ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/02/2021

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ:- 17/2021 ಕಲಂ 143, 147, 323, 341. 307. 109, 504. 506 ಸಂಗಡ 149 ಐಪಿಸಿ : ಇಂದು ದಿನಾಂಕ 05/02/2021 ರಂದು ಬೆಳಿಗ್ಗೆ 8-15 ಗಂಟೆಗೆ ಜಿಜಿಎಚ್ ಯಾದಗಿರಿಯಿಂದ ದೂರವಾಣಿ ಮೂಲಕ ಎಮ್.ಎಲ್.ಸಿ. ವಸೂಲಾಗಿದ್ದರಿಂದ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಗಾಯಾಳುದಾರರಾದ ಶ್ರೀ ಸಾಬಣ್ಣ ತಂದೆ ಸಿದ್ರಾಮಪ್ಪ ಭೈರಪ್ಪನೊರ ಸಾಃ ಹೆಡಗಿಮದ್ರಿ ಇವನ ಹೇಳಿಕೆ ಪಡೆದುಕೊಂಡ ಸಾರಾಂಶವೆನೆಂದರೆ ನಾನು ಮೇಲ್ಕಂಡ ವಿಳಾಸದವನಿದ್ದು ಕೂಲಿಕೆಲಸ ಮಾಡಿಕೊಂಡು ನನ್ನ ಕುಟುಂಬದವರೊಂದಿಗೆ ಉಪಜೀವನ ಮಾಡುತ್ತೆನೆ, ಮೊನ್ನೆ ಜರುಗಿದ ಗ್ರಾಮ ಪಂಚಾಯತ ಚುನಾವಣೆ ನಾಮಿನೇಶನ್ ಸಮಯದಲ್ಲಿ ನಮ್ಮ ಸಮಾಜದ ಅನಂತಪ್ಪ ತಂದೆ ಭೀಮಶ್ಪಪ ಇವರು ನಾಮಿನೇಶನ್ ಹಾಕುವ ಸಮಯದಲ್ಲಿ ಅವರ ಜೋತೆಯಲ್ಲಿ ನಾನು, ನನ್ನ ಅಣ್ಣ ನಾಗಪ್ಪ ಹಾಗೂ ಇತರರು ಕೂಡಿಕೊಂಡು ನಾಮಿನೇಶನ್ ಮಾಡುವಾಗ ಅಲ್ಲಿ ನಮ್ಮ ಗ್ರಾಮದ 1) ರವಿ ತಂದೆ ಬಸವರಾಜ ಕಟಕಟಿ 2)ಕುಮಾರ ತಂದೆ ಬಸವರಾಜ ಕಟಕಟಿ 3)ಶಿವಪ್ಪ ತಂದೆ ಸಾಬಣ್ಣ ಕಟಕಟಿ 4)ಅಶೋಕ ತಂದೆ ಸಾಬಣ್ಣ ಕಟಕಟಿ ಮತ್ತು 5)ಮುದುಕಪ್ಪ ತಂದೆ ಚಂದ್ರಾಮ ಬಂಗಾರಿ ಇವರೆಲ್ಲರೂ ಕೂಡಿಕೊಂಡು ನಮಗೆ ನಮ್ಮ ವಿರುಧ ನೀವು ನಾಮಿನೇಶನ್ ಹಾಕಿದರೆ ನಿಮಗೆ ಇಲ್ಲೆ ಕೊಂದು ಹಾಕುತ್ತೆವೆ ಅಂತಾ ಅಂಜಿಸಿದಾಗ ನಾವು ನಾಮಿನೇಶನ್ ಹಾಕದೇ ಅಂಜಿ ವಾಪಸ ಬಂದಿರುತ್ತೆವೆ, ಹೀಗಿದ್ದು ನಿನ್ನೆ ದಿನಾಂಕ 04/02/2021 ರಂದು ರಾತ್ರಿ 9-15 ಗಂಟೆ ಸುಮಾರಿಗೆ ಊಟ ಮಾಡಿ ಮನೆಯಿಂದ ಮಠದ ಕಡೆಗೆ ಹೋಗಿ ಅಲ್ಲಿಂದ ಸ್ವಲ್ಪ ಮುಂದುಗಡೆ ಹೋದಾಗ ಅಲ್ಲಿಗೆ ಈ ಮೇಲ್ಕಂಡ ಐದು ಜನರಾದ 1)ರವಿ 2)ಕುಮಾರ 3)ಶಿವಪ್ಪ 4)ಅಶೋಕ ಮತ್ತು 5)ಮುದುಕಪ್ಪ ಇವರೆಲ್ಲರೂ ಕೂಡಿಕೊಂಡು ಬಂದು ನನಗೆ ಮುಂದೆ ಹೋಗದಂತೆ ತಡೆದು ಅಡ್ಡಗಟ್ಟಿ ಏ ಸೂಳೇ ಮಗನೇ ಕಳೆದ ನಾಮಿನೇಶನ್ ಸಮಯದಲ್ಲಿ ನಮ್ಮ ವಿರುಧ ನಾಮೀನೇಶನ್ ಮಾಡಲು ಬಂದಿದ್ದಿರಿ ಮಗನೇ ಇವತ್ತು ನಿನಗೆ ಸುಮ್ಮನೆ ಬಿಡುವದಿಲ್ಲ, ಮೇಲಾಗಿ ಯಾವಾಗ ನೋಡಿದಾಗ ನೀನು ಮಠದಲ್ಲಿಯೇ ಇರುತ್ತಿ, ನಿನಗೆ ಇಲ್ಲಿಯೇ ಮುಗಿಸುತ್ತೆವೆ ಅಂತಾ ನನಗೆ ಕೊಲೆ ಮಾಡುವ ಉದ್ದೇಶದಿಂದ ಬಿಗಿಯಾಗಿ ಹಿಡಿದುಕೊಂಡು ಯಾವುದೋ ಕ್ರೀಮಿನಾಶಕ ಎಣ್ಣೆಯನ್ನು ಬಲವಂತವಾಗಿ ಕುಡಿಸಿರುತ್ತಾರೆ, ಆಗ ನಾನು ಅವರಿಂದ ಕೊಸರಿಕೊಳ್ಳಲು ಪ್ರಯತ್ನಪಟ್ಟಾಗ ಅವರೆಲ್ಲರೂ ಕೈಯಿಂದ ಗುದ್ದಿ ಇಲ್ಲಿಯೇ ಸಾಯಿ ಅಂತಾ ಬಿಟ್ಟು ಹೋದರು, ನಾನು ಈ ವಿಷಯವನ್ನು ಪೋನ ಮುಖಾಂತರ ನನ್ನ ಅಣ್ಣ ನಾಗಪ್ಪ ಇತನಿಗೆ ತಿಳಿಸಿದಾಗ ನಾಗಪ್ಪ, ಮತ್ತು ಆತನ ಜೋತೆಯಲ್ಲಿ ಹಣಮಂತ ತಂದೆ ಸಿದ್ರಾಮಪ್ಪ ಮತ್ತು ಅನಂತ ತಂದೆ ಭೀಮಶಪ್ಪ ಇವರು ಅಲ್ಲಿಗೆ ಬಂದಾಗ ಎಲ್ಲಾ ವಿಷಯ ತಿಳಿಸಿದೆನು, ಅವರು ನನಗೆ ಕೂಡಲೇ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿರುತ್ತಾರೆ, ನನಗೆ ಕೊಲೆ ಮಾಡಲು ಮಲ್ಲು ತಂದೆ ಬಸವರಾಜ ಕಟಕಟಿ, ಚಂದ್ರಪ್ಪ ತಂದೆ ಸಾಬಣ್ಣ ಕಟಕಟಿ, ಶೇಖಪ್ಪ ತಂದೆ ರಾಮಯ್ಯ, ಶಿವಪ್ಪ ತಂದೆ ರಾಮಯ್ಯ ಇವರ ಕುಮ್ಮಕ್ಕು ಇರುತ್ತದೆ, ಈ ಘಟನೆ 9-30 ಪಿ.ಎಂ. ದಿಂದ 10-00 ಪಿ.ಎಂ. ಈ ಮಧ್ಯದ ಅವಧಿಯಲ್ಲಿ ದಿನಾಂಕ 04/02/2021 ರಂದು ಜರುಗಿದ್ದು, ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಲು ವಿನಂತಿ ಅಂತಾ ಹೇಳಿಕೆಯನ್ನು ಪಡೆದುಕೊಂಡು ಮರಳಿ ಠಾಣೆಗೆ ಬೆಳಿಗ್ಗೆ 10-00 ಎ.ಎಂ. ಕ್ಕೆ ಬಂದು ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:17/2021 ಕಲಂ 143, 147, 341, 323, 307, 504, 506, 109 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು,

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ :-. ಪಿ.ಎ.ಆರ್.ನಂ: 03/2021 ಕಲಂ 107 ಸಿ.ಆರ್.ಪಿ.ಸಿ : ನಾನು ಬಾಬುರಾವ ಎ.ಎಸ್.ಐ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಸ.ತ.ಫಿರ್ಯಾಧಿ ಸಲ್ಲಿಸುವುದೆನೆಂದರೆ ಇಂದು ದಿನಾಂಕ 05-02-2021 ರಂದು ಬೆಳಿಗ್ಗೆ 9-30 ಗಂಟೆಗೆ ನಾನು ಎಸ್.ಎಚ್.ಡಿ. ಕರ್ತವ್ಯದ ಮೇಲೆಯಿದ್ದಾಗ ಬಾತ್ಮಿ ಬಂದಿದ್ದೆನೆಂದರೆ ಭೀಮನಗರ ಗ್ರಾಮದಲ್ಲಿ ಒಂದನೇ ಪಾಟರ್ಿಯವರಾದ 1)ಮಾಣಿಕ ತಂದೆ ದೇವ್ಯಾ ರಾಠೋಡ 2)ಶಂಕರ ತಂದೆ ಗಣ್ಯಾ ರಾಠೋಡ 3)ಅಂಬು ತಂದೆ ಶಂಕರ ರಾಠೋಡ 4)ವಿಜಯ ತಂದೆ ಶಂಕರ ರಾಠೋಡ 5)ಮೋಹನ ತಂದೆ ದೇವ್ಯಾ ರಾಠೋಡ 6)ಮಾರುತಿ ತಂದೆ ದೇವ್ಯಾ ರಾಠೋಡ 7)ಪ್ರಭು ತಂದೆ ದೇವ್ಯಾ ರಾಠೋಡ ಸಾಃ ಎಲ್ಲರೂ ಭೀಮನಗರ ಮತ್ತು ಎರಡನೇ ಪಾಟರ್ಿಯವರಾದ 1)ಆನಂದ ತಂದೆ ಶಂಕರ ರಾಠೋಡ ಸಾಃ ಭೀಮನಗರ ಈ ಎರಡು ಪಾಟರ್ಿಯ ಜನರ ಮಧ್ಯ ಹೊಲ ಸವರ್ೆ ನಂ 31 ನೆದ್ದರ ಆಕಾರ 25 ಗುಂಟೆ ಹೊಲದ ಸಂಬಂಧ ತಕರಾರು ನಡೆದಿದ್ದರಿಂದ ಈ ಎರಡು ಪಾಟರ್ಿಯವರ ಮಧ್ಯ ಜಗಳವಾಗಿ ಜೀವ ಹಾನಿ ಮತ್ತು ಆಸ್ತಿ ಪಾಸ್ತಿಗೆ ಹಾನಿ ಮಾಡಿಕೊಂಡು ಸಾರ್ವಜನಿಕರ ಶಾಂತತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೂಡಲೇ 11-10 ಎ.ಎಮ್ ಕ್ಕೆ ಮುಂದಾಗುವ ಅನಾಹುತ ತಪ್ಪಿಸುವ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಕ್ಕಾಗಿ ಠಾಣೆ ಪಿ.ಎ.ಆರ್ ನಂ: 03/2021 ಕಲಂ 107 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ. ಆದ್ದರಿಂದ ಮಾನ್ಯರವರು ಕೂಡಲೇ ಮೇಲೆ ತೋರಿಸಿದ ಎರಡು ಪಾಟರ್ಿ ಜನರನ್ನು ತಮ್ಮ ನ್ಯಾಯಾಲಯಕ್ಕೆ ಬರಮಾಡಿಕೊಂಡು ಕಲಂ 116 (3) ಸಿ.ಆರ್.ಪಿ.ಸಿ ಪ್ರಕಾರ ಇಂಟೇರಿಯಮ್ ಬಾಂಡ್ ಪಡೆದುಕೊಳ್ಳಲು ವಿನಂತಿ ಇರುತ್ತದೆ.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 03/2021 ಕಲಂ. 174 ಸಿಆರ್ಪಿಸಿ : ಇಂದು ದಿನಾಂಕ 05-02-2021 ರಂದು 9 ಎ ಎಮ್ ಕ್ಕೆ ಪಿಯರ್ಾದಿ ಶ್ರೀ ಅಬ್ದುಲ ನಬೀ ತಂದೆ ಅಬ್ದುಲಗನೀ ವಯಾ|| 29 ವರ್ಷ ಜಾ|| ಮುಸ್ಲಿಂ ಉ|| ಒಕ್ಕಲುತನ ಸಾ|| ಮದ್ವಾರ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕರಣ ಮಾಡಿಸಿದ ಹೇಳಿಕೆ ಪಿಯರ್ಾದಿ ನೀಡಿದ್ದು. ಸಾರಾಂಶವೇನೆಂದರೆ, ನಮ್ಮ ಅಕ್ಕಳ ಮಗನಾದ ಮೊಹ್ಮದ ಅಮೀರ್ ಖಾನ್ ಇವನಿಗೆ ಸುಮಾರು 2-3 ವರ್ಷಗಳಿಂದ ಅವನಿಗೆ ಹೊಟ್ಟೆ ಬೇನೆ ಇದೆ ಬಹಾಳ ಬೇನೆಯಾಗುತ್ತಿದೆ ಅಂತಾ ಹೇಳುತ್ತಿದ್ದ. ಅವನಿಗೆ ನಮ್ಮ ಅಕ್ಕ ಅಗಾಗ ತೋರಿಸಿಕೊಂಡು ಬಂದಿದ್ದು. ಸ್ವಲ್ಪ ಆರಾಮ ಆಗಿ ಮತ್ತೆ ಬೇನೆಯಾಗುತ್ತಿದೆ ಅಂತಾ ಅನ್ನುತ್ತ ಬಂದಿದ್ದು. ದಿನಾಂಕ 03-02-2021 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾವು ಮನೆಯಲ್ಲಿ ಇಲ್ಲದ ಸಮಯ ನೋಡಿ ಮನೆಯ ಮ್ಯಾಳಿಗೆ ಮೇಲೆ ಹೋಗಿ ಬೆಳಿಗೆ ಹೊಡೆಯು ಕ್ರಿಮಿನಾಷಕ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದು. ಆಗ ನಾನು ಮತ್ತು ನನ್ನ ತಮ್ಮ ಮೈನೋದ್ದೀನ ಇಬ್ಬರು ನೋಡಿ ಉಪಚಾರ ಕುರಿತು ಒಂದು ಖಾಸಗಿ ವಾಹನದಲ್ಲಿ ಸೈದಾಪೂರಕ್ಕೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಆತನು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ. ಸರಕಾರಿ ಆಸ್ಪತ್ರೆ ಸೈದಾಪೂರದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರಕ್ಕಾಗಿ ರಾಯಚೂರಕ್ಕೆ ಕರೆದುಕೊಂಡು ಹೋಗುರಿ ಅಂತಾ ತಿಳಿಸಿದ ಕಾರಣ ನಾವು ಅಂಬುಲೇನ್ಸದಲ್ಲಿ ಮೊಹ್ಮದ ಅಮೀರ್ಖಾನ್ ತಂದೆ ದಿ: ಶಕೀಲ್ಅಹ್ಮದ ವಯಾ|| 20 ವರ್ಷ ಇವರಿಗೆ ಕರೆದುಕೊಂಡು ದಿನಾಂಕ 03-02-2021 ರಂದು ಉಪಚಾರಕ್ಕಾಗಿ ರಾಯಚೂರ ರೀಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದೆವು. ಉಪಚಾರ ಫಲಿಸದೆ ದಿನಾಂಕ 04-02-2021 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮೊಹ್ಮದ ಅಮೀರ್ಖಾನ್ ತಂದೆ ದಿ: ಶಕೀಲ್ಅಹ್ಮದ ಇವರು ಮೃತಪಟ್ಟಿರುತ್ತಾನೆ. ಮೊಹ್ಮದ ಅಮೀರ್ಖಾನ್ ತಂದೆ ದಿ: ಶಕೀಲ್ಅಹ್ಮದ ವಯಾ|| 20 ವರ್ಷ ಜಾ|| ಮುಸ್ಲೀಮ ಉ|| ಚಾಲಕ ಸಾ|| ಮದ್ವಾರ ಇವರ 2-3 ವರ್ಷಗಳಿಂದ ಹೊಟ್ಟೆ ಬೇನೆ ಇದ್ದ ಕಾರಣ ತನ್ನ ಹೊಟ್ಟೆಯ ಬೇನೆ ತಾಪ ತಾಳದೆ ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ಕ್ರಿಮಿನಾಷಕ ಔಷದಿ ಕುಡಿದು ಸತ್ತಿದ್ದು. ಸಾವಿನಲ್ಲಿ ನಮ್ಮದು ಯಾವುದೆ ಸಂಶಯವಿಲ್ಲಾ ಮುಂದಿನ ಕಾನೂನು ಕ್ರಮವನ್ನು ಜರುಗಿಸಬೇಕು. ಅಂತ ಪಿಯರ್ಾದಿ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಯು ಡಿ ಅರ್ ನಂಬರ. 03/2021 ಕಲಂ 174 ಸಿ ಅರ್ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ :- 18/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 05-02-2021 ರಂದು ಸಾಯಂಕಾಲ 05-00 ಗಂಟೆಗೆ ಪಿ.ಐ. ಸಿ.ಇ.ಎನ್ ಪೊಲೀಸ್ ಠಾಣೆ ಯಾದಗಿರಿ ರವರು ಠಾಣೆಗೆ ಹಾಜರಾಗಿ ಸೈದಾಪೂರದ ಲಕ್ಷ್ಮೀ ನಗರದ ಸುಶಿಲಮ್ಮ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ ಆರೋಪಿತರಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವರಿಂದ ನಗದು ಹಣ 70290=00 ರೂಪಾಯಿಗಳು, ಮಟಕಾ ಬರೆದ ಚೀಟಿ, ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿ ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸಿರಿ ಅಂತಾ ಸುಚಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.18/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ್ ಪೊಲೀಸ್ ಠಾಣೆ ಗುನ್ನೆ ನಂ :- 15/2021 ಕಲಂ: 78() ಕೆ.ಪಿ. ಆಕ್ಟ್ : ಇಂದು ದಿನಾಂಕ 05.02.2021 ರಂದು ಸಂಜೆ 5:30 ಗಂಟೆಗೆ ಗುರುಮಠಕಲ್ ಪಟ್ಟಣದ ಹನುಮಾನ ದೇವರ ಗುಡಿಯ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಅಂಕಿ-ಸಂಖ್ಯೆ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ರವರು ಠಾಣೆ ಎನ್.ಸಿ. ನಂಬರ 03/2021 ಅಡಿಯಲ್ಲಿ ಕ್ರಮ ಕೈಕೊಂಡು ನಂತರ ಪಿ.ಎಸ್.ಐ ರವರು ಮಾನ್ಯ ಜೆ.ಎಮ್.ಎಫ್.ಸಿ ನ್ಯಾಯಾಲಯ ಯಾದಗಿರಿ ರವರಲ್ಲಿ ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಪತ್ರದ ಮುಖಾಂತರ ಕೋರಿಕೊಂಡಿರುತ್ತಾರೆ. ನಂತರ ಪಿಸಿ-148 ರವರು ಮಾನ್ಯ ನ್ಯಾಯಾಲಯದಿಂದ ವಸೂಲಾದ ಅನುಮತಿ ಪತ್ರವನ್ನು ಸಂಜೆ 7:40 ಗಂಟೆಗೆ ತಂದು ಪಿ.ಎಸ್.ಐ ರವರ ಮುಂದೆ ಹಾಜರುಪಡಿಸಿದ್ದು ಆ ಮೇಲೆ ಪಿ.ಎಸ್.ಐ ರವರು ಪಂಚರನ್ನು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಸ್ಥಳಕ್ಕೆ ಹೋಗಿ ಸಮಯ ರಾತ್ರಿ 8:00 ಗಂಟೆಗೆ ದಾಳಿ ಮಾಡಿ ಆರೋಪಿನನ್ನು ಹಿಡಿದು ಆತನ ವಶದಲ್ಲಿದ್ದ ನಗದು ಹಣ, ಮಟಕಾ ಅಂಕಿ-ಸಂಖ್ಯೆ ಬರೆದ ಚೀಟಿ, ಒಂದು ಬಾಲ ಪೇನ್ ಸೇರಿ ಒಟ್ಟು 6050/- ರೂ ಬೆಲೆಯ ಮುದ್ದೆ ಮಾಲನ್ನು ಪಂಚರ ಸಮಕ್ಷಮ ಜಪ್ತಿಪಂಚನಾಮೆಯ ಮೂಲಕ ಜಪ್ತಿಪಡಿಕೊಂಡು ವಶಕ್ಕೆ ತೆಗೆದುಕೊಂಡು ಆರೋಪಿತನೊಂದಿಗೆ ಸಮಯ ರಾತ್ರಿ 9:20 ಗಂಟೆಗೆ ಠಾಣೆಗೆ ಬಂದು ನನ್ನ ಮುಂದೆ ಹಾಜರುಪಡಿಸಿದ್ದು ಅದರ ಸಾರಾಂಶದ ಮೇಲಿಂದ ನಾನು ಹೆಚ್.ಸಿ-157 ಗುರುಮಠಕಲ್ ಠಾಣೆ ಗುನ್ನೆ ನಂಬರ 15/2021 ಕಲಂ: 78() ಕೆಪಿ ಆಕ್ಟ್ ಅಡಿಯಲ್ಲಿ ಕ್ರಮ ಕೈಕೊಂಡೆನು.

ಶೋರಪೂರ ಪೊಲೀಸ್ ಠಾಣೆ ಗುನ್ನೆ ನಂ :- 33/2021 ಕಲಂ:323, 324, 504, 506 ಸಂ. 34 ಐಪಿಸಿ : ಇಂದು ದಿನಾಂಕ:05/02/201 ರಂದು 8:15 ಪಿ.ಎಂ ಕ್ಕೆ ಠಾಣೆಯಲ್ಲಿದ್ಧಾಗ ಪೀಯರ್ಾದಿದಾರನಾದ ಶ್ರೀಮತಿ ದುರ್ಗಮ್ಮ ಗಂಡ ಹಣಮಂತ ಚಿಕ್ಕನಳ್ಳಿ ವಯಾ;40 ವರ್ಷ ಜಾ:ಬೇಡರ ಉ:ಮನೆಕೆಲಸ ಸಾ:ಮಲ್ಲಬಾವಿ ತಾ;ಸುರಪೂರ ಇವರು ಠಾಣೆಗೆ ಬಂದು ಒಂದು ಗಣಕಿಕರಿಸಿದ ಅಜರ್ಿ ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ, ಸುಮಾರು 1 ತಿಂಗಳದಿಂದ ನನ್ನ ಮಗನಿಗೂ ಮತ್ತು ನಮ್ಮೂರಿನ ನಮ್ಮ ಜನಾಂಗದವರಾದ ಹಣಮಂತ ತಂದೆ ಭೀಮರಾಯ ಚಟ್ನಿ , ಯಲ್ಲಪ್ಪ ತಂದೆ ಭೀಮರಾಯ ಚಟ್ನಿ ಇವರ ಮಧ್ಯ ಗ್ರಾಮ ಪಂಚಾಯತ ಚುನಾವಣೆಯ ವಿಷಯವಾಗಿ ಆಗಾಗ ತಂಟೆ ತಕರಾರು ಮಾಡುತ್ತಾ ಬಂದಿದ್ದರು ನಾವು ಸುಮ್ಮನಿದ್ದೇವು. ಹಿಗಿದ್ದು ನಿನ್ನೆ ದಿನಾಂಕ:04/02/2021 ರಂದು ಬೆಳಿಗ್ಗೆ ಅಂದಾಜು 10:30 ಗಂಟೆಗೆ ನಾನು ಮತ್ತು ನನ್ನ ಮಗ ಬಲಭೀಮ ಇಬ್ಬರು ಮನೆಯ ಮುಂದೆ ಕುಳಿತಾಗ ನಮ್ಮೂರಿನ ನಮ್ಮ ಜನಾಂಗದವರಾದ 1) ಹಣಮಂತ ತಂದೆ ಭೀಮರಾಯ ಚಟ್ನಿ, 2) ಯಲ್ಲಪ್ಪ ತಂದೆ ಭೀಮರಾಯ ಚಟ್ನಿ ಇಬ್ಬರು ಕೂಡಿ ತಮ್ಮ ಕೈಯಲ್ಲಿ ಬಡಿಗೆ ಮತ್ತು ಕಲ್ಲು ಹಿಡಿದುಕೊಂಡು ಬಂದವರೆ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಮ್ಮ ವಿರುದ್ದ ಮಾಡುತ್ತಿರಿ ಸೂಳೆ ಮಕ್ಕಳೆ ಅಂತಾ ಹಣಮಂತ ಇತನು ನನ್ನ ಮಗ ಬಲಭೀಮನಿಗೆ ಬೊಸಡಿ ಸೂಳೆ ಮಗೆನೆ ಅಂತಾ ಅವಾಚ್ಯವಾಗಿ ಬೈಯುತ್ತಾ ನಿಂತಾಗ ನಾನು ಯಾಕೆ ನನ್ನ ಮಗನಿಗೆ ಬೈಯುತ್ತಿ ಅಂತಾ ಕೇಳಿದಕ್ಕೆ ಹಣಮಂತ ಚಟ್ನಿ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಮಗನ ಬೆನ್ನಿಗೆ ಮತ್ತು ಕಾಲಿಗೆ ಹೊಡೆದು ಗುಪ್ತಗಾಯ ಮಾಡಿ, ತಲೆಗೆ ಹೊಡೆದು ರಕ್ತಗಾಯ ಮಾಡಿದನು. ಬಿಡಿಸಲು ಹೊದ ನನಗೆ ಯಲ್ಲಪ್ಪ ಚಟ್ನಿ ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ನಾವು ಚಿರಾಡುತ್ತಿದ್ದಾಗ ಅಲ್ಲೆ ಇದ್ದ ಈಶ್ವರಪ್ಪ ತಂದೆ ಹಣಮಂತ್ರಾಯ ಪೂಜಾರಿ, ಈರಪ್ಪ ತಂದೆ ಭೀಮಣ್ಣ ಪೂಜಾರಿ ಇಬ್ಬರು ಜಗಳವನ್ನು ನೋಡಿ ಬಿಡಿಸಿದರು. ಆಗ ಅವರು ಇವತ್ತು ಉಳದಿರಿ ಸೂಳೆ ಮಕ್ಕಳೆ ಇನ್ನೋಮ್ಮೆ ನಮ್ಮ ತಂಟೆಗೆ ಬಂದರೇ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತಾ ಹೇಳಿ ಜೀವದ ಬೇದರಿಕೆ ಹಾಕಿ ಹೊದರು. ಆಗ ನಾನು ಮತ್ತು ನನ್ನ ಮಗ ಬಲಭೀಮ ಇಬ್ಬರು ಖಾಸಗಿ ವಾಹನದಲ್ಲಿ ಉಪಚಾರಕ್ಕಾಗಿ ಸುರಪೂರ ಸಕರ್ಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಮನೆಯಲ್ಲಿ ವಿಚಾರ ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ನನಗೆ ಮತ್ತು ಮಗನಿಗೆ ಬಡಿಗೆ, ಕಲ್ಲಿನಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿ ಹೊಗಿರುವ ಮೇಲೆ ಹೇಳಿದ ಇಬ್ಬರ ಮೇಲೆ ಕಾನೂನು ಕ್ರಮ ಜರಗಿಸಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸರಾಂಶದ ಮೇಲಿಂದ ಠಾಣೆ ಗುನ್ನೆ ನಂ. 33/2021 ಕಲಂ: 323, 324, 504, 506 ಸಂ. 34 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 15/2021 ಕಲಂ: 279, 337,338 ಐ.ಪಿ.ಸಿ ಸಂಗಡ 187 ಐಎಮ್ವಿ ಆಕ್ಟ : ಇಂದು ದಿನಾಂಕ 05.02.2021 ರಂದು 1715 ಗಂಟೆಗೆ ಫಿಯರ್ಾದಿ ಅಜರ್ಿದಾರರಾದ ಶ್ರಿ ಶಿವರಾಜ ತಂದೆ ಹಣಮಂತ ಕೊಂಬಿನ್ ವ|| 21 ಜಾ|| ಹಿಂದು ಹೊಲೆಯ ಉ|| ಕೂಲಿಕೆಲಸ ಸಾ|| ಬೈಚಬಾಳ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ದಿನಾಂಕ: 02.02.2021 ರಂದು ನಾನು ಹೂವಿನಹಳ್ಳಿ ಗ್ರಾಮದ ನಮ್ಮ ಮಾವನವರಾದ ಭೀಮಪ್ಪ ತಂದೆ ಮರಳಪ್ಪ ಬಡಿಗೇರ ಇವರ ಮನೆಗೆ ಹೋಗಿದ್ದೆನು. ನಂತರ ನಾನು ನಮ್ಮ ಊರಿಗೆ ಹೋದರಾಯಿತು ಅಂತ ತಯಾರಾದಾಗ ನಮ್ಮ ಮಾವ ಭೀಮಪ್ಪ ಹಾಗು ಅವರ ಮಗನಾದ ಮಂಜುನಾಥ ಇವರು ಸಹ ಕೆಂಭಾವಿಗೆ ಬರುವದಾಗಿ ತಿಳಿಸಿದ್ದು ನಂತರ ನಾವು ಮೂರು ಜನರು ಕೂಡಿ ನಮ್ಮ ಮೋಟರ ಸೈಕಲ ನಂಬರ ಕೆಎ-53 ಇಜೆ- 0873 ನೇದ್ದರಲ್ಲಿ ಕುಳಿತುಕೊಂಡು ಹೂವಿನಹಳ್ಳಿ ಗ್ರಾಮದಿಂದ 10.30 ಎಎಮ್ ಕ್ಕೆ ಬಿಟ್ಟಿದ್ದು ನಮ್ಮ ಮೋಟರ್ ಸೈಕಲ ಮಂಜುನಾಥ ಈತನು ನಡೆಸುತ್ತಿದ್ದು ಮದ್ಯದಲ್ಲಿ ನಾನು ಕುಳಿತಿದ್ದು ನನ್ನ ಹಿಂದೆ ನಮ್ಮ ಮಾವನವರಾದ ಭೀಮಪ್ಪ ಇವರು ಕುಳಿತಿದ್ದು ಹೀಗಿರುತ್ತಾ ನಾವು ಮೂರು ಜನರು ಕುಳಿತು ಕೆಂಭಾವಿ ಕಡೆಗೆ ಬರುತ್ತಿದ್ದಾಗ ನಮ್ಮ ಮೋಟರ ಸೈಕಲ ಚಾಲಕ ಮಂಜುನಾಥ ಈತನು ವೇಗವಾಗಿ ಮೋಟರ ಸೈಕಲ ನಡೆಸಿಕೊಂಡು 11.20 ಎಎಮ್ ಕ್ಕೆ ತಳ್ಳಳ್ಳಿ[ಬಿ] ಗ್ರಾಮ ಇನ್ನು ಮುಂದೆ ಇರುವಾಗ ರೋಡಿನಲ್ಲಿ ಹೋಗುತ್ತಿದ್ದಾಗ ಎದುಗಡೆಯಿಂದ ಒಂದು ಕಾರ ನಂಬರ ಕೆಎ-33 ಎಮ್-8193 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಒಮ್ಮಲೇ ನಮ್ಮ ಮೋಟರ್ ಸೈಕಲಗೆ ಬಲವಾಗಿ ಡಿಕ್ಕಿಪಡಿಸಿದ್ದು ಕಾರಣ ನಾವೂ ಮೂರು ಜನರು ಮೋಟರ ಸೈಕಲ ಸಮೇತ ಕೆಳಗೆ ಬಿದ್ದಿದ್ದು ನನಗೆ ಬಲಗಾಲ ಮೊಳಕಾಲಿಗೆ ಹಾಗು ಕೆಳಗೆ ರಕ್ತಗಾಯ ಹಾಗು ತರಚಿದ ಗಾಯಗಳಾಗಿ ಬಲಗಾಲ ಹಿಮ್ಮಡಿಗೆ ಒಳಪೆಟ್ಟು ಆಗಿದ್ದು ಇರುತ್ತದೆ. ನನ್ನ ಹಿಂದೆ ಕುಳಿತ ನಮ್ಮ ಮಾವನವರಾದ ಭೀಮಪ್ಪ ಬಡಿಗೇರ ಇವರಿಗೆ ತಲೆಯ ಬಲಗಡೆ ಭಾರೀ ರಕ್ತಗಾಯವಾಗಿ, ಬಲಗಾಲ ಮೊಳಕಾಲಿನ ಹತ್ತಿರ ರಕ್ತಗಾಯವಾಗಿದ್ದು ಇರುತ್ತದೆ. ಮತ್ತು ನಮ್ಮ ಮೋಟರ ಸೈಕಲ ಚಾಲಕನಾದ ಮಂಜುನಾಥ ಬಡಿಗೇರ ಈತನಿಗೂ ಸಹ ಬಲಮೆಲಕಿಗೆ ತರಚಿದ ಗಾಯವಾಗಿ, ಬಲಗಾಲ ಮೊಳಕಾಲಿಗೆ ಒಳಪೆಟ್ಟು ಆಗಿದ್ದು ಇರುತ್ತದೆ. ನಂತರ ನಮಗೆ ಅಪಘಾತ ಪಡಿಸಿದ ಕಾರ ನಂಬರ ಕೆಎ-33 ಎಮ್-8193 ನೇದ್ದರ ಚಾಲಕನ ಬಗ್ಗೆ ವಿಚಾರಿಸಲಾಗಿ ವೀರಯ್ಯ ತಂದೆ ಚೆನ್ನಯ್ಯ ಹಿರೇಮಠ ಸಾ|| ಶಹಾಪೂರ ಅಂತ ಗೊತ್ತಾಯಿತು ಕಾರ ಚಾಲಕನು ಅಪಘಾತಪಡಿಸಿದ ತಕ್ಷಣ ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಹೋದನು. ನಂತರ ನಾವು ಮೂರು ಜನರು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕೆಂಭಾವಿಗೆ ಬಂದು ವೈದ್ಯರ ಸಲಹೆಯಂತೆ ಹೆಚ್ಚಿನ ಉಪಚಾರ ಕುರಿತು ಮೂರು ಜನರು ಯಾದಗಿರಿ ಸರಕಾರಿ ಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡಿದ್ದು ನಂತರ ನನಗೆ ಹಾಗು ಮಂಜುನಾಥನಿಗೆ ಆರಾಮವಾಗಿದ್ದರಿಂದ ನಾವು ಯಾದಗಿರಿ ಸರಕಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಂತರ ನಮ್ಮ ಮಾವ ಭೀಮಪ್ಪ ಇವರಿಗೆ ಬಹಾಳ ತ್ರಾಸ ಆಗುತ್ತಿದ್ದರಿಂದ ಅವರನ್ನು ಕಲಬುಗರ್ಿಯ ಯುನೈಟೆಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಉಪಚಾರ ಕೊಡಿಸಿ ತಡವಾಗಿ ಇಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ನಮ್ಮ ಅಪಘಾತಕ್ಕೆ ಕಾರ ನಂಬರ ಕೆಎ-33 ಎಮ್-8193 ನೇದ್ದರ ಚಾಲಕ ವೀರಯ್ಯ ಹಿರೇಮಠ ಹಾಗು ಮೋಟರ ಸೈಕಲ ಚಾಲಕ ಮಂಜುನಾಥ ಇವರ ಅತೀ ವೇಗ ಹಾಗು ನಿಷ್ಕಾಳಜಿತನವೇ ಕಾರಣವಿದ್ದು ಸದರಿ ಚಾಲಕರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 15/2021 ಕಲಂ 279.337.338 ಐಪಿಸಿ ಸಂಗಡ 187 ಐ ಎಮ್ ವಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ :- 21/2021 ಕಲಂ:143, 147, 148, 341, 323, 324, 504, 307, 308, 427, 506 ಸಂಗಡ 149 ಐ.ಪಿ.ಸಿ : ಇಂದು ದಿನಾಂಕ:05/02/2021 ರಂದು 7:30 ಪಿ.ಎಮ್.ಕ್ಕೆ ನಿಸ್ತಂತು ಕೋಣೆಯಿಂದ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಎಮ್.ಎಲ್.ಸಿ. ಇದೆ ಅಂತಾ ಮಾಹಿತಿ ತಿಳಿಸಿದ್ದರಿಂದ ನಾನು ಎಮ್.ಎಲ್.ಸಿ. ವಿಚಾರಣೆ ಕುರಿತು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ 8:30 ಪಿ.ಎಮ್.ಕ್ಕೆ ಭೇಟಿನೀಡಿ ಎಮ್.ಎಲ್.ಸಿ. ಸ್ವೀಕೃತಮಾಡಿಕೊಂಡು ಗಾಯಾಳುದಾರರಿಗೆ ವಿಚಾರಿಸಿದಾಗ ಶ್ರೀ.ರವಿ ಪಾಟೀಲ್ ತಂದೆ ಸಂಗನಗೌಡ ಮಾಲೀಪಾಟೀಲ್, ವಯ:34 ವರ್ಷ, ಜಾತಿ:ಕುರುಬ, ಸಾ||ಹೊರಟೂರು ಇವರು ದೂರು ಅಜರ್ಿ ಕೊಟ್ಟಿದ್ದು ಸಾರಾಂಶವೇನೆಂದರೆ, ನನ್ನ ಪತ್ನಿಯಾದ ಶ್ರೀಮತಿ.ಭಾಗ್ಯಶ್ರೀ ಇವರು ಇಂದು ದಿನಾಂಕ:05/02/2021 ರಂದು ನಡೆದ ಉಳ್ಳೆಸೂಗೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಅದರಂತೆ ರಿಯಾನಾ ಬೇಗಂ ಗಂಡ ಚಾಂದಪಾಶಾ ಸಾ||ಉಳ್ಳೆಸೂಗೂರು ಇವರು ಸಹ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುತ್ತಾರೆ. ಮಧ್ಯಾಹ್ನ 3:45 ಗಂಟೆಗೆ ಚುನಾವಣೆ ಫಲಿತಾಂಶ ಘೋಷಣೆಯಾಗಿದ್ದು, ನನ್ನ ಹೆಂಡತಿ ಭಾಗ್ಯಶ್ರೀ ಇವರು 11 ಮತಗಳಿಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದು, ರಿಯಾನಾ ಬೇಗಂ ಇವರು 9 ಮತಗಳನ್ನು ಪಡೆದು ಪರಾಭವಗೊಂಡಿರುತ್ತಾರೆ. ನಂತರ ನಾನು ಮತ್ತು ನನ್ನ ಹೆಂಡತಿ ಹಾಘು ಇತರರು ನಮ್ಮೂರಿಗೆ ಹೋಗುವ ಸಲುವಾಗಿ ಗ್ರಾಮ ಪಂಚಾಯತ ಕಾಯರ್ಾಲಯದ ಮುಂದುಗಡೆ ನಿಂತಾಗ 1)ರತ್ನಮ್ಮ ಗಂಡ ಲಕ್ಷ್ಮಣ ನಾಯಕ ಗ್ರಾಮ ಪಂಚಾಯತ ಸದಸ್ಯರು ಉಳ್ಳೆಸೂಗೂರು ತಾಂಡಾ ಇವರು ತನ್ನ ಬೆಂಬಲಿಗರಾದ 2)ದೇವರಾಜನಾಯಕ ತಂದೆ ಲಕ್ಷ್ಮಣ ನಾಯಕ, 3)ಬಲದೇವನಾಯಕ ಲಕ್ಷ್ಮಣ ನಾಯಕ, 4)ಪ್ರಿಯಾಂಕನಾಯಕ ತಂದೆ ಲಕ್ಷ್ಮಣ ನಾಯಕ, 5)ರವಿ ತಂದೆ ಧನಸಿಂಗ್, 6)ಪಾಪು ತಂದೆ ಧನಸಿಂಗ್, 7)ಚನ್ನಪ್ಪ ಮಾಜಿ ಗ್ರಾ.ಪಂ. ಸದಸ್ಯ, 8)ಶಂಕರ ಮಾಜಿ ಗ್ರಾ.ಪಂ.ಅಧ್ಯಕ್ಷ, 9)ಗಣೇಶ ನಾಯಕ ತಂದೆ ಲಕ್ಷ್ಮಣ ನಾಯಕ, 10)ಆಕಾಶ ತಂದೆ ಶಂಕರ, 11)ಧರ್ಮಣ್ಣನಾಯಕ, 12)ತಾರ್ಯಾ, 13)ಹರ್ಯಾ, 14)ರವಿ, 15)ರಮೇಶ ನಾಯಕ ಎಲ್ಲರು ಸಾ||ಉಳ್ಳೆಸೂಗೂರು ತಾಂಡಾ ಮತ್ತು 16)ಅಯ್ಯಪ್ಪ ತಂದೆ ಮಲ್ಲಪ್ಪ ಕವಲಿ, 17)ಮಾಳಪ್ಪ ತಂದೆ ಸಿದ್ದಪ್ಪ ಲಿಂಗೇರಿ, 18)ಶಿವಬಸಪ್ಪ ಪೂಜಾರಿ ಎಲ್ಲರು ಸಾ||ಹೊರಟೂರು ಹಾಗು 19)ಸಣ್ಣರಾಯಪ್ಪ ತಂದೆ ಮಹಾದೇವಪ್ಪ, 20)ದೊಡ್ಡರಾಯಪ್ಪ ತಂದೆ ಮಹಾದೇವಪ್ಪ, 21)ದೇವಪ್ಪ ತಂದೆ ತಮ್ಮಣ್ಣ ಕವಲಿ, 22)ಲಕ್ಷ್ಮಣ ತಂದೆ ಸಿದ್ದಪ್ಪ ಸಗರ, 23)ಖಾಜಾ ತಂದೆ ಇಸಬುಸಾಬ ದೊಡಮನಿ, 24)ಶರಣಗೌಡ ತಂದೆ ಮಲ್ಲಣಗೌಡ, 25)ಲಚಮಯ್ಯ ತಂದೆ ರಂಗಯ್ಯ, 26)ಹಣಮಂತ್ರಾಯ ತಂದೆ ಮಾನಪ್ಪ ಬಡಿಗೇರ ಎಲ್ಲರು ಸಾ||ಉಳ್ಳೆಸೂಗೂರು ಇವರೆಲ್ಲರು ಏಕೋದ್ದೇಶದಿಂದ ಗುಂಪುಕಟ್ಟಿಕೊಂಡು ಕೈಗಳಲ್ಲಿ ಮಾರಕಾಸ್ತ್ರಗಳಾದ ತಲವಾರ, ಮಚ್ಚು, ಬಡಿಗೆ ಕಲ್ಲುಗಳನ್ನು ಹಿಡಿದುಕೊಂಡು ಬಂದು ನಮ್ಮನ್ನು ತಡೆದುನಿಲ್ಲಿಸಿ ರಾಜಕೀಯ ವೈಶಮ್ಯದಿಂದ ತಮ್ಮ ಬೆಂಬಲಿಗರಿಗೆ ಸೋಲುಂಟಾಗಿದ್ದರಿಂದ ಅವಮಾನವಾಗಿ ನಿಮ್ಮನ್ನು ಇವತ್ತು ಖಲಾಸ್ ಮಾಡಿಯೇ ಬಿಡ್ತಿವಿ ಅಂತಾ ಒಮ್ಮೇಲೆ ನಮ್ಮ ಮೇಲೆ ಹಲ್ಲೆಮಾಡಿದ್ದು, ದೇವರಾಜನಾಯಕ ಈತನು ತನ್ನ ಕೈಯಲ್ಲಿದ್ದ ಪಿಸ್ತೂಲನ್ನು ನನ್ನ ಹಣೆಗೆ ಇಟ್ಟು ಸೂಳೆ ಮಗನೆ ನಿನಗೆ ಕೊಲೆಮಾಡುತ್ತೇನೆ ಅಂತಾ ಬೈಯ್ಯುತ್ತಿದ್ದಾಗ ಪ್ರಿಯಾಂಕ ನಾಯಕನು ತನ್ನ ಕೈಯಲ್ಲಿದ್ದ ಸಲಿಕೆಯಿಂದ ನನ್ನ ಬೆನ್ನಿಗೆ ಹೊಡೆದು ರಕ್ತಗಾಯ ಮಾಡಿದ್ದು, ಗಣೇಶ ನಾಯಕನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬಲಕೈ ರೆಟ್ಟೆಗೆ, ಮೊಳಕೈಗೆ, ಎರಡೂ ಕಾಲುಗಳಿಗೆ ಹೊಡೆದು ಗುಪ್ತಗಾಯ ಮಾಡಿದನು. ನನ್ನೊಂದಿಗೆ ಬಂದಿದ್ದ ನನ್ನ ಹೆಂಡತಿ ಭಾಗ್ಯಶ್ರೀಗೆ ರತ್ನಮ್ಮ ನಾಯಕ ಇವಳು ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ನೀನು ಹೇಗೆ ಅಧ್ಯಕ್ಷ್ಯಗಿರಿ ಮಾಡ್ತಿ ನೋಡ್ತಿವಿ ಅಂತಾ ಬೈದಳು. ನಂದನಗೌಡ ತಂದೆ ಸಂಗನಗೌಡ ಮಾಲೀಪಾಟೀಲ್ ಇವರಿಗೆ ದೇವರಾಜ ನಾಯಕ ಪಿಸ್ತೂಲ್ ತೋರಿಸಿ ಅಂಜಿಸಿ ಕೊಲೆಮಾಡುವ ಉದ್ದೇಶದಿಂದ ತಲೆಯ ಮೇಲೆ ತಲವಾರ್ದಿಂದ ಹೊಡೆದು ಭಾರಿ ರಕ್ತಗಾಯ ಮಾಡಿದ್ದು, ಶಂಕರ್ ಈತನು ಬಡಿಗೆಯಿಂದ ಎಡಕೈ ಮೊಳಕೈಗೆ ಹೊಡೆದು ಗುಪ್ತಗಾಯ ಮಾಡಿದನು. ಶಿವರಾಜ ತಂದೆ ಬಸವರಾಜ ಬಿರಾದಾರ್ ಇವರಿಗೆ ಗಣೇಶನಾಯಕನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದ್ದು, ಆಕಾಶ ತಂದೆ ಶಂಕರ ಈತನು ಬಡಿಗೆಯಿಂದ ಬೆನ್ನಿಗೆ ಎರಡೂ ಕಾಲುಗಳಿಗೆ ಹೊಡೆದು ಗುಪ್ತಗಾಯ ಮಾಡಿದನು. ಚಂದ್ರಶೇಖರ ತಂದೆ ಮಲ್ಲಣಗೌಡ ಪೊಲೀಸ್ ಪಾಟೀಲ್ ಇವರಿಗೆ ರವಿ ತಂದೆ ಧನಸಿಂಗ್ ಈತನು ಚಾಕುನಿಂದ ಎಡಗೈ ಹಸ್ತಕ್ಕೆ ಹೊಡೆದು ರಕ್ತಗಾಯ ಮಾಡಿದನು. ನಿಂಗಪ್ಪ ತಂದೆ ಮರಿಲಿಂಗಪ್ಪ ದುಪ್ಪಲಿ ಇವರಿಗೆ ಪಾಪು ತಂದೆ ಧನಸಿಂಗ್ ಈತನು ರಾಡ್ನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿದ್ದು, ಚನ್ನಪ್ಪನು ಬಡಿಗೆಯಿಂದ ಎಡಕಾಲು ತೊಡೆಗೆ ಹೊಡೆದು ಗುಪ್ತಗಾಯ ಮಾಡಿದನು. ನಾಗಪ್ಪ ತಂದೆ ನಿಂಗಪ್ಪ ಕವಲಿ, ಹಣಮಂತ ತಂದೆ ಹೈಯ್ಯಾಳಪ್ಪ ಕವಲಿ, ಸಿದ್ದಪ್ಪ ತಂದೆ ಮಲ್ಲಯ್ಯ ಕವಲಿ, ಶರಣಪ್ಪ ತಂದೆ ಮರೆಪ್ಪ, ನಿಂಗಪ್ಪ ತಂದೆ ಭೀಮಣ್ಣ, ನಾಗರಾಜ ತಂದೆ ದೇವಪ್ಪ ಬಾಗಲಿ, ಭೀಮಪ್ಪ ತಂದೆ ಬಸಪ್ಪ ಕವಲಿ ಇವರಿಗೆ ಧರ್ಮಣ್ಣ, ತಾರ್ಯಾ, ಹರ್ಯ, ರವಿ, ರಮೇಶನಾಯಕ, ಅಯ್ಯಪ್ಪ, ಮಾಳಪ್ಪ, ಶಿವಬಸಪ್ಪ, ಸಣ್ಣರಾಯಪ್ಪ, ದೊಡ್ಡರಾಯಪ್ಪ, ದೇವಪ್ಪ, ಲಕ್ಷ್ಮಣ, ಖಾಜಾ, ಶರಣಗೌಡ, ಲಚಮಯ್ಯ, ಹಣಮಂತ್ರಾಯ ಇವರು ಕೈಗಳಿಂದ ಹೊಡೆದು ಕಲ್ಲುತೂರಾಟ ಮಾಡಿರುತ್ತಾರೆ. ಇದರಿಂದ ಗಾಯಗಳಾಗಿರುತ್ತವೆ. ಹಾಗು ಮೇಲ್ಕಂಡವರೆಲ್ಲರು ನಾವು ತಂದಿದ್ದ ಬಲೇನೋ ಕಾರ್ ನಂ: ಕೆಎ-33 ಎಮ್-6500, ಬ್ರೆಜ್ಜಾ ವಾಹನ ನಂ:ಕೆಎ-69 ಎಮ್-888 ಹಾಗು ಮೋಟರ್ ಸೈಕಲ್ಗಳಾದ 1)ಕೆಎ-33 ಯು-2116, 2)ಕೆಎ-33 ಡಬ್ಲು-7476, 3)ಕೆಎ-33 ಜೆ-5228, 4)ಕೆಎ-33 ಡಬ್ಲು-3434, 5)ಕೆಎ-01 ಸಿಬಿ-5817, 6)ಕೆಎ-33 ಇಎ-9888 ಇವುಗಳಿಗೆ ಬಡಿಗೆಗಳಿಂದ ಹೊಡೆದು ಕಲ್ಲುಗಳನ್ನು ಎತ್ತಿಹಾಕಿ ಗಾಜುಗಳನ್ನು ಒಡೆದು ಪುಡಿಪುಡಿಮಾಡಿ ಜಖಂಗೊಳಿಸಿರುತ್ತಾರೆ. ಅಲ್ಲಿಯೇ ಇದ್ದ ಬಸುಗೌಡ ತಂದೆ ವಿರುಪಣಗೌಡ ಬಿಳಾರ, ಶಶಿಧರರೆಡ್ಡಿ ತಂದೆ ಚಂದ್ರಕಾಂತರೆಡ್ಡಿ, ಮರೆಪ್ಪ ತಂದೆ ಹಣಮಂತ ಕವಲಿ, ಮಹೇಶರೆಡ್ಡಿ ತಂದೆ ದೊಡ್ಡಶರಣಗೌಡ, ಮಲ್ಲಪ್ಪ ತಂದೆ ಬಸವರಾಜ ಬಳಿಚಕ್ರ, ಹಣಮಂತ ಜೋಗಿ, ರಾಘವೇಂದ್ರ ತಂದೆ ಲಕ್ಷ್ಮಣ ಸಾಹುಕಾರ, ಬೀರೆಶ ಚಿರೆತನೋರ ಹಾಗು ಇತರರು ಬಂದು ನಮಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರೆಲ್ಲರು ಈಗ ಉಳಿದಿರಿ ಮಕ್ಕಳೇ, ಮುಂದೆ ಹೇಗೆ ರಾಜಕೀಯ ಮಾಡ್ತೀರಿ ನೋಡ್ತಿವಿ, ಒಬ್ಬೊಬ್ಬರಿಗೆ ಖಲಾಸ್ ಮಾಡ್ತೀವಿ, ಜೀವದ ಸಹಿತ ನಿಮ್ಮನ್ನು ಬಿಡಲ್ಲ ಅಂತಾ ನಮಗೆ ಹೆದರಿಕೆ ಹಾಕಿ ಜೀವದ ಭಯವುಂಟುಮಾಡಿ ಹೋದರು. ಮೇಲ್ಕಂಡ 26 ಜನ ಮತ್ತು ಇತರರು ಸೇರಿ ರಾಜಕೀಯ ವೈಶಮ್ಯದಿಂದ ಗುಂಪುಕಟ್ಟಿಕೊಂಡು ಏಕೋದ್ದೇಶದಿಂದ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದು ಮಾರಣಾಂತಿಕವಾಗಿ ನಮ್ಮ ಮೇಲೆ ಹಲ್ಲೆಮಾಡಿ ಕೊಲೆಮಾಡಲು ಪ್ರಯತ್ನಿಸಿದ್ದಲ್ಲದೇ ಮಾನವ ಜೀವಕ್ಕೆ ಅಪಾಯವಾಗುತ್ತದೆ ಎಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಕಲ್ಲುತೂರಾಟ ಮಾಡಿ ನಮಗೆಲ್ಲಾ ಗಾಯಗೊಳಿಸಿ ಜೀವದ ಬೆದರಿಕೆ ಹಾಕಿರುತ್ತಾರೆ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರನ್ನು 10:30 ಪಿ.ಎಮ್.ಕ್ಕೆ ಸ್ವೀಕರಿಸಿಕೊಂಡು 11:30 ಪಿ.ಎಮ.ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರಿನ ಸಾರಾಂಶದ ಮೇಲಿಂದ ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ:21/2021 ಕಲಂ:143, 147, 148, 341, 323, 324, 504, 307, 308, 427, 506 ಸಂಗಡ 149 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-02-2021 11:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080