ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-02-2022
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ:33/2022 ಕಲಂ: 78 () ಕೆ.ಪಿ. ಕಾಯ್ದೆ : ಇಂದು ದಿನಾಂಕ: 05/02/2022 ರಂದು 11:50 ಎ.ಎಮ್ ಕ್ಕೆ ನಾನು ಠಾಣೆಯ ಎಸ್.ಹೆಚ್.ಡಿ. ಕರ್ತತ್ಯದಲ್ಲಿದ್ದಾಗ ಶ್ರೀ ಕೃಷ್ಣಾ ಸುಬೇದಾರ ಪಿ.ಎಸ್.ಐ ಸಾಹೇಬರು ಒಬ್ಬ ಆರೋಪಿ, ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲು ಹಾಜರಪಡಿಸಿ ವರದಿ ನೀಡಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 05/02/2022 ರಂದು 09:30 ಎ.ಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಬಾರಪೇಠ ಎ.ಪಿ.ಎಮ್.ಸಿ. ಗಂಜ್ ಹತ್ತಿರ ಸುರಪೂರ-ಶಹಾಪೂರ ಬೈಪಾಸ್ ಮುಖ್ಯ ರಸ್ತೆಯ ಪಕ್ಕದ ಸಾರ್ವಜನಿಕ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಜನರಿಂದ ಹಣ ಪಡೆದು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ 1) ಹೊನ್ನಪ್ಪ ಸಿಪಿಸಿ-427, 2) ಸಿದ್ರಾಮರೆಡ್ಡಿ ಸಿಪಿಸಿ-423 ಇವರಿಗೆ ವಿಷಯ ತಿಳಿಸಿ, ಹೊನ್ನಪ್ಪ ಸಿಪಿಸಿ-427 ಇವರಿಗೆ ಪಂಚರನ್ನು ಕರೆತರಲು ಹೇಳಿದ ಪ್ರಕಾರ ಸದರಿ ಹೊನ್ನಪ್ಪ ಪಿಸಿ-427 ರವರು ಇಬ್ಬರು ಪಂಚರಾದ 1) ಮಹ್ಮದ್ ಬುರಾನುದ್ದಿನ್ ತಂದೆ ಚಾಂದಪಾಷಾ ಶೇಖ್ ವ|| 35 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ಸಂತಾಸ್ವಾಡಿ ಝಂಡದಕೇರಿ ಸುರಪುರ 2) ಶ್ರೀ ಅಂಜದ ಹುಸೇನ್ ತಂದೆ ಮೈಬೂಬ್ಸಾಬ್ ಶೇಖ್ ವ|| 38 ವರ್ಷ ಜಾ|| ಮುಸ್ಲಿಂ ಉ|| ಸಮಾಜ ಸೇವೆ ಸಾ|| ಮುಲ್ಲಾ ಮೋಹಲ್ಲಾ ಸುರಪೂರ ಇವರನ್ನು 09.45 ಎ.ಎಂ ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯವನ್ನು ತಿಳಿಸಿ, ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಲು ಸಹಕರಿಸಿ ಅಂತಾ ಕೇಳಿದ್ದಕ್ಕೆ ಅವರು ಅದಕ್ಕೆ ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಮೇಲ್ಕಂಡ ಠಾಣೆಯ ಸಿಬ್ಬಂದಿಯವರೊಂದಿಗೆ 10:00 ಎ.ಎಮ್ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಹೊರಟು 10:15 ಎ.ಎಮ್ ಕ್ಕೆ ಕುಂಬಾರಪೇಠ ಎ.ಪಿ.ಎಮ್.ಸಿ. ಗಂಜ್ದಿಂದ ಸ್ವಲ್ಪ ದೂರದಲ್ಲಿ ಹೋಗಿ ಜೀಪ್ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಎ.ಪಿ.ಎಮ್.ಸಿ. ಗಂಜ್ ಮುಂದುಗಡೆ ಇರುವ ಸುರಪೂರ-ಶಹಾಪೂರ ಬೈಪಾಸ್ ಮುಖ್ಯ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ನಿಂತುಕೊಂಡು ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಅಂತ ಹೋಗಿ ಬರುವ ಜನರಿಗೆ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದು, ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು, ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ 10:20 ಎ.ಎಮ್ ಕ್ಕೆ ದಾಳಿ ಮಾಡಿ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ಬಂದೇನವಾಜ್ ತಂದೆ ಬಶೀರಸಾಬ್ ಖುರೇಶಿ ವ|| 35 ವರ್ಷ ಜಾ|| ಮುಸ್ಲಿಂ ಉ|| ಹೊಟೇಲ್ ವ್ಯಾಪಾರ ಸಾ|| ಕುಂಬಾರಪೇಠ ಸುರಪುರ ಅಂತಾ ತಿಳಿಸಿದ್ದು, ಸದರಿಯವನು ತಾನು ಮಟಕಾ ನಂಬರ ಬರೆದುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವನ ಅಂಗಶೋಧನೆ ಮಾಡಲಾಗಿ ಸದರಿಯವರ ಹತ್ತಿರ ನಗದು ಹಣ 840=00 ರೂಗಳು, ಒಂದು ಮಟಕಾ ನಂಬರ್ ಬರೆದ ಚೀಟಿ ಅ.ಕಿ.00=00, ಒಂದು ಬಾಲ್ ಪೆನ್ ಅ.ಕಿ 00=00, ನೇದ್ದವುಗಳು ದೊರೆತಿದ್ದು, ಅವುಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 10:20 ಎ.ಎಮ್ ದಿಂದ 11:20 ಎ.ಎಮ್ದ ವರೆಗೆ ಬರೆದುಕೊಂಡು, ಮರಳಿ ಠಾಣೆಗೆ 11:50 ಎ.ಎಮ್ಕ್ಕೆ ಬಂದು ಸದರಿ ಜಪ್ತಿ ಪಂಚನಾಮೆ ಮತ್ತು ಆರೋಪಿತನೊಂದಿಗೆ ಮುದ್ದೆಮಾಲನ್ನು ಹಾಜರುಪಡಿಸುತ್ತಿದ್ದು ಆರೋಪಿತನ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ಈ ವರದಿಯೊಂದಿಗೆ ನಿಮ್ಮ ವಶಕ್ಕೆ ಒಪ್ಪಿಸಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನ: 06/2022 78 (3) ಕೆ.ಪಿ ಯಾಕ್ಟ : ದಿನಾಂಕ:05/02/2022 ರಂದು ಮದ್ಯಾಹ್ನ 12.05 ಗಂಟೆಯ ಸುಮಾರಿಗೆ ಆರೋಪಿತನು ವಜ್ಜಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಊರೊಳಗೆ ಹೋಗುವ ಕಮಾನ ಹತ್ತಿರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಕಲ್ಯಾಣ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಖಚಿತವಾದ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿಪಿಐ ಸಾಹೇಬರು ಹುಣಸಗಿ ರವರ ಮಾರ್ಗದರ್ಶನದಲ್ಲಿ ಪಿಯರ್ಾದಿಯು ಪಂಚರು ಹಾಗೂ ಠಾಣೆಯ ಸಿಬ್ಬಂದಿಯರೊಂದಿಗೆ ಹೋಗಿ ಮದ್ಯಾಹ್ನ 12.45 ಗಂಟೆಗೆ ದಾಳಿ ಮಾಡಿದ್ದು ಆರೋಪಿತನಿಂದ 1260=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ,
ಭೀಗುಡಿ ಪೊಲೀಸ್ ಠಾಣೆ :-
ಗುನ್ನೆ ನ: 16/2022 ಕಲಂ 143,147,148,323,324,326, 504,506 ಸಂಗಡ 149 ಐ.ಪಿ.ಸಿ. : ಫಿಯರ್ಾದಿ ಮತ್ತುಆರೋಪಿತರ ನಡುವೆ ಹಿಂದೆ ನಡೆದ ಜಗಳದ ವಿಷಯದಲ್ಲಿ ವೈಷಮ್ಯವಿದ್ದು ದಿನಾಂಕ:04/02/2022 ರಂದುರಾತ್ರಿ 9 ಗಂಟೆ ಸುಮಾರಿಗೆ ಫಿಯರ್ಾದಿ ಮತ್ತು ವಿಶ್ವನಾಥ ಹಳಿಮನಿ ಕೂಡಿತಮ್ಮ ಮೆಣಸಿನಕಾಯಿ ರಾಶಿ ಹತ್ತಿರ ಮಲಗಿಕೊಳ್ಳಲು ಹೋದಾಗ ಶರಣಗೌಡತಂದೆಗುರುಲಿಂಗಪ್ಪಗೌಡ ಸಮ್ಮಣ್ಈತನು ಫೋನ್ ಮಾಡಿ ಮುಡಬೂಳ ಕ್ರಾಸ ಹತ್ತಿರ ಹೋಗಿ ಪಾರ್ಸಲ್ತೆಗೆದುಕೊಅಂತ ಹೇಳಿದನು. ಆಗ ಫಿಯರ್ಾದಿ ಮುಡಬೂಳ ಕ್ರಾಸ ಹತ್ತಿರ ಹೋಗಿ ಕಾಯುತ್ತ ನಿಂತಾಗರಾತ್ರಿ 9.30 ಗಂಟೆ ಸುಮಾರಿಗೆಆರೋಪಿ ಬಾಪುಗೌಡ @ ಪಿಂಟ್ಯಾಈತನುಕಾರ ನಂಬರ ಕೆಎ-03, ಎಎಫ್-4960 ನೇದ್ದರಲ್ಲಿ 3-4 ಜನರನ್ನು ಕೂಡಿಸಿಕೊಂಡು ಮುಡಬೂಳ ಕ್ರಾಸ್ ಹತ್ತಿರ ಬಂದವನೇ ಫಿಯರ್ಾದಿಗೆಗಟ್ಟಿಯಾಗಿ ಹಿಡಿದುಕೊಂಡು ಸೂಳೇ ಮಗನೆ 6 ವರ್ಷಗಳ ಹಿಂದೆ ನೀನು ನಮ್ಮಜೊತೆ ಜಗಳ ತೆಗೆದು ಹೊಡೆಬಡೆ ಮಾಡೀದಿ, ಆವಾಗಿನಿಂದ ನಿನ್ನ ಮೇಲೆ ಒಂದುಕಣ್ಣುಇಟ್ಟಿದ್ದೀನಿ, ಇವತ್ತು ಸಿಕ್ಕೀದಿ ಸೂಳೇ ಮಗನೆ ನಿನಗೆ ಬಿಡುವುದಿಲ್ಲ ಅಂತ ಬೈದುಅವರೆಲ್ಲರೂಕೂಡಿತಮ್ಮಕೈಯಲ್ಲಿದ್ದರಾಡು ಮತ್ತು ಚೈನಿನಿಂದ ಮೇಲೆ ಹಲ್ಲೆ ಮಾಡಿ ಮುಖಕ್ಕೆ, ಎದೆಗೆ, ತಲೆಗೆ ಹೊಡೆದು ಭಾರಿರಕ್ತಗಾಯ ಮತ್ತು ಭಾರಿಗುಪ್ತಗಾಯ ಮಾಡಿ ವಿಶ್ವನಾಥ ಹಳಿಮನಿ ಈತನಿಗೆ ಸಹ ಫೋನ್ ಮಾಡಿ ಕರೆಸಿ ಅವನಿಗೂ ಸಹ ಹೊಡೆಬಡೆ ಮಾಡಿಜೀವದ ಬೆದರಿಕೆ ಹಾಕಿದ ಬಗ್ಗೆ ದೂರು.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 27/2022 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ : ಇಂದು ದಿನಾಂಕ 05/02/2022 ರಂದು 5.00 ಪಿಎಮ್ ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ನಾಗಮ್ಮ ಗಂಡ ನಿಂಗಯ್ಯ ಪೂಜಾರಿ ವ|| 72ವರ್ಷ ಜಾ|| ಹಿಂದೂ ಕಬ್ಬಲಿಗ ಉ|| ಹೊಲಮನೆ ಕೆಲಸ ಸಾ|| ಹೆಗ್ಗಣದೊಡ್ಡಿ ತಾ|| ಸುರಪೂರ ಇವರು ಠಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ ಮಾಡಿಸಿದ ಒಂದು ಅಜರ್ಿಯನ್ನು ತಂದು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನಮ್ಮ ಹೊಲ ಹಾಗೂ ನಮ್ಮ ಮೈದುನನಾದ ಹಣಮಂತ್ರಾಯ ತಂದೆ ಸಹದೇವಪ್ಪ ಪೂಜಾರಿ ಇವರ ಹೊಲ ಒಂದೇ ಸವರ್ೆ ನಂಬರಿನಲ್ಲಿ ಆಜುಬಾಜು ಇದ್ದು ನಮ್ಮ ಹೊಲಕ್ಕೆ ಹೋಗಲು ನಮ್ಮ ಮೈದುನನ ಹೊಲದಲ್ಲಿಯೇ ಮೊದಲಿನಿಂದಲೂ ದಾರಿ ಇರುತ್ತದೆ. ನನ್ನ ಗಂಡ ಹಾಗೂ ಹಣಮಂತ್ರಾಯ ಖಾಸ ಅಣ್ಣ ತಮ್ಮಂದಿರರು ಇದ್ದ ಕಾರಣ ಮೂಲತ ಹೊಲವೂ ಕೂಡಾ ಒಂದೇ ಆಗಿದ್ದರಿಂದ ಎರಡೂ ಹೊಲಗಳಿಗೆ ಹೋಗಲು ಬರಲು ಒಂದೇ ಕಡೆಗೆ ದಾರಿ ಇದ್ದು ಆ ದಾರಿಯು ಸದ್ಯ ಹಣಮಂತ್ರಾಯನ ಪಾಲಿಗೆ ಬಂದ ಹೊಲದಲ್ಲಿಯೇ ಇರುತ್ತದೆ. ನಾವು ಮೊದಲಿನಿಂದಲೂ ಅದೇ ದಾರಿಯಲ್ಲಿ ಹೊಲಕ್ಕೆ ಹೋಗುವುದು ಬರುವುದು ಮಾಡುತ್ತೇವೆ ಆದರೆ ಇತ್ತೀಚೆಗೆ 10 ತಿಂಗಳುಗಳ ಹಿಂದಿನಿಂದ ಹಣಮಂತ್ರಾಯ ಮತ್ತು ಅವನ ಮಕ್ಕಳು ಅವರ ಹೊಲದಲ್ಲಿನ ದಾರಿಯಲ್ಲಿ ಹೋಗಲು ನಮಗೆ ಅವಕಾಶ ನೀಡುತ್ತಿಲ್ಲ. ಹೀಗಿದ್ದು ದಿನಾಂಕ 04/02/2022 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಸೊಸೆಯಾದ ಚನ್ನಮ್ಮ ಗಂಡ ಬಸಣ್ಣ ಪೂಜಾರಿ ಇಬ್ಬರೂ ಕೂಡಿಕೊಂಡು ಹೊಲದಿಂದ ಮನೆಗೆ ದಾರಿಯ ಮೇಲೆ ಹೋಗುತ್ತಿದ್ದಾಗ 1)ಹಣಮಂತ್ರಾಯ ತಂದೆ ಸಹದೇವಪ್ಪ ಪೂಜಾರಿ, 2)ಬಸವರಾಜ ತಂದೆ ಹಣಮಂತ್ರಾಯ, 3)ಹಯ್ಯಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ, 4)ಗೊಲ್ಲಾಳಪ್ಪ ತಂದೆ ಹಣಮಂತ್ರಾಯ ಪೂಜಾರಿ, 5)ಪೀರಪ್ಪ ತಂದೆ ಹಣಮಂತ್ರಾಯ ಪೂಜಾರಿ, 6)ಶಾಮಲಾಬಾಯಿ ಗಂಡ ಹಣಮಂತ್ರಾಯ ಪೂಜಾರಿ, 7)ನಿಂಗಮ್ಮ ಗಂಡ ಗೊಲ್ಲಾಳಪ್ಪ ಪೂಜಾರಿ, 8) ಲಕ್ಷ್ಮೀ ಗಂಡ ಬಸವರಾಜ ಪೂಜಾರಿ, 9)ರೇಣುಕಾ ಗಂಡ ಪೀರಪ್ಪ ಪೂಜಾರಿ ಮತ್ತು 10)ಗೌರಮ್ಮ ಗಂಡ ಹಯ್ಯಾಳಪ್ಪ ಪೂಜಾರಿ ಇವರೆಲ್ಲರೂ ಕೂಡಿ ಕೈಯಲ್ಲಿ ಬಡಿಗೆ ಕಲ್ಲು ಹಿಡಿದುಕೊಂಡು0 ಗುಂಪು ಕಟ್ಟಿಕೊಂಡು ಬಂದವರೇ ಏನಲೇ ಸೂಳೆರೇ ನಿಮಗೆ ನಮ್ಮ ಹೊಲದಲ್ಲಿನ ದಾರಿಗೆ ಹೋಗಬೇಡ ಅಂತಾ ಹೇಳಿದರೂ ನಮ್ಮ ಹೊಲದಲ್ಲಿನ ದಾರಿಯಲ್ಲಿಯೇ ಹೋಗುತ್ತಿದ್ದೀರಲ್ಲ ಅಂತಾ ಅವಾಚ್ಯವಾಗಿ ಬೈಯುತ್ತಾ ಜಗಳಕ್ಕೆ ಬಿದ್ದಾಗ ನಮ್ಮ ಹೊಲಕ್ಕೆ ಮೊದಲಿನಿಂದಲೂ ಹೋಗಲು ಇದೇ ದಾರಿ ಇರುತ್ತದೆ. ನಿಮ್ಮ ಹೊಲದಲ್ಲಿ ಇಲ್ಲವೆಂದರೆ ಕೋಟರ್ಿನಲ್ಲಿ ಸಾಬೀತು ಮಾಡ್ರಿ ನಾವು ಇಲ್ಲಿ ಬರುವುದು ಬಿಡುತ್ತೇವೆ ಅಂದಾಗ ಇವರದು ಸೊಕ್ಕು ಜಾಸ್ತಿಯಾಗಿದೆ ಒಂದು ಕೈ ನೋಡಿಯೇ ಬಿಡೋಣ ಅನ್ನುತ್ತಾ ಬಸವರಾಜನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಆಗ ಜಗಳ ಬಿಡಿಸಲು ಬಂದ ನಮ್ಮ ಸೊಸೆಯಾದ ಚನ್ನಮ್ಮಳಿಗೆ ನಿಂಗಮ್ಮಳು ಬಂದು ಕೂದಲು ಹಿಡಿದು ಜಗ್ಗಾಡಿ ನೆಲಕ್ಕೆ ಕೆಡವಿ ಕೈಯಿಂದ ಹೊಡೆಯಲು ಪ್ರಾರಂಭಿಸಿದಳು. ಆಗ ಉಳಿದವರು ಬಿಡಬೇಡರೀ ಈ ಸೂಳೆಯರಿಗೆ ಅನ್ನುತ್ತಾ ಹೊಡೆಯುತ್ತಿದ್ದಾಗ ನಾವು ಸತ್ತೆವೆಪ್ಪೋ ಅಂತಾ ಚೀರುವ ಸಪ್ಪಳ ಕೇಳಿ ಸಮೀಪದಲ್ಲಿ ದಾರಿಯ ಮೇಲೆ ಹೋಗುತ್ತಿದ್ದ ಭೀಮಣ್ಣ ತಂದೆ ನಿಂಗಪ್ಪ ಚಾಕರಿ ಸಾ|| ಹೆಗ್ಗಣದೊಡ್ಡಿ ಮತ್ತು ಪ್ರಶಾಂತ ತಂದೆ ದೊಡ್ಡಪ್ಪಗೌಡ ಬಿರಾದಾರ ಸಾ|| ಜೈನಾಪೂರ ಹಾಗೂ ಶರಣಗೌಡ ತಂದೆ ಬಸನಗೌಡ ಪೊಲೀಸ್ ಪಾಟೀಲ್ ಸಾ|| ಹೆಗ್ಗಣದೊಡ್ಡಿ ಇವರು ಬಂದು ಜಗಳ ಬಿಡಿಸಿಕೊಂಡರು. ಆಗ ಎಲ್ಲರೂ ನಮಗೆ ಹೊಡೆಯುವದನ್ನು ಬಿಟ್ಟು ಸೂಳೆರೇ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋಗಿದ್ದು ಇರುತ್ತದೆ. ನಮಗೆ ಅಷ್ಟೊಂದು ಗಾಯಗಳಾಗದ ಕಾರಣ ನಾವು ದವಾಖಾನೆಗೆ ತೋರಿಸಿಕೊಂಡಿಲ್ಲ. ಈ ವಿಷಯದಲ್ಲಿ ನಾನು ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ದಿನಾಂಕ 05/02/2022 ರಂದು ಠಾಣೆಗೆ ಬಂದು ಈ ದೂರು ಅಜರ್ಿ ನೀಡಿದ್ದು ಕಾರಣ ಮೇಲ್ಕಾಣಿಸಿದ 10 ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 27/2022 ಕಲಂ 143, 147, 148, 323, 324, 504, 506 ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 28/2022 ಕಲಂ: 143, 147, 323, 498ಎ, 504, 506, ಸಂಗಡ 149 ಐಪಿಸಿ : ದಿನಾಂಕ 05/02/2022 ರಂದು 9.00 ಪಿಎಮ್ಕ್ಕೆ ಫಿಯರ್ಾದಿದಾರರಾದ ಶ್ರೀಮತಿ ನಿಂಗಮ್ಮ ಗಂಡ ಸಿದ್ದಪ್ಪ ಪೂಜಾರಿ ವಯಾ|| 34 ಜಾ|| ಕುರುಬರ ಉ|| ಮನೆಗೆಲಸ ಸಾ|| ಅಗ್ನಿ ಹಾ|| ವ|| ಎಸ.ಬಿ.ಸಿ ಕ್ಯಾಂಪ್ ಕೆಂಭಾವಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ನನ್ನ ತವರು ಮನೆಯು ಕೆಂಭಾವಿಯಾಗಿದ್ದು ನನಗೆ 16ವರ್ಷಗಳ ಹಿಂದೆ ಅಗ್ನಿ ಗ್ರಾಮದ ಸಿದ್ದಪ್ಪ ತಂದೆ ದೇವಿಂದ್ರಪ್ಪ ಪೂಜಾರಿ ಇವರೊಂದಿಗೆ ಮದುವೆಯಾಗಿದ್ದು ಇರುತ್ತದೆ. ಮದುವೆಯಾದ ನಂತರ ಸುಮಾರು 8 ತಿಂಗಳವರೆಗೆ ನಾನು ಹಾಗೂ ನನ್ನ ಗಂಡ ಅನ್ಯೋನ್ಯವಾಗಿದ್ದು ನಾನು ಗರ್ಭವತಿಯಾಗಿದ್ದರಿಂದ ನಾನು ಹೆರಿಗೆಗೆಂದು ತವರು ಮನೆಗೆ ಬಂದೆನು. ನಂತರ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಅವಳ ಹೆಸರು ಶಿವಲೀಲಾ ಅಂತಾ ಇಟ್ಟಿದ್ದು ಮಗು 5 ತಿಂಗಳು ತುಂಬಿದ ಬಳಿಕ ನಾನು ಮತ್ತೆ ಅಗ್ನಿ ಗ್ರಾಮಕ್ಕೆ ಗಂಡನ ಮನೆಗೆ ಹೋದೆನು. ನಾನು ಗಂಡನ ಮನೆಗೆ ಹೋದ 6 ತಿಂಗಳ ನಂತರ ನನ್ನ ಗಂಡ ಹಾಗೂ ಅವರ ಮನೆಯವರು ನನಗೆ ನೀನು ಸರಿಯಾಗಿಲ್ಲ, ನಿನಗೆ ಕೆಲಸ ಮಾಡಲು ಬರುವದಿಲ್ಲ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿರುವಿ ಅಂತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ ನನಗೆ ತವರುಮನೆಗೆ ಕಳುಹಿಸಿದ್ದು ನಾನು ನಮ್ಮ ತಾಯಿಯ ಮನೆಯಲ್ಲಿದ್ದಾಗ ನನ್ನ ಗಂಡನು ನಮಗೆ ಯಾರಿಗೂ ಹೇಳದೇ ಕೇಳದೇ ಇನ್ನೊಂದು ಮದುವೆ ಮಾಡಿಕೊಂಡಿರುವ ಬಗ್ಗೆ ನಮಗೆ ಗೊತ್ತಾಯಿತು. ನಾನು ನಮ್ಮ ತಾಯಿಯ ಮನೆಯಲ್ಲಿದ್ದಾಗ ಅಂದರೆ ನನ್ನ ಮಗಳು 5 ವರ್ಷದವಳಿದ್ದಾಗ ನಮ್ಮ ತಂದೆ ತಾಯಿಯವರು ನನ್ನ ಗಂಡನಿಗೆ ತಿಳಿಸಿ ಬುದ್ದಿವಾದ ಹೇಳಿದ್ದರಿಂದ ನನ್ನ ಗಂಡನು 2ನೇ ಮದುವೆ ಮಾಡಿಕೊಂಡಿದ್ದ ಹೆಣ್ಣು ಮಗಳಿಗೆ ವಿಚ್ಚೇಧನ ಮಾಡಿ ಮತ್ತೆ ನನಗೆ ಗಂಡನ ಮನೆಗೆ ಕರೆದುಕೊಂಡು ಹೋಗಿದ್ದು, ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಅನ್ಯೋನ್ಯವಾಗಿದ್ದು ಇಬ್ಬರೂ ಕೂಡಿ ದುಡಿಯಲು ಉಡುಪಿ ನಗರಕ್ಕೆ ಹೋದೆವು. ಅಲ್ಲಿ ಚನ್ನಾಗಿ ಸಂಸಾರ ಮಾಡಿದ್ದು ಮತ್ತೆ ನಾನು ಗರ್ಭವತಿಯಾಗಿದ್ದರಿಂದ 10ವರ್ಷಗಳ ಹಿಂದೆ ಹೆರಿಗೆಗಾಗಿ ತವರು ಮನೆಗೆ ಬಂದೆನು. ನಾನು ಗಂಡು ಮಗುವಿಗೆ ಜನ್ಮ ನೀಡಿದ್ದು ಅವನ ಹೆಸರು ರಾಜು@ ಸಮರ್ಥ ಅಂತಾ ಇಟ್ಟಿದ್ದು, ನಾನು ತವರುಮನೆಯಲ್ಲಿದ್ದಾಗ ನಂತರ ನಮ್ಮ ತಾಯಿ ತಂದೆಯವರು ನನಗೆ ಕರೆದುಕೊಂಡು ಹೋಗಲು ನನ್ನ ಗಂಡನಿಗೆ ತಿಳಿಸಿದಾಗ ಅವನು ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಕರೆದುಕೊಂಡು ಹೋಗುವುದಿಲ್ಲ ಅಂತಾ ಹೇಳಿದನು. ನಾನು ಸದ್ಯ ನಮ್ಮ ತಾಯಿಯ ಹತ್ತಿರ ಕೆಂಭಾವಿ ಪಟ್ಟಣದ ಎಸ್.ಬಿ.ಸಿ ಕ್ಯಾಂಪಿನಲ್ಲಿ ಇರುತ್ತೇನೆ. ನನ್ನ ಮಗಳಾದ ಶಿವಲೀಲಾ 16ವರ್ಷ ಇವಳಿಗೆ ಕಾಲೇಜು ಕಲಿಯಲು ನಾಗರಬೆಟ್ಟದಲ್ಲಿ ಬಿಟ್ಟಿರುತ್ತೇನೆ. ನನ್ನ ಮಗನಾದ ಸಮರ್ಥ 10ವರ್ಷ ಈತನು ಶಾಲೆ ಕಲಿಯಲು ನಮ್ಮ ಹತ್ತಿರ ಇರುತ್ತಾನೆ. ಹೀಗಿದ್ದು ದಿನಾಂಕ 01/02/2022 ರಂದು 9.00 ಪಿಎಂ ಕ್ಕೆ ನಾನು ನನ್ನ ಮಗನಾದ ಸಮರ್ಥನಿಗೆ ಕರೆದುಕೊಂಡು ಅಗ್ನಿ ಗ್ರಾಮದ ನನ್ನ ಗಂಡನ ಮನೆಗೆ ಹೋಗಿದ್ದು, ನಾನು ಹೋಗಿ ಮನೆಯಲ್ಲಿ ಕೂಡುವಷ್ಟರಲ್ಲಿ ನನ್ನ ಗಂಡನಾದ ಸಿದ್ದಪ್ಪ ತಂದೆ ದೇವಿಂದ್ರಪ್ಪ ಪೂಜಾರಿ ಈತನು ಹೊರಗಿನಿಂದ ಮನೆಗೆ ಬಂದು ಏನಲೇ ಸೂಳಿ ನೀನು ನಮ್ಮ ಮನೆಗೆ ಬರಬೇಡ ಅಂದ್ರೂ ಏಕೆ ಬಂದಿರುವಿ ಅಂತಾ ಜಗಳ ಮಾಡಲು ಪ್ರಾರಂಭಿಸಿದಾಗ ಅವನೊಂದಿಗೆ ನನ್ನ ಗಂಡನ ತಮ್ಮನಾದ ಶ್ರೀಶೈಲ ತಂದೆ ದೇವಿಂದ್ರಪ್ಪ ಪೂಜಾರಿ, ಸಂಬಂಧಿಕರಾದ ಹೆಗ್ಗೇರೆಪ್ಪ ತಂದೆ ಪರಮಣ್ಣ ಹಳ್ಳೆಪ್ಪಮನಿ, ಶಿವಣ್ಣ ತಂದೆ ತಿಪ್ಪಣ್ಣ ಮಿಣಜಗಿ ಮತ್ತು ಸಿದ್ರಾಮವ್ವ ಗಂಡ ಪರಮಣ್ಣ ಹಳ್ಳೆಪ್ಪಮನಿ ಇವರೆಲ್ಲರೂ ಕೂಡಿ ನೀನು ಸರಿ ಇಲ್ಲಾ, ನೀನು ನಮ್ಮ ಮನೆಯಲ್ಲಿ ಇರಲು ಯೋಗ್ಯಳಲ್ಲ ನೀನು ನಮ್ಮ ಮನೆಗೆ ಬರಬೇಡ ಅಂದ್ರೂ ಬರಲು ನಿನಗೆ ಸೊಕ್ಕು ಜಾಸ್ತಿಯಾಗಿದೆ ಅನ್ನುತ್ತಾ ಎಲ್ಲರೂ ಬೈಯುತ್ತಾ ಹೊಡೆಯಿರಿ ಈ ಸೂಳೆಗೆ ಅನ್ನುತ್ತಿದ್ದಾಗ ನನ್ನ ಗಂಡನು ನನಗೆ ಕೈಯಿಂದ ಕಪಾಳಕ್ಕೆ ಮತ್ತು ಬೆನ್ನಿಗೆ ಹೊಡೆದು ಮನೆಯಿಂದ ಹೊರಗೆ ಹಾಕಿದನು. ಆಗ ಉಳಿದವರು ನೀನು ನಮ್ಮ ಮನೆಯಲ್ಲಿ ಇರಬೇಡ ಹೋಗು ಅಂತಾ ಅವಾಚ್ಯವಾಗಿ ಬೈದು ಹೊಡೆಯುತ್ತಿದ್ದಾಗ ನಾನು ಚೀರುವ ಸಪ್ಪಳ ಕೇಳಿ ನಮ್ಮ ಸಂಬಂಧಿಕರಾದ ಮಲ್ಲಣ್ಣ ತಂದೆ ಬಸಪ್ಪ ಹೂಗಾರ ಮತ್ತು ಮಲ್ಲಪ್ಪ ತಂದೆ ಯಲ್ಲಪ್ಪ ಬಡಿಗೇರ ಇವರು ಬಂದು ಜಗಳ ಬಿಡಿಸಿದರು. ಆಗ ನನಗೆ ಹೊಡೆಯುವುದು ಬಿಟ್ಟು ಇದೊಂದು ಸಾರಿ ಬಿಟ್ಟೀವಿ ಇನ್ನೊಮ್ಮೆ ನಮಗೆ ಮಾತನಾಡಿಸುವುದಾಗಲೀ ನಮ್ಮ ಮನೆಗೆ ಬರುವುದಾಗಲೀ ಮಾಡಿದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿದ್ದು ಇರುತ್ತದೆ. ನಾನು ಆ ದಿನ ರಾತ್ರಿ ಒಂದು ಖಾಸಗಿ ವಾಹನದಲ್ಲಿ ನಮ್ಮ ತಾಯಿಯ ಮನೆಗೆ ಕೆಂಭಾವಿಗೆ ಬಂದಿದ್ದು ನನಗೆ ಅಷ್ಟೊಂದು ಗಾಯಗಳಾಗದ ಕಾರಣ ಆಸ್ಪತ್ರೆಗೆ ತೋರಿಸಿಲ್ಲ. ಈ ವಿಷಯದಲ್ಲಿ ನಮ್ಮ ಮನೆಯಲ್ಲಿ ವಿಚಾರಿಸಿಕೊಂಡು ತಡವಾಗಿ ಇಂದು ಠಾಣೆಗೆ ಬಂದು ಈ ದೂರು ನೀಡಿದ್ದು, ನನಗೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿದ ಮೇಲ್ಕಾಣಿಸಿದ ನನ್ನ ಗಂಡನಾದ ಸಿದ್ದಪ್ಪ ಹಾಗೂ ಇತರರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 28/2022 ಕಲಂ: 143, 147, 323, 498ಎ, 504, 506, ಸಂಗಡ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.