತ ಮತ್ತು ಅಂಬ್ರೇಶ ಇಬ್ಬರೂ ಬಂದು ನನಗೆ ಈ ಭೊಸುಡಿದು ತಿಂಡಿ ಬಹಳ ಆದ ಇವತ್ತು ಇವಳ ತಿಂಡಿ ಮುರಿಯೋಣ ಇವಳು ಇವತ್ತು ಖಲಾಸ ಮಾಡೆ ಬಿಡೋಣ ಎಂದು ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದರು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮ ಆಜು ಬಾಜುದವರಾದ ಸಾಬಮ್ಮ ಗಂಡ ಚಂದ್ರಾಮ ಮತ್ತು ಯಲ್ಲಮ್ಮ ಗಂಡ ದೇವಿಂದ್ರಪ್ಪ ನಾಟೇಕಾರ ಇವರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಹೋದ ಅವರು ಇನ್ನೊಂದು ಸಲ ಹೊಲದಲ್ಲಿ ಪಾಲು ಅಂತಾ ಕೇಳಲು ಬಂದರೆ ನಿನಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ನಾನು ನನ್ನ ಗಂಡ ಮತ್ತು ನಮ್ಮ ಹಿರಿಯರಿಗೆ ವಿಚಾರಣೆ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ವಿನಾಕಾರಣ ನಿನಗೆ ಹೊಲದಲ್ಲಿ ಪಾಲು ಕೊಡುವುದಿಲ್ಲ ಅಂತಾ ಜಗಳ ತೆಗೆದು ತಡೆದು ನಿಲ್ಲಿಸಿ, ಕೈಯಿಂದ ಹೊಡೆಬಡೆ ಮಾಡಿದ ಮೇಲ್ಕಂಡರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 34/2022 ಕಲಂ:504, 341, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

 


ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ 454, 380 ಐಪಿಸಿ : ದಿನಾಂಕ 04.03.2022 ರಂದು ಬೆಳಿಗ್ಗೆ 7 ಗಂಟೆಗೆ ನಾಗಮ್ಮ ಗಂಡ ಬಾಲಪ್ಪ ಪಿಂಜರ, ವ|| 60 ವರ್ಷ, ಜಾ|| ಹೊಲೆಯ, ಉ|| ಹೊಲಮನೆಕೆಲಸ ಸಾ|| ಇಂದಿರಾನಗರ ಕ್ಯಾತನಾಳ, ತಾ||ಜಿ|| ಯಾದಗಿರಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಹಾಜರುಪಡಿಸಿದ ಸಾರಾಂಶವೇನೆಂದರೆ, ದಿನಾಂಕ 27.02.2022 ರಂದು ನಾನು ಮತ್ತು ನನ್ನಮಗಳಾದ ದೇವಮ್ಮ ಗಂಡ ಮಲ್ಲಪ್ಪ ಬ್ಯಾಗರ ಇಬ್ಬರೂ ಕೂಡಿ ನಮ್ಮ ಮನೆಗೆ ಕೀಲಿ ಹಾಕಿಕೊಂಡು ಹೊಲದಲ್ಲಿದ್ದ ಹತ್ತಿ ಬಿಡಿಸಿಕೊಂಡು ಬರಲು ಆದಿನ ಬೆಳಿಗ್ಗೆ 10.30 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿದ್ದೆವು. ಮರಳಿ ಸಾಯಂಕಾಲ ಮನೆಗೆ ಬಂದಾಗ ನಮ್ಮ ಮನೆಯ ಕೀಲಿ ಮುರಿದಿತ್ತು. ನಾವು ಮನೆಯೊಳಗಡೆ ಹೋಗಿ ನೋಡಿದಾಗ ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಮುರಿದು ಅದರೊಳಗಡೆ ಇದ್ದ ಬೆಳ್ಳಿ ಕಾಲು ಚೈನ್, ಬಂಗಾರದ ಎರಡು ತಾಳಿ ಬೊಟ್ಟುಗಳು, ಬಂಗಾರದ ಎರಡು ಬುಗಡಿ ಕಡ್ಡಿಗಳು ಮತ್ತು ನಗದು ಹಣ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದರು. ಹೈದ್ರಾಬಾದ ನಗರದಲ್ಲಿರುವ ನನ್ನ ಅಳಿಯನಿಗೆ ಫೋನ್ಮಾಡಿ ಮನೆಯಲ್ಲಿದ್ದ ಸಾಮಾನುಗಳು ಕಳುವಾದ ವಿಷಯ ತಿಳಿಸಿದ್ದೆವು. ನನ್ನ ಅಳಿಯ ನಾನು ಹೈದ್ರಾಬಾದನಿಂದ ಬರುತ್ತೇನೆ ಆಮೇಲೆ ಸೈದಾಪುರ ಠಾಣೆಗೆ ಹೊಗಿ ದೂರು ಕೊಡೋಣ ಅಂತಾ ಹೇಳಿದ್ದ. ಅಲ್ಲದೆ ಮನೆಯಲ್ಲಿದ್ದ ಎಷ್ಟು ಹಣ ಇತ್ತೆಂಬುದು ನನ್ನ ಅಳಿಯನಿಗೆ ಗೊತ್ತಿದ್ದ ಕಾರಣ ನಾನು ನನ್ನ ಅಳಿಯ ಬರುವತನಕ ಠಾಣೆಗೆ ಬಂದಿಲ್ಲ. ಅದೇದಿನ ಅಂದರೆ ದಿನಾಂಕ 27.02.2022 ರಂದು ನಮ್ಮ ಮನೆಯಿಂದ ಕೂಗಳತೆ ಅಂತರದಲ್ಲಿದ್ದ ಸೈದಾಪುರ ಬಸವೇಶ್ವರ ನಗರದ ಸೂಗರೆಡ್ಡಿ ಛಾಗ್ಬಾವಿ ಇವರ ಮನೆಯ ಕೀಲಿ ಮುರಿದು ಮನೆಯಲ್ಲಿದ್ದ ಸಾಮಾನುಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಗೊತ್ತಾಗಿತ್ತು.
ಇಂದು ನನ್ನ ಅಳಿಯ ಮಲ್ಲಪ್ಪ ಬ್ಯಾಗರ ಊರಿಗೆ ಬಂದ ನಂತರ ಆತನಿಗೆ ವಿಚಾರಿಸಿದಾಗ ಮನೆಯಲ್ಲಿ 15 ಸಾವಿರ ರೂಪಾಯಿ ನಗದು ಹಣ ಇತ್ತು ಅಂತಾ ಗೊತ್ತಾಯಿತು. ಯಾರೋ ಕಳ್ಳರು ದಿನಾಂಕ 27.02.2022 ರಂದು ಬೆಳಿಗ್ಗೆ 10.30 ಗಂಟೆಯಿಂದ ಸಾಯಂಕಾಲ 6 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಮನೆ ಕೀಲಿ ಮುರಿದು ಮನೆಯೊಳಗಡೆ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ 1. ಬೆಳ್ಳಿ 100 ಗ್ರಾಂ ಕಾಲು ಚೈನ್ ಅಂದಾಜು ಕಿಮ್ಮತ್ತು 4000=00, 2. ಬಂಗಾರದ 2 ಗ್ರಾಂ ತೂಕದ ಎರಡು ತಾಳಿ ಬೊಟ್ಟುಗಳು ಅಂದಾಜು ಕಿಮ್ಮತ್ತು 8000=00, 3. ಬಂಗಾರದ 1 ಗ್ರಾಂ ತೂಕದ ಎರಡು ಬುಗಡಿ ಕಡ್ಡಿಗಳು ಅಂದಾಜು ಕಿಮ್ಮತ್ತು 4000=00, ಮತ್ತು 4. ನಗದು ಹಣ 15000=00 ಹೀಗೆ ಒಟ್ಟು 31000=00 ರೂಪಾಯಿ ಬೆಲೆಬಾಳುವ ಬೆಳ್ಳಿ ಬಂಗಾರದ ಆಭರಣಗಳು ಮತ್ತು ನಗದು ಹಣ ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಲ್ಲದೆ ಸೂಗರೆಡ್ಡಿ ತಂದೆ ವೆಂಕಟರೆಡ್ಡಿ ಛಾಗ್ಬಾವಿ ಇವರ ಮನೆಯಲ್ಲಿಯು ಸಹ ಸಣ್ಣ ಬೆಳ್ಳಿ ಸಮೆಗಳು ಮತ್ತು 2 ಗ್ರಾಂನ ಬಂಗಾರದ ಎರಡು ಸಣ್ಣ ಮಕ್ಕಳ ಕೈ ಉಂಗುರಗಳು ಅಂದಾಜು ಕಿಮ್ಮತ್ತು 17000=00 ಬೆಲೆಬಾಳುವ ಬೆಳ್ಳಿ ಬಂಗಾರದ ಆಭರಣಗಳು 27ನೇ ತಾರೀಖು ಹಗಲು ವೇಳೆಯಲ್ಲಿ ಮನೆ ಕೀಲಿ ಮುರಿದು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಾರಣ ಕಾನೂನು ಕ್ರಮ ಜರುಗಿಸಿ ಕಳ್ಳರನ್ನು ಪತ್ತೆಹಚ್ಚಲು ಕೋರಿದೆ. ಅಂತಾ ಆಪಾದನೆ.

ಇತ್ತೀಚಿನ ನವೀಕರಣ​ : 05-03-2022 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080