ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-06-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 81/2022 ಕಲಂ: 78(3) ಕೆ.ಪಿ.ಆಕ್ಟ್ 1963: ಇಂದು ದಿನಾಂಕ:04/06/2022 ರಂದು 3-45 ಪಿಎಮ್ ಕ್ಕೆ ಶ್ರೀ ಬಾಷುಮಿಯಾ ಪಿ.ಎಸ್.ಐ (ಕಾಸು) ರವರು ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ಆರೋಪಿತನಿಗೆ ಹಾಜರಪಡಿಸಿ, ವರದಿ ಸಲ್ಲಿಸಿದ್ದೇನಂದರೆ ಇಂದು ದಿನಾಂಕ:04/06/2022 ರಂದು ಸಮಯ ಮದ್ಯಾಹ್ನ 12-15 ಗಂಟೆ ಸುಮಾರಿಗೆ ನಾನು ಮತ್ತು ಸಿಬ್ಬಂದಿಯವರಾದ ತಾಯಪ್ಪ ಹೆಚ್.ಸಿ 79, ಮಹೇಂದ್ರ ಪಿಸಿ 254, ಸಾಬರೆಡ್ಡಿ ಪಿಸಿ 290 ಮತ್ತು ವೇಣುಗೋಪಾಲ ಪಿಸಿ 36 ಎಲ್ಲರೂ ವಡಗೇರಾ ಠಾಣೆಯಲ್ಲಿದ್ದಾಗ ತಡಿಬಿಡಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ನನಗೆ ಖಚಿತ ಮಾಹಿತಿ ಬಂದಿದ್ದರಿಂದ ಇಬ್ಬರು ಪಂಚರನ್ನು 12-30 ಪಿಎಮ್ ಕ್ಕೆ ಬರ ಮಾಡಿಕೊಂಡು ಸದರಿ ಪಂಚರು ಮತ್ತು ಸಿಬ್ಬಂದಿಯವರಿಗೆ ಮಾಹಿತಿ ತಿಳಿಸಿ, 12-45 ಪಿಎಮ್ ಕ್ಕೆ ಸರಕಾರಿ ಜೀಪ ನಂ. ಕೆಎ 33 ಜಿ 0164 ನೇದರಲ್ಲಿ ಪಂಚರು ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಹೊರಟು ಸಮಯ 1-45 ಪಿಎಮ್ಕ್ಕೆ ತಡಿಬಿಡಿ ಗ್ರಾಮದ ಹಳೆ ಸಕರ್ಾರಿ ಶಾಲೆಯ ಹತ್ತಿರ ಸ್ವಲ್ಪ ದೂರದಲ್ಲಿ ವಾಹನ ನಿಲ್ಲಿಸಿ, ಶಾಲೆಯನ್ನು ಮರೆಯಾಗಿ ನಿಂತು ನೋಡಲಾಗಿ ಸದರಿ ಬಸ ನಿಲ್ದಾಣದ ರಸ್ತೆ ಮೇಲೆ ಒಬ್ಬ ವ್ಯಕ್ತಿ ನಿಂತು ರಸ್ತೆ ಮೇಲೆ ಹೋಗಿ ಬರುವ ಜನರಿಗೆೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಕಲ್ಯಾಣ ಮಟಕಾ ಬರೆಸಿರಿ ದೈವ ಲೀಲೆ ಮೇಲೆ ನಡೆಯುವ ಮಟಕಾ ಬರೆಸಿರಿ ಅದೃಷ್ಟವಂತರಾಗಿರಿ ಅಂತಾ ಜನರನ್ನು ಕರೆದು ಅವರಿಂದ ಹಣ ಪಡೆದು ಮಟಕಾ ನಂಬಗಳನ್ನು ಬರೆದುಕೊಂಡು ಅವರಿಗೆ ಕೂಡಾ ನಂಬರಗಳನ್ನು ಒಂದೊಂದು ಚೀಟಿ ಮೇಲೆ ಬರೆದುಕೊಡುತ್ತಿದ್ದಾಗ ಸಮಯ 2 ಪಿಎಮ್ಕ್ಕೆ ಪಂಚರ ಸಮಕ್ಷಮದಲ್ಲಿ ಅವನ ಮೇಲೆ ದಾಳಿ ಮಾಡಿ ಹಿಡಿದಿದ್ದು, ಸದರಿಯವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಚಂದ್ರರೆಡ್ಡಿ ತಂದೆ ಭೀಮರಾಯ ಬಂದಳ್ಳಿ, ವ:23, ಜಾ:ಕಬ್ಬಲಿಗ, ಉ:ಒಕ್ಕಲುತನ ಸಾ:ತಡಿಬಿಡಿ ತಾ:ವಡಗೇರಾ ಅಂತಾ ತಿಳಿಸಿದ್ದು, ಸದರಿಯವನು ತನ್ನ ಹತ್ತಿರ ಮಟಕಾಕ್ಕೆ ಸಂಬಂದಿಸಿದಂತೆ ಇದ್ದ 1) ಮಟಕಾ ನಂಬರಗಳನ್ನು ಬರೆದುಕೊಂಡ ಒಂದು ಚೀಟಿ ಅ.ಕಿ.00=00, 2) ನಗದು ಹಣ 2350/- ರೂ., 3) ಒಂದು ಬಾಲ ಪೆನ್ನ ಅ.ಕಿ.00=00 ಇವುಗಳನ್ನು ಹಾಜರಪಡಿಸಿದ್ದು, ಆತನು ಹಾಜರುಪಡಿಸಿದ್ದ ಹಣವು ಮಟಕಾ ಬರೆದುಕೊಟ್ಟಿದ್ದರಿಂದ ಬಂದಿದ್ದು ಅಂತಾ ತಿಳಿಸಿದನು. ಸದರಿ ಮುದ್ದೆಮಾಲನ್ನು ನಾನು ಮತ್ತು ಪಂಚರು ಸಹಿ ಮಾಡಿದ ನಿಶಾನೆ ಚಿಟಿಯನ್ನು ಅಂಟಿಸಿ ತಾಬಾಕ್ಕೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ಮುದ್ದೆಮಾಲನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ಜಪ್ತಿ ಪಂಚನಾಮೆ ಜರುಗಿಸಿ, ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಆರೋಪಿ ಮತ್ತು ಈ ಮೇಲ್ಕಂಡ ಮುದ್ದೆಮಾಲನ್ನು ಹಾಜರುಪಡಿಸಿದ್ದು, ಸದರಿಯವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 81/2022 ಕಲಂ:78 (3) ಕೆ.ಪಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 68/2022 ಕಲಂ: 504, 506, 302 ಐಪಿಸಿ: ಇಂದು ದಿನಾಂಕ.04/06/022 ರಂದು 11-20 ಎಎಂಕ್ಕೆ ಶ್ರೀ ಮತಿ ಫರೀದಾ ಬೇಗಂ ಗಂಡ ಮಹಮ್ಮದ ಇಬ್ರಾಹಿಂ ಶೇಖ ವಃ 48 ಜಾಃ ಮುಸ್ಲಿಂ ಉಃ ಕೂಲಿಎಕಸಲ ಸಾಃ ಚಟಾನಗಲ್ಲಿ ಯಾದಗಿರಿ ರವರ ಠಾಣೆಗೆ ಹಾಜರಾಗಿ ಒಂದು ದೂರು ಅಜರ್ಿ ಸಲ್ಲಿಸದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಯವರಿಗೆ ನಾನು ಮತ್ತು ನನ್ನ ತಂಗಿಯಾದ ರಶೀದಾ ಬೇಗಂ ಅಂತಾ ಇಬ್ಬರು ಹೆಣ್ಣು ಮಕ್ಕಳಿದ್ದು ನನಗೆ ಯಾದಗಿರಿಯ ಗಚ್ಚಿಬೌಡಿ ಏರಿಯಾದ ಮಹಮ್ಮದ ಇಬ್ರಾಹಿಂ ಈತನಿಗೆ ಮದುವೆ ಮಾಡಿಕೊಟ್ಟಿದ್ದು ನನ್ನ ತಂಗಿಯಾದ ರಶೀದ ಬೇಗಂ ಈಕೆಯನ್ನು ಯಾದಗಿರಿಯ ಆಸರ ಮೊಹಲ್ಲಾದ ನಿಸ್ಸಾರ ಅಹಮ್ಮದ ಎಂಬುವವನ ಜೊತೆ ಮದುವೆ ಮಾಡಿಕೊಟ್ಟಿದ್ದರು ನನ್ನ ತಂಗಿಗೆ ಸಮ್ರಿನ್ ಎಂಬುವ ಮಗಳು ಜನಸಿದ್ದು ನಂತರ ದಿನಗಳಲ್ಲಿ ನನ್ನ ತಂಗಿ ಮತ್ತು ಆಕೆಯ ಗಂಡ ಮನಸ್ಥಾಪ ಮಾಡಿಕೊಂಡು ವಿವಾಹ ವಿಚ್ಚೇದನ ಮಾಡಿಕೊಂಡಿದ್ದರು, ನಂತರ ನನ್ನ ತಂಗಿ ರಶಿದಾ ಬೇಗಂ ಇವಳಿಗೆ ವಾಡಿ ಪಟ್ಟಣದ ಮಹಮ್ಮದ ಮಹಮ್ಮದ ಇಫರ್ಾನ ತಂದೆ ಮಹಮ್ಮದ ಮಹೆಬೂಬ ಶೇಖ ಎಂಬುವವನೊಂದಿಗೆ ಮದುವೆ ಮಾಡಲಾಯಿತು. ಅವರಿಗೆ ಜೀಬಾ ನಾಜರಿನ ಮತ್ತು ಮಹಮ್ಮದ ಫಯಜಾನ ಅಂತಾ ಇಬ್ಬರೂ ಮಕ್ಕಳಿರುತ್ತಾರೆ, ನನ್ನ ತಂಗಿಯ ಮೊದಲನೇ ಗಂಡನಿಗೆ ಜನಿಸಿದ ಸಮ್ರಿನ್ ಈಕೆಯು ನನ್ನ ತಂದೆ ನಿಸ್ಸಾರ ಅಹಮ್ಮದ ಈತನ ಮನೆಯಲ್ಲಿ ಬೆಳೆದು ದೊಡ್ಡವಳಾಗಿದ್ದು ನಂತರ ಆಕೆಯನ್ನು ಮುಂಬೈನ ಶಿವಾಜಿನಗರದ ಗೊವಂಡಿ ಏರಿಯಾದಲ್ಲಿ ವಾಸವಿರುವ ರಫೀಕ ಅಹಮ್ಮದ ತಂದೆ ಗುಲಾಮ ಹುಜಾರ ಖಾನ ಎಂಬುವವನ ಜೊತೆ ಈಗೆ 8 ವರ್ಷಗಳ ಹಿಂದೆ ಮದುಮೆ ಮಾಡಿಕೊಟ್ಟಿದ್ದು ಇರುತ್ತದೆ ಮದುವೆಯ ನಂತರ ಆಕೆಯು ಮುಂಬೈನಿಂದ ತನ್ನ ತಂದೆ ಮನೆಗೆ ಹಾಗೂ ತಾಯಿ ರಶೀದಾ ಬೇಗಂ ಮನೆಗೆ ಹೋಗಿ ಬರುವುದು ಮಾಡುತ್ತಿದ್ದಳು ನಂತರದ ದಿನಗಳಲ್ಲಿ ಸದರಿ ರಫೀಕ ಅಹ್ಮದ ಈತನು ದುಶ್ಚಟಕ್ಕೆ ಒಳಗಾಗಿ ತುಂಬಾ ಸಾಲ ಮಾಡಿಕೊಂಡಿದ್ದು ಕೆಲಸಕ್ಕೋ ಹೋಗದೆ ಸಾಲ ಹಿಂದುರಿಗಸದೆ ಗೊಂದಲಕ್ಕೆ ಒಳಗಾಗಿ ತನ್ನ ಹಂಡತಿಯ ಸಂಗಳ ಜಗಳಾ ತೆಗೆದು ಕಿರಿಕಿರಿ ಮಾಡುತ್ತಿದ್ದನು ಸದರಿ ಸಮ್ರಿನ್ ಈಕೆಯು ನನಗೆ ಮತ್ತು ನಮ್ಮ ತಂಗಿಗೆ ಪೋನ ಮಾಡಿ ಕಷ್ಟವನ್ನು ಹೇಳಿ ಕೊಟ್ಟುತ್ತಿದ್ದಳು ಅದಕ್ಕೆ ನಾವು ಆತನಿಗೆ ಕಷ್ಟ ಕೊಡಬೇಡೆ ಅಂತಾ ಬುದ್ದಿವಾದ ಹೇಳಿದಾಗ್ಯೂ ಸಹ ಆತನು ನಮ್ಮ ಸಮ್ರಿನ್ ಈಕೆಗೆ ತೊಂದರೆ ಕೊಡುವುದು ಬಿಟ್ಟಿರಲಿಲ್ಲಾ ನಂತರ ದಿನಗಳಲ್ಲಿ ಸಮ್ರಿನ್ ಈಕೆಯು ನಮಗೆ ಪೋನ ಮಾಡಿ ತಿಳಿಸಿದ್ದೆನೆಂದರೆ, ನನ್ನ ಗಂಡ ರಫೀಕ ಅಹ್ಮದ ಈತನು ನನಗೆ ಸಾಲ ಜಾಸ್ತಿಯಾಗಿದೆ ನೀನು ನಾನು ಹೇಳಿದಂತೆ ಕೇಳಬೇಕು ಅಂತಾ ಹೇಳಿ, ನಾನು ಮನೆಗೆ ಕರಯಿಸುವ ಶ್ರೀಮಂತ ಗಂಡಸಿನ ಜೊತೆ ಮಲಗಬೇಕು ಅವರು ನನಗೆ ಹಣ ಕೊಡುತ್ತಾರೆ ಇದರಿಂದ ನನಗೆ ಸಾಲ ತೀರುತ್ತದೆ ಅಂತಾ ಹೇಳಿದ್ದು ಅದಕ್ಕೆ ನಾನು ಅಂತಾ ಹೆಂಗಸು ಅಲ್ಲಾ ಪ್ರಾಣ ಬೇಕಾದರೂ ಕೊಟ್ಟೆನು ನಾನು ಶೀಲ ಕೆಡಿಸಿಕೊಳ್ಳುವುದಿಲ್ಲಾ ಅಂತಾ ಹೇಳಿದ್ದು ಅವನೂ ಕೇಳದೆ ನನಗೆ ಒತ್ತಾಯ ಮಾಡುತ್ತಿದ್ದಾಣೆ ಅಂತಾ ತಿಳಿಸಿದಳು. ಅದಕ್ಕೆ ನಾವು ನೀನು ಯದಗಿರಿಗೆ ಬಂದು ಬಿಡು ಅಂತಾ ತಿಳಿಸಿದೆವು, ಈಕೆ ಸುಮಾರು 20 ದಿವಸಗಳ ಹಿಂದೆ ಆಕೆಯು ಬಾಂಬೆಯಿಂದ ಯಾದಗಿರಿಗೆ ಬಂದು ನನ್ನ ತಂಗಿ ರಶೀದಾ ಬೇಗಂ ಅಂದರೆ ಆಕೆಯ ತಾಯಿಯ ಮನೆಯಲ್ಲಿದ್ದಳು. ನಂತರ ರಫೀಕ ಅಹಮ್ಮದ ಈತನು ಪದೇ ಪದೇ ನನ್ನ ತಂಗಿ ರಶೀದಿ ಬೇಗಂ ಈಕೆಗೆ ಪೋನ ಮಾಡಿ ನನ್ನ ಹೆಂಡತಿ ಸಮ್ರಿನ್ ಈಕೆಯನ್ನು ನನ್ನಲ್ಲಿಗೆ ಕಳುಹಿಸಿಕೊಡು ಅಂತಾ ಪೋನ ಮಾಡುತ್ತಿದ್ದನು. ಅದಕ್ಕೆ ನನ್ನ ತಂಗಿಯು ನನ್ನ ಮಗಳನ್ನು ಇನ್ನೊಬ್ಬ ವ್ಯಕ್ತಿಯ ಜೊತೆ ಮಲಗು ಅಂತಾ ಹೇಳುತ್ತಿರುವಂತೆ ನಿನಗೆ ಮಾನ ಮಯರ್ಾದೆ ಇಲ್ಲವೆ ಅಂತಾ ಕೇಳಿದ್ದಕ್ಕೆ ನಾನು ನನ್ನ ಹೆಂಡತಿಯನ್ನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ ಕೇಳುವುದಕ್ಕೆ ನಿವ್ಯಾರು, ನನ್ನ ಹೆಂಡತಿಯನ್ನು ನೀವು ಬಾಂಬೆಗೆ ಕಳುಹಿಸಿಕೊಡದಿದ್ದರೆ ನಾನು ನಿಮ್ಮೂರಿಗೆ ಬಂದು ನಿಮ್ಮಿಬ್ಬರನ್ನು ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದನು. ಅದಕ್ಕೆ ನಾನು ನಮ್ಮ ಮುಸ್ಲಿಂ ಹಿರಿಯರಿಗೆ ತಿಳಿಸಿದ್ದು ಅವರು ನಿಮ್ಮ ಅಳಿಯನನ್ನು ಯಾದಗಿರಿಗೆ ಕರೆಯಿಸು, ಎಲ್ಲರೂ ಸೇರಿ ಬುದ್ದಿವಾದ ಹೇಳಿ ಸಂಸಾರ ಸರಿ ಮಾಡೋಣ ಅಂತಾ ಹೇಳಿದ್ದರು. ನಾನು ನನ್ನ ಅಳಿಯನಿಗೆ ಪೋನ ಮಾಡಿ ಯಾದಗಿರಿಗೆ ಬರುವಂತೆ ತಿಳಿಸಿದೆನು. ನಂತರ ದಿನಾಂಕ.01/06/2022 ರಂದು ಮದ್ಯಾಹ್ನ ನನ್ನ ತಂಗಿಗೆ ರಫೀಕ ಅಹಮ್ಮದ ಈತನು ಪೋನ ಮಾಡಿ ನಾನು ಬಾಂಬೆಯಿಂದ ಯಾದಗಿರಿಗೆ ಬರುತ್ತಿದ್ದೆನೆ ಅಂತಾ ತಿಳಿಸಿದನು. ನಂತರ ನನ್ನ ತಂಗಿಯು ರಫೀಕ ಅಹಮ್ಮದ ಯಾದಗಿರಿ ಬರುತ್ತಿದ್ದಾನೆ ಅಂತಾ ತನ್ನ ಮಗಳು ಸಮ್ರಿನ್ ಈಕೆಗೆ ತಿಳಿಸಿದ್ದು ಸಮ್ರಿನ್ ಈಕೆಯು ಮತ್ತು ಹಿರಿಯರು ಎಲ್ಲರೂ ಸೇರಿ ಬುದ್ದಿವಾದ ಹೇಳಿ ತನ್ನನ್ನು ಮತ್ತೆ ಗಂಡನ ಜೊತೆಗೆ ಬಾಂಬೆಗೆ ಕಳುಹಿಸುತ್ತಾರೆ ಅಂತಾ ತಿಳಿದು ತನ್ನ ತಾಯಿಯ ಮನೆಯಿಂದ ಹೋಗಿರುತ್ತಾಳೆ ಎಲ್ಲಿಗೆ ಹೋಗಿರುತ್ತಾಳೆ ನಮಗೆ ಗೊತ್ತಿರುವುದಿಲ್ಲಾ.
ಇಂದು ದಿನಾಂಕ.04/06/2022 ರಂದು ಬೆಳಿಗ್ಗೆ 9 ಗಂಟೆ ಸುಂಆರಿಗೆ ನನ್ನ ತಂಗಿಯ ಅಳಿಯ ರಫೀಕ ಅಹ್ಮದ ಈತನು ಬಾಂಬೆಯಿಂದ ಯಾದಗಿರಿಯ ನನ್ನ ತಂಗಿಯ ಮನೆಗೆ ಬಂದಿದ್ದು ಆ ಸಮಯದಲ್ಲಿ ನಾನು ನನ್ನ ಗಂಡ ಮಹಮ್ಮದ ಇಬ್ರಾಹಿಂ, ನನ್ನ ತಂಗಿ ರಶೀದಾ ಬೇಗಂ ಮನೆಯಲ್ಲಿ ಇದ್ದೆವು. ರಫೀಕ ಅಹಮ್ಮದ ಈತನು ನನ್ನ ಹೆಂಡತಿ ಸಮ್ರಿನ್ ಎಲ್ಲಿದ್ದಾಳೆ ಕರೆಯಿರಿ ಅವಳನ್ನು ಅಂತಾ ಸಿಟ್ಟಿನಿಂದ ಕೂಗಾಡಿದ್ದು ನಾವು ಅತನಿಗೆ ಸಮಾಧಾನ ಮಾಡುತ್ತಾ ನೀನು ಬರುವ ಸುದ್ದಿ ತಿಳಿದು ನಿನಗೆ ಅಂಜಿಕೊಂಡು ಮನೆಯಿಂದ ಹೋಗಿದ್ದು ಎಲ್ಲಿಗೆ ಹೋಗುತ್ತೇನೆ ಅಂತಾ ನಮಗೆ ಹೇಳಿರುವದಿಲ್ಲಾ ಈಗ ಆಕೆ ಎಲ್ಲಿದ್ದಾಳೆ ಅಂತಾ ನಮಗೆ ಗೊತ್ತಿರುವುದಿಲ್ಲಾ ಅಂತಾ ಹೇಳಿದ್ದಕ್ಕೆ ಅವನು ನಿವೆಲ್ಲರೂ ನಾಟಕ ಕಂಪನಿಯವರು ಅದಿರಿ ಅಂತಾ ನನ್ನ ತಂಗಿಗೆ ನಿನೇ ನನ್ನ ಹೆಂಡತಿಯನ್ನು ಎಲ್ಲಿಗೆ ಕಳುಹಿಸಿ ಬಚ್ಚಿಟ್ಟಿರುವಿ ಚೀನಾಲ, ರಾಂಡ ಅಂತಾ ಅವಚ್ಯವಾಗಿ ಬೈದು ನನ್ನ ಹೆಂಡತಿಯನ್ನು ನೀನು ಬೇರೆ ಕಡೆ ಕಳುಹಿಸಿದರೆನಾಯಿತು, ನನ್ನ ಜೊತೆ ನೀನೇ ಬಾಂಬೆಗೆ ಬಂದು ಬೇರೆಯವರ ಜೊತೆ ಮಲಗಿ ನನಗೆ ಹಣ ಕೊಡಿಸು ಅಂತಾ ಬೈದನು ಅದಕ್ಕೆ ನಮ್ಮ ತಂಗಿಯು ಅವನಿಗೆ ನೀನು ಹಿರಿಯರು ಕಿರಿಯುರು ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಮಯರ್ಾದೆಯಿಂದ ಮಾತನಾಡು ಅಂತಾ ಅಂದಿದಕ್ಕೆ ಅವನು ಸಿಟ್ಟಿಗೆದ್ದು ತನ್ನ ಜೊತೆಯಲ್ಲಿ ತಂದಿದ್ದ ಹರಿತವಾದ ಚಾಕುವನ್ನು ಹೊ ತೆಗೆದು ನನ್ನ ತಂಗಿ ರಶೀದಾಬೇಗಂ ಇವಳ ಎದೆಯ ಮದ್ಯಬಾಗಕ್ಕೆ, ಹಾಗೂ ಎದೆಯ ಎಡಬಾಗಕ್ಕೆ ಜೋರಾಗಿ ತಿವಿದು ರಕ್ತಗಾಯಗೊಳಿಸಿದನು. ಈ ವಿಷಯವನ್ನು ನೀವು ಯಾರಿಗಾದರೂ ಹೆಳಿದರೆ, ಪೊಲೀಸ್ ಕೇಸು ಮಾಡಿದರೆ ಈಕೆಗೆ ಚಾಕುವಿನಿಂದ ತಿವಿದು ಸಾಯಿಸಿದಂತೆ ನಿಮಗೂ ಕೂಡಾ ಸಾಯಿಸುತ್ತೇನೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಚಾಕು ಸಮೇತ ಅಲ್ಲಿಂದ ಓಡಿ ಹೋದನು. ನಾವು ನಮ್ಮ ತಂಗಿಯನ್ನು ಉಪಚಾರ ಕುರಿತು ಮನೆಯಿಂದ ನಾವು ಮತ್ತು ನಮ್ಮ ಓಣಿಯ ಮಹಿಬೂಬ ತಂದೆ ಮಹಮ್ಮದ ಹುಸೆನ, ಫರೀದ ಖಾನ ತಂದೆ ಫೀರೋಜ ಖಾನ ರವರು ಕೂಡಿಕೊಂಡು ಇಮ್ರಾನ ಸಗ್ರಿ ಈತನ ಟಾಟಾ ಎಸಿಇ ಗೂಡ್ಸ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿದಾಗ ವೈದ್ಯರು ಆಕೆಯನ್ನು ಪರೀಕ್ಷಿಸಿ ಬೆಳಿಗ್ಗೆ 10-30 ಗಟೆಗೆ ಮೃತಪಟ್ಟಿರುತ್ತಾಳೆ ಅಂತಾ ತಿಳಿಸಿದರು. ಸದರಿ ನನ್ನ ತಂಗಿ ರಶೀದಾ ಬೇಗಂ ಈಕೆಯ ಮಗಳಾದ ಸಮ್ರಿನ್ ಈಕೆಯ ಗಂಡ ರಫೀಕ ಅಹಮ್ಮದ ಈತನು ಬಾಂಬೆಯಿಂದ ಯಾಧಗಿರಿಗೆ ಬಂದು ನನ್ನ ತಂಗಿಯ ಜೊತೆ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಚಾಕುವಿನಿಂದ ತಿವಿದು ಕೊಲೆ ಮಾಡಿ ಜೀವದ ಬೆದರಿಕೆ ಹಾಕಿ ಚಾಕುವಿನೊಂದಿಗೆ ಪರಾರಿಯಾಗಿರುವ ಸದರಿಯವನ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಕೊಟ್ಟ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 68/2022 ಕಲಂ. 504, 506, 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಪಿ.ಎ.ಆರ್ ನಂ. 09/2022 ಕಲಂ 110 ಸಿ.ಆರ್.ಪಿ.ಸಿ: ಮಾನ್ಯರವಲ್ಲಿ ನಾನು ವಿಠ್ಠಲ್ ಎ.ಎಸ್.ಐ ಯಾದಗಿರಿ ನಗರ ಠಾಣೆ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ನಾನು ಸಂಗಡ ಜಗನಾಥರೆಡ್ಡಿ ಹೆಚ್.ಸಿ 10 ರವರನ್ನು ಕರೆದುಕೊಂಡು ಇಂದು ದಿನಾಂಕ 04/06/2022 ರಂದು ಮಧ್ಯಾಹ್ನ 02-00 ಗಂಟೆಗೆ ಇಲಾಖಾ ಜೀಪ್ ನಂ ಕೆ.ಎ 33 ಜಿ 0075 ನೇದ್ದರಲ್ಲಿ ಕುಳಿತುಕೊಂಡು ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಮಾಡುತ್ತಾ ಹೊರಟು ಚಟಾನ್ ಏರಿಯಾ, ಮುಸ್ಲಿಂಪೂರ, ಗಾಂಧಿಚೌಕ್ ಚಕ್ರಕಟ್ಟಾದಿಂದ ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ಮೈಲಾಪೂರ ಬೇಸ್ ಗೇ ಹೋದಾಗ ಕೊಟಗರವಾಡಾ ಕಡೆಗೆ ಹೋಗುವ ರಸ್ತೆಯ ಹತ್ತಿರ ಗಂಜ್ ರೋಡಿನಲ್ಲಿ ಒಬ್ಬ ವ್ಯಕ್ತಿ ಕುಡಿದ ಅಮಲಿನಲ್ಲಿ ಹೋಗಿ ಬರುವ ಸಾರ್ವಜನಿಕರಿಗೆ ತಡೆದು ಅವಾಚ್ಯವಾಗಿ ಬೈಯುತ್ತಾ ಸಾರ್ವಜನಿಕ ಸಂಚಾರಕ್ಕೆ ಅಡೆತಡೆ ಮಾಡಿ ಸಾರ್ವಜನಿಕರಿಗೆ ಶಾಂತತೆ ಭಂಗ ಉಂಟುಮಾಡುತ್ತಿದ್ದನು. ಇದನ್ನು ನೋಡಿದ ನಾವು ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಆತನ ಹೆಸರು ಉಮೇಶ ತಂದೆ ಬಸವರಾಜ ಹೂಗಾರ ವಯಾ 31 ವರ್ಷ, ಜಾ|| ಹೂಗಾರ ಉ|| ಹೂವಿನ ವ್ಯಾಪಾರ ಸಾ|| ಮೈಲಾಪೂರ ಅಗಸಿ ಯಾದಗಿರಿ ಅಂತಾ ತಿಳಿಸಿದನು. ಆತನಿಗೆ ಹಾಗೆಯೇ ಬಿಟ್ಟಲ್ಲಿ ಯಾವುದಾರು ಸಂಜ್ಞೆಯ ಅಪರಾಧ ಮಾಡುವ ಸಂಭವ ಇದ್ದ ಕಾರಣ ಆತನಿಗೆ ವಶಕ್ಕೆ ತೆಗೆದುಕೊಂಡು ಇಂದು ಮಧ್ಯಾಹ್ನ 03-00 ಗಂಟೆಗೆ ಠಾಣೆಗೆ ಕರೆದುಕೊಂಡು ಬಂದೆನು. ಕಾರಣ ಇಂದು ದಿನಾಂಕ 04/06/2022 ರಂದು ಮಧ್ಯಾಹ್ನ 02-30 ಗಂಟೆಯ ಸುಮಾರಿಗೆ ನಾನು ಹಾಗೂ ಜಗನಾಥರೆಡ್ಡಿ ಹೆಚ್.ಸಿ 10 ಇಬ್ಬರು ಕೂಡಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯಕ್ಕೆ ಹೋದಾಗ ಯಾದಗಿರಿ ನಗರದ ಮೈಲಾಪೂರ ಬೇಸ್ ಹತ್ತಿರ ಗಂಜ್ ರೋಡಿನಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಉಮೇಶ ತಂದೆ ಬಸವರಾಜ ಹೂಗಾರ ಈತನು ಸಾರ್ವಜನಿಕರಿಗೆ ಅವಾಚ್ಯವಾಗಿ ಬೈಯುತ್ತಾ ಹೋಗಿ ಬರುವ ವಾಹನಗಳನ್ನು ತಡೆದು ಜನರ ಸಂಚಾರಕ್ಕೆ ಅಡೆತಡೆ ಮಾಡಿ ಸಾರ್ವಜನಿಕಾ ಶಾಂತತೆ ಭಂಗ ಉಂಟುಮಾಡಿದ್ದರಿಂದ ಆತನ ವಿರುದ್ದ ಮುಂಜಾಗೃತ ಕ್ರಮ ಕುರಿತು ಠಾಣೆ ಪಿ.ಎ.ಆರ್ ನಂ 09/2022 ಕಲಂ 110 ಸಿ.ಆರ್.ಪಿ.ಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಯು.ಡಿ ಆರ್.ನಂ.06/2022 ಕಲಂ. 174 ಸಿ.ಆರ್.ಪಿ.ಸಿ: ಇಂದು ದಿನಾಂಕ.04/06/2022 ರಂದು 9-30 ಎಎಂಕ್ಕೆ ಶ್ರೀ ಫಂಡರಿ ಚವ್ಹಾಣ ತಂದೆ ದೇವಜಿ ಚವ್ಹಾಣ ವ;55 ಜಾ; ಲಂಬಾಣಿ ಉ; ಸಂಚಾರಿ ನಿಯಂತ್ರಕರು ಕೆ.ಎಸ್.ಆರ್.ಟಿ.ಸಿ ಘಟಕ ಯಾದಗಿರಿ ಸಾ; ನಾಲವಾರ ತಾ; ಚಿತ್ತಾಪೂರ ಜಿ; ಕಲಬುರಗಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ಇಂದು ಇಂದು ದಿನಾಂಕ.04/06/2022 ರಂದು 8-30 ಎಎಮ್ ಕ್ಕೆ ನಾನು ಕರ್ತವ್ಯ ನಿರ್ವಹಿಸಲು ಯಾದಗಿರಿಯ ಸಿಟಿ ಬಸ ನಿಲ್ದಾಣ(ಹಳೆ ಬಸ ನಿಲ್ದಾಣ)ದಲ್ಲಿ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾಗ 8-45 ಎಎಮ್ ಸುಮಾರಿಗೆ ಬಸ ನಿಲ್ದಾಣದಲ್ಲಿಯ ಫ್ಲಾಟ್ ಫಾರ್ಮ ನಂ.04 ನೇದ್ದರ ಹತ್ತಿರ ಸಾರ್ವಜನಿಕರು ಸೇರಿದ್ದು ಆಗ ನಾನು ಮತ್ತು ಆಟೋ ಚಾಲಕನಾದ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೆ ಹಾಗೂ ಈತರರು ಹೋಗಿ ನೋಡಲಾಗಿ ಒಬ್ಬ ಅಪರಿಚಿತ ಗಂಡು ಮನುಷ್ಯ ಅಂದಾಜ ವಯಸ್ಸು 40-45 ವರ್ಷ ಇರಬಹುದು ಸದರಿಯವನು ಕುಳಿತಲ್ಲಿಯೇ ಮೃತಪಟ್ಟಿದ್ದು ನಾವು ನೋಡಲಾಗಿ ಮೃತನ ಗುರುತು ಸಿಕ್ಕಿರುವುದಿಲ್ಲ. ಮೃತ ವ್ಯಕ್ತಿಯು ಅಪರಿಚಿತನಾಗಿದ್ದು ಹೆಸರು ವಿಳಾಸ ಗೊತ್ತಾಗಿರುವುದಿಲ್ಲ. ಮೃತನು ಸಾದಾಗೆಂಪುಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಕಪ್ಪು ಬಿಳುಪು ಕೂದಲು ಇದ್ದು ಮೈಮೇಲೆ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದು ಸದರಿಯವನು ಯಾರು ಮತ್ತು ಎಲ್ಲಿಯವನೋ ಅಂತಾ ಗೊತ್ತಾಗಿರುವುದಿಲ್ಲ. ಯಾದಗಿರಿಯ ಹಳೆ ಬಸನಿಲ್ದಾಣದಲ್ಲಿ ನಿನ್ನೆ ದಿನಾಂಕ. 03/06/2022 ರಂದು ರಾತ್ರಿ 11-00 ಗಂಟೆಯಿಂದ ಇಂದು ದಿನಾಂಕ; 04/06/2022 ರಂದು ಬೆಳೆಗ್ಗೆ 6-00 ಗಂಟೆಯ ಮಧ್ಯದ ಅವಧಿಯಲ್ಲಿ ಮೃತಪಟ್ಟಿರಬಹುದು ಮೃತನು ಭಿಕ್ಷುಕನಂತೆ ಕಂಡು ಬರುತ್ತಿದ್ದು, ಅನಾರೋಗ್ಯದಿಂದ, ನಿಶಕ್ತನಾಗಿ ಯಾವುದೋ ಕಾಯಿಲೆಯಿಂದ ಹೊಟ್ಟೆಗೆ ಆಹಾರವಿಲ್ಲದೆ ಮೃತಪಟ್ಟಂತೆ ಕಂಡು ಬರುತ್ತದೆ. ಸದರಿ ಮೃತನ ವಾರಸುದಾರರು ಯಾರು ಅಂತಾ ಗೊತ್ತಾಗಿರುವುದಿಲ್ಲಾ. ಕಾರಣ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.06/2022 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.


ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 93/2022 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 04.06.2022 ರಂದು ಸಾಯಂಕಾಲ 3.50 ಗಂಟೆಗೆ ಗುರುಮಠಕಲ್ ಪಟ್ಟಣದ ಸಾಮ್ರಾಟ್ ಲಾಡ್ಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿಐ ಸಾಹೇಬರು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ಈ ಮೆಲ್ಕಂಡ ಕಾಲಂ: 08 ರಲ್ಲಿಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಾಯಂಕಾಲ 5.00 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 93/2022 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಯಾದಗಿರಿ ಮಹಿಳಾ ಪೊಲೀಸ್ ಠಾಣೆ:-
ಗುನ್ನೆ ನಂ: 37/2022 ಕಲಂ: 363 ಐ.ಪಿ.ಸಿ ಇಂದು ದಿನಾಂಕ 04.06.2022 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯಾದಿದಾರರಾದ ಶ್ರೀ ಸಾಬಣ್ಣ ತಂದೆ ತಿಮ್ಮಣ್ಣ ಹಲಿಗೇರಿ ವಯಾ-40 ಜಾ- ಮಾದಿಗ ಉ- ಕೂಲಿಕೆಲಸ ಸಾ- ಬಂದಳ್ಳಿ ತಾ-ಜಿ-ಯಾದಗಿರಿ.ಇವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ್ ಮಾಡಿಸಿದ ಅರ್ಜಿ ಸಲ್ಲಿಸಿದ ಸಾರಾಂಶವೇನೆಂದರೆ ನನಗೆ 1) ರೇಣುಕಾ ವಯಾ- 18 ವರ್ಷ, 2) ಅಶ್ವಿನಿ ವಯಾ-16 ವರ್ಷ, 3) ಶಿವಕುಮಾರ ವಯಾ-15 ವರ್ಷ, ಮತ್ತು 4) ರಮೇಶ್ ವಯಾ- 13 ವರ್ಷ, ಈ ರೀತಿ 2 ಹೆಣ್ಣು, 2 ಗಂಡು ಮಕ್ಕಳಿರುತ್ತಾರೆ. ನನ್ನ ಮಕ್ಕಳನ್ನು ನಮ್ಮ ತಾಯಿಯ ಹತ್ತಿರ ಬಂದಳ್ಳಿ ಗ್ರಾಮದಲ್ಲಿಯೇ ಬಿಟ್ಟು ನಾನು ಮತ್ತು ನನ್ನ ಹೆಂಡತಿ ಕೂಲಿ ಕೆಲಸ ಮಾಡಲು 20 ವರ್ಷಗಳಿಂದಲು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಇದ್ದು ಆಗಾಗ ಬಂದಳ್ಳಿ ಗ್ರಾಮಕ್ಕೆ ಬಂದು ಹೋಗುವುದು ಮಾಡುತ್ತೀದ್ದೇವು. ಈಗ ಸಧ್ಯ ನಾವು ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ನಾನು ನನ್ನ ಹೆಂಡತಿ ಬೆಂಗಳೂರಿನಿಂದ 8 ದಿವಸಗಳ ಹಿಂದೆ ನಮ್ಮ ಬಂದಳ್ಳಿ ಗ್ರಾಮಕ್ಕೆ ಬಂದಿರುತ್ತೇವೆ. ನನ್ನ ಎರಡನೇ ಮಗಳಾದ ಅಶ್ವಿನಿ ಈಕೆಯು ಯಾದಗಿರಿ ನ್ಯೂ ಕನ್ನಡ ಶಾಲೆಯಲ್ಲಿ ಓದಿತ್ತಿದ್ದು ಸಧ್ಯ ಈಗ 10ನೇ ತರಗತಿ ಮುಗಿದಿರುತ್ತದೆ.
ದಿನಾಂಕ 01.06.2022 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನನ್ನ ಮಗಳು ರೇಣುಕಾ ಈಕೆಯು ಯಾದಗಿರಿಯ ನ್ಯೂ ಕನ್ನಡ ಶಾಲೆಗೆ ಹೋಗಿ ಟಿ.ಸಿ ತೆಗೆದುಕೊಂಡು ಬರುತ್ತೇನೆಂದು ನನ್ನ ಹೆಂಡತಿಗೆ ಹೇಳಿ ಹೋದವಳು ಎಷ್ಟೋತ್ತಾದರೂ ಮನೆಗೆ ಬರಲಿಲ್ಲ ನಾನು ನನ್ನ ಹೆಂಡತಿ ಸ್ವಲ್ಪ ಸಮಯದವರೆಗೂ ಕಾದು ನೋಡಿದ್ದು ಎಷ್ಟೋತ್ತಾದರೂ ಅಶ್ವಿನಿ ಮನೆಗೆ ಬರದೇ ಇದ್ದುದ್ದರಿಂದ ನಾನು ಮತ್ತು ನನ್ನ ಹೆಂಡತಿ ಮಹಾದೇವಮ್ಮ ಕೂಡಿ ನನ್ನ ಮನೆಯ ಸುತ್ತಾ ಮುತ್ತಾ ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ ನಂತರ ನಾವು ಯಾದಗಿರಿಯ ನ್ಯೂ ಕನ್ನಡ ಶಾಲಗೆ ಹೋಗಿ ಅಲ್ಲಿ ಶಾಲೆಯ ಶಿಕ್ಷಕರಿಗೆ ನನ್ನ ಮಗಳು ಬಂದ ಬಗ್ಗೆ ವಿಚಾರಿಸಿದ್ದು ಅವರು ತಿಳಿಸಿದ್ದೇನೆಂದರೆ ನಿಮ್ಮ ಮಗಳು ಶಾಲೆಗೆ ಬಂದು 10 ನೇ ತರಗತಿಯ ಟಿ.ಸಿ ತೆಗೆದುಕೊಂಡು ಹೋಗಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ನಂತರ ನಾವು ಯಾದಗಿರಿಯ ಹಳೆ ಬಸ್ ನಿಲ್ದಾಣ, ಹೊಸಬಸ್ ನಿಲ್ದಾಣ ಕಡೆ ಹುಡುಕಾಡಿದರೂ ಕೂಡಾ ನನ್ನ ಮಗಳು ಅಶ್ವಿನಿ ಈಕೆಯು ಸಿಕ್ಕಿರುವುದಿಲ್ಲ.
ನಂತರ ನಮಗೆ ಗೋತ್ತಾಗಿದ್ದೇನೆಂದರೆ ಯಾದಗಿರಿಯ ಶಂಕರ್ ತಂದೆ ಹಣಮಂತ ಎಳವುರ್ ಇತನು ಆಗಾಗ ನನ್ನ ಮಗಳೊಂದಿಗೆ ಮಾತಾನಾಡುವುದು, ಸಲುಗೆಯಿಂದ ಇರುವುದು ಮಾಡುತ್ತಿದ್ದರಿಂದ ಈ ವಿಷಯವು ನಮಗೆ ತಡವಾಗಿ ಗೋತ್ತಾಗಿರುತ್ತದೆ. ಅವನ ಮೇಲೆ ಅನುಮಾನ ಬಂದಿದ್ದು ಅವನ ಮನೆಗೆ ಹೋಗಿ ವಿಚಾರಣೆ ಮಾಡಿದ್ದು ಅವನು ಸಹ ಮನೆಯಲ್ಲಿ ಇರುವುದಿಲ್ಲ ಅಂತಾ ಗೋತ್ತಾಗಿದ್ದು ನನ್ನ ಮಗಳನ್ನುಅವನೇ ಅಪಹರಣ ಮಾಡಿಕೊಂಡು ಹೋಗಿರಬಹುದು ಅಂತಾ ನನಗೆ ಅನುಮಾನ ಇರುತ್ತದೆ. ಅವನ ಮೋಬೈಲ್ ನಂಬರ್ 8088162776 ನೇದ್ದಕ್ಕೆ ಪೋನ್ ಮಾಡಿದ್ದು ಅದು ಸ್ವೀಚ್ ಆಫ್ ಅಂತಾ ಹೇಳುತ್ತದೆ.
ನನ್ನ ಮಗಳು ಅಪಹರಣಕ್ಕೊಳಗಾದಾಗ ಬಿಳಿ ಮತ್ತು ಗುಲಾಬಿ ಬಣ್ಣದ ಟಾಫ್, ಬಿಳಿ ಮತ್ತು ಗುಲಾಬಿ ಬಣ್ಣದ ಪ್ಯಾಂಟ್, ಬಿಳಿ ಮತ್ತು ಗುಲಾಬಿ ಬಣ್ಣದ ಓಡಾಣಿ ಹಾಕಿಕೊಂಡಿರುತ್ತಾಳೆ. ನನ್ನ ಮಗಳು ಅಶ್ವಿನಿಯ ಎತ್ತರ-4-1/2 ಫೀಟ್ , ಸಾಧರಣ ಬಣ್ಣ, ತೆಳ್ಳನೇಯ ಮೈಕಟ್ಟು ಕನ್ನಡ , ಭಾಷೆ ಮಾತನಾಡುತ್ತಾಳೆ. ನನ್ನ ಮಗಳಾದ ಅಶ್ವಿನಿ ವಯಾ-16 ವರ್ಷ ಈಕೆಯನ್ನು ದಿನಾಂಕ: 01.06.2022 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಶಂಕರ್ ಇತನು ಶಾಲೆಯ ಹತ್ತಿರ ಹೋಗಿ ನನ್ನ ಮಗಳನ್ನು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿದ್ದು, ಇಲ್ಲಿಯವರಗೆ ನನ್ನ ಮಗಳನ್ನು ಎಲ್ಲಾ ಕಡೆ ಹುಡುಕಾಡಲಾಗಿ ಸಿಗದೇ ಇದ್ದುದ್ದರಿಂದ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ ನನ್ನ ಮಗಳಿಗೆ ಅಪಹರಣ ಮಾಡಿಕೊಂಡು ಹೋದ ಶಂಕರ್ ತಂದೆ ಹಣಮಂತ ಎಳವುರ್ ಇತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ದೂರು ಅಂತಾ ಅರ್ಜಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 37/2022 ಕಲಂ: 363 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

ಭೀ.ಗುಡಿ ಪೊಲೀಸ್ ಠಾಣೆ:-
ಗುನ್ನೆ ನಂ: 51/2022 ಕಲಂ 32, 34 ಕೆ.ಇ ಎಕ್ಟ್ : ಇಂದು ದಿನಾಂಕ: 04/06/2022 ರಂದು 05.00 ಪಿ.ಎಮ್.ಕ್ಕೆಆರೋಪಿತನು ಸರಕಾರದಿಂದಯಾವುದೇ ಪರವಾನಿಗೆಯನ್ನು ಪಡೆಯದೇಇಟಗಾ(ಎಸ್) ಗ್ರಾಮದ ಅಗಸಿ ಹತ್ತಿರತನ್ನ ಹೊಟೆಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪಿ.ಎಸ್.ಐರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 05.10 ಪಿ.ಎಮ್ ಕ್ಕೆ ದಾಳಿ ಮಾಡಿಆರೋಪಿತನಿಗೆ ಹಿಡಿದುಆತನಿಂದ1)90 ಎಮ್.ಎಲ್.ನ 48 ಓರಿಜಿನಲ್ಚಾಯ್ಸ್ ವಿಸ್ಕಿ ಪೌಚಗಳು ಅ.ಕಿ. 1686.24/- ರೂ, ಮೌಲ್ಯದ ಮದ್ಯವನ್ನುಜಪ್ತಿಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 85/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 04/06/2022 ರಂದು 2:15 ಪಿ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 04/06/2022 ರಂದು 11:15 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಪೂರ ನಗರದ ಉದ್ದಾರ ಓಣಿಯಲ್ಲಿರುವ ಅಬ್ಬಾಸಲಿ ಮಸೀದಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427, 2) ಸಿದ್ರಾಮರೆಡ್ಡಿ ಸಿಪಿಸಿ-423 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ ರವರು ಇಬ್ಬರು ಪಂಚರಾದ 1) ಅಕ್ಷಯ ಕುಮಾರ ತಂದೆ ನಾಗರಾಜ ಕಟ್ಟಿಮನಿ ವ|| 27 ವರ್ಷ ಜಾ|| ಹೊಲೆಯ ಉ|| ಕೂಲಿ ಸಾ|| ಉದ್ದಾರ ಓಣಿ ಸುರಪೂರ 2) ಶ್ರೀ ಪ್ರಶಾಂತ ತಂದೆ ಬಸವರಾಜ ಪರಹತಾಬಾದ ವ|| 27 ವರ್ಷ ಜಾ|| ಹಿಂದೂ ಮೋಚಿ ಉ|| ಕೂಲಿ ಕೆಲಸ ಸಾ|| ಉದ್ದಾರ ಓಣಿ ಸುರಪೂರ ಇವರನ್ನು 11:45 ಎ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 12 ಪಿ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33 ಜಿ-0094 ನೇದ್ದರಲ್ಲಿ ಹೊರಟು 12:20 ಪಿ.ಎಮ್ ಕ್ಕೆ ಉದ್ದಾರ ಓಣಿಯಲ್ಲಿರುವ ಅಬ್ಬಾಸಲಿ ಮಸೀದಿ ಹತ್ತಿರ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಅಬ್ಬಾಸಲಿ ಮಸೀದಿ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 12:25 ಪಿ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ರಾಮಣ್ಣ ತಂದೆ ಸಿದ್ದಪ್ಪ ಮಂಗಿಹಾಳ ವ|| 40 ವರ್ಷ ಜಾ|| ಕುರುಬರು ಉ|| ಕೂಲಿ ಸಾ|| ಉದ್ದಾರ ಓಣಿ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 1230=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 12:25 ಪಿ.ಎಮ್ ದಿಂದ 1:25 ಪಿ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಕೊಟ್ಟ ವರದಿ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 85/2022 ಕಲಂ: 78 (3) ಕೆಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 87/2022 ಕಲಂ. 279, 337, 338, 304(ಎ) ಐಪಿಸಿ & 187 ಐ.ಎಮ್.ವಿ ಕಾಯ್ದೆ: ದಿನಾಂಕ: 04-06-2022 ರಂದು ರಾತ್ರಿ 07-10 ಗಂಟೆಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ಇದೆ ಅಂತಾ ತಿಳಿಸಿದ ಮೇರೆಗೆ ನಾನು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಹೋಗಿ ಅಲ್ಲಿ ಗಾಳುಗಳನ್ನು ವಿಚಾರಿಸಿ ಅವರಲ್ಲಿ ಸಿದ್ದಮ್ಮ ಗಂಡ ಹಣಮಂತ ಕುಂಟಯಲ್ಲಪ್ಪನೋರ ಸಾ|| ತಾತಳಗೇರಾ ಈಕೆಯು ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ನಮ್ಮ ಮನೆಯವರು ಮತ್ತು ಇತರರು ಕೂಡಿ ನಮ್ಮೂರಿನಿಂದ ಆಟೋ ನಂ. ಕೆಎ-33 ಎ-5680 ನೇದ್ದರಲ್ಲಿ ಬೆಂಗಲೂರಿಗೆ ಹೋಗಬೇಕಂತ ಯಾದಗಿರಿಗೆ ರಾಮಸಮುದ್ರ ಮಾರ್ಗವಾಗಿ ಬರುತ್ತಿರುವಾಗ ಪಂಚಶೀಲನಗರ ಕ್ರಾಸ ನಲ್ಲಿ ನಮ್ಮಂತೆ ಒಬ್ಬಾಕೆ ಕೂಸಿನ ತೆಗೆದುಕೊಂಡು ಆಟೋದಲ್ಲಿ ಕುಳಿತುಕೊಂಡಳು, ಎಲ್ಲರು ಸೇರಿ ಯಾದಗಿರಿಗೆ ರಾಮಸಮುದ್ರ ಗ್ರಾಮದ ಹತ್ತಿರ ಸಾಯಂಕಾಲ 06-00 ಗಂಟೆಗೆ ಯಾದಗಿರಿ - ಗುರಮಿಠಕಲ್ ಮುಖ್ಯರಸ್ತೆಯ ಮೇಲೆ ಬರುತ್ತಿರುವಾಗ ಆಟೋ ಚಾಲಕನು ತಾನು ನಡೆಸುವ ಆಟೋವನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿ ನಿಂತ್ರಣ ಮಾಡದೆ ತಾನು ನಡೆಸುವ ಆಟೋವನ್ನು ರೋಡಿನ ಪಕ್ಕದಲ್ಲಿ ಪಲ್ಟಿ ಮಾಡಿ ಆಟೋ ಚಾಲಕನು ಆಟೋವನ್ನು ಬಿಟ್ಟು ಓಡಿಹೋಗಿದ್ದು ಆತನನ್ನು ನೋಡೊದರೆ ನಾನು ಗುರಿತಿಸುತ್ತೇನೆ, ಆಟೋ ಪಲ್ಟಿಯಾಗಿದ್ದರಿಂದ ಆಟೋದಲಿದ್ದ ನಮಗೆ ಭಾರಿ ಮತ್ತು ಸಣ್ಣಪುಟ್ಟ ಗಾಯಗಳಾಗಿದ್ದು ಪಂಚಶೀಲನಗರದ ಪಾರಿ ಬಾಯಿ ಈಕೆಯು ಸ್ಥಳದಲ್ಲಿ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾಳೆ ನಂತರ ನಮಗೆ ಅಂಬುಲೆನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ.
ಕಾರಣ ಆಟೋ ನಂ. ಕೆಎ-33 ಎ-5680 ನೇದ್ದರ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿಂನಂತಿ ಅಂತಾ ಪಿಯಾಧಿ ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 05-06-2022 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080