ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-03-2022


ಹುಣಸಗಿ ಪೊಲೀಸ್ ಠಾಣೆ:-
ಗುನ್ನೆ ನಂ: 14/2022 ಕಲಂ 279, 337, 338, ಐಪಿಸಿ ಸಂ. 187 ಐ.ಎಮ್.ವ್ಹಿ ಕಾಯ್ದೆ : ದಿನಾಂಕ:02/03/2022 ರಂದು ಗಾಯಾಳುದಾರರಿಬ್ಬರೂ ತಮ್ಮೂರಿನಿಂದ ಹೆಬ್ಬಾಳ(ಕೆ) ಪರಮಾನಂದ ದೇವರ ಜಾತ್ರೆಗೆ ಬಂದು ಜಾತ್ರೆ ಮುಗಿಸಿಕೊಂಡು ಮರಳಿ ತಮ್ಮೂರಿಗೆ ಹೋಗಲು ಸಾಂಕಾಲ 16.15 ಗಂಟೆಯ ಸುಮಾರಿಗೆ ಹೆಬ್ಬಾಳ(ಕೆ)-ಸಿದ್ದಾಪೂರ(ಬಿ) ಗ್ರಾಮದ ಮದ್ಯ ರಸ್ತೆಯ ಮೇಲೆ ಹೊರಟಾಗ ಎದರುಗಡೆಯಿಂದ ಒಂದು ಶಿಪ್ಟ್ ಕಾರ್ ನಂ:ಕೆಎ-28 ಡಿ-7358 ನೇದ್ದರ ಚಾಲಕನು ತನ್ನ ಕಾರನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಗಾಯಾಳು ಬಸವರಾಜ ಈತನು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಲಗೆ ಜೋರಾಗಿ ಡಿಕ್ಕಿಕೊಟ್ಟಿದ್ದರಿಂದ ಗಾಯಾಳುಗಳು ಇಬ್ಬರೂ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಗಾಯಾಳು ಕೆರೆಪ್ಪಗೌಡ ಈತನಿಗೆ ಮೊಣಕಾಲಿನ ಕೆಳಗೆ & ಬಲ ಪಾದದ ಮೇಲೆ ಕಾಲು ಮುರಿದಿದ್ದು, ಮೂಗಿಗೆ & ಗದ್ದಕ್ಕೆ ರಕ್ತಗಾಯಗಳಾಗಿದ್ದು, ಬೆನ್ನಿಗೆ ಭಾರಿ ಒಳಪೆಟ್ಟಾಗಿದ್ದು, ಇನ್ನೊಬ್ಬ ಗಾಯಾಳು ಬಸವರಾಜ ಈತನಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು, ಬಲ & ಎಡಕೆನ್ನೆಗೆ ರಕ್ತಗಾಯಗಳಾದ ಬಗ್ಗೆ ಅಪರಾಧ.

 

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 42/2022 ಕಲಂ: 379 ಐ.ಪಿ.ಸಿ ಮತ್ತು 44(1) ಕೆ.ಎಮ್.ಎಮ್.ಸಿ ರೂಲ್ : ಇಂದು ದಿ: 05/03/2022 ರಂದು 6.30 ಪಿಎಮ್ಕ್ಕೆ ಶ್ರೀ ಗಜಾನಂದ ಬಿರಾದಾರ ಪಿ.ಎಸ್.ಐ(ಕಾ.ಸು) ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ಇಂದು ದಿನಾಂಕ: 05/03/2022 ರಂದು 03.30 ಪಿ.ಎಮ್ಕ್ಕೆ ಸಿಬ್ಬಂದಿಯವರಾದ 1) ನಿಂಗಪ್ಪ ಹೆಚ್ ಸಿ 88 2) ಆನಂದ ಪಿಸಿ-43 3) ಸೈಯದ್ ಪಿಸಿ 106 ಹಾಗು ಜೀಪ ಚಾಲಕನಾದ 4) ಪೆದ್ದಪ್ಪಗೌಡ ಪಿಸಿ-214 ನೇದ್ದವರೊಂದಿಗೆ ಕೆಂಭಾವಿ ಪಟ್ಟಣದಲ್ಲಿ ಪೆಟ್ರೋಲಿಂಗದಲ್ಲಿದ್ದಾಗ ಮಾಹಿತಿ ಬಂದಿದ್ದೇನೆಂದರೆ, ಮಾಲಗತ್ತಿ ಕಡೆಯಿಂದ ಗೌಡಗೇರಾ ಕ್ರಾಸ ಕಡೆಗೆ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿಕೊಂಡು ಬರುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಆನಂದ ಪಿಸಿ-43 ರವರ ಮುಖಾಂತರ ಇಬ್ಬರೂ ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡಮನಿ ಹಾಗೂ ಮಕ್ತುಂಸಾಬ ತಂದೆ ಮಾಸುಮಸಾಬ ವಡಕೇರಾ ಸಾ|| ಇಬ್ಬರೂ ಕೆಂಭಾವಿ ಈ ಎರಡು ಜನರಿಗೆ ಕೆಂಭಾವಿ ಠಾಣೆಗೆ ಕರೆಯಿಸಿ ಸದರಿಯವರಿಗೂ ಸಹ ಭಾತ್ಮಿ ವಿಷಯ ತಿಳಿಯಿಸಿ, ಸದರ ಪಂಚರು ಹಾಗೂ ನಾವು ಠಾಣೆಯಿಂದ 04.00 ಪಿ.ಎಮ್ಕ್ಕೆ ಸರಕಾರಿ ಜೀಪ್ ನಂಬರ ಕೆಎ-33 ಜಿ-0228 ನೇದ್ದರಲ್ಲಿ ಹೊರಟು 04.30 ಪಿ.ಎಮ್ಕ್ಕೆ ಗೌಡಗೇರಾ ಕ್ರಾಸಿನಲ್ಲಿ ನಿಂತಾಗ ಮಾಲಗತ್ತಿ ಗ್ರಾಮದ ಕಡೆಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬಂದಿದ್ದು, ಸದರಿ ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದೊಂದಿಗೆ 04.45 ಪಿ.ಎಮ್ ಕ್ಕೆ ಹಿಡಿದು ನಿಲ್ಲಿಸಿ ಅದರ ಚಾಲಕನಿಗೆ ವಿಚಾರಿಸಲು ಆತನು ತನ್ನ ಹೆಸರು ನಾಗಪ್ಪ ತಂದೆ ಭೀಮಪ್ಪ ಬೂದನೂರ ಸಾ|| ಮಾವಿನಮಟ್ಟಿ ಅಂತ ತಿಳಿಸಿದ್ದು, ಆತನಿಗೆ ಮರಳಿನ ಬಗ್ಗೆ ವಿಚಾರಿಸಲಾಗಿ ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಮತ್ತು ಸರಕಾರಕ್ಕೆ ಯಾವದೇ ರಾಜಧನ ಕಟ್ಟಿರುವುದಿಲ್ಲಾ ಅಂತ ತಿಳಿಸಿದ್ದು, ನಂತರ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ ಸ್ವರಾಜ್ಯ-735 ಟ್ರ್ಯಾಕ್ಟರ ಇದ್ದು ಇಂಜಿನ ನಂಬರ ನೋಡಲಾಗಿ ಕೆಎ.33/ಟಿಎ-8651 ಅಂತ ಇದ್ದು ಹಾಗು ಟ್ರೈಲಿಗೆ ಯಾವದೇ ನಂಬರ ಇರಲಿಲ್ಲ ಅದು ನೀಲಿ ಬಣ್ಣದ್ದಾಗಿರುತ್ತದೆ. ಸದರ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು, ನಂತರ ಸದರಿ ಟ್ರ್ಯಾಕ್ಟರ್ ಮಾಲೀಕ ಯಾರು ಅಂತ ಚಾಲಕನಿಗೆ ಕೇಳಿ ತಿಳಿಯಲಾಗಿ ಟ್ರ್ಯಾಕ್ಟ್ರ್ ಚಾಲಕ ಮತ್ತು ಮಾಲೀಕನು ನಾನೇ ಇರುತ್ತೇನೆ ಅಂತ ತಿಳಿಸಿ, ಟ್ರ್ಯಾಕ್ಟರನ್ನು ಅಲ್ಲಿಯೇ ಬಿಟ್ಟು ಕವಳಿ ಹೊಲದಲ್ಲಿ ಓಡಿ ಹೋದನು. ಸದರಿ ಟ್ರಾಕ್ಟರದಲ್ಲಿ ಅಂದಾಜು 1600/- ರೂ ಕಿಮ್ಮತ್ತಿನ ಮರಳು ಇತ್ತು. ಸದರಿ ಟ್ರಾಕ್ಟರನ್ನು 04.45 ಪಿ.ಎಮ್ದಿಂದ 05.45 ಪಿ.ಎಮ್ದವರೆಗೆ ಪಂಚರ ಸಮಕ್ಷಮದಲ್ಲಿ ಪಂಚನಾಮೆಯನ್ನು ಕೈಕೊಂಡು ಸದರಿ ಟ್ರ್ಯಾಕ್ಟರನ್ನು ಮರಳು ಸಮೇತ ಜಪ್ತ ಪಡೆಸಿಕೊಂಡಿದ್ದು ಇರುತ್ತದೆ. ನಂತರ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಒಬ್ಬ ಖಾಸಗಿ ಚಾಲಕನ ಸಹಾಯದಿಂದ 06.30 ಪಿ.ಎಮ್ಕ್ಕೆ ಠಾಣೆಗೆ ತಂದು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಸದರಿ ವರದಿ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 42/2022 ಕಲಂ: 379 ಐಪಿಸಿ & 44(1) ಕೆ.ಎಮ್.ಎಮ್.ಸಿ ರೂಲ್ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ, 43/2022 ಕಲಂ: 143, 147, 341, 323, 504,506 ಸಂಗಡ 149 ಐಪಿಸಿ : ಇಂದು ದಿನಾಂಕ 05.03.2022 ರಂದು 8.15 ಪಿ ಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ವೀಣಾ ಗಂಡ ಶಾಂತಗೌಡ ಮಾಲಿ ಪಾಟೀಲ ವ|| 35 ಜಾ|| ರಡ್ಡಿ ಉ|| ಮನೆಗೆಲಸ ಸಾ|| ಮುದನೂರ [ಕೆ] ತಾ|| ಹುಣಸಗಿ ಇವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ, ನನ್ನ ತವರು ಮನೆ ಸೇಡಂ ತಾಲೂಕಿನ ಕೋಲ್ಡಾ ಗ್ರಾಮವಿದ್ದು ನನಗೆ ದಿನಾಂಕ 05.07.2018 ರಂದು ಮುದನೂರ ಗ್ರಾಮದ ಶಾಂತಗೌಡ ತಂದೆ ಮಾಣಿಕರಡ್ಡೆಪ್ಪಗೌಡ ಮಾಲಿಪಾಟೀಲ ಇವರಿಗೆ ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ನಂತರದ ದಿನದಲ್ಲಿ ನನ್ನ ಗಂಡನವರು ಕಾಯಿಲೆಯಿಂದ ಬಳಲಿ ದಿನಾಂಕ 08.10.2021 ರಂದು ಮೃತಪಟ್ಟಿರುತ್ತಾರೆ. ನನಗೆ ಯಾವದೇ ಮಕ್ಕಳಾಗಿಲ್ಲವಾದ್ದರಿಂದ ನಾನು ನನ್ನ ಗಂಡನ ಪಾಲಿಗೆ ಬಂದ ಒಟ್ಟು 27 ಎಕರೆ ಹೊಲ ಬಂದಿದ್ದು ಅದರಲ್ಲಿ ನನ್ನ ಗಂಡನ ಹೆಸರಿನಲ್ಲಿ ಸವರ್ೆ ನಂಬರ 117 ರಲ್ಲಿ 14 ಎಕರೆ ಹೊಲವಿದ್ದು ಇನ್ನುಳಿದ 13 ಎಕರೆ ಹೊಲ ಪೂರ್ವಜರ ಹೆಸರಿನಲ್ಲಿದ್ದು ಆದರೆ ನನ್ನ ಗಂಡನ ಹೆಸರಿನಲ್ಲಾಗಲೀ ಹಾಗು ನನ್ನ ಹೆಸರಿನಲ್ಲಾಗಲೀ ಮಾಡಿರುವದಿಲ್ಲ. ಆದರೆ ನನ್ನ ಗಮಡನ ಪಾಲಿಗೆ ಬಂದ ಒಟ್ಟು 27 ಎಕರೆ ಹೊಲ ನಾನೇ ಸಾಗುವಳಿ ಮಾಡಿಕೊಂಡು ಹೋಗುತ್ತಿದ್ದೇನೆ. ಅಲ್ಲದೇ ನನ್ನ ಗಂಡನವರ ಹೆಸರಿನಲ್ಲಿ ಒಂದು ಮನೆಯಿದ್ದು ಅದನ್ನು ಸಹ ತಮಗೆ ಮಾಡು ಅಂತ ನನ್ನ ಗಂಡನ ತಮ್ಮಂದಿಯರು ನನಗೆ ತೊಂದರೆ ಕೊಡುತ್ತಾ ಬಂದಿರುತ್ತಾರೆ. ಸದ್ಯ ನಾನು ನಮ್ಮ ಸಂಬಂದಿಕರಾದ ನಿಂಗಾರಡ್ಡಿ ತಂದೆ ಚಂದಪ್ಪಗೌಡ ಸಾ|| ಗೊಟಖಂಡಕಿ ಇವರ ಮಗನಾದ ಚೆನ್ನಾರಡ್ಡಿ ಎಂಬ 11 ವರ್ಷದ ಹುಡುಗನನ್ನು ದತ್ತಕ್ಕೆ ತೆಗೆದುಕೊಂಡಿದ್ದು ಅದೇ ದ್ವೇಶದಿಂದ ನನ್ನ ಗಂಡನ ತಮ್ಮಂದಿರು ಹಾಗು ಅವರ ಮನೆಯವರು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ನಿನ್ನೆ ದಿನಾಂಕ 04.03.2022 ರಂದು 12.30 ಪಿ ಎಮ್ ಸುಮಾರಿಗೆ ನಾನು ನಮ್ಮ ಹೊಲ ಪಾಲಿಗೆ ಮಾಡಿದ ಈರಣ್ಣ ನಾಟೀಕಾರ ಸಾ|| ಮುದನೂರ ಇವರ ಮನೆಗೆ ಹೋಗಿ ಕಡಲಿ ಮಾರಿದರಾಯಿತು ಅಂತ ಮುದನೂರ ಗ್ರಾಮದ ನನ್ನ ಗಂಡನ ಹೆಸರಿನಲ್ಲಿದ್ದ ಮನೆಯ ಮುಂದೆ ಹಾದು ಹೋಗುತ್ತಿದ್ದಾಗ ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದ ನಮ್ಮ ಮೈದುನರಾದ 1] ಚಂದಪ್ಪಗೌಡ ತಂದೆ ಮಾಣಿಕರಡ್ಡೆಪ್ಪಗೌಡ ಮಾಲಿ ಪಾಟೀಲ 2] ಈರಣಗೌಡ ತಂದೆ ಮಾಣಿಕರಡ್ಡೆಪ್ಪಗೌಡ ಮಾಲಿ ಪಾಟೀಲ ಹಾಗು ನಮ್ಮ ಸಂಬಂದಿಕರಾದ 3] ಪೂಜಾ ಗಂಡ ಚಂದಪ್ಪಗೌಡ ಮಾಲಿಪಾಟೀಲ 4] ಶಿವಮ್ಮ ಗಂಡ ವಿಜಯಕುಮಾರ 5] ಅಕ್ಕಮ್ಮ ಗಂಡ ಸಂಗನಗೌಡ 6] ನೀಲಮ್ಮ ಗಂಡ ವಿಶ್ವನಾಥರಡ್ಡಿ ದಿಗ್ಗಿ ಈ ಎಲ್ಲಾ ಜನರು ಗುಂಪು ಕಟ್ಟಿಕೊಂಡು ಬಂದವರೇ ನನಗೆ ತಡೆದು ನಿಲ್ಲಿಸಿ ಏನಲೇ ಸೂಳಿ ನಿನಗೆ ಆಸ್ತಿ ಬೇಕಾ ಹೇಗೆ ಆಸ್ತಿ ತೆಗೆದುಕೊಳ್ಳುತ್ತೀ ನೋಡುತ್ತೇವೆ ಅಂತ ಎಲ್ಲರೂ ಬೈಯುತ್ತಿದ್ದಾಗ ನಾನು ಏಕೇ ಬೈಯುತ್ತೀರಿ ನನ್ನ ಗಂಡನ ಆಸ್ತಿ ಕೇಳಿದರೇ ಏನಾಯಿತು ಅಂತ ಅಂದಾಗ ಈ ಸೂಳೆಯ ಸೊಕ್ಕು ಬಹಾಳ ಆಗಿದೆ ಅಂತ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆದು ನೆಲಕ್ಕೆ ಕೆಡವಿ ಕಾಲಿನಿಂದ ಒದೆಯುತ್ತಿದ್ದಾಗ ನಾನು ನೆಲಕ್ಕೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನನ್ನ ಜೊತೆಯಲ್ಲಿದ್ದ ಶರಣರಡ್ಡಿ ತಂದೆ ಸುಭಾಶ್ಚಂದ್ರರಡ್ಡಿ ಕೋಡ್ಲಾ ಇವರು ಬಂದು ಬಿಡಿಸಿಕೊಂಡಿದ್ದು ಇರುತ್ತದೆ. ನಂತರ ಎಲ್ಲರೂ ನನಗೆ ಹೊಡೆಯುವದನ್ನು ಬಿಟ್ಟು ಸೂಳೇ ಇನ್ನೊಮ್ಮೆ ಆಸ್ತಿ ಅಂತ ನಮ್ಮ ಊರಿಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ಈ ವಿಷಯದಲ್ಲಿ ನಾನು ನನ್ನ ತವರು ಮನೆಯಾದ ಸೇಡಂ ತಾಲೂಕಿನ ಕೋಡ್ಲಾ ಗ್ರಾಮಕ್ಕೆ ಹೋಗಿ ಮನೆಯಲ್ಲಿ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಬಮದು ಈ ದೂರು ಅಜರ್ಿ ನೀಡಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಎಲ್ಲಾ ಜನರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 43/2022 ಕಲಂ 143, 147, 323, 341, 504,506 ಸಂಗಡ 149 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ

ಇತ್ತೀಚಿನ ನವೀಕರಣ​ : 06-03-2022 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080