ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-04-2022


ಸೈದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 45/2022 ಕಲಂ 279, 337, 338 ಐಪಿಸಿ : ಇಂದು ದಿನಾಂಕ 05.04.2022 ರಂದು ಬೆಳಿಗ್ಗೆ 10-30 ಗಂಟೆಗೆ ಚಂದಪ್ಪ ತಂದೆ ನರಸಪ್ಪ ನಿರೆಟ್ಟಿ ಸಾ|| ಅಜಲಾಪೂರ ಇವನು ಠಾಣೆಗೆ ಬಂದು ಹಾಜರಪಡಿಸಿದ ದೂರು ಸಾರಾಂಶವೇನೆಂದರೆ, ದಿನಾಂಕ 04.04.2022 ರಂದು ರಾತ್ರಿ 8.00 ಗಂಟೆಗೆ ದೂರುದಾರ ಮನೆಯಲ್ಲಿದ್ದಾಗ ಆತನ ಅಣ್ಣ ರಮೇಶ ಇವನು ಮನೆಗೆ ಫೋನ ಮಾಡಿ ತನಗೆ ಇಡ್ಲೂರ ಸರಕಾರಿ ಪ್ರೌಢಶಾಲೆ ಹತ್ತಿರ ಅಪಘಾತವಾದ ಸುದ್ದಿ ತಿಳಿಸಿದ್ದರಿಂದ ಅಲ್ಲಿಗೆ ಆತನ ಅಣ್ಣ ಶಂಕರ ಜೊತೆಗೆ ಹೋಗಿ ನೋಡಿದಾಗ ರಮೇಶ ಮತ್ತು ಜೈಗ್ರಾಮ ಗ್ರಾಮದ ನಿಂಗಪ್ಪ ತೊಗರಿ ಇವರು ಮೋಟಾರ ಸೈಕಲ ಅಪಘಾತದಲ್ಲಿ ಕೆಳಗೆ ಬಿದ್ದಿದ್ದು, ಫಿಯರ್ಾದಿ ಅಣ್ಣ ರಮೇಶನಿಗೆ ಬಲಗಾಲು ತೊಡೆ ಮೂಳೆ ಮುರಿದು ಭಾರಿ ರಕ್ತಗಾಯವಾಗಿದ್ದು, ಮೊಣಕಾಲು ಹತ್ತಿರ ರಕ್ತಗಾಯ ಆಗಿತ್ತು. ನಿಂಗಪ್ಪನಿಗೆ ತಲೆಗೆ, ಸೊಂಟಕ್ಕೆ, ಮೊಳಕಾಲಿಗೆ ಭಾರಿ ರಕ್ತಗಾಯ ಆಗಿತ್ತು. ಸದರಿ ಅಪಘಾತ ಹೇಗಾಯಿತು ಅಂತ ರಮೇಶನಿಗೆ ಕೇಳಿದಾಗ ನಾನು, ಜೈಗ್ರಾಮ ಗ್ರಾಮದ ನಮ್ಮ ಸಂಬಂಧಿಕ ನಿಂಗಪ್ಪ ಇವನ ಮೋಟಾರ ಸೈಕಲ ನಂಬರ ಕೆ.ಎ-33, ವಾಯ್-9727 ನೇದ್ದರ ಮೇಲೆ ಜೈಗ್ರಾಮದಲ್ಲಿನ ಚಂದಾಸಾಹೇಬ ದಗರ್ಾ ಉರುಸ್ ನೋಡಲು ಹೊರಟಿದ್ದು, ರಾತ್ರಿ 7-30 ಗಂಟೆಗೆ ನಮಗೆ ಎದುರುಗಡೆಯಿಂದ ಬಂದ ಮೋಟಾರ ಸೈಕಲ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಇಡ್ಲೂರ ಸರಕಾರಿ ಪ್ರೌಢಶಾಲೆ ಹತ್ತಿರ ನಿಂಗಪ್ಪನು ನಡೆಸುತ್ತಿದ್ದ ಮೊಟಾರ ಸೈಕಲ್ಗೆ ಡಿಕ್ಕಿ ಪಡಿಸಿದನು ಅಂತಾ ಮೊಟಾರ ಸೈಕಲ್ ಸವಾರನಿಗೆ ತೊರಿಸಿರುತ್ತಾನೆ. ಸದರಿ ಡಿಕ್ಕಿಪಡಿಸಿದ ಮೊಟಾರ ಸೈಕಲ್ ನೋಡಲಾಗಿ ಹೊಂಡಾ ಶೈನ್ ಇದ್ದು ಅದರ ಚೆಸ್ಸಿ ನಂ-ಒಇ4ಎಅ58ಆಒಊಖಿ082778 ಇರುತ್ತದೆ. ಅದರ ಚಾಲಕನ ಹೆಸರು ವಿಚಾರಿಸಲಾಗಿ ಮಾಳಪ್ಪ ತಂದೆ ಮಹಾದೇವಪ್ಪ ಕರಿನರಸಪ್ಪನೋರ ವಯಾ|| 25 ವರ್ಷ ಜಾ|| ಕುರುಬುರ ಉ|| ಒಕ್ಕಲುತನ ಸಾ|| ದುಪ್ಪಲ್ಲಿ ಗ್ರಾಮ ಅಂತಾ ಗೊತ್ತಾಗಿರುತ್ತದೆ. ಸದರಿಯವನಿಗೆ ಅಪಘಾತದಲ್ಲಿ ಬಲಗಾಲಿನ ಪಾದಕ್ಕೆ ರಕ್ತಗಾಯಗಳಾಗಿದ್ದು, ನಂತರ 108 ಅಂಬುಲೆನ್ಸ್ಗೆ ಕಾಲ್ ಮಾಡಿದ್ದರಿಂದ ಅಲ್ಲಿಗೆ ಬಂದ ಅಂಬುಲೆನ್ಸ್ನಲ್ಲಿ ರಾಯಚೂರ ರೀಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ. ಕಾರಣ ದಿನಾಂಕ: 04-04-2022 ರಂದು ರಾತ್ರಿ 7-30 ಗಂಟೆಗೆ ಜೈಗ್ರಾಂ ಚಂದಾಸಾಹೇಬ್ ಉರುಸ್ಗೆ ಹೊರಟಿದ್ದ ಫಿಯರ್ಾದಿ ಅಣ್ಣ ರಮೇಶ ಈತನು ಕುಳಿತು ಹೊರಟಿದ್ದ ಮೊಟಾರ ಸೈಕಲ್ಗೆ ಅತಿವೇಗ ಮತ್ತು ಅಲಕ್ಷತನದಿಂದ ಎದುರಿಗೆ ಬಂದು ಡಿಕ್ಕಿ ಪಡಿಸಿದ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ರಾಯಚೂರ ರೀಮ್ಸ್ ಆಸ್ಪತ್ರೆಯಿಂದ ಇಂದು ಠಾಣೆಗೆ ಬಂದು ದೂರು ನೀಡಿದ ಬಗ್ಗೆ ಸಾರಾಂಶ ಇದ್ದು, ಸದರಿ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನೆ ನಂಬರ 45/2022 ಕಲಂ 279, 337, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು.

ಇತ್ತೀಚಿನ ನವೀಕರಣ​ : 08-04-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080