ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-09-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 104/2022 ಕಲಂ 341, 323, 324, 504 ಸಂಗಡ 34 ಐಪಿಸಿ & ಕಲಂ 3(1)(ಆರ್)(ಎಸ್), 3(2)(ವಿ.ಎ) ಎಸ್.ಸಿ/ಎಸ್.ಟಿ ಪಿ.ಎ ಕಾಯ್ದೆ-1989: ಇಂದು ದಿನಾಂಕ 04.09.2022 ರಂದು ಬೆಳಿಗ್ಗೆ 10 ಗಂಟೆಗೆ ಬಸವಲಿಂಗಪ್ಪ ತಂದೆ ದೇವಪ್ಪ ಪರಮೇಶನೋರ, ವ|| 27 ವರ್ಷ, ಜಾ|| ಮಾದಿಗ, ಉ|| ಒಕ್ಕಲುತನ, ಸಾ|| ಬಾಡಿಯಾಳ ಗ್ರಾಮ ಇವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೆನೆಂದರೆ ದಿನಾಂಕ 01.09.2022 ರಂದು ಗುರುವಾರ ರಾತ್ರಿ 9.30 ಗಂಟೆ ಸುಮಾರಿಗೆ ನಾನು ಊಟ ಮಾಡಿಕೊಂಡು ಹೊರಗಡೆ ಬಂದು ನಮ್ಮೂರಿನವರಾದ ಮಧುಸುಧನ ತಂದೆ ವೆಂಕಟೇಶ ತಿಮ್ಮೋಜಿ, ಜಾ|| ಕಬ್ಬಲಿಗ ಉ|| ಟ್ರ್ಯಾಕ್ಟರ್ ಡ್ರೈವರ್ ಈತನಿಗೆ ನಾನು ಊಟ ಆಯ್ತೇನಪ್ಪ ಅಂತಾ ಕೇಳಿದಾಗ ಸದರಿ ಮಧುಸುಧನ ಈತನು ಯಾಕ್ಲೇ ಮಗನೇ ನನಗೆ ನೀನು ಕೇಳುತ್ತಿ ಅಂತಾ ಬೈದನು. ಆಗ ನಾನು ತಪ್ಪಾಯಿತು ಅಂತಾ ಹೋದೆನು.ನಂತರ ನಿನ್ನೆ ದಿನಾಂಕ 03.09.2022 ರಂದು ಸಾಯಂಕಾಲ 7.45 ಗಂಟೆ ಸುಮಾರಿಗೆ ನಾನು ಹೊಲಕ್ಕೆ ಹೊಡೆಯುವ ಕ್ರಿಮಿನಾಶಕ ಔಷಧಿಯನ್ನು ತೆಗೆದುಕೊಂಡು ನಮ್ಮ ಮನೆಯ ಕಡೆಗೆ ಹೋಗುವಾಗ ನಮ್ಮೂರಿನ ಕನಕದಾಸ ಕಟ್ಟೆಯ ಹತ್ತಿರ ಕಬ್ಬಲಿಗ ಜನಾಂಗದ 1. ಮಧುಸುಧನ ತಂದೆ ವೆಂಕಟೇಶ ತಿಮ್ಮೋಜಿ, 2. ದೇವೆಂದ್ರ ತಂದೆ ಆಂಜನೇಯ ತಿಮ್ಮೋಜಿ ಇಬ್ಬರೂ ಕೂಡಿಕೊಂಡು ನನ್ನಲ್ಲಿಗೆ ಬಂದವರೇ ಹಿಂದೆ ನನ್ನ ತಂಗಿ ಪಾರ್ವತಿ ಇವಳಿಗೆ ಕಬ್ಬಲಿಗ ಜನಾಂಗದ ಮಹೇಂದ್ರ ಕಾವಲಿ ಈತನು ಪ್ರೀತಿಸಿ ಮದುವೆಯಾಗಿದ್ದನ್ನು ನಾವು ಕೇಳಿದ್ದಕ್ಕೆ ಮಧುಸುಧನ ಮತ್ತು ದೇವೆಂದ್ರ ಇವರು ನನ್ನ ಮೇಲೆ ವೈಮನಸಿಟ್ಟುಕೊಂಡಿದ್ದು ಅದೇ ವೈಮನಸಿನಿಂದ ಮಧುಸುಧನ ಈತನು ಲೇ ಮಾದಿಗ ಸುಳೆ ಮಗನೆ ಬಸ್ಯಾ ನನಗೆ ಮೊನ್ನೆ ರಾತ್ರಿ ಊಟ ಆಯ್ತು ಅಂತಾ ನೀನು ನನಗೆ ಕೇಳುತ್ತಿಯಾ ನಿನಗೆ ಸೊಕ್ಕು ಬಹಳ ಬಂದಿದೆ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ತಡೆದು ನಿಲ್ಲಿಸಿ ಕೈ ಮುಷ್ಟಿ ಮಾಡಿ ತುಟಿಯ ಮೇಲೆ ಹೊಡೆದನು. ಮತ್ತು ದೇವೆಂದ್ರ ಈತನು ಈ ಮಾದಿಗಂದು ಬಹಳಾಗಿದೆ ಅಂತಾ ನೆಲಕ್ಕೆ ಕೆಡವಿ ಕಾಲಿನಿಂದ ಒದ್ದನು. ಅಷ್ಟರಲ್ಲಿ ಅಲ್ಲಿಯೇ ಇದ್ದ ಶಿವಪ್ಪ ತಂದೆ ಭೀಮಣ್ಣ ಕಾವಲಿ ಮತ್ತು ಗೋಪಾಲಪ್ಪ ತಂದೆ ಗಿರೆಪ್ಪ ತಿಮ್ಮೋಜಿ ಇವರು ನನ್ನನ್ನು ಬಿಡಿಸಿಕೊಂಡರು. ನಂತರ ನಾನು ಮತ್ತು ನನ್ನ ಸಂಬಂಧಿಕರು ಖಾಸಗಿ ವಾಹನದಲ್ಲಿ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದೆವು. ಆಸ್ಪತ್ರೆಯಲ್ಲಿ ನಾವು ಉಪಚಾರ ಪಡೆಯುವಾಗ ಸೈದಾಪೂರ ಠಾಣೆಯ ಪೊಲೀಸರು ನನ್ನಲ್ಲಿಗೆ ಬಂದು ಘಟನೆಯ ಬಗ್ಗೆ ಕೇಳಿ ದೂರು ನೀಡುವಂತೆ ಕೇಳಿದ್ದರು. ಅದಕ್ಕೆ ನಾನು ನಮ್ಮವರಿಗೆ ವಿಚಾರಿಸಿ ನಂತರ ಠಾಣೆಗೆ ಬಂದು ದೂರು ನೀಡುವದಾಗಿ ತಿಳಿಸಿದ್ದೆ. ಕಾರಣ ಜಾತಿ ನಿಂದನೆ ಮಾಡಿ ನನಗೆ ಹೊಡೆಬಡೆ ಮಾಡಿದವರಾದ 1. ಮಧುಸುಧನ ತಂದೆ ವೆಂಕಟೇಶ ತಿಮ್ಮೋಜಿ, ವ|| 22 ವರ್ಷ, ಜಾ|| ಕಬ್ಬಲಿಗ, ಉ|| ಟ್ರ್ಯಾಕ್ಟರ್ ಚಾಲಕ, 2. ದೇವೆಂದ್ರ ತಂದೆ ಆಂಜನೇಯ ತಿಮ್ಮೋಜಿ, ವ|| 26 ವರ್ಷ, ಜಾ|| ಕಬ್ಬಲಿಗ, ಉ|| ಕೂಲಿಕೆಲಸ, ಸಾ|| ಇಬ್ಬರೂ ಬಾಡಿಯಾಳ ಗ್ರಾಮ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 105/2022 ಕಲಂ 302 ಸಂಗಡ 34 ಐಪಿಸಿ: ಇಂದು ದಿನಾಂಕ 04.09.2022 ರಾತ್ರಿ 9.15 ಗಂಟೆಗೆ ಶಂಕರ ತಂದೆ ಹುಸೇನಪ್ಪ ಕಲಾಲ್ ವಯ|| 58 ವರ್ಷ, ಜಾ|| ಈಡಿಗ, ಉ|| ಕೂಲಿ ಕೆಲಸ ಸಾ|| ಯಲಸತ್ತಿ ಗ್ರಾಮ ತಾ|| ಗುರುಮಠಕಲ್ ಜಿ|| ಯಾದಗಿರ ಇವರು ಸೈದಾಪೂರ ಪೊಲೀಸ್ ಠಾಣೆಗೆ ಬಂದು ಲಿಖಿತ ದೂರು ಸಲ್ಲಿಸಿದ ದೂರು ಸಾರಾಂಶವೇನೆಂದರೆ, ನನ್ನ ದೊಡ್ಡ ಮಗ ಸಿದ್ದಾರ್ಥ ಈತನು ಇಂದು ತನಗೆ ಪರಿಚಯವಿದ್ದ ಮತ್ತು ಈ ಮೊದಲು ಬೆಂಗಳೂರನಲ್ಲಿ ಒಂದೇ ಕಡೆಗೆ ಇದ್ದ ನಾಗಪ್ಪ ಬೋಳಾರಿ ಗ್ರಾಮ ಮತ್ತು ಆತನ ಹೆಂಡತಿ ಶ್ರೀದೇವಿ, ಮತ್ತು ಶ್ರೀದೇವಿ ತಮ್ಮನಾದ ತಿರುಪತಿ ಇವರಿಗೆ ಮಾತನಾಡಿಸಿ ಬರುತ್ತೇನೆ ಅಂತಾ ಹೇಳಿ ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮೋಟಾರ್ ಸೈಕಲ್ ಮೇಲೆ ಕಡೆಚೂರಗೆ ಹೋಗಿದ್ದ. ಮಧ್ಯಾಹ್ನ 4 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸಣ್ಣಮಗ ನಮ್ಮ ಹೊಲದಲ್ಲಿದ್ದಾಗ ನನ್ನ ತಮ್ಮ ಶಂಕರಬಾಬು ಈತನು ನನ್ನ ಸಣ್ಣಮಗ ವೆಂಕಟೇಶನ ಮೊಬೈಲ್ ಫೋನ್ಗೆ ಕರೆಮಾಡಿ ನನ್ನ ದೊಡ್ಡ ಮಗ ಸಿದ್ದಾರ್ಥ ಈತನಿಗೆ ಕಡೇಚೂರ ಕೆ.ಐ.ಎ.ಡಿ.ಬಿ ಏರಿಯಾದಲ್ಲಿ ರಸ್ತೆಯ ಪಕ್ಕಕ್ಕೆ ಕೊಲೆ ಮಾಡಿ ಹಾಕಿದ್ದಾರೆ ಅಂತಾ ತನಗೆ ನಮ್ಮೂರಿನ ಜನಾರ್ಧನ ತಂದೆ ಮಹಾದೇವಪ್ಪ ಜೋಗೇರ ಈತನು ತಿಳಿಸಿದ ವಿಷಯ ನನ್ನ ತಮ್ಮ ನನಗೆ ಮತ್ತು ನನ್ನ ಸಣ್ಣ ಮಗನಿಗೆ ಫೋನ್ನಲ್ಲಿ ತಿಳಿಸಿದ್ದ. ಕೂಡಲೇ ನಾವು ತಂದೆ ಮಕ್ಕಳು ಹೊಲದಿಂದ ಮನೆಗೆ ಬಂದು ನಮ್ಮೂರಿನ ನನಗೆ ಬೇಕಾದವರಿಗೆ ಸಂಗಡ ಕರೆದುಕೊಂಡು ನನ್ನ ಮಗನ ಮೃತದೇಹವಿದ್ದ ಸ್ಥಳಕ್ಕೆ ಹೋಗಿ ನನ್ನ ಮಗನ ಮೃತದೇಹ ನೋಡಿದ್ದೇನೆ. ನನ್ನ ಮಗನ ಹಣೆಗೆ, ತಲೆಗೆ ಭಾರಿ ರಕ್ತಗಾಯಗಳಾಗಿ ಮೃತಪಟ್ಟಿದ್ದಾನೆ. ನನ್ನ ಮಗ ಸಿದ್ದಾರ್ಥ ಈತನು ಕಡೇಚೂರದಿಂದ ಶಹಾಪೂರ ತಾಲೂಕಿನ ಬೊಳಾರಿ ಗ್ರಾಮದ ನಾಗಪ್ಪ ಕಲಾಲ್ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದ ಶ್ರೀದೇವಿ ಇವಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ ಅಂತಾ ಅನುಮಾನಪಟ್ಟು ನನ್ನ ಮಗನಿಗೆ ಹೇಗಾದರೂ ಮಾಡಿ ಕೊಲೆ ಮಾಡಬೇಕೆಂಬ ಉದ್ದೇಶದಿಂದ ನಾಗಪ್ಪ, ತಿರುಪತಿ, ಶ್ರೀದೇವಿ ಮತ್ತು ಮಹಾದೇವಮ್ಮ ಇವರು ಇಂದು ನನ್ನ ಮಗನಿಗೆ ಕಡೇಚೂರಗೆ ಕರೆಯಿಸಿಕೊಂಡು ಇಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಕಡೇಚೂರ ಗ್ರಾಮ ಸೀಮಾಂತರದಲ್ಲಿ ಕೊಲೆ ಮಾಡಿ ಮೃತದೇಹ ಶೆಟ್ಟಿಹಳ್ಳಿ-ಕಡೇಚೂರ ಗೇಟ್ ಮಧ್ಯ ಇರುವ ರಸ್ತೆ ಅಂಚಿಗೆ ನನ್ನ ಮಗನ ಮೃತದೇಹ ಬಿಸಾಡಿರುತ್ತಾರೆ. ಕಾರಣ ನನ್ನ ಮಗ ಸಿದ್ದಾರ್ಥ ತಂದೆ ಶಂಕರ ಕಲಾಲ್, ವ|| 28 ವರ್ಷ, ಉ|| ಕೂಲಿಕೆಲಸ ಈತನ ಕೊಲೆಗೆ ಕಾರಣರಾದ 1. ತಿರುಪತಿ ತಂದೆ ಚಿನ್ನಯ್ಯ ಕಲಾಲ್ ವಯ|| 26 ವರ್ಷ, ಜಾ|| ಈಡಿಗ ಸಾ|| ಕಡೇಚೂರ 2. ನಾಗಪ್ಪ ತಂದೆ ಬಸಪ್ಪ ಕಲಾಲ್ ವಯ|| 35 ವರ್ಷ, ಜಾ|| ಈಡಿಗ ಸಾ|| ಬೋಳಾರಿ ತಾ|| ಶಹಾಪೂರ ಹಾ||ವ|| ಕಡೇಚೂರ 3. ಶ್ರೀದೇವಿ ಗಂಡ ನಾಗಪ್ಪ ಕಲಾಲ್ ವಯ|| 30 ವರ್ಷ, ಜಾ|| ಈಡಿಗ, ಸಾ|| ಬೋಳಾರಿ ತಾ|| ಶಹಾಪೂರ ಹಾ||ವ|| ಕಡೇಚೂರ 4. ಮಹಾದೇವಮ್ಮ ಗಂಡ ಚಿನ್ನಯ್ಯ ಕಲಾಲ್ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಕೋರಿದೆ.

ಇತ್ತೀಚಿನ ನವೀಕರಣ​ : 05-09-2022 11:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080