ಅಭಿಪ್ರಾಯ / ಸಲಹೆಗಳು

                                       ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06/03/2021
ಶಹಾಪೂರ ಪೊಲೀಸ್ ಠಾಣೆ:-  08/2020 ಕಲಂ 174 ಸಿ.ಆರ್.ಪಿ.ಸಿ. (ರೈತ ಆತ್ಮ ಹತ್ಯೆ) : ಇಂದು ದಿನಾಂಕ:05-03-2021 ರಂದು 8:45 ಎ.ಎಮ್.ಕ್ಕೆ ಫಿರ್ಯಾದಿ ಶ್ರೀಮತಿ ಮಲ್ಲಮ್ಮ ಗಂಡ ಮಲ್ಲಪ್ಪ ಬೇವಿನಳ್ಳಿ ವಯ: 40 ವರ್ಷ ಜಾ: ಕುರುಬ ಉ: ಹೊಲಮನೆ ಕೆಲಸ ಸಾ: ಮಡ್ನಾಳ ತಾ: ಶಹಾಪುರ ಇವರು ಠಾಣೆಗೆ ಬಂದು ಒಂದು ಕನ್ನಡದಲ್ಲಿ ಕಂಪ್ಯೂಟರ ಟೈಪ ಮಾಡಿಸಿದ ಅಜರ್ಿ ಹಾಜರು ಪಡಿಸಿದ್ದು ಏನಂದರೆ ನನ್ನ ಗಂಡನಾದ ಮಲ್ಲಪ್ಪ ತಂದೆ ಶಿವಪ್ಪ ಈತನು ಒಕ್ಕಲುತನ ಮಾಡುತ್ತಾನೆ. ನಮಗೆ ಪಿತ್ರಾಜರ್ಿತವಾಗಿ ಬೇವಿನಳ್ಳಿ ಸೀಮಾಂತರದಲ್ಲಿ ಸವರ್ೆ ನಂ. 145 ರಲ್ಲಿ 4 ಎಕರೆ ಜಮೀನು ಇದೆ. ಮತ್ತು ನನ್ನ ಗಂಡನು ಬೇರೆಯವರ ಹೊಲಗಳನ್ನು ಲೀಜ ಹಾಕಿಕೊಂಡು ಒಕ್ಕಲುತನ ಮಾಡುತ್ತಾನ. ಸದರಿ ಒಕ್ಕಲುತನಕ್ಕಾಗಿ ಖಾಸಗಿಯಾಗಿ ಬೇರೆ ಬೇರೆ ಕಡೆಗೆ ಸಾಲ ಮಾಡಿರುತ್ತಾನೆ. ಈಗ ಎರಡು ವರ್ಷಗಳಿಂದ ನಾವು ಹೊಲದಲ್ಲಿ ಬೆಳೆದ ಬೆಳೆಗಳಿಗೆ ಬೆಲೆ ಬರದೇ ಮತ್ತು ಬೆಳೆ ಸರಿಯಾಗಿ ಬರದೆ ಸಾಲ ತೀರಿಸಲು ಆಗಿರುವುದಿಲ್ಲ. ಆದ್ದರಿಂದ ನನ್ನ ಗಂಡನು ಆಗಾಗ ಮನಸ್ಸಿಗೆ ಬೇಜಾರು ಮಾಡಿಕೊಂಡು ಸಾಲ ಬಹಳ ಆಗಿದೇ ಸರಿಯಾಗಿ ಬೆಳೆ ಬರುತ್ತಿಲ್ಲ ಸಾಲ ತೀರಿಸುವುದು ಹೇಗೆ ಅಂತರಾ ಚಿಂತೆ ಮಾಡುತ್ತಿದ್ದನು. ನಾನು ಸಮಾಧಾನ ಮಾಡುತ್ತಿದ್ದೆನು. ಹೀಗಿದ್ದು ನಿನ್ನೆ ದಿನಾಂಕ: 04-03-2021 ರಂದು ರಾತ್ರಿ 9:00 ಗಂಟೆ ಸುಮಾರಿಗೆ ಊಟವಾದ ನಂತರ ಹೊಲಕ್ಕೆ ನೀರು ಬಿಡುತ್ತೇನೆಂದು ಹೋದನು. ಹೋದ ನಂತರ 10:00 ಗಂಟೆ ಸುಮಾರಿಗೆ ನನ್ನ ಹಿರಿಯ ಮಗ ದೇವಪ್ಪನಿಗೆ ಫೋನ ಮಾಡಿ ತಿಳಿಸಿದ್ದೇನಂದರೆ ಸಾಲ ತೀರಿಸಲು ಆಗುವುದಿಲ್ಲ ಮನಸ್ಸಿಗೆ ಬೇಜಾರಾಗಿ ನಾನು ಕ್ರಿಮಿನಾಷಕ ಎಣ್ಣೆ ಕುಡಿದಿದ್ದೇನೆ ಉಳಿಸುವುದಾರೆ ಉಳಿಸಿಕೊಳ್ಳಿ ಎಂದು ಹೇಳಿದ್ದು ಆಗ ನನ್ನ ಮಗನಾದ ದೇವಪ್ಪನು ನನಗೆ ಹೇಳಿ ನನ್ನ ಮೈದುನನಾದ ನಿಂಗಪ್ಪನನ್ನು ಕರೆದುಕ್ಪೊಂಡು ಹೊಲಕ್ಕೆ ಹೋಗಿ ನನ್ನ ಗಂಡನನ್ನು ಉಪಚಾರಕ್ಕಾಗಿ ಶಹಾಪುರದ ಸರಕಾರಿ ಆಸ್ಪತ್ರೆಗೆ ಮದ್ಯ ರಾತ್ರಿ ಹೋಗಿ ಸೇರಿಕೆ ಮಾಡಿದ್ದು ನಾನು ಕೂಡಾ ಆಸ್ಪತ್ರೆಗೆ ಹೋದೆನು. ಅಲ್ಲಿ ಉಪಚಾರ ಪಡೆಯುತ್ತಾ ಮದ್ಯ ರಾತ್ರಿ ದಿನಾಂಕ : 05-03-2021 ರಂದು 00:36 ಗಂಟೆಗೆ ಉಪಚಾರ ಫಲಿಸದೇ ಮೃತಪಟ್ಟಿದ್ದಾಗಿ ವೈದ್ಯರು ಹೇಳಿದರು. ನಾನು ನನ್ನ ಸಂಬಂಧಿಕರಿಗೆ ವಿಷಯ ತಿಳಿಸಿದ್ದು ಈಗ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ. ನನ್ನ ಗಂಡನ ಮೃತದೇಹವು ಶಹಾಪುರದ ಸರಕಾರಿ ಆಸ್ಪತ್ರೆಯ ಮರ್ಚರಿ ಕೋಣೆಯಲ್ಲಿರುತ್ತದೆ. ನನ್ನ ಗಂಡನ ಸಾವಿನಲ್ಲಿ ಯಾರ ಮೇಲೂ ಯಾವುದೇ ರೀತಿಯ ಸಂಶಯ ವಿರುವುದಿಲ್ಲ ಆದ್ದರಿಂದ ನನ್ನ ಗಂಡ ಮಲ್ಲಪ್ಪನು ಒಕ್ಕಲುತನದಲ್ಲಿ ವಿಪರೀತ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೇ ಮನನೊಂದು ದಿನಾಂಕ: 04-03-2021 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಹೊಲದಲ್ಲಿ ಕ್ರಿಮಿನಾಷಕ ಔಷಧ ಸೇವಿಸಿ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆಗೆ ಸೇರಿಕೆಯಾಗಿ ಉಪಚಾರ ಫಲಿಸದೇ ಇಂದು ದಿನಾಂಕ: 05-0-2021 ರಂದು 00:36 ಗಂಟೆಗೆ ಮೃತಪಟ್ಟಿದ್ದು ನನ್ನ ಗಂಡ ಸಾವಿನ ಬಗ್ಗೆ ತನಿಖೆ ಮಾಡಿ ಕಾನೂನು ಕ್ರಮ ಜರಿಗಿಸಲು ವಿನಂತಿ ಅಂತಾ ಇದ್ದ ದೂರನ್ನು ಸ್ವೀಕರಿಸಿಕೊಂಡು ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ. 08/2021 ಕಲಂ.174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ.:- 36/2021 ಕಲಂ 78 (3) ಕೆ.ಪಿ ಎಕ್ಟ : ಇಂದು ದಿನಾಂಕ 05-02-2021 ರಂದು 11-30 ಎ.ಎಮ್ ಕ್ಕೆ ಆರೋಪಿತರಾದ ) ಸಾಬಣ್ಣಾ ತಂದೆ ಹಣಮಂತ ಶೇಖಸಿಂಧಿ ವಯಾ:44 ಜಾ: ಬೇಡರ ಉ: ಕೂಲಿ ಸಾ:ಜೀನಕೇರಾ 2) ಹಣಮಂತ್ರಾಯ ತಂದೆ ತಮ್ಮಣ್ಣಾ ಮರಗಯ್ಯನೋರ ವಯಾ:30 ಉ: ಕೂಲಿ ಜಾ: ಬೇಡರ ಸಾ: ಹಳಗೇರಾ ಇವರಿಬ್ಬರೂ ಹಳಗೇರಾ ಗ್ರಾಮದ ಹನುಮಾಣ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ್ದಾಗ ದಾಳಿ ಮಾಡಿ ಆರೋಪಿತರಿಂದ 3400/-ರೂ ನಗದು ಹಣ ಮತ್ತು ಮಟಕಾ ಎರಡು ಚೀಟಿಗಳನ್ನು ಹಾಗೂ ಒಂದು ಬಾಲಪೆನ್ನು ್ನ ಜಪ್ತಿಪಡಿಸಿಕೊಂಡಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ:- 31/2021 ಕಲಂ: 504, 324, 506 ಐಪಿಸಿ : ಇಂದು ದಿನಾಂಕ: 05/03/2021 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಅದರ ವಿಚಾರಣೆ ಕುರಿತು ಶಿವಪುತ್ರ ಹೆಚ್.ಸಿ 82 ರವರನ್ನು ಕಳುಹಿಸಿಕೊಟ್ಟಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಗಾಯಾಳು ಮರೆಪ್ಪ ತಂದೆ ಸಿದ್ರಾಮಪ್ಪ ಬೆಂಡೆಬೆಂಬಳ್ಳಿ ಸಾ:ಕಾಡಂಗೇರಾ ಇವರಿಗೆ ವಿಚಾರಿಸಿದಾಗ ಅವರು ಕನ್ನಡದಲ್ಲಿ ಟೈಪ ಮಾಡಿದ ದೂರು ಅಜರ್ಿ ಕೊಟ್ಟಿದ್ದನ್ನು ಸ್ವಿಕೃತ ಮಾಡಿಕೊಂಡು ಮರಳಿ 5-30 ಪಿಎಮ್ ಕ್ಕೆ ಠಾಣೆಗೆ ಬಂದು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನಂದರೆ ನಾನು ಮರೆಪ್ಪ ತಂದೆ ಸಿದ್ರಾಮಪ್ಪ ಬೆಂಡೆಬೆಂಬಳ್ಳಿ, ವ:39, ಜಾ:ಹೊಲೇಯ, ಉ:ಒಕ್ಕಲುತನ ಸಾ:ಕಾಡಂಗೇರಾ (ಬಿ) ತಾ:ವಡಗೇರಾ ಇದ್ದು, ತಮ್ಮಲ್ಲಿ ಸಲ್ಲಿಸುವ ದೂರು ಅಜರ್ಿಯೇನಂದರೆ ನಾನು ಒಕ್ಕಲುತನ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತೇನೆ. ಹೀಗಿದ್ದು ನಿನ್ನೆ ದಿನಾಂಕ: 04/03/2021 ರಂದು ಮುಂಜಾನೆ ನಾನು ಮತ್ತು ನನ್ನ ಹೆಂಡತಿ ರೇಣುಕಾ ಇಬ್ಬರೂ ಸಂತೆ ಮಾಡಿಕೊಂಡು ಬರಲು ಶಹಾಪೂರಕ್ಕೆ ಹೋದೆವು. ಶಹಾಪೂರದಲ್ಲಿ ನಾವು ಸಾಯಂಕಾಲದ ವರೆಗೆ ಸಂತೆ ಮಾಡಿಕೊಂಡು ಮರಳಿ ಸಾಯಂಕಾಲ 4 ಗಂಟೆ ಸುಮಾರಿಗೆ ನಮ್ಮೂರಿಗೆ ಬರಲು ಶಹಾಪೂರ ಬಸ್ ನಿಲ್ದಾಣ ಹತ್ತಿರ ಹೋದಾಗ ಅಲ್ಲಿ ಹೊರಗಡೆ ನಮ್ಮೂರಿಗೆ ಹೋಗುವ ಟಂ ಟಂ ಅಟೋಗಳು ಸಾಲಾಗಿ ನಿಂತಿದ್ದು, ನಮ್ಮೂರ ಸಿದ್ದಪ್ಪ ತಂದೆ ಗುಡುಮಂತ ಊಲ್ಟಿ ಈತನು ನನ್ನ ಟಂ ಟಂ ಅಟೋದಲ್ಲಿ ಕೂಡ್ರಿ ಎಂದು ಹೇಳಿದ, ಆದರೆ ಅವನ ಅಟೋದಲ್ಲಿ ಯಾರೂ ಪ್ರಯಾಣಿಕರು ಕುಳಿತಿರಲಿಲ್ಲ. ಅದಕ್ಕಾಗಿ ಲೇಟಾಗುತ್ತದೆ ಎಂದು ನಾವು ಮತ್ತೊಂದು ಪ್ರಯಾಣಿಕರು ಕುಳಿತಿರುವ ಟಂ ಟಂ ಅಟೋದಲ್ಲಿ ಕುಳಿತು ಊರಿಗೆ ಬಂದೆವು. ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಊಟ ಮಾಡಿ ಮನೆಯಲ್ಲಿ ಕುಳಿತುಕೊಂಡಿದ್ದೇವು. ಆಗ ನಮ್ಮೂರ ಸಿದ್ದಪ್ಪ ತಂದೆ ಗುಡುಮಂತ ಊಲ್ಟಿ ಜಾ:ಬೇಡರ ಈತನು ಬಂದು ನಮ್ಮ ಮನೆ ಮುಂದೆ ನಿಂತು ನನಗೆ ಹೆಸರು ಹಿಡಿದು ಹೊರಗೆ ಬಾ ಎಂದು ಕರೆದನು. ಆಗ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಏನಾಯಿತು ಎಂದು ಹೊರಗಡೆ ಬಂದಾಗ ಸದರಿ ಸಿದ್ದಪ್ಪನು ನನಗೆ ಲೇ ಭೊಸುಡಿ ಮಗನೆ ಮರ್ಯಾ ಸಾಯಂಕಾಲ ಶಹಾಪೂರದಿಂದ ನನ್ನ ಟಂ ಟಂ ಅಟೋದಲ್ಲಿ ಯಾಕೆ ಬರಲಿಲ್ಲ. ಬೇರೆಯವರ ಅಟೋದಲ್ಲಿ ಹೋಗುತ್ತಿ ಸೂಳೆ ಮಗನೆ ಎಂದು ಜಗಳ ತೆಗೆದವನೆ ನನ್ನ ಎದೆ ಮೇಲಿನ ಅಂಗಿ ಹಿಡಿದು ತನ್ನಲ್ಲಿದ್ದ ಚಾಕುವಿನಿಂದ ನನ್ನ ಎಡ ಕಣ್ಣಿನ ಕೆಳಗೆ ಚುಚ್ಚಿ ರಕ್ತಗಾಯ ಮಾಡಿದನು. ಆಗ ಜಗಳವನ್ನು ನನ್ನ ಹೆಂಡತಿ ರೇಣುಕಾ ಮತ್ತು ಅಲ್ಲಿಯೇ ಇದ್ದ ನಮ್ಮ ಅಣ್ಣತಮ್ಮಕಿಯ ಗಣಪತಿ ತಂದೆ ಸಿದ್ದಪ್ಪ ಕಾಕಲವಾರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿದರು. ಆಗ ಹೊಡೆಯುವುದು ಬಿಟ್ಟ ಅವನು ಇವತ್ತು ಉಳದಿ ಸೂಳೆ ಮಗನೆ ಇನ್ನೊಮ್ಮೆ ಸಿಕ್ಕಾಗ ನಿನಗೆ ಖಲಾಸ ಮಾಡುತ್ತೇನೆ ಎಂದು ಜೀವ ಭಯ ಹಾಕಿ ಹೊದನು. ಆಗ ರಾತ್ರಿಯಾಗಿ, ಸರಕಾರಿ ಆಸ್ಪತ್ರೆಗೆ ಉಪಚಾರಕ್ಕೆ ಹೋಗಲು ವಾಹನ ಸೌಕರ್ಯ ಇಲ್ಲದ್ದರಿಂದ ರಾತ್ರಿ ಮನೆಯಲ್ಲಿಯೇ ಉಳಿದುಕೊಂಡು ಇಂದು ದಿನಾಂಕ:05/03/2021 ರಂದು ಮದ್ಯಾಹ್ನ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬಂದು ಉಪಚಾರ ಕುರಿತು ಸೇರಿಕೆಯಾಗಿರುತ್ತೇನೆ. ಕಾರಣ ಶಹಾಪೂರದಿಂದ ನನ್ನ ಅಟೋದಲ್ಲಿ ಯಾಕೆ ಬಂದಿರುವುದಿಲ್ಲ ಎಂದು ಮೇಲ್ಕಂಡ ಸಿದ್ದಪ್ಪನು ನನ್ನೊಂದಿಗೆ ಜಗಳ ತೆಗೆದು ಅವಾಚ್ಯ ಬೈದು ಚಾಕುವಿನಿಂದ ನನ್ನ ಎಡ ಕಣ್ಣಿನ ಕೆಳಗಡೆ ಹಲ್ಲೆ ಮಾಡಿ ರಕ್ತಗಾಯ ಮಾಡಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ. ಅವನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 31/2021 ಕಲಂ: 504, 324, 506 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 06-03-2021 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080