ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-05-2022
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 59/2022 ಕಲಂ:279, 337, 338 ಐಪಿಸಿ : ದಿನಾಂಕ:04/05/2022 ರಂದು 3-30 ಪಿಎಮ್ ಕ್ಕೆ ಶ್ರೀ ಸಿಮೆಯೋನ ತಂದೆ ದೇವಸುಂದ್ರಪ್ಪ ಬಾಯರ್, ವ:55, ಜಾ:ಕ್ರಿಶ್ಚನ, ಉ:ಗೌಂಡಿ ಕೆಲಸ ಸಾ:ಸವರ್ೆ ನಂ. 147 ಖುಲೆವಾಡಿ ಚಂದನ ನಗರ ಪುಣೆ ಹಾ:ವ:ರಾಜೀವಗಾಂಧಿ ನಗರ ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಾನು ಪುಣೆ ನಗರದಲ್ಲಿ ಗೌಂಡಿ ಕೆಲಸ ಮಾಡಿಕೊಂಡು ಹೆಂಡತಿ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ಶಿವನೂರು ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮದುವೆ ಇದ್ದ ಪ್ರಯುಕ್ತ ನಾನು ಸುಮಾರು 4-5 ದಿವಸಗಳ ಹಿಂದೆ ಪುಣೆಯಿಂದ ಯಾದಗಿರಿಗೆ ಬಂದು ಯಾದಗಿರಿಯಲ್ಲಿ ಇದ್ದೇನು. ದಿನಾಂಕ:01/05/2022 ರಂದು ನಮ್ಮ ಸಂಬಂಧಿಕರ ಮದುವೆ ವಡಗೇರಾ ತಾಲೂಕಿನ ಶಿವನೂರು ಗ್ರಾಮದಲ್ಲಿ ಇದ್ದ ಪ್ರಯುಕ್ತ ಸದರಿ ಮದುವೆಗೆ ಹೋಗಬೇಕೆಂದು ನಾನು ಮತ್ತು ನಮ್ಮ ತಾಯಿ ತಿಪ್ಪಮ್ಮ ಗಂಡ ದೇವಸುಂದ್ರಪ್ಪ ಮತ್ತು ನಮ್ಮ ತಮ್ಮನ ಮಗಳಾದ ಪ್ರಾರ್ಥನಾ ತಂದೆ ಯೇಸುರಾಜ ವ:08 ವರ್ಷ ಎಲ್ಲರೂ ಕೂಡಿ ರಿಯರ್ ಅಟೋ ನಂ. ಕೆಎ 33 ಎ 8679 ನೇದ್ದನ್ನು ಯಾದಗಿರಿಯಿಂದ ಬಾಡಿಗೆ ಮಾತಾಡಿಕೊಂಡು ಸದರಿ ಅಟೋದಲ್ಲಿ ಕುಳಿತು 10 ಎಎಮ್ ಕ್ಕೆ ಯಾದಗಿರಿಯಿಂದ ವಡಗೇರಾ ಮಾರ್ಗವಾಗಿ ಶಿವನೂರಕ್ಕೆ ಹೊರಟೆವು. ಸದರಿ ಅಟೋ ಚಾಲಕ ಯಸುರಾಜ ತಂದೆ ದೇವಸುಂದ್ರಪ್ಪ ಬಾಯರ್ ಸಾ:ಆನೂರು (ಬಿ) ಈತನು ಅಟೋ ಚಲಾಯಿಸಿಕೊಂಡು ಹೊರಟನು. ಯಾದಗಿರಿ-ವಡಗೇರಾ ಮೇನ ರೋಡ ಗಡ್ಡೆಸೂಗೂರು ಗ್ರಾಮ ದಾಟಿದ ನಂತರ ಆಂದ್ರದವರ ಶೆಡ್ಡ ಹತ್ತಿರ ಬೆಳಗ್ಗೆ 10-30 ಗಂಟೆ ಸುಮಾರಿಗೆ ನಾವು ಕುಳಿತು ಹೊರಟ ಅಟೋ ಚಾಲಕನು ತನ್ನ ಅಟೋವನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ರಸ್ತೆ ಮೇಲೆ ಯಾವುದೋ ಒಂದು ವಾಹನ ತನ್ನ ಪಾಡಿಗೆ ತಾನು ಬರುತ್ತಿದ್ದದ್ದನ್ನು ನೋಡಿ, ನಾವು ಕುಳಿತು ಹೊರಟ ಅಟೋ ಚಾಲಕನು ತನ್ನ ಅಟೋವನ್ನು ಅದಕ್ಕೆ ಗುದ್ದುವುದನ್ನು ತಪ್ಪಿಸಲು ಹೋಗಿ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪಲ್ಟಿ ಮಾಡಿದನು. ಆಗ ಸದರಿ ಅಟೋ ರಸ್ತೆ ಪಕ್ಕದಲ್ಲಿ ಉರುಳಿ ಬಿತ್ತು. ಅಪಘಾತದಲ್ಲಿ ನನಗೆ ಬಲಗಡೆ ಬೆನ್ನಿಗೆ ತರಚಿದ ಗಾಯ ಮತ್ತು ಬಲ ತಲೆ ಹಿಂಭಾಗ ತರಚಿದ ಗಾಯವಾಗಿತ್ತು. ಅಪಘಾತದಲ್ಲಿ ನಮ್ಮ ತಾಯಿಗೆ ಎಡಗಡೆ ಪಕ್ಕೆಗೆ ಭಾರಿ ಒಳಪೆಟ್ಟು, ಎಡ ಭುಜದಲ್ಲಿ ಭಾರಿ ಒಳಪೆಟ್ಟಾಗಿತ್ತು ಮತ್ತು ಹಣೆಗೆ ತರಚಿದ ಗಾಯವಾಗಿತ್ತು. ನಮ್ಮ ತಮ್ಮನ ಮಗಳಾದ ಪ್ರಾರ್ಥನಾ ಇವಳಿಗೆ ಎಡ ಬೆನ್ನಿಗೆ ತರಚಿದ ಗಾಯ, ಎಡಗೈ ಭುಜದಿಂದ ಅಂಗೈ ವರೆಗೆ ತರಚಿದ ಗಾಯಗಳಾಗಿದ್ದವು. ಅಟೋ ಚಾಲಕನಾದ ಯಸುರಾಜನಿಗೆ ಅಪಘಾತದಲ್ಲಿ ಎಡ ಮೊಳಕಾಲಿಗೆ ತರಚಿದ ಗಾಯ ಮತ್ತು ಟೊಂಕಕ್ಕೆ ಅಲ್ಲಲ್ಲಿ ಒಳಪೆಟ್ಟಾಗಿದ್ದವು. ಆಗ ಯಾವುದೋ ಒಂದು ರಸ್ತೆ ಮೇಲೆ ಹೋಗುತ್ತಿದ್ದ ಖಾಸಗಿ ವಾಹನದಲ್ಲಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆಯಾಗಿರುತ್ತೆವೆ. ವೈದ್ಯಾಧಿಕಾರಿಗಳು ಆರ್.ಟಿ.ಎ ಎಮ್.ಎಲ್.ಸಿ ಮಾಡಿದಾಗ ವಡಗೇರಾ ಠಾಣೆ ಪೊಲೀಸರು ಎಮ್.ಎಲ್.ಸಿ ವಿಚಾರಣೆ ಮಾಡಲು ಬಂದರು. ಆಗ ನಾವು ನಮ್ಮ ತಾಯಿಗೆ ತೋರಿಸುವವರು ಯಾರು ಇಲ್ಲ ಅವರಿಗೆ ತೋರಿಸಿ, ನಮ್ಮ ಹಿರಿಯರಿಗೆ ವಿಚಾರ ಮಾಡಿಕೊಂಡು ಠಾಣೆಗೆ ಬಂದು ದೂರು ಕೊಡುತ್ತೇವೆ ಎಂದು ಹೇಳಿರುತ್ತೇವೆ. ಈಗ ನಮ್ಮ ತಾಯಿಯವರಿಗೆ ನಾನು ಆಸ್ಪತ್ರೆಗೆ ತೋರಿಸಿ, ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ರಿಯರ್ ಅಟೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 59/2022 ಕಲಂ:279, 337, 338 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 60/2022 ಕಲಂ: 379 ಐಪಿಸಿ : ದಿನಾಂಕ: 04/05/2022 ರಂದು 5-30 ಪಿಎಮ್ಕ್ಕೆ ಶ್ರೀ ವಿಶ್ವನಾಥರೆಡ್ಡಿ ತಂದೆ ಶರಣಪ್ಪ ಮಾಲಿಪಾಟಿಲ್, ವ:45, ಜಾ:ಲಿಂಗಾಯತರೆಡ್ಡಿ, ಉ:ಒಕ್ಕಲುತನ ಸಾ:ಹಿರೆ ರಾಯಕುಂಪಿ ತಾ:ದೇವದುರ್ಗ ಜಿ:ರಾಯಚೂರು ಇದ್ದು ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೆನೆಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿರುತ್ತೇನೆ. ನಮಗೆ ಹೊಲ ಮನೆಗೆ ತಿರುಗಾಡಲು ಅಂತಾ ಒಂದು ಹೀರೊ ಸ್ಪೇಲಂಡರ್ ಮೋಟರ ಸೈಕಲ್ ನಂಬರ: ಕೆಎ 36 ಇವೈ 5580 ನೇದನ್ನು ಖರೀದಿ ಮಾಡಿದ್ದು, ನನ್ನ ಹೆಸರಿನಲ್ಲಿ ನೋಂದಣಿ ಇರುತ್ತದೆ. ಹೀಗಿದ್ದು ದಿನಾಂಕ: 23/04/2022 ರಂದು ಕೆಲಸದ ಪ್ರಯುಕ್ತ ನಮ್ಮ ಹೆಣ್ಣುಮಕ್ಕಳಿಗೆ ಶಹಾಪೂರಕ್ಕೆ ಹೋಗಬೇಕಾಗಿರುವುದರಿಂದ ಅವರಿಗೆ ಕದರಾಪೂರ ಗೇಟವರೆಗೆ ನನ್ನ ಮೋಟರ್ ಸೈಕಲ್ ಮೇಲೆ ಕರೆದುಕೊಂಡು ಬಂದು ಅಲ್ಲಿಂದ ಅವರಿಗೆ ಶಹಾಪೂರ ಬಸ್ಸಿಗೆ ಹತ್ತಿಸಿ ಕಳುಹಿಸಿದೆನು. ನನಗೆ ವಡಗೇರಾ ಪಟ್ಟಣದಲ್ಲಿ ಕೆಲಸ ಇದ್ದುದ್ದರಿಂದ ನಾನು ನನ್ನ ಮೊಟರ್ ಸೈಕಲ್ ಮೇಲೆ ವಡಗೇರಾಕ್ಕೆ ಬರುತ್ತಿದ್ದೇನು. ಮದ್ಯಾಹ್ನ 12 ಗಂಟೆ ಸುಮಾರಿಗೆ ವಡಗೇರಾ-ತುಮಕೂರು ಮೇನ ರೋಡ ವಡಗೇರಾ ಮೊರಾಜರ್ಿ ದೇಸಾಯಿ ಶಾಲೆ ಸಮೀಪ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾ ನಿಂತಿದ್ದ ನಮ್ಮ ಪರಿಚಯದ ರಂಗಪ್ಪ ತಂದೆ ಭೀಮಪ್ಪ ಚಿನ್ನ ದಾಸರ ಈತನು ನನಗೆ ಕರೆದಾಗ ನಾನು ಮೋಟರ್ ಸೈಕಲ್ ನಿಲ್ಲಿಸಿ, ಗಾಡಿಯನ್ನು ಬಂದ ಮಾಡಿ ಕೀಲಿ ಕೈಯನ್ನು ಅದಕ್ಕೆ ಬಿಟ್ಟು ರೋಡ ಇಳಿದು ಕೆಳಗೆ ಆತನ ಸಮೀಪ ಹೋಗಿ ಮಾತಾಡುತ್ತಿದ್ದಾಗ ಯಾರೋ ಇಬ್ಬರೂ ಹುಡುಗರು ಮೋಟರ್ ಸೈಕಲ್ ಮೇಲೆ ಬಂದವರೆ ನನ್ನ ಮೋಟರ್ ಸೈಕಲ್ ಗೆ ಚಾವಿ ಬಿಟ್ಟಿದ್ದನ್ನು ನೋಡಿದವರೆ ಅವರಲ್ಲಿ ಹಿಂದೆ ಕುಳಿತ ಒಬ್ಬನು ಕೆಳಗೆ ಇಳಿದು ನನ್ನ ಮೋಟರ್ ಸೈಕಲ್ ಚಾಲು ಮಾಡಿಕೊಂಡು ಹೋದನು. ಆಗ ನಾನು ಮತ್ತು ರಂಗಪ್ಪ ಇಬ್ಬರೂ ಕೂಡಿ ನಮ್ಮ ಗಾಡಿ ಯಾಕೆ ಒಯ್ಯುತ್ತಿ ಎಂದು ಹಿಂದೆ ಹಿಂದೆ ಓಡುತ್ತಾ ಕೂಗಿದರು ಅವರು ನಿಲ್ಲದೆ ನನ್ನ ಮೋಟರ್ ಸೈಕಲ್ ಕಳುವು ಮಾಡಿಕೊಂಡು ಹೋದರು. ನಾವು ಹಿಂದೆ ಹಿಂದೆ ಓಡಿದರು ನಮಗೆ ಸಿಗದೆ ಮೋಟರ್ ಸೈಕಲ್ ಸಮೇತ ಪರಾರಿಯಾಗಿರುತ್ತಾರೆ. ಬೆನ್ನಿಗೆ ನಾನು ಮತ್ತು ರಂಗಪ್ಪ ಇಬ್ಬರೂ ವಡಗೇರಾ, ಕೋನಹಳ್ಳಿ, ಹಾಲಗೇರಾ, ಗಡ್ಡೆಸೂಗೂರು ಮುಂತಾದ ಕಡೆ ಹುಡುಕಾಡಿದರು. ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಕಾರಣ ಯಾರೋ ಕಳ್ಳರು ದಿನಾಂಕ:23/04/2022 ರಂದು 12 ಪಿಎಮ್ ಸುಮಾರಿಗೆ ನನ್ನ ಹಿರೋ ಸ್ಪ್ಲೇಂಡರ ಮೋಟರ್ ಸೈಕಲ್ ನಂ. ಕೆಎ 36 ಇವೈ 5580 ಅ:ಕಿ: 50,000/-ನೇದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಕಳುವಾದ ನನ್ನ ಸ್ಪ್ಲೇಂಡರ ಮೋಟರ್ ಸೈಕಲ್ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ಕಳುವಾದ ನನ್ನ ಸ್ಪ್ಲೇಂಡರ ಮೋಟರ್ ಸೈಕಲ್ ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.60/2022 ಕಲಂ: 379 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ: 323, 498(ಎ), 504, 506 ಸಂಗಡ 34 ಐಪಿಸಿ : @ ಕಸ್ತೂರಿ ಗಂಡ ಶಂಕರ ಅಣಬಿ ವ|| 23 ವರ್ಷ ಜಾ|| ಹೊಲೆಯ ಉ|| ಮನೆಗೆಲಸ ಸಾ|| ಹಸನಾಪುರ ತಾ|| ಸುರಪುರ ಈಕೆಯು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ನನಗೆ ಸುಮಾರು ನಾಲ್ಕು ವರ್ಷಗಳ ಹಿಂದೆ ಹಸನಾಪುರದ ಶಂಕರ ತಂದೆ ಯಮನಪ್ಪ ಅಣಬಿ ಈತನೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯಾದ 2-3 ವರ್ಷಗಳವರೆಗೆ ಗಂಡ ಹಾಗೂ ಗಂಡನ ಮನೆಯವರು ಅನ್ಯೋನ್ಯವಾಗಿದ್ದು, ನಮ್ಮ ದಾಂಪತ್ಯ ಜೀವನದಲ್ಲಿ 3 ವರ್ಷದ ಯಲ್ಲಾಲಿಂಗ ಎಂಬ ಗಂಡು ಮಗ ಮತ್ತು 10 ತಿಂಗಳ ಅಂಜಲಿ ಎಂಬ ಹೆಣ್ಣುಮಗಳು ಇರುತ್ತಾಳೆ. ಈಗ ಸುಮಾರು 1 ವರ್ಷದಿಂದ ನನ್ನ ಗಂಡ ಹಾಗೂ ಗಂಡನ ಮನೆಯವರು ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಾ ಹೊಡೆ ಬಡೆ ಮಾಡುತ್ತಿದ್ದರು. ನಾನು ಮುಂದೆ ಸರಿ ಹೋಗಬಹುದು ಅಂತಾ ತಿಳಿದು ಸುಮ್ಮನಿದ್ದೆನು. ನಾನು ಆಗಾಗ ನನ್ನ ತವರು ಮನೆಯಾದ ಸುರಪುರ ತಾಲ್ಲೂಕಿನ ಬೋನಾಳ ಗ್ರಾಮಕ್ಕೆ ಹೋದಾಗ ನನ್ನ ತಂದೆ ದೇವಿಂದ್ರಪ್ಪ ಮದ್ರಿಕಿ, ತಾಯಿ ಶಂಕ್ರೆಮ್ಮ ಮದ್ರಿಕಿ ಹಾಗೂ ಅಣ್ಣನಾದ ಬಸವರಾಜ ಮದ್ರಿಕಿ ಇವರಿಗೆ ಹೇಳಿದಾಗ ಸಂಸಾರದಲ್ಲಿ ಇದು ಇದ್ದಿದೆ. ಹೊಂದಿಕೊಂಡು ಹೋಗಬೇಕು ಅಂತಾ ಬುದ್ದಿ ಮಾತು ಹೇಳಿ ಕಳುಹಿಸುತ್ತಿದ್ದರು. ಈಗ ಸುಮಾರು 09 ತಿಂಗಳದಿಂದ ಬೋನಾಳ ಗ್ರಾಮದಲ್ಲಿ ನಾನು ನನ್ನ ತಂದೆ ತಾಯಿಯ ಬಳಿ ಬಂದು ಇದ್ದೇನು. ಹಿಗಿದ್ದು ದಿನಾಂಕ:01/05/2022 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ನಾನು ಮತ್ತು ನನ್ನ ತಂದೆಯಾದ ದೇವಿಂದ್ರಪ್ಪ ಮದ್ರಿಕಿ, ತಾಯಿಯಾದ ಶೆಂಕ್ರೆಮ್ಮ ಮದ್ರಕಿ, ಅಣ್ಣನಾದ ಬಸವರಾಜ ಮದ್ರಿಕಿ ಎಲ್ಲರೂ ಕೂಡಿ ನನ್ನ ಗಂಡನ ಮನೆಯವರಿಗೆ ಹೇಳಿ ಬಿಟ್ಟು ಹೋಗಲು ಬಂದಾಗ ನನ್ನ ಗಂಡನ ಮನೆಯಲ್ಲಿ 1) ನನ್ನ ಗಂಡ ಶಂಕರ ತಂದೆ ಯಮನಪ್ಪ ಅಣಬಿ, 2) ಅತ್ತೆಯಾದ ಭೀಮವ್ವ ಗಂಡ ಯಮನಪ್ಪ ಅಣಬಿ, 3) ಅತ್ತೆಯ ಅಕ್ಕಳಾದ ಹಣಮವ್ವ ಗಂಡ ಪ್ರಭು ಜಿನ್ನಾಪುರ ಮತ್ತು 4) ಭಾವನಾದ ಮಾನಪ್ಪ ತಂದೆ ಯಮನಪ್ಪ ಅಣಬಿ ಎಲ್ಲರೂ ಕೂಡಿ ಈ ಸೂಳೆಗೆ ಅಡುಗೆ ಮಾಡಲು ಬರುವುದಿಲ್ಲ, ನಮ್ಮ ಮಾತು ಕೆಳುವುದಿಲ್ಲ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಎಲ್ಲಿ ನಿಮ್ಮ ಮಾತು ಕೆಳಿಲ್ಲ ಅಂತಾ ಅನ್ನುತ್ತಿದ್ದಾಗ ನನ್ನ ಗಂಡ ಶಂಕರ ಇತನು ನನಗೆ ಕೈಯಿಂದ ಹೊಟ್ಟೆಗೆ ಹೊಡೆದಿರುತ್ತಾನೆ. ಅತ್ತೆ ಭೀಮವ್ವ ಇವಳು ಕಾಲಿನಿಂದ ಒದ್ದಿರುತ್ತಾಳೆ. ಅತ್ತೆಯ ಅಕ್ಕಳಾದ ಹಣಮವ್ವ ಇವಳು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾಳೆ. ಭಾವನಾದ ಮಾನಪ್ಪ ಇತನು ನನಗೆ ದಬ್ಬಿಸಿಕೊಟ್ಟನು. ಎಲ್ಲರು ಹೊಡೆದು ಗುಪ್ತಗಾಯ ಮಾಡಿದರು. ಆಗ ಅಲ್ಲೆ ಇದ್ದ ನನ್ನ ತಂದೆ ದೇವಿಂದ್ರಪ್ಪ ತಾಯಿ ಶಂಕ್ರೆಮ್ಮ, ಅಣ್ಣ ಬಸವರಾಜ ಎಲ್ಲರು ಕೂಡಿ ಜಗಳವನ್ನು ನೋಡಿ ಬಿಡಿಸಿಕೊಂಡರು. ಇವರು ಬಿಡಿಸಿದ್ದಕ್ಕೆ ಇವತ್ತು ಬಿಟ್ಟಿವಿ ಇಲ್ಲಂದರೆ ನಿನ್ನ ಜೀವ ಹೊಡೆಯದೆ ಬಿಡುತ್ತಿರಲಿಲ್ಲ ಅಂತಾ ಜೀವದ ಬೇದರಿಕೆ ಹಾಕಿ ಅಲ್ಲಿಂದ ಹೊದರು. ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆದು ಒದ್ದಿದರಿಂದ ನನಗೆ ಯಾವುದೇ ಗಾಯಗಳು ಆಗಿರುವದಿಲ್ಲ ನಾನು ಆಸ್ಪತ್ರೆಗೆ ತೋರಿಸಿಕೊಂಡಿರುವದಿಲ್ಲ. ನಂತರ ನಾನು ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ಅಣ್ಣನ ಜೋತೆ ವಿಚಾರ ಮಾಡಿ ನಮ್ಮ ಮರಿಯಾದಿಗೆ ಅಂಜಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿರುತ್ತೇನೆ. ಕಾರಣ ಸುಮಾರು 1 ಒಂದು ವರ್ಷದಿಂದ ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತ ಬಂದು ನನಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 67/2022 ಕಲಂ: 323, 498(ಎ), 504, 506 ಸಂಗಡ 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 35/2022 323, 324, 504, 506 ಸಂ. 34 ಐಪಿಸಿ : ದಿನಾಂಕ:03/05/2022 ರಂದು ಸಾಯಂಕಾಲ 18.30 ಗಂಟೆಯ ಫಿರ್ಯಾದಿಯು ಕವಳಿ ಕಟಾವು ಮಾಡಲು ಕವಳಿ ಮಶಿನ್ ಕೇಳಲು ಹೆಬ್ಬಾಳ(ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಹೋಗಿ ಪೂಲಿನ ಹತ್ತಿರ ಇರುವ ಹೊಂಗೆ ಗಿಡದ ಹತ್ತಿರ ನಿಂತಾಗ, ಆರೋಪಿತನಾದ ಶರಣಗೌಡ ತಂದೆ ಪರ್ವತರೆಡ್ಡಿಗೌಡ ಪೊಲೀಸ್ ಪಾಟೀಲ ಈತನು ಪಿರ್ಯಾದಿಯ ಹತ್ತಿರ ಬಂದು ಹಳೆಯ ವೈಮನಸ್ಸಿನಿಂದ ಏ ಮಗನೆ ಶಿವನಂದ್ಯಾ ನೀನು ಯಾಳವಾರ ಬಿಟ್ಟು ಇಲ್ಲಿಗೆ ಬಂದು ಜಗಳ ಹಚ್ಚುತ್ತಿಯೇನು ಮಗನೆ, ನಮ್ಮದೆ ತಿಂದು ನಮಗೆ ಎದುರಾಗುತ್ತೇನು ಅಂತಾ ಅಂದಾಗ, ಪಿರ್ಯಾದಿಯು ಏನೋ ಶರಣಪ್ಪ ದೊಡ್ಡವರು ಅನ್ನುವದು ನಿನಗೆ ಗೊತ್ತಿಲ್ಲೇನು, ಹೀಗೆಲ್ಲಾ ಮಾತಾಡಾವದು ಸರಿ ಅಲ್ಲ ಅಂತಾ ಅಂದಿದ್ದಕ್ಕೆ, ಆರೋಪಿ ಶರಣಪ್ಪನು ಏ ಮಗನೆ ನೀನು ನನಗೆ ಬುದ್ದಿವಾದ ಹೇಳುತ್ತಿ ಏನು ಅಂತಾ ಅಂದವನೆ, ಕೋಳಿ ಕೊಯ್ಯುವ ಚೂರಿಯಿಂದ ಫಿರ್ಯಾದಿಗೆ ಹೊಡೆಯಲು ಬಂದಾಗ ಫಿರ್ಯಾದಿಯು ಎಡಗೈ ಮುಂದಕ್ಕೆ ಒಯ್ದಾಗ ಯಡಗೈ ಹೆಬ್ಬರಳಿಗೆ & ಪಕ್ಕದ ಎರಡು ಬೆರಳುಗಳಿಗೆ ರಕ್ತಗಾಯವಾಗಿದ್ದು, ಅಲ್ಲದೆ ಫಿರ್ಯಾದಿಯ ಎಡಗಡೆ ಹೊಟ್ಟೆ ಹತ್ತಿರ ಚಾಕುದಿಂದ ಹೊಡೆದು ರಕ್ತಗಾಯಪಡಿಸಿದ್ದು, ಅಷ್ಟರಲ್ಲಿ ಶರಣಗೌಡ ಈತನ ತಂದೆಯಾದ ಪರ್ವತರೆಡ್ಡಿ ಈತನು ಬಂದು ಈ ಮಗನಿಗೆ ಬಿಡಬ್ಯಾಡರಿ ನಮ್ಮ ಮನೆ ಹಾಳು ಮಾಡ್ಯಾನ ಅಂತಾ ಬೈದಾಡಿ ಫಿರ್ಯಾದಿಗೆ ಹೊಡೆಯಲು ಬಂದಾಗ, ಅಲ್ಲಿಯೇ ಬಸ್ ನಿಲ್ದಾಣದ ಹತ್ತಿರ ನಿಂತ ಶಾಂತಗೌಡ ಪಾಟೀಲ & ವೆಂಕನಗೌಡ ಮಾಲಿಪಾಟೀಲ ಇವರು ಜಗಳ ಬಿಡಿಸಿದ್ದು ಇರುತ್ತದೆ. ಆರೋಪಿತರು ಫಿರ್ಯಾದಿಗೆ ಹೊಡೆಯುವದು ಬಿಟ್ಟು ಮಗನೆ ಇವತ್ತು ನಮ್ಮ ಕೈಯಾಗ ಉಳಿದಿದಿ ಇನ್ನೊಂದು ಸಲ ನಮ್ಮ ತಂಟೆಗೆ ಬಂದರೆ ನಿನಗೆ ಜೀವಂತ ಬಿಡುವದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದು & ಆರೋಪಿ ಶರಣಗೌಡ ಈತನು ಪಿರ್ಯಾದಿಯ ಮನೆಗೆ ಹೋಗಿ ಅವನ ಹೆಂಡತಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿದ ಬಗ್ಗೆ ಅಪರಾಧ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ: 366ಐಪಿಸಿ : ದಿನಾಂಕಃ 04/05/2022 ರಂದು 8-30 ಪಿ.ಎಮ್ ಕ್ಕೆ ಶ್ರೀ ರಾಜವರ್ಧನತಂದೆ ಮಾನಪ್ಪ ಗುಂತಗೋಳ ಇವರುಠಾಣೆಗೆ ಹಾಜರಾಗಿಗಣಕೀಕೃತ ಫಿಯರ್ಾಧಿಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಾನು ದಿನಾಂಕ: 05/01/2021 ರಂದು ನಮ್ಮೂರಿನ ಹುಸನಪ್ಪ ಗವಿ ಇವರ ಹಿರಿಯ ಮಗಳಾದ ಈರಮ್ಮ ಇವಳೊಂದಿಗೆ ಮದುವೆ ಮಾಡಿಕೊಂಡಿರುತ್ತೇನೆ. ನಾವಿಬ್ಬರೂಗಂಡ-ಹೆಂಡತಿದೇವತಕಲ್ಗ್ರಾಮದ ಮುಖ್ಯರಸ್ತೆಯ ಪಕ್ಕದಲ್ಲಿ ಹೊಟೇಲ್ಇಟ್ಟುಕೊಂಡು ವ್ಯಾಪಾರ ಮಾಡುತ್ತ ಉಪಜೀವಿಸಿಕೊಂಡಿರುತ್ತೇವೆ. ನಮಗೆ ಇನ್ನು ಮಕ್ಕಳಾಗಿರುವದಿಲ್ಲ. ನಿನ್ನೆ ದಿನಾಂಕಃ 03/05/2022 ರಂದುರಾತ್ರಿ ನಾವಿಬ್ಬರೂಗಂಡ-ಹೆಂಡತಿ ಹಾಗು ನನ್ನ ಸೊಸೆಯಾದಗಂಗಮ್ಮ ಮೂವರು ಮನೆಯಲ್ಲಿ ಊಟ ಮಾಡಿ 11-00 ಗಂಟೆಯ ಸುಮಾರಿಗೆ ಮನೆಯಲ್ಲಿ ಮಲಗಿದ್ದೇವು. ನಂತರರಾತ್ರಿಅಂದರೆಇಂದು ದಿನಾಂಕಃ 04/05/2022 ರಂದು 3-00 ಎ.ಎಮ್ ಸುಮಾರಿಗೆ ನನಗೆ ನಿದ್ರೆಯಿಂದಎಚ್ಚರವಾದಾಗ ನೋಡಲಾಗಿ ಮನೆಯಲ್ಲಿ ನನ್ನ ಹೆಂಡತಿಇರಲಿಲ್ಲ. ರಾತ್ರಿ ಹೊರಗಡೆ ಬಹಿದರ್ೆಸೆಗೆ ಹೋಗಿರಬಹುದೆಂದು ಸ್ವಲ್ಪ ಹೊತ್ತ ಕುಳಿತು ಬರಲಾರದಕಾರಣಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು ಮನೆಯ ಸಮೀಪ ಅತ್ತಿತ್ತ ಹುಡುಕಾಡಿದರೂ ಸಿಗಲಾರದ ಕಾರಣ ಮರಳಿ ಮನೆಗೆ ಬಂದು ಮಲಗಿದ್ದ ನನ್ನ ಸೊಸೆಯಾದಗಂಗಮ್ಮ ಇವಳಿಗೆ ಎಬ್ಬಿಸಿ ನಿಮ್ಮ ಅಕ್ಕ ಕಾಣುತ್ತಿಲ್ಲಅಂತ ಹೇಳಿ ಪುನಃ ಇಬ್ಬರೂ ಹುಡುಕಾಡಿದರೂ ಸಿಗಲಿಲ್ಲ. ನಂತರ ಮುಂಜಾನೆ ನಮ್ಮೂರಲ್ಲಿ ಹಾಗು ನಮ್ಮ ಸಂಬಂಧಿಕರ ಊರುಗಳಿಗೆ ಫೋನ್ ಮಾಡಿ ವಿಚಾರಿಸಿದರೂ ಸಿಕ್ಕಿರುವದಿಲ್ಲ. ನನ್ನ ಹೆಂಡತಿಗೆ ನಾನು ಹುಡುಕುತ್ತಿರುವಾಗ ಹಣಮಂತರಾಯತಂದೆ ಭೀಮಸೇನ ಸಾ: ಮಂಜಲಾಪೂರಎಂಬಾತನು ನನ್ನ ಹೆಂಡತಿಗೆ ಅಪಹರಿಸಿಕೊಂಡು ಹೋಗಿರುವ ಬಗ್ಗೆ ಗೊತ್ತಾಗಿರುತ್ತದೆ. ನನ್ನ ಹೆಂಡತಿಯುದುಂಡು ಮುಖ, ಗೋಧಿವರ್ಣ, ಸಾಧಾರಣ ಮೈಕಟ್ಟು, ಕಪ್ಪುಕೂದಲು, ನೀಟಾದ ಮೂಗು ಉಳ್ಳವಳಾಗಿದ್ದು, ಅಂದಾಜುಎತ್ತರ 4.5 ಇರುತ್ತಾಳೆ. ಬೂದಿ ಬಣ್ಣದ ನೈಟಿ ಧರಿಸಿರುತ್ತಾಳೆ ಹಾಗು ಕನ್ನಡ ಮಾತನಾಡುತ್ತಾಳೆ. ನಾನು ನನ್ನ ಹೆಂಡತಿಗೆ ಹುಡುಕಾಡಿ ಸಿಗಲಾರದ ಕಾರಣ ಈಗ ತಡವಾಗಿಠಾಣೆಗೆ ಬಂದಿದ್ದು, ನನ್ನ ಹೆಂಡತಿಗೆ ಅಪಹರಿಸಿಕೊಂಡು ಹೋಗಿರುವ ಹಣಮಂತರಾಯತಂದೆ ಭೀಮಸೇನ ಸಾ: ಮಂಜಲಾಪೂರಇತನ ವಿರುದ್ದ ಕಾನೂನು ಪ್ರಕಾರಕ್ರಮ ಜರುಗಿಸಿ ನನ್ನ ಹೆಂಡತಿಗೆ ಪತ್ತೆ ಮಾಡಿಕೊಡಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂ. 68/2022 ಕಲಂ. 366 ಐಪಿಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:45/2022 ಕಲಂ:323, 324, 326, 504, 506 ಸಂ. 34 ಐಪಿಸಿ : ಇಂದು ದಿನಾಂಕ. 04/05/2022 ರಂದು 10-30 ಎಎಂಕ್ಕೆ ಶ್ರೀ ಅಶೋಕ ತಂದೆ ಗಂಗಪ್ಪ ಮುಂಗಲೇರ ವಃ 60 ಜಾಃ ಕೊರವೆರ ಉಃ ಕೂಲಿಕೆಲಸ ಸಾಃ ಹೊಸಳ್ಳಿ ಕ್ರಾಸ್ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ, ದಿನಾಂಕ. 02/05/2022 ರಂದು ಬೆಳೆಗ್ಗೆ 9-40 ಗಂಟೆ ಸುಮಾರಿಗೆ ನಾಗ್ಯಾ ತಂದೆ ಸಂಜಯ ಕರಕರಮಂಡರ, ಸೀನು ತಂದೆ ಯಲ್ಲಪ್ಪ ಕರಕರಮಂಡರ ಇವರು ಹಂದಿ ವಿಷಯವಾಗಿ ಬೆಳೆಗ್ಗೆ ಮಾತನಾಡೋಣ ಅಂತಾ ಕರೆದಿದ್ದರಿಂದ ನಾನು ಮತ್ತು ನನ್ನ ತಮ್ಮನ ಮಗ ದುರ್ಗಪ್ಪ ತಂದೆ ಹಣಮಂತ ಮುಂಗಲೇರ ಇಬ್ಬರು ಕೂಡಿಕೊಂಡು ಅಂಬೇಡ್ಕರ ಚೌಕ ಹತ್ತಿರವಿರುವ ತೋಟಗಾರಕೆ ಇಲಾಖೆ ಆಫೀಸ ಮುಂದುಗಡೆ ಬಂದಾಗ ಅಲ್ಲಿ ನಾಗ್ಯಾ ತಂದೆ ಸಂಜಯ ಕರಕರಮಂಡರ, ಸೀನು ತಂದೆ ಯಲ್ಲಪ್ಪ ಕರಕರಮಂಡರ, ಮಡ್ಡಿ ತಂದೆ ಸಂಜಯ ಕರಕರಮಂಡರ, ಗಿಡ್ಡ ತಾಯಿ ಲಕ್ಷ್ಮೀ ಕರಕರಮಂಡರ ರವರು ಇದ್ದು ಎಲ್ಲರೂ ಕೂಡಿಕೊಂಡು ಹಂದಿ ಕಳ್ಳತನ ಆಗುತ್ತಿರುವ ವಿಷಯವಾಗಿ ಮಾತನಾಡುತ್ತಿರುವಾಗ ನಾವು ಅವರಿಗೆ ನೀವು ನಮ್ಮ ಏರಿಯಾ ಕಡೆ ಯಾಕೆ ಬರುತ್ತೀರಿ ನಿಮ್ಮ ಹಂದಿಗಳು ಊರಲ್ಲಿ ಬಿಟ್ಟಿರುತ್ತೀರಿ ಆ ಕಡೆ ನೀವು ತಿರುಗಾಡುವುದು ಬಿಟ್ಟು ನಮ್ಮ ಏರಿಯಾಕ್ಕೆ ಬಂದು ಹಂದಿಗಳನ್ನು ನೋಡಿಕೊಂಡು ಹೋಗುತ್ತೀರಿ. ನಮ್ಮ ಹಂದಿಗಳೂ ಕಡಿಮೆ ಆಗುತ್ತಿವೆ ನಮ್ಮ ಹಂದಿಗಳಿಗೆ ನಿವೇನು ಮಾಡುತ್ತಿದ್ದೀರಿ ಅಂತಾ ಗೊತ್ತಾಗುತ್ತಿಲ್ಲ ಅಂತಾ ಅಂದಿದ್ದಕ್ಕೆ ಅವರೆಲ್ಲರೂ ನಮಗೆ, ನಿಮ್ಮ ಹಂದಿಗಳು ಕಡಿಮೆಯಾದರೆ ನಾವೇನು ಮಾಡೋಣ ನಮ್ಮ ಮೇಲೆ ಯಾಕೆ ಕಳ್ಳತನ ಆರೋಪ ಮಾಡುತ್ತೀರಿ ಅಂತಾ ಅಂದಾಗ ನಾವು ಅವರಿಗೆ, ನಮ್ಮ ಏರಿಯಾ ಕಡೆಗೆ ಬರಬೇಡಿರಿ ಅಂತಾ ಅಂದಿದ್ದಕ್ಕೆ ಅವರು, ನಾವು ಎಲ್ಲಿಯಾದರು ತಿರುಗಾಡುತ್ತೇವೆ ನೀವ್ಯಾರು ನಮಗೆ ಕೇಳುವವರು ಪದೇ ಪದೇ ನಿಮ್ಮದು ಇದೇ ಆಯಿತು, ನಿಮಗೆ ಸೊಕ್ಕು ಬಹಳ ಬಂದಿದೆ ಮಕ್ಕಳ್ಯಾ ಅಂತಾ ಅಂದವರೇ, ಅವರಲ್ಲಿ ನಾಗ್ಯಾ ಇತನು ಪಂಚನಿಂದ ದುರ್ಗಪ್ಪ ಇತನ ತೆಲೆಗೆ ಹೊಡೆದು ಭಾರೀ ರಕ್ತಗಾಯ ಮಾಡಿದ್ದು ನಾನು ಜಗಳ ಬಿಡಿಸಲು ಹೋದಾಗ ಸೀನು ಇತನು ನನಗೆ ಎಡ ರಟ್ಟೆಗೆ ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದು ಮಡ್ಡಿ, ಮತ್ತು ಗಿಡ್ಡ ಇವರು ದುರ್ಗಪ್ಪನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಮನಬಂದಂತೆ ಒದ್ದು ಇವತ್ತು ಈ ಸೂಳೇ ಮಕ್ಕಳಿಗೆ ಜೀವ ಸಹಿತ ಬಿಡಬಾರದು ಅಂತಾ ಜೀವದ ಬೆದರಿಕೆ ಹಾಕಿ, ಕೈಯಿಂದ ಕಪಾಳಕ್ಕೆ ಹೊಡೆದರು. ನಮಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.45/2022 ಕಲಂ. 323, 324, 326, 504, 506, ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 46/2022 ಕಲಂ 379 ಐಪಿಸಿ : ಇಂದು ದಿನಾಂಕ; 04/05/2022 ರಂದು 12-30 ಪಿಎಮ್ ಕ್ಕೆ ಶ್ರೀ ಹಣಮಂತ ಪಿ.ಎಸ್.ಐ ಡಿ.ಸಿ.ಆರ್.ಬಿ ಘಟಕ ಯಾದಗಿರಿ ರವರು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಮುಂದಿನ ಕ್ರಮಕ್ಕಾಗಿ ಒಂದು ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 04/05/2022 ರಂದು ಬೆಳೆಗ್ಗೆ 11-00 ಗಂಟೆ ಸುಮಾರಿಗೆ ನಾನು ಜಿಲ್ಲಾ ಪೊಲೀಸ ಕಾಯರ್ಾಲಯದಲ್ಲಿರುವ ಡಿ.ಸಿ.ಆರ್.ಸಿ ಘಟಕದಲ್ಲಿರುವಾಗ ಮಾನ್ಯ ಎಸ್.ಪಿ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ಮಾಹಿತಿ ತಿಳಿದು ಬಂದಿದ್ದೆನೆಂದರೆ, ಗೂಗಲ್ ಬ್ರಿಡ್ಜದಿಂದ ಕಲಬುರಗಿ ಕಡೆಗೆ ಒಂದು ಟಿಪ್ಪರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು ದಾಳಿ ಕುರಿತು ನಾನು ಮತ್ತು ಸಂಗಡ ನಮ್ಮ ಸಿಬ್ಬಂದಿಯವರು ಕೂಡಿಕೊಂಡು ನಮ್ಮ ಕಾಯರ್ಾಲಯದ ಹತ್ತಿರವಿರುವ ಮುದ್ನಾಳ ಕ್ರಾಸ ಹತ್ತಿರ 11-30 ಎಎಮ್ ಸುಮಾರಿಗೆ ನಿಂತುಕೊಂಡಾಗ ಯಾದಗಿರಿ ಕಡೆಯಿಂದ ಮುದ್ನಾಳ ಕ್ರಾಸ ಕಡೆಗೆ ಒಂದು ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದನ್ನು ಕಂಡು ಕೈ ಮಾಡಿ ನಿಲ್ಲಿಸಿದೆವು. ಆಗ ಟಿಪ್ಪರ ನೋಡಲಾಗಿ ಟಿಪ್ಪರ ನಂ.ಕೆಎ.33.ಬಿ.2278 ನೇದ್ದು ಇದ್ದು ಅದರಲ್ಲಿ ಮರಳು ತುಂಬಿದ್ದು, ಚಾಲಕನಿಗೆ ವಿಚಾರಿಸಲು ತನ್ನ ಹೆಸರು ದಿನೇಶ ತಂದೆ ಸಿದ್ದಣ್ಣ ಮುದುಕನೊರ ವ;22 ಜಾ; ಹೊಲೆಯ ಉ; ಚಾಲಕ ಸಾ; ಹುರಸಗುಂಡಗಿ ತಾ; ಶಹಾಪೂರ ಜಿ; ಯಾದಗಿರಿ ಅಂತಾ ತಿಳಿಸಿದ್ದು, ಟಿಪ್ಪರದಲ್ಲಿ ಮರಳು ತುಂಬಿರುವ ಬಗ್ಗೆ ಚಾಲಕನಿಗೆ ವಿಚಾರಿಸಲು, ನಮ್ಮ ಮಾಲೀಕ ರಘುಪತಿ ಇತನು ಹೇಳಿದ ಹಾಗೆ ಗೂಗಲ್ ಬ್ರಿಡ್ಜ ಹತ್ತಿರ ಟಿಪ್ಪರದಲ್ಲಿ ಮರಳನ್ನು ತುಂಬಿಕೊಂಡು ಕಲಬುರಗಿಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದರಿಂದ ನಾನು ಕಲಬುರಗಿಗೆ ಮರಳು ತುಂಬಿದ ಟಿಪ್ಪರ ತೆಗೆದುಕೊಂಡು ಹೋಗುತ್ತಿದ್ದೇನೆ. ಟಿಪ್ಪರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಸರಕಾರದ ಪರವಾನಿಗೆ ಆಗಲಿ, ರಾಯಲ್ಟಿ ಆಗಲಿ ಇರುವುದಿಲ್ಲ ಅಕ್ರಮವಾಗಿ, ಕಳ್ಳತನದಿಂದ ಮರಳನ್ನು ಟಿಪ್ಪರದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದೇವೆ ಅಂತಾ ತಿಳಿಸಿದನು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರ ನಂ. ಕೆಎ.33.ಬಿ.2278 ನೇದ್ದು ಅ.ಕಿ.6,00,000/-ರೂ, ಮತ್ತು ಮರಳು ಅ.ಕಿ.15,000/-ರೂ ನೇದ್ದವುಗಳನ್ನು ಒಪ್ಪಿಸಿ, ಟಿಪ್ಪರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ವರದಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ.46/2022 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.