ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-07-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ.114/2022 ಕಲಂ: 323, 354, 504, 506 ಸಂಗಡ 34 ಐಪಿಸಿ : 2007 ನೇ ಸಾಲಿನಲ್ಲಿ ಫಿರ್ಯಾದಿಯು ಆರೋಪಿತಳ ಮಗನಾದ ದಿನೇಶ ಶುಕ್ಲಾ ಎಂಬಾತನೊಂದಿಗೆ ಮದುವೆಯಾಗಿದ್ದು ಅವರಿ ದಾಂಪತ್ಯ ಜೀವನದಲ್ಲಿ ಇಬ್ಬರು ಮಕ್ಕಳಿರುತ್ತಾರೆ. ಫಿರ್ಯಾದಿಯ ಗಂಡನಾದ ದಿನೇಶ ಶುಕ್ಲಾ 2020 ನೇ ಸಾಲಿನಲ್ಲಿ ತೀರಿಕೊಂಡ ನಂತರ ಫಿರ್ಯಾದಿಯು ತನ್ನ ತವರು ಮನೆಯಲ್ಲಿಯೇ ಇರುತ್ತಾಳೆ. ಫಿರ್ಯಾದಿಗೆ ತನ್ನ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುವುದು ಕಷ್ಟಕರವಾಗಿದ್ದರಿಂದ ನಿನ್ನೆ ದಿನಾಂಕ 03.07.2022 ರಂದು ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದಿಯು ತನ್ನ ಮಗಳಾದ ನಂದಿನಿ ಹಾಗೂ ಅಣ್ಣನ ಮಗನಾದ ಉಮಾಶಂಕರರೊಂದಿಗೆ ಗಂಡನ ಮನೆಗೆ ಹೋಗಿ ತನಗೆ ಮನೆಯಲ್ಲಿ ಇರಲು ಜಾಗ ಕೊಡಿ ಹಾಗೂ ಜಾಡಿಕೊಂಡು ಉಣ್ಣಲು ಹೊಲ ಕೊಡಿ ಅಂತಾ ಕೇಳಿದಕ್ಕೆ ಆರೋಪಿತರಿಬ್ಬರು ಅವಾಚ್ಯ ಶಬ್ದಳಿಂದ ಬೈದು ಆಕೆಯ ಮೈದುನನು ಪಿರ್ಯಾದಿಯ ಮೈ ಮುಟ್ಟಿ ಎಳೆದಾಡಿ ದೊಬ್ಬಿದ್ದು ಜೀವದ ಬೆದರಿಕೆ ಹಾಕಿದ್ದು ಆ ಬಗ್ಗೆ ಫಿರ್ಯಾದಿದು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂ.114/2022 ಕಲಂ: 323, 354, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 108/2020 ಕಲಂ 457, 380 ಐಪಿಸಿ : ಇಂದು ದಿನಾಂಕ:04/07/2022 ರಂದು 8:30 ಪಿ.ಎಂ. ಕ್ಕೆ ಠಾಣೆಯಲ್ಲಿದ್ದಾಗ ಫಿಯರ್ಾದಿ ಶ್ರೀ ಮಹಿಬೂಬಶಾ ತಂದೆ ಚಂದಾಶಾ ಮಕಾಂದಾರ ವಯಾ|| 33ವರ್ಷ ಜಾ|| ಮುಸ್ಲಿಂ ಉ|| ಆನ್ಲೈನ್ ಸೆಂಟರ್ ವ್ಯಾಪಾರ ಸಾ|| ಆಸಾರ ಮೊಹಲ್ಲಾ ಸುರಪುರ ತಾ|| ಸುರಪುರ ಇವರು ಠಾಣೆಗೆ ಬಂದು ಒಂದು ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ನಾನು ಸುರಪುರ ನಗರದ ಕನರ್ಾಟಕ ಬ್ಯಾಂಕ್ ಹತ್ತಿರ ಇರುವ ಉಸ್ತಾದ ವಜಾಹತ್ ಹುಸೇನ ರವರ ಕಾಂಪ್ಲೆಕ್ಸ್ನಲ್ಲಿ ಒಂದು ಮಳಿಗೆ ಬಾಡಿಗೆ ಹಿಡಿದು ಅದರಲ್ಲಿ ಐಜಾ ಆನ್ಲೈನ್ ಸೆಂಟರ್ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುತ್ತೇನೆ. ನಿನ್ನೆ ದಿನಾಂಕ:03/07/2022 ರಂದು ರಾತ್ರಿ 8 ಗಂಟೆವರೆಗೆ ಅಂಗಡಿಯಲ್ಲಿದ್ದು, ಅಂಗಡಿಯಲ್ಲಿ ಇನ್ವರ್ಟರ ಖರೀದಿ ಮಾಡಬೇಕು ಅಂತ ಡ್ರಾದಲ್ಲಿ 20000=00 ರೂ ಹಣ ಇಟ್ಟಿದ್ದೆನು. ನಂತರ ರಾತ್ರಿ ನನ್ನ ಅಂಗಡಿಯ ಶಟರ ಮುಚ್ಚಿ ಎರಡೂ ಕಡೆ ಬೀಗ ಹಾಕಿ ಮನೆಗೆ ಹೋಗಿದ್ದೆನು. ಹೀಗಿದ್ದು, ಇಂದು ಬೆಳಿಗಿನ ಜಾವ 6:30 ಗಂಟೆ ಸುಮಾರಿಗೆ ನಾನು ನನ್ನ ಅಂಗಡಿಗೆ ಬಂದಾಗ ನನ್ನ ಆನ್ಲೈನ್ ಅಂಗಡಿಯ ಶಟರ್ನ ಎರಡೂ ಬದಿಯ ಬೀಗ ಇರದೇ ಶೆಟರ್ ಸ್ವಲ್ಪ ಮೇಲಕ್ಕೆ ಎಳೆದಿತ್ತು. ಆಗ ನಾನು ಗಾಬರಿಯಾಗಿ ನಮ್ಮ ಅಣ್ಣನಾದ ಹುಸೇನಶಾ ತಂದೆ ಚಂದಾಶಾ ಮಕಾಂದಾರ ಈತನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದು ಆಗ ಆತನು ಕೂಡ ಅಂಗಡಿಗೆ ಬಂದನು. ನಂತರ ನಾವಿಬ್ಬರು ಅಂಗಡಿಯ ಶೆಟರ್ ಮೇಲೆ ಎತ್ತಿ ಒಳಗೆ ಹೋಗಿ ನೋಡಲಾಗಿ ಡ್ರಾದಲ್ಲಿ ಇಟ್ಟಿದ್ದ 20,000/- ರೂ ಹಣ ಇರಲಿಲ್ಲ. ಯಾರೋ ಕಳ್ಳರು ಯಾವುದೋ ವಸ್ತುವಿನಿಂದ ಶೆಟರ್ನ ಎರಡೂ ಕಡೆಯ ಬೀಗ ಮುರಿದು ಶೆಟರ ಎತ್ತಿ ಒಳಗಡೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ನಗದು ಹಣ ಕಳ್ಳತನ ಮಾಡಿರುತ್ತಾರೆ. ಈ ಬಗ್ಗೆ ನಾನು ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಬಂದು ಈ ದೂರು ಸಲ್ಲಿಸಿದ್ದು ಇರುತ್ತದೆ. ಕಾರಣ ನಿನ್ನೆ ದಿನಾಂಕಃ 03-07-2022 ರಂದು ರಾತ್ರಿ 11 ಗಂಟೆಯಿಂದ ಇಂದು ದಿನಾಂಕಃ 04-07-2022 ರಂದು ಮುಂಜಾನೆ 6-30 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ದುಷ್ಕಮರ್ಿಗಳು ನನ್ನ ಅಂಗಡಿಯ ಶೆಟರನ ಎರಡೂ ಬದಿಯ ಬೀಗ ಮುರಿದು ಶೆಟರ ಎತ್ತಿ ಒಳಗಡೆ ಪ್ರವೇಶ ಮಾಡಿ 20,000/- ರೂ.ಗಳು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವದರಿಂದ, ಸದರಿ ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಅಂತ ಈ ವಿನಂತಿ ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 108/2022 ಕಲಂ: 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 109/2022 ಕಲಂ 379 ಐ.ಪಿ.ಸಿ. : ಇಂದು ದಿನಾಂಕ:04-07-2022 ರಂದು 9:15 ಪಿ.ಎಂ.ಕ್ಕೆ ಠಾಣೆಯಲ್ಲ್ಲಿದ್ದಾಗ ಶ್ರೀ ಬಾಲಪ್ಪ ತಂದೆ ಹಣಮಂತ ಬಡಿಗೇರ ಸಾ:ಪೇಠಅಮ್ಮಾಪೂರ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ಅಜರ್ಿ ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ:01-07-2022 ರಂದು ಬೆಳಿಗ್ಗೆ ನಾನು, ನನ್ನ ಗೆಳೆಯನಾದ ಶರಣಪ್ಪ ತಂದೆ ಅಮರಣ್ಣ ಸಾಹುಕಾರ ಸಾ|| ವಡ್ನಳ್ಳಿ ಇವರಿಗೆ ಫೋನ್ ಮಾಡಿ ಸುರಪುರ ತಾಲೂಕಿನ ಕರನಾಳ ಗ್ರಾಮದ ನಮ್ಮ ಸಂಬಂದಿಕನಾದ ವಿರುಪಾಕ್ಷಿ ಬಡ್ರಾಯ ಈತನಿಗೆ ಆರಾಮವಿಲ್ಲದ ಕಾರಣ ಮಾತನಾಡಿಸಿ ಬರೋಣ ಮತ್ತು ವಿರುಪಾಕ್ಷಿ ಹತ್ತಿರ ನಾನು ಕೈಗಡವಾಗಿ ತೆಗೆದುಕೊಂಡ 4,15,000=00 ರೂ ಹಣ ಕೊಟ್ಟು ಬರೋಣ, ನೀನು ಯಾದಗಿರಿಯ ಕೆಇಬಿ ಹತ್ತಿರ ಇರುವ ಎಕ್ಸಿಸ್ ಬ್ಯಾಂಕ್ ಹತ್ತಿರ ಬಾ ನಾನು ಅಲ್ಲೇ ಇರುತ್ತೇನೆ ಅಂತ ಹೇಳಿದೆನು. ಆಗ ಶರಣಪ್ಪನು ಆಯಿತು ಬರುತ್ತೇನೆ ಅಂತ ತಿಳಿಸಿದ್ದನು. ನಂತರ ನಾನು ಮತ್ತು ನಮ್ಮ ಕಾರ್ ಚಾಲಕ ದೇವರಾಜ ತಂದೆ ಹಣಮಂತ ಕವಲಿ ಸಾ|| ಮಲ್ಹಾರ್ ತಾ&ಜಿ|| ಯಾದಗಿರಿ ಇಬ್ಬರು ಕೂಡಿ ನಮ್ಮ ಕಾರ್ ನಂ ಕೆಎ-33 ಎ-9222 ನೇದ್ದರಲ್ಲಿ ಕುಳಿತು ಮನೆಯಿಂದ ಕೆಇಬಿ ಹತ್ತಿರ ಇರುವ ಎಕ್ಸಿಸ್ ಬ್ಯಾಂಕ್ ಮುಂದೆ ಬಂದು ನಿಂತೆವು. ಆಗ ನನ್ನ ಗೆಳೆಯ ಶರಣಪ್ಪನು ಕೂಡ ಅಲ್ಲಿಗೆ ಬಂದನು. ನಂತರ ನಮ್ಮ ಗೆಳೆಯನಾದ ಸಂತೋಷ ಹೊಟ್ಟಿ ಸಾ|| ಯಾದಗಿರಿ ಇವರಿಗೆ ಫೋನ್ ಮಾಡಿ ನನಗೆ ಅರ್ಜಂಟಾಗಿ 5 ಲಕ್ಷ ಹಣ ಕೈಗಡ ಬೇಕಾಗಿದೆ ಎಕ್ಸಿಸ್ ಬ್ಯಾಂಕ್ ಹತ್ತಿರ ನಿಂತಿದ್ದೇನೆ ಇಲ್ಲಿಗೆ ಬಾ ಅಂತ ಹೇಳಿದಾಗ ಸಂತೋಷ ಈತನು ಹಣ ತೆಗೆದುಕೊಂಡು ನಮ್ಮಲ್ಲಿಗೆ ಬಂದು 500 ರೂ ಮುಖಬೆಲೆಯ 100 ನೋಟುಗಳ 10 ಬಂಡಲ್ಗಳ ಒಟ್ಟು 5,00,000=00 ರೂಪಾಯಿ ಹಣ ಕೊಟ್ಟನು. ಅದರಲ್ಲಿ ನಾನು 85,000=00 ರೂ, ಹಣವನ್ನು ನನ್ನ ಜೇಬಿನಲ್ಲಿ ಇಟ್ಟುಕೊಂಡು ಇನ್ನುಳಿದ 4,15,000=00 ರೂ ಹಣವನ್ನು ಒಂದು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ನಲ್ಲಿ ಹಾಕಿ ನಮ್ಮ ಕಾರಿನ ಗೇರ್ ಲಿವರ್ ಹತ್ತಿರ ಇಟ್ಟುಕೊಂಡು ನಾನು, ನನ್ನ ಗೆಳೆಯ ಶರಣಪ್ಪ ಮತ್ತು ಕಾರ್ ಚಾಲಕ ದೇವರಾಜ ಮೂವರು ಕೂಡಿ 12:15 ಪಿಎಮ್ಕ್ಕೆ ಯಾದಗಿರಿಯಿಂದ ಬಿಟ್ಟು, ಕರನಾಳ ಗ್ರಾಮಕ್ಕೆ ಹೊರಟೆವು. ನಂತರ ಸುಮಾರು 01:20 ಪಿಎಮ್ ಸುಮಾರಿಗೆ ಸುರಪುರದ ಆರ್ವಿಎನ್ ಚೌಕ್ಗೆ ಬಂದು ಹಣ್ಣು ತೆಗೆದುಕೊಳ್ಳಬೇಕು ಅಂತ ನಮ್ಮ ಕಾರನ್ನು ದೇವರಾಜ ಮೆಡಿಕಲ್ ಮುಂದುಗಡೆ ನಿಲ್ಲಿಸಿ ಕಾರ್ ಲಾಕ್ ಮಾಡಿ ಮೂವರು ಕೆಳಗೆ ಇಳಿದು ಹಣ್ಣಿನ ಅಂಗಡಿಯಲ್ಲಿ ಸೇಬು, ಮೋಸಂಬಿ ಖರೀದಿ ಮಾಡಿಕೊಂಡು ಕಾರ್ನಲ್ಲಿ ಮೂವರು ಬಂದು ಕುಳಿತೆವು. ನಂತರ 01.30 ಪಿಎಮ್ ಸುಮಾರಿಗೆ ನಾವು ಕಾರ್ ಚಾಲು ಮಾಡಿದಾಗ ನಮ್ಮ ಕಾರನ ಎಡಗಡೆ ಒಬ್ಬ ವ್ಯಕ್ತಿ ಬಂದು ನಿಮ್ಮ ಕಾರಿನ ಆಯಿಲ್ ಲೀಕೇಜ್ ಆಗುತ್ತಿದೆ ನೋಡ್ರಿ ಅಂತ ಹೇಳಿದಾಗ ನಮ್ಮ ಕಾರ್ ಚಾಲಕ ಕೆಳಗೆ ಇಳಿದು ಕಾರಿನ ಮುಂಭಾಗದ ಬಾನೆಟ್ ಮೇಲಕ್ಕೆ ಎತ್ತಿ ನೋಡುತ್ತಿದ್ದನು ಆಗ ನಾನು ಮತ್ತು ಶರಣಪ್ಪ ಇಬ್ಬರು ಕಾರಿನ ಕೆಳಗೆ ಇಳಿದು ಬಾನಟ್ ಹತ್ತಿರ ಹೋಗಿ ನೋಡಿದಾಗ ನಮ್ಮ ಕಾರಿನ ಮುಂಭಾಗದ ಜಾಲ್ರಿಯಲ್ಲಿ ಮಾತ್ರ ಆಯಿಲ್ ಸೋರುತ್ತಿತ್ತು, ಆದರೆ ಇಂಜಿನ ಹತ್ತಿರ ಯಾವುದೇ ಲೀಕೇಜ್ ಇರಲಿಲ್ಲ. ನಂತರ ನಾನು ಕಾರ್ನಲ್ಲಿ ಗೇರ್ ಲಿವರ್ ಹತ್ತಿ ಇಟ್ಟಿದ್ದ ಹಣ ನೋಡಲಾಗಿ ಇರಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಆಗ ನಾನು, ನಮ್ಮ ಗೆಳೆಯ ಶರಣಪ್ಪ ಮತ್ತು ಕಾರ್ ಚಾಲಕ ದೇವರಾಜ ಮೂವರು ಗಾಭರಿಗೊಂಡು ಅತ್ತ-ಇತ್ತ ಕಡೆ ಹುಡುಕಾಡಿದರೂ ಎಲ್ಲಿಯೂ ಯಾವುದೆ ಮಾಹಿತಿ ಸಿಗಲಿಲ್ಲ. ನಂತರ ನಮಗೆ ಏನು ತೋಚದೆ ಇರುವದರಿಂದ ಇಲ್ಲಿಯವರೆಗೆ ಹುಡುಕಾಡಿ ಮನೆಯಲ್ಲಿ ವಿಚಾರ ಮಾಡಿ ಇಂದು ಠಾಣೆಗೆ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ. ನಮ್ಮ ಕಾರ್ನ ಗೇರ್ ಲೀವರ್ ಹತ್ತಿರ ಪ್ಲಾಸ್ಟಿಕ ಕ್ಯಾರಿಬ್ಯಾಗ್ನಲ್ಲಿ ಇಟ್ಟಿದ್ದ 4,15,000=00 ರೂಪಾಯಿಗಳನ್ನು ದಿನಾಂಕ: 01/07/2022 ರಂದು 1:30 ಪಿಎಮ ಸುಮಾರಿಗೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ಕ್ರಮ ಜರುಗಿಸಿ ನನಗೆ ನನ್ನ ಹಣ ಪತ್ತೆ ಮಾಡಿ ಕೊಡಲು ವಿನಂತಿ.ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 06-07-2022 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080