ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-01-2023ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ : 02/2023 ಕಲಂ 279  ಐಪಿಸಿ ಸಂ.187 ಐಎಂವಿ ಆ್ಯಕ್ಟ್: ಇಂದು ದಿನಾಂಕ 05/01/2023 ರಂದು 11 ಎ.ಎಂ.ಕ್ಕೆ ಪಿಯರ್ಾದಿ ಶ್ರೀ ಅಮೀನರೆಡ್ಡಿ ತಂದೆ ರಾಮರೆಡ್ಡಿ ಮಲ್ಲರೆಡ್ಡಿ ವಯ;47 ವರ್ಷ, ಉ;ಸುಪರ್ ವೈಜರ್, ಜಾ;ಲಿಂಗಾಯತ ರೆಡ್ಡಿ, ಸಾ;ಮುದ್ನಾಳ, ತಾ;ಜಿ;ಯಾದಗಿರಿ ಇವರು ಖುದ್ದಾಗಿ ಠಾಣೆಗೆ ಹಾಜರಾಗಿ ತಮ್ಮದೊಂದು ಕನ್ನಡದಲ್ಲಿ ಟೈಪ್ ಮಾಡಿದ ಲಿಖಿತ ದೂರನ್ನು ಸಲ್ಲಿಸಿದ್ದರ ಸಾರಾಂಶವೇನೆಂದರೆ ನಾನು ಈ ಮೂಲಕ ಪಿಯರ್ಾದಿ ದೂರು ಸಲ್ಲಿಸುವುದೇನೆಂದರೆ, ನಾನು ಶ್ರೀ ಹಣಮಂತರೆಡ್ಡಿಗೌಡ ತಂದೆ ವಿಶ್ವನಾಥರಡ್ಡಿಗೌಡ ಮುದ್ನಾಳ ಪ್ರಥಮ ದಜರ್ೆ ಗುತ್ತಿಗೆದಾರರು ಸಾ;ಯಾದಗಿರಿ ಇವರ ಹತ್ತಿರ ಸುಮಾರು ವರ್ಷಗಳಿಂದ ಸುಪರ್ ವೈಜರ್ ಅಂತಾ ಕೆಲಸ ಮಾಡಿಕೊಂಡು ಬಂದಿರುತ್ತೇನೆ. ನಮ್ಮ ಕೆಲಸವು ಯಾದಗಿರಿಯ ಮುದ್ನಾಳ ಕ್ರಾಸ್ ದಿಂದ ಹತ್ತಿಕುಣಿ ಕ್ರಾಸ್ ಬೈಪಾಸ್ ರಿಂಗ್ ರಸ್ತೆಯ ಮೇಲೆ ಡಿವೇಡರ್ ನಡುವೆ ವಿದ್ಯುತ್ ದೀಪಗಳ ಕಾಲಂಗಳನ್ನು ಹಾಕುವ ಕೆಲಸ ನಡೆದಿರುತ್ತದೆ.  ಹೀಗಿದ್ದು ಇಂದು ದಿನಾಂಕ 05/01/2023 ರಂದು ಎಂದಿನಂತೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಜೊತೆ ಕೆಲಸ ಮಾಡುವ ಶ್ರೀ ಆನಂದ ತಂದೆ ಸದಾಶಿವಪ್ಪ ಸುರಪುರ ಸಾ;ರಾಮಸಮುದ್ರ ಮತ್ತು ಶ್ರೀ ದೇವಪ್ಪ ತಂದೆ ಸಾಬಣ್ಣ ಹತ್ತಿಕುಣಿ ಸಾ;ಕೊಹಿಲುರ ಮೂರು ಜನರು ಕೂಡಿಕೊಂಡು ಎಂದಿನಂತೆ ಕೆಲಸಕ್ಕೆ ಬಂದಿದ್ದಾಗ ಇದೇ ರಸ್ತೆಗೆ ಹೊಂದಿಕೊಂಡಂತೆ ಇರುವ ನೂತನ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಮುಂದಿನ ರಸ್ತೆ ಮೇಲೆ ಡಿವೇಡರ್ಗಳ ಮದ್ಯದಲ್ಲಿ ನಾವು  ನಿಮರ್ಿಸಿದ್ದ ವಿದ್ಯುತ್ ದೀಪಗಳ  ಕಾಲಂಗಳಲ್ಲಿ ಒಂದು ಸಿಮೆಂಟ್ ಕಾಲಂ ನೇದ್ದಕ್ಕೆ ಯಾವುದೋ ಒಂದು ವಾಹನದ ಸವಾರನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ನೇರವಾಗಿ ಸಿಮೆಂಟ್ ಕಾಲಂ ನೇದ್ದಕ್ಕೆ ಡಿಕ್ಕಿ ಹೊಡೆದು ಒಂದು ಕಾಲಂ ನೇದ್ದನ್ನು ಬೀಳಿಸಿದ್ದು ಇರುತ್ತದೆ. ಘಟನೆಯ ನಂತರ ತನ್ನ ವಾಹನದ ಸಮೇತ ಓಡಿ ಹೋಗಿರುತ್ತಾನೆ.  ಈ ಘಟನೆಯು ನಿನ್ನೆ ದಿನಾಂಕ 04/01/2023 ರ ರಾತ್ರಿ 8 ಗಂಟೆಯಿಂದ ಇಂದು ದಿನಾಂಕ 05/01/2023 ರ ಬೆಳಿಗ್ಗೆ 6 ಗಂಟೆಯ ಒಳಗೆ ಜರುಗಿರಬಹುದು. ಯಾವುದೋ ಒಂದು ವಾಹನದ ಚಾಲಕನು ಉದ್ದೇಶಪೂರ್ವಕವಾಗಿ ನಾವು ನಿಮರ್ಿಸಿದ್ದ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಕಂಡು ಬಂದಿರುತ್ತದೆ.  ಹೀಗಿದ್ದು ಈ ಘಟನೆ ಬಗ್ಗೆ ನಮ್ಮ  ಮಾಲೀಕರಾದ ಕಾಂಟ್ರ್ಯಾಕ್ಟರ್  ರವರಿಗೆ ಘಟನೆ ಬಗ್ಗೆ ತಿಳಿಸಿದಾಗ ಈ ಬಗ್ಗೆ ದೂರು ನೀಡಲು ತಿಳಿಸಿದ ಮೇರೆಗೆ ನಾನು ಕನ್ನಡದಲ್ಲಿ ಟೈಪ್ ಮಾಡಿಸಿದ ಲಿಖಿತ ದೂರನ್ನು ಸಲ್ಲಿಸುತ್ತಿದ್ದು, ನಾವು ಯಾದಗಿರಿಯ ಮುದ್ನಾಳ ಕ್ರಾಸ್ದಿಂದ ಹತ್ತಿಕುಣಿ ಕ್ರಾಸ್ ಬೈಪಾಸ್ ರಿಂಗ್ ರಸ್ತೆಯ ಮೇಲೆ ಡಿವೇಡರ್ ನಡುವೆ ವಿದ್ಯುತ್ ದೀಪಗಳ ಸಿಮೆಂಟ್ ಕಾಲಂಗಳನ್ನು ನಿಮರ್ಿಸಿದ್ದು, ಅವುಗಳಲ್ಲಿ ಒಂದು ಸಿಮೆಂಟ್ ಕಾಲಂ ನೇದ್ದಕ್ಕೆ ವಾಹನದಿಂದ  ಡಿಕ್ಕಿ ಹೊಡೆದು ಅಪಘಾತಪಡಿಸಿ ಕಾಲಂ ನೇದ್ದು ಡ್ಯಾಮೇಜ್ ಮಾಡಿ ಓಡಿ ಹೋದ ವಾಹನದ ಚಾಲಕನನ್ನು ಪತ್ತೆ ಮಾಡಿ ಆತನ ಮೇಲೆ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.02/2023 ಕಲಂ 279 ಐಪಿಸಿ ಸಂ.187 ಐಎಂವಿ ಆ್ಯಕ್ಟ್ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:02/2023 ಕಲಂ: 323, 324, 504, 506 ಸಂಗಡ 34 ಐಪಿಸಿ: ಇಂದು ದಿನಾಂಕ 03.01.2023 ರಂದು ಸಮಯ ಸಂಜೆ 4:30 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ದೊಡ್ಡಿಯಲ್ಲಿ ಕೆಲಸ ಮಾಡುವಾಗ ಆರೋಪಿತರೆಲ್ಲಾರು ಕೂಡಿಕೊಂಡು ಹೊಲದ ಸಂಬಂದವಾಗಿ ನ್ಯಾಯ ಪಂಚಾಯತಿ ಮಾಡುವ ಸಂಬಂಧವಾಗಿ ಕರೆದು ಆತನೊಂದಿಗೆ ಜಗಳ ತೆಗೆದು ನಂತರ ತಮ್ಮೂರ ಗೇಟ್ ಹತ್ತಿರ ಬಂದು ಜಗಳ ತೆಗೆದು ಕೈಯಿಂದ ಕಲ್ಲಿನಿಂದ ಹೊಡೆ-ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದ ಫಿರ್ಯಾದಿಯು ತಡವಾಗಿ ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡೆನು.
 

ಇತ್ತೀಚಿನ ನವೀಕರಣ​ : 06-01-2023 10:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080