ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-12-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ : ಇಂದು ದಿನಾಂಕ 04/12/2022 ರಂದು 9.30 ಪಿ.ಎಮ್ ಕ್ಕೆ ಅಜರ್ಿದಾರರಾದ ಶ್ರೀ ಪರಮಣ್ಣ ತಂದೆ ಬಸಪ್ಪ ಹೂಗಾರ ವ|| 48ವರ್ಷ ಜಾ|| ಕುರುಬರ ಉ|| ಒಕ್ಕಲುತನ ಸಾ|| ಅಗ್ನಿ ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿಸಿದ ಒಂದು ಅಜರ್ಿ ನೀಡಿದ್ದು ಅದರ ಸಾರಾಂಶವೇನೆಂದರೆ, ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಅಗ್ನಿ ಗ್ರಾಮದಲ್ಲಿ ಇರುತ್ತೇನೆ. ನಮ್ಮೂರ ನಾಗೇಶರಾವ್ ಕುಲಕಣರ್ಿ ಈತನು ನಮ್ಮೂರಲ್ಲಿ ಫಟರ್ಿಲೈಜರ ಅಂಗಡಿ ಇಟ್ಟಿದ್ದು ನಾವು ನಮ್ಮ ಹೊಲದಲ್ಲಿನ ತೊಗರಿ ಬೆಳೆಗೆ ಸಿಂಪಡಿಸಲು ಈ ಹಿಂದೆ ನಾಗೇಶರಾವ ಕುಲಕಣರ್ಿ ಇವರ ಅಂಗಡಿಯಲ್ಲಿ ಕ್ರಿಮಿನಾಶಕ ಔಷಧಿಯನ್ನು ಖರೀಸಿದ್ದು ಅದರ ಹಣವನ್ನು ಬೆಳೆ ಬಂದ ನಂತರ ಕೊಡುತ್ತೇವೆ ಅಂತಾ ಹೇಳಿದ್ದೆವು. ನಂತರ ನಮ್ಮ ತೊಗರಿ ಬೆಳೆ ಬಂದ ತಕ್ಷಣ ಕ್ರಿಮಿನಾಶಕ ಔಷಧಿಯ ಹಣ ನಾಗೇಶರಾವನಿಗೆ ಕೊಡಲು ಹಣದ ಬದಲಾಗಿ ತೊಗರಿಯನ್ನು ಮಾರಾಟ ಮಾಡಿ ಅವನ ಹಣವನ್ನು ಮುಟ್ಟಿಸಿರುತ್ತೇವೆ. ಆದರೂ ನಾಗೇಶರಾವನು ಇನ್ನೂ ಹಣ ಕೊಡಬೇಕು ಅಂತಾ ನನಗೆ ತೊಂದರೆ ಕೊಡುತ್ತಾ ಬಂದಿರುತ್ತಾನೆ. ಹೀಗಿದ್ದು ದಿನಾಂಕ 24/11/2022 ರಂದು 6.00 ಪಿಎಂ ಸುಮಾರಿಗೆ ನಾನು ಮತ್ತು ನನ್ನ ಮಗನಾದ ಶಿವಪ್ಪ ತಂದೆ ಪರಮಣ್ಣ ಹೂಗಾರ ಇಬ್ಬರೂ ಕೂಡಿ ಮನೆಗೆ ಹೋಗುವ ಕುರಿತು ನಮ್ಮೂರ ಬೀರಪ್ಪನ ಗುಡಿಯ ಹತ್ತಿರ ಹೋಗುತ್ತಿದ್ದಾಗ ಅಲ್ಲಿಗೆ  ನಮ್ಮೂರ 1) ನಾಗೇಶರಾವ ತಂದೆ ಶಂಕರರಾವ ಕುಲಕಣರ್ಿ ವ|| 50 ಜಾ|| ಹಿಂದೂ ಬ್ರಾಹ್ಮಣ ಉ|| ವ್ಯಾಪಾರ ಮತ್ತು 2) ಜಗನ್ನಾಥರಾವ ತಂದೆ ಶಂಕರರಾವ ಕುಲಕಣರ್ಿ ವ|| 52ವರ್ಷ ಜಾ|| ಬ್ರಾಹ್ಮಣ ಉ|| ಒಕ್ಕಲುತನ ಇಬ್ಬರೂ ಕೂಡಿ ಬೀರಪ್ಪನ ಗುಡಿಯ ಹತ್ತಿರ ಬಂದು ಏನೋ ಪರಮಪ್ಪ ನನ್ನ ಹಣ ಕೊಡು ಅಂತಾ ಕೇಳಿದರೂ ಕೊಡದೇ ಸುಳ್ಳು ಹೇಳುತ್ತಾ ಕಾಲಹರಣ ಮಾಡುತ್ತಿದ್ದಿಯಾ ಏಕೆ ಅಂತಾ ಕೇಳಿದಾಗ ನಾನು ನಿಮ್ಮ ಹಣವನ್ನು ಆಗಲೇ ತೊಗರಿ ಕೊಟ್ಟು ಮುಟ್ಟಿಸಿದ್ದೇನೆ ಯಾವುದೇ ಹಣ ಕೊಡುವುದು ಬಾಕಿ ಇಲ್ಲವೆಂದರೂ ನನಗೆ ಏಕೆ ಪದೇ ಪದೇ ತೊಂದರೆ ಕೊಡುತ್ತಿದ್ದಿಯಾ ಅಂತಾ ಹೇಳಿದಾಗ ನಾಗೇಶರಾವ ಈತನು ಏನಲೇ ಪರಮ್ಯಾ ಸೂಳೆ ಮಗನೇ ನೀವು ಊರಲ್ಲಿ ಜಾಸ್ತಿ ಜನ ಇದ್ದೀರಿ ಅಂತಾ ನಮ್ಮ ಮುಂದೆ ಸೊಕ್ಕು ತೋರಿಸ್ತೀರಾ ನಿಮ್ಮ ಸೊಕ್ಕು ಇವತ್ತು ನೋಡಿಯೇ ಬಿಡುತ್ತೇವೆ ಅಂತಾ ಬೈಯುತ್ತಾ ನಾಗೇಶರಾವ ಈತನು ಅಲ್ಲಿಯೇ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಬೆನ್ನಿಗೆ, ಸೊಂಟಕ್ಕೆ ಹೊಡೆದು ಗುಪ್ತಗಾಯ ಮಾಡಿದನು. ಆಗ ನಾಗೇಶರಾವ ಈತನ ಅಣ್ಣನಾದ ಜಗನ್ನಾಥರಾವ ಈತನು ಅಲ್ಲಿಯೇ ಬಿದ್ದಿದ್ದ ಒಂದು ಹಿಡಿಗಾತ್ರದ ಕಲ್ಲನ್ನು ತೆಗೆದುಕೊಂಡು ನನ್ನ ಬಲಗೈಗೆ ಹೊಡೆದು ತರಚಿದ ಗಾಯ ಮಾಡಿದನು. ನಾಗೇಶರಾವನು ಕೈಯಿಂದ ನನ್ನ ಕಪಾಳಕ್ಕೆ ಹೊಡೆಯುತ್ತಾ ನನ್ನ ಹಣ ಕೊಡುತ್ತಿಯಾ ಇಲ್ಲ ಲೇ ಸೂಳೆ ಮಗನೇ ಅಂತಾ ಬೈಯುತ್ತಾ ಹೊಡೆಯುತ್ತಿದ್ದಾಗ ನನ್ನ ಜೊತೆಗಿದ್ದ ನನ್ನ ಮಗನಾದ ಶಿವಪ್ಪ ತಂದೆ ಪರಮಣ್ಣ ಹೂಗಾರ ಮತ್ತು ನಮ್ಮೂರ ಭೀಮಪ್ಪ ತಂದೆ ಮಾನಪ್ಪ ತೋಟದ ಇವರು ಬಂದು ಜಗಳ ಬಿಡಿಸಿಕೊಂಡಿದ್ದು ಅವರು ನನಗೆ ಹೊಡೆಯುವುದು ಬಿಟ್ಟು ಎಲೇ ಬೋಸಡಿ ಮಗನೇ ನೀನು ನಮಗೆ ಹಣ ಕೊಡದಿದ್ದರೆ ಮತ್ತು ನಮ್ಮ ತಂಟೆಗೆ ಬಂದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಹೋಗಿದ್ದು ನನಗೆ ಗಾಯವಾಗಿದ್ದರಿಂದ ಆರ್.ಕೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ವಿಜಯಪೂರಕ್ಕೆ ಹೋಗಿ ಚಿಕಿತ್ಸೆ ಪಡೆದು ಊರಲ್ಲಿ ಹಿರಿಯರಿಗೆ ವಿಚಾರಿಸಿಕೊಂಡು ತಡವಾಗಿ ಇಂದು ದಿನಾಂಕ 04/12/2022 ರಂದು ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಕಾರಣ ನಾನು ಯಾವುದೇ ಹಣ ಕೊಡುವುದು ಇಲ್ಲದಿದ್ದರೂ ಹಣವನ್ನು ಕೊಡು ಅಂತಾ ತೊಂದರೆ ನೀಡುತ್ತಾ ನನ್ನೊಂದಿಗೆ ಜಗಳ ತೆಗೆದು ಕೈಯಿಂದ, ಬಡಿಗೆಯಿಂದ, ಕಲ್ಲಿನಿಂದ ಹೊಡೆದು ಬೆನ್ನಿಗೆ, ಸೊಂಟಕ್ಕೆ ಗುಪ್ತಗಾಯ ಮಾಡಿ, ಬಲಗೈಗೆ ತರಚಿದ ಗಾಯ ಮಾಡಿ ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ನಾಗೇಶರಾವ ಮತ್ತು ಜಗನ್ನಾಥರಾವ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 170/2022 ಕಲಂ 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 09-12-2022 05:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080