ಅಭಿಪ್ರಾಯ / ಸಲಹೆಗಳು


ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06-05-2021

ಕೆಂಭಾವಿ ಪೊಲೀಸ್ ಠಾಣೆ :- 62/2021 ಕಲಂ: 447,379,323,504,506 ಸಂಗಡ 34 ಐಪಿಸಿ : ಇಂದು ದಿನಾಂಕ 05.05.2021 ರಂದು 6 ಪಿಎಮ್ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶೋಭಾಬಾಯಿ ಗಂಡ ದಶರಥಸಿಂಗ್ ಮನಗೂಳಿ ವಯಾ|| 55 ಜಾ|| ರಜಪೂತ ಉ|| ಮನೆಗೆಲಸ ಸಾ|| ಪೊಲೀಸ್ ಠಾಣೆ ಹತ್ತಿರ ತಾಳಿಕೋಟಿ ಆದ ನಾನು ತಮ್ಮಲ್ಲಿ ಬರೆದುಕೊಡುವ ಫಿಯರ್ಾದಿ ಅಜರ್ಿ ಏನಂದರೆ, ನನ್ನ ಹೆಸರಿನಲ್ಲಿ ಮಾಲಗತ್ತಿ ಸೀಮಾಂತರದಲ್ಲಿ ಹೊಲ ಸವರ್ೆ ನಂಬರ 85/ಅ ನೇದ್ದರಲ್ಲಿ 4 ಎಕರೆ ಹೊಲವಿದ್ದು ಸದರಿ ಹೊಲದಲ್ಲಿ ನಾನು ಈ ವರ್ಷ ಕವಳಿ ಬಿತ್ತನೆ ಮಾಡಿದ್ದು ಸದ್ಯ ಅದು ಕಟಾವಿಗೆ ಬಂದಿದ್ದು ಇರುತ್ತದೆ. ಹೀಗಿದ್ದು ಇಂದು ದಿನಾಂಕ 05.05.2021 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ನಾನು ಹಾಗು ನಮ್ಮ ಮಗನಾದ ನಾರಾಯಣಸಿಂಗ್ ಇಬ್ಬರೂ ಕೂಡಿಕೊಂಡು ನಮ್ಮ ಹೊಲದ ಕವಳಿ ರಾಶಿ ಮಾಡಿದರಾಯಿತು ಅಂತ ನಮ್ಮ ಮಾಲಗತ್ತಿ ಸೀಮಾಂತರದಲ್ಲಿರುವ ಹೊಲ ಸವರ್ೆ ನಂಬರ 85/ಅ ನೇದ್ದರಲ್ಲಿ ಹೋಗಿ ನೋಡಲು ಹೊಲದಲ್ಲಿನ ಬತ್ತ ಕಟಾವು ಆಗಿದ್ದು ಕೂಡಲೇ ನಾನು ಹಾಗು ನಮ್ಮ ಮಗನಾದ ನಾರಾಯಣಸಿಂಗ್ ಇಬ್ಬರು ಕೂಡಿಕೊಂಡು ನಮ್ಮ ಜನಾಂಗದವರಾದ 1] ಗಂಗಾರಾಮಸಿಂಗ್ ತಂದೆ ಬಲರಾಮಸಿಂಗ್ 2] ಭರತಸಿಂಗ್ ತಂದೆ ಬಲರಾಮಸಿಂಗ್ 3] ಹೀರಾಸಿಂಗ್ ತಂದೆ ಬಲರಾಮಸಿಂಗ್ ಇವರ ಹತ್ತಿರ ಹೋಗಿ ಕವಳಿ ರಾಶಿಯ ಬಗ್ಗೆ ವಿಚಾರಿಸಲು ಹೌದು ನಾವೇ ರಾಶಿ ಮಾಡಿದ್ದೇವೆ ಈಗ ಏನು ಮಾಡುತ್ತೀರಿ ಸೂಳೇ ಮಕ್ಕಳೇ ಅಂತ ಬೈಯುತ್ತಿದ್ದಾಗ ನಾನು ಯಾಕೇ ಸುಮ್ಮನೇ ಬೈಯುತ್ತಿರಿ ಅಂತ ಅಂದಾಗ ಸದರಿ ಮೂರು ಜನರು ಈ ಸೂಳೇ ಮಕ್ಕಳ ಸೊಕ್ಕು ಬಹಾಳ ಆಗಿದೆ ಅಂತ ನಮ್ಮ ಮಗನಾದ ನಾರಾಯಣಸಿಂಗ್ ಈತನಿಗೆ ಕೈಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈಯ್ದು ಸೂಳೇ ಮಕ್ಕಳೆ ಇನ್ನು ಮುಂದೆ ಈ ಹೊಲದ ವಿಷಯದಲ್ಲಿ ಬಂದರೆ ನಿಮ್ಮ ಜೀವ ಸಹಿತ ಬಿಡುವದಿಲ್ಲ ಅಂತ ಜೀವದ ಭಯ ಹಾಕಿ ಹೋದರು. ನಂತರ ನಾವು ವಿಚಾರಣೆ ಮಾಡಿ ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಕಾರಣ ಮೇಲ್ಕಾಣಿಸಿದ ಮೂರು ಜನರು ನಮ್ಮ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ನನ್ನ ನಾಲ್ಕು ಎಕರೆ ಹೊಲದಲ್ಲಿನ ಸುಮಾರು 160 ಚೀಲ ಕವಳಿ ಅಂದಾಜು ಕಿಮ್ಮತ್ತು 2 ಲಕ್ಷ ನೇದ್ದನ್ನು ಕಳುವು ಮಾಡಿಕೊಂಡು ಹೋಗಿದ್ದು ಅಲ್ಲದೇ ಕೇಳಲು ಹೋದ ನಮಗೆ ಅವಾಚ್ಯವಾಗಿ ಬೈಯ್ದು ಕೈಯಿಂದ ಹೊಡೆಬಡೆ ಮಾಡಿ ಜೀವದ ಭಯ ಹಾಕಿದ್ದು ಕಾರಣ ಸದರ ಮೂರು ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 62/2021 ಕಲಂ 447,379,323,504,506 ಸಂಗಡ 34 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ


ಹುಣಸಗಿ ಪೊಲೀಸ್ ಠಾಣೆ :- 27/2021 3 & 7 ಇಸಿ ಯಾಕ್ಟ : 04/05/2021 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಒಬ್ಬ ವ್ಯಕ್ತಿಯು ಪೋನ್ ಮಾಡಿ ಬುಲೆರೋ ಮ್ಯಾಕ್ಸಿಕ್ಯಾಬ ವಾಹನ ನಂ:ಕೆಎ-33, ಎ-7228 ನೇದ್ದರಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಫಿರ್ಯಾದಿಗೆ ತಿಳಿಸಿದ್ದರಿಂದ ಫಿರ್ಯಾದಿಯು ದಿ:05/05/2021 ರಂದು ರಾತ್ರಿ 00.30 ಗಂಟೆಗೆ ಹೋಗಿ ನೋಡಿದ್ದು, ರಾತ್ರಿ ಆಗಿದ್ದರಿಂದ ಅಲ್ಲಿಯೇ ಇದ್ದು, ಇಂದು ಬೆಳಿಗ್ಗೆ 09.00 ಗಂಟೆಗೆ 2 ಜನ ಪಂಚರಿಗೆ ಕರೆಯಿಸಿ ಸದರಿ ಮ್ಯಾಕ್ಸಿಕ್ಯಾಬದಲ್ಲಿದ್ದ ಸಾರ್ವಜನಿಕ ವಿತರಣಾ ವ್ಯವಸ್ತೆಗೆ ಸೇರಿದ ಪಡಿತರ ಅಕ್ಕಿ 45 ಚೀಲಗಳಲ್ಲಿ ತುಂಬಿದ್ದು, ಅದರಲ್ಲಿ ಒಂದು ಗೋಣಿ ಚೀಲದಲ್ಲಿ 50 ಕೆ.ಜಿ ಅಕ್ಕಿ ಇದ್ದು, ಇನ್ನುಳಿದ 44 ಬೇರೆ ಬೇರೆ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಬಾಯಿ ಕಟ್ಟಿದ್ದು, ಒಟ್ಟು 2235 ಕೆ.ಜಿ ಅಕ್ಕಿ ಅ:ಕಿ:78225/- ರೂ.ಗಳ ಅಕ್ಕಿಯನ್ನು & ಬುಲೆರೋ ಮ್ಯಾಕ್ಸಿಕ್ಯಾಬ ವಾಹನ ನಂ:ಕೆಎ-33, ಎ-7228 ಅ:ಕಿ: 2ಲಕ್ಷ ರೂ.ಗಳು. ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಗೆ 12.30 ಗಂಟೆಗೆ ಬಂದು ದೂರು ನೀಡಿದ್ದು, ದೂರಿನ ಆಧಾರದ ಮೇಲಿಂದ ಠಾಣೆ ಗುನ್ನೆ ನಂ:27/2021 ಕಲಂ. 3 & 7 ಇಸಿ


ಸೈದಾಪೂರ ಪೊಲೀಸ್ ಠಾಣೆ :- 71/2021 ಕಲಂ 379 ಐಪಿಸಿ : ಇಂದು ದಿನಾಂಕ: 05-05-2021 ರಂದು ಬೆಳಿಗ್ಗೆ 10-00 ಗಂಟೆಗೆ ಶ್ರಿ ಭೀಮರಾಯ ಪಿ.ಎಸ್.ಐ ರವರು ಠಾಣೆಗೆ ಹಾಜರಾಗಿ ರಾಂಪೂರ ಹಳ್ಳದಲ್ಲಿ ಮರಳು ತುಂಬಿದ ಎರಡು ಟ್ರ್ಯಾಕ್ಟರಗಳನ್ನು ಜಪ್ತಿ ಮಾಡಿಕೊಂಡು ಜಪ್ತಿಪಂಚನಾಮೆ ಮತ್ತು ಎರಡು ಮರಳು ತುಂಬಿದ ಟ್ರ್ಯಾಕ್ಟರ ಠಾಣೆಗೆ ತಂದು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಕುರಿತು ಒಪ್ಪಿಸಿದ್ದು. ಸದರಿ ಜಪ್ತಿಪಂಚನಾಮೆಯ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.71/2021 ಕಲಂ 379 ಐಪಿಸಿ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 08-05-2021 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080