ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-10-2021

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 152/2021 ಕಲಂ. 323,324,307,326,504, 506 ಸಂಗಡ 34 ಐಪಿಸಿ : ಇಂದು ದಿನಾಂಕಃ 04/10/2021 ರಂದು ಬೆಳಿಗ್ಗೆ 09-15 ಗಂಟೆ ಸುಮಾರಿಗೆ ಠಾಣೆಯಲ್ಲಿದ್ದಾಗ ಸರಕಾರಿ ಆಸ್ಪತ್ರೆ ಸುರಪೂರದಿಂದ ಎಮ್ಎಲ್ಸಿ ಇದೆ ಅಂತಾ ಪೋನ ಮೂಲಕ ಮಾಹಿತಿ ನಿಡಿದ ಮೇರೆಗೆ ಬೆಳಿಗ್ಗೆ 09-30 ಗಂಟೆಗೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳುದಾರನಾದ ಶ್ರೀ ಮಾನಪ್ಪ ತಂದೆ ಬೀಮಣ್ಣ ಚೆಳ್ಳಿಗಿಡ ಸಾ:ಆಶ್ರಯ ಕಾಲೋನಿ ಸುರಪೂರ ಈತನ ಹೇಳಿಕೆ ಪಡೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 11 ಗಂಟೆಗೆ ಬಂದಿದ್ದು ಪಿಯರ್ಾದಿ ಸಾರಾಂಶವೆನೆಂದರೆ ಈಗ ಸುಮಾರು ಮೂರು ವರ್ಷಗಳ ಹಿಂದೆ ವೆಂಕಟಾಪೂರ ಗ್ರಾಮದ ಅಂಬಣ್ಣ ತಂದೆ ಹಣಮಂತ ಚೌಡೇಶ್ವರಾಳ ಈತನು ನಮ್ಮ ಮನೆಗೆ ಬಂದು ಅಣ್ಣಾ ನಮಗೆ ತುಂಬಾ ತೊಂದರೆ ಇದೆ 40,000/- ರೂಗಳ ಹಣ ಕೊಡು ನೀನಗೆ ಎರಡು-ಮೂರು ತಿಂಗಳಲ್ಲಿ ಹಣ ಹಿಂದುರುಗಿಸುತ್ತೆನೆ ಅಂತಾ ಕೇಳಿಕೊಂಡಾಗ ನಮ್ಮ ಅಣ್ಣನಾದ ವೆಂಕಟೇಶನು ಅಂಬಣ್ಣ ಈತನಿಗೆ 40,000=00 ರೂ ಹಣವನ್ನು ಕೈಗಡವವಾಗಿ ಕೊಟ್ಟಿದ್ದನು. ಹಣ ಕೊಟ್ಟ ಮೂರನಾಲ್ಕು ತಿಂಗಳ ನಂತರ ನಮ್ಮ ಅಣ್ಣ ವೆಂಕಟೇಶನು ಅಂಬಣ್ಣನಿಗೆ ಹಣ ಇನ್ನು ಕೊಡಲಿಲ್ಲ ಅಂತಾ ಕೇಳಿದಾಗ ಅವನು ಇನ್ನು ಎರಡು ಮೂರು ತಿಂಗಳು ತಾಳು ಅಣ್ಣಾ ಅಂತಾ ಹಣ ಕೊಡದೆ ಮುಂದಕ್ಕೆ ಹಾಕುತ್ತಾ ಬಂದಿದ್ದನು. ಹೀಗಿರುವಾಗ ನಿನ್ನೆ ದಿನಾಂಕ:03-10-2021 ರಂದು ಸಾಯಂಕಾಲ 6 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣ ವೆಂಕಟೇಶ ಇಬ್ಬರು ಸುರಪೂರ ಮಾಕರ್ೆಟ ಹತ್ತಿರ ಇರುವಾಗ ಮಾಕರ್ೆಟಗೆ ಬಂದಿದ್ದ ಅಂಬಣ್ಣನು ನಾಳೆ ನಮ್ಮ ಬನ್ನಿರಿ ಅಣ್ಣ ನಿಮಗೆ ಹಣ ಕೊಡುತ್ತೆನೆ ಅಂತಾ ಹೇಳಿದ್ದನು. ಅದರಂತೆ ಇಂದು ದಿನಾಂಕ: 04/10/2021 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ನಾನು ನಮ್ಮ ಅಣ್ಣನಾದ ವೆಂಕಟೇಶ ಇಬ್ಬರು ಹಣ ಪಡೆದುಕೊಂಡು ಬರಲು ವೆಂಕಟಾಪೂರದಲ್ಲಿರುವ ಅಂಬಣ್ಣ ಈತನ ಮನೆಗೆ ಹೋಗಿ ಮನೆಯ ಮುಂದೆ ಇದ್ದ 1) ಅಂಬಣ್ಣ ತಂದೆ ಹಣಮಂತ ಚೌಡೇಶ್ವರಹಾಳ ಅವನ ಮಕ್ಕಳಾದ 2) ರಂಗಪ್ಪ ತಂದೆ ಅಂಬಣ್ಣ ಚೌಡೇಶ್ವರಾಳ 2) ಬಸಪ್ಪ ತಂದೆ ಅಂಬಣ್ಣ ಚೌಡೇಶ್ವರಾಳ 4) ಯಂಕಪ್ಪ ತಂದೆ ಅಂಬಣ್ಣ ಚೌಡೇಶ್ವರಾಳ ಇವರಿಗೆ ಹಣ ಕೊಡು ಅಂಬಣ್ಣ ಅಂತಾ ಕೇಳಿದ ಕೂಡಲೆ ಅವರೆಲ್ಲರೂ ಏನೋ ಸುಳೇ ಮಕ್ಕಳೇ ನಮ್ಮ ಮನೆತನಕ ಹಣ ಕೇಳಲು ಬಂದಿರಿ ರಂಡಿ ಮಕ್ಕಳೆ ನಮ್ಮೊಂದಿಗೆ ತಕರಾರು ಮಾಡಿದರೆ ನಿಮ್ಮ ಮೇಲೆ ಅಟ್ರಾಸಿಟಿ ಕೇಸ ಆಗುತ್ತದೆ ಅನ್ನುವದು ನಿಮಗೆ ಗೊತ್ತಿಲ್ಲವೆನು. ನಾವು ಹಣ ಕೊಟ್ಟಾಗ ನೀವು ತಗೆದುಕೊಳ್ಳಬೇಕು ಇಲ್ಲ ಅಂದ್ರ ನಿಮ್ಮ ಮೇಲೆ ಅಟ್ರಾಸಿಟಿ ಕೇಸ ಮಾಡಿ ನಿಮಗೆ ಒಳಗೆ ಹಾಕಿಸುತ್ತೆವೆ. ಅಂತಾ ಅವಾಚ್ಯ ಬೈಯುತ್ತಿರುವಾಗ ನಾವು ಯಾಕೇ ಅಂಬಣ್ಣ ನಾಳೆ ಹಣ ಕೊಡುತ್ತೆನೆ ಬಾ ಅಂತಾ ಹೇಳಿ ಹೀಗೆಗೆ ಬೈಯುತ್ತಿರಿ ಅಂತಾ ಅಂದಿದ್ದಕ್ಕೆ ಅವರಲ್ಲಿಯ ರಂಗಪ್ಪ ಈತನು ತನ್ನ ಮನೆಯಲ್ಲಿದ್ದ ಒಂದು ರಾಡು ತಂದವನೆ ಈ ಸುಳೇ ಇವತ್ತು ಖಲಾಸ ಮಾಡೇ ಬೀಡೋಣ ಅಂತಾ ಅಂದವನೆ ಕೊಲೇ ಮಾಡುವ ಉದ್ದೇಶದಿಂದ ರಾಡಿನಿಂದ ಅಣ್ಣ ವೆಂಕಟೇಶನ ತಲೆಗೆ ಹೊಡೆದು ಭಾರಿ ರಕ್ತಗಾಯ ಮಾಡಿದಾಗ ಅಣ್ಣ ವೆಂಕಟೇಶ ಈತನು ಸತ್ತೆನೆಪ್ಪೋ ಅಂತಾ ತಲೆಗೆ ಕೈ ಹಿಡಿದು ಕೆಳಗೆ ಬಿದ್ದಾಗ ಬಿಡಿಸಲು ಹೋದ ನನಗೆ ಬಸಪ್ಪನು ಒಂದು ಬಚರ್ಿಯಿಂದ ಎಡಗಣ್ಣಿಗೆ ಚುಚ್ಚಿ ರಕ್ತಗಾಯ ಮಾಡಿದನು. ಅಂಬಣ್ಣ ಈತನು ಅದೆ ರಾಡಿನಿಂದ ನನ್ನ ಬಲಗೈ ರಟ್ಟೆಗೆ ಜೋರಾಗಿ ಹೊಡೆದಾಗ ನನ್ನ ಕೈ ಮೂಳೆ ಮುರಿದಂತಾಗಿ ನಾನು ಕೂಡಾ ಸತ್ತೆನೆಪ್ಪೋ ಅಂತಾ ಕೆಳಗೆ ಬಿದ್ದು ಹೊರಳಾಡುತ್ತಿರುವಾಗ ಯಂಕಪ್ಪ ಈತನು ಒಂದು ಬಡಿಗೆಯಿಂದ ಕೇಳಗೆ ಬಿದ್ದ ನನ್ನ ಮುಖಕ್ಕೆ ಹೊಡೆದು ರಕ್ತಗಾಯ ಮಾಡಿ ನಾಲ್ಕು ಜನರು ಕೂಡಿ ರಾಡು, ಬಡಿಗೆಯಿಂದ ಹೊಡೆ ಬಡೆ ಮಾಡುತ್ತಿರುವಾಗ ಅಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಶಿವಪುತ್ರಪ್ಪ ತಂದೆ ಯಂಕಪ್ಪ ದಾಸರ, ಜೆಟ್ಟೆಪ್ಪ ತಂದೆ ನಾಗಪ್ಪ ಚೆಳ್ಳಿಗಿಡ, ರಾಮು ತಂದೆ ಹುಲಗಪ್ಪ ಓಕಳಿ, ನಾಗರಾಜ ತಂದೆ ಮಲ್ಲಪ್ಪ ಓಕಳಿ ಇವರೆಲ್ಲರೂ ಬಂದು ಜಗಳವನ್ನು ನೋಡಿ ಬಿಡಿಸಿದರು. ಆಗ ರಾಮು, ನಾಗರಾಜ ಅವರಿಗೆ ನಾಲ್ವರೂ ಏ ಮಾದಿಗ ಸುಳೇ ಮಕ್ಕಳೆ ನೀವು ಅವರ ಕಡೆಯಾಗಿ ಜಗಳ ಬಿಡಿಸಲು ಬಂದಿದ್ದಿರಾ ನಿಮಗೂ ಸಹೀತ ಜೀವ ತಗೆಯದೆ ಬಿಡುವದಿಲ್ಲ ಅಂತಾ ದಮಕಿ ಹಾಕಿದರು. ಗಾಯಗೊಂಡ ನನಗೂ ನನ್ನ ಅಣ್ಣ ವೆಂಕಟೇಶನನ್ನು ಶಿವಪುತ್ರಪ್ಪ , ಜೆಟ್ಟೆಪ್ಪ, ರಾಮು, ನಾಗರಾಜ ಇವರು ನಮ್ಮನ್ನು ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆ ಸುರಪೂರಕ್ಕೆ ತಂದು ಸೇರಿಕೆ ಮಾಡಿರುತ್ತಾರೆ. ನನಗೂ ನನ್ನ ಅಣ್ಣ ವೆಂಕಟೇಶ ಇಬ್ಬರಿಗೂ ಕೊಲೆ ಮಾಡುವ ಉದ್ದೇಶದಿಂದ ರಾಡುಗಳು ಹಾಗೂ ಬಡಿಗೆಯಿಂದ ಹೊಡೆದು ಭಾರಿಗಾಯಗೊಳಿಸಿದ ಮೇಲೆ ಹೇಳಿದ ನಾಲ್ಕು ಜನರ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ರಕ್ಷಣೆ ಒದಗಿಸಲು ವಿನಂತಿ.

 


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 153/2021 ಕಲಂ: 323, 354, 307, 302, 109 ಸಂಗಡ 149 ಐ.ಪಿ.ಸಿ : ಇಂದು ದಿನಾಂಕಃ 04-10-2021 ರಂದು 12-15 ಪಿ.ಎಮ್ ಕ್ಕೆ ಶ್ರೀ ಹಣಮಂತ ತಂದೆ ಬಲುವಪ್ಪ ಸಾಕ್ರಿ ಸಾಃ ಚೌಡೇಶ್ವರಿಹಾಳ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ: 04/10/2021 ರಂದು ಬೆಳಿಗ್ಗೆ 2-00 ಗಂಟೆಗೆ ನನ್ನ ಚಿಕ್ಕಮ್ಮಳಾದ ಶ್ರೀಮತಿ ಪಾಲಮ್ಮ ಗಂಡ ಮರೆಪ್ಪ ಸಾಕ್ರಿ ಇವಳು ತಮ್ಮ ಮನೆಯಲ್ಲಿ ಮಲಗಿದ್ದಾಗ ನಮ್ಮ ಊರಿನವನೆಯಾದ ಗಂಗಪ್ಪ ತಂದೆ ಬಸಪ್ಪ ಅಳ್ಳಳ್ಳಿ ಜಾತಿ: ಬೇಡರು ಸಾಃ ಚೌಡೇಶ್ವರಿಹಾಳ ಇವನು ನನ್ನ ಚಿಕ್ಕಮ್ಮಳಿಗೆ ಅತ್ಯಾಚಾರ ಮಾಡಲು ಬಂದಿದ್ದನು. ಅವನನ್ನು ನೋಡಿ ನನ್ನ ಚಿಕ್ಕಮ್ಮ ತಿರಸ್ಕಾರ ಮಾಡಿ ಅವನನ್ನು ನೂಕಿದ್ದಾಳೆ. ಅವನು ಅಲ್ಲೆ ಇದ್ದ ತನ್ನ ಫ್ಯಾಶನ್ ಪ್ರೋ ಗಾಡಿಯಿಂದ ಪೆಟ್ರೋಲ್ ತೆಗೆದು ಅವಳ ಮೇಲೆ ಹಾಕಿ ಸುಟ್ಟಿದ್ದಾನೆ. ಅವಳನ್ನು ಸುಟ್ಟು ಮನೆ ಬಾಗಿಲ ಚಿಲಕ ಹಾಕಿ ಹೋಗಿದ್ದಾನೆ. ಅಲ್ಲೆ ಪಕ್ಕದಲ್ಲಿ ಮನೆಯಲ್ಲಿದ್ದ ಶ್ರೀಮತಿ ರೇಣುಕಮ್ಮ ಗಂಡ ಶಿವಪ್ಪ ಅವಳ ಚಿರಾಟ ಬೆಂಕಿ ಕಂಡು ಮನೆಯ ಬಾಗಿಲು ಚಿಲಕವನ್ನು ತೆಗೆದು ನೋಡಿದಾಗ ಬೆಂಕಿಯಲ್ಲಿ ಬೆಂದ ಪಾಲಮ್ಮ ಚಿರಾಡುವುದು, ವದರಾಡುವುದು ನೋಡಿ ಅಲ್ಲೇ ಇದ್ದ ಬಿಂದಿಗೆ ನೀರನ್ನು ಅವಳ ಮೇಲೆ ಹಾಕಿದ್ದಾಳೆ. ಅವಳಿಗೆ ಇವಳ ಚಿರಾಟ ಕಂಡು ಅಕ್ಕ ಪಕ್ಕದ ಎಲ್ಲಾ ಜನರನ್ನು ಕರೆಸಿದ್ದಾಳೆ. ಅವರೆಲ್ಲರೂ ತಮ್ಮ ತಿಳಿದ ಮಟ್ಟಿಗೆ ಅವಳ ಮೇಲೆ ಕೌದಿ ತೊಯಿಸಿ ಹಾಕಿದ್ದಾರೆ. ಅವಳನ್ನು ವಿಚಾರ ಮಾಡಿದಾಗ ಏನಾಯಿತು ಯಾರು ನಿನಗೆ ಬೆಂಕಿ ಹಚ್ಚಿದರು ಎಂದು ಕೇಳಿದಾಗ ಆಗ ಅವಳು ಗಂಗಪ್ಪ ಬಂದು ನನ್ನನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದನು. ಆಗ ನಾನು ಅವನನ್ನು ತಿರಸ್ಕಾರ ಮಾಡಿರುವುದರಿಂದ ಅವನು ಸಿಟ್ಟಿನಿಂದ ನನಗೆ ಹೊಡಿಬಡಿ ಮಾಡಿ ಪೆಟ್ರೋಲ್ ತಂದು ನನ್ನ ಮೇಲೆ ಹಾಕಿ ಸುಟ್ಟು ಹೋಗಿದ್ದಾನೆ ಎಂದು ಹೇಳಿದಳು. ಇದರಿಂದ ನಾವುಗಳು ಅಂಬುಲೇನ್ಸಿಗೆ ಫೋನ್ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇದರ ಬಗ್ಗೆ ಈಗಾಗಲೇ ಗಂಗಪ್ಪ ಇವನು ನಮ್ಮ ಮನೆಗೆ ಬರುವುದು ಹೊಗುವುದು ಮಾಡುತ್ತಿದ್ದನು. ನಮ್ಮ ಚಿಕ್ಕಮ್ಮ ಮೇಲೆ ಕೆಟ್ಟ ದೃಷ್ಟಿ ಸಹ ಇಟ್ಟಿದ್ದನು. ಕೆಡಸಲು ಸಹ ಪ್ರಯತ್ನ ಮಾಡುತ್ತಿದ್ದನು. ಆಗ ನಮ್ಮೂರಿನ ಹಿರಿಯರು ಬುದ್ದಿ ಮಾತಿನಲ್ಲಿ ತಿಳಿ ಹೇಳಿದ್ದಾರೆ. ಆದರೂ ಸಹ ಇವನು ತನ್ನ ಕೆಟ್ಟ ಚಾಳಿಯಿಂದ ನನ್ನ ಚಿಕ್ಕಮ್ಮಳನ್ನು ಕೆಡಸಲು ಪ್ರಯತ್ನ ಮಾಡಿ ಸಂಪೂರ್ಣ ಸುಟ್ಟು ಹಾಕಿರುವುದರಿಂದ ಇವನಿಗೆ ಸಹಾಯ ಮಾಡಿದ 1) ತಿರುಪತಿ ತಂದೆ ಮರೆಪ್ಪ ಕರಿಗುಡ್ಡ 2) ಬಸ್ಸಪ್ಪ ಅಳ್ಳೊಳ್ಳಿ 3) ಬುದೆಪ್ಪ ತಂದೆ ಮರೆಪ್ಪ ಕರಿಗುಡ್ಡ 4) ರಮೇಶ ತಂದೆ ಯಂಕೋಬ ಕರಿಗುಡ್ಡ 5) ಗೋವಿಂದ ತಂದೆ ಮರೆಪ್ಪ ಕರಿಗುಡ್ಡ 6) ಬಸವರಾಜ ತಂದೆ ಮರೆಪ್ಪ ಕರಿಗುಡ್ಡ 7) ರಾಮಪ್ಪ ತಂದೆ ಯಂಕಪ್ಪ 8) ಭೀಮಣ್ಣ ತಂದೆ ಗೋಪಯ್ಯ 9) ಗೋಪಯ್ಯ ತಂದೆ ಮರೆಪ್ಪ ಇವರೆಲ್ಲರೂ ಜಾತಿ: ಬೇಡರು ಸಾಃ ಚೌಡೇಶ್ವರಿಹಾಳ ಇವರುಗಳ ಮೇಲೆ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 153/2021 ಕಲಂ: 323, 354, 307, 109 ಸಂಗಡ 149 ಐ.ಪಿ.ಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಸುಟ್ಟ ಗಾಯಗಳಾಗಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸಕರ್ಾರಿ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಪಾಲಮ್ಮ ಗಂಡ ಮರೆಪ್ಪ ಸಾಕ್ರಿ ಸಾಃ ಚೌಡೇಶ್ವರಿಹಾಳ ಇವಳು ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕಃ 04/10/2021 ರಂದು 5-00 ಪಿ.ಎಮ್ ಕ್ಕೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಬಗ್ಗೆ 6-30 ಪಿ.ಎಮ್ ಕ್ಕೆ ಠಾಣೆಗೆ ಡೆತ್ ಎಮ್.ಎಲ್.ಸಿ ವಸೂಲಾಗಿದ್ದರಿಂದ ಸದರಿ ಪ್ರಕರಣದಲ್ಲಿ ಕಲಂ. 302 ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ ಅಂತಾ ಮಾನ್ಯರವರಲ್ಲಿ ವಿನಂತಿ.

 

ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ:154/2021 ಕಲಂ- ಕಲಂ.143, 147, 148 323, 354, 504, 506 ಸಂಗಡ 149 ಐಪಿಸಿ : ಇಂದು ದಿನಾಂಕಃ 04/10/2021 ರಂದು 1:30 ಪಿ.ಎಮ್ ಕ್ಕೆ ಕು|| ಮರೆಪ್ಪ ತಂದೆ ಶಂಕ್ರೆಪ್ಪ ತಳವಾರ ವ|| 19 ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ಹಾಲಗೇರಾ ತಾ|| ಸುರಪುರ ಈತನು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ನಮ್ಮ ತಂದೆ ತಾಯಿಗೆ ನಾನು ಒಬ್ಬ ಗಂಡು ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳು ಇರುತ್ತೇವೆ. ನನ್ನ ತಂಗಿಯಾದ ಚನ್ನವ್ವ ಈಕಗೆ ನಮ್ಮ ಜನಾಂಗದ ನಮ್ಮ ಅಣ್ಣತಮ್ಮಕಿಯಾದ ಶರಣಪ್ಪ ತಂದೆ ಮರೆಪ್ಪ ಹೆಮ್ಮಡಗಿ ಇತನು ಮದುವೆ ಆಗುತ್ತೆನೆ ಅಂತಾ ಊರಲ್ಲಿ ಹೇಳುತ್ತಾ ತಿರಗಾಡುತ್ತಿದ್ದನು. ಹಿಗಿದ್ದು ದಿನಾಂಕ:22/09/2021 ರಂದು ಮದ್ಯಾಹ್ನ 2:00 ಗಂಟೆಗೆ ನಾನು ಮತ್ತು ನನ್ನ ತಾಯಿ ಮಾಳವ್ವ, ತಾತನಾದ ತಿಮ್ಮಣ್ಣ ತಂದೆ ಸಿದ್ದಪ್ಪ ತಳವರ ಎಲ್ಲರು ಮನೆಯ ಮುಂದೆ ಕಟ್ಟೆಯ ಮೇಲೆ ಮಾತನಾಡುತ್ತಾ ಕುಳಿತಾಗ ನಮ್ಮ ಜನಾಂಗದವರಾದ 1) ಬಸಪ್ಪ ತಂದೆ ಮರೆಪ್ಪ ಹೇಮ್ಮಡಗಿ, 2) ರಾಮಪ್ಪ ತಂದೆ ಮರೆಪ್ಪ ಹೇಮ್ಮಡಗಿ, 3) ಮಲ್ಲಪ್ಪ ತಂದೆ ಮರೆಪ್ಪ ಹೇಮ್ಮಡಗಿ, 4) ಭೀಮಪ್ಪ ತಂದೆ ಮರೆಪ್ಪ ಹೇಮ್ಮಡಗಿ, 5) ಮಲ್ಲಮ್ಮ ಗಂಡ ಮೆರೆಪ್ಪ ಹೇಮ್ಮಡಗಿ, 6) ಚನ್ನಮ್ಮ ಗಂಡ ಬಸಪ್ಪ ಹೇಮ್ಮಡಗಿ ಎಲ್ಲರು ಕೂಡಿ ನಮ್ಮ ಮನೆಯ ಮುಂದೆ ಬಂದು ನನ್ನ ತಾಯಿಗೆ ಬಸಪ್ಪ ಹೇಮ್ಮಡಗಿ ಇತನು ನಿನ್ನ ಮಗಳಾದ ಚನ್ನವ್ವ ಇಕೆಗೆ ನನ್ನ ತಮ್ಮ ಶರಣಪ್ಪನಿಗೆ ಕೊಟ್ಟು ಮದುವೆ ಮಾಡಿಕೊಡು ಅಂತಾ ಕೇಳುತ್ತಿದ್ದಾಗ ನನ್ನ ತಾಯಿ ಮಾಳವ್ವ ಇವಳು ಬರಲ್ಲಪ್ಪ ನಿನ್ನ ತಮ್ಮ ಶರಣಪ್ಪ ಮತ್ತು ನನ್ನ ಮಗಳು ಅಣ್ಣ ತಂಗಿಯಾಗತಾರ ಅಂತಾ ಅಂದಾಗ, ಬಸಪ್ಪ ಇತನು ಅದೇನು ಗೊತ್ತಿಲ್ಲ ನಿನ್ನ ಮಗಳಿಗೆ ಕೊಡಬೇಕಂದರ ಕೊಡಬೇಕು ಇಲ್ಲಂದರ ನಿಮ್ಮನ ಖಲಾಸ ಮಾಡಿ ಚನ್ನವ್ವಳಿಗೆ ಕರೆದುಕೊಂಡು ಹೊಗತ್ತಿವಿ ಅಂತಾ ಅಂದಾಗ, ನನ್ನ ತಾಯಿ ಕೊಡುವುದಿಲ್ಲ ಏನು ಮಾಡಕೊತ್ತಿ ಮಾಡಕೊ ಅಂತಾ ಅಂದಾಗ, ಬಸಪ್ಪ ಹೇಮ್ಮಡಗಿ, ರಾಮಪ್ಪ ಹೇಮ್ಮಡಗಿ, ಮಲ್ಲಪ್ಪ ಹೇಮ್ಮಡಗಿ ಮೂರು ಜನರು ಕೂಡಿ ನನ್ನ ತಾಯಿಗೆ ಕೈಯಿಂದ ಎದೆಗೆ ಬೆನ್ನಿಗೆ ಹೊಟ್ಟೆಗೆ ಹೊಡೆದು, ರಾಮಪ್ಪ ಇತನು ಎದೆಯ ಮೇಲಿನ ಸೀರೆ ಸೇರಗ ಹಿಡಿದು ಎಳೆದಾಡಿ ಅವಮಾನ ಮಾಡುತ್ತಿದ್ದಾಗ, ನಾನು ಬಿಡಿಸಲು ಹೊದಾಗ ನನಗೆ ಭೀಮಪ್ಪ ಹೇಮ್ಮಡಗಿ, ಮಲ್ಲಮ್ಮ ಹೇಮ್ಮಡಗಿ, ಚನ್ನಮ್ಮ ಹೇಮ್ಮಡಗಿ ಮೂವರು ಕೂಡಿ ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದರು. ಅಲ್ಲೆ ಇದ್ದ ತಿಪ್ಪಣ್ಣ ತಳವಾರ, ಚಿರಾಡುವುದನ್ನು ಕೇಳಿ ಬಂದ ಬಸಪ್ಪ ತಂದೆ ರಾಮಪ್ಪ ಹೇಮ್ಮಡಗಿ, ದೇವಪ್ಪ ತಾಯಿ ರಾಚವ್ವ ಗಿರಿಣಿ, ನಿಂದಪ್ಪ ತಾಯಿ ರಾಚವ್ವ ಗಿರಿಣಿ, ಅಂಬ್ರಪ್ಪ ತಂದೆ ತಿಪ್ಪಾಣ್ಣ ತಳವಾರ, ಎಲ್ಲರು ಕೂಡಿ ಜಗಳನ್ನು ನೋಡಿ ಬಿಡಿಸಕೊಂಡರು. ಆಗ ಅವರೆಲ್ಲರೂ ಇವತ್ತು ಬಂದು ಬಿಡಿಸಿದ್ದಕ್ಕೆ ಉಳಿದಿದ್ದೀರಿ ಮಕ್ಕಳೇ, ಇಲ್ಲಂದರ ನಿಮ್ಮ ಮನೆಯಲ್ಲಿ ಒಬ್ಬರಿಗಾದರೂ ಖಲಾಸ ಮಾಡುವತನಕ ಬಿಡುತಿರಲಿಲ್ಲ್ಲ ಅಂತ ಜೀವದ ಬೆದರಿಕೆ ಹಾಕಿ ಹೋದರು. ನಮಗೆ ಸಣ್ಣ ಪುಟ್ಟ ಗುಪ್ತಗಾಯವಾಗಿದ್ದರಿಂದ ನಾನು ಮತ್ತು ನನ್ನ ತಾಯಿ ಇಬ್ಬರು ಆಸ್ಪತ್ರೆಗೆ ತೋರಿಸಿರುವುದಿಲ್ಲ. ನಮ್ಮ ಮನೆಯಲ್ಲಿ ನನ್ನ ತಾಯಿ ಮತ್ತು ನನ್ನ ತಾತನಾದ ತಿಪ್ಪಣ್ಣ ಇವರುಗಳ ಜೊತೆ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ.ಕಾರಣ ಅಕ್ರಮ ಕೂಟ ರಚಿಸಿಕೊಂಡು ಬಂದು ನನಗೆ, ನನ್ನ ತಾಯಿ ಮಾಳವ್ವಳಿಗೆ ಹೊಡೆ ಬಡೆ ಮಾಡಿದ ಮೇಲೆ ಹೇಳಿದ 6 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ. ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 154/2021 ಕಲಂ.143, 147, 148 323, 354, 504, 506 ಸಂಗಡ 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ: 73/2021 ಕಲಂ: ಕಲಂ. 143, 147, 323, 324, 427, 447, 504, 506 ಸಂ. 149 ಐಪಿಸಿ : ದಿನಾಂಕ:02/10/2021 ರಂದು ಬೆಳಿಗ್ಗೆ ಫಿರ್ಯಾದಿ & ಫಿರ್ಯಾದಿಯ ತಾಯಿ ಕೂಡಿಕೊಂಡು ತಮ್ಮ ಎತ್ತು & ದನಗಳನ್ನು ಹೊಡೆದುಕೊಂಡು ಕೊಳಿಹಾಳ ಸೀಮಾಂತರದ ತಮ್ಮ ಹೊಲ ಸವರ್ೆ ನಂ:72/2 ರಲ್ಲಿ ಹೋಗಿದ್ದು, ಮದ್ಯಾಹ್ನ 3 ಗಂಟೆಯ ಸುಮಾರಿಗೆ ಫಿರ್ಯಾದಿಯು ಎತ್ತು & ದನಗಳನ್ನು ಹೊಲದ ಅಣಿಗೆ ಮೇಯಿಸುತ್ತಿದ್ದು, ಫಿರ್ಯಾದಿಯ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಆರೋಪಿತರೆಲ್ಲರೂ ಜೆಸಿಬಿಯೊಂದಿಗೆ ಬಂದು ಹೊಲದಲ್ಲಿ ಪೈಪಲೈನ್ ಮಾಡಲು ತೆಗ್ಗು ತೋಡುತ್ತಿದ್ದಾಗ ಫಿರ್ಯಾದಿಯು ನಮ್ಮ ಹೊಲದಲ್ಲಿ ಯಾಕೆ ತೆಗ್ಗು ತೋಡುತ್ತಿದ್ದಿರಿ ಅಂತಾ ಅಂದಾಗ ನಿಮ್ಮ ತಂದೆಗೆ ಹೇಳಿದ್ದೆವೆ ಪೈಪಲೈನ್ ಹಾಕುತ್ತೇವೆ ಅಂದಿದ್ದು, ಫಿರ್ಯಾದಿಯು ನಮ್ಮ ತಂದೆ ಬಂದ ನಂತರ ತೆಗ್ಗು ತೋಡಿರಿ ಅಲ್ಲಿಯವರೆಗೆ ತೆಗ್ಗು ತೋಡಲು ಬಿಡುವದಿಲ್ಲ ಅಂದಾಗ ಆರೋಪಿ ನಿಂಗನಗೌಡ ಈತನು ಫಿರ್ಯಾದಿಗೆ ನಿನ್ನ ಸೊಕ್ಕು ಬಹಳ್ಯಾದ ಅಂದು ಕೈಯಿಂದ ಕಪಾಳಕ್ಕೆ ಹೊಡೆದಿದ್ದು, ಆರೋಪಿ ಶರಣಗೌಡ ಈತನು ಫಿರ್ಯಾದಿಗೆ ಕಲ್ಲಿನಿಂದ ತಲೆಗೆ & ಬೆನ್ನಿಗೆ ಹೊಡೆದಿದ್ದು, ಆಗ ಫಿರ್ಯಾಧಿಯು ಚೀರಾಡಿದಾಗ ಸಪ್ಪಳ ಕೇಳಿ ಫಿರ್ಯಾದಿಯು ತಾಯಿ ಆರೋಪಿತರು ಹೊಡೆಯುವದನು ಬಿಡಿಸಲು ಬಂದಾಗ ಆರೋಪಿ ಶಿವನಗೌಡ ಈತನು ಫಿರ್ಯಾದಿಯ ತಾಯಿಗೆ ಕಲ್ಲಿನಿಂದ ತಲೆಯ ಮೆಲಕಿಗೆ ಹೊಡೆದು ರಕ್ತಗಾಯ ಮಾಡಿದ್ದು ಇರುತ್ತದೆ. ಫಿರ್ಯಾದಿ & ಫಿರ್ಯಾದಿಯ ತಾಯಿ ಚೀರಾಡಿದಾಗ ರೇಣುಕಾ ಗಂಡ ಕಾಶಪ್ಪ ಬೂದಿಹಾಳ ಇವರು ಬಂದು ಜಗಳ ಬಿಡಿಸಿದ್ದು, ಆರೋಪಿತರು ಪಿರ್ಯಾದಿ & ಫಿರ್ಯಾದಿ ತಾಯಿಗೆ ಹೊಡೆಯುವದನ್ನು ಬಿಟ್ಟು ಜೀವ ಬೆದರಿಕೆ ಹಾಕುತ್ತಾ ಹೋದ ಬಗ್ಗೆ ಅಪರಾಧ.

 

ಯಾದಗಿರ ನಗರ ಪೊಲೀಸ್ ಠಾಣೆ
ಗುನ್ನೆ ನಂ 107/2021 ಕಲಂ: ಕಲಂ 420, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನನ್ನ ಹೆಸರಿನ ಮೇಲೆ ಯಾದಗಿರಿಯ ಕೋಟರ್್ ರೋಡಿನ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನನ್ನ ಖಾತೆ ಇದ್ದು, ಖಾತೆ ನಂ-896610110000126, ಅಂತಾ ಇರುತ್ತದೆ. ಈ ಖಾತೆ ಮೇಲೆ ನಾನು ಎ.ಟಿ.ಎಂ ಕಾಡರ್್ ಹೊಂದಿ ಅದನ್ನು ಉಪಯೋಗ ಮಾಡುತ್ತೇನೆ. ಹೀಗಿದ್ದು ದಿನಾಂಕ 14/09/2021 ರಂದು ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ನನ್ನ ತಂದೆಯಾದ ಗೋಪಾಲ ತಂದೆ ರಿಸಾಲ ಹಠವಾಲ್ ವಯಾ 76 ವರ್ಷ ಸಾ|| ಶಿವನಗರ ಯಾದಗಿರಿ ಈತನು ನನ್ನ ಎ.ಟಿ.ಎಂ ಕಾಡರ್್ ತೆಗೆದುಕೊಂಡು ಯಾದಗಿರಿಯ ಸ್ಟೇಷನ್ ರೋಡಿನಲ್ಲಿ ಇರುವ ಎಸ್.ಬಿ.ಐ ಎ.ಟಿ.ಎಂ ಗೆ ಹಣ ಡ್ರಾ ಮಾಡಿಕೊಂಡು ಬರಲು ಹೋದನು. ನಂತರ ಮರಳಿ ಮನೆಗೆ ಬಂದು ತಿಳಿಸಿದ್ದೇನೆಂದರೆ, ನಾನು ನಿನ್ನ ಎ.ಟಿ.ಎಂ ಕಾಡರ್್ ತೆಗೆದುಕೊಂಡು ಸ್ಟೇಷನ್ ರೋಡಿನಲ್ಲಿ ಇರುವ ಎಸ್.ಬಿ.ಐ ಎ.ಟಿ.ಎಂ ಗೆ ಹೋದೆ ಅಲ್ಲಿ ಒಬ್ಬ ಅಪರಿಚಿತ ವ್ಯಕ್ತಿ ನಿಂತಿದ್ದನು. ನನಗೆ ಕಣ್ ಸ್ವಲ್ಪ ಸರಿಯಾಗಿ ಕಾಣದೆ ಇದ್ದರಿಂದ ನಾನು ಅವನಿಗೆ ಸ್ವಲ್ಪ ಹಣ ಡ್ರಾ ಮಾಡಿಕೊಡಲು ಕೇಳಿಕೊಂಡಾಗ ಆತನು, ನನ್ನಲ್ಲಿ ಇದ್ದ ಕಾಡರ್್ ತೆಗೆದುಕೊಂಡು 2-3 ಸಲಾ ಎ.ಟಿ.ಎಂ ಮಸೀನ್ ನಲ್ಲಿ ಹಾಕಿ ಚೆಕ್ ಮಾಡಿದ್ದು, ನಿಮ್ಮ ಎ.ಟಿ.ಎಂ ಕಾಡರ್್ ಬ್ಲಾಕ್ ಆಗಿದೆ ಅಂತಾ ಹೇಳಿ ನನ್ನ ಕೈಯಲ್ಲಿ ಒಂದು ಕಾಡರ್್ ಕೊಟ್ಟು ಕಳುಹಿಸಿದನು. ನಂತರ ನಾನು ಹಣ ಡ್ರಾ ಮಾಡದೆ ಮನೆಗೆ ಬಂದೆ ಅಂತಾ ಹೇಳಿದ್ದು, ಅಷ್ಟಕ್ಕೆ ನಾನು ಕೂಡ ಸುಮ್ಮನಾದೆನು. ನಂತರ ದಿನಾಂಕ 15/09/2021 ರಂದು ಮಧ್ಯಾಹ್ನ 04-15 ಸುಮಾರಿಗೆ ನನಗೆ ಹಣ ಡ್ರಾ ಆದ ಬಗ್ಗೆ ನನ್ನ ಮೊಬೈಲ್ ನಂ-9632827085 ನೇದ್ದಕ್ಕೆ ಮೆಸೇಜ್ ಬಂದದ್ದು ನೋಡಿದಾಗ ದಿನಾಂಕ 14/09/2021 ರಂದು 2500/- ರೂ|| ಮತ್ತು ದಿನಾಂಕ 15/09/2021 ರಂದು 2800/- ರೂ|| ಗಳು ನನ್ನ ಖಾತೆಯಿಂದ ಹಣ ಡ್ರಾ ಆದ ಬಗ್ಗೆ ಮೆಸೇಜ್ ಬಂದಿತ್ತು. ಕೂಡಲೆ ನಾನು ನಮ್ಮ ತಂದೆ ತಂದು ಕೊಟ್ಟ ಎ.ಟಿ.ಎಂ ಕಾಡರ್್ ನೋಡಿದಾಗ ಅದರ ನಂ-6069-9897-6023-1992, ಅಂತಾ ಇತ್ತು. ನಂತರ ನಾನು ಮತ್ತು ನಮ್ಮ ತಂದೆ ಇಬ್ಬರು ಕೂಡಿ ನಮ್ಮ ಖಾತೆ ಇದ್ದ ಬ್ಯಾಂಕಿಗೆ ಹೋಗಿ, ನನ್ನ ಕಾಡರ್್ ಲಾಕ್ ಮಾಡಿಸಿದೆವು. ಕಾರಣ ನಮ್ಮ ತಂದೆಗೆ ಮೋಸ ಮಾಡಬೇಕು ಎಂಬ ಉದ್ದೇಶದಿಂದ ದಿನಾಂಕ 14/09/2021 ರಂದು ಬೆಳಿಗ್ಗೆ 11-45 ಗಂಟೆಯ ಸುಮಾರಿಗೆ ನನ್ನ ತಂದೆ ಯಾದಗಿರಿಯ ಸ್ಟೇಷನ್ ರೋಡಿನಲ್ಲಿ ಇರುವ ಎಸ್.ಬಿ.ಐ ಎ.ಟಿ.ಎಂ ಗೆ ಹಣ ಡ್ರಾ ಮಾಡಲು ಹೋದಾಗ ಅಲ್ಲಿ ಇದ್ದ ಒಬ್ಬ ಅಪರಿಚಿತ ವ್ಯಕ್ತಿ ನನ್ನ ತಂದೆಗೆ ಹಣ ಡ್ರಾ ಮಾಡಿಕೊಡುವವನಂತೆ ಮಾಡಿ ನಮ್ಮ ತಂದೆಯಲ್ಲಿ ಇದ್ದ ನನ್ನ ಎ.ಟಿ.ಎಂ ಕಾಡರ್್ ಬದಲಾಯಿಸಿ, ಆತನ ಕೈಯಲ್ಲಿ ಬೇರೊಂದು ಎ.ಟಿ.ಎಂ ಕಾಡರ್್ ನೀಡಿದ್ದು, ಮುಂದೆ ನಮ್ಮ ಎ.ಟಿ.ಎಂ ಕಾಡರ್್ ತಾನು ಉಪಯೋಗ ಮಾಡಿ, ನನ್ನ ಎಸ್.ಬಿ. ಐ ಖಾತೆಯಿಂದ ಒಟ್ಟು 5,300/- ರೂ|| ಹಣ ಡ್ರಾ ಮಾಡಿರುತ್ತಾನೆ. ನಮ್ಮ ಕಾಡರ್್ ಕಳ್ಳತನ ಮಾಡಿ ಹಣ ಡ್ರಾ ಮಾಡಿದವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಮನೆಯಲ್ಲಿ ವಿಚಾರಣೆ ಮಾಡಿ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಹೇಳಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಹೇಳಿಕೆ ನಿಜವಿದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 107/2021 ಕಲಂ 420, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರ ನಗರ ಪೊಲೀಸ ಠಾಣೆ
ಗುನ್ನೆ ನಂ 106/2021 ಕಲಂ: ಕಲಂ 420, 380 ಐಪಿಸಿ : ಫಿಯರ್ಾಧಿ ಸಾರಾಂಶವೇನೆಂದರೆ, ನಾನು ಯಾದಗಿರಿ ನಗರದ ಚಿತ್ತಾಪೂರ ರೋಡಿನಲ್ಲಿ ಇರುವ ಎಸ್.ಬಿ.ಐ ಬ್ಯಾಂಕ್ದಲ್ಲಿ ಖಾತೆಹೊಂದಿದ್ದು, ಖಾತೆ ನಂ-20313775974, ಅಂತಾ ಇರುತ್ತದೆ. ಸದರಿ ಖಾತೆ ಮೇಲೆ ನಾನು ಎ.ಟಿ.ಎಂ ಕಾಡರ್್ ಹೊಂದಿ ಅದನ್ನು ಉಪಯೋಗ ಮಾಡುತ್ತೇನೆ. ಹೀಗಿದ್ದು ದಿನಾಂಕ 09/03/2021 ರಂದು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ನಾನು ಯಾದಗಿರಿಯ ಚಿತ್ತಾಪೂರ ರೋಡಿನಲ್ಲಿ ಇರುವ ತಮಿಳುನಾಡು ಬ್ಯಾಂಕ್ ಎ.ಟಿ.ಎಂ ಗೆ ಹೋಗಿ, ನನ್ನ ಎಸ್.ಬಿ.ಐ ಖಾತೆಯ ಎ.ಟಿ.ಎಂ ಕಾಡರ್್ ಉಪಯೋಗ ಮಾಡಿ ಹಣ 2000/- ರೂ|| ಡ್ರಾ ಮಾಡುವಾಗ ಅಲ್ಲಿ ನನ್ನ ಹಿಂದೆ ನಿಂತ ಒಬ್ಬ ವ್ಯಕ್ತಿ ನಿನಗೆ ಯಾರೋ ಕರೆಯುತ್ತಿದ್ದಾರೆ ನೋಡ್ರಿ ಅಂತಾ ಅಂದನು. ನಾನು ನನ್ನ ಕಾಡರ್್ ಮಸೀನ್ದಲ್ಲಿ ಬಿಟ್ಟು ಹೊರಗಡೆ ಬಂದು ನೋಡಿದೆನು. ನಂತರ ನನ್ನ ಕಾಡರ್್ದಿಂದ ಉಪಯೋಗ ಮಾಡುತ್ತಿರುವಾಗ ಇನ್ ಕರೆಕ್ಟ್ ಪಾಸ್ವಡರ್್ ಅಂತಾ ಬಂತು. ನಂತರ ನಾನು ಅಲ್ಲಿಂದ ನನ್ನ ಕಾಡರ್್ ತೆಗೆದುಕೊಂಡು ಮನೆಗೆ ಹೋದೆನು. ನಂತರ ದಿನಾಂಕ 10/03/2021 ರಂದು ಬೆಳಿಗ್ಗೆ ನನಗೆ ಪದೇ ಪದೇ ಹಣ ಡ್ರಾ ಆದ ಬಗ್ಗೆ ಮೆಸೇಜ್ ಬರಲು ಪ್ರಾರಂಬಿಸಿದಾಗ ನಾನು ನನ್ನ ಎ.ಟಿ.ಎಂ ನೋಡಿಕೊಂಡೆನು. ಅದು ಸಿದ್ದಪ್ಪ ತಂದೆ ಚಂದ್ರಾಮಪ್ಪ ಎನ್ನುವವರ ಹೆಸರಿನ ಮೇಲೆ ಇದ್ದು, ಕಾಡರ್್ ನಂ-6074-3102-4016-0862, ಅಂತಾ ಇತ್ತು. ನಂತರ ನಾನು ಚಿತ್ತಾಪೂರ ರೋಡಿನಲ್ಲಿ ಇರುವ ಎಸ್.ಬಿ.ಐ ಬ್ಯಾಂಕ್ಗೆ ಹೋಗಿ ನನ್ನ ಕಾಡರ್್ ಬ್ಲಾಕ್ ಮಾಡಿಸಿದೆನು. ಅಲ್ಲಿ ನನ್ನ ಅಕೌಂಟ್ ಪರಿಶೀಲಿಸಿ ನೋಡಿದಾಗ ನನ್ನ ಎಸ್.ಬಿ ಖಾತೆ ನಂ-20313775974, ನೇದ್ದರಿಂದ ದಿನಾಂಕ 09/03/2021 ರಂದು 10,000/- ರೂ||, ದಿನಾಂಕ 10/03/2021 ರಂದು 4523/-, 4523/-, 5000/-, 5000/-, 1,000/- ರೂಪಾಯಿಗಳು ಹೀಗೆ ಒಟ್ಟು 30,046/- ರೂಪಾಯಿಗಳು ನನ್ನ ಖಾತೆಯಿಂದ ಹಣ ಡ್ರಾ ಆಗಿದ್ದು ಕಂಡು ಬಂತು. ನಾನು ದಿನಾಂಕ 09/03/2021 ರಂದು ನಾನು ಯಾದಗಿರಿಯ ತಮಿಳುನಾಡು ಬ್ಯಾಂಕ್ದಲ್ಲಿ ಹಣ ಡ್ರಾ ಮಾಡಲು ಹೋದಾಗ ನನ್ನ ಕಾಡರ್್ ಅಲ್ಲಿ ಇದ್ದ ಅಪರಿಸಿತ ವ್ಯಕ್ತಿ ನನ್ನ ಕಾಡರ್್ ಬದಲಾಯಿಸಿದ್ದಾನೆ. ನಂತರ ನಾನು ಈ ಘಟನೆಯ ಬಗ್ಗೆ ನನ್ನ ತಂದೆಯಾದ ಮೇಗನಾಥ ತಂದೆ ಗೇಮ್ಯಾ ನಾಯಕ ಹಾಗೂ ನನ್ನ ಗೆಳೆಯನಾದ ವೆಂಕಟೇಶ ತಂದೆ ಪುರಂದರ ದಾಸ್ ಸಾ|| ಗಾಂಧಿ ನಗರ ತಾಂಡಾ ಇವರಿಗೆ ತಿಳಿಸಿದೆನು. ಕಾರಣ ನನಗೆ ಮೋಸ ಮಾಡಬೇಕು ಎಂಬ ಉದ್ದೇಶದಿಂದ ದಿನಾಂಕ 09/03/2021 ರಂದು ಮಧ್ಯಾಹ್ನ 04-00 ಗಂಟೆಯ ಸುಮಾರಿಗೆ ನಾನು ನನ್ನ ಎಸ್.ಬಿ.ಐ ಕಾಡರ್್ ಉಪಯೋಗ ಮಾಡಿ, ತಮಿಳುನಾಡು ಬ್ಯಾಂಕ್ ಎ.ಟಿ.ಎಂ ದಲ್ಲಿ ಹಣ ಡ್ರಾ ಮಾಡುವಾಗ, ಯಾರೋ ಒಬ್ಬ ವ್ಯಕ್ತಿ ನನ್ನ ಗಮನ ಬೇರೆಡೆ ಸೆಳೆದು, ನನ್ನ ಎ.ಟಿ.ಎಂ ಕಾಡರ್್ ಕಳ್ಳತನ ಮಾಡಿ, ನನಗೆ ಬೇರೊಂದು ಎ.ಟಿ.ಎಂ ಕಾಡರ್್ ನೀಡಿ, ನಂತರ ನನ್ನ ಎ.ಟಿ.ಎಂ ಕಾಡರ್್ ತಾನು ಉಪಯೋಗ ಮಾಡಿ, ನನ್ನ ಎಸ್.ಬಿ. ಐ ಖಾತೆಯಿಂದ ಒಟ್ಟು 30,046/- ರೂ|| ಹಣ ಡ್ರಾ ಮಾಡಿರುತ್ತಾನೆ. ತಾವು ಆತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಈ ರೀತಿಯ ಡ್ರಾ ಆದ ಹಣ ಸಿಗುವುದಿಲ್ಲ ಅಂತಾ ನಾನು ಇಲ್ಲಿಯವರೆಗೆ ಸುಮ್ಮನಿದ್ದೆನು. ಸದರಿ ಘಟನೆಯ ಬಗ್ಗೆ ಈಗ ನನ್ನ ಗೆಳೆಯ ರಾಜೇಜ್ ಹತ್ತಿಮನಿ ಇವರಿಗೆ ತಿಳಿಸಿದಾಗ ಅವರು ಪೊಲೀಸ್ ಠಾಣೆಗೆ ಹೋಗಿ ಕೇಸ್ ಮಾಡು ಅಂತಾ ಹೇಳಿದ್ದರಿಂದ ಇಂದು ನಾನು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 106/2021 ಕಲಂ 420, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 05-10-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080