ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 06-07-2021

ಕೊಡೇಕಲ್ ಪೊಲೀಸ್ ಠಾಣೆ
ಗುನ್ನೆ ನಂ :41/2021 ಕಲಂ: 279, 304(ಎ) ಐಪಿಸಿ ಸಂ 187 ಐಎಮ್ವಿ ಕಾಯ್ದೆ : ದಿನಾಂಕ:05.07.2021 ರಂದು ಬೆಳಿಗ್ಗೆ 06:30 ಗಂಟೆಗೆ ಪಿರ್ಯಾಧಿ ಶ್ರೀಮತಿ. ಶರಣಮ್ಮ ಗಂಡ ಭೀಮಣ್ಣ ಬಿಜಾಪೂರ ವ:25 ವರ್ಷ ಜಾ: ಹಿಂದೂ ಬೇಡರ ಉ:ಕೂಲಿಕೆಲಸ ಸಾ: ಕೊಡೆಕಲ್ಲ ಹಾ.ವ. ಹುಲಿಕೇರಿ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯನ್ನು ಹೇಳಿ ಗಣಕಯಂತ್ರದಲ್ಲಿ ಹೇಳಿ ಟೈಪ್ ಮಾಡಿಸಿದ್ದು. ಸದರ ಪಿರ್ಯಾದಿಯ ಹೇಳಿಕೆಯ ಸಾರಾಂಶವೆನೆಂದರೆ ನಾನು ಗಂಡ ಮಕ್ಕಳೊಂದಿಗೆ ಕೂಲಿಕೆಲಸ ಮಾಡಿಕೊಂಡು ಉಪಜೀವಿಸುತ್ತಿದ್ದು. ನನ್ನ ತವರೂರು ಹುಲಿಕೇರಿ ಗ್ರಾಮವಿದ್ದು ಈಗ 7 ವರ್ಷಗಳ ಹಿಂದೆ ಕೊಡೆಕಲ್ಲ ಗ್ರಾಮದ ಭೀಮಣ್ಣ ತಂದೆ ಯಮನಪ್ಪ ಬಿಜಾಪೂರ ಇವರೊಂದಿಗೆ ನನ್ನ ಮದುವೆಯಾಗಿದ್ದು ನನ್ನ ಗಂಡನಿಗೆ ಸಂಗಪ್ಪ, ಯಂಕಪ್ಪ ಅಂತ ಇಬ್ಬರೂ ಅಣ್ಣಂದಿರಿದ್ದು ಮೂರು ಜನ ಅಣ್ಣತಮ್ಮಂದಿರದು ಮದುವೆಯಾಗಿದ್ದು ಎಲ್ಲರೂ ತಮ್ಮ ತಮ್ಮ ಕುಟುಂಬದೊಂದಿಗೆ ಬೇರೆ ಬೇರೆ ಮನೆ ಮಾಡಿಕೊಂಡಿದ್ದು ನಾನು ಮತ್ತು ನನ್ನ ಗಂಡ ಇಬ್ಬರೂ ನಮ್ಮ ಮದುವೆಯಾದ ನಂತರ ನನ್ನ ತವರೂರಾದ ಹುಲಿಕೇರಿಯಲ್ಲಿ ಇದ್ದು ನನಗೆ ಭಾಗಪ್ಪ, ಚಂದ್ರಶೇಖರ, ರಾಧಿಕಾ ಅಂತ ಮೂರು ಜನ ಮಕ್ಕಳು ಇರುತ್ತಾರೆ. ಹೀಗಿದ್ದು ನಿನ್ನೆ ದಿನಾಂಕ 04.07.2021 ರಂದು ಸಾಯಂಕಾಲ 6:00 ಗಂಟೆಯ ಸುಮಾರಿಗೆ ನನ್ನ ಗಂಡ ಭೀಮಣ್ಣ ತಂದೆ ಯಮನಪ್ಪ ಬಿಜಾಪೂರ ವ:28 ವರ್ಷ ಇವರು ಮನೆಯಲ್ಲಿದ್ದಾಗ ನಮ್ಮೂರ ಮಲ್ಲಪ್ಪ ತಂದೆ ಮುದಕಪ್ಪ ಪೂಜಾರಿ ಇವರು ನಮ್ಮ ಮನೆಗೆ ಬಂದು ನಾನು ಕೊಡೆಕಲ್ಲಕ್ಕೆ ಖಂಡ ತರಲು ಹೋಗುತ್ತೇನೆ ನೀನು ಬರುತ್ತಿಯೆನು ಅಂತ ನನ್ನ ಗಂಡನಿಗೆ ಕೇಳಿದ್ದು ನನ್ನ ಗಂಡನು ನಾನು ಕೂಡ ಖಂಡ ತರಲು ಬರುತ್ತೇನೆ ಅಂತ ಅಂದಿದ್ದು ನಂತರ ನನ್ನ ಗಂಡ ಹಾಗೂ ಮಲ್ಲಪ್ಪ ಪೂಜಾರಿ ಇಬ್ಬರೂ ಕೂಡಿ ಮಲ್ಲಪ್ಪನು ತಂದ ಮೋಟರ್ ಸೈಕಲ್ ನಂ: ಕೆಎ-03 ಹೆಚ್.ಎನ್-5257 ನೇದ್ದರ ಮೇಲೆ ಕೊಡೆಕಲ್ಲಕ್ಕೆ ಹೋಗಿದ್ದು ಮಲ್ಲಪ್ಪನು ಮೋಟರ್ ಸೈಕಲ್ನ್ನು ನಡೆಸುತ್ತಿದ್ದು ಹಿಂದುಗಡೆ ನನ್ನ ಗಂಡನು ಕುಳಿತಿದ್ದನು. ನಂತರ ನಾನು ನಿನ್ನೆ ದಿನಾಂಕ 04.07.2021 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಮನೆಯಲ್ಲಿದ್ದಾಗ ನಮ್ಮೂರ 1) ಚಂದ್ರಪ್ಪ ತಂದೆ ಆದಪ್ಪ ಉಪ್ಪಲದಿನ್ನಿ 2) ಹಣಮಪ್ಪ ತಂದೆ ಮಲ್ಲಪ್ಪ ಸುಣಕಲ್ಲ ಇವರುಗಳು ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ಈಗ ಸ್ವಲ್ಪ ಹೊತ್ತಿನ ಹಿಂದೆ 8:00 ಗಂಟೆಯ ಸುಮಾರಿಗೆ ನಾವು ಕೊಡೆಕಲ್ಲದಿಂದ ಹುಲಿಕೇರಿಗೆ ಬರಲು ಕೊಡೆಕಲ್ಲ ಸೀಮಾಂತರದಲ್ಲಿಯ ಯಮನಪ್ಪ ತಂದೆ ಯಂಕಪ್ಪ ವಡ್ಡರ ಸಾ:ಹುಲಿಕೇರಿ ರವರ ಹೊಲದಲ್ಲಿಯ ರಸ್ತೆಯ ಮೇಲೆ ಮೋಟರ್ ಸೈಕಲ್ ಮೇಲೆ ಬರುತ್ತಿರುವಾಗ ಒಬ್ಬ ಮೋಟರ್ ಸೈಕಲ್ಲ ಸವಾರನು ತನ್ನ ಮೋಟರ್ ಸೈಕಲ್ ಹಿಂದುಗಡೆ ಒಬ್ಬ ಮನುಷ್ಯನನ್ನು ಕೂಡಿಸಿಕೊಂಡು ಕೊಡೆಕಲ್ಲ ಕಡೆಯಿಂದ ಅತಿ ವೇಗವಾಗಿ ಮತ್ತು ಅಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ನಡೆಯಿಸಿಕೊಂಡು ಬಂದು ನಮಗೆ ಹಿಂದೆ ಹಾಕಿ ಸ್ವಲ್ಪ ಮುಂದೆ ಹೋದವನೆ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡ ಮಗ್ಗಲಿಗೆ ಹೊಂದಿ ಇರುವ ಕಲ್ಲೊಡ್ಡಿಗೆ ಡಿಕ್ಕಿ ಪಡಿಸಿದ್ದು ಇದರಿಂದ ಹಿಂದೆ ಕುಳಿತ ಮನುಷ್ಯನು ಪುಟಿದು ಕಲ್ಲೊಡ್ಡಿನ ಆಚೆಗೆ ಬಿದ್ದಿದ್ದು ನಾವು ನಮ್ಮ ಮೋಟರ್ ಸೈಕಲ್ ನಿಲ್ಲಿಸಿ ಹೋಗಿ ಮೊಬೈಲ್ ಟಾರ್ಚ ಹಾಕಿ ನೋಡಲಾಗಿ ಮೋಟರ್ ಸೈಕಲ್ ಸವಾರನು ನಮ್ಮೂರಿನ ಮಲ್ಲಪ್ಪ ತಂದೆ ಮುದಕಪ್ಪ ಪೂಜಾರಿ ಇತನು ಇದ್ದು ಇವನ ಮೋಟರ್ ಸೈಕಲ್ ಹಿಂದೆ ಕುಳಿತವನು ನಿನ್ನ ಗಂಡ ಭೀಮಣ್ಣ ತಂದೆ ಯಮನಪ್ಪ ಬಿಜಾಪುರ ಇತನು ಇದ್ದು ನೋಡಲಾಗಿ ಭೀಮಣ್ಣನ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ತುಟಿಯ ಮೇಲೆ ರಕ್ತಗಾಯವಾಗಿದ್ದು ಮತ್ತು ಬಲಗಾಲಿನ ಮೇಲೆ ತರಚಿದ ಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿದ್ದು ಸದರಿ ಮೋಟರ್ ಸೈಕಲ್ ನಂಬರ್ ನೋಡಲಾಗಿ ಕೆಎ-03 ಹೆಚ್.ಎನ್-5257 ಇದ್ದು ಅಪಘಾತ ಪಡಿಸಿದ ಮೋಟರ್ ಸೈಕಲ್ ಸವಾರ ಮಲ್ಲಪ್ಪ ತಂದೆ ಮುದಕಪ್ಪ ಪೂಜಾರೇರ ಇತನು ಅಪಘಾತ ಪಡಿಸಿದ ಕೂಡಲೇ ಮೋಟರ್ ಸೈಕಲ್ನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾಗಿ ತಿಳಿಸಿದ್ದು ನಂತರ ನಾನು ಈ ವಿಷಯವನ್ನು ಕೊಡೆಕಲ್ಲದಲ್ಲಿರುವ ನನ್ನ ಗಂಡನ ಅಣ್ಣಂದಿರಾದ ಸಂಗಪ್ಪ ಮತ್ತು ಯಂಕಪ್ಪ ರವರಿಗೆ ಫೋನ್ ಮಾಡಿ ತಿಳಿಸಿದ್ದು ಅವರು ಸ್ಥಳಕ್ಕೆ ಬರುವದಾಗಿ ತಿಳಿಸಿ ನನಗೂ ಬರಲು ತಿಳಿಸಿದ್ದು ನಾನು ನಮ್ಮೂರ ನಮ್ಮ ಸಂಬಂಧಿಕರಾದ ಮಾನಪ್ಪ ತಂದೆ ಬಸಪ್ಪ ಅಗಸಿಮನಿ, ಚಂದ್ರಪ್ಪ ತಂದೆ ಆದಪ್ಪ ಬಿರಾದಾರ, ಅಲಕಪ್ಪ ತಂದೆ ಚಂದ್ರಪ್ಪ ಗೆದ್ದಲಮರಿ ಹಾಗೂ ವಿಷಯ ತಿಳಿಸಿದ 1) ಚಂದ್ರಪ್ಪ ತಂದೆ ಆದಪ್ಪ ಉಪ್ಪಲದಿನ್ನಿ 2) ಹಣಮಪ್ಪ ತಂದೆ ಮಲ್ಲಪ್ಪ ಸುಣಕಲ್ಲ ರವರರೊಂದಿಗೆ ನನ್ನ ಗಂಡನಿಗೆ ಅಪಘಾತವಾದ ಸ್ಥಳಕ್ಕೆ ಹೋಗಿದ್ದು ಅಲ್ಲಿಗೆ ಕೊಡೆಕಲ್ಲದಿಂದ ನನ್ನ ಗಂಡನ ಅಣ್ಣಂದಿರಾದ ಯಂಕಪ್ಪ, ಸಂಗಪ್ಪ ರವರು ಬಂದಿದ್ದು ಎಲ್ಲರೂ ಕೂಡಿ ನನ್ನ ಗಂಡನಿಗೆ ನೋಡಲಾಗಿ ನನ್ನ ಗಂಡನು ಸತ್ತಿದ್ದು ಅವನ ತಲೆಯ ಮೇಲೆ ಭಾರಿ ರಕ್ತಗಾಯವಾಗಿದ್ದು, ತುಟಿಯ ಮೇಲೆ ಹರಿದ ರಕ್ತಗಾಯ ಮತ್ತು ಬಲಗಾಲಿನ ಮೇಲೆ ತರಚಿದ ಗಾಯಗಳಾಗಿದ್ದು ನಾವು 1) ಚಂದ್ರಪ್ಪ ತಂದೆ ಆದಪ್ಪ ಉಪ್ಪಲದಿನ್ನಿ 2) ಹಣಮಪ್ಪ ತಂದೆ ಮಲ್ಲಪ್ಪ ಸುಣಕಲ್ಲ ವಿಚಾರಿಸಲಾಗಿ ಸದರಿಯವರು ನಮಗೆ ನನಗೆ ಮನೆಯಲ್ಲಿ ತಿಳಿಸಿದಂತೆ ಹೇಳಿದ್ದು. ನಿನ್ನೆ ದಿನ ರಾತ್ರಿಯಾಗಿದ್ದರಿಂದ ವಿಚಾರ ಮಾಡಿ ತಡವಾಗಿ ಈ ದಿವಸ ಬಂದು ದೂರು ಕೊಡುತ್ತಿದ್ದು ಈ ಅಪಘಾತವು ಮೋಟರ್ ಸೈಕಲ್ ನಂ: ಕೆಎ-03 ಹೆಚ್.ಎನ್-5257 ನೇದ್ದರ ಸವಾರ ಮಲ್ಲಪ್ಪ ತಂದೆ ಮುದಕಪ್ಪ ಪೂಜಾರಿ ಇತನ ನಿರ್ಲಕ್ಷತನದಿಂದಲೇ ಸಂಭವಿಸಿದ್ದು ಅವನ ಮೇಲೆ ಕಾನೂನು ಕ್ರಮ ಜರುಗಿಸಲು ಅಂತ ಪಿರ್ಯಾಧಿ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ:41/2020 ಕಲಂ 279, 304(ಎ) ಐಪಿಸಿ ಸಂಗಡ 187 ಐಎಮ್ವಿ ಕಾಯ್ದೆ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 116/2021 ಕಲಂ: 143, 147, 148, 427, 504, 506 ಸಂ. 149 ಐಪಿಸಿ : ಇಂದು ದಿನಾಂಕಃ 05/07/2021 ರಂದು ಮದ್ಯಾಹ್ನ 02:30 ಪಿ.ಎಮ್ ಕ್ಕೆ ಶ್ರೀ ನಿಂಗಪ್ಪ ತಂದೆ ಭೀಮಣ್ಣ ಮಕಾಶಿ ವ|| 52 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಲಿಂಗದಳ್ಳಿ ಎಸ್.ಕೆ ತಾ|| ಸುಪರುರ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಫಿಯರ್ಾದಿ ಅಜರ್ಿ ನೀಡಿದ್ದರ ಸಾರಾಂಶವೆನೆಂದರೆ, ದಿನಾಂಕ:03/07/2021 ರಂದು ಮುಂಜಾನೆ 6 ಗಂಟೆಗೆ ನಮ್ಮೂರ ನಮ್ಮ ಜನಾಂಗದವನಾದ ಬಸನಗೌಡ@ಮುತ್ತಪ್ಪ ಮಾಲಿ ಪಾಟೀಲ್ ಇತನ ಹೆಂಡತಿ ರೇಣಮ್ಮ ಇವಳು ನಮ್ಮ ಮನೆಯಲ್ಲಿ ಬಂದಿದ್ದಕ್ಕೆ ನಮ್ಮ ತಮ್ಮ ಶರಣಪ್ಪ ಜೊತೆ ಅನೈತಿಕ ಸಂಬಂದ ಇದೆ ಅಪಾರ್ಥ ಮಾಡಿಕೊಂಡು ಮುಂಜಾನೆ 7 ಗಂಟೆ ಸುಮಾರಿಗೆ ನಮ್ಮೂರ ನಮ್ಮ ಜನಾಂಗದವರಾದ 1) ಬಸನಗೌಡ@ಮುತ್ತಪ್ಪ ತಂದೆ ಸಣ್ಣ ಮಾನಯಗೌಡ ಮಾಲಿ ಪಾಟೀಲ್, 2) ತಿಮ್ಮಣ್ಣ ತಂದೆ ಸಣ್ಣ ಮಾನಯ್ಯಗೌಡ ಮಾಲಿಪಾಟೀಲ್, 3) ಶರಣು ತಂದೆ ಸಣ್ಣ ಮಾನಯ್ಯಗೌಡ ಮಾಲಿ ಪಾಟೀಲ್, 4) ಅನೀಲ್ಕುಮಾರ ತಂದೆ ಸಣ್ಣ ಮಾನಯ್ಯಗೌಡ ಮಾಲಿಪಾಟೀಲ್, 5) ರಾಮಲಿಂಗಪ್ಪ ತಂದೆ ಪರಮಣ್ಣ ಕನರ್ಾಳ ಎಲ್ಲರು ಕೈಯಲ್ಲಿ ಕೊಡಲಿ ಬಡಿಗೆ, ಹಿಡಿದುಕೊಂಡು ನಮ್ಮ ಮನೆಯ ಮುಂದೆ ಬಂದು ಬಸನಗೌಡ ಮಾಲಿಪಾಟೀಲ್ ಇತನು ಏಲೇ ಶ್ಯಾಣ್ಯಾ ಸೂಳೇ ಮಗನೆ ನನ್ನ ಹೆಂಡತಿಗೆ ನಿಮ್ಮ ಮೆಯಲ್ಲಿ ಕರೆದುಕೊಂಡು ಹೊಗಿ ಬಾಗಿಲು ಹಾಕೊಂಡಿ ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಬಾಗಿಲು ತಗಿಯಲೆ ಸೂಳೆ ಮಗನೆ ಇವತ್ ನಿನ್ನ ಜೀವ ಹೊಡೆಯದೆ ಬಿಡುವುದಿಲ್ಲ ಅಂತಾ ಅನ್ನುತ್ತಿರುವಾಗ ನಾನು ಮನೆಯ ಮ್ಯಾಳಿಗೆ ಮೇಲೆ ಹೊಗಿ ನೋಡಲಾಗಿ ಬಸನಗೌಡ ತನ್ನ ಕೈಯಲ್ಲಿದ್ದ ಕೊಡಲಿಂದ ಬಾಗಿಲಿಗ ಹೊಡೆಯುತ್ತಿದ್ದನು, ತಿಮ್ಮಣ್ಣ ಇತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ಹೊಸ್ತಿಲು ಕಡೆಯುತ್ತಿದ್ದನು, ಶರಣು ಇತನು ಮನೆಯ ಮುಂದೆ ಹಾಕಿದ ಟೈಲ್ಸಗೆ ಕಲ್ಲಿನಿಂದ ಹೊಡೆದು ನಾಶ ಮಾಡುತ್ತಿದ್ದನು, ಅನೀಲ್ಕುಮಾರ, ರಾಮಲಿಂಗಪ್ಪ ಇಬ್ಬರು ತಮ್ಮ ಕೈಯಲ್ಲಿದ್ದ ಬಡಿಗೆಯಿಂದ ನಮ್ಮ ಹೊಂಡಾ ಸ್ಕೂಟಿಗೆ ಹೊಡೆದು ನಾಶ ಮಾಡುತ್ತಿದ್ದರು. ಮತ್ತು ಅಲ್ಲೆ ಇದ್ದ ಶಿಲವಂತ ತಂದೆ ಮಾಹಾದೇವಪ್ಪ ಮಕಾಶಿ, ತಿಮ್ಮಯ್ಯ ತಂದೆ ದುರ್ಗಪ್ಪ ಮಕಾಶಿ, ನಂದಪ್ಪ ತಂದೆ ಹಣಮಂತ ಮಕಾಶಿ ಇವರುಗಳು ಬಂದು ಜಗಳವನ್ನು ಬಿಡಿಸಿಕೊಂಡರು ನಾವು ಬಾಗಿಲು ತಗೆಯಲಿಲ್ಲ, ನಂತರ 112 ವಾಹನದಲ್ಲಿ ಪೊಲೀಸ್ರು ಬಂದ ನಂತರ ಬಾಗಿಲು ತಗೆದಾಗ ರೇಣಮ್ಮ ಇವಳಿಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೊದರು. ನಮ್ಮ ಮನೆಯಲ್ಲಿ ವಿಚಾರ ಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ಅಜರ್ಿ ಸಲ್ಲಿಸಿರುತ್ತೇನೆ. ಕಾರಣ ನಮ್ಮ ಮನೆಯ ಬಾಗಿಲು, ಹೊಸ್ತಿಲು ಮತ್ತು ನಮ್ಮ ಹೊಂಡಾ ಸ್ಕೂಟಿಗೆ ಹೊಡೆದು ನಾಶ ಪಡಿಸಿದ ಬಗ್ಗೆ ಮೇಲೆ ಹೇಳಿದ 5 ಜನರ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಅಂತ ವಗೈರೆ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 116/2021 ಕಲಂ: 143, 147, 148, 427, 504, 506 ಸಂ. 149 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.


ಶಹಾಪೂರ ಪೊಲೀಸ್ ಠಾಣೆ
ಗುನ್ನೆ ನಂಬರ 153/2021 ಕಲಂ, 143, 147, 323, 324, 354, 504, 506 ಸಂ 149 ಐ.ಪಿ.ಸಿ : ಇಂದು ದಿನಾಂಕ 05/07/2021 ರಂದು, ಸಾಯಂಕಾಲ 17-00 ಗಂಟೆಗೆ ಫಿರ್ಯಾದಿ ಶ್ರೀ ನಿಂಗಯ್ಯ ತಂದೆ ಶಿವರೆಡ್ಡಿ ಪಾಂದೇಲಿ, ವಯಸ್ಸು 21 ವರ್ಷ, ಜಾತಿ, ಬೇಡರ ಉಃ ವಿದ್ಯಾಥರ್ಿ, ಸಾಃ ಎಮ್.ಕೊಳ್ಳುರ ತಾಃ ಶಹಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಮ್ಮ ಅಜ್ಜಿಯವರಾದ ದಿ.ಮಲ್ಲಮ್ಮ ಪಾಂದೇಲಿ ಮತ್ತು ನಮ್ಮೂರ ಮಾನಶಯ್ಯನ ಹೆಂಡತಿ ಲಕ್ಷ್ಮೀ ಇಬ್ಬರೂ ಅಕ್ಕ ತಂಗಿಯರಿದ್ದು, ಇವರ ತವರು ಮನೆ ಎಮ್.ಕೊಳ್ಳುರ ಗ್ರಾಮ ಇರುತ್ತದೆ. ಇವರಿಗೆ ಅಣ್ಣ-ತಮ್ಮಂದಿರರು ಇರಲಾರದರಿಂದ ತವರು ಮನೆಯ ಕಡೆಯಿಂದ ಪಿತ್ರಾಜರ್ಿತ ಆಸ್ತಿ ಇದ್ದು, ಆ ಆಸ್ತಿಯನ್ನು ನಮಗೆ ಪಾಲು ಕೊಡದೇ ನಮ್ಮ ಅಜ್ಜಿಯ ತಂಗಿ ಲಕ್ಷ್ಮೀ ಗಂಡ ಮಾನಶಯ್ಯ ಇವರ ಕುಟುಂಬದವರು ಸಾಗುವಳಿ ಮಾಡಿಕೊಂಡು ಬಂದಿರುತ್ತಾರೆ. ಈ ಬಗ್ಗೆ ನನ್ನ ತಂದೆ- ತಾಯಿವರು ತಮಗೆ ಬರಬೇಕಾದ ಆಸ್ತಿಯ ಪಾಲು ಕೇಳಲು ಹೋದಾಗ ಪಾಲು ಕೊಡದೆ ತಕರಾರು ಮಾಡಿಕೊಂಡು ಬಂದಿರುತ್ತಾರೆ. ಈ ಬಗ್ಗೆ ಆಸ್ತಿಯ ಸಂಬಂಧ ಸಣ್ಣ-ಪುಟ್ಟ ತಕರಾರುಗಳು ಆಗಿರುತ್ತವೆ ಮತ್ತು ನ್ಯಾಯಾ ಪಂಚಾಯತಿ ಕೂಡ ಆಗಿರುತ್ತವೆ. ಹೀಗಿರುವಾಗ ದಿನಾಂಕ 02/07/2021 ರಂದು ಮಧ್ಯಾಹ್ನ 1-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ನಾನು ನನ್ನ ತಾಯಿ ಮಹಾದೇವಿ @ ಗೌರಮ್ಮ ವಯಸ್ಸು 40 ವರ್ಷ ಇಬ್ಬರು ಮನೆಯ ಮುಂದೆ ಕುಳಿತಿದ್ದಾಗ, ಈ ಹಿಂದೆ ನಮ್ಮ ಜೊತೆ ಆಸ್ತಿಯ ಸಂಬಂಧ ತರಕಾರು ಮಾಡಿಕೊಂಡು ಬಂದಿದ್ದ 1) ಮಾನಶಯ್ಯ ತಂದೆ ಹಣಮಯ್ಯ ದೊಡ್ಡಿ, 55 ವರ್ಷ ಮತ್ತು ಅವನ ಅಣ್ಣನ ಮಗ 2) ಬಸವರಾಜ ತಂದೆ ಮಾನಶಯ್ಯ ದೊಡ್ಡಿ ಸಾಃ ದೇವದುರ್ಗ ಹಾಗೂ ಮಾನಶಯ್ಯನ ಹೆಂಡತಿ 3) ಲಕ್ಷ್ಮೀ ಗಂಡ ಮಾನಶಯ್ಯ ದೊಡ್ಡಿ, 50 ವರ್ಷ, ಹಾಗೂ ಮಕ್ಕಳಾದ 4) ನಿಂಗಯ್ಯ ತಂದೆ ಮಾನಶಯ್ಯ ದೊಡ್ಡಿ, 30 ವರ್ಷ, 5) ರಂಗನಾಥ ತಂದೆ ಮಾನಶಯ್ಯ ದೊಡ್ಡಿ, 25 ವರ್ಷ, 6) ಮಲ್ಲಪ್ಪ ತಂದೆ ಮಾನಶಯ್ಯ ದೊಡ್ಡಿ, 23 ವರ್ಷ, 7) ತಾಯಮ್ಮ ತಂದೆ ಮಾನಶಯ್ಯ ದೊಡ್ಡಿ, 19 ವರ್ಷ ಹಾಗು ಅಳಿಯನಾದ 8) ಯಮನಪ್ಪ ತಂದೆ ಶಿವಪ್ಪ ಮಾಸ್ತಿ 28 ವರ್ಷ ಇವರೆಲ್ಲರೂ ಗುಂಪು ಕಟ್ಟಿಕೊಂಡು ಜಗಳ ತೆಗೆಯುವ ಉದ್ದೇಶದಿಂದ ಬಂದು, ನಮ್ಮ ತಾಯಿಯವರಿಗೆ ಮಾನಶಯ್ಯನು ಏಲೇ ಬೋಸ್ಡಿ ನಿಮಗೆ ಹೊಲ ಕೊಡುವುದಿಲ್ಲ ನೋಡು ಏನ್ ಮಾಡ್ಕೋತಿರಿ ಅಂತ ಬೈದು ನನ್ನ ತಾಯಿಯ ತಲೆಯ ಕೂದಲು ಹಿಡಿದು ಎಳೆದಾಡಿ ಹೊಟ್ಟೆಗೆ ಒದ್ದು ಮೈ ಮೇಲಿನ ಬ್ಲೌಜ್ ಎಳೆದಾಡುತಿದ್ದಾಗ, ಅವನ ಅಣ್ಣನ ಮಗ ಬಸವರಾಜ ದೊಡ್ಡಿ ಇವನು ಈ ಸೂಳಿದು ಬಹಳ ಆಗಿದೆ ಅಂತಾ ಅಂದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ನನ್ನ ತಾಯಿಯ ತಲೆಗೆ ಹೊಡೆದು ನಂತರ ಕೈಯಿಂದ ಹೊಟ್ಟೆಗೆ ಗುದ್ದಿ ನೀನು ನಮ್ಮ ಮೇಲೆ ಏನೇ ಕೇಸು ಮಾಡಿದರು ನಿಮಗೆ ಮಾತ್ರ ಹೊಲ ಬಿಟ್ಟುಕೊಡುವುದಿಲ್ಲ ಅಂತಾ ಬೆದರಿಕೆ ಹಾಕುತಿದ್ದಾಗ, ಅಷ್ಟರಲ್ಲಿಯೆ ಹೊರಗಡೆ ಹೋಗಿದ್ದ ನನ್ನ ಅಣ್ಣ ಭೀಮರಾಯ ಮತ್ತು ನನ್ನ ತಂದೆ ಶಿವರೆಡ್ಡಿ ಇವರು ಮನೆಯ ಕಡೆಗೆ ಬಂದಿದ್ದು, ನಾವೆಲ್ಲರೂ ಕೂಡಿ ನಮ್ಮ ತಾಯಿಗೆ ಹೊಡೆಯುವುದನ್ನು ಬಿಡಿಸಿಕೊಳ್ಳಲು ಹೋದಾಗ, ನನ್ನ ಅಣ್ಣ ಭೀಮರಾಯನಿಗೆ ನಿಂಗಯ್ಯ ದೊಡ್ಡಿ ಮತ್ತು ರಂಗನಾಥ ದೊಡ್ಡಿ ಇಬ್ಬರೂ ಕೂಡಿ ನೆಲಕ್ಕೆ ಹಾಕಿ ಕೈಯಿಂದ ಮನಬಂದತೆ ಹೊಡೆದಿರುತ್ತಾರೆ ಮತ್ತು ನನ್ನ ತಂದೆ ಶಿವರೆಡ್ಡಿ ಇವರಿಗೆ ಮಲ್ಪಪ್ಪ ದೊಡ್ಡಿ, ಇವನು ಕಲ್ಲಿನಿಂದ ಬಾಯಿಗೆ ಹೊಡೆದರಿಂದ ಹಲ್ಲಿಗೆ ಪೆಟ್ಟಾಗಿ ಹಲ್ಲು ಮುರಿದು ಬಾಯಿಯಂದ ಭಾರಿ ರಕ್ತ ಬಂದಿರುತ್ತದೆ. ತಾಯಮ್ಮ ದೊಡ್ಡಿ ಇವಳು ನನ್ನ ತಂದೆಗೆ ಬಡಿಗೆಯಿಂದ ಹೊಟ್ಟೆಗೆ ಹೊಡೆಯುತಿದ್ದಾಗ, ನಾನು ಜಗಳದ ಮಧ್ಯ ಹೋದಾಗ ನನಗೆ ಯಮನಪ್ಪ ಮಾಸ್ತಿ ಇವನು ಕೈಯಿಂದ ಕಪಾಳಕ್ಕೆ ಹೊಡೆದು ದಬ್ಬಿಸಿಕೊಟ್ಟಿರುತ್ತಾನೆ. ಆಗ ನಾವು ಚಿರಾಡುವುದು ಕೂಗಾಡುವುದು ಮಾಡುತಿದ್ದಾಗ, ಜಗಳದ ಶಬ್ದ ಕೇಳಿ ರಸ್ತೆಯ ಮೇಲೆ ಹೋಗುತಿದ್ದ ನಮ್ಮೂರ ಮೌನೇಶ ತಂದೆ ಸಿದ್ದಪ್ಪ ಮಾಸ್ತಿ, ಮತ್ತು ನಿಂಗಯ್ಯ ತಂದೆ ಈರಣ್ಣ ಕಾವಲಿ ಇಬ್ಬರು ಬಂದು ನಮಗೆ ಜಗಳದಿಂದ ರಕ್ಷಣೆ ಮಾಡಿದರು, ನಮಗೆ ಹೊಡೆ ಬಡೆ ಮಾಡಿದ 8 ಜನರು ಇನ್ನೊಂದು ಸಲ ಆಸ್ತಿಯ ಸಂಬಂಧ ನಮ್ಮ ತಂಟೆಗೇನಾದರು ಬಂದರೆ, ನಿಮಗೆ ಒಂದು ಗತಿ ಕಾಣಿಸುತ್ತೇವೆ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾರೆ. ನಂತರ ನಾನು ಮತ್ತು ನನ್ನ ಅಣ್ಣ ಭೀಮರಾಯ ಇಬ್ಬರೂ ಕೂಡಿ, ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನನ್ನ ತಂದೆ ಮತ್ತು ತಾಯಿಯವರಿಗೆ ಒಂದು ಆಟೋದಲ್ಲಿ ಕೂಡಿಸಿಕೊಂಡು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ನನ್ನ ತಂದೆ ತಾಯಿಯವರು ಮಾತ್ರ ಉಪಚಾರ ಮಾಡಿಸಿಕೊಂಡಿರುತ್ತಾರೆ, ನನಗೆ ಮತ್ತು ನನ್ನ ಅಣ್ಣ ಭೀಮರಾಯನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದರಿಂದ, ನಾವು ಉಪಚಾರ ಪಡೆದುಕೊಂಡಿರುವುದಿಲ್ಲ, ಸದ್ಯವು ನಮಗೆ ಉಪಚಾರದ ಅವಶ್ಯಕತೆ ಇರುವುದಿಲ್ಲ. ನನ್ನ ತಂದೆ ತಾಯಿಯವರಿಗೆ ಹೆಚ್ಚಿನ ಉಪಚಾರ ಕುರಿತು ಯಾದಗಿರಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿ ಈ ಬಗ್ಗೆ ನನ್ನ ಕುಟುಂಬದವರ ಜೊತೆ ವಿಚಾರಿಸಿ ತಡವಾಗಿ ಇಂದು ಠಾಣೆಗೆ ಹಾಜರಾಗಿ ದೂರು ಸಲ್ಲಿಸುತಿದ್ದೇನೆ. ಈ ಜಗಳವು ದಿನಾಂಕ 02/07/2021 ರಂದು ಮಧ್ಯಾಹ್ನ 1-00 ಗಂಟೆಯಿಂದ 1-30 ಗಂಟೆಯವರಗೆ ನಮ್ಮ ಮನೆಯ ಮುಂದೆ ಆಗಿರುತ್ತದೆ.ಕಾರಣ ನಮಗೆ ಆಸ್ತಿಯ ಸಂಬಂಧ ಜಗಳ ತೆಗೆದು ಹಲ್ಲೆ ಮಾಡಿ ಭಾರಿ ರಕ್ತಗಾಯ ಹಾಗೂ ಒಳಪೆಟ್ಟು ಮಾಡಿದ ಮೇಲ್ಕಂಡ 8 ಜನರ ವಿರುದ್ಧ ಕ್ರಮ ಕೈಗೊಂಡು ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ವಿನಂತಿ.ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 153/2021 ಕಲಂ 143, 147, 323, 324,354, 504, 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

 

ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ, 93/2021 ಕಲಂ: 380 ಐ.ಪಿ.ಸಿ : ದಿನಾಂಕ: 05.07.2021 ರಂದು 5 ಪಿ ಎಮ್ ಕ್ಕೆ ಪಿರ್ಯಾದಿದಾರರಾದ ಶ್ರೀ ಶ್ರೀ ಗಿರೀಶ ತಂದೆ ಶರಣಪ್ಪ ವ|| 28 ಉ|| ಸೇಕ್ಯೂರಿಟಿ ಸುಪರವೈಜರ್ ನಿಸಾ ಕಂಪನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅಜರ್ಿ ಸಾರಾಂಶವೇನೆಂದರೆ, ದಿನಾಂಕ 04.07.2021 ರಂದು ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯ ಅವಧಿಯಲ್ಲಿ ಮಾಲಗತ್ತಿ ಇಂಡಸ್ ಟವರ್ನಲ್ಲಿ ಅಳವಡಿಸಿದ 24 ಬ್ಯಾಟರಿಗಳು ಅ.ಕಿ 24,000/- ರೂ ನೇದ್ದವುಗಳನ್ನು ಯಾರೋ ಕಳ್ಳರು ಟವರ್ಸ್ ಗೇಟಿನ ಕೀಲಿ ಮುರಿದು ಒಳಗೆ ಹೋಗಿ ಬ್ಯಾಟರಿ ಸೆಲ್ಪಿನ ಕೀಲಿ ಮುರಿದು ಕಳವು ಮಾಡಿಕೊಂಡು ಹೋಗಿದ್ದು, ಸದರಿ ಕಳ್ಳರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತ ಇದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 93/2021 ಕಲಂ: 380 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು.


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 48/2021 302,114 ಸಂಗಡ 34 ಐ.ಪಿ.ಸಿ : ದಿನಾಂಕ:05/07/2021 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ಫಿರ್ಯಾದಿ ಮಂಜುಳಾ ತನ್ನ ಗಂಡನಾದ ಶಾಂತಾನಾಯಕ ಹಾಗೂ ಮಗನಾದ ಗುಂಡು ಎಲ್ಲರೂ ಕೂಡಿಕೊಂಡು ತಮ್ಮ ತಾಂಡ ಜಗದಂಬಾ ದೇವಿ ಮತ್ತು ಸೇವಾಲಾಲ ಗುಡಿಯ ಹತ್ತಿರ ಇದ್ದ ತಿಪ್ಪಾನಾಯಕ ಈತನ ಹತ್ತಿರ ಹೋಗಿ ನಿನ್ನ ಹೆಂಡತಿಯ ಬೊರಮಳ ನಾವುಒತ್ತಿಇಟ್ಟುಕೊಂಡಿರುವದಿಲ್ಲಾ ನಮ್ಮ ಮೇಲೆ ಸುಳ್ಳು ಹೇಳುತ್ತಿಯಾ ನನ್ನ ಹೆಂಡತಿಯ ಮೇಲೆ ಸುಳ್ಳು ಹೇಳುವದು ಸರಿ ಅಲ್ಲಾ ಅಂತಾ ಅಂದಾಗ, ಅಷ್ಟಕ್ಕೆ ಒಮ್ಮಲೇ ತಿಪ್ಪಾನಾಯಕ ಈತನು ಶಾಂತಿನಾಯಕನಿಗೆ ''ಎನಲೇ ಬೊಸುಡಿ ಮಗನೇ ನನ್ನ ಹೆಂಡತಿ ಬೊರಮಳ ಒತ್ತಿಇಟ್ಟುಕೊಂಡು ನಾಟಕಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ ಬೈದವನೇ ಶಾಂತಿನಾಯಕನ ತೆಕ್ಕೆಗೆ ಬಿದ್ದಾಗ ಮಾಹಾಂತು ತಂದೆ ಹನುಮಾನಯಕ ರಾಠೋಡ, ಮಂಜುಬಾಯಿ ತಂದೆ ದಮರ್ಾ ನಾಯಕ ರಾಠೋಡ ಈ ಸೂಳೆಮಗನದು ಬಹಳವಾಗಿದೆ ಬಿಡಬ್ಯಾಡ ಇವತ್ತ ಇವನಿಗೆ ಖಲಾಸ್ ಮಾಡು ಅಂತಾ ಪ್ರಚೋದನೆ ನೀಡಿದಾಗ ತಿಪ್ಪಾನಾಯಕ ಈತನು ಕೈಯಿಂದ ಶಾಂತಿನಾಯಕ ಈತನ ಎದೆಗೆ ಗುದ್ದಿ ನೇಲಕ್ಕೆ ಎತ್ತಿ ಸಿ.ಸಿ. ರಸ್ತೆಯ ಮೇಲೆ ಜೋರಾಗಿ ಒಗೆದು ತಲೆಯ ಮೇಲಿನ ಕೂದಲು ಹಿಡಿದು ಸಿ.ಸಿ. ರಸ್ತೆಗೆ ಎರಡು ಮೂರು ಸಲ ನೆಲಕ್ಕೆ ಗುದ್ದಿದಾಗ ಶಾಂತಿನಾಯಕ ತಲೆಯ ಹಿಂಬಾಗಕ್ಕೆ ಭಾರಿ ಒಳಪೇಟ್ಟು ಮತ್ತು ರಕ್ತಗಾಯವಾಗಿದ್ದು, ಶಾಂತಿನಾಯಕನು ಮಾತನಾಡದೇ ಬೇವುಸಾಗಿದ್ದು, ಫಿರ್ಯಾದಿ ಮತ್ತು ಫಿರ್ಯಾದಿ ಮಗನಾದ ಗುಂಡು ಚಿರ್ಯಾಡಹತ್ತಿದಾಗ ತಿಪ್ಪಾನಾಯಕ ಈತನು ಶಾಂತಿನಾಯಕ ಈತನಿಗೆ ಬಿಟ್ಟು ಹೊಗಿರುತ್ತಾನೆ. ಈ ಘಟನೆಯ ಸುದ್ದಿಯನ್ನು ತಿಳಿದು ಬಂದ ಪುಲಸಿಂಗ್ ಚವ್ಹಾಣ, ರಾಮು ತಂದೆ ಸೋಮು ರಾಠೋಡ, ಶಿವಪ್ಪ ತಂದೆ ನಾರಾಯಣ ನಾಯಕ ರಾಠೋಡ, ಬಾಬು ತಂದೆ ಕೃಷ್ಣಾನಾಯಕ ಇವರೆಲ್ಲರೂ ಬಂದು ಘಟನೆಯನ್ನು ನೋಡಿದ್ದು, ಶಾಂತಿನಾಯಕನಿಗೆ ಫಿರ್ಯಾದಿ ಮತ್ತು ಹಣಮಂತ ತಂದೆ ಜಯರಾಮ ರಾಠೋಡ ಇಬ್ಬರೂ ಸೇರಿ ಉಪಚಾರ ಕುರಿತು ಒಂದು ಮೊಟಾರ ಸೈಕಲ್ ಮೇಲೆ ಹುಣಸಗಿ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಶಾಂತಿನಾಯಕ ಈತನು ಮೃತಪಟ್ಟಿ ಬಗ್ಗೆ ತಿಳಿಸಿರುತ್ತಾರೆ. ಅಂತಾ ಇತ್ಯಾದಿ ಫಿರ್ಯಾದಿ ಸಾರಂಶದ ಮೇಲಿಂದ ಮೇಲ್ಕಂಡ ಪ್ರಕರಣದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ : 100/2021 ಕಲಂ 323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 05.07.2021 ರಂದು ರಾತ್ರಿ 10.40 ರಿಂದ 11.20 ರವರೆಗೆ ಸಮೂದಾಯ ಆರೋಗ್ಯ ಕೇಂದ್ರ ಗುರುಮಠಕಲ್ದಲ್ಲಿ ಪಡೆದ ಎಮ್ಎಲ್ ಸಿ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯು ತನ್ನ ಮನೆಯ ಮುಂದೆ ದಿನಾಂಕ05.07.2021 ರಂದು 7.00 ಸುಮಾರಿಗೆ ಇದ್ದಾಗ ಆರೊಪಿತರು ಬಂದು ಪಿರ್ಯಾಧಿಗೆ ನಲ್ಲಿ ನೀರಿನ ವಿಷಯವಾಗಿ ಜಗಳ ತೆಗದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಬಡಿಗೆಗಳಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 100/2021 ಕಲಂ: 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 

ಗುರಮಿಠಕಲ್ ಪೊಲೀಸ ಠಾಣೆ
ಗುನ್ನೆ ನಂ: 101/2020 ಕಲಂ 323, 324, 504, 506 ಸಂಗಡ 34 ಐಪಿಸಿ : ಇಂದು ದಿನಾಂಕ 05.07.2021 ರಂದು ರಾತ್ರಿ 10.45 ರಿಂದ 11.35 ವರೆಗೆ ಸಮೂದಾಯ ಆಸ್ಪತ್ರೆ ಗುರುಮಠಕಲ್ದಲ್ಲಿ ಪಡೆದ ಎಮ್ಎಲ್ ಸಿ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾಧಿಯು ತನ್ನ ಮನೆಯ ಮುಂದೆ ದಿನಾಂಕ05.07.2021 ರಂದು 7.15 ಸುಮಾರಿಗೆ ಇದ್ದಾಗ ಆರೊಪಿತರು ಬಂದು ಪಿರ್ಯಾಧಿಗೆ ನಲ್ಲಿ ನೀರಿನ ವಿಷಯವಾಗಿ ಜಗಳ ತೆಗದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ಕಲ್ಲು ಬಡಿಗೆಗಳಿಂದ ಹೊಡೆ-ಬಡೆ ಮಾಡಿ ಜೀವ ಬೆದರಿಕೆ ಹಾಕಿ ಹೋದ ಬಗ್ಗೆ ಪಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 101/2021 ಕಲಂ: 323, 324, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

 

 

ಇತ್ತೀಚಿನ ನವೀಕರಣ​ : 06-07-2021 04:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080