ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-05-2022
ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 65/2022 ಕಲಂ 279, 337, 338, 304(ಎ) ಐಪಿಸಿ : ಇಂದು ದಿನಾಂಕ 05.05.2022 ರಂದು ಸಮಯ ಮಧ್ಯಾಹ್ನ 2:30 ಗಂಟೆಯ ಸುಮಾರಿಗೆ ಎ-1 ಈತನು ಮೃತ ರಾಮುಲು ತಂದೆ ಹಣಮಂತ ವಾಕೇಟಿ ಎಂಬಾತನಿಗೆ ತನ್ನ ಮೊಟಾರು ಸೈಕಲ್ ನಂಬರ ಕೆಎ-33-ವೈ-3708 ನೇದ್ದರ ಮೇಲೆ ಕೂಡಿಸಿಕೊಂಡು ಧರ್ಮಪೂರ ಗ್ರಾಮದಿಂದ ಅನಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು, ಅದೇ ರೀತಿ ಎ-2] ಈತನು ಗಾಯಾಳು ಭೀಮಪ್ಪ ತಂದೆ ಬಾಲಪ್ಪ ಸೈಲಟಿ ಎಂಬಾತನಿಗೆ ತನ್ನ ಮೋಟಾರು ಸೈಕಲ್ ನಂಬರ ಎಪಿ-10-ಎ.ಯು-6909 ನೇದ್ದರ ಮೇಲೆ ಕೂಡಿಸಿಕೊಂಡು ನಸಲವಾಯಿ ಕಡೆಯಿಂದ ಯಾದಗಿರ ಕಡೆಗೆ ಹೋಗುತ್ತಿದ್ದಾಗ ಅತಿವೇಗ ಮತ್ತು ದಿಂದ ಚಲಾಯಿಸಿಕೊಂಡು ಹೋಗಿ ನಿಯಂತ್ರಿಸಲು ಸಾಧ್ಯವಾಗದೇ ಅನಪೂರ ಗ್ರಾಮ-ಮುಸ್ಲೇಪಲ್ಲಿ ಗೇಟ್ಗಳ ನಡುವೆ ರೋಡಿನ ಮೇಲೆ ಪರಸ್ಪರ ಮುಖಾ-ಮುಖಿಯಾಗಿ ಅಪಘಾತ ಪಡಿಸಿದ್ದರಿಂದ ರಾಮುಲು ವಾಕೇಟಿ ಎಂಬಾತನಿಗೆ ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು ಭೀಮಪ್ಪ ಸೈಲಟಿ ಈತನಿಗೆ ಭಾರಿ ರಕ್ತಗಾಯವಾಗಿದ್ದು ಉಳಿದ ಎ-1 & ಎ-2 ಇವರಿಗೆ ಸಾಧಾ ಸ್ವರೂಪದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದ ಬಗ್ಗೆ ಫಿರ್ಯಾದಿಯು ಖೂದ್ದಾಗಿ ಠಾಣೆಗೆ ಬಂದು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ನಾನು ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 65/2022 ಕಲಂ 279, 337, 338, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನ.
ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 47/2022 ಕಲಂ 379 ಐಪಿಸಿ : ಇಂದು ದಿನಾಂಕ 05/05/2022 ರಂದು ಬೆಳಿಗ್ಗೆ 09-30 ಗಂಟೆಯ ಸುಮಾರಿಗೆ ನಾನು ಹಾಗೂ ನಮ್ಮೂರ ವೀರಣ್ಣಗೌಡ ತಂದೆ ನಿಂಗಣ್ಣಗೌಡ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ನಂ ಕೆ.ಎ 33 ವೈ 5274 ನೇದ್ದನ್ನು ತೆಗೆದುಕೊಂಡು ಜಮಾ ಆದ ಹಣದಲ್ಲಿ 5,00,000/- ರೂ|| ಬ್ಯಾಂಕಿನಿಂದ ಡ್ರಾ ಮಾಡೋಣ ಅಂತಾ ಊರಿನಿಂದ ಬಂದೆವು. ಇಂದು ಬೆಳಿಗ್ಗೆ 11-15 ಗಂಟೆಯ ಸುಮಾರಿಗೆ ಯಾದಗಿರಿ ನಗರದ ಸ್ಟೇಷನ್ ರೋಡಿನಲ್ಲಿಯ ಎಸ್.ಬಿ.ಐ ಬ್ಯಾಂಕ್ದಲ್ಲಿ ನನ್ನ ಖಾತೆಯಿಂದ ಹಣ 5,00,000/- ರೂ|| ಗಳನ್ನು ಡ್ರಾ ಮಾಡಿದೆವು. ಅವುಗಳಲ್ಲಿ 2000/- ರೂ|| ಮುಖ ಬೆಲೆಯ 2 ಲಕ್ಷ ರೂಪಾಯಿ, 500/- ರೂ|| ಮುಖಬೆಲೆಯ ಒಂದು ಲಕ್ಷ ರೂಪಾಯಿ ಹಾಗೂ 200/- ರೂ|| ಮುಖ ಬೆಲೆಯ 2 ಲಕ್ಷ ರೂಪಾಯಿಗಳು ಇದ್ದವು. ಇದರಲ್ಲಿ 10,000/ ರೂಪಾಯಿಗಳನ್ನು ನಾನು ಖಚರ್ಿಗೆಂದು ತೆಗೆದುಕೊಂಡು ನನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದು, ಉಳಿದ 4,90,000/- ರೂಪಾಯಿಗಳು ನಾನು ಒಂದು ಪ್ಲಾಸ್ಟಿಕ್ ಕವರನಲ್ಲಿ ಹಾಕಿಕೊಂಡು ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರನಲ್ಲಿ ಇಟ್ಟುಕೊಂಡು ಹೊರಟೆವು. ಯಾದಗಿರಿ ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಹತ್ತಿರ ಇರುವ ವ್ಹಿ.ವ್ಹಿ.ಜಿ ಮೆಡಿಕಲ್ ದಲ್ಲಿ ನಮ್ಮ ಗೌಡ ಟ್ಯಾಬೇಟ್ಸ್ ತೆಗೆದುಕೊಳ್ಳೋಣ ಅಂತಾ ಅಂದಾಗ ನಾವು ನಮ್ಮ ಮೋಟರ್ ಸೈಕಲ್ ಸದರಿ ಮೆಡಿಕಲ್ ಮುಂದೆ ನಿಲ್ಲಿಸಿದೆವು. ವೀರಣ್ಣ ಗೌಡ್ರು ಟ್ಯಾಬ್ಲೇಟ್ ತೆಗೆದುಕೊಳ್ಳಲು ಹೋದಾಗ ನಾನು ನನ್ನ ಮೋಟರ್ ಸೈಕಲ್ ಹತ್ತಿರ ನಿಂತಿದ್ದೆನು. ಯಾರೋ ಒಬ್ಬ ನನ್ನ ಹಿಂದಿನಿಂದ ಬಂದು ರೀ ನಿಮ್ಮ ಹಣ ಬಿದ್ದಾವ ನೋಡ್ರಿ ಅಂತಾ ಅಂದಾಗ ನಾನು ಹಿಂದೆ ತಿರುಗಿ ನೋಡಿದೆನು. ಆಗ ಅಲ್ಲಿ 10, 20, 50 ರೂ|| ಮುಖ ಬೆಲೆಯ 4-5 ನೋಟುಗಳು ಬಿದ್ದದ್ದವು. ಆ ಹಣ ನನ್ನವೇ ಇದ್ದಿರಬಹುದು ಅಂತಾ ತೆಗೆದುಕೊಳ್ಳುತ್ತಿರುವಾಗ ಮೋಟರ್ ಸೈಕಲ್ ಟ್ಯಾಂಕ್ ಕವರನಲ್ಲಿ ಇದ್ದ 4,90,000/- ರೂ|| ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ನನ್ನ ಹಣ, ನನ್ನ ಹಣ ಅಂತಾ ಅನ್ನುತ್ತಿರುವಾಗ ನಮ್ಮ ನಮ್ಮ ಗೌಡ್ರು ಕೂಡ ಬಂದು ನೋಡಿದರು. ಘಟನೆಯ ಬಗ್ಗೆ ಗೌಡ್ರಿಗೆ ಹೇಳಿ ಅಲ್ಲಿ ಸುತ್ತಾ ಮುತ್ತಾ ನೋಡಿದಾಗ ಹಣ ತೆಗೆದುಕೊಂಡವರ ಯಾರ ಸುಳಿವು ಕಾಣಲಿಲ್ಲ. ನನ್ನ ಹಿಂದೆ ಚಿಲ್ಲರೆ ಹಣ ಬಿಸಾಕಿದವರೆ ನನ್ನ ಹಣ ಕಳ್ಳತನ ಮಾಡಿರ ಬಹುದು ಅಂತಾ ಗೊತ್ತಾಯಿತು. ನನ್ನ ಹಿಂದೆ ಹಣ ಬಿಸಾಕಿದವನು ಸಾದಾರಣ ಮೈಕಟ್ಟು ಹೊಂದಿದ್ದು, ನೋಡಲು ಗೋದಿಬಣ್ಣ ಎತ್ತರ ಉಳ್ಳವನಾಗಿದ್ದು, ಪ್ಯಾಂಟ್ ಶಟರ್್ ಧರಿಸಿದ್ದನು. ಸದರಿ ಘಟನೆ ಇಂದು ದಿನಾಂಕ 05/05/2022 ರಂದು 11-30 ಎ.ಎಂ ಸುಮಾರಿಗೆ ಜರುಗಿರುತ್ತದೆ. ಕಾರಣ ಇಂದು ದಿನಾಂಕ 05/05/2022 ರಂದು ನಾನು ನನ್ನ ಎಸ್.ಬಿ.ಐ ಖಾತೆಯಿಂದ 5 ಲಕ್ಷ ರೂಪಾಯಿಗಳು ಡ್ರಾ ಮಾಡಿಕೊಂಡು ಹೋಗುತ್ತಿರುವಾಗ ಇದನ್ನು ನೋಡಿದ ಯಾರೋ ಕಳ್ಳರು ನಮ್ಮನ್ನು ಗಮನಿಸಿ ನಮಗೆ ಪಾಲೋ ಮಾಡಿಕೊಂಡು ಬಂದು ನನ್ನ ಹಿಂದೆ ಚಿಲ್ಲರೆ ಹಣ ಬೇಕೆಂದು ಬಿಸಾಕಿ, ನನ್ನ ಗಮನ ಬೇರೆಡೆ ಸೆಳೆದು ನನ್ನ ಬೈಕ್ ಟ್ಯಾಂಕ್ ಕವರನಲ್ಲಿ ಇಟ್ಟಿದ್ದ ಒಟ್ಟು 4,90,000/- ರೂಪಾಯಿಗಳನ್ನು ನನಗೆ ಗೊತ್ತಿಲ್ಲದಂತೆ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ನನ್ನ ಹಣವನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೋರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 47/2022 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ:-
ಗುನ್ನೆ ನಂ: 61/2022, ಕಲಂ, 341, 323, 504.506. ಸಂ.149 ಐ ಪಿ ಸಿ : ದಿನಾಂಕ: 05-05-2022 ರಂದು ಮದ್ಯಾಹ್ನ 12-00 ಗಂಟೆಗೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೆನೆಂದರೆ ದಿನಾಂಕ: 10-04-2022 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ನಾನು ಅಲ್ಲಿಪೂರ ಸರಕಾರಿ ಆಸ್ಪತ್ರೆಯಲ್ಲಿರುವಾಗ ಅಂಬದಾಸ, ಮಂಜುನಾಥ, ಶರಣಮ್ಮ, ಚೆನ್ನಮ್ಮ ಸುನಿತಾ, ಡಾ|| ಸವಿತಾ ಇವರೆಲ್ಲರು ಅಲ್ಲಿಂದ ತೆಗೆಯುವ ಪ್ರಯತ್ನ ಮಾಡಿ ಹೇ ಇಲ್ಲಿ ಯಾಕೆ ಇರುತಿ ಅಂತಾ ಅಂಬದಾಸ ಇವನು ನನಗೆ ಕೈಯಿಂದ ಹೊಡೆದು ಆಸ್ಪತ್ರೆಯಿಂದ ದಬ್ಬಿರುತ್ತಾನೆ, ಆಗ ನಾನು ಅಂಜಿ ಹೋಗುತ್ತಿರುವಾಗ ಶರಣಮ್ಮ ಚೆನ್ನಮ್ಮ, ಸುನಿತಾ ಇವರು ನನಗೆ ಅಡ್ಡಗಟ್ಟಿ ನಿಲ್ಲಿಸಿ ಇನ್ನೊಂದು ಸಲ ಈ ಆಸ್ಪತ್ರೆ ಕಡೆಗೆ ಬಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ. ಡಾ|| ಸವಿತಾ ಈಕೆಯು ಅವರಿಗೆ ಆ ಮುದಕಿಗೆ ಇಲ್ಲಿಂದ ಓಡಿಸಿಬಿಡಿರಿ ಈಕೆಯ ಕಾಲಗ ಸಾಕಾಗಿದೆ ಅಂದು ಆಸ್ಪತ್ರೆಯಲ್ಲಿ ಯಾಕೆ ಇರುತಿ ನಿಮ್ಮ ಮನೆಗೆ ಹೋಗಿ ಇರು ಅಂತಾ ಅವಾಚ್ಯವಾಗಿ ಬೈದಿರುತ್ತಾರೆ ಅಂತಾ ಪಿಯರ್ಾಧಿ ಸಾರಂಶ ಇರುತ್ತದೆ.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ: 279, 337, 338 ಐಪಿಸಿ : ಇಂದು ದಿನಾಂಕ: 05/05/2022 ರಂದು 10 ಎ.ಎಮ್ಕ್ಕೆ ಶ್ರೀ ಬಸವರಾಜ ತಂದೆ ಬಾಲಯ್ಯ ಕರಡಿಗುಡ್ಡ ವ|| 48 ವರ್ಷ ಜಾ|| ಬೇಡರು ಉ|| ಡ್ರೈವರ್ ಸಾ|| ರುಕ್ಮಾಪೂರ ತಾ|| ಸುರಪುರಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ನನಗೆ ಮೂರು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳಿದ್ದು, ಹೀಗೆ ಒಟ್ಟು ನಾಲ್ಕು ಜನ ಮಕ್ಕಳಿರುತ್ತಾರೆ. ಇವರಲ್ಲಿ ಬಾಲಗೌಡ ವ|| 18 ವರ್ಷ ಈತನು 3 ನೇಯವನಿದ್ದು ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾನೆ. ಹೀಗಿದ್ದು ದಿನಾಂಕ: 01/05/2022 ರಂದು ಮದ್ಯಾಹ್ನ 3 ಗಂಟೆಗೆ ಸುಮಾರಿಗೆ ನಾನು ನನ್ನ ಆಟೋ ತೆಗೆದುಕೊಂಡು ಬಾಡಿಗೆಗಾಗಿ ಸುರಪುರದ ವೆಂಕಟಪ್ಪ ನಾಯಕ ಚೌಕ್ಗೆ ಹೋಗಿದ್ದೇನು. ನಂತರ ಸಾಯಂಕಾಲ 4-10 ಗಂಟೆ ಸುಮಾರಿಗೆ ನಾನು ವೆಂಕಟಪ್ಪ ನಾಯಕ ಚೌಕ್ ಹತ್ತಿರ ಇರುವಾಗ ನಮ್ಮ ಗ್ರಾಮದ ತಿರುಪತಿ ತಂದೆ ಮಾನಪ್ಪ ಉಪ್ಪಾರ ಈತನು ನನಗೆ ಪೋನ್ ಮಾಡಿ ವಿಷಯ ತಿಳಿಸಿದ್ದೆನೆಂದರೆ, ಇಂದು ಸಾಯಂಕಾಲ 4 ಗಂಟೆ ಸುಮಾರಿಗೆ ನಿನ್ನ ಮಗನಾದ ಬಾಲಗೌಡ ಮತ್ತು ನಿನ್ನ ಮೊಮ್ಮಗನಾದ ಹುಲಗಪ್ಪ ಇವರಿಬ್ಬರೂ ನಮ್ಮೂರ ನಿಜಲಿಂಗಪ್ಪ ತಂದೆ ಬಸಣ್ಣ ಬೂದಳ್ಳಿ ಇವರ ಮನೆಯ ಮುಂದಿನ ಸಿಸಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ ಮೋಟರ್ ಸೈಕಲ್ ನಂ. ಕೆಎ-33. ಎಸ್.-0641 ನೇದ್ದರ ಮೇಲೆ ಮಾತನಾಡುತ್ತಾ ಕುಳಿಕೊಂಡಿದ್ದಾಗ ಅದೇ ಸಮಯಕ್ಕೆ ರುಕ್ಮಾಪುರ್ ಬಸ್ ನಿಲ್ದಾಣದ ಕಡೆಯಿಂದ ಒಬ್ಬ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ್ ನಂ. ಕೆಎ-33. ಟಿಎ-5629 ನೇದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಹಿಂದಕ್ಕೆ ರಿವರ್ಸ ತೆಗೆದುಕೊಂಡು ಬಂದವನೆ ನಿಂತ ಮೋಟರ್ ಸೈಕಲಗೆ ಜೋರಾಗಿ ಡಿಕ್ಕಿ ಪಡಿಸಿದ್ದು, ಡಿಕ್ಕಿಡಿಸಿದ ರಭಸಕ್ಕೆ ಮೋಟರ್ ಸೈಕಲದ ಮೇಲೆ ಕುಳಿತ ನಿನ್ನ ಮಗ ಬಾಲಗೌಡ ಮತ್ತು ಮೊಮ್ಮಗನಾದ ಹುಲಗಪ್ಪ ಇಬ್ಬರು ಟ್ರ್ಯಾಕ್ಟರಗೆ ಜೋಡಿಸಿದ ಕಬ್ಬಿಣದ ನೇಗಿಲು ಜೋರಾಗಿ ಬಡಿದು, ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದಿದ್ದು, ಅದೆ ಸಮಯಕ್ಕೆ ಅಲ್ಲೆ ಇದ್ದ ನಾನು ಇವರಿಬ್ಬರನ್ನು ಎಬ್ಬಿಸಿ ನೋಡಲಾಗಿ ನಿನ್ನ ಮಗ ಬಾಲಗೌಡನಿಗೆ ಎರಡು ಕಾಲುಗಳ ತೊಡೆಗೆ ಮತ್ತು ಬಲಗಾಲ ಪಾದಕ್ಕೆ ತರಚಿತ ಗಾಯಗಳಾಗಿರುತ್ತವೆ ಹಾಗೂ ನಿನ್ನ ಮೊಮ್ಮಗನಾದ ಹುಲಗಪ್ಪ ಈತನಿಗೆ ತಲೆಗೆ ಬಾರಿ ರಕ್ತಗಾಯವಾಗಿ ಚರ್ಮ ಕಿತ್ತಿದ್ದು, ಬಾಯಿಗೆ ಬಾರಿ ರಕ್ತಗಾಯವಾಗಿದ್ದು, ಬಲ ಕಿವಿಯ ಹತ್ತಿರ ಮತ್ತು ಬಲಗಣ್ಣಿನ ಹುಬ್ಬಿಗೆ ತರಚಿದ ರಕ್ತಗಾಯಗಳಾಗಿರುತವೆ. ಹಾಗೂ ಎಡಗೈ ಮುಂಗೈಗೆ ಗುಪ್ತಗಾಯ, ಹೊಟ್ಟಗೆ, ಎದೆಗೆ, ಎರಡು ಭುಜಗಳಿಗೆ ತರಚಿದಗಾಯಗಳಾಗಿರುತ್ತವೆ ನೀನುಬೇಗನೆ ಬಾ ಅಂತಾ ಹೇಳಿದಾಗ ನಾನು ಗಾಬರಿಗೊಂಡು ನನ್ನ ಆಟೋ ತೆಗೆದುಕೊಂಡು ಘಟನಾ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗ ಬಾಲಗೌಡ ಮತ್ತು ಮೊಮ್ಮಗನಾದ ಹುಲಗಪ್ಪ ಇಬ್ಬರಿಗೂ ಈ ಮೇಲೆ ಹೇಳಿದಂತೆ ಗಾಯಗಳಗಿದ್ದವು. ಸದರಿ ಅಪಘಾತ ಪಡಿಸಿದ ಟ್ರ್ಯಾಕ್ಟರ್ ಚಾಲಕನು ಅಲ್ಲೆ ಇದ್ದು ಅವನ ಹೆಸರು, ವಿಳಾಸ ವಿಚಾರಿಸಲಾಗಿ ಮರೆಪ್ಪ ತಂದೆ ರಾಮಣ್ಣ ಸಾ|| ಹಾಲಗೇರಾ ತಾ|| ಸುರಪುರ ಅಂತಾ ಗೊತ್ತಾಯಿತು. ನಂತರ ನಾನು, ನನ್ನ ಅಣ್ಣತಮಕಿಯಾದ ಮಲ್ಲಣ್ಣ ತಂದೆ ರಾಮಣ್ಣ ನವಲಗುಡ್ಡ, ಹಾಗೂ ನನ್ನ ಅಳಿಯಂದಿರರಾದ ರಾಮಣ್ಣ ತಂದೆ ಬಾಲಯ್ಯ ಜಾಲಹಳ್ಳಿ, ಆನಂದ ತಂದೆ ಬಾಲಯ್ಯ ಜಾಲಹಳ್ಳಿ ಎಲ್ಲರೂ ಕೂಡಿ ಗಾಯಗೊಂಡವರನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಸುರಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿ ಪ್ರಥಮ ಉಪಚಾರ ಮಾಡಿಸಿ, ನಂತರ ವೈಧ್ಯಾಧಿಕಾರಿಗಳ ಸಲಹೆ ಮೇರೆಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಹೋಗಲು ಸೂಚಿಸಿದ ಮೇರೆಗೆ ನಾವು ಕಲಬುರಗಿಯ ಜೇಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ, ಅಲ್ಲಿ ಉಪಚಾರ ಮಾಡಿಸಿಕೊಂಡು ನಂತರ ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ. ಗಾಯಾಳುದಾರರಿಗೆ ಉಪಚಾರ ಪಡಿಸಿ, ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ.ಕಾರಣ ಅಪಘಾತ ಪಡಿಸಿದ ಟ್ರ್ಯಾಕ್ಟರ್ ನಂ. ಕೆಎ-33 ಟಿಎ-5629 ನೇದ್ದರ ಚಾಲಕ ಮರೆಪ್ಪ ತಂದೆ ರಾಮಣ್ಣ ಸಾ|| ಹಾಲಗೇರಾ ತಾ|| ಸುರಪುರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 69/2022 ಕಲಂ: 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ.ಆರ್.ಆಕ್ಟ : ಇಂದು ದಿನಾಂಕ:05/05/2022 ರಂದು 5:30 ಪಿ.ಎಂ.ಕ್ಕೆ ಠಾಣೆಯಲ್ಲಿದ್ದಾಗ ಸರಕಾರಿ ತಪರ್ೆ ಪಿಯರ್ಾದಿರಾದ ಶ್ರೀ ಸುನೀಲ್ ವಿ ಮೂಲಿಮನಿ ಪಿಐ ಸಾಹೇಬರು ಸುರಪೂರ ಠಾಣೆ ರವರು ಠಾಣೆಗೆ ಹಾಜರಾಗಿ ಜಪ್ತಿ ಪಂಚನಾಮೆ ಹಾಜರುಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:05/05/2022 ರಂದು ಮದ್ಯಾಹ್ನ 2 ಪಿಎಮ್ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಖಚಿತವಾದ ಮಾಹಿತಿ ಬಂದಿದ್ದೆನೆಂದರೆ, ಯಾರೋ ಒಬ್ಬ ವ್ಯಕ್ತಿ ತನ್ನ ಹಿಟಾಚಿ ಮುಖಾಂತರ ಸೂಗೂರ ಮತ್ತು ಚೌಡೇಶ್ವರಹಾಳ ಸೀಮಾಂತರದ ಕೃಷ್ಣಾ ನದಿ ಪಾತ್ರದಿಂದ ಮರಳನ್ನು ಕಳ್ಳತನದಿಂದ ಸಂಗ್ರಹಣೆ ಮಾಡುತ್ತಿದ್ದಾನೆ ಅಂತಾ ಮಾಹಿತಿ ತಿಳಿದು ಬಂದ ಮೇರೆಗೆ ಠಾಣೆಯಲ್ಲಿದ್ದ ಸಿಬ್ಬಂದಿಯವರಾದ 1) ಶ್ರೀ ಹೊನ್ನಪ್ಪ ಸಿಪಿಸಿ-427, 2) ಶ್ರೀ ಮೈಹಿಬೂಬಅಲಿ ಹೆಚ್ಸಿ-83, 3) ಶ್ರೀ ಬಸವರಾಜ ಸಿಪಿಸಿ-395 ಮತ್ತು ಜೀಪ್ ಚಾಲಕ ಮಲಕಾರಿ ಎಹೆಚ್ಸಿ-07 ಇವರಿಗೆ ವಿಷಯ ತಿಳಿಸಿ ಹೊನ್ನಪ್ಪ ಪಿಸಿ ರವರಿಗೆ ಇಬ್ಬರು ಪಂಚರನ್ನು ಬರಮಾಡಿಕೊಂಡು ಬರಲು ಸೂಚಿಸಿದ ಮೇರೆಗೆ ಸದರಿ ಹೊನ್ನಪ್ಪ ಸಿಪಿಸಿ ರವರು ಇಬ್ಬರು ಪಂಚರಾದ 1) ಹಣಮಂತ ತಂದೆ ರಾಮಕೃಷ್ಣ ನಾಯಕ ವ|| 23 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಮ್ಯಾಗೇರಿ ಓಣಿ ಸುರಪುರ 2) ಹೊನ್ನಪ್ಪ ತಂದೆ ಮಾನಶಪ್ಪ ದೇಸಾಯಿ ವ|| 25 ವರ್ಷ ಜಾ|| ಬೇಡರ ಉ|| ಒಕ್ಕಲುತನ ಸಾ|| ಉದ್ದಾರ ಓಣಿ ಸುರಪುರ ಇವರನ್ನು 2:30 ಪಿಎಮ್ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿ ಪಂಚರಿಗೆ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚನಾಮೆ ಬರೆಯಿಸಿಕೊಡಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರಿ ಪಂಚರು ಮತ್ತು ಸಿಬ್ಬಂದಿಯವರು ಕೂಡಿಕೊಂಡು ನಮ್ಮ ಸಕರ್ಾರಿ ಜೀಪ ನಂಬರ ಕೆಎ-33 ಜಿ-0238 ನೇದ್ದರಲ್ಲಿ ಕುಳಿತುಕೊಂಡು 2:45 ಪಿ.ಎಂಕ್ಕೆ ಠಾಣೆಯಿಂದ ಹೊರಟು 3:30 ಪಿ.ಎಂ ಸುಮಾರಿಗೆ ಸುಗೂರ-ಚೌಡೇಶ್ವರಾಳ ಸೀಮಾಂತರ ಕೃಷ್ಣಾ ನದಿಯ ಪಾತ್ರದಲ್ಲಿ ಮರೆಯಾಗಿ ನಿಂತು ನೋಡಲಾಗಿ ಕೃಷ್ಣಾ ನದಿ ದಡದಲ್ಲಿ ಹಿಟಾಚಿ ಮೂಲಕ ಒಬ್ಬ ವ್ಯಕ್ತಿ ಮರಳನ್ನು ಸಂಗ್ರಹ ಮಾಡುತ್ತಿದ್ದುದನ್ನು ಖಚಿತಪಡಿಸಿಕೊಂಡು, 3:35 ಪಿಎಮ್ಕ್ಕೆ ನಾವೆಲ್ಲರು ಒಮ್ಮೆಲೆ ದಾಳಿ ಮಾಡಿದಾಗ ಸದರಿ ಹಿಟಾಚಿ ಚಾಲಕನು ಹಿಟಾಚಿಯನ್ನು ಸ್ಥಳದಲ್ಲಿಯೇ ಬಿಟ್ಟು ನಮ್ಮನ್ನು ನೋಡಿ ಓಡಿ ಹೋದನು. ಹಿಟಾಚಿ ಚಾಲಕನನ್ನು ಇನ್ನೊಮ್ಮೆ ನೋಡಿದಲ್ಲಿ ಗುತರ್ಿಸುತ್ತೇನೆ. ನಂತರ ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಥಳದಲ್ಲಿ ಟಾಟಾ ಕಂಪನಿಯ ಹಿಟಾಚಿ ಇದ್ದು, ಅದರ ಮಾಡಲ್ 6ಬಿಟಿ5.9131ಸಿ ಇದ್ದು, ಇಂಜಿನ್ ಸೀರಿಯಲ್ ನಂಬರ ನೋಡಲಾಗಿ 71ಎಮ್84439196 ಅಂತ ಇರುತ್ತದೆ. ಹಿಟಾಚಿಯ ಅ.ಕಿ 10,00,000/- ರೂ. ಇದ್ದು. ಸದರಿ ಹಿಟಾಚಿಯನ್ನು ಪಂಚರ ಸಮಕ್ಷಮ 3:35 ಪಿ.ಎಂ ದಿಂದ 4:35 ಪಿ.ಎಂ ದ ಅವದಿವರೆಗೆ ಜಪ್ತಿ ಪಡಿಸಿಕೊಂಡು, ಜಪ್ತಿ ಪಂಚನಾಮೆಯನ್ನು ಬರೆದುಕೊಂಡಿದ್ದು ಇರುತ್ತದೆ. ಹಿಟಾಚಿಯನ್ನು ನಮ್ಮ ತಾಬಾಕ್ಕೆ ತಗೆದುಕೊಂಡು ಸ್ಥಳದಲ್ಲಿ ಬೆಂಗಾವಲು ಸಿಬ್ಬಂದಿಯವರಿಗೆ ನೇಮಿಸಿ ಮರಳಿ ಠಾಣೆಗೆ 5:30 ಪಿ.ಎಮ್ಕ್ಕೆ ಬಂದಿದ್ದು ಇರುತ್ತದೆ. ಕಾರಣ ಸದರಿ ಹಿಟಾಚಿ ಚಾಲಕ ಮತ್ತು ಮಾಲಿಕನು ಸರಕಾರದ ಸ್ವತ್ತಾದ ನೈಸಗರ್ಿಕ ಮರಳನ್ನು ಕೃಷ್ಣಾ ನದಿಯಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಣೆ ಮಾಡುತ್ತಿದ್ದು, ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು, ಮುಂದಿನ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಕುರಿತು ಜಪ್ತಿ ಪಂಚನಾಮೆಯೊಂದಿಗೆ ಈ ವರದಿಯನ್ನು ನೀಡಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2022 ಕಲಂ 379 ಐ.ಪಿ.ಸಿ. ಮತ್ತು ಕಲಂ.44(1) ಕೆ.ಎಮ್.ಎಮ್.ಸಿ. ಆರ್.ಆಕ್ಟ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 72/2022 ಕಲಂ 78 (3) ಕೆ.ಪಿ ಆಕ್ಟ್ : ಇಂದು ದಿನಾಂಕ 05/05/2022 ರಂದು, ಸಾಯಂಕಾಲ 19-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಶ್ರೀನಿವಾಸ್ ಅಲ್ಲಾಪೂರ ಪಿ.ಐ ಶಹಾಪೂರ ಪೊಲೀಸ್ ಠಾಣೆ ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ವರದಿ ಸಲ್ಲಿದರ ಸಾರಾಂಶವೆನೆಂದರೆ, ಇಂದು ದಿನಾಂಕ 05/05/2022 ರಂದು, ಸಾಯಂಕಾಲ 16-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರದ ಪೊಲೀಸ್ ಠಾಣಾ ವ್ಯಾಪಿ ಹಳಿಸಗರ ಏರಿಯಾದ ಹನುಮಾನ ಗುಡಿಯ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರ ಬರೆದುಕೊಳ್ಳುತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಫಿರ್ಯಾದಿಯವರು ಸರಕಾರಿ ಜೀಪ್ ನಂ ಕೆಎ-33-ಜಿ-0316 ರಲ್ಲಿ ಸಿಬ್ಬಂದಿಯವರಾದ ಶ್ರೀ ಭಾಗಣ್ಣ ಪಿ.ಸಿ 194, ಧರ್ಮರಾಜ ಪಿ.ಸಿ 45, ಭೀಮನಗೌಡ ಪಿ.ಸಿ 402, ಸಿದ್ರಾಮಯ್ಯ ಪಿ.ಸಿ 258 ಹಾಗೂ ಜೀಪ್ ಚಾಲಕ ರುದ್ರಗೌಡ ಎ.ಪಿ.ಸಿ 34 ಮತ್ತು ಇಬ್ಬರೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಆರೋಪಿ ಶ್ರೀಧರ @ ಅಂಬಣ್ಣ ತಂದೆ ಹಣಮಂತ್ರಾಯ ಟಣಖೇದಾರ ಸಾಃ ಹಳಿಸಗರ ಈತನಿಗೆ ಹಿಡಿದು ಅವನ ಹತ್ತಿರವಿದ್ದ ನಗದು ಹಣ 1130-00 ರೂಪಾಯಿ. 2) ಒಂದು ಬಾಲ್ ಪೆನ್. ಅಂ.ಕಿ 00-00 3) ಒಂದು ಮಟಕಾ ನಂಬರ ಬರೆದುಕೊಂಡ ಚೀಟಿ ಅಂ.ಕಿ 00-00. ನೇದ್ದವುಗಳನ್ನು ಜಪ್ತಿ ಪಂಚನಾಮೆ ಮೂಲಕ ಪಂಚರ ಸಮಕ್ಷಮದಲ್ಲಿ ವಶಕ್ಕೆ ಪಡೆದುಕೊಂಡಿದ್ದು ಸದರಿ ಹಣವು ಬುಕ್ಕಿ ದೇವಪ್ಪ ರಾಂಪೂರ ಸಾಃ ಹಳಿಸಗರ ಈತನಿಗೆ ಜಮಾ ಮಾಡಿ ಕೊಡುತ್ತೇನೆ ಆತನು 100 ರೂಪಾಯಿಗೆ 10 ರೂಪಾಯಿ ಕಮೀಷನ್ ಕೊಡುತ್ತಾನೆ ಅಂತಾ ತಿಳಸಿದ್ದು ಸದರಿ ಆರೋಪಿತರಿಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 72/2022 ಕಲಂ 78(3) ಕೆ.ಪಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 73/2022 ಕಲಂ 78 (3) ಕೆಪಿ ಆಕ್ಟ್ : ಇಂದು ದಿನಾಂಕ: 05/05/2022 ರಂದು 8-30 ಪಿ.ಎಮ್ ಕ್ಕೆ ಬಾಬುರಾವ ಪಿ.ಎಸ್.ಐ (ಕಾಸು) ಶಹಾಪೂರ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ: 05/05/2022 ರಂದು ರಂದು 6.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಹಳಿಸಗರ ಗಂಗಾ ನಗರದ ಹನುಮಾನ ಗುಡಿ ಹತ್ತಿರ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ಶ್ರೀ ಶಂಕರಲಿಂಗ ಹೆಚ್.ಸಿ-131 ಮತ್ತು ಶ್ರೀ ಸಿದ್ದಪ್ಪ ಪಿ.ಸಿ-89 ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಶಂಕರಲಿಂಗ ಹೆಚ್.ಸಿ-131 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1) ಶ್ರೀ ರಾಘವೆಂದ್ರ ತಂದೆ ಹಣಮಂತ್ರಾಯ ಒದರಬಾವಿ ವಯಾ: 24 ವರ್ಷ ಜಾತಿ: ಬೇಡರ ಉ: ಗ್ಯಾರೆಜ ಕೆಲಸ ಸಾ: ಗಂಗಾನಗರ ಹಳಿಸಗರ ತಾ: ಶಹಾಪೂರ 2) ಶ್ರೀ ಸಾಹೇಬರೆಡ್ಡಿ ತಂದೆ ನಾರಾಯಣ ಸಾಲಿ ವಯಾ: 18 ವರ್ಷ ಜಾತಿ: ಬೇಡರ ಉ: ಕೂಲಿಕೆಲಸ ಸಾ: ಗಂಗಾ ನಗರ ಹಳಿಸಗರ ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂದಿವರೊಂದಿಗೆ ಠಾಣೆಯಿಂದ 6.30 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 6.45 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 6.50 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಚಂದಣ್ಣ ತಂದೆ ಭೀಮರಾಯ ಟಣಕೆದಾರ ವಯ: 55 ವರ್ಷ ಜಾ: ಬೇಡರ ಉ: ಮಟಕ ಬರೆದುಕೊಳ್ಳುವದು ಸಾ: ಗಂಗಾನಗರ ಸಾ: ಹಳಿಸಗರ ಅಂತಾ ತಿಳಿಸಿದ್ದು ಸದರಿಯವನಿಗೆ ನೀನು ಮಟಕಾ ನಂಬರ ಬರೆದು ಯಾರಿಗೆ ಕೋಡುತ್ತಿ ಅಂತಾ ವಿಚಾರಿಸಲಾಗಿ ಆತನು ಮಲ್ಲು ತಂದೆ ಮಾನಪ್ಪ ಚಂಡು ಸಾ: ಹಳಿಸಗರ ಇವರಿಗೆ ಪೋನ ಮೂಲಕ ನಂಬರ ಕೊಡುತ್ತೇನೆ ಅಂತಾ ತಿಳಿಸಿದನು. ಸದರಿಯವನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 1270 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 6:50 ಪಿ.ಎಮ್ ದಿಂದ 7:50 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಲೈಟಿನ ಬೆಳಕಿನಲ್ಲಿ ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ 8:00 ಪಿ.ಎಮ್.ಕ್ಕೆ ಬಂದು ವರದಿ ತಯಾರಿಸಿ 8:30 ಪಿ.ಎಮ್ ಕ್ಕೆ ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಇರುತ್ತದೆ ಅಂತಾ ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 73/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 55/2022 ಕಲಂ 341, 323, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 05.05.2022 ರಂದು ರಾತ್ರಿ 11.55 ಗಂಟೆಗೆ ಕೆ. ಚಂದ್ರಶೇಖರ ತಂದೆ ಕೆ. ಮರೆಪ್ಪ ಕಾವಲಿ ಸಾ|| ಬಾಡಿಯಾಳ ಗ್ರಾಮ ಠಾಣೆಗೆ ಬಂದು ಲಿಖಿತ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ 05.05.2022 ರಂದು ರಾತ್ರಿ 9-35 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಸ್ನೇಹಿತನಾದ ಚಂದಪ್ಪ ತಂದೆ ಸಿದ್ರಾಮಪ್ಪ ಕಾವಲಿ ಬಾಲಚೇಡ ಮಾಜಿ ತಾಲೂಕಾ ಪಂಚಾಯತ ಸದಸ್ಯರು ಇಬ್ಬರೂ ಕೂಡಿ ಬೆಳಗುಂದಿಯ ಕಾರ್ಯಕ್ರಮವೊಂದಕ್ಕೆ ಹೋಗಲು ಕರಿಬೆಟ್ಟ ಕ್ರಾಸ ಹತ್ತಿರ ರೋಡಿನಂಚಿಗೆ ನಮ್ಮ ಕಾರ್ ವಾಹನ ನಿಲ್ಲಿಸಿ ಮಾತನಾಡುತ್ತಾ ನಿಂತಿದ್ದೆವು. ಅದೇ ವೇಳೆ ರಾಯಚೂರ ಕಡೆಯಿಂದ ಮೋಟಾರ್ ಸೈಕಲ್ ಮೇಲೆ ಬಂದ 3 ಜನ ಸವಾರರು ನಮ್ಮ ಪಕ್ಕಕ್ಕೆ ತಮ್ಮ ಮೋಟಾರ್ ಸೈಕಲ್ ನಿಲ್ಲಿಸಿ ರೋಡಿನ ಮ್ಯಾಲೆ ಕಾರ್ಯಾಕ ನಿಲ್ಲಿಸಿದ್ದಿರಿಲೇ ಅಂತಾ ಏರುಧ್ವನಿಯಲ್ಲಿ ಮಾತನಾಡಿದರು. ಅದಕ್ಕೆ ನಾನು ಕಾರು ರೋಡಿನ ಅಂಚಿಗೆ ಇದೆ ಇಷ್ಟು ದೊಡ್ಡ ಸರ್ಕಲ್ ರೋಡಿನಲ್ಲಿ ನಿನಗೆ ಹೋಗಲಿಕ್ಕೇ ದಾರಿ ಇಲ್ಲ ಏನು ಅಂತಾ ಅಂದ ತಕ್ಷಣ ಅವರಲ್ಲಿ ಒಬ್ಬವ ನನ್ನ ಎದೆ ಮೇಲೆ ಅಂಗಿ ಹಿಡಿದು ರೋಡ ನಿಮ್ಮಪ್ಪನದೇನೋ ಸೂಳೇ ಮಗನೇ ಅಂತ ಬೈದ. ನನ್ನ ಪಕ್ಕದಲ್ಲಿ ನಿಂತಿದ್ದ ಚಂದಪ್ಪ ಕಾವಲಿ ಈತನು ಗಲ್ಲಾ ಬಿಡು ಅಂತಾ ಹೇಳಿ ನನ್ನ ಎದೆ ಮೇಲೆ ಅಂಗಿ ಹಿಡಿದವನ ಕೈ ಹಿಡಿದು ಬಿಡಿಸುವಾಗ 3 ಜನರು ನಮ್ಮ ಮೇಲೆ ಹಲ್ಲೆ ಮಾಡಿ ಕೈಯಿಂದ ಕಪಾಳಕ್ಕೆ ಮತ್ತು ಮುಖಕ್ಕೆ ಹೊಡೆದರು. ಅವರಿಂದ ತಪ್ಪಿಸಿಕೊಂಡು ಹೋಗಬೇಕಂತ ನಾವು ಸೈದಾಪೂರ ರೋಡ ಕಡೆಗೆ ಬರುವಾಗ ನಮ್ಮನ್ನು ಅಡ್ಡಗಟ್ಟಿ ನಿಲ್ಲಿಸಿ, ಸೂಳೇ ಮಕ್ಕಳೇ ನಿಮ್ಮ ಜೀವನೆ ತೆಗಿತೀವಿ ರೋಡ ನಿಮ್ಮಪ್ಪನದೇನ್ ಅಂತ ಬೈದರು. ಅದಕ್ಕೆ ಚಂದಪ್ಪ ಕಾವಲಿ ಈತನು ನಾವು ಇಲ್ಲೇ ಸೈದಾಪೂರ ವಲಯದವರೇ ಅಂತ ಹೇಳುವಾಗ ಕರಿಬೆಟ್ಟ ಸಮೀಪದ ಮುನಗಲ ಶಿವಕುಮಾರ ತನ್ನ ದಾಬಾದ ಕಡೆಯಿಂದ ಬಂದು ಏ ಮಹೇಶ ಅವರ ಸಂಗಡ ಯಾಕ ಕಿರಿಕಿರಿ ಹಚ್ಚಿದ್ದೀ ಅವರು ಬಾಬುರಾವ ಚಿಂಚನಸೂರ ಸಾಹೇಬರ ಅಳಿಯ ಮತ್ತು ಸಂಬಂಧಿ ಇದ್ದಾರೆ ಅಂತಾ ಅಂದ ಅದಕ್ಕೆ ಅವರು ಬಾಬುರಾವ ಚಿಂಚನಸೂರ ನಮ್ಮ ಸೆಂಟಾ ಕಿತ್ತಕ್ಕಾಗಲ್ಲ ಅವನೇನು ಸೂಳೇ ಮಗ ಅಂತ ಹಲ್ಕಾ ಸಲ್ಕಾ ಮಾತಾಡಿ ಸುಮಾರು ಒಂದು ತಾಸಿನವರೆಗೆ ನಮ್ಮನ್ನು ಪ್ರತಿಬಂಧಿಸಿ ಕಿರಿಕಿರಿ ಮಾಡಿದರು ಅದೇ ವೇಳೆ ನಾನು ಸುರೇಶ ತಂದೆ ಮಲ್ಲಿಕಾಜರ್ುನ ಆನಂಪಲ್ಲಿ ಈತನಿಗೆ ಫೋನಮಾಡಿ ವಿಷಯ ತಿಳಿಸಿದ್ದರಿಂದ ಸುರೇಶ ಮತ್ತು ಇನ್ನಿತರರು ಬಂದು ನಮ್ಮನ್ನು ಪಕ್ಕಕ್ಕೆ ಸರಿಸಿದ್ದರಿಂದ ನಾವು ಕಾರ ವಾಹನದಲ್ಲಿ ಸೈದಾಪೂರಕ್ಕೆ ಬಂದೆವು. ನಮ್ಮ ಮೇಲೆ ಹಲ್ಲೆ ಮಾಡಿದವರ ಹೆಸರು 1. ಮಹೇಶ ತಂದೆ ಮಹಾದೇವ ಮಡಿವಾಳ ವಯ|| 25 ವರ್ಷ, ಜಾ|| ಅಗಸರ ಸಾ|| ಕೂಡ್ಲೂರ ಗ್ರಾಮ 2. ಮಂಜು ತಂದೆ ಮಲ್ಲಪ್ಪ ಪೂಜಾರಿ ವಯ|| 19 ವರ್ಷ, ಜಾ|| ಕುರುಬರ ಸಾ|| ರಾಮಸಮುದ್ರ 3. ಇನ್ನೊಬ್ಬನ ಹೆಸರು, ವಿಳಾಸ ಗೊತ್ತಿಲ್ಲ. ಕಾರಣ ನಮ್ಮ ಮೇಲೆ ಹಲ್ಲೆ ಮಾಡಿ ನಮ್ಮನ್ನು ಪ್ರತಿಬಂಧಿಸಿ ಅಸಭ್ಯ ಶಬ್ದಗಳಿಂದ ನಿಂದಿಸಿ ಅಪಮಾನಗೊಳಿಸಿ, ಜೀವಬೆದರಿಕೆ ಹಾಕಿದ 3 ಜನರ ವಿರುದ್ದ ಕ್ರಮ ಜರುಗಿಸಲು ಕೋರಿದೆ ಅಂತಾ ಆಪಾದನೆ.