ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-08-2022
ಶೋರಾಪುರ ಪೊಲೀಸ್ ಠಾಣೆ:-
ಗುನ್ನೆ ನಂ: 123/2022 ಕಲಂ 279,337, 338, 304(ಎ) ಐಪಿಸಿ: ಇಂದು ದಿನಾಂಕಃ 04-08-2022 ರಂದು 8-15 ಎ.ಎಮ್ ಕ್ಕೆ ಫಿಯರ್ಾದಿ ಶ್ರೀ ಮರೆಪ್ಪಸಾಃ ವೆಂಕಟಾಪೂರ ಸುರಪೂರಇವರುಠಾಣೆಗೆ ಹಾಜರಾಗಿದೂರು ನೀಡಿದ್ದರ ಸಾರಾಂಶವೆನೆಂದರೆ, ನಿನ್ನೆ ದಿನಾಂಕಃ 03/08/2022 ರಂದು ಸಾಯಂಕಾಲ 5-15 ಗಂಟೆಗೆ ನನ್ನ ಮಗನ ಸ್ನೇಹಿತನಾದ ಸುಗರಾಜತಂದೆ ಬಸವರಾಜ ಪಾಣಿ ಸಾ: ತಳವಾರಗೇರಾ ಇತನು ಮೋ.ಸೈಕಲ್ ನಂ. ಕೆ.ಎ 33 ವೈ 4532 ನೇದ್ದರ ಮೇಲೆ ಬಂದು ನನ್ನಕಿರಿಯ ಮಗನಾದ ಭೀಮಾಶಂಕರಇತನಿಗೆ ಸತ್ಯಂಪೇಟ ಹೋಗಿ ಬರೋಣಾಅಂತ ಹೇಳಿ ತನ್ನ ಹಿಂದುಗಡೆ ಕೂಡಿಸಿಕೊಂಡು ಹೋದನು. ನಂತರ 5-40 ಪಿ.ಎಮ್ ಸುಮಾರಿಗೆ ನಮ್ಮೂರಿನ ನರಸಪ್ಪತಂದೆ ಮಾನಪ್ಪಕರಿಗುಡ್ಡಾಇತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ, ನಾನು ಈಗ್ಗೆ 5-30 ಪಿ.ಎಮ್ ಸುಮಾರಿಗೆ ಸುರಪೂರ ಬೈಪಾಸ್ರಸ್ತೆಯಲ್ಲಿರುವಅದಿತಿ ಹೊಟೇಲ್ ಮುಂದೆ ನಿಂತಿದ್ದಾಗ ವೆಂಕಟಾಪೂರಕಡೆಯಿಂದ ತಳವಾರಗೇರಾ ಗ್ರಾಮದ ಸುಗರಾಜಇತನು ಮೋ.ಸೈಕಲ್ ಮೇಲೆ ತನ್ನ ಹಿಂದುಗಡೆ ನಿನ್ನ ಮಗನಾದ ಭೀಮಾಶಂಕರನಿಗೆ ಕೂಡಿಸಿಕೊಂಡು ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದು ಹಾಗು ಹಸನಾಪೂರಕಡೆಯಿಂದ ಮೋಟಾರ ಸೈಕಲ ನಂಬರ ಕೆ.ಎ 32 ಇ.ಸಿ 134 ನೇದ್ದರ ಸವಾರನುತನ್ನ ಹಿಂದುಗಡೆಇಬ್ಬರಿಗೆ ಕೂಡಿಸಿಕೊಂಡು ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದಿದ್ದು, ಅದಿತಿ ಹೊಟೇಲ್ ಮುಂಭಾಗದಲ್ಲಿಇಬ್ಬರೂ ಮೋಟಾರ ಸೈಕಲ ಸವಾರರು ವೇಗದಲ್ಲಿ ಪರಸ್ಪರ ಮುಖಾಮುಖಿಯಾಗಿಜೋರಾಗಿ ಡಿಕ್ಕಿಪಡಿಸಿದರಿಂದ ಎರಡು ಮೋ. ಸೈಕಲಗಳ ಮೇಲಿದ್ದ 05 ಜನರುರಸ್ತೆಯ ಮೇಲೆ ಬಿದ್ದಿದ್ದು, ಅವರಲ್ಲಿ ನಿನ್ನ ಮಗ ಭೀಮಾಶಂಕರನಿಗೆ ಭಾರಿಗಾಯಗಳಾಗಿ ಪ್ರಜ್ಞೆತಪ್ಪಿರುತ್ತದೆಅಂತ ತಿಳಿಸಿದನು. ಆಗ ಗಾಬರಿಯಾಗಿ ನಾನು ಮತ್ತು ನನ್ನ ಹಿರಿಯ ಮಗನಾದ ಶಿವಪ್ಪ ಇಬ್ಬರೂಅಪಘಾತ ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ಎರಡು ಮೋ.ಸೈಕಲಗಳು ರಸ್ತೆಯ ಮೇಲೆ ಬಿದ್ದಿದ್ದವು. ಆಗ ನನ್ನ ಮಗ ಭೀಮಾಶಂಕರನಿಗೆ ನೋಡಲಾಗಿಆತನತಲೆಯಲ್ಲಿ, ಎಡಗಣ್ಣಿಗೆ ಭಾರಿ ಒಳಪೆಟ್ಟಾಗಿ ಎರಡು ಕಿವಿಗಳು, ಮೂಗು ಹಾಗು ಬಾಯಿಯಿಂದರಕ್ತಸ್ರಾವಆಗುತ್ತಿತ್ತು. ಹಾಗು ಎಡಗಾಲಿನ ತೊಡೆಗೆರಕ್ತಗಾಯವಾಗಿತೊಡೆಯಲ್ಲಿ ಮೂಳೆ ಮುರಿದಂತಾಗಿರುವದಲ್ಲದೇ, ಮೂಗಿನ ಮೇಲೆ, ಬಲಮುಂಡಿಗೆ, ಬಲಗಡೆಟೊಂಕದ ಮೇಲೆ, ಬಲಮೊಣಕಾಲಿಗೆತರಚಿದ ರಕ್ತಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು. ಸುಗರಾಜಇತನಿಗೆ ವಿಚಾರಿಸಲಾಗಿ ಬಲಗಾಲಿನ ತೊಡೆಯಲ್ಲಿ ಒಳಪೆಟ್ಟಾಗಿರುವ ಬಗ್ಗೆ ತಿಳಿಸಿದನು. ಇನ್ನೊಂದು ಮೋ.ಸೈಕಲ್ ಮೇಲಿನ ಮೂರುಜನರಿಗೂ ಗಾಯಗಳಾಗಿ ನರಳಾಡುತ್ತಿದ್ದಾಗ ವಿಚಾರಿಸಲಾಗಿ ಮೂವರು ಸುರಪೂರತಾಲೂಕಿನಚಂದಲಾಪೂರಗ್ರಾಮದವರೆಂದು ತಿಳಿಸಿದ್ದು ಅವರ ಹೆಸರು ಮಲ್ಲಿಕಾಜರ್ುನತಂದೆ ಕಾಳಪ್ಪ, ಮಲ್ಲಿಕಾಜರ್ುನತಂದೆ ಶಿವಲಿಂಗಪ್ಪ ಪೂಜಾರಿಹಾಗು ಮೋ.ಸೈಕಲ ನಂಬರ ಕೆ.ಎ 32 ಇ.ಸಿ 134 ನೇದ್ದರ ಸವಾರನಾದ ಭೀಮಾಶಂಕರತಂದೆ ಮಾನಯ್ಯಜಾಲಹಳ್ಳಿ ಅಂತ ತಿಳಿಸಿರುತ್ತಾರೆ. ಬಳಿಕ ಸದರಿ 05 ಜನ ಗಾಯಾಳುಗಳಿಗೆ ಚಿಕಿತ್ಸೆಗಾಗಿಸುರಪೂರ ಸಕರ್ಾರಿಆಸ್ಪತ್ರೆಯಲ್ಲಿಸೇರಿಕೆ ಮಾಡಿದ್ದುಇರುತ್ತದೆ. ಸುರಪೂರಆಸ್ಪತ್ರೆಯಲ್ಲಿ ವೈದ್ಯರು ನನ್ನ ಮಗನಿಗೆ ಪ್ರಥಮೋಪಚಾರ ಮಾಡಿ ಹೆಚ್ಚಿನಚಿಕಿತ್ಸೆಗಾಗಿಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ನಾವು ನನ್ನ ಮಗ ಭೀಮಾಶಂಕರನಿಗೆ ಕಲಬುರಗಿಗೆಕರೆದುಕೊಂಡು ಹೋಗಿ ಮನೂರಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದಾಗ ನನ್ನ ಮಗನು ಚಿಕಿತ್ಸೆ ಪಡೆಯುತ್ತಚಿಕಿತ್ಸೆ ಫಲಕಾರಿಆಗದೇ ದಿನಾಂಕ: 04/08/2022 ರಂದು 3-20 ಎ.ಎಮ್ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಸುಗರಾಜ ಹಾಗು ಭೀಮಾಶಂಕರಜಾಲಹಳ್ಳಿ ಇಬ್ಬರೂತಮ್ಮತಮ್ಮ ಮೋ.ಸೈಕಲ್ಅತಿವೇಗ ಮತ್ತುಅಲಕ್ಷತನದಿಂದ ನಡೆಸಿಕೊಂಡು ಬಂದು ಪರಸ್ಪರ ಮುಖಾಮುಖಿ ಡಿಕ್ಕಿಪಡಿಸಿದರಿಂದ ಅವರಿಬ್ಬರೂಗಾಯಗೊಂಡಿರುವದಲ್ಲದೇ, ನನ್ನ ಮಗನಿಗೆ ಭಾರಿಗಾಯಗಳಾಗಿ ಮೃತಪಟ್ಟಿದ್ದು ಮತ್ತುಚಂದ್ಲಾಪೂರಗ್ರಾಮದಇನ್ನಿಬ್ಬರಿಗೆ ಸಾದಾ ಮತ್ತು ಭಾರಿಸ್ವರೂಪದ ಗಾಯಗಳಾಗಿರುವದರಿಂದ, ಸದರಿಯವರವಿರುದ್ದ ಕಾನೂನು ಪ್ರಕಾರಕ್ರಮಜರುಗಿಸಬೇಕುಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದಠಾಣೆಗುನ್ನೆ ನಂಬರ 123/2022 ಕಲಂ: 279, 337, 338, 304(ಎ) ಐ.ಪಿ.ಸಿ ಅಡಿಯಲ್ಲಿಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 118/2022, ಕಲಂ, 143,147,148, 323, 324, 504.506. ಸಂ. 149, ಐ ಪಿ ಸಿ : ಇಂದು ದಿನಾಂಕ: 04-08-2022 ರಂದು ಮಧ್ಯಾಹ್ನ 03-00 ಗಂಟೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಂ.ಎಲ್.ಸಿ ಇದೆ ಅಂತಾ ಪೊನ್ ಮೂಲಕ ತಿಳಿಸಿದ ಮೇರೆಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆ ಭೆಟಿ ನೀಡಿ ಅಲ್ಲಿ ಗಾಯಾಳುಗಳಿಗೆ ಘಟನೆ ಬಗ್ಗೆ ವಿಚಾರಿಸಿದ್ದು ಪಿರ್ಯಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 04-08-2022 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾವು ನಮ್ಮ ಹೊಲದಲ್ಲಿ ನಾಟಿ ಮಾಡಲು ಗದ್ದೆ ಒಡೆಯುತ್ತಿರುವಾಗ ಆರೋಪಿತರೆಲ್ಲರು ಸೇರಿಕೊಂಡು ಲೇ ಸುಳೆ ಮಕ್ಕಳೆ ಹೊಲದ ಮ್ಯಾರಿ ಯಾಕೆ ಹೊಡೆಯುತ್ತಿರಿ ಸುಳೆ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ಮತ್ತು ಸನಿಕೆಯಿಮದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿ ಲೇ ಸುಳೆ ಮಕ್ಕಳೆ ನಿಮ್ಮದು ಊರಲ್ಲಿ ಬಹಳ ಸೊಕ್ಕು ಆಗಿದೆ ಇನ್ನೊಂದು ಸಲ ಹೊಲದ ತಂಟೆಗೆ ಬಂದರೆ ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೇದರಿಕೆ ಹಾಕಿದ್ದ ಬಗ್ಗೆ ಪಿಯರ್ಾಧಿ.ಸಾರಂಶ ಇರುತ್ತದೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 119/2022. ಕಲಂ. 143, 147, 148, 323, 324, 504, 506 ಸಂಗಡ 149 ಐ.ಪಿ.ಸಿ. ಕಾಯ್ದೆ.: ಇಂದು ದಿನಾಂಕ :04/08/2022 ರಂದು ಸಾಯಂಕಾಲ 5-30 ಗಂಟೆಗೆ ಜಿಲ್ಲಾ ಸಕರ್ಾರಿ ಆಸ್ಪತ್ರೆ ಯಾದಗಿರಿಯಲ್ಲಿ ಗಾಯಾಳು ಎಮ್.ಎಲ್.ಸಿ.ಇದೆ ಅಂತಾ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಹೋಗಿ ಗಾಯಾಳುದಾರನ್ನು ವಿಚಾರಿಸಿಕೊಂಡು ನಂತರ ಗಾಯಾಳು ಫಿರ್ಯಾಧಿ ದೂರು ಹಾಜರು ಪಡಿಸಿದ್ದು ಸದರಿ ದೂರು ಸಾರಂಶವೆನೆಂದರೆ, ನಾನು ಶರಣಪ್ಪ ತಂದೆ ಬಸಪ್ಪ ಬಳಿಚಕ್ರ ವ||30 ವರ್ಷ ಜಾ||ಕಬ್ಬಲಿಗ ಉ||ಒಕ್ಕಲುತನ ಸಾ||ಬೆಳಗೇರಾ ತಾ||ಜಿ||ಯಾದಗಿರಿ, ಇದ್ದು ನಾನು ಮತ್ತು ನಮ್ಮ ಕುಟುಂಬದವರು ಕೂಡಿಕೊಂಡು ಹೊಲದ ಮನೆಯಲ್ಲಿ ವಾಸಮಾಡುತ್ತಿರುತ್ತೆವೆ. ಹಿಗಿದ್ದು ಇಂದು ದಿನಾಂಕ.04-08-2022 ರಂದು ಸಮಯ ಮದ್ಯಾಹ್ನ 12-00 ರಿಂದ 12-30 ಗಂಟೆಯ ಸುಮಾರಿಗೆ ನಮ್ಮ ಹೊಲ ಸವರ್ೆ ನಂ,303 ನೆದ್ದರಲ್ಲಿ ನಾನು ಮತ್ತು ನಮ್ಮ ತಮ್ಮಂದಿರಾದ ಹುಸೆನಪ್ಪ ತಂದೆ ಬಸಪ್ಪ, ರಮೇಶ ತಂದೆ ಬಸಪ್ಪ ಬಳಿಚಕ್ರ, ಹಾಗೂ ನಮ್ಮ ಹೊಲಕ್ಕೆ ಗಳೆ ಹೊಡೆಯಲು ನಮ್ಮೂರಿನ ಸಾಬಣ್ಣ ತಂದೆ ಹಣಮಂತ ಕಡ್ಡೆರ ಇವರನ್ನು ಕರೆದುಕೊಂಡು ಹೊಲ ಸಾಗುವಳಿ ಮಾಡುತ್ತಿರುವಾಗ ನಮ್ಮ ಬಾಜು ಹೊಲದವರಾದ 1) ರಾಘವೇಂದ್ರ ತಂದೆ ನರಸಪ್ಪ 2) ರವಿ ತಂದೆ ನರಸಪ್ಪ ,3)ಜಗಪ್ಪ ತಂದೆ ನರಸಪ್ಪ 4) ಜಯಶ್ರೀ ಗಂಡ ಜಗಪ್ಪ, 5)ಸಿರಸಪ್ಪ ತಂದೆ ನರಸಪ್ಪ, 6)ಭೀಮಪ್ಪ ತಂದೆ ನರಸಪ್ಪ, 7) ಖಡ್ಲಪ್ಪ ತಂದೆ ನರಸಪ್ಪ, 8)ಕನ್ಯವ್ವ ಗಂಡ ನರಸಪ್ಪ ಹಡಪದ,9) ಭಾರತಿ ಗಂಡ ನರಸಪ್ಪ ಮತ್ತು 10) ರಾಘವೇಂದ್ರ ಹೆಂಡತಿ ಇವರೇಲ್ಲರೂ ಸೇರಿಕೊಂಡು ನಮ್ಮ ಹೊಲದ ಡ್ವಾಣವನ್ನು ಕಡಿಯುತ್ತಿರುವಾಗ ನಾನು ಮತ್ತು ನಮ್ಮ ತಮ್ಮ ಹುಸೆನಪ್ಪ ಹಾಗು ರಮೇಶ ಕೂಡಿಕೊಂಡು ಹೋಗಿ ಈ ಡ್ವಾಣ ನಮ್ಮದು ನೀವು ಯಾಕೇ ಇದನ್ನು ಕಡಿಯುತ್ತಿರಿ ಅಂತಾ ಕೆಳಿದ್ದಕ್ಕೆ ರವಿ ಇತನು ಏಕಾ ಏಕಿ ಸೂಳೇ ಮಕ್ಕಳ್ಳೆ ನೀವು ಏನು ಕೇಳುತ್ತಿರಲೇ ಅಂತ ಹೇಳಿ ಅಲ್ಲೆ ಇದ್ದ ಬಡಿಗೆಯಿಂದ ನನ್ನ ಬೇನ್ನಿಗೆ ಹೊಡೆದು ಗುಪ್ತಗಾಯ ಮಾಡಿ ಲೇ ಸೂಳೇ ಮಕ್ಕಳೆ ನಿಮ್ಮದು ಬಹಳ ಆಗ್ಯಾದ ಯಾಂಗಿದ್ದರು ನಾವು ಎಲ್ಲರು ಇದಿವಿ ನಿಮಗೆ ಖಲಾಸ ಮಾಡುತ್ತೆವೆ ಅಂತ ನನನ್ನು ನೆಲಕ್ಕೆ ಹಾಕಿ ಕೈಯಿಂದ ಮೈಗೈ ಹೊಡೆದಾಗ ಆಗ ನಮ್ಮ ತಮ್ಮ ಹುಸೆನಪ್ಪ ಮತ್ತು ರಮೇಶ ಇಬ್ಬರು ನಮ್ಮ ಅಣ್ಣನಿಗೆ ಯಾಕೆ ಹೊಡೆಯುತ್ತಿರಿ ಅಂತ ಕೆಳುತ್ತಿರುವಾಗ ಅದೇ ಸಮಯಕ್ಕೆ ರಾಘವೇಂದ್ರ, ಜಗಪ್ಪ, ಸಿರಸಪ್ಪ, ಭೀಮಪ್ಪ, ಕಡ್ಲಪ್ಪ, ಇವರೆಲ್ಲರೂ ನಮಗೆ ನಿಮ್ಮವ್ವನ ಬರ್ರೆಲೇ ಇವತ್ತು ನೀಮಗೆ ಒಂದು ಗತಿ ಕಾಣಿಸುತ್ತೆವೆ ಅಂತಾ ಬೈದು ಹುಸೆನಪ್ಪ ಮತ್ತು ರಮೇಶ ಇಬ್ಬರಿಗೆ ನೆಲ್ಲಕ್ಕೆ ಹಾಕಿ ಮೈ ಮೇಲೆ ಕುಳಿತು ಕೈಯಿಂದ ಮತ್ತು ಕಲ್ಲಿನಿಂದ ಮುಖಕ್ಕೆ ಮತ್ತು ಬೆನ್ನಿಗೆ ಗುದ್ದಿ ಗುಪ್ತಗಾಯ ಮಾಡಿರುತ್ತಾರೆ. ಆಗ ನಾವು ಚಿರಾಡುವದನ್ನು ಕೇಳಿ ಹೊಲದ ಮನೆಯಲ್ಲಿರುವ ನಮ್ಮ ತಾಯಿ ಸಾಬಮ್ಮ ಮತ್ತು ನಮ್ಮ ಅಜ್ಜಿ ಹಣಮವ್ವ ಇವರು ಬಂದು ಜಗಳ ಬಿಡಿಸುತ್ತಿರುವಾಗ ರವಿ ಕೈಯಲ್ಲಿರುವ ಬಡಿಗೆ ನಮ್ಮ ಅಜ್ಜಿ ಹಣಮವ್ವನ ಎಡಗೈಗೆ ಬಡಿದು ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ನಮ್ಮ ತಾಯಿ ಸಾಬಮ್ಮಗೆ ಜಯಶ್ರೀ, ಕನ್ಯವ್ವ, ಭಾರತಿ ಮತ್ತು ರಾಘವೇಂದ್ರನ ಹೆಂಡತಿ ಇವರೆಲ್ಲರು ಕೂಡಿಕೊಂಡು ಸಾಬಮ್ಮಗೆ ರಂಡಿ, ಬೋಸಡಿ, ಚೀನಾಲಿ, ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ಜಗಳ ಬಿಡಿಸಿಕೊಳ್ಳುವಾಗ ರವಿ ಕೈಯಲ್ಲಿದ್ದ ಕಟ್ಟಿಗೆ ಬಡಿದು ಸಾಬಮ್ಮನ ಎಡಗೈಯಗೆ ಕಂದುಗಟ್ಟಿದ ಗಾಯವಾಗಿರುತ್ತದೆ. ಜಗಳವನ್ನು ನೋಡಿ ಬಾಜು ಹೊಲದವರಾದ ಆಶಪ್ಪ ತಂದೆ ಸಾಬಣ್ಣ ಕರಿನಿಂಗಪ್ಪನೊರ ಮತ್ತು ನಮ್ಮ ಹೊಲಕ್ಕೆ ಗಳೆ ಹೊಡಯಲು ಬಂದಿದ್ದ ಸಾಬಣ್ಣ ತಂದೆ ಹಣಮಂತ ಕಡ್ಡೆರ ಸಾ: ಬೆಳಗೇರಿ ಇವರು ಬಂದು ಯಾಕ ಜಗಳ ಮಾಡಿಕೊಳ್ಳುತಿರಿ ಅಂತ ಜಗಳ ಬಿಡಿಸಿದಾಗ ಅವರೆಲ್ಲರು ನಮಗೆ ನೀವು ಇವತ್ತು ಉಳುದಿರಿ ಸೂಳೇ ಇಲ್ಲ ಅಂದರೆ ನಿಮ್ಮಗೆ ಖಲಾಸ ಮಾಡುತ್ತಿದ್ದವು ಅಂತ ಜೀವ ಬೆದರಿಕೆ ಹಾಕಿದ್ದು ಜಗಳದಲ್ಲಿ ನನಗೆ ಮತ್ತು ನಮ್ಮ ತಮ್ಮಂದಿರಗೆ ಹಾಗೂ ನಮ್ಮ ಅಜ್ಜಿ ಹಣಮವ್ವ, ನಮ್ಮ ತಾಯಿ ಸಾಬಮ್ಮಗೆ ಗಾಯಗಳಾಗಿದ್ದರಿಂದ ವೈದ್ಯಕಿಯ ಉಪಚಾರ ಕುರಿತು ನಾವೇಲ್ಲರು ಸೇರಿ ಒಂದು ಖಾಸಗಿ ವಾಹನದಲ್ಲಿ ಯಾದಗಿರಿ ಜಿಲ್ಲಾ ಸಕರ್ಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಕೆಯಾಗಿರುತ್ತೆವೆ. ಕಾರಣ ನಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಈ ಮೇಲೆ ಹೇಳಲಾದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ವಿನಂತಿ.ಸದರಿ ದೂರು ಅಜರ್ಿ ಸಾರಂಶದ ಮೇಲಿಂದ ಠಾಣೆಯ ಗುನ್ನೆ ನಂ 119/2022 ಕಲಂ. 143, 147, 148, 323, 324, 504, 506, ಸಂಗಡ 149 ಐ.ಪಿ.ಸಿ. ನೇದ್ದರಲ್ಲಿ ಪ್ರಕರಣ ದಾಖಸಿಕೊಂಡು ತನಿಖೆ ಕೈಗೊಂಡೆನು.
ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 102/2022 ಕಲಂ: 504, 341, 323 ಐಪಿಸಿ: ಇಂದು ದಿನಾಂಕ:04/08/2022 ರಂದು 6-45 ಪಿಎಮ್ ಕ್ಕೆ ಶ್ರೀಮತಿ ದೇವಮ್ಮ ಗಂಡ ಮೈಲಾರಪ್ಪ ಪೂಜಾರಿ, ವ:45, ಜಾ:ಕುರುಬರ, ಉ:ಹೊಲಮನೆ ಕೆಲಸ ಸಾ:ಹಾಲಗೇರಾ ತಾ:ವಡಗೇರಾ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ನಾನು ಹೊಲಮನೆ ಕೆಲಸ ಮಾಡಿಕೊಂಡು ಗಂಡ-ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಮ್ಮೂರ ಬಾಜು ಹಾಲಗೇರಾ ಯಲ್ಲಮ್ಮ ದೇವಸ್ಥಾನಕ್ಕೆ ಹೋಗುವ ದಾರಿ ಪಕ್ಕದಲ್ಲಿ ನಮ್ಮದೊಂದು ಹೊಲ ಇರುತ್ತದೆ. ನಮ್ಮ ಹೊಲದ ಸವರ್ೆ ನಂ. 10/3 ವಿಸ್ತಿರ್ಣ ಸುಮಾರು 00 ಎಕರೆ 11 ಗುಂಟೆ ಇರುತ್ತದೆ. ಈ ಹೊಲದಲ್ಲಿ ಈಗ ನಾವು ಹತ್ತಿ ಬೆಳೆ ಹಾಕಿರುತ್ತೇವೆ. ನಮ್ಮ ಹೊಲವು ದಾರಿ ಪಕ್ಕದಲ್ಲಿ ಇದ್ದುದ್ದರಿಂದ ದನಕರುಗಳು ಬರುತ್ತವೆ ಎಂದು ನಮ್ಮ ಹೊಲಕ್ಕೆ ನಾವು ಮುಳ್ಳು ತಂತಿ ಬೇಲಿ ಹಾಕಿಕೊಂಡಿರುತ್ತೇವೆ. ಆದರು ಕೂಡಾ ದನಗಳು ಮುಳ್ಳು ತಂತಿಬೇಲಿ ಸರಿಸಿ ಹೊಲದಲ್ಲಿ ಬಂದು ಬೆಳೆ ಹಾಳು ಮಾಡುತ್ತಿದ್ದವು. ಹೀಗಿದ್ದು ದಿನಾಂಕ:02/08/2022 ರಂದು ಬೆಳಗ್ಗೆ 08:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಮೈಲಾರಪ್ಪ ಇಬ್ಬರೂ ನಮ್ಮ ಮೇಲ್ಕಂಡ ಹೊಲಕ್ಕೆ ಹೋಗಿ ಹತ್ತಿ ಬೆಳೆಯಲ್ಲಿ ಸದಿ ತೆಗೆದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡ ಇಬ್ಬರೂ ಸದಿ ತೆಗೆಯುವುದು ಬಿಟ್ಟು ಮನೆಗೆ ಊಟಕ್ಕೆ ಹೋಗುತ್ತಿದ್ದಾಗ ನಮ್ಮ ಹೊಲದ ಡೋಣದ ಮೇಲೆ ಭೀಮಪ್ಪ ತಂದೆ ಸ್ಯಾಮುವೇಲಪ್ಪ ಯಾದಗಿರಿ ಸಾ:ಹಾಲಗೇರಾ ಈತನು ದನಗಳನ್ನು ಊರಿನಿಂದ ಯಲ್ಲಮ್ಮ ದೇವಸ್ಥಾನದ ಕಡೆಗೆ ಹೊಡೆದುಕೊಂಡು ಬರುತ್ತಿರುವಾಗ ಆತನ ದನಗಳು ನಮ್ಮ ಹೊಲದೊಳಗೆ ಹೋಗಿ ಬೆಳೆಯನ್ನು ಹಾಳು ಮಾಡುತ್ತಿದ್ದವು. ಅದನ್ನು ನೋಡಿ ನನ್ನ ಗಂಡ ಮೈಲಾರಪ್ಪ ಈತನು ಭೀಮಪ್ಪ ನಿನ್ನ ದನಗಳು ಹೊಲದಲ್ಲಿಯ ಬೆಳೆ ಹಾಳು ಮಾಡುತ್ತಿವೆ ಎಂದು ಹೇಳಿದಾಗ ಭೀಮಪ್ಪ ಈತನು ಏಕಾ ಏಕಿ ನನ್ನ ಗಂಡ ಮೈಲಾರಪ್ಪನಿಗೆ ತಡೆದು ನಿಲ್ಲಿಸಿ, ಭೋಸಡಿ ಮಗನೆ ನಿನ್ನದು ಬಹಳ ಆಗಿದೆ ನನ್ನ ದನಗಳನ್ನು ನಿನ್ನ ಹೊಲದಲ್ಲಿ ಬಿಡುತ್ತೇನೆ ನೀನು ಏನು ಮಾಡುತ್ತಿ ಮಾಡ್ಕೊ ಎಂದು ನನ್ನ ಗಂಡನೊಂದಿಗೆ ಜಗಳ ತೆಗೆದು ಆತನ ಎದೆ ಮೇಲಿನ ಅಂಗಿ ಹಿಡಿದು ನೆಲಕ್ಕೆ ಬಾಗಿಸಿ, ಕೈ ಮುಷ್ಟಿ ಮಾಡಿ ಬೆನ್ನಿಗೆ ಗುದ್ದಿದನು. ನಾನು ನನ್ನ ಗಂಡನಿಗೆ ಉಳಸ್ರಪ್ಪೊ ಎಂದು ಚೀರಾಡಿದಾಗ ಅಲ್ಲಿಯೇ ದಾರಿ ಮೇಲೆ ಹೋಗುತ್ತಿದ್ದ ನಮ್ಮೂರ ತಾಯಪ್ಪ ತಂದೆ ಶಿವಬಸಪ್ಪ ಚಿಕ್ಕಬೂದುರು ಮತ್ತು ಮಾಳಪ್ಪ ತಂದೆ ದೇವಿಂದ್ರಪ್ಪ ಯಡ್ಡಳ್ಳಿ ಇಬ್ಬರು ಬಂದು ಜಗಳ ಬಿಡಿಸಿರುತ್ತಾರೆ. ಆಗ ಭೀಮಪ್ಪನು ನನ್ನ ಗಂಡನಿಗೆ ಮಗನೆ ಇನ್ನೊಂದು ಸಲ ನಾವು ದನಗಳು ಹೊಡೆದುಕೊಂಡು ಬಂದಾಗ ಎದುರು ಮಾತಾಡಿದ್ರೆ ನೆಟ್ಟಗಾಗಲ್ಲ ನೋಡು ಎಂದು ಹೇಳಿ ಹೋದನು. ಸದರಿ ಜಗಳವು ನಮ್ಮ ಹೊಲದ ಬಾಜು ಇರುವ ಯಲ್ಲಮ್ಮಾಯಿ ಗುಡಿಯ ಸಮೀಪ ದಾರಿ ಮೇಲೆ ಜರುಗಿರುತ್ತದೆ. ಕಾರಣ ದನಗಳು ನಮ್ಮ ಹೊಲದ ಹತ್ತಿ ಬೆಳೆಯಲ್ಲಿ ಬಿಡಬೇಡ ಎಂದು ಹೇಳಿದ್ದಕ್ಕೆ ನನ್ನ ಗಂಡನೊಂದಿಗೆ ಜಗಳ ತಡೆದು ನಿಲ್ಲಿಸಿ, ಅವಾಚ್ಯ ಬೈದು ಕೈಯಿಂದ ಹೊಡೆದ ಭೀಮಪ್ಪನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಈ ಬಗ್ಗೆ ನಾವು ಊರಲ್ಲಿ ಹೋಗಿ ನಮ್ಮ ಹಿರಿಯರಿಗೆ ವಿಚಾರಿಸಿಕೊಂಡು ಠಾಣೆಗೆ ಬಂದು ಫಿರ್ಯಾಧಿ ಕೊಡಲು ತಡವಾಗಿರುತ್ತದೆ. ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 102/2022 ಕಲಂ: 504, 341, 323 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.