ಅಭಿಪ್ರಾಯ / ಸಲಹೆಗಳು

                                                 ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05-06-2021
ಯಾದಗಿರ ಸಂಚಾರಿ ಪೊಲೀಸ್ ಠಾಣೆ :- 29/2021 ಕಲಂ 279, 337, 338, 304(ಎ) ಐಪಿಸಿ : ದಿನಾಂಕ 31/05/2021 ರಂದು ಬೆಳಿಗ್ಗೆ 11 ಎ.ಎಂ. ದ ಸುಮಾರಿಗೆ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಬರುವ ಅರಿಕೇರಾ(ಬಿ) ಕ್ರಾಸ್ ಹತ್ತಿರ ಈ ಕೇಸಿನ ಪಿಯರ್ಾದಿ ಗಾಯಾಳು ಈತನು ಮೋಟಾರು ಸೈಕಲ್ ನಂಬರ ಕೆಎ-33, ಯು-8620 ನೇದ್ದರ ಮೇಲೆ ಹೋಗುತ್ತಿದ್ದಾಗ ಮೋಟಾರು ಸೈಕಲ್ ನಡೆಸುತ್ತಿದ್ದ ಸಣ್ಣ ಮಲ್ಲಪ್ಪ ಈತನು ಮೋಟಾರು ಸೈಕಲ್ ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಯಾದಗಿರಿ ಕಡೆಯಿಂದ ಯರಗೊಳ ಕಡೆಗೆ ಹೋಗುತ್ತಿದ್ದಾಗ ಅದೇ ಸಮಯಕ್ಕೆ ಮೋಟಾರು ಸೈಕಲ್ ನಂಬರ ಕೆಎ-33, ಆರ್-7224 ನೇದ್ದರ ಸವಾರನು ಕೂಡ ಯರಗೋಳ ಕಡೆಯಿಂದ ಯಾದಗಿರಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದಾಗ ಎರಡು ಮೋಟಾರು ಸೈಕಲ್ ಸವಾರರು ಎದುರು ಬದರು ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು ಈ ಅಪಘಾತದಲ್ಲಿ ಭಾರೀ ಗುಪ್ತಗಾಯ ಮತ್ತು ರಕ್ತಗಾಯ, ಸಾದಾ ಗಾಯಗಳು ಆಗಿದ್ದು ಇರುತ್ತದೆ. ಅಪಘಾತಪಡಿಸಿದ ಎರಡು ಮೋಟಾರು ಸೈಕಲ್ ಸವಾರರ ವಿರುದ್ದ ಸೂಕ್ತ ಕಾನೂನಿನ ಕ್ರಮ ಜರುಗಿಸಿರಿ ಪಿಯರ್ಾದಿ ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 29/2021 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿನ ಗಾಯಾಳು ಮಾರ್ತಂಡಪ್ಪ ಈತನು ಹೆಚ್ಚಿನ ಉಪಚಾರಕ್ಕಾಗಿ ಅದೇ ದಿನ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಕಲಬುರಗಿಯ ಮಣೂರ ಆಸ್ಪತ್ರೆಯಲ್ಲಿ ಸೇರಿಕೆಯಾಗಿ ದಿನಾಂಕ 31/05/2021 ರಿಂದ ದಿನಾಂಕ 03/06/2021 ರ ಸಾಯಂಕಾಲ 8 ಗಂಟೆಯವರೆಗೆ ಚಿಕಿತ್ಸೆ ಪಡೆಯುತ್ತಾ ಮತ್ತೆ ಹೆಚ್ಚಿನ ಉಪಚಾರಕ್ಕಾಗಿ ಬೇರೆ ಕಡೆ ಕರೆದುಕೊಂಡು ಹೋಗಲು ಅಲ್ಲಿನ ವೈದ್ಯರು ತಿಳಿಸಿದಾಗ ಕಲಬುರಗಿಯಿಂದ ಯಾದಗಿರಿಗೆ ಗಾಯಾಳು ಮಾರ್ತಂಡಪ್ಪನಿಗೆ ಅಂಬುಲೆನ್ಸನಲ್ಲಿ ಕರೆದುಕೊಂಡು ಬರುವಾಗ ಮಾರ್ಗ ಮದ್ಯೆ ವಾಡಿ ಸಮೀಪ ನಿನ್ನೆ ದಿನಾಂಕ 03/06/2021 ರಂದು ರಾತ್ರಿ 9 ಪಿ.ಎಂ.ಕ್ಕೆ ಅಪಘಾತದಲ್ಲಾದ ಭಾರೀ ಗುಪ್ತಗಾಯಗಳ ಭಾದೆಯಿಂದ ಮೃತಪಟ್ಟಿದ್ದರಿಂದ ಮುಂದಿನ ಕ್ರಮ ಜರುಗಿಸಲು ಮೃತನ ಪತ್ನಿ ಇಂದು ದಿನಾಂಕ 04/06/2021 ರಂದು ಬೆಳಿಗ್ಗೆ ಠಾಣೆಗೆ ಬಂದು ತಮ್ಮ ಪುರವಣಿ ಹೇಳಿಕೆ ಕೊಟ್ಟಿದ್ದರಿಂದ ಈ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಹುಣಸಗಿ ಪೊಲೀಸ್ ಠಾಣೆ :- 58/2021 323, 324. 504, 506 ಸಂಗಡ 34 ಐಪಿಸಿ : ಇಂದು ದಿನಾಂಕ: 04/06/2021 ರಂದು 11-00 ಎ.ಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ಆಶಾ ಗಂಡ ದೇವಿಂದ್ರಪ್ಪ ಮೇಟಿ ಸಾ|| ಸೈದಾಪೂರ ತಾ|| ಶಹಾಪೂರ ಇವರು ಠಾಣೆಗೆ ಬಂದು ಒಂದು ಟೈಪ್ ಮಾಡಿಸಿದ ಅಜರ್ಿ ತಂದು ಅಜರ್ಿ ಹಾಜರ್ ಪಡಿಸಿದ್ದು, ಸದರಿ ಅಜರ್ಿ ಸಾರಾಂಶವೆನೆಂದರೆ, ಇಂದು ದಿನಾಂಕ : 04/06/2021 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ ಮನೆಯಲ್ಲಿ, ನಾನು ನನ್ನ ಗಂಡ ದೇವಿಂದ್ರಪ್ಪ, ನನ್ನ ಮಗ ತೇಜಸ್, ನನ್ನ ಅತ್ತೆಯಾದ ಶಿವಮ್ಮ ಎಲ್ಲರೂ ಕೂಡಿ ಮನೆಯಲ್ಲಿ ಇದ್ದಾಗ, ನನ್ನ ಸವತಿ ನಿಂಗಮ್ಮ ಇವಳ ಅಕ್ಕಳ ಮಗನಾದ ಭೀರಪ್ಪ ತಂದೆ ಸಾಮರಾಯ ಬಬಲಾದಿ ಈತನು ಮನೆಗೆ ಬಂದು ನಮ್ಮ ಕೌದೆಗಳನ್ನು ಕೊಡಿರಿ ಅಂತಾ ಕೇಳಿದ್ದು, ಅದಕ್ಕೆ ನನ್ನ ಗಂಡ ದೇವಿಂದ್ರಪ್ಪ ಈತನು ನೀನು ಯಾಕೆ ಬಂದಿದೀ, ನಿಮ್ಮ ಮನೆಯಲ್ಲಿ ದೊಡ್ಡವರನ್ನು ಕಳುಹಿಸು ಅಂತಾ ಅಂದಿದು,್ದ ಅದಕ್ಕೆ ಅವನು ದೊಡ್ಡವರು ಯಾಕೆ ಬರಬೇಕು ನಾನೇ ಬಂದಿನೀ ನನಗೆ ಕೊಡು ಇಲ್ಲಾಂದರೆ ನಿನ್ನ ಕೈಕಾಲು ಮುರಿಯುತ್ತೇನೆ ಅಂದು ಹೋರಟು ಹೋಗಿದ್ದು, ನನ್ನ ಗಂಡನು ಕೂಡಾ ಕೆಲಸವಿದ್ದರಿಂದ ಮನೆಯಿಂದ ಹೊರಗಡೆ ಹೋದನು. ನಂತರ ಮನೆಯಲ್ಲಿ ನಾನು ನನ್ನ ಮಗ ತೇಜಸ್ ಮತ್ತು ನನ್ನ ಅತ್ತೆ ಶಿವಮ್ಮ ಕೂಡಿ ಮನೆಯಲ್ಲಿದ್ದಾಗ ಅಂದಾಜು 10-00 ಎಎಮ್ ಸುಮಾರಿಗೆ ಭೀರಪ್ಪ ತಂದೆ ಸಾಮರಾಯ ಬಬಲಾದಿ ಈತನು 1) ಮಲ್ಲಪ್ಪ @ ಮಲ್ಲ್ಯಾ ತಂದೆ ಸಕ್ರೆಪ್ಪ ಪೂಜಾರಿ 2) ಮಾಳಮ್ಮ ಗಂಡ ಸಕ್ರೆಪ್ಪ ಪೂಜಾರಿ 3) ನಿಂಗಮ್ಮ ಗಂಡ ದೇವಿಂದ್ರಪ್ಪ ಮೇಟಿ ಇವರನ್ನು ಕರೆದುಕೊಂಡು ಮನೆಯೊಳಗೆ ಬಂದಿದ್ದು ಎಲ್ಲರೂ ಕೂಡಿ ವಿನಾಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು ಅವರಲ್ಲಿ ಮಲ್ಲಪ್ಪ @ ಮಲ್ಲ್ಯಾ ಈತನು ನನಗೆ ಕಲ್ಲಿನಿಂದ ಬಾಯಿಯ ಹೊಡೆದು ರಕ್ತಗಾಯ ಮತ್ತು ಭುಜದ ಹತ್ತಿರ ಹೊಡೆದು ಒಳಪೆಟ್ಟು ಮಾಡಿದನು. ನನ್ನ ಮಗ ತೇಜಸ್ ಈತನಿಗೆ ಭೀರಪ್ಪ ಮತ್ತು ಮಲ್ಲಪ್ಪ @ ಮಲ್ಲ್ಯಾ ಇವರು ಕಲ್ಲಿನಿಂದ, ಬಡಿಗೆಯಿಂದ ಬೆನ್ನಿಗೆ ಮತ್ತು ಬುಜದ ಹತ್ತಿರ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ನನ್ನ ಅತ್ತೆ ಶಿವಮ್ಮ ಇವಳಿಗೆ ಮಲ್ಲಪ್ಪ @ ಮಲ್ಲ್ಯಾ ಮತ್ತು ಮಾಳಮ್ಮ ಇವರು ಕೂಡಿ ಬಡಿಗೆಯಿಂದ ಎಡಗೈಗೆ, ಮತ್ತು ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಆಗ ನಾವು ಚೀರಾಡುವ ಸಪ್ಪಳ ಕೇಳು ಆಜು ಮನೆಯವರಾದ ತಿಪ್ಪಣ್ಣ ತಂದೆ ಹಣಮಂತ ಮೇಟಿ, ದೇವಕ್ಕೆಮ್ಮ ಗಂಡ ಮಹಾದೇವಪ್ಪ ಪೊಲೀಸ್ ಬಿರಾದಾರ, ಶಾಂತಮ್ಮ ಗಂಡ ಶಿವಗೇನಪ್ಪ ಗಬಸಳ್ಳಿ, ದೇವಿಂದ್ರಪ್ಪ ತಂದೆ ಅಮಾತೆಪ್ಪಾ ಮೇಟಿ ಇವರು ಕೂಡಿ ಜಗಳ ಬಿಡಿಸಿಕೊಂಡರು. ನಂತರ ಅವರೆಲ್ಲರೂ ಹೊಡೆದು ಹೋಗುವಾಗ ಇವತ್ತು ಉಳಕೊಂಡಿರಿ ನಿಮಗೆ ಇನ್ನೊಮ್ಮೆ ಜೀವದಿಂದ ಹೊಡೆದು ಖಲಾಸ್ ಮಾಡುತ್ತೇವೆ ಅಂತಾ ಜೀವದ ಬೇದರಿಕೆ ಹಾಕಿ ಹೋಗಿರುತ್ತಾರೆ. ಕಾರಣ ನಮಗೆ ಅವಾಚ್ಯವಾಗಿ ಬೈದು, ಕಲ್ಲಿನಿಂದ, ಬಡಿಗೆಯಿಂದ ಹೊಡೆದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಕೈಕೊಂಡು ನಮಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಿಕೊಡಲು ಮಾನ್ಯರವರಲ್ಲಿ ವಿನಂತಿ ಅಂತಾ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 58/2021 ಕಲಂ, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.ಗೋಗಿ ಪೊಲೀಸ್ ಠಾಣೆ :- 79/2021 ಕಲಂ: 00 ಒಕ ಕಅ : ಸುಮಾರು 10 ವರ್ಷಗಳ ಹಿಂದೆ ಫಿರ್ಯಾದಿದಾರಳ ಗಂಡ ಮೃತಪಟ್ಟಿದ್ದ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಹೊಟ್ಟೆಪಾಡಿಗಾಗಿ ಹೈದ್ರಾಬಾದ್ಗೆ ಹೋಗಿದ್ದಿ ಇದ್ದಳು. ನಂತರ ಸದ್ಯ ಲಾಕ್ ಡೌನ್ ಇರುವುದರಿಂದ ತನ್ನ ಇಬ್ಬರು ಮಕ್ಕಳೊಂದಿಗೆ ತನ್ನ ತವರೂರಾದ ಕಂದಕೂರು ಗ್ರಾಮಕ್ಕೆ ಬಂದು ತನ್ನ ತಾಯಿಯೊಂದಿಗೆ ಇದ್ದಳು. ಸಂಬಂಧಿಕರಲ್ಲಿ ಒಬ್ಬರು ತಿರಿಕೊಂಡಿದ್ದರಿಂದ ಆಕೆ ಬೆಂಗಳೂರಿಗೆ ಹೋಗಿದ್ದಳು. ಹೀಗಿದ್ದು ದಿನಾಂಕ 02.06.2021 ರಂದು ರಾತ್ರಿ 9:30 ಗಂಟೆಗೆ ಫಿರ್ಯಾದಿಯ ತಾಯಿ ಮತ್ತು ಕುಮರಿ. ರವಲಿ ಇವರು ಮನೆಯಲ್ಲಿ ಮಲಗಿದ್ದು ನಂತರ ದಿನಾಂಕ 03.06.2021 ರ ಬೆಳಿಗ್ಗೆ 4:00 ಗಂಟೆಗೆ ಫಿರ್ಯಾದಿದಾರಳ ತಾಯಿ ಲಕ್ಷ್ಮಿ ಕಲಾಲ್ ಈಕೆ ಎದ್ದು ನೋಡಿದಾಗ ಕುಮಾರಿ.ರವಲಿ ಈಕೆ ಕಾಣಿಸದೇ ಇರುವುದರಿಂದ ತಮ್ಮ ಮಕ್ಕಳಿಗೆ ಹೇಳಿ ಬೆಂಗಳೂರಿನಲ್ಲಿ ತನ್ನ ಮಗಳಿಗೆ ವಿಷಯ ತಿಳಿಸಿದ್ದರಿಂದ ಫಿರ್ಯಾದಿದಾರಳು ಅಲ್ಲಿಂದ ಕಂದಕೂರಿಗೆ ಬಂದು ಪುನಃ ವಿಚಾರಿಸಿದ ನಂತರ ತಡವಾಗಿ ಠಾಣೆ ಬಂದು ಲಿಖಿತ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 79/2021 ಕಲಂ: 00 ಒಕ ಕಅ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ :- 63/2021 ಕಲಂ 454, 380 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಮ್ಮ ಮನೆ ಕೀಲಿ ಹಾಕಿಕೊಂಡು ಸಂಬಂಧಿಕರ ಮದುವೆಗೆ ಹೋದಾಗ ದಿನಾಂಕ 03/06/2021 ರಂದು 11-30 ಎ.ಎಂ ದಿಂದ ಸಾಯಂಕಾಲ 07-15 ಪಿ.ಎಂ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಕೀಲಿ ಮುರಿದು ಒಳಗೆ ಹೋಗಿ ಬೆಡ್ ರೂಮಿನ ಪ್ಲೆವುಡ್ ಅಲಮಾರಿ ಮುರಿದು ಅದರಲ್ಲಿ ಇದ್ದ 1] ಒಂದು 10. ಗ್ರಾಂ. ಬಂಗಾರದ ಲಾಕೇಟ್, ಅ.ಕಿ 45,000/ ರೂ|| 2] 10 ಗ್ರಾಂ. ಬಂಗಾರದ ಕರಮಣಿಯಲ್ಲಿಯ 2 ತಾಳಿ, ಗುಂಡುಗಳು, ಅ.ಕಿ 45,000/- ರೂ|| ಗಳು. 3] 10. ಗ್ರಾಂ. 2 ಜೊತೆ ಬಂಗಾರದ ಮಕ್ಕಳ ಕಿವಿಯಲ್ಲಿಯ ಲಕ್ಷ್ಮೀ ಓಲೆಗಳು, ಅ.ಕಿ 45,000/- ರೂ|| ಗಳು. 4] ಸುಮಾರು 15 ತೊಲೆಯಷ್ಟು ಗಟ್ಟಿಬೆಳ್ಳಿ, ಅ.ಕಿ 7,500/- ರೂ|| ಗಳು. ಮತ್ತು ನಗದು ಹಣ 5,000/-ರೂ|| ಗಳು. ಹೀಗೆ ಒಟ್ಟು 1,47,500/- ರೂಪಾಯಿ ಕಿಮ್ಮತ್ತಿನ ಬಂಗಾರ, ಬೆಳ್ಳಿಯ ಸಾಮಾನುಗಳು ಮತ್ತು ನಗದು ಹಣ ಕಳ್ಳತನ ಮಾಡಿಕೊಂಡು ಹೋಗಿದ್ದು, ನಮ್ಮ ಸ್ವತ್ತನ್ನು ಪತ್ತೆ ಮಾಡಿ, ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 63/2021 ಕಲಂ 454, 380 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ್ ಠಾಣೆ :- 64/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಗಂಜ್ ಕ್ರಾಸ್ದಲ್ಲಿ ಒಂದು ಡೈನಮಾ ಬ್ಯಾಟರಿ ಅಂಗಡಿ ಇಟ್ಟುಕೊಂಡು ನನ್ನ ಅಂಗಡಿ ಮೇಲೆ ಮನೆ ಮಾಡಿಕೊಂಡು ಇದ್ದೇನೆ. ನನ್ನದೊಂದು ಹೊಂಡಾ ಶೈನ್ ಮೋಟರ್ ಸೈಕಲ್ ನಂ ಏಂ 33 ಘ 3570, ಅಂತಾ ಇದ್ದು, ಅದರ ಎಅ65ಇಖಿ2064453, ಅಊಂಖಖಖ ಓಔ-ಒಇ4ಎಅ65ಂಅಎಖಿ040156, ಅಂತಾ ಇರುತ್ತದೆ. ಸದರಿ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/-ರೂ|| ಗಳು. ಹೀಗಿದ್ದು ದಿನಾಂಕ 19/05/2021 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ ನಾನು ಸದರಿ ನನ್ನ ಮೋಟರ್ ಪ್ರತಿ ನಿತ್ಯದಂತೆ ನಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ 20/05/2021 ರಂದು ಬೆಳಿಗ್ಗೆ 06-00 ಗಂಟೆಗೆ ಎದ್ದು ನೋಡಿದಾಗ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಂತರ ನಾನು ಮತ್ತು ನಮ್ಮ ತಂದೆ ಬಾಬರ ಹಾಗೂ ಮನೆಯ ಸುತ್ತ-ಮತ್ತ ನೋಡಿದರೂ ನನ್ನ ಮೋಟರ್ ಸೈಕಲ್ ಕಾಣದೇ ಇದ್ದಾಗ ನನ್ನ ಗೆಳೆಯರಾದ ಅಬುಅಶೀರ ತಂದೆ ಅಬು ಮಹ್ಮದ್ ಸಾ|| ಹತ್ತಿಕಟ್ಟಾ ಯಾದಗಿರಿ ಮತ್ತು ಗುಂಡೇಶ ತಂದೆ ಗುರುಲಿಂಗಪ್ಪ ಕುಂಬಾರ ಸಾ|| ಗಂಜ್ ಏರಿಯಾ ಯಾದಗಿರಿ ಇವರಿಗೆ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದು ನೋಡಿದರು. ಎಲ್ಲರು ಕೂಡಿ ಗಂಜ್ ಏರಿಯಾದ ಎಲ್ಲಾ ಕಡೆಗಳಲ್ಲಿ ತಿರುಗಾಡಿ ನೋಡಿದರೂ ನನ್ನ ಮೋಟರ್ ಸೈಕಲ್ ಸಿಗಲಿಲ್ಲ. ಯಾರೋ ಕಳ್ಳರು ಸದರಿ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇಲ್ಲಿಯ ವರೆಗೆ ನಾನು ನನ್ನ ಮೋಟರ್ ಸೈಕಲ್ ಹುಡುಕಾಡಿದೂ ಇಗದೇ ಇದ್ದಾಗ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 64/2021 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ :- 65/2021 ಕಲಂ 273,284,ಐಪಿಸಿ ಮತ್ತು 32, 34 ಕೆ ಇ ಆಕ್ಟ : ಇಂದು ದಿನಾಂಕ.04/06/2020 ರಂದು 8-30 ಪಿಎಂಕ್ಕೆ ಶ್ರೀಮತಿ ಸೌಮ್ಯ ಎಸ್.ಆರ್ ಪಿ.ಎಸ್ಐ (ಕಾ.ಸು) ಸಾಹೇಬರು ರವರು ಠಾಣೆಗೆ ಅರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.04/06/2021 ರಂದು 6-00 ಪಿಎಂಕ್ಕೆ ನಾನು ಠಾಣೆಯಲ್ಲಿದ್ದಾಗ ಗಂಜ ಕ್ರಾಸ ಹತ್ತಿರ ವರ್ಕನಳ್ಳಿ ಹೋಗುವ ರೋಡಿನ ಕ್ರಾಸಿನಲ್ಲಿ ಒಬ್ಬನು ಸಾರ್ವಜನಿಕ ಸ್ಥಳದಲ್ಲಿ ಸೆಂಧಿ(ಹೆಂಡ)ಯನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದಾರೆ ಅಂತಾ ಭಾತ್ಮೀ ನೀಡಿದ್ದು ಇದೂ ಕಾನೂನು ಬಾಹಿರವಾಗಿದ್ದು ಸದರಿ ಸೆಂಧಿಯನ್ನು ಮನುಷ್ಯನು ಸೇವನೆ ಮಾಡಿದಲ್ಲಿ ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ಮಾನವನ ದೇಹಕ್ಕೆ ಮಾರಣಾಂತಿಕ ಹಾನಿಯುಂಟಾಗುವ ರಾಸಾಯನಿಕ ಮಿಶ್ರಿತ ವಿಷಕಾರಿ ಕಲಬೆರೆಕೆ ಪಾನೀಯ ಮಾರಾಟ ಮಾಡುತ್ತಿದ್ದು ದಾಳಿ ಕುರಿತು ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಠಾಣೆಯಿಂದ 6-45 ಪಿಎಂಕ್ಕೆ ಠಾಣೆ ಜೀಪ ನಂ.ಕೆಎ-33-ಜಿ-0075 ನೇದ್ದರಲ್ಲಿ ಹೋರಟು 7 ಪಿಎಂಕ್ಕೆ ಗಂಜ ಕ್ರಾಸ ತಲುಪಿ ಜೀಪ ನಿಲ್ಲಿಸಿ ಎಲ್ಲರೂ ಮುಂದಕ್ಕೆ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಲು ಒಬ್ಬನು ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ಸೆಂಧಿಯನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು, ಖಚಿತ ಪಡಿಸಿಕೊಂಡು 7-15 ಪಿಎಮ್ ಕ್ಕೆ ಒಮ್ಮೇಲೆ ದಾಳಿ ಮಾಡಿ ಹಿಡಿದು ಆತನಿಗೆ ವಿಚಾರಿಸಲು ತನ್ನ ಹೆಸರು ನಾಗಪ್ಪ ತಂ. ಮಾರೆಪ್ಪ ದೋತ್ರೇ ವಃ55 ಜಾಃ ವಡ್ಡರ ಉಃ ಕೂಲಿಕೆಲಸ ಸಾಃ ಕೋಳಿವಾಡ ಯಾದಗಿರಿ. ಅಂತಾ ತಿಳಿಸಿದನು. ನಂತರ ಪಿ.ಎಸ್.ಐ ರವರು ಸದರಿಯವನ ಹತ್ತಿರ ಇದ್ದ ಸಂಧಿಯನ್ನು ನೋಡಲಾಗಿ 3 ಲೀಟರ ಸೇಂದಿ ಇದ್ದು ಸದರಿ ಸೆಂಧಿಯು ಮನುಷ್ಯನ ಪ್ರಾಣಕ್ಕೆ ಅಪಾಯವಾಗುವಂತಹ ಹಾಗೂ ಮಾನವನ ದೇಹಕ್ಕೆ ಮಾರಣಾಂತಿಕ ಹಾನಿಯುಂಟಾಗುವ ರಾಸಾಯನಿಕ ಮಿಶ್ರಿತ ಪಾನೀಯವಾಗಿದ್ದು ಇದನ್ನು ಸೇವನೆ ಮಾಡಿದಲ್ಲಿ ಮಾನವನ ಜೀವಕ್ಕೆ ಹಾನಿಯುಂಟಾಗುತ್ತದೆ ಅಂತಾ ತಿಳಿಸಿದ್ದು ನಂತರ ಸ್ಥಳದಲ್ಲಿ 1 ಲೀಟರನ 3 ಪ್ಲಾಸ್ಟಿಕ ವಾಟರ ಬಾಟಲಿಗಳಲ್ಲಿ ಸೆಂಧಿ ಇದ್ದು, ಸದರಿಯವನಿಗೆ ಒಂದು ಲೀಟರನ ವಾಟರ ಬಾಟಲ ಸೆಂಧಿಗೆ ಎಷ್ಟು ಹಣ ಅಂತಾ ವಿಚಾರಿಸಲು ಸದರಿಯವನು ವಾಟರ ಬಾಟಲಿಯಲ್ಲಿನ ಒಂದು ಲೀಟರಿನಷ್ಟು ತುಂಬಿರುವ ಸೆಂಧಿಗೆ 10/-ರೂ ದಂತೆ ಮಾರಾಟ ಮಾಡುತ್ತೇನೆ ಅಂತಾ ತಿಳಿಸಿದನು. ಒಟ್ಟು 3 ಲೀಟರ ಸೆಂಧಿಗೆ ಅಂದಾಜು ಕಿಮ್ಮತ್ತು 30=00 ರೂ. ಕಿಮತ್ತಿನ ಸೆಂಧಿಯಿದ್ದು ನಂತರ ಜಪ್ತಿಪಡಿಸಿಕೊಂಡ ಮೇಲ್ಕಂಡ 3 ಲೀಟರ ಸೆಂಧಿಯಲ್ಲಿ ಒಂದು ಲೀಟರನ ಒಂದು ಪ್ಲಾಸ್ಟಿಕ ವಾಟರ ಬಾಟಲಿಯನ್ನು ರಾಸಾಯನಿಕ ಪರಿಕ್ಷೇ ಕುರಿತು ಎಫ್.ಎಸ್.ಎಲ್ ಪರೀಕ್ಷೆಗೆ ಒಳಪಡಿಸಲು ಶ್ಯಾಂಪಲ್ಗಾಗಿ ತೆಗೆದು ಬಿಳಿಯ ಬಟ್ಟೆಯಿಂದ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ನಾನು ಮತ್ತು ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ಉಳಿದ 2 ಲೀಟರ ಸೆಂಧಿ ತುಂಬಿರುವ ಪ್ಲಾಸ್ಟಿಕ ಬಾಟಲಿಗಳನ್ನು ಮುಂದಿನ ಪುರಾವೆ ಕುರಿತು ತಮ್ಮ ತಾಬೆಗೆ ತೆಗೆದುಕೊಂಡಿದ್ದು ಇರುತ್ತದೆ. ನಂತರ ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 04/06/2021 ರಂದು 7-15 ಪಿಎಂ ದಿಂದ 8-15 ಪಿಎಂ ದವರೆಗೆ ಸ್ಥಳದಲ್ಲಿ ಕುಳಿತು ಲೈಟಿನ ಬೆಳಕಿನಲ್ಲಿ ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ ಯಾದಗಿರಿ ನಗರ ಠಾಣೆಗೆ 8-30 ಪಿಎಂಕ್ಕೆ ಅರೋಪಿ ಮತ್ತು ಮುದ್ದೆಮಾಲಿನೊಂದಿಗೆ ಬಂದು ಜಪ್ತಿ ಪಂಚನಾಮೆಯನ್ನು ಠಾಣೆಯಲ್ಲಿ ಪ್ರಿಂಟ್ ತೆಗೆದು ಪಂಚರ ಸಹಿ ಮಾಡಿಸಿ ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯನ್ನು ಜ್ಞಾಪನ ಪತ್ರದೊಂದಿಗೆ ಸೂಕ್ತ ಕ್ರಮಕ್ಕಾಗಿ ಒಪ್ಪಿಸಿದ್ದು ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 65/2021 ಕಲಂ.273, 284 ಐಪಿಸಿ ಮತ್ತು 32, 34, ಕೆ.ಇ ಆಕ್ಟ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಹುಣಸಗಿ ಪೊಲೀಸ್ ಠಾಣೆ :- 33/2021 32 34 ಕನರ್ಾಟಕ ಅಭಕಾರಿ ಕಾಯ್ದೆ : ದಿನಾಂಕ:04/06/2021 ರಂದು 15.45 ಗಂಟೆಗೆ ಸುಮಾರಿಗೆ ಆರೋಪಿತನು ಅಬಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಸರಾಯಿ ಸಂಗ್ರಹಣೆ ಮಾಡಿಕೊಂಡು ಕಾಮನಟಗಿ ಸೀಮಾಂತರದ ಕಕ್ಕೇರಾ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಇರುವ ಸಮರ್ಥ ದಾಬಾದಲ್ಲಿ ಸಾರ್ವಜನಿಕರಿಗೆ ಅಭಕಾರಿ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಮದ್ಯ ಶೇಖರಣೆ ಮಾಡಿ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶೋರಾಪೂರ & ಮಾನ್ಯ ಸಿಪಿಐ ಸಾಹೇಬರು ಹುಣಸಗಿ ಮಾರ್ಗದರ್ಶನದಲ್ಲಿ ಪಿಯರ್ಾದಿ ಹಾಗೂಸಿಬ್ಬಂದಿಯಾದ ಹೆಚ್.ಸಿ-83, ಪಿಸಿ-233, ರವರು ಮತ್ತು ಪಂಚರೊಂದಿಗೆ ಹೋಗಿ ಪಂಚರ ಸಮಕ್ಷಮದಲ್ಲಿ ದಾಳಿಮಾಡಿ, ಆರೋಪಿತನಿಗೆ ಹಿಡಿದಿದ್ದು, ಆರೋಪಿತನು ಮಾರಾಟ ಮಾಡುತ್ತಿದ್ದ 1) ಕಿಂಗ್ ಪಿಶರ್ ಬಿಯರ್ ಬಾಟಲ 650 ಎಮ್.ಎಲ್ ಇದ್ದದ್ದು 12 ಬಾಟಲಿಗಳು ಒಂದು ಬಾಟಲಿಗೆ 150/- ರೂ.ಗಳಂತೆ ಇದ್ದು, ಒಟ್ಟು 12 ಬಾಟಲಿಗಳಿಗೆ ಅ:ಕಿ: 1800/- ರೂ.ಗಳು, 2) ಕಿಂಗ್ ಪಿಷರ್ ಸ್ಟ್ರಾಂಗ್ ಟೀನ್ 500 ಎಮ್.ಎಲ್ 20 ಟೀನ್ಗಳು ಇದ್ದು, ಒಂದು ಟೀನ್ ಡಬ್ಬಿಗೆ 120/-.ರೂಗಳಂತೆ ಇದ್ದು, ಒಟ್ಟು 20 ಟೀನ್ಗಳ ಅ:ಕಿ:2400/- ರೂ.ಗಳು, 3) ಕಿಂಗ್ಪಿಷರ್ ಸ್ಟ್ರಾಂಗ್ ಟೀನ್ 330 ಎಮ್.ಎಲ್ ಇದ್ದದು. ಒಂದಕ್ಕೆ 85/- ರೂ.ಗಳಂತೆ ಒಟ್ಟು 20 ಕಿಂಗ್ಪಿಷರ್ ಸ್ಟ್ರಾಂಗ್ ಟೀನ್ ಅ:ಕಿ:1700/- ರೂ.ಗಳು, 4) ಬ್ಯಾಗಪೇಪರ್ ವಿಸ್ಕಿ 180 ಎಮ್.ಎಲ್ ಟೆಟ್ರಾಪ್ಯಾಕಗಳು ಇದ್ದು, ಒಂದಕ್ಕೆ 106.23/- ರೂ.ಗಳಂತೆ ಒಟ್ಟು 4 ಟೆಟ್ರಾಪ್ಯಾಕಗಳು ಅ:ಕಿ:424.92/- ರೂ.ಗಳು, 5) ಓರಿಜಿನಲ್ ಚ್ವಾಯಿಸ್ ಟೆಟ್ರಾಪ್ಯಾಕಗಳು 180 ಎಮ್.ಎಲ್ ಇದ್ದು, ಒಂದಕ್ಕೆ 70.26/- ರೂಗಳಂತೆ 2 ಟೆಟ್ರಾಪ್ಯಾಕಗಳು ಅ:ಕಿ:140.52/- ರೂ.ಗಳು, 6) 8ಪಿ.ಎಮ್ ವಿಸ್ಕಿ ಟೆಟ್ರಾಪ್ಯಾಕಗಳು 180 ಎಮ್.ಎಲ್ ಇದ್ದು, ಒಂದಕ್ಕೆ 86.75/- ರೂಗಳಂತೆ 2 ಟೆಟ್ರಾಪ್ಯಾಕಗಳು ಅ:ಕಿ:173.50/- ರೂ.ಗಳು, 7) 14 ಹೈವಾರ್ಡಸ್ ಚೀಯರ್ಸ್ ವಿಸ್ಕಿ ಟೆಟ್ರಾಪ್ಯಾಕಗಳು 90 ಎಮ್.ಎಲ್ ಇದ್ದದ್ದು, ಒಂದರ ಬೆಲೆ 35.13/- ರೂ.ಗಳಂತೆ ಒಟ್ಟು 14 ಟೆಟ್ರಾಪ್ಯಾಕಗಳಿಗೆ ಅ:ಕಿ:491.82/- ರೂ.ಗಳು ಇರುತ್ತದೆ. ಸದರಿ ಒಟ್ಟು ಮದ್ಯದ ಅ.ಕಿ. 7129.76/- ರೂ. ಕಿಮ್ಮತಿನ ಮದ್ಯವನ್ನು ಜಪ್ತಿ ಮಾಡಿಕೊಂಡು ಸ್ಥಳದಲ್ಲಿಯೇ ಪಂಚನಾಮೆ ಬರೆದುಕೊಂಡು ಬಂದಿದ್ದು ಜಪ್ತಿದ ಪಂಚನಾಮೆ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

 

ಶೋರಾಪೂರ ಪೊಲೀಸ ಠಾಣೆ :- 100/2021 ಕಲಂ: 143 147 148 323 324,354, 326,307,109 504 506 ಸಂಗಡ 149 ಐಪಿಸಿ : ಇಂದು ದಿನಾಂಕಃ 04/06/2021 ರಂದು 06:30 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗಶ್ರೀಮತಿ ಮರೆಮ್ಮಗಂಡ ಭೀಮರಾಯಗಡ್ಡದ ಸಾ:ದೇವರಗೋನಾಲ ಇವರುಠಾಣೆಗೆ ಬಂದುಒಂದು ಲಿಖಿತಅಜರ್ಿತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ದಿನಾಂಕ:26-05-2021 ರಂದು ಸಾಯಂಕಾಲ 4 ಸುಮಾರಿಗೆ ನನ್ನ ಮಗ ಶರಣಪ್ಪತಂ.ಭೀಮರಾಯ ಮತ್ತು ನಮ್ಮಓಣಿಯಜನರಾದ ನಿಂಗಪ್ಪ, ಈಶ್ವರಪ್ಪ, ಮೌನೇಶ, ಹಣಮಂತ, ಶ್ರೀರಾಮ್, ಬೀಮಪ್ಪ, ಮಂಜುನಾಥ, ಇವರೆಲ್ಲರಿಗೆ ನಮ್ಮಊರಿನ ಮಾದಿಗ ಸಮಾಜದವರು ನಮ್ಮಓಣಿಯ ಹುಡುಗನಾದ ಹಣಮಂತತಂದೆಗುರುಪಾದಪ್ಪಇತನು ಪೋನ್ನಲ್ಲಿ ಮಾತನಾಡುತ್ತಿರುವಾಗ ವಿಷಯವು ಏಕೇ ದೊಡ್ಡದು ಮಾಡುತ್ತಿರಾಅಣ್ಣಎಂದು ಹೇಳುತ್ತಿರುವಾಗ ಏಕಾ ಏಕಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸ್ವಲ್ಪ ತಾಳ್ರಿ ನಿಮೆಲ್ಲರಿಗೆಇವತ್ತುಐತಿ ಪತಿಜಿಎಂದು ಬೇದರಿಸಿದರು. ಹಿಗಿದ್ದುರಾತ್ರಿ 08:30 ರ ಸುಮಾರಿಗೆ ಮಾದಿಗ ಸಮಾಜದವರು ಗುಂಪು ಕಟ್ಟಿಕೊಂಡುಉದ್ದೇಶ ಪೂರ್ವಕವಾಗಿ ಕೊಲೆ ಮಾಡಲು ಬಂದವರೆ 1) ಮಾರ್ಥಂಡಪ್ಪತಾಯಿ ನಿಂಗಮ್ಮಗಡಿಗೇನವರು 2) ನಿಂಗಪ್ಪತಂದೆ ಮಾನಪ್ಪಗಡಿಗೇನವರು 3) ಲಕ್ಷ್ಮಣತಂದೆ ಬಸಪ್ಪಕಟ್ಟಿಮನಿ 4) ಸಿದ್ದಪ್ಪ ತಂದೆ ಮಾರ್ಥಂಡಪ್ಪಗಡಿಗೇನವರು 5) ಭಲಬೀಮ ತಂದೆ ಮಾನಪ್ಪಕಟ್ಟಿಮನಿ 6) ಬಸಪ್ಪತಂದೆ ಮಾನಪ್ಪಕಟ್ಟಿಮನಿ 7) ಹಣಮಂತತಂದೆಕೆಂಚಪ್ಪ ಸಾಧು 8) ಕಾಮಪ್ಪತಾಯಿ ನಿಂಗಮ್ಮಗಡಿಗೇನವರು 9) ಸಾಯಿಬಣ್ಣತಂದೆ ಮಲ್ಲಪ್ಪ ಮೂಲಿಮನಿ 10) ಶಿವಲಿಂಗಪ್ಪ ತಂದೆ ನಾಗಪ್ಪ 11) ವಿಜಯತಂದೆ ಮಾಹಾದೇವಪ್ಪ 12) ಆಂಜನೇಯತಂ. ಚಂದಪ್ಪ 13) ಮಾನಪ್ಪತಂದೆ ಬನ್ನೆಪ್ಪ ಸುರಪೂರ 14) ನಿಂಗಪ್ಪತಂದೆತಿಪ್ಪಣ್ಣ ಸಾಧು 15) ಹಣಮಂತತಂದೆ ಹೈಯಾಳಪ್ಪ ಕಟ್ಟಿಮನಿ 16) ಮಾನಪ್ಪತಂದೆ ಮಾಹಾದೇವಪ್ಪ ಮೂಲಿಮನಿ 17) ದ್ಯಾವಪ್ಪತಂದೆಈಶ್ವರಪ್ಪಕಟ್ಟಿಮನಿ 18) ಮಲ್ಲಪ್ಪತಂದೆ ಮಾನಪ್ಪಗಡಿಗೇನವರು ಮತ್ತು 19) ನಾಗರಾಜತಂದೆ ಹೈಯಾಳಪ್ಪ ಇವರೆಲ್ಲರೂಕೂಡಿಕೊಂಡುಕೈಯಲ್ಲಿಕಬ್ಬಿಣದರಾಡು ಮತ್ತು ಬಡಿಗೆ, ಕುಡುಗೊಲುಗಳನ್ನು ಹಿಡಿದುಕೊಂಡು ಏಲೆ ಹೊಲೆಯ ಸುಳಿಮಕ್ಕಳೆ ನಿಮ್ಮ ಸೊಕ್ಕು ಬಹಳ ಆಗಿದೆಇದರ ಹಿಂದೆಯೂ ನಿಮಗೆ ನಮಗೆ ಜಗಳ ಆಗುತ್ತಾ ಬಂದಿದೆಆದರೆಇವತ್ತು ನಿಮ್ಮನ್ನು ಸುಮ್ಮನೆ ಬಿಡಲ್ಲಎಂದುಜೋರಾಗಿಕಿರುಚುತ್ತಾ ನಮ್ಮಓಣಿಯ ಶ್ರೀರಾಮನ ಮನೆ ಮುಂದೆ ಬಂದಾಗ ಮನೆಯಲ್ಲಿಇದ್ದ ಶ್ರೀರಾಮ ಮತ್ತು ಮೌನೇಶ, ಶರಣು ಹೊರಗಡೆ ಬಂದಾಗ ಮಾದಿಗ ಸಮಾಜದ ಮಾರ್ಥಂಡಪ್ಪ, ನಿಂಗಪ್ಪ, ಲಕ್ಷ್ಮಣ. ಸಿದ್ದಪ್ಪ. ಬಲಬೀಮ ಎಲ್ಲರೂ ಸೇರಿತೆಕ್ಕೆಗೆ ಕುಸ್ತಿಗೆ ಬಿದ್ದುಕಬ್ಬಿಣದರಾಡಿನಿಂದ, ಬಡಿಗೆಯಿಂದ ಹೊಡೆಯುತ್ತಿರುವಾಗಚಿರಾಡುವ ಶಬ್ದ ಕೇಳಿ ಗಾಬರಿಯಿಂದ ನಾನು ಅಲ್ಲಿ ಬಂದು ಬಿಡಿಸಲು ಪ್ರಯತ್ನಿಸಿರುವಾಗ ಮಾದಿಗ ಸಮಾಜದ ಬಸಪ್ಪಕಟ್ಟಿಮನಿ, ಹಣಮಂತಕಟ್ಟಿಮನಿ. ಕಾಮಪ್ಪ , ಸಾಯಿಬಣ್ಣ, ಶಿವಲಿಂಗಪ್ಪ ಇವರೆಲ್ಲರೂ ಈ ಸುಳಿಯನ್ನು ಬಿಡಬೇಡಎಂದುಅಂದವರೆ ಸೀರೆ ಸೇರಗು ಹಿಡಿದು ಎಳೆದಾಡಿ ಅವಮಾನ ಮಾಡಿ ನನಗೆ ನೆಲಕ್ಕೆ ನೂಕಿಕೊಟ್ಟರು ನಾನು ಕೆಳಗಡೆ ಬಿದ್ದಾಗ ವಿಜಯತನ್ನಕೈಯಲ್ಲಿದ್ದಕಬ್ಬಿಣದರಾಡಿನಿಂದತಲೆಗೆ ಹೊಡೆದಾಗ ಬಲವಾದರಕ್ತಗಾಯವಾಗಿರುತ್ತದೆ. ನಾನು ಚಿರಾಡುವದನ್ನು ಕೇಳಿ ನನ್ನ ಮೈದುನನಾದಈಶ್ವರಪ್ಪ ಬಿಡಿಸಲುಅಡ್ಡ ಬಂದಾಗ ಇವನ ಮೇಲೆ ಮಾದಿಗ ಸಮಾಜದಆಂಜನೆಯ, ಮಾನಪ್ಪ, ನಿಂಗಪ್ಪ , ಹಣಮಂತ, ಮಾನಪ್ಪ ಮೂಲಿಮನಿ ಎಲ್ಲರೂ ನನ್ನ ಮೈದುನನ್ನುಗಟ್ಟಿಯಾಗಿ ಹಿಡಿದಾಗ ಈ ರಂಡಿಮಗನ ಕಲಾಸ ಮಾಡಿಎಂದುದ್ಯಾವಪ್ಪತನ್ನಕೈಯಲ್ಲಿದ್ದಕುಡುಗೊಲಿನಿಂದಎಡಗೈಗೆ ಹೊಡೆದಾಗ ಬಾರಿ ಪೆಟ್ಟು ಬಿದ್ದುರಕ್ತಗಾಯವಾಯಿತು. ಇಷ್ಟರಲ್ಲೆ ನಮ್ಮಓಣಿಯಜನರಾದ ಮಲ್ಲಮ್ಮ, ಹಣಮಂತ, ಬೀಮಪ್ಪ, ಮಂಜುನಾಥ, ನಿಂಗಪ್ಪಎಲ್ಲರೂ ಬಂದಾಗಏನಾಯಿತುಎಂದು ಕೇಳುವಷ್ಟರಲ್ಲೆ ಮಲ್ಲಮ್ಮ ಮತ್ತು ಹಣಮಂತಇಬ್ಬರಿಗೂ ಮಲ್ಲಪ್ಪ ಮತ್ತು ನಾಗರಾಜಇಬ್ಬರುಕಲ್ಲಿನಿಂದ ಹೊಡೆದುಗುಪ್ತಗಾಯ ಮಾಡಿರುತ್ತಾರೆ. ಇದೇ ವೇಳೆಯಲ್ಲಿ ಮಾರ್ಥಂಡಪ್ಪ, ನಿಂಗಪ್ಪ, ಲಕ್ಷ್ಮಣ, ಸಿದ್ದಪ್ಪ, ಬಲಬೀಮ ಇವರು ನಿಂಗಪ್ಪನಿಗೆ ಬಡಿಗೆಯಿಂದ ಸುತ್ತುವರೆದುತಲೆಗೆ ಮತ್ತು ಮೈಗೆ ಜೋರಾಗಿ ಹೊಡೆದಾಗರಕ್ತಗಾಯವಾಗಿದೆಇದರ ಪಕ್ಕದಲ್ಲಿಯೇ ಬೀಮಪ್ಪ ಮತ್ತು ಮಂಜುನಾಥನಿಗೆ ಬಸ್ಸಪ್ಪಕಟ್ಟಿಮನಿ, ಹಣಮಂತಕಟ್ಟಿಮನಿ, ಕಾಮಪ್ಪ, ಸಾಯಿಬಣ್ಣ , ಶಿವಲಿಂಗಪ್ಪ ಇವರೆಲ್ಲರೂ ಸೇರಿ ಪುನಹ: ಕೈಯಿಂದ ಹೊಡೆದು ಕಾಲಿನಿಂದಒದ್ದು ಕೆಳಗಡೆ ಕೆಡವಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಒಳಪೆಟ್ಟು ಮಾಡಿರುತ್ತಾರೆ. ಈ ಸಮಯದಲ್ಲಿ ನಮ್ಮಓಣಿಯ ನಾಗಪ್ಪ ಪೂಜಾರಿ, ಕಾಳಪ್ಪ ಕರಿಗುಡ್ಡಾ, ಗುರುಪಾದಪ್ಪಗಾಯಕವಾಡ, ವೀರುಪಾಕ್ಷಪ್ಪಇವರು ಬಂದು ನಮ್ಮವರಿಗೇಲ್ಲ ಹೊಡೆಯವುದನ್ನು ಬಿಡಿಸಿಕೊಂಡರು. ಆಗ ಅವರೆಲ್ಲರೂಇವತ್ತುಜಿವಂತ ಉಳದ್ರಿ ಸುಳಿ ಮಕ್ಕಳೆ ಇನ್ನೊಮ್ಮೆ ನಮ್ಮತಂಟೆಗೆ ಬಂದ್ರೆಜೀವವನ್ನೆ ಹೊಡೆಯುತ್ತೆವೆಎಂದುಜೀವತಗೆಯುವ ಬೇದರಿಕೆ ಹಾಕಿದರು. ನಂತರಗಾಯಗೊಂಡ ನಾವೆಲ್ಲರೂಜೀವ ಬೇದರಿಕೆಯಿಂದ ಖಾಸಗಿ ವಾಹನದಲ್ಲಿ ಸುರಪೂರ ಸರಕಾರಿಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಉಪಚಾರ ಮಾಡಿಕೊಂಡಿದ್ದೆವೆಗಂಬಿರವಾಗಿಗಾಯವಾದ ಮರೆಮ್ಮ ,ಆದ ನಾನು ಮತ್ತು ಮಲ್ಲಮ್ಮ , ನಿಂಗಪ್ಪ , ಮೌನೇಶ ಹೆಚ್ಚಿನಚಿಕಿತ್ಸೆಗಾಗಿಯಾದಿಗಿರಿ ಸರಕಾರಿಜಿಲ್ಲಾಆಸ್ಪತ್ರೆಗೆ ಕಳಿಸಿಕೊಟ್ಟಿರುತ್ತಾರೆ. ಸದರಿಘಟನೆಯ ಬಗ್ಗೆ ಸಮಾಜದ ಹಿರಿಯರೊಂದಿಗೆ ವಿಚಾರಿಸಿ ಗಾಯಗೊಂಡವರಿಗೆಆಸ್ಪತ್ರೆಗೆ ತೋರಿಸಿಕೊಂಡು ತಡವಾಗಿ ಬಂದುದೂರನ್ನು ನೀಡಿರುತ್ತೆನೆ ಸದರಿದೂರಿನಲ್ಲಿ ತೋರಿಸಿದ ಮಾದಿಗ ಸಮಾಜದ 19 ಜನರು ಹಳೇಯ ವೈಷ್ಯಮ್ಯಇಟ್ಟುಕೊಂಡುಉದ್ದೇಶಪೂರ್ವಕವಾಗಿ ಮಾರಾಣಾಂತಿಕ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ ಮಾಡಿದವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲು ದೂರನ್ನು ಸಲ್ಲಿಸುತ್ತಿದ್ದೆನೆಈ ಜಗಳವಾಗಲು ನಿಂಗಪ್ಪಗಡಿಗೇನವರಈತನ ಪ್ರಚೋದನೆಕಾರಣವಾಗಿರುತ್ತದೆಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.


ಯಾದಗಿರ ಮಹಿಳಾ ಪೊಲೀಸ್ ಠಾಣೆ :- 37/2021 ಕಲಂ: 363 ಐ.ಪಿ.ಸಿ : ಇಂದು ದಿನಾಂಕ: 04.06.2021 ಸಂಜೆ 7.30 ಗಂಟೆಗೆ ಪಿರ್ಯಾಧಿ ಶ್ರೀಮತಿ ಮಧುಶ್ರೀ ಗಂಡ ಶರಣಪ್ಪ ಸಾ-ಯಾದಗಿರಿ ಇವರು ಮಹಿಳಾ ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಂಶವೇನೆಂದರೆ ನನಗೆ ಭಾಗ್ಯಶ್ರೀ ವಯಾ-17 ವರ್ಷ 6 ತಿಂಗಳು ಮತ್ತು ಆಕಾಶ ವಯಾ-16 ವರ್ಷ ಅಂತ ಎರಡು ಜನ ಮಕ್ಕಳಿರುತ್ತಾರೆ. ನನ್ನ ಮಗಳು ಭಾಗಶ್ರೀಯು ದ್ವೀತಿಯ ಪಿ.ಯು.ಸಿ ರವರಗೆ ಓದಿರುತ್ತಾಳೆ. ನನ್ನ ಮಗಳನ್ನು ಮಾತಾ ಮಾಣಿಕೇಶ್ವರಿ ನಗರದ ಆಂಬರೀಶ ತಂದೆ ಶಂಕ್ರಪ್ಪ ಈತನು ಪ್ರೀತಿ ಮಾಡುತ್ತೇನೆಂದು ನನ್ನ ಮಗಳನ್ನು ಸತಾಯಿಸುತ್ತಾ ಬಂದಿರುತ್ತಾನೆ. ಈ ವಿಷಯವಾಗಿ ನಾನು ಮತ್ತು ನನ್ನ ಗಂಡ ಶರಣಪ್ಪ ಕೂಡಿ ಆಂಬರೀಶನ ಮನೆಗೆ ಹೋಗಿ ಅವನ ತಂದೆ ತಾಯಿಗೆ ನಿಮ್ಮ ಮಗನಿಗ ಬುದ್ದಿ ಹೇಳಿ ಅಂತ ತಿಳಿಸಿ ಬಂದಿರುತ್ತೇವೆ ಆದರೂ ಕೂಡ ಅಂಬರೀಶನು ನನ್ನ ಮಗಳನ್ನು ಪ್ರೀತಿ ಮಾಡುತ್ತೇನೆಂದು ಹಾಗೇ ಮುಂದುವರೆಸಿ ಸತಾಯಿಸುತ್ತಾ ಬಂದಿದ್ದು, ಪದೇ ಪದೇ ಇದೆ ರೀತಿ ಮಾಡುತ್ತಾ ಬಂದಿದ್ದರಿಂದ ಪುನಃ ಅವನ ತಂದೆ ತಾಯಿಗೆ ವಿಷಯವನ್ನು ತಿಳಿಸಿದ್ದರಿಂದ ಸ್ವಲ್ಪ ದಿನಗಳವರೆಗೆ ಸುಮ್ಮನಿದ್ದನು. ದಿನಾಂಕ: 03.06.2021 ರಂದು ರಾತ್ರಿ 11 ಗಂಟೆಗೆ ನಾವು ಮನೆಯಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದೇವು. ದಿನಾಂಕ: 04.06.2021 ರಂದು ಮಧ್ಯ ರಾತ್ರಿ 01.00 ಗಂಟೆಗೆ ನಾನು ಎದ್ದು ನನ್ನ ಮಗಳನ್ನು ನೋಡಲಾಗಿ ನನ್ನ ಮಗಳು ಎಲ್ಲಿಯೂ ಕಾಣಿಸಲಿಲ್ಲಾ ನನ್ನ ಮಗಳನ್ನು ಎಲ್ಲಾ ಕಡೆ ನಾನು ಮತ್ತು ನನ್ನ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನನ್ನ ಮಗಳು ಭಾಗ್ಯಶ್ರೀಯನ್ನು ಅಂಬರೀಶ ತಂದೆ ಶಂಕ್ರಪ್ಪ ಈತನು ನಮ್ಮ ಮನೆಯ ಹತ್ತಿರದಿಂದ ಅಪಹರಣ ಮಾಡಿಕೊಂಡು ಹೋಗಿದ್ದು, ಅಪಹರಣ ಮಾಡಿಕೊಂಡು ಹೋಗಲು ಅವನ ತಂದೆಯಾದ ಶಂಕ್ರಪ್ಪ ತಾಯಿಯಾದ ಮರೆಮ್ಮ ಹಾಗೂ ಮಾವನಾದ ಹಣಮಂತ ಇವರು ಕುಮ್ಮಕು ನೀಡಿರುತ್ತಾರೆ. ನನ್ನ ಮಗಳನ್ನು ಅಪಹರಣ ಮಾಡಿಕೊಂಡು ಹೋದ ಅಂಬರೀಶ ಮತ್ತು ಅಪಹರಣವಾಗಲು ಕಾರಣರಾದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಕೊಟ್ಟ ದೂರಿನ ಮೇಲಿಂದ ಠಾಣೆ ಗುನ್ನೆ ನಂ: 37/2021 ಕಲಂ: 363 ಐ.ಪಿ.ಸಿ ರೀತ್ಯಾ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

ಇತ್ತೀಚಿನ ನವೀಕರಣ​ : 05-06-2021 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080