ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 05-07-2021

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ 69/2021 ಕಲಂ 379 ಐಪಿಸಿ : ಫಿಯರ್ಾದಿ ಸಾರಾಂಶವೇನೆಂದರೆ, ನನ್ನದೊಂದು ಹಿರೋ ಸ್ಪ್ಲೆಂಡರ್ ಸ್ಪೋಕ್ ಮೋಟರ್ ಸೈಕಲ್ ನಂ ಏಂ 32 ಇಃ 9217 ಅಂತಾ ಇದ್ದು, ಅದರ ಇಟಿರಟಿಜ ಓಠ-ಊಂ10ಇಎಅಊಉ75952, ಅಊಂಖಖಖ ಓಔ-ಒಃಐಊಂ10ಂಐ ಅಊಉ65749, ಅಂತಾ ಇರುತ್ತದೆ. ಸದರಿ ಮೋಟರ್ ಸೈಕಲ್ ನಾನು ಉಪಯೋಗ ಮಾಡುತ್ತಿದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 20,000/-ರೂ|| ಗಳು. ಮಹ್ಮದ್ ನಿಜಾಮುದ್ದೀನ್ ತಂದೆ ಮಹ್ಮದ್ ಬಾಖರ ಸಾ|| ಸುಕೋಬ್ಯಾಂಕ್ ಎದುರುಗೆಡೆ ಯಾದಗಿರಿ ಇವರು ನಮ್ಮ ಸಂಬಂಧಿ ಇರುವುದ್ದರಿಂದ ನಾನು ಆಗಾಗ ಅವರ ಮನೆಗೆ ಬಂದು ಹೋಗಿ ಮಾಡುತ್ತೇನೆ. ಹೀಗಿದ್ದು ದಿನಾಂಕ 01/04/2021 ರಂದು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ನಾನು ನನ್ನ ಮೋಟರ್ ಸೈಕಲ್ ನಂ ಏಂ 32 ಇಃ 9217 ನೇದ್ದನ್ನು ತೆಗೆದುಕೊಂಡು ಯಾದಗಿರಿಯ ನಮ್ಮ ಸಂಬಂಧಿ ಮಹ್ಮದ್ ನಿಜಾಮುದ್ದೀನ್ ತಂದೆ ಮಹ್ಮದ್ ಬಾಖರ ಇವರ ಮನೆಗೆ ಬಂದು ಇಲ್ಲೆ ಉಳಿದುಕೊಂಡೆನು. ಸದರಿ ನನ್ನ ಮೋಟರ್ ಸೈಕಲ್ ಅವರ ಮನೆಯ ಮುಂದೆ ನಿಲ್ಲಿಸಿ ರಾತ್ರಿ 09-00 ಗಂಟೆಯ ಸುಮಾರಿಗೆ ಊಟ ಆದ ನಂತರ ನನ್ನ ಮೋಟರ್ ಸೈಕಲ್ ನೋಡಿ ಮನೆಯಲ್ಲಿ ಮಲಗಿಕೊಂಡೆನು. ನಂತರ ದಿನಾಂಕ 02/04/2021 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನಾನು ಎದ್ದು ನೋಡಿದಾಗ ನನ್ನ ಮೋಟರ್ ಇರಲಿಲ್ಲ. ನಂತರ ನಾನು, ಮತ್ತು ಮನೆಯಲ್ಲಿ ಇದ್ದ ಮಹ್ಮದ್ ನಿಜಾಮುದ್ದೀನ್ ಇಬ್ಬರು ಕೂಡಿ ಮನೆಯ ಅಕ್ಕ ಪಕ್ಕದಲ್ಲಿ ನನ್ನ ಮೋಟರ್ ಸೈಕಲ್ ನೋಡಲಾಗಿ ಕಾಣಲಿಲ್ಲ. ಯಾರೋ ಕಳ್ಳರು ಸದರಿ ನನ್ನ ಮೋಟರ್ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಮ್ಮ ಸಂಬಂಧಿಕರಿಗೆ ನನ್ನ ಮೋಟರ್ ಸೈಕಲ್ ಹುಡುಕಾಡಲು ಹೇಳಿ ನಾನು ಊರಿಗೆ ಹೋದೆನು. ನನ್ನ ಮೋಟರ್ ಸೈಕಲ್ ಹಳೆಯದಾಗಿದ್ದು, ನಾನು ಹಾಗೂ ನಮ್ಮ ಸಂಬಂಧಿಕರು ಇಲ್ಲಿಯ ವರೆಗೆ ಹುಡುಕಾಡಿದರೂ ಸಿಗದೇ ಇದ್ದ ಕಾರಣ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡುತ್ತಿದ್ದೇನೆ. ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2021 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 86/2021 ಕಲಂ: 447, 448, 395, 506 ಐಪಿಸಿ : ದಿನಾಂಕ: 04/07/2021 ರಂದು 11-45 ಎಎಮ್ ಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಚನ್ನಾರೆಡ್ಡಿ ವ:40, ಉಒಕ್ಕಲತನ ಸಾ:ಕೋಡಾಲ ತಾ:ವಡಗೇರಾ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ಇಂದು ದಿನಾಂಕ:04/07/2021 ರ ಬೆಳಗ್ಗೆ ಸುಮಾರು 4 ಗಂಟೆ ಸಮಯಕ್ಕೆ ನಾನು ನನ್ನ ಸ್ವಂತ ಸವರ್ೆ ನಂ. 207/1 ಹಾಗೂ 207/3, 3 ಎಕರೆ 35 ಗುಂಟೆ ಹಾಗೂ 9 ಎಕರೆ 21 ಗುಂಟೆ ಒಟ್ಟು ವಿಸ್ತೀರ್ಣ 13-16 ಎ-ಗು ಒಂದೆ ಹೊಲವಿದ್ದು, ಅದರ ಮಾಲಿಕ-ಕಬ್ಜೆದಾರನಿದ್ದು, ಸದರಿ ಹೊಲದಲ್ಲಿ ನನ್ನ ಫಾರ್ಮ ಹೌಸ ಮನೆಯಲ್ಲಿ ನಾನೊಬ್ಬನೆ ಮಲಗಿದ್ದಾಗ ಆರೋಪಿಗಳಾದ (ಸಿದ್ದಲಿಂಗ ಸ್ವಾಮಿಯೆಂದು ಹೇಳಿ ಕೊಳ್ಳುವ) ಶ್ರೀ ಬಸವರಾಜ ಸ್ವಾಮಿ ತಂದೆ ಅನುದಾನಯ್ಯ ಸ್ವಾಮಿ ಆತನ ಸಂಗಡಿಗರಾದ 2) ಧರ್ಮಣ ತಂದೆ ಸೋಮಪ್ಪ ದೋತರೆಡ್ಡಿ, 3) ಸಿದ್ದಲಿಂಗಪ್ಪ ತಂದೆ ಬಸವರಾಜಪ್ಪ ಮಾ|| ಪಾ||, 4) ಪಂಪಾರೆಡ್ಡಿ ತಂದೆ ರಾಮರೆಡ್ಡಿ ಮಾಡಗಿರಿ, 5) ಮಲ್ಲಪ್ಪ ತಂದೆ ರಾಮರೆಡ್ಡಿ ಮಾಡಗಿರಿ, 6) ಚನ್ನಾರೆಡ್ಡಿ ತಂದೆ ಬಸವರಾಜಪ್ಪ ಮಾ||ಪಾ||, 7) ದೇವರಾಜ ತಂದೆ ಸಿದ್ದಲಿಂಗಪ್ಪ ಮಾ|| ಪಾ||, 8) ಸುರೇಶ ತಂದೆ ಸಿದ್ದಲಿಂಗಪ್ಪ ಮಾ|| ಪಾ||, 9) ಶರಣಪ್ಪ ತಂದೆ ಚಂದ್ರುಗೌಡ ಪೋ|| ಪಾ|| ಮತ್ತು ಇನ್ನಿತರರು ಎಲ್ಲರೂ ಸಾ:ಕೋಡಾಲ ತಾ:ವಡಗೇರಾ ಜಿ:ಯಾದಗಿರಿ ಈ ಎಲ್ಲಾ ಜನರೂ ನನ್ನ ತೋಟದ ಮನೆಯಲ್ಲಿ ಬಂದು ಮಗನೆ ನಿಮ್ಮದಿಲ್ಲಿಗೆ ಮುಗಿಯಿತು. ನಿಮ್ಮ ತಂದೆಯನ್ನು ಓಡಿಸಿದ್ದೇವೆ. ಒದರಾಡಿದರೆ ನಿನ್ನನ್ನು ಕೊಂದು ಹಾಕುತ್ತೇವೆಂದು ನನಗೆ ಮಚ್ಚು, ಲಾಂಗ್, ಚಾಕು ಮತ್ತು ಇನ್ನಿತರೆ ಮಾರಕಾಸ್ತ್ರಗಳನ್ನು ತೋರಿಸಿ ಒದರಾಡುತ್ತಾ ಮನೆಯಲ್ಲಿಯ ರೂ. 50,000/- (ಐವತ್ತು ಸಾವಿರ) ಹಣವನ್ನು ಮತ್ತು ತೋಗರಿ ಬೀಜ, ಹೆಸರು ಬೀಜ, ಕವಳಿ ಬೀಜ, ಹತ್ತಿ ಬೀಜದ ಪಾಕೆಟ್ ಮತ್ತು ಮಸಾಲಿ (ಫಟರ್ಿಲೈಸರ್) ಚೀಲಗಳನ್ನು ತೆಗೆದುಕೊಂಡು, ಲೂಟಿ ಮಾಡಿ ಮನೆಗೆ ಬೆಂಕಿ ಹಚ್ಚಿ ಇವನನ್ನು ಮತ್ತು ಮನೆಯನ್ನು ಸುಟ್ಟು ಹಾಕಿರಿ ಎಂದು ಒದರಾಡುತ್ತಾ ಹೊರಟು ಹೊದರು. ನಾನು ತುಂಬಾ ಹೆದರಿ ಸುಮ್ಮನೆ ಕುಳಿತ್ತಿದ್ದೆ, ಏನು ಮಾಡಲು ನನಗೆ ತಿಳಿಯಲಿಲ್ಲ. ಬೆಳಗ್ಗೆ ನಾನು ಯಾದಗಿರಿಯಲ್ಲಿರುವ ನನ್ನ ತಂದೆ ಚನ್ನಾರೆಡ್ಡಿಗೆ ಭೇಟಿಯಾಗಿ ಈ ವಿಷಯ ತಿಳಿಸಿದೆ. ನೀನು ವಡಗೇರಾಕ್ಕೆ ಹೋಗಿ ಪೊಲೀಸರಿಗೆ ವಿಷಯ ತಿಳಿಸು ಎಂದು ಹೇಳಿದರು. ಅದರಂತೆ ನಾನು ಸದರಿ ಅಜರ್ಿಯನ್ನು ಸಲ್ಲಿಸುತ್ತಿದ್ದೇನೆ. ಕಾರಣ ದಯಾಳುಗಳಾದ ತಾವು ಆರೋಪಿಗಳ ಮೇಲೆ ಕ್ರಮ ತೆಗೆದುಕೊಂಡು ಕಾನೂನು ಪ್ರಕಾರ ಶಿಕ್ಷಿಸಬೇಕೆಂದು ವಿನಂತಿಸುತ್ತೇನೆ. ಇದಕ್ಕೆ ಕಾರಣವೇನಂದರೆ ಬಸವರಾಜಸ್ವಾಮಿಯವರಿಗೆ ಇನ್ನೊಬ್ಬ ಸ್ವಾಮಿಜಿ ಸದಾನಂದ ಸ್ವಾಮಿಜಿಯವರಿಗೆ ನಮ್ಮೂರ ಮಠದ ಮಠಾಧಿಪತ್ಯ ಹಾಗೂ ಆಸ್ತಿ ಬಗ್ಗೆ ಜಗಳ ನಡೆದಿದ್ದು, ನನ್ನ ತಂದೆ ಸದಾನಂದ ಸ್ವಾಮಿಜಿಯವರಿಗೆ ಸಹಾಯ ಮಾಡುತ್ತಿರುವನೆಂದು ಸಿಟ್ಟಿನಿಂದ ಇಂದು ನಮ್ಮನ್ನು ಹೆದರಿಸಲು ಆರೋಪಿ ಬಸವರಾಜಸ್ವಾಮಿ ಮತ್ತು ಆತನ ಸಂಗಡಿಗರು ಈ ಕೃತ್ಯ ಮಾಡಿದ್ದಾರೆ ಎಂದು ಕೊಟ್ಟ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 86/2021 ಕಲಂ: 447, 448, 395, 506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂ 152/2021. ಕಲಂ 143,147,148,323,324,307,354,355,504,506, ಸಂ 149 ಐ,ಪಿ,ಸಿ, : ಇಂದು ದಿನಾಂಕ 04/07/2021 ರಂದು 17-00 ಗಂಟೆಗೆ ಪಿಯರ್ಾದಿ ಶ್ರೀ ನಿಂಗಣ್ಣ ತಂದೆ ಮಾನಶಯ್ಯ ದೇವದುರ್ಗ ದೊಡ್ಡಿ ವ|| 30 ಜಾ|| ಬೇಡರ ಉ|| ಒಕ್ಕಲುತನ ಸಾ|| ಎಂ, ಕೊಳ್ಳೂರ. ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ನಮ್ಮ ಗ್ರಾಮದಲ್ಲಿ ನಾವು ಬೆಳೆಯುತ್ತಿರುವುದನ್ನು ಸಹಿಸದ ನಮ್ಮ ಸಮಾಜದವರಾದ ಶಿವರೆಡ್ಡಿ ತಂದೆ ಭಿಮರಾಯ ಪಾಂದೇಲಿ, ಈತನು ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿದ್ದು ಇರುತ್ತದೆ. ನಾವು ಹೋಗಲಿ ಅಂತ ಸುಮ್ಮನಾಗಿದ್ದೆವು. ಹೀಗಿದ್ದು ದಿನಾಂಕ 02/07/2021 ರಂದು ಬೆಳಿಗ್ಗೆ ನಾನು ಹೊಲಕ್ಕೆ ಹೋಗಿ ಮಧ್ಯಾಹ್ನ 1-30 ಗಂಟೆಗೆ ಮನೆಗೆ ಬಂದಾಗ ನನ್ನ ತಾಯಿಯಾದ ಲಕ್ಷ್ಮೀ ತಿಳಿಸಿದ್ದೇನೆಂದರೆ, ಮದ್ಯಾಹ್ನ 1-00 ಗಂಟೆಗೆ ನಾನು ಮತ್ತು ತಾಯಮ್ಮ ತಂದೆ ಮಾನಶಯ್ಯ ದೇವದುರ್ಗದೊಡ್ಡಿ ಇಬ್ಬರು ನಮ್ಮ ಮನೆಯ ಮುಂದೆ ಇದ್ದಾಗ ನಮ್ಮ ಸಮಾಜದವರಾದ. 1] ಭೀಮರಾಯ ತಂದೆ ಶೀವರೆಡ್ಡಿ ಪಾಂದೇಲಿ, 2] ಶಿವರೆಡ್ಡಿ ತಂದೆ ಭಿಮರಾಯ ಪಾಂದೇಲಿ, 3] ಸಿದ್ದಯ್ಯ ತಂದೆ ರಾಮಪ್ಪ ಕಾವಲಿ, 4] ಮಲ್ಲಿಕಾಜರ್ುನ ತಂದೆ ಶಿವರೆಡ್ಡಿ ಪಾಂದೇಲಿ, 5] ರಾಮಪ್ಪ ತಂದೆ ದೊಡ್ಡಜಂಗ್ಮಯ್ಯ ಕಾವಲಿ 6] ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಮಾಸ್ತಿ, 7] ಗೌರಮ್ಮ ಗಂಡ ಶಿವರೆಡ್ಡಿ ಪಾಂದೇಲಿ, ಇವರೆಲ್ಲರು ಕೂಡಿಕೊಂಡು ಅವರಲ್ಲಿ ಕೆಲವರು ಕೈಯಲ್ಲಿ ರಾಡ ಹಿಡಿದುಕೊಂಡು ಬಂದವರೆ ಲೇ ರಂಗ್ಯಾ ಸೂಳಿಮಗನೇ ಎಲ್ಲಿದ್ದೀಯಾ ನಮ್ಮ ಎದುರಿಗೆ ಮೀಸೆ ತಿರುತ್ತಿಯಾ ಅಂತ ಅಂದಾಗ, ಆಗ ತಾಯಮ್ಮಳು ನಮ್ಮ ಅಣ್ಣ ರಂಗನಾಥನು ಹೊಲಕ್ಕೆ ಹೋಗಿದ್ದಾನೆ ಯಾಕ ಬೈಯ್ಯುತ್ತೀರಿ ಅಂತ ಅಂದಾಗ ಭೀಮರಾಯನು ಎದರು ಮಾತನಾಡುತ್ತೀ ಏನಲೇ ಸೂಳಿ ನೀವು ದೇವದುರ್ಗದಿಂದ ಇಲ್ಲಿಗೆ ಬಂದು ಇದ್ದು ನಮಗೇ ಎದುರು ನಿಲ್ಲುತ್ತಿರೇನು? ನಮ್ಮ ಊರಿನಲ್ಲಿ ನಮಗೆ ಯಾರು ಎದರು ನಿಲ್ಲುವುದಿಲ್ಲ. ನೀವು ಜೀವಂತ ಇದ್ದರೆ ತಾನೇ ನಮಗೆ ಎದುರು ನಿಲ್ಲುವುದು, ನಿಮ್ಮನ್ನು ಈ ದಿನ ಜೀವ ಸಹಿತ ಉಳಿಸುವುದಿಲ್ಲಾ ಅಂತ ಕೋಲೆ ಮಾಡುವ ಉದ್ದೇಶದಿಂದ ಭಿಮರಾಯನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಮ್ಮಳ ತಲೆಗೆ ಹೊಡೆದು ರಕ್ತ ಗಾಯ ಮಾಡಿದನು, ಶಿವರೆಡ್ಡಿ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಾಯಮ್ಮಳ ಬೆನ್ನಿಗೆ, ಬಲಗಡೆ ರಟ್ಟೆಗೆ ಹೊಡೆದು ಕೋಲೆ ಮಾಡಲು ಪ್ರಯತ್ನಿಸಿರುತ್ತಾರೆ. ಸಿದ್ದಯ್ಯ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನಗೆ ಬಲಗೈ ಹಸ್ತಕ್ಕೆ, ಬಲಗಡೆ ಕಿವಿಯ ಮೇಲೆ ತಲೆಗೆ ಹೋಡೆದು ರಕ್ತಗಾಯ ಮಾಡಿದನು. ಮಲ್ಲಿಕಾಜರ್ುನ ತಂದೆ ಶಿವರೆಡ್ಡಿ ಈತನು ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ನನಗೆ ಕುತ್ತಿಗೆಗೆ, ಬಲಗೈ ಭುಜಕ್ಕೆ, ಬಲಗಡೆ ಪಕ್ಕೆಗೆ, ಬಲಗಾಲ ತೊಡೆಗೆ, ಬಲಗಾಲು ಮೊಳಕಾಲಕೆಳಗೆ ಹೋಡೆದು ಕೋಲೆ ಮಾಡಲು ಪ್ರಯತ್ನಿಸಿರುತ್ತಾರೆ. ರಾಮಪ್ಪ ಇವನು ತನ್ನ ಕೈಯಿಂದ ನನಗೆ ಹೊಟ್ಟೆಗೆ ಹೊಡೆದು ನನಗೆ ಮಾನಭಂಗ ಮಾಡುವ ಉದ್ದೇಶದಿಂದ ಸೀರೆ ಹಿಡಿದು ಜಗ್ಗಾಡಿದನು, ಮಲ್ಲಿಕಾಜರ್ುನ ತಂದೆ ಸಿದ್ದಪ್ಪ ಈತನು ತನ್ನ ಕೈಯಿಂದ ನನಗೆ ಕಪಾಳಕ್ಕೆ ಹೊಡೆದನು. ಗೌರಮ್ಮಳು ತನ್ನ ಎಡಕಾಲಿನ ಚೆಪ್ಪಲಿಯಿಂದ ತಾಯಮ್ಮಳಿಗೆ ಕಪಾಳಕ್ಕೆ ಹೊಡೆದಳು. ಆಗ ಅಲ್ಲೆ ಹೋಗುತ್ತಿದ್ದ ನಮ್ಮೂರ ಮಲ್ಲಮ್ಮ ತಂದೆ ತಿಪ್ಪಣ್ಣ ಹೋಸಪೇಟ, ಪರಶುರಾಮ ತಂದೆ ತಿಪ್ಪಣ್ಣ ಹೋಸಪೇಟ, ಹನುಮಂತ ತಂದೆ ಈರಪ್ಪ ಕರಿಗುಡ್ಡ, ಇವರು ಸದರಿ ಜಗಳ ನೋಡಿ ಬಂದು ಜಗಳ ಬಿಡಿಸಿಕೊಂಡರು, ಆಗ ಈ ಮೇಲ್ಕಂಡ 7 ಜನರು ಇವತ್ತು ಉಳಿದುಕೊಂಡಿರಿ ಮಕ್ಕಳೆ ಇಲ್ಲಾ ಅಂದರೆ ನಿಮ್ಮ ಜೀವ ಸಹಿತ ಬಿಡುತ್ತಿರಲಿಲ್ಲಾ ಅಂತ ಜೀವದ ಭಯ ಹಾಕಿದು ಹೋದರು, ಸದರಿ ಜಗಳವು ನಮ್ಮ ಮನೆಯ ಮುಂದೆ ಮದ್ಯಾಹ್ನ 1-00 ಗಂಟೆಗೆ ಜರುಗಿರುತ್ತದೆ. ಅಂತ ತಿಳಿಸಿದಳು. ಆಗ ನಾನು ಮತ್ತು ಅಲ್ಲಿಗೆೆ ಬಂದಿದ್ದ ರವಿ ತಂದೆ ಮಲ್ಲಯ್ಯ ಮಾಸ್ತಿ ಇಬ್ಬರು ಕೂಡಿ ನನ್ನ ತಾಯಿ ಲಕ್ಷ್ಮೀಗೆ ಮತ್ತು ನನ್ನ ತಂಗಿ ತಾಯಮ್ಮಳಿಗೆ ಉಪಚಾರ ಕುರಿತು ಅಲ್ಲೆ ಹೊರಟಿದ್ದ ಆಟೊದಲ್ಲಿ ಕರೆದುಕೊಂಡು ಬಂದು ಶಹಾಪುರ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದೆವು, ನಮ್ಮ ತಾಯಿಗೆ ಮತ್ತು ನನ್ನ ತಂಗಿಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ನನ್ನ ತಮ್ಮ ರಂಗನಾಥ ತಂದೆ ಮಾನಶಯ್ಯ ಈತನು ರಾಯಚೂರಿನ ರೀಮ್ಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದು ಇರುತ್ತದೆ, ನಾನು ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಸಲ್ಲಿಸಿದ್ದು. ಸದರಿ ಅಜರ್ಿ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 152/2021 ಕಲಂ 143,147,148,323,324,307,354,355,504,506, ಸಂ 149 ಐ,ಪಿ,ಸಿ, ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 05-07-2021 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ