ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-04-2022


ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 18/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ : ನಿನ್ನೆ ದಿನಾಂಕ 28/03/2022 ರಂದು ರಾತ್ರಿ ಸಮಯ 9 ಪಿ.ಎಂ.ಕ್ಕೆ ರಾಯಚೂರಿನ ಸುರಕ್ಷಾ ಆಸ್ಪತ್ರೆಯಿಂದ ರಸ್ತೆ ಅಪಘಾತದ ಬಗ್ಗೆ ಎಮ್.ಎಲ್.ಸಿ ಇರುತ್ತದೆ ಅಂತಾ ಪೋನ್ ಮೂಲಕ ತಿಳಿಸಿದ್ದು, ಬಸ್ಸಿನ ಸೌಕರ್ಯ ಇರದ ಕಾರಣ ಇಂದು ದಿನಾಂಕ 29/03/2022 ರಂದು ಬೆಳಿಗ್ಗೆ ಎಮ್.ಎಲ್.ಸಿ ವಿಚಾರಣೆ ಕುರಿತು ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ವಿಚಾರಿಸಿದ್ದು, ಗಾಯಾಳು ಶ್ರೀ ರಂಗಪ್ಪ ತಂದೆ ಸಾಬಣ್ಣ ಮಡಿವಾಳ ವಯ;55 ವರ್ಷ, ಜಾ;ಮಡಿವಾಳ, ಉ;ರಾಯಚೂರಿನ ಅಗ್ನಿಶಾಮಕ ದಳದಲ್ಲಿ ಎಚ್.ಸಿ ಅಂತಾ ಕರ್ತವ್ಯ, ಸಾ;ದೇವದುರ್ಗ, ಜಿ;ರಾಯಚೂರು ರವರು ಘಟನೆ ಬಗ್ಗೆ ತಮ್ಮದೊಂದು ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದು, ಅದರ ಸಾರಾಂಶವೇನೆಂದರೆ ನಾನು ದೇವದುರ್ಗ ಪೈರ್ ಇಲಾಖೆಯಲ್ಲಿ ಎಚ್.ಸಿ ಅಂತಾ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುತ್ತೇನೆ. ನಿನ್ನೆ ದಿನಾಂಕ 28/03/2022 ರಂದು ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಯಾದಗಿರಿ ಜಿಲ್ಲೆಯ ಅಬ್ಬೆತುಮಕುರ ಮಠದಲ್ಲಿ ಇದ್ದುದರಿಂದ ನಾನು ರಾಯಚೂರಿನಿಂದ ಯಾದಗಿರಿಗೆ ಬಂದಿದ್ದೆನು. ಯಾದಗಿರಿಗೆ ಬಂದು ನಮ್ಮ ಪೈರ್ ಇಲಾಖೆಯ ಯಾದಗಿರಿಯ ಶ್ರೀ ಅಮರೇಶ ತಂದೆ ಮಲ್ಲಯ್ಯ ಸ್ವಾಮಿ ಮಠಪತಿ ಇವರಿಗೆ ಪೋನ್ ಮಾಡಿ ನಾನು ಯಾದಗಿರಿಯ ಹೊಸ ಬಸ್ ನಿಲ್ದಾಣದ ಹತ್ತಿರ ಇದ್ದು, ಅಬ್ಬೆತುಮಕುರದಲ್ಲಿ ನಮ್ಮ ಸಂಬಂಧಿಕರ ಮದುವೆ ಇದ್ದಕಾರಣ ನೀನು ನಿನ್ನ ಮೋಟಾರು ಸೈಕಲ್ ತೆಗೆದುಕೊಂಡು ಬಂದರೆ ಇಬ್ಬರು ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರೋಣ ಅಂದಾಗ ಅಮರೇಶ ಆಯಿತು ನಾನು ಸದ್ಯ ಬರುತ್ತೇನೆಂದು ಯಾದಗಿರಿ ಹೊಸ ಬಸ್ ನಿಲ್ದಾಣಕ್ಕೆ ತಮ್ಮ ಮೋಟಾರು ಸೈಕಲ್ ನಂಬರ ಕೆಎ-36, ಇ.ಎಚ್-2926 ನೇದ್ದನ್ನು ತೆಗೆದುಕೊಂಡು ಬಂದಿರುತ್ತಾರೆ. ಹೀಗಿದ್ದು ನಾವಿಬ್ಬರು ಮೋಟಾರು ಸೈಕಲ್ ನಂ.ಕೆಎ-36, ಇ.ಎಚ್.2926 ನೇದ್ದರ ಮೇಲೆ ಯಾದಗಿರಿಯಿಂದ ಅಬ್ಬೆತುಮಕುರ ಗ್ರಾಮಕ್ಕೆ ಹೊರಟೆವು. ಮೋಟಾರು ಸೈಕಲನ್ನು ಅಮರೇಶ ಈತನು ನಡೆಸಿಕೊಂಡು ಹೊರಟಿದ್ದನು. ಮಾರ್ಗ ಮದ್ಯೆ ಡಾನ್ ಬೋಸ್ಕೋ ಶಾಲೆ ದಾಟಿದ ನಂತರ ಬರುವ ರೇಲ್ವೇ ಬ್ರಿಡ್ಜ್ ಹತ್ತಿರದ ಅಬ್ಬೆತುಮಕುರ ಕ್ರಾಸ್ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ನಾವು ನೋಡು ನೋಡುತ್ತಿದ್ದಂತೆ ಗುರುಸುಣಗಿ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಒಬ್ಬ ಕಾರ್ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು, ಆಗ ನಾವಿಬ್ಬರು ಮೋಟಾರು ಸೈಕಲ್ ಮೇಲಿಂದ ರಸ್ತೆಗೆ ಬಿದ್ದಾಗ ಸದರಿ ಅಪಘಾತದಲ್ಲಿ ನನಗೆ ಬಲಗಾಲಿನ ತೊಡೆಗೆ ಭಾರೀ ಗುಪ್ತಗಾಯವಾಗಿ ತೊಡೆ ಮುರಿದಿದ್ದು, ಬಲಗಾಲಿನ ಮೊಣಕಾಲು ಕೆಳಗೆ ಭಾರೀ ರಕ್ತಗಾಯ ಆಗಿರುತ್ತದೆ. ಮೋಟಾರು ಸೈಕಲ್ ನಡೆಸುತ್ತಿದ್ದ ಅಮರೇಶ ಈತನಿಗೆ ಬಲಗಾಲಿನ ಮೊಣಕಾಲಿನ ಕೆಳಗೆ ರಕ್ತಗಾಯ ಮತ್ತು ಗುಪ್ತಗಾಯ ಹಾಗೂ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ. ಈ ಅಪಘಾತವು ನಿನ್ನೆ ದಿನಾಂಕ 28/03/2022 ರಂದು ಮದ್ಯಾಹ್ನ 01-30 ಪಿ.ಎಂ.ಕ್ಕೆ ಜರುಗಿದ್ದು, ನಮಗೆ ಅಪಘಾತಪಡಿಸಿದ ಕಾರ್ ನಂಬರ ನೋಡಲಾಗಿ ಕೆಎ-33, ಎಮ್-7529 ನೇದ್ದು ಇರುತ್ತದೆ, ಅದರ ಚಾಲಕನು ಗಡಿಬಿಡಿ ಮಾಡುತ್ತಾ ನಮಗೆ ತನ್ನ ಹೆಸರು, ವಿಳಾಸ ತಿಳಿಸಿದೇ ಕಾರನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಆತನಿಗೆ ನಾವು ಮತ್ತೆ ನೋಡಿದಲ್ಲಿ ಗುತರ್ಿಸುತ್ತೇವೆ. ಅಮರೇಶ ಈತನು ತಮ್ಮ ಮೇಲಾಧಿಕಾರಿಗಳಿಗೆ ಘಟನೆ ನಡೆದ ಬಗ್ಗೆ ಪೋನ್ ಮಾಡಿ ವಿಷಯ ತಿಳಿಸಿದಾಗ ಯಾದಗಿರಿ ಫೈರ್ ಸ್ಟೇಷನ್ನಿಂದ ಶ್ರೀ ಅನೀಲಕುಮಾರ ತಂದೆ ಶರಣಯ್ಯ ಸ್ವಾಮಿ ಮತ್ತು ಮಹೇಶ ತಂದೆ ರಘುನಾಥ ಸುತಾರ ಇವರುಗಳು ಘಟನಾ ಸ್ಥಳಕ್ಕೆ ಬಂದು ನಮಗೆ ಉಪಚಾರಕ್ಕಾಗಿ ಅಂಬುಲೆನ್ಸ್ ಕರೆಸಿ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ಯಾದಗಿರಿಯ ಸಕರ್ಾರಿ ಆಸ್ಪತ್ರೆಯ ವೈದ್ಯರು ನನಗೆ ಮತ್ತು ಅಮರೇಶನಿಗೆ ಉಪಚರಿಸಿದ ನಂತರ ತಡಮಾಡದೇ ಕೂಡಲೇ ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಿಗೆ ಕಳಿಸಿದ್ದರಿಂದ ನಾವಿಬ್ಬರು ಅಂಬುಲೆನ್ಸ್ ನಲ್ಲಿ ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ಬಂದು ಸೇರಿಕೆ ಆಗಿರುತ್ತೇವೆ, ಸುರಕ್ಷಾ ಆಸ್ಪತ್ರೆಗೆ ನನ್ನ ಮಗ ಸುನೀಲ್ ಮತ್ತು ಹೆಂಡತಿಯಾದ ಅಂಬಮ್ಮ ಇವರು ಬಂದು ಘಟನೆ ಬಗ್ಗೆ ವಿಚಾರಿಸಿರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 28/03/2022 ರಂದು ಮದ್ಯಾಹ್ನ 1-30 ಪಿ.ಎಂ.ದ ಸುಮಾರಿಗೆ ಯಾದಗಿರಿ-ಶಹಾಪುರ ಮುಖ್ಯ ರಸ್ತೆಯ ಬೈಪಾಸ್ (ಗುರುಸುಣಗಿ ರಸ್ತೆ) ರೇಲ್ವೇ ಬ್ರಿಡ್ಜ್ ಹತ್ತಿರ ಅಬ್ಬೆತುಮಕುರ ಕ್ರಾಸ್ ಮುಖ್ಯ ರಸ್ತೆ ಮೇಲೆ ನಾನು ಮತ್ತು ಅಮರೇಶ ಇಬ್ಬರು ಕೂಡಿಕೊಂಡು ಹೊರಟಿದ್ದ ಮೋಟಾರು ಸೈಕಲ್ ನಂ.ಕೆಎ-36, ಇ.ಎಚ್-2926 ನೇದ್ದಕ್ಕೆ ಗುರುಸುಣಗಿ ಕಡೆಯಿಂದ ಯಾದಗಿರಿ ಕಡೆಗೆ ಹೊರಟಿದ್ದ ಕಾರ್ ನಂಬರ ಕೆಎ-33, ಎಮ್-7529 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೇ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ನೇರವಾಗಿ ನಮ್ಮ ಮೋಟಾರು ಸೈಕಲ್ ನೇದ್ದಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಕಾರ್ ಚಾಲಕನ ಮೇಲೆ ಮುಂದಿನ ಕಾನೂನಿನ ಸೂಕ್ತ ಕ್ರಮ ಜರುಗಿಸಿರಿ ಅಂತಾ ಪಿಯರ್ಾದು ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದು, ಮರಳಿ ಠಾಣೆಗೆ 4 ಪಿ.ಎಂ.ಕ್ಕೆ ಬಂದು ಪಿಯರ್ಾದಿಯ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 18/2022 ಕಲಂ 279, 337, 338 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡೆನು. ಇಂದು ದಿನಾಂಕ 04/04/2022 ರಂದು ಬೆಳಿಗ್ಗೆ 3-30 ಎ.ಎಂ.ಕ್ಕೆ ಸದರಿ ಪ್ರಕರಣದಲ್ಲಿನ ಗಾಯಾಳು ಅಮರೇಶ ತಂದೆ ಮಲ್ಲಯ್ಯ ಸ್ವಾಮಿ ಮಠಪತಿ ವಯ;34 ವರ್ಷ, ಜಾ;ಜಂಗಮ, ಉ;ಯಾದಗಿರಿ ಪೈರ್ ಇಲಾಖೆಯಲ್ಲಿ ಪೋಲಿಸ್ ಪೇದೆ, ಸಾ;ಗಲಗ, ತಾ;ದೇವದುರ್ಗ, ಜಿ;ರಾಯಚೂರು ಇತನನ್ನು ದಿನಾಂಕ 04/04/2022 ರಂದು 03-30 ಎ.ಎಮ್ ಕ್ಕೆ ಗಲಗದಲ್ಲಿರುವ ಪಿಹೆಚ್.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿರುತ್ತಾನೆ ಅಂತಾ ಮೃತನ ಹೆಂಡತಿ ಪುರವಣಿ ಹೇಳಿಕೆ ನೀಡಿದ್ದನ್ನು ಪಡೆದುಕೊಂಡಿದ್ದು, ಅದರ ಸಾರಾಂಶದ ಮೇಲಿಂದ ಸದರಿ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ನೇದ್ದನ್ನು ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಮತ್ತು ಮಾಹಿತಿಯನ್ನು ಮಾನ್ಯ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 50/2022 ಕಲಂ : 302 ಐಪಿಸಿ : ದಿನಾಂಕ: 03.04.2022 ರಂದು ರಾತ್ರಿ 08.30 ಗಂಟೆ ಸುಮಾರಿಗೆ ಫಿಯರ್ಾದಿಯ ಮನೆಯ ಮುಂದೆ ಮೃತ ಅಡ್ಡಬಿದ್ದಿದ್ದಾಗ ಆರೋಪಿತನು ಬಂದಿದ್ದು ಆಗ ಮೃತನು ನನಗೆ ಬೇಕಾಗದವರ ಜೊತೆಗೆ ಯಾಕೆ ತಿರುಗಾಡುತ್ತಿ ಅಂತಾ ಕೇಳಿದಕ್ಕೆ ಫಿಯರ್ಾದಿ ಮತ್ತು ಆರೋಪಿತನ ಹೆಂಡತಿ ಎದರಿಗೆ ಆರೋಪಿತನು ಫಿಯರ್ಾದಿಯ ಮನೆಯಲ್ಲಿರುವ ಚಾಕುವಿನಿಂದ ಮೃತನಿಗೆ ಹೊಟ್ಟೆಗೆ ಹಾಕಿ ತಿರುವಿ ಓಡಿ ಹೋಗಿದ ಬಗ್ಗೆ ಫಿಯರ್ಾದಿ ವಗೈರೆ ಇರುತ್ತದೆ.

 

ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 44/2022 ಕಲಂ 304(ಎ) ಐಪಿಸಿ : ಇಂದು ದಿನಾಂಕ 04.0.4.2022 ರಂದು ಸಾಯಂಕಾಲ 6 ಗಂಟೆಗೆ ಗುರಣ್ಣ ತಂದೆ ಮಾಣಿಕ ಮದರಿ ಪಾಟೀಲ ವಯ|| 62 ವರ್ಷ, ಜಾ|| ಗಾಣಿಗ ಉ|| ನಿವೃತ್ತ ಸರಕಾರಿ ನೌಕರ ಸಾ|| ಭೂಸನೂರ ತಾ|| ಆಳಂದ ಜಿ|| ಕಲಬುರಗಿ ಹಾ||ವ|| ಶಹಾಪೂರ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿರುತ್ತಾರೆ. ದೂರಿನ ಸಾರಾಂಶವೇನೆಂದರೆ, ನನ್ನ ತಮ್ಮನಾದ ಬಸವರಾಜ ಪಾಟೀಲ ಈತನ ಮಗ ಓಂಕಾರ ತಂದೆ ಬಸವರಾಜ ಪಾಟೀಲ ವಯ|| 23 ವರ್ಷ, ಜಾ|| ಲಿಂಗಾಯತ ಉ|| ಎಂ.ಕಾಂ ವಿದ್ಯಾಥರ್ಿ ಸಾ|| ಭೂಸನೂರ ಹಾ|| ವ|| ಖಾದ್ರಿಚೌಕ ಕಲಬುರಗಿ ಈತನು ನಿನ್ನೆ ದಿನಾಂಕ 03.04.2022 ರಂದು ತನ್ನ ಸ್ನೇಹಿತರೊಟ್ಟಿಗೆ ಗುರುಮಠಕಲ್ ತಾಲೂಕಿನ ಜೈಗ್ರಾಮ ಗ್ರಾಮದಲ್ಲಿ ನಡೆಯುವ ಚಂದಾಸಾಬ ದಗರ್ಾದ ಉರುಸ್ಗೆ ಅಂತ ತಮ್ಮ ಗುರುಗಳಾದ ಪ್ರಕಾಶ ತಂದೆ ಚಂದ್ರಪ್ಪ ಸುತಾರಿ ಜೈಗ್ರಾಂ ಗ್ರಾಮ ಇವರ ಕರೆಯ ಮೇರೆಗೆ ಜೈಗ್ರಾಂಕ್ಕೆ ಹೊಗಿದ್ದರು. ಇಂದು ದಿನಾಂಕ 04.04.2022 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ನನ್ನ ತಮ್ಮ ಬಸವರಾಜ ಈತನು ನನಗೆ ಫೋನ ಮಾಡಿ ತನ್ನ ಮಗ ಓಂಕಾರ ಈತನು ಗುರುಮಠಕಲ್ ತಾಲೂಕಿನ ಜೈಗ್ರಾಂ ಗ್ರಾಮದಲ್ಲಿ ನೀರಿನ ಹೊಂಡದಲ್ಲಿ ಬಿದ್ದು ಸತ್ತು ಹೋಗ್ಯಾನ ಅಂತ ಅವನ ಸಂಗಡ ಹೋಗಿದ್ದ ಸ್ನೇಹಿತರು ತನಗೆ ಫೋನ ಮಾಡಿ ತಿಳಿಸಿದ್ದಾರೆ ಅಂತ ನನಗೆ ಹೇಳಿದ. ನನ್ನ ತಮ್ಮ ಅನಾರೋಗ್ಯ ಪೀಡಿತನಾಗಿದ್ದರಿಂದ ನಾನು ಮತ್ತು ನನ್ನ ನೆಂಟರಿಷ್ಟರು ಕೂಡಿ ಓಂಕಾರ ಸತ್ತು ಬಿದ್ದಿರುವ ಜೈಗ್ರಾಂ ನೀರಿನ ಹೊಂಡದ ಹತ್ತಿರ ಹೋಗಿ ನೋಡಿದೆವು. ಘಟನೆ ಬಗ್ಗೆ ಓಂಕಾರ ಸಂಗಡ ಕಲಬುರಗಿಯಿಂದ ಬಂದ ಆತನ ಸ್ನೇಹಿತರಾದ 1. ವೀರೇಂದ್ರ ಕುಮಾರ ತಂದೆ ರಾಚಣ್ಣಗೌಡ ಪಾಟೀಲ, 2. ನಾನಾಸಾಹೇಬ ತಂದೆ ಸೈಬಣ್ಣ ಹಚಡದ, 3. ಪ್ರಮೋದ ತಂದೆ ದತ್ತಾತ್ರೇಯ ಜಮಾದಾರ ಎಲ್ಲರೂ ಕಲಬುರಗಿ ಗ್ರಾಮ ಇವರಿಗೆ ವಿಚಾರಿಸಿದಾಗ ನನಗೆ ಗೊತ್ತಾಗಿದ್ದೇನೆಂದರೆ, ನಿನ್ನೆ ರಾತ್ರಿ ದಗರ್ಾ ಸಂದಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂದು ಬೆಳಿಗ್ಗೆ ಓಂಕಾರ ಮತ್ತು ಕಲಬುರಗಿಯಿಂದ ಅವನ ಸಂಗಡ ಹೋಗಿದ್ದ 3 ಜನರು ಕೂಡಿ ಜೈಗ್ರಾಂ ಗ್ರಾಮದ ಊರ ಮುಂದುಗಡೆಯ ಸರಕಾರಿ ಜಮೀನ ಸವರ್ೇ ನಂಬರ 257 ರಲ್ಲಿದ್ದ ಹೊಂಡದಲ್ಲಿ ಈಜಾಡಲು ಹೋಗಿರುತ್ತಾರೆ. ಹೊಂಡದ ನೀರಿನಲ್ಲಿ ಮುಳಗಿ ಓಂಕಾರ ಇಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಸರಕಾರಿ ಜಮೀನನಲ್ಲಿ ಮಲ್ಲಣ್ಣ ತಂದೆ ಯಂಕಣ್ಣ ಪಾಟೀಲ ಜೈಗ್ರಾಂ ಗ್ರಾಮ ಈತನು ಹೊಂಡ ತೆಗೆಸಿ ಅದರಲ್ಲಿ ಸುಮಾರು 10-15 ಫೀಟ್ ಆಳದ ನೀರು ತುಂಬಿಸಿ ಹೊಂಡದ ಸುತ್ತಮುತ್ತ ಯಾವುದೆ ಫಿನಿಶಿಂಗ ವಗೈರೆ ಮಾಡದೆ ಅಪಾಯಕಾರಿ ರೀತಿಯಲ್ಲಿ ಹಾಗೇಯೇ ಬಿಟ್ಟಿದ್ದರಿಂದ ನನ್ನ ತಮ್ಮನ ಮಗ ಓಂಕಾರ ಈತನು ನೀರಿನ ಆಳ ತಿಳಿಯದೆ ಹೊಂಡಕ್ಕೆ ಇಳಿದು ಈಜಾಡಲು ಹೋಗಿ ಮೃತಪಟ್ಟಿರುತ್ತಾನೆ. ನನ್ನ ತಮ್ಮನ ಮಗನಾದ ಓಂಕಾರ ಸಾವಿನಲ್ಲಿ ನಿರ್ಲಕ್ಷ್ಯ ಮತ್ತು ಸಮಂಜಸವಾದ ಕಾಳಜಿಯನ್ನು ವಹಿಸಲು ವಿಫಲನಾಗಿರುವ ಮಲ್ಲಣ್ಣ ಜೈಗ್ರಾಂ ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ. ಅಂತಾ ಆಪಾದಾನೆ

 

ಗೋಗಿ ಪೊಲೀಸ್ ಠಾಣೆ:-
ಗುನ್ನೆ ನಂ: 27/2022 ಕಲಂ: 279, 337, 304 (ಎ) ಐಪಿಸಿ : ಇಂದು ದಿನಾಂಕ: 04/04/2022 ರಂದು 8-15 ಎಎಮ್ ಕ್ಕೆ ಅಜರ್ಿದಾರಳಾದ ವಿಶಾಲಕ್ಷಮ್ಮ ಗಂಡ ಪರೇಶಕುಮಾರ ಪೂಂಜಾಣಿ, ವಯ: 35 ವರ್ಷ, ಜಾತಿ: ಲಿಂಗಾಯತ್ ಉ: ಶಿಕ್ಷಕಿ ಸಾ: ಅಜೀಜ ಕಾಲೋನಿ ಯಾದಗಿರಿ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಟೈಪ್ ಮಾಡಿದ ಅಜರ್ಿ ತಂದು ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ನನ್ನದು ತವರು ಮನೆ ನಾಯ್ಕಲ್ ಗ್ರಾಮವಿದ್ದು ನಾನು ಈಗ ಸುಮಾರು ಹತ್ತು ವರ್ಷದಿಂದ ನಾನು ಯಾದಗಿರಿ ನಗರದಲ್ಲಿರುವ ಪರೇಶಕುಮಾರ ತಂದೆ ನವೀನಚಂದ್ರ ಪಟೇಲ್, ವಯ 42 ವರ್ಷ, ಜಾತಿ: ಪಟೇಲ್ ಸಾ: ಅಜೀಜ ಕಾಲೋನಿ ಇತನಿಗೆ ಪ್ರೀತಿ ಮಾಡಿ ನಾನು ಮದುವೆ ಮಾಡಿಕೊಂಡಿದ್ದು ಇರುತ್ತದೆ. ಅವನೊಂದಿಗೆ ಹತ್ತು ವರ್ಷದಿಂದ ಸಂಸಾರ ಮಾಡಿಕೊಂಡು ಇರುತ್ತಿದ್ದೇನೆ. ಹೀಗಿದ್ದು ಪರೇಶಕುಮಾರ ಈತನು ಯಾದಗಿರಿ ನಗರದಲ್ಲಿ ಹಾರ್ಡವೇರ ಶಾಪ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಇದ್ದನು. ಹೀಗಿದ್ದು ಇಂದು ದಿನಾಂಕ 04-04-2022 ರಂದು ನಾನು ಮತ್ತು ಪರೇಶ ಕುಮಾರ ಇಬ್ಬರು ಬಿಜಾಪುರ ಹತ್ತಿರ ಇರುವ ಗುಡ್ಡದ ದಾನಮ್ಮ ದೇವಸ್ಥಾನಕ್ಕೆ ಹೋಗಲು ನಿಧರ್ಾರ ಮಾಡಿದೇವು. ಆಗ ಪರೇಶ ಕುಮಾರ ಇತನು ಆಯಿತು ಹೋಗಿ ಬರೋಣ ಅಂತ ಅಂದನು. ಆಗ ನಮ್ಮ ಸ್ಕೂಟಿ ನಂ: ಕೆ.ಎ33-ಕ್ಯೂ-5615 ನೇದ್ದರ ಮೇಲೆ ನಾನು ಹಿಂದೆ ಕುಳಿತೇನು. ಪರೇಶಕುಮಾರ ಇತನು ಸ್ಕೂಟಿ ಚಲಾಯಿಸಿಕೊಂಡು ಇಬ್ಬರು ಯಾದಗಿರಿ ಪಟ್ಟಣವನ್ನು ಸಾಯಂಕಾಲ 5 ಗಂಟೆಗೆ ಬಿಟ್ಟೆವು. ನಾವು ಯಾದಗಿರಿದಿಂದ ಶಹಾಪುರಕ್ಕೆ ಬಂದು ನಂತರ ಗೋಗಿ ಮಾರ್ಗವಾಗಿ ಸಾಯಂಕಾಲ 6-30 ಗಂಟೆಗೆ ಹೋಗುತ್ತಿದ್ದಾಗ ಶಹಾಪೂರ-ಸಿಂದಗಿ ರೋಡಿನ ರಬ್ಬನಳ್ಳಿ ಕ್ರಾಸ ಇನ್ನು 300 ಮೀಟರ ದೂರದಲ್ಲಿ ನಾವು ಹೋಗುತ್ತಿದ್ದಾಗ ಆಗ ನಮ್ಮ ಮುಂದುಗಡೆ ಒಬ್ಬ ಆಟೋ ಚಾಲಕ ತನ್ನ ಟಂ-ಟಂ ಆಟೋ ನಂ: ಕೆಎ32-ಸಿ-2637 ನೇದ್ದರಲ್ಲಿ ಇಬ್ಬರು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದನು. ಆಗ ಪರೇಶಕುಮಾರ ಇತನು ಟಂ-ಟಂ ಆಟೋದ ಬಲಗಡೆ ಬಾಜು ಸೈಡಿನಿಂದ ಮುಂದುಗಡೆ ಸ್ಕೂಟಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಆಗ ಆಟೋ ಚಾಲಕ ತನ್ನ ಆಟೋವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದವನೆ ಬಲಗಡೆ ಬಾಜು ಒಮ್ಮೇಲೆ ಕಟ್ಟ್ ಮಾಡಿ ನಮ್ಮ ಸ್ಕೂಟಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದಾಗ ನಮ್ಮ ಸ್ಕೂಟಿಯಿಂದ ನಾನು ಮತ್ತು ಪರೇಶಕುಮಾರ ಇಬ್ಬರು ಕೆಳಗಡೆ ಬಿದ್ದೇವು. ಆಗ ಅಪಘಾತದಿಂದ ಪರೇಶಕುಮಾರ ಇತನಿಗೆ ತಲಗೆ ಭಾರಿ ಒಳಪೆಟ್ಟಾಗಿದ್ದು, ಕಿವಿಯಿಂದ, ಬಾಯಿಂದ ರಕ್ತಬಂದಿರುತ್ತದೆ. ನನಗೆ ಮುಖಕ್ಕೆ ಮತ್ತು ಕೈಗಳಿಗೆ, ಕಾಲಿಗೆ ತರಚಿದ ಗಾಯಗಳು ಆಗಿರುತ್ತವೆ. ಆಗ ಆಟೋದಲ್ಲಿ ಕುಳಿತು ಹೊರಟಿದ್ದ ಇಬ್ಬರು ಜನರು ನನಗೆ ಮತ್ತು ಪರೇಶಕುಮಾರ ಇವರಿಗೆ ಎಬ್ಬಿಸಿದರು. ಆಗ ನಾನು ಅವರ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಮಾಳಪ್ಪ ತಂದೆ ದೇವಿಂದ್ರಪ್ಪ ನಾಯಿಕೋಡಿ, ಸಾ: ಸುಂಬಡ, ಸೈಯ್ಯದ ತಂದೆ ಜಾಪರಅಲಿ ಯಲಗೋಡ,ಸಾ: ಸುಂಬಡ ಅಂತ ತಿಳಿಸಿ ನಮಗೆ ಅಪಘಾತ ಸ್ಥಳಕ್ಕೆ ಅಂಬುಲೇನ್ಸ ಕರೆಯಿಸಿ ಉಪಚಾರ ಕುರಿತು ಸಕರ್ಾರಿ ಆಸ್ಪತ್ರೆ ಶಹಾಪೂರಕ್ಕೆ ಕರೆದುಕೊಂಡು ಬರುತ್ತಿದ್ದಾಗ ಆಗ ಪರೇಶಕುಮಾರ ತಂದೆ ನವೀನಚಂದ್ರ ಈತನು ದಿನಾಂಕ 04-04-2022 ರಂದು ಅಂದಾಜು ಸಾಯಂಕಾಲ 7 ಗಂಟೆಗೆ ಮಾರ್ಗಮದ್ಯ ಮೃತಪಟ್ಟಿರುತ್ತಾನೆ. ನಂತರ ಪರೇಶಕುಮಾರ ಈತನ ಮೃತಶವವನ್ನು ಸಕರ್ಾರಿ ಆಸ್ಪತ್ರೆಯಲ್ಲಿ ಸೇರಿಸಿರುತ್ತೇವೆ . ನಾನು ಪ್ರಥಮ ಚಿಕಿತ್ಸೆಯನ್ನು ಪಡೆದಿರುತ್ತೇನೆ. ನಂತರ ಅಪಘಾತ ಮಾಡಿದ ಟಂ-ಟಂ ಆಟೋ ನಂ: ಕೆಎ-32-ಸಿ-2637 ನೇದ್ದರ ಚಾಲಕ ಹೆಸರು ಮತ್ತು ವಿಳಾಸವನ್ನು ಮಾಳಪ್ಪ, ಹಾಗೂ ಸೈಯ್ಯದ ಇವರಿಂದ ವಿಚಾರಿಸಲಾಗಿ, ಶ್ರೀಶೈಲ್ ತಂದೆ ಹಣಮಂತ ನಾಯಿಕೋಡಿ, ಸಾ: ಸುಂಬಡ ತಾ: ಯಡ್ರಾಮಿ ಅಂತ ಗೊತ್ತಾಗಿರುತ್ತದೆ. ಆದ್ದರಿಂದ ಅಪಘಾತ ಪಡಿಸಿದ ಟಂ-ಟಂ ವಾಹನ ಕೆಎ32-ಸಿ-2637 ನೇದ್ದರ ಚಾಲಕನಾದ ಶ್ರೀಶೈಲ್ ತಂದೆ ಹಣಮಂತ ನಾಯಿಕೋಡಿ, ಸಾ: ಸುಂಬಡ ತಾ: ಯಡ್ರಾಮಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತ ಅಜರ್ಿಯನ್ನು ಸಲ್ಲಿಸಿದ ಮೇರೆಗೆ ಅಂತಾ ಅಜರ್ಿಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 27/2022 ಕಲಂ: 279, 337, 304 (ಎ) ಐಪಿಸಿ ಕಾಯ್ದೆ ನೇದ್ದರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 53/2022. ಕಲಂ. 279,337,338, ಐ.ಪಿ.ಸಿ. : ಇಂದು ದಿನಾಂಕ: 04/04/2022 ರಂದು 21-30 ಗಂಟೆಗೆ ಪಿಯರ್ಾದಿ ಶ್ರೀ ಸ್ವಪ್ನ ಗಂಡ ಆನಂದ ತುಳೇರ ವ|| 34 ಜಾ|| ತುಳೇರ ಉ|| ಮನೆಕೆಲಸ ಸಾ|| ಹಳಿಪೇಠ ಶಹಾಪೂರ-7259294650 ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು. ಸದರಿ ಅಜರ್ಿಯ ಸಾರಾಂಶವೆನೆಂದರೆ. ಶ್ರೀ ಬಲಭೀಮೇಶ್ವರ ದೇವರ ದರ್ಶನ ಮಾಡಿಕೊಂಡು ಬರಲು ನಾನು ಮತ್ತು ನನ್ನ ಅತ್ತೆ ಸೂಗಮ್ಮ ಗಂಡ ಸುಭಾಷ ತುಳೇರ, ನಮ್ಮ ಸಂಬಂದಿಕರಾದ ಜಗದೇವಿ ಗಂಡ ಸಂತೋಷಕುಮಾರ ತುಳೇರ, ಸುರೇಖಾ ಗಂಡ ಮಲ್ಲಣ್ಣ ತುಳೇರ ನಾವೆಲ್ಲರು ದೇವರ ದರ್ಶನ ಮಾಡಿಕೊಂಡು ಬರಲು ನಮ್ಮ ಮನೆಯಿಂದ ದಿನಾಂಕ 01/04/2022 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರಿಗೆ ಹೊರಟು. ಗಂಗಾನಗರದ ಅಲ್ಲೆ ರಸ್ತೆಯ ಮೇಲೆ ಹೋರಟಿದ್ದ ಒಂದು ಆಟೋಚಾಲಕನಿಗೆ ಕೈಮಾಡಿ ನಿಲ್ಲಿಸಿ ಭೀಮರಾಯನ ಗುಡಿಗೆ ಬರಲು ತಿಳಿಸಿದ್ದು ಆಗ ಆಟೊ ಚಾಲಕನು ಸರಿ ಅಂತ ಹೇಳಿದ್ದರಿಂದ ಸದರಿ ಆಟೋ ನಂ ಕೆಎ-33 3128 ನೇದ್ದರಲ್ಲಿ ನಾವೆಲ್ಲರು ಕುಳಿತುಕೊಂಡು ಭೀಮರಾಯನ ಗುಡಿಗೆ ಹೋರಟು ಭೀಮರಾಯನ ಗುಡಿಗೆ ಹೋಗಿ ಬಲಭೀಮೇಶ್ವರ ದೇವರ ಧರ್ಶನ ಮಾಡಿಕೊಂಡು ಮರಳಿ ಸದರಿ ಆಟೋದಲ್ಲಿ ನಾವೆಲ್ಲರು ಕುಳಿತುಕೊಂಡು ನಮ್ಮ ಮನೆಗೆ ಹೋಗುತ್ತಿರುವಾಗ ನಮ್ಮ ಆಟೋಚಾಲಕನು ತನ್ನ ಸೈಡಿಗೆ ನೀದಾನವಾಗಿ ಚಲಾಯಿಸಿಕೊಂಡು ಸುರಪೂರ-ಕಲಬುರಗಿ ಮುಖ್ಯ ರಸ್ತೆಯ ಮೇಲೆ ಉಪ್ಪಿಟ್ಟು ಹೋಟೇಲ್ ಮುಂದೆ ಮದ್ಯಾಹ್ನ 11-30 ಗಂಟೆಯ ಸುಮಾರಿಗೆ ಹೋಗುತ್ತಿರುವಾಗ ಶಹಾಪೂರದ ಬಸವೇಶ್ವರ ಚೌಕ ಕಡೆಯಿಂದ ಒಂದು ಕಾರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋರಟ ಆಟೋಕ್ಕೆ ಡಿಕ್ಕಿಪಡಿಸಿ ಅಪಘಾತಮಾಡಿದ್ದು ಸದರಿ ಅಪಘಾತದಲ್ಲಿ ನನಗೆ ಎಡಗಡೆ ತಲೇಗೆ ರಕ್ತಗಾಯ, ಎಡಗಾಲ ಮೋಳಕಾಲು ಮೇಲೆ, ಮತ್ತು ಕೇಳಗೆ, ಎಡಗಾಲು ಪಾದಕ್ಕೆ ರಕ್ತಗಾಯ, ಬಲಗಾಲ ಮೋಳಕಾಲ ಕೆಳಗೆ ರಕ್ತಗಾಯವಾಗಿದ್ದು. .ನನ್ನ ಅತ್ತೆ ಸೂಗಮ್ಮ ಇವರಿಗೆ ಬಲಗಾಲ ಮೋಳಕಾಲಿಗೆ ತರಚಿದ ಗಾಯ, ಎದೆಗೆ, ತುಟಿಗೆ, ಗುಪ್ತಗಾಯವಾಗಿದ್ದು. ಜಗದೇವಿ ಇವರಿಗೆ ನೋಡಲಾಗಿ ಎಡಗಾಲು ಹಿಂದಿನ ಚೆಪ್ಪಿಗೆ ಭಾರಿ ಗುಪ್ತಗಾಯ. ಎಡಗೈ ಬುಜಕ್ಕೆ ರಕ್ತಗಾಯವಾಗಿದ್ದು. ಸುರೇಖಾ ಇವರಿಗೆ ಮೂಗಿಗೆ ಭಾರಿ ರಕ್ತಗಾಯ, ಬಲಗಾಲ ಪಾದದ ಮೇಲೆ ತರಚಿದ ಗಾಯವಾಗಿದ್ದು ಇರುತ್ತದೆ. ನಾವು ಕುಳಿತುಕೊಂಡು ಹೋರಟ ಆಟೊ ನಂ ಕೆಎ-33,-3128 ನೇದ್ದರ ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಮಲ್ಲಿಕಾಜರ್ುನ ತಂದೆ ರಾಮಣ್ಣ ಮ್ಯಾಗಡಿ ಸಾ|| ಕೋಲ್ಕರ್ ಓಣಿ ಶಹಾಪೂರ. ಅಂತ ತಿಳಿಸಿದನು. ಸದರಿಯವನಿಗೆ ನೋಡಲಾಗಿ ಬಲಮೇಲಕಿಗೆ. ಬಲಗೈ ಮೋಳಕೈಗೆ. ಹೊಟ್ಟೆಗೆ, ತರಚಿದ ಗಾಯ, ಬಲಗಾಲ ಪಾದದ ಕಿಲಿಗೆ ಭಾರಿ ರಕ್ತಗಾಯ, ಬಲಗಾಲಿನ ಸೋಂಟದ ಕಿಲಿಗೆ ಭಾರಿ ಗುಪ್ತ ಗಾಯವಾಗಿದ್ದು ಇರುತ್ತದೆ. ಸದರಿ ಅಪಾಘತವನ್ನು ನೋಡಿ ಅಲ್ಲೆ ಇದ್ದ ನನ್ನ ಮಾವ ಮಹೇಶ ತಂದೆ ಮಾರ್ತಂಡಪ್ಪ ತುಳೇರ ಈತನು ಬಂದು ನಮಗೆ ನೋಡಿ ವಿಚಾರಿಸಿದ್ದು ಇರುತ್ತದೆ. ನಮ್ಮ ಆಟೊಕ್ಕೆ ಅಪಘಾತಮಾಡಿದ ಕಾರ ನೋಡಲಾಗಿ ಅದರ ನಂ ಕೆಎ-31 ಎಂ-6418 ನೇದ್ದು ಇದ್ದು ಅದರ ಪಕ್ಕದಲ್ಲಿ ನಿಂತ್ತಿದ್ದ ಅದರ ಚಾಲನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಭೀಮನಗೌಡ ತಂದೆ ಬಸವರಾಜ ಸಾ|| ಖಾನಾಪೂರ ಎಸ್.ಕೆ. ಅಂತ ತಿಳಿಸಿದನು. ಸದರಿ ಆಟೋ ನಂ ಕೆಎ-33,-3128 ಮತ್ತು ಕಾರ ನಂ ಕೆಎ-31 ಎಂ-6418 ನೇದ್ದವುಗಳು ಜಖಂ ಗೊಂಡಿರುತ್ತವೆ. ನಮಗೆ ಉಪಚಾರ ಕುರಿತು ಅಲ್ಲೆ ಹೋರಟಿದ್ದ ಖಾಸಗಿ ವಾಹನ ನಿಲ್ಲಿಸಿ ಅದರಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಗೆ ಸೇರಿಮಾಡಿದನು. ನನ್ನ ಮಾವ ಮಹೇಶ ಈತನು ಮಲ್ಲಣ್ಣ ತಂದೆ ಧರ್ಮಣ್ಣ ಇವರಿಗೆ ಫೋನ ಮಾಡಿ ವಿಷಯ ತಿಳಿಸಿದ್ದರಿಂದ ಮಲ್ಲಣ್ಣ ಇವರು ಆಸ್ಪತ್ರೆಗೆ ಬಂದು ನಮಗೆ ನೋಡಿ ವಿಚಾರಿಸಿದ್ದು ಇರುತ್ತದೆ. ನಮಗೆ ಉಪಚಾರ ಮಾಡಿದ ವೈದ್ಯಾಧಿಖಾರಿಗಳು ಜಗದೇವಿಗೆ, ಸುರೇಖಾ, ಇವರಿಗೆ ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಮಲ್ಲಣ್ಣ ಇವರು ಜಗದೇವಿಗೆ, ಸುರೇಖಾಗೆ ಇವರಿಗೆ ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರುನಿಡಿದ್ದು ಇರುತ್ತದೆ. ನಾವು ಕುಳಿತುಕೊಂಡು ಹೊರಟ ಆಟೋ ನಂ ಕೆಎ-33, 3128 ನೇದ್ದಕ್ಕೆ ಅಪಘಾತಮಾಡಿದ ಕಾರ ನಂ ಕೆಎ-31
ಎಂ-6418 ನೇದ್ದರ ಚಾಲಕನಾದ ಭೀಮನಗೌಡ ಈತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ್ದು ಸದರಿ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 53/2022 ಕಲಂ: 279, 337, 338, ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 59/2022 ಕಲಂ: 143, 147, 148, 323, 324, 504, 506 ಸಂ 149 ಐಪಿಸಿ : ಇಂದು ದಿನಾಂಕ 04/04/2022 ರಂದು 10.45 ಪಿ.ಎಮ್ ಕ್ಕೆ ಅಜರ್ಿದಾರರಾದ ಕಾಳಮ್ಮ ಗಂಡ ಮಹಾದೇವಪ್ಪ ಗಂಗೋತ್ರಿ ವ|| 45ವರ್ಷ ಜಾ|| ಹಿಂದೂ ಹೊಲೆಯ ಉ|| ಕೂಲಿ ಸಾ|| ವಂದಗನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿ ಸಲ್ಲಿಸಿದ್ದು ಅಜರ್ಿಯ ಸಾರಾಂಶವೇನೆಂದರೆ, ನನಗೆ 2 ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದು ನಾನು ನನ್ನ ಮಕ್ಕಳೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೇನೆ. ನನ್ನ ಹಿರಿಯ ಮಗನಾದ ಮೌನೇಶ ತಂದೆ ಮಹಾದೇವಪ್ಪ ಗಂಗೋತ್ರಿ ವ|| 20ವರ್ಷ ಜಾ|| ಹೊಲೆಯ ಈತನು ಅಟೋ ನಡೆಸಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ 04/04/2022 ರಂದು ಸಂಜೆ 7.00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತಿದ್ದೆನು. ಅದೇ ವೇಳೆಗೆ ನನ್ನ ಮಗನಾದ ಮೌನೇಶನು ತನ್ನ ಅಟೋದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಜನರನ್ನು ಕರೆದುಕೊಂಡು ಮನೆಯ ಹತ್ತಿರ ಬರುತ್ತಿದ್ದಾಗ ನಮ್ಮೂರ ಮಾದಿಗ ಜನಾಂಗದ 1) ತಿಪ್ಪಣ್ಣ ತಂದೆ ರಾಮಚಂದ್ರ ಮಾಸೂತಿ, 2) ನಿಂಗಪ್ಪ ತಂದೆ ಮಹಾದೇವಪ್ಪ ಮಾಸೂತಿ, 3) ಮಾನಪ್ಪ ತಂದೆ ರಾಮಚಂದ್ರ ಮಾಸೂತಿ, 4) ಯಂಕಪ್ಪ ತಂದೆ ಶಾಂತಪ್ಪ ಮಾಸೂತಿ ಮತ್ತು 5) ಭೀಮಪ್ಪ ತಂದೆ ಶಾಂತಪ್ಪ ಮಾಸೂತಿ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ, ಕಲ್ಲು ಹಿಡಿದುಕೊಂಡು ಬಂದವರೆ ನನ್ನ ಮಗನ ಅಟೋವನ್ನು ತಡೆದು ನಿಲ್ಲಿಸಿ ಅಟೋ ಬಿಟ್ಟು ಕೆಳಗೆ ಬಾರಲೇ ಮೌನೆ ನಿನ್ನ ಸೊಕ್ಕು ಜಾಸ್ತಿಯಾಗಿದೆ ಮಗನೇ ನೀನು ನಮ್ಮ ಹುಡುಗರ ಮುಂದೆ ಕಣ್ಣು ಕಿಸಿತೀಯಂತೆ ಅಂತಾ ಬೈಯುತ್ತಿದ್ದಾಗ ನನ್ನ ಮಗನು ಅಟೋದಿಂದ ಕೆಳಗೆ ಇಳಿದು ಯಾಕರೆಪ್ಪಾ ನಾನೇನು ಮಾಡೀನಿ ಸುಮ್ಮನೆ ನನ್ನ ಜೊತೆ ಯಾಕೆ ಜಗಳ ಮಾಡಾಕ ಬಂದೀರಿ ಅಂದಾಗ ಅವರಲ್ಲಿನ ತಿಪ್ಪಣ್ಣನು ನನ್ನ ಮಗನಾದ ಮೌನೇಶನ ಹೊಟ್ಟೆಗೆ ಬಡಿಗೆಯಿಂದ ಹೊಡೆದು ಗುಪ್ತಗಾಯ ಮಾಡಿದನು, ನಿಂಗಪ್ಪನು ಕಲ್ಲಿನಿಂದ ಮೌನೇಶನ ಬೆನ್ನಿಗೆ ಮತ್ತು ತಲೆಗೆ ಹೊಡೆದು ಗುಪ್ತಗಾಯ ಮಾಡಿದನು, ಯಂಕಪ್ಪನು ಕೈಯಿಂದ ಮೌನೇಶನ ತುಟಿಯ ಹತ್ತಿರ ಹೊಡೆದಿದ್ದರಿಂದ ತುಟಿಯು ಕಚ್ಚಿ ರಕ್ತಗಾಯವಾಗಿದ್ದು, ಆಗ ಭೀಮಪ್ಪ ಮತ್ತು ಮಾನಪ್ಪ ಇವರು ಬಿಡಬೇಡರಿ ಈ ಮಗನದು ಸೊಕ್ಕು ಜಾಸ್ತಿಯಾಗಿದೆ ಅನ್ನುತ್ತಾ ಕೈಯಿಂದ ಮೌನೇಶನ ಬೆನ್ನಿಗೆ ಹೊಡೆಯುತ್ತಿದ್ದಾಗ ನನ್ನ ಮಗನಾದ ಮೌನೇಶನು ಸತ್ತೆನೆಪ್ಪೋ ಅಂತಾ ಚೀರುತ್ತಿದ್ದಾಗ ತಕ್ಷಣ ನಾನು ಬಿಡಿಸಲು ಹೋಗಿದ್ದು ಆಗ ಅವರು ನನಗೂ ಈ ಸೂಳಿಯದು ಸೊಕ್ಕು ಜಾಸ್ತಿಯಾಗಿದೆ ಮಗನಿಗೆ ಬುದ್ದಿ ಕಲಿಸಲು ಬರೋದಿಲ್ಲೇನು ಅಂತಾ ಅವಾಚ್ಯವಾಗಿ ಬೈದರು. ಆಗ ಅಲ್ಲಿಯೇ ಹತ್ತಿರದಲ್ಲಿದ್ದ ನಮ್ಮೂರ ಗೋಪಾಲ ತಂದೆ ಮಾನಪ್ಪ ಕಾಂಬಳೆ ಮತ್ತು ಚಿಂಚೋಳಿ ಗ್ರಾಮ ಬಸವರಾಜ ತಂದೆ ನಿಂಗಪ್ಪ ಕಟ್ಟಿಮನಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ನನ್ನ ಮಗನಾದ ಮೌನೇಶನಿಗೆ ಹೊಡೆಯುವುದನ್ನು ಬಿಟ್ಟು ಅವಾಚ್ಯವಾಗಿ ಬೈಯುತ್ತಾ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿ ಹೋದರು. ನನ್ನ ಮಗನಾದ ಮೌನೇಶನಿಗೆ ಗಾಯಗಳಾಗಿದ್ದರಿಂದ ಸಕರ್ಾರಿ ಆಸ್ಪತ್ರೆ ಕೆಂಭಾವಿಯಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ವಿಜಯಪೂರ ಆಸ್ಪತ್ರೆಗೆ ಕಳುಹಿಸಿ ನಾನು ಠಾಣೆಗೆ ಬಂದು ಅಜರ್ಿ ನೀಡಿದ್ದು ನನ್ನ ಮಗನಾದ ಮೌನೇಶನಿಗೆ ತಡೆದು ನಿಲ್ಲಿಸಿ ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ಗಾಯಗೊಳಿಸಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದವರ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆಯ ಗುನ್ನೆ ನಂ 59/2022 ಕಲಂ 143, 147, 148, 323, 324, 504, 506 ಸಂ. 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 05-04-2022 09:31 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080