Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-06-2022


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 69/2022 ಕಲಂ 454, 457, 380 ಐಪಿಸಿ: ನಾನು ಮತ್ತು ನನ್ನ ಹೆಂಡತಿ ಡಾ|| ವೃಂದಾ ರವರು ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿಕೊಂಡಿರುತ್ತೇವೆ. ನಾವು ಮಾತಾಮಾಣಿಕೇಶ್ವರಿನಗರದ ರಾಜಶೇಖರಯ್ಯ ರವರ ಮನೆಯಲ್ಲಿ ಕಳೆದ 04 ವರ್ಷಗಳಿಂದ ಬಾಡಿಗೆಗೆ ಇರುತ್ತೇವೆ. ಹೀಗಿದ್ದು ದಿನಾಂಕ: 03/06/2022 ರಂದು ಕಗದಾಳ ಗ್ರಾಮದಲ್ಲಿ ನಮ್ಮ ಸಂಬಂಧಿಕರ ಮನೆಯಲ್ಲಿ ಜವಳ ಕಾರ್ಯಕ್ರಮ ಇರುವುದರಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ದಿನಾಂಕ:03/06/2022 ರಂದು 04:30 ಎ.ಎಮ್.ಕ್ಕೆ ನಮ್ಮ ಮನೆಯನ್ನು ಕೀಲಿ ಹಾಕಿಕೊಂಡು ಕಗದಾಳಕ್ಕೆ ಹೋಗಿದ್ದೆವು. ಜವಳ ಕಾರ್ಯಕ್ರಮ ಮುಗಿಸಿಕೊಂಡು ಇಂದು ದಿನಾಂಕ:05/06/2022 ರಂದು ಬೆಳಗಿನಜಾವ 03:10 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲಿಗೆ ಹಾಕಿದ್ದ ಕೀಲಿ ಮುರಿದಿದ್ದು ಮತ್ತು ಸೆಂಟರ್ ಲಾಕ್ ಸಹ ಮುರಿದಿದ್ದು, ನಾವು ಗಾಭರಿಯಾಗಿ ಮನೆಯೊಳಗೆ ಹೋಗಿ ನೋಡಲಾಗಿ ಮನೆಯ ಬೆಡ್ ರೂಮಿನಲ್ಲಿದ್ದ ಕಟ್ಟಿಗೆಯ ಅಲಮಾರಿಯು ತೆರೆದಿದ್ದು, ಅದರಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಪರಿಶೀಲಿಸಲಾಗಿ ಅಲಮಾರಿಯಲ್ಲಿಟ್ಟಿದ್ದ ನಗದು ಹಣ ರೂ.300000/ ಮತ್ತು ನನ್ನ ಹಾಗೂ ನನ್ನ ಹೆಂಡತಿಯ ಮತ್ತು ನನ್ನ ಅತ್ತೆಯಾದ ಉಮಾದೇವಿ ಇವರಿಗೆ ಸೇರಿದ ಬಂಗಾರದ ಆಭರಣಗಳಾದ 1] 300 ಗ್ರಾಂ.ಬಂಗಾರದ 05 ಲಾಂಗ್ ಚೈನ್ಗಳು, 2] 180 ಗ್ರಾಂ. ಬಂಗಾರದ 04 ನೆಕ್ಲೆಸ್ಗಳು, 3] 46 ಗ್ರಾಂ. ಬಂಗಾರದ 02 ಬ್ರಾಸ್ಲೈಟ್ಗಳು, 4] 55 ಗ್ರಾಂ. ಬಂಗಾರದ 5 ಜೊತೆ ಓಲೆಗಳು, 5] 18 ಗ್ರಾಂ. ಬಂಗಾರದ 02 ಉಂಗುರಗಳು, 6] 40 ಗ್ರಾಂ. ಬಂಗಾರದ 4 ಬಳೆಗಳು, 7] 30 ಗ್ರಾಂ. ಬಂಗಾರದ 02 ಬಳೆಗಳು, 8] 15 ಗ್ರಾಂ. ಬಂಗಾರದ ಒಂದು ಬಳೆ, 9] ತಲಾ 20. ಗ್ರಾಂ. ಬಂಗಾರದ 04 ಸಿಂಪಲ್ ಲಾಂಗ್ ಚೈನ್ಗಳು ಒಟ್ಟು 80. ಗ್ರಾಂ., 10] ತಲಾ 10. ಗ್ರಾಂ. ಬಂಗಾರದ 03 ಸಿಂಪಲ್ ಲಾಂಗ್ ಚೈನ್ಗಳು ಒಟ್ಟು 30. ಗ್ರಾಂ, ಹೀಗೆ ಒಟ್ಟು 794 ಗ್ರಾಂ. ಬಂಗಾರದ ಆಭರಣಗಳು ಕಾಣಿಸಲಿಲ್ಲ. ಮತ್ತು ನನ್ನ ಹಾಗೂ ನನ್ನ ಹೆಂಡತಿಯ ವಿದ್ಯಾಭ್ಯಾಸ, ವೈದ್ಯಕೀಯ ಶಿಕ್ಷಣ ಮತ್ತು ಆಸ್ತಿಯ ಮೂಲ ದಾಖಲಾತಿಗಳು ಇರಲಿಲ್ಲ. ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲಾ. ಕಾರಣ ದಿನಾಂಕ:03/06/2022 ರಂದು 04:30 ಎ.ಎಮ್. ದಿಂದ ದಿನಾಂಕ:05/06/2022 ರ 03:10 ಎ.ಎಮ್. ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲ ಕೀಲು ಮುರಿದು ಮನೆಯೊಳಗೆ ಪ್ರವೇಶಮಾಡಿ ಮನೆಯ ಬೆಡ್ ರೂಮಿನಲ್ಲಿದ್ದ ಅಲಮಾರಿಯ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ನಗದು ಹಣ ರೂ.3,00,000/- ಮತ್ತು ರೂ.35,73,000/- ಕಿಮ್ಮತ್ತಿನ 794 ಗ್ರಾಂ. ಬಂಗಾರದ ಆಭರಣಗಳು ಹೀಗೆ ಒಟ್ಟು ಅ.ಕಿ.ರೂ 38,73,000/- ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪತ್ತೆಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ 69/2022 ಕಲಂ 454, 457, 380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: ಯು.ಡಿ ಆರ್.ನಂ.07/2022 ಕಲಂ 174 CrPC: ಇಂದು ದಿನಾಂಕ.05/06/2022 ರಂದು 1-00 ಪಿಎಂಕ್ಕೆ ಶ್ರೀ ಮಲ್ಲಿಕಾಜರ್ುನ ತಂದೆ ಬಸಲಿಂಗಪ್ಪ ಈಟೇ ವಃ36 ಜಾಃ ಹೊಲೆಯ ಉಃ ಅಟೋ ಚಾಲಕ ಸಾಃ ಅಂಭೇಡ್ಕರ ನಗರ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ನೀಡಿದ್ದು ಸಾರಾಂಶವನೆಂದರೆ, ನಾನು ಯಾದಗಿರಿ ನಗರದಲ್ಲಿ ಆಟೋಚಾಲನೆ ಮಾಡಿಕೊಂಡು ಉಪಜೀವಿಸುತ್ತೇನೆ. ಹೀಗಿದ್ದು ದಿನಾಂಕ.05/06/2022 ರಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ನಾನು ಯಾದಗಿರಿ ನಗರದ ಹಳೆ ಬಸ್ ನಿಲ್ದಾಣದಲ್ಲಿರುವಾಗ ವಿರಭದ್ರೇಶ್ವರ ನಗರದಲ್ಲಿ ಯಾರೋ ಒಬ್ಬ ಮೃತಪಟ್ಟ ಬಗ್ಗೆ ಸುದ್ದಿ ತಿಳಿದು ನಾನು ಮತ್ತು ಲಕ್ಷ್ಮೀಕಾಂತ ತಂದೆ ತಿಪ್ಪೇಶ ಮ್ಯಾಗೇರಿ 12-15 ಪಿಎಂಕ್ಕೆ ಅಲ್ಲಿಗೆ ಹೋಗಿ ನೋಡಲಾಗಿ ಆತನು ಮೃತಪಟ್ಟಿದ್ದು ಅತನು ಯಾರು ಎಲ್ಲಿಯವನು ಅಂತಾ ತಿಳಿದು ಬಂದಿರುವುದಿಲ್ಲಾ ಹೆಸರು ವಿಳಾಸ ಗೊತ್ತಾಗಿರುವುದಿಲ್ಲ ಸದರಿ ವ್ಯಕ್ತಿ ಅಪರಿಚಿತ ವ್ಯಕ್ತಿಯಾಗಿದ್ದು ಬಿಕ್ಷುಕನಂತೆ ಕಂಡು ಬರುತ್ತಿದ್ದು ಮೃತನಿಗೆ ವಾರಸುದಾರರು ಯಾರು ಇರುವುದಿಲ್ಲ ಅಂತಾ ತಿಳಿದು ಬಂದಿದ್ದು. ಮೃತ ವ್ಯಕ್ತಿಯು ಅಂದಾಜು 50-55 ವರ್ಷ ವಯಸ್ಸಾಗಿದ್ದು ಸಾದಾ ಕಪ್ಪುಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಕಪ್ಪು ಬಿಳಿ ಕೂದಲು, ಮೈಮೇಲೆ ಶರ್ಟ, ಬನಿಯನ್, ಪ್ಯಾಂಟ ಇದ್ದು ಮೃತನು ಬಿಸಿಲಿನಿಂದ ನಿಶಕ್ತನಾಗಿ, ಯಾವುದೋ ಕಾಯಿಲೆಯಿಂದ ಬಳಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಹೊಟ್ಟೆಗೆ ಆಹಾರವಿಲ್ಲದೆ ಅನಾರೋಗ್ಯದಿಂದ ಬಳಲಿ ಮೃತಪಟ್ಟಿರಬಹುದು. ಸದರಿಯವನು ಯಾದಗಿರಿ ನಗರದ ಅಲ್ಲಲ್ಲಿ ಭೀಕ್ಷೆ ಬೇಡುತ್ತಾ ರಾತ್ರಿವೆಳೆಯಲ್ಲಿ ಮಲಗಿರಬಹುದು ಮೃತನು ಎಲ್ಲಿಂದ ಬಂದಿರುತ್ತಾನೆ ಎಂಬುವುದರ ಬಗ್ಗೆ ತಿಳಿದು ಬಂದಿರುವುದಿಲ್ಲಾ. ಸದರಿಯವನು ಇಂದು ದಿನಾಂಕ. 05/06/2022 ರಂದು ನಸುಕಿನ 4-00 ಗಂಟೆಯಿಂದ 10-00 ಗಂಟೆಯ ಮದ್ಯದ ಅವದಿಯಲ್ಲಿ ಮೃತಪಟ್ಟಿರಬಹುದು, ಮೃತ ವ್ಯಕ್ತಿಯು ಅಪರಿಚಿತ ವ್ಯಕ್ತಿಯಾಗಿದ್ದರಿಂದ ನಾನು ಠಾಣೆಗೆ ಬಂದು ದೂರು ನೀಡಿದ್ದು ಮುಂದಿನ ಕಾನೂನು ಕ್ರಮ ಕೊಳ್ಳಲು ವಿನಂತಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಯುಡಿಆರ್ ನಂ.07/2022 ಕಲಂ.174 ಸಿಆರ್ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.

 


ಯಾದಗಿರಿ ಗ್ರಾಮಿಣ ಪೊಲೀಸ್ ಠಾಣೆ:-
ಗುನ್ನೆ ನಂ: 88/2022 ಕಲಂ. 304(ಎ) ಐಪಿಸಿ: ಇಂದು ದಿನಾಂಕ :05-06-2022 ರಂದು 02:00 ಪಿ.ಎಮ್ಕ್ಕೆ ಶ್ರೀ ವಿಧ್ಯಾಸಾಗರ ತಂದೆ ವಿಶ್ವನಾಥ ವಯ:-45 ಉ: ಕಾಮರ್ಿಕ ಸಾ: ಸೊರಬ್ ಪೊ-ಅಲಿಮಾಬಾದ್ ಜಿಲ್ಲೆ: ಮಮದಬಾದ್ ಗೋಹನ ಉತ್ತರ ಪ್ರದೇಶ -276403 ಇದ್ದು. ಈ ಮೂಲಕ ಸಲ್ಲಿಸಸುವ ದೂರಿನ ಸಾರಂಶವೆನಂದರೆ ನನ್ನ ಸಹೋದರನಾದ ಮುರಳಿದರ ಗೌತಮ್ಮ ತಂದೆ ವಿಶ್ವನಾಥ ವಯ:-49 ಉ: ಚಾಲಕ ಸಾ: ಸೊರಬ್ ಪೊ-ಅಲಿಮಾಬಾದ್ ಜಿಲ್ಲೆ: ಮಮದಬಾದ್ ಗೋಹನ ಉತ್ತರ ಪ್ರದೇಶ -276403 ಇದ್ದು ಇವರು ಮಾರುತಿ ಗೂಡ್ಸ ಕಾರಿಯಾರ ಕಂಟೆನೇರ(ಲಾರಿ) ಸಂಖ್ಯೆ ಎಮ್ ಎಚ್ 04/ಜೆಯು/6736 ನಲ್ಲಿ ಚಾಲಕನಾಗಿ ಕಾರ್ಯನಿರ್ವಸುತ್ತಿದ್ದು ಇರುತ್ತದೆ.
ಇವರು ದಿನಾಂಕ:30/05/2022 ರಂದು ಬೆಳಿಗ್ಗೆ 08:00 ಗಂಟೆ ಸುಮಾರಿಗೆ ಮುಂಬೈನಿಂದ ಮಾರುತಿ ಗೂಡ್ಸ ಕಾರಿಯಾರ ಕಂಟೆನೇರ(ಲಾರಿ) ಸಂಖ್ಯೆ ಎಮ್ ಎಚ್ 04/ಜೆಯು/6736 ಯಲ್ಲಿ ಎಲ್ ಇ ಡಿ ವಿಧ್ಯುತ್ತ ಉಪಕರನಗಳನ್ನು ತೆಗದುಕೊಂಡು ಯಾದಗಿರಿ ಇನಸ್ಟೂಟ ಆಫ ಮೇಡಿಕಲ್ ಸೈನ್ಸ ಕಾಲೇಜಿಗೆ ಸರಕನ್ನು ಸರಬರಾಜು ಮಾಡಿ ನಂತರ ದಿನಾಂಕ 04/06/2022 ರಂದು ಮದ್ಯಾಹ್ನ 02:00 ಗಂಟೆಯ ಸುಮಾರಿಗೆ ವಾಪಸು ಬರುವಾಗ ಯಾದಗಿರಿ ಇನಸ್ಟೂಟ ಆಫ ಮೇಡಿಕಲ್ ಸೈನ್ಸ ಕಾಲೇಜಿನ ಮುಂದೆ 400 ಮೀಟರ ನಂತರ ಇರುವ ವಿದ್ಯುತ ಕಂಬದ ವೈರ ಜೋತು ಬಿದ್ದರಿಂದ ಸದರಿ ವಿದ್ಯತ್ತು ವೈರ್ ನನ್ನ ಸಹೋದರನ ಗೂಡ್ಸ ಕಾರಿಯಾರ ಕಂಟೆನೇರ(ಲಾರಿ) ಸಂಖ್ಯೆ ಎಮ್ ಎಚ್ 04/ಜೆಯು/6736 ಇದಕ್ಕೆ ತಾಗಿ ವಿದ್ಯತ್ತ ಅವಗಢದಿಂದ ನನ್ನ ಸಹೋದರ ಮೃತ ಹೊಂದಿದ್ದು ಇರುತ್ತದೆ ಸದರಿ ನನ್ನ ಸಹೋದರನ ಸಾವಿಗೆ ಕಾರ್ಯನಿವರ್ಾಹಕ ಅಭಿಯಂತರರು (ವಿ) ಕಾ ಮತ್ತು ಪಾ ವಿಭಾಗ ಗು.ವಿ.ಸ.ಕಂ.ನಿ ಯಾದಗಿರಿ ಹಾಗು ಅಲ್ಲಿಯೇ ರಸ್ತೆ ನಿಮರ್ಿಸಿದ ಗುತ್ತಿಗೆದಾರ ಇವರ ನಿರ್ಲಕ್ಷದಿಂದ ಘಟನೆ ಜರಿಗಿದ್ದು ಇರುತ್ತದೆ. ಸದರಿ ಘಟನೆಯನ್ನು ಸ್ಥಳದಲ್ಲಿ ಹಾಜರಿದ್ದು ನೋಡಿ ವಿಷಯವನ್ನು ಪೋನ್ ಮೂಲಕ ತಿಳಿಸಿದ್ದರಿಂದ ಇಂದು ದಿನಾಂಕ 05-06-2022 ರಂದು ಉತ್ತರ ಪ್ರದೇಶದಿಂದ ಯಾದಗಿರಿಗೆ ಬಂದು ಈ ದೂರು ಸಲ್ಲಿಸಿದ್ದು ನನ್ನ ಸಹೋದರನ ಸಾವಿಗೆ ಕಾರಣರಾದ ಕಾರ್ಯನಿವರ್ಾಹಕ ಅಭಿಯಂತರರು (ವಿ) ಕಾ ಮತ್ತು ಪಾ ವಿಭಾಗ ಗು.ವಿ.ಸ.ಕಂ.ನಿ ಯಾದಗಿರಿ ಹಾಗು ಅಲ್ಲಿಯೇ ರಸ್ತೆ ನಿಮರ್ಿಸಿದ ಗುತ್ತಿಗೆದಾರನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಿ ಅಂತ ಸಲ್ಲಿಸಿದ ಅಜರ್ಿಯ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 88/2022 ಕಲಂ 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

 

ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 82/2022 ಕಲಂ: 504, 324, 323, 506 ಸಂ 34 ಐಪಿಸಿ|: ಇಂದು ದಿನಾಂಕ:05/06/2022 ರಂದು 5-45 ಪಿಎಮ್ ಕ್ಕೆ ಶ್ರೀ ಹಣಮಂತ ತಂದೆ ಮಲ್ಲಪ್ಪ ಹೊನಗುಡಿ ವ:51, ಜಾ:ಮಾದಿಗ, ಉ:ಒಕ್ಕಲುತನ ಸಾ:ಹಾಲಗೇರಾ ತಾ:ವಡಗೇರಾ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರನಲ್ಲಿ ಟೆಪ ಮಾಡಿದ ದೂರು ಹಾಜರಪಡಿಸಿದ್ದರ ಸಾರಾಂಶವೇನಂದರೆ ನಮ್ಮಣ್ಣ ಯಲ್ಲಪ್ಪನು ಸುಮಾರು ವರ್ಷಗಳ ಹಿಂದೆ ತೀರಿಕೊಂಡಿರುತ್ತಾನೆ. ಸದರಿ ಯಲ್ಲಪ್ಪನಿಗೆ ಮರಿಲಿಂಗಪ್ಪ @ ಮಾಟರ್ಿನ ಅಂತಾ ಮಗನಿದ್ದು, ನಾನು ಮತ್ತು ನಮ್ಮಣ್ಣ ಯಲ್ಲಪ್ಪ ಇಬ್ಬರೂ ಒಂದಲ್ಲಿಯೇ ಇದ್ದೆವು. ನಮ್ಮಣ್ಣ ತೀರಿಕೊಂಡ ನಂತರ ಇತ್ತಿಚ್ಚೆಗೆ ನಮ್ಮಣ್ಣನ ಮಗನಾದ ಮರಿಲಿಂಗಪ್ಪ @ ಮಾಟರ್ಿನ ಈತನಿಗೆ ಮದುವೆ ಆದ ನಂತರ ಅವನು ನಮ್ಮಿಂದ ಬೇರೆಯಾದನು. ಆಗ ನಾವು ಒಂದಲ್ಲಿಯೇ ಇದ್ದಾಗ ಕಟ್ಟಿದ ಹೊಸ ಮನೆ ಅವನ ಪಾಲಿಗೆ ಕೊಟ್ಟೆವು. ಹಳೆ ಮನೆ ನಮ್ಮ ಪಾಲಿಗೆ ಬಂದಿರುತ್ತದೆ. ಹೊಸ ಮನೆ ಬಾಬ್ತು ಅವನು 8 ಲಕ್ಷ ರೂ. ಹಣವನ್ನು 2 ವರ್ಷದ ನಂತರ ನಮಗೆ ಕೊಡಬೇಕೆಂದು ಮಾತುಕತೆಯಾಗಿತ್ತು. ಅದರಂತೆ ಈಗ ಬೇರೆಯಾಗಿ ಸುಮಾರು 2 ವರ್ಷ ಮೇಲ್ಪಟ್ಟಾಗಿರುವುದರಿಂದ ನಮಗೆ ಕೊಡಬೇಕಾದ ದುಡ್ಡು ಕೊಡು ಎಂದು ಕೇಳಿದರೆ ಮರಿಲಿಂಗಪ್ಪ @ ಮಾಟರ್ಿನ ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ನೆಪ ಹೇಳುತ್ತಾ ಬರುತ್ತಿದ್ದನು. ಹೀಗಿದ್ದು ಇಂದು ದಿನಾಂಕ:05/06/2022 ರಂದು ಬೆಳಗ್ಗೆ 11:00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಕೃಷ್ಣಮ್ಮ ಇಬ್ಬರು ನಮ್ಮ ಮನೆ ಮುಂದೆ ಇದ್ದಾಗ ನಮ್ಮಣ್ಣನ ಮಗನಾದ 1) ಮರಿಲಿಂಗಪ್ಪ @ ಮಾಟರ್ಿನ ತಂದೆ ಯಲ್ಲಪ್ಪ ಹೊನಗುಡಿ ಅವನ ಹೆಂಡತಿಯಾದ 2) ರೇಣುಕಾ ಗಂಡ ಮರಿಲಿಂಗಪ್ಪ @ ಮಾಟರ್ಿನ ಹೊನಗುಡಿ ಇಬ್ಬರೂ ಸಾ:ಹಾಲಗೇರಾ ಇವರಿಬ್ಬರೂ ಸೇರಿಕೊಂಡು ಬಂದವರೆ ನನಗೆ ಈ ಭೊಸುಡಿ ಮಗ ನಮಗೆ ದುಡ್ಡು ಕೊಡು ಎಂದು ದಿನಾಲೂ ಪೀಡಿಸುತ್ತಿದ್ದಾನೆ ಇವನಿಗೆ ಇವತ್ತು ಒಂದು ಗತಿ ಕಾಣಿಸಿಯೇ ಬಿಡೋಣ ಇವನ ಸೊಕ್ಕು ಬಹಳ ಆಗಿದೆ ಎಂದು ಜಗಳ ತೆಗೆದವರೆ ರೇಣುಕಾ ಇವಳು ನನ್ನ ಎರಡು ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಅವಳ ಗಂಡನಾದ ಮರಿಲಿಂಗಪ್ಪ @ ಮಾಟರ್ಿನ ಈತನು ಅಲ್ಲಿಯೇ ಬಿದ್ದ ಕಟ್ಟಿಗೆ ತೆಗೆದುಕೊಂಡು ನನ್ನ ತಲೆ ಬಲಭಾಗಕ್ಕೆ ಹೊಡೆದು ರಕ್ತಗಾಯ ಮಾಡಿದನು. ಅದೇ ಕಟ್ಟಿಗೆಯಿಂದ ಬಲ ಭುಜಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಜಗಳ ಬಿಡಿಸಲು ಬಂದ ನನ್ನ ಹೆಂಡತಿಗೆ ರೇಣುಕಾ ಇವಳು ಕೈ ಹಿಡಿದು ಜಗ್ಗಿ ಕಪಾಳಕ್ಕೆ ಹೊಡೆದಳು. ಆಗ ಜಗಳವನ್ನು ಅಲ್ಲಿಯೇ ಇದ್ದ ನಮ್ಮೂರ ನಿಂಗಪ್ಪ ತಂದೆ ಸಾಬಣ್ಣ ನಾಯ್ಕೋಡಿ, ಬಾಲಪ್ಪ ತಂದೆ ಹಣಮಂತ ಗೋವಿಂದೋರ ಇವರಿಬ್ಬರೂ ಬಂದು ಬಿಡಿಸಿರುತ್ತಾರೆ. ಆಗ ಹೊಡೆಯುವುದು ಬಿಟ್ಟ ಅವರು ಇವತ್ತು ಉಳದಿ ಸೂಳೆ ಮಗನೆ ಇನ್ನೊಂದು ಸಲ ದುಡ್ಡು ಕೇಳಲು ಬಂದರೆ ನಿನಗೆ ಮತ್ತು ನಿನ್ನ ಹೆಂಡತಿಗೆ ಖಲಾಸ ಮಾಡುತ್ತೇವೆ ಎಂದು ಜೀವ ಬೆದರಿಕೆ ಹಾಕಿದರು. ಕಾರಣ ಬೇರೆಯಾಗುವ ಕಾಲಕ್ಕೆ ಮಾತಾಡಿದ ಪ್ರಕಾರ ಹೊಸ ಮನೆ ಬಾಬ್ತು ಹಣ ಕೊಡು ಎಂದು ಕೇಳಿದರೆ ಜಗಳ ತೆಗೆದು ಹೊಡೆಬಡೆ ಮಾಡಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 82/2022 ಕಲಂ: 504, 324, 323, 506 ಸಂ 34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

Last Updated: 06-06-2022 10:46 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080