ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-08-2022


ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 128/2022 ಕಲಂ 279, 337, 338, 304(ಎ) ಐ.ಪಿ.ಸಿ ಮತ್ತು ಕಲಂ: 187 ಐ.ಎಮ್ ವಿ ಆಕ್ಟ: ದಿನಾಂಕ: 04.08.2022 ರಂದು ರಾತ್ರಿ 09.45 ಗಂಟೆ ಸುಮಾರಿಗೆ ಸ್ಯಾಂಟ್ರೊ ಕಾರ ನಂ: ಕೆಎ-03-ಎಮ.ಬಿ -1419 ನೇದ್ದರಲ್ಲಿ ಈ ಮೆಲ್ಕಂಡ ಮೃತರು ಮತ್ತು ಗಾಯಾಳು ಕೂಡಿಕೊಂಡು ತೆಲಂಗಾಣದ ಚಿಟ್ಲಾಪಲ್ಲಿಯ ದಗರ್ಾದಿಂದ ಗುರುಮಠಕಲ್-ಯಾದಗಿರ ಮಾರ್ಗವಾಗಿ ತಮ್ಮೂರು ರಾಯಚೂರ ಜಿಲ್ಲೆಯ ಹಟ್ಟಿಗೆ ಹೋಗುತ್ತಿರುವಾಗ ಸಿಂದಗಿ- ಕೋಡಂಗಲ್ ರಾಜ್ಯ ಹೆದ್ದಾರಿ ಎಸ್ ಹೆಚ್ -16 ಮೇಲೆ ಅರಕೇರ(ಕೆ)-ಪಸಪೂಲ ಗೇಟಗಳ ನಡುವೆ ರೋಡಿನ ಮೇಲೆ ಹೋಗುತ್ತಿರುವಾಗ ಯಾದಗಿರ ಕಡೆಯಿಂದ ಐಚರ ವಾಹನ ಸಂಖ್ಯೆ ಎಪಿ-12-ಡಬ್ಲು-1083 ನೇದ್ದರ ಚಾಲಕನು ಅತಿವೇಗ ಹಗೂ ನಿರ್ಲಕ್ಷತನದಿಂದ ನಡೆಸಿ ಕಾರಿಗೆ ಅಪಘಾತಪಡಿಸಿದ್ದರಿಂದ ಸದರಿ ಕಾರನಲ್ಲಿರುವ 06 ಜನರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಒಬ್ಬರಿಗೆ ಭಾರಿ ಗಾಯಗಳಾಗಿದ್ದು. ಸದರಿ ಐಚರವಾಹನ ವಾಹನ ಸಂಖ್ಯೆ ಎಪಿ-12-ಡಬ್ಲು-1083 ನೇದ್ದರ ಚಾಲಕ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ ಬಗ್ಗೆ ಅಪರಾದ ವಗೈರೆ ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ: 127/2022 ಕಲಂ: 78(3) ಕೆಪಿ ಯಾಕ್ಟ: ಇಂದು ದಿನಾಂಕ 05.08.2022 ರಂದು 4.30 ಪಿಎಂ ಕ್ಕೆ ಶ್ರೀ ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ(ಕಾ.ಸು) ಸಾಹೇಬರು ಕೆಂಭಾವಿ ಠಾಣೆ ರವರು ಠಾಣೆಗೆ ಹಾಜರಾಗಿ ಒಬ್ಬ ಆರೋಪಿ, ಜಪ್ತಿ ಪಂಚನಾಮೆ, ಮುದ್ದೆಮಾಲು ಸಮೇತ ಒಂದು ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ಸೂಚಿಸಿದ್ದ್ದು ಸದರಿ ವರದಿಯ ಸಾರಾಂಶವೇನೆಂದರೆ, ನಾನು ವಿಶ್ವನಾಥ ಮುದರೆಡ್ಡಿ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ಇದ್ದು ವರದಿ ನೀಡುವುದೇನೆಂದರೆ, ನಾನು ಇಂದು ದಿನಾಂಕ 05.08.2022 ರಂದು 2.30 ಪಿಎಂ ಕ್ಕೆ ಠಾಣೆಯಲ್ಲಿದ್ದಾಗ ನಗನೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತು ಸಾರ್ವಜನಿಕರಿಗೆ ಕರೆಯುತ್ತ ಬರ್ರಿ ಬರ್ರಿ ಬಾಂಬೆ ಮಟಕಾ ಇದೆ ಕಲ್ಯಾಣ ಮಟಕಾ ಇದೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಬಂದು ನಿಮ್ಮ ಅದೃಷ್ಟದ ನಂಬರ ಬರೆಯಿಸಿರಿ ಅಂತಾ ಕರೆದು ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು, ನಮ್ಮ ಠಾಣೆಯ ಆನಂದ ಪಿಸಿ 43 ಮತ್ತು ಮಾಳಪ್ಪ ಪಿಸಿ 29 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಹಾಗೂ ಮುಕ್ತುಂಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 0228 ನೇದ್ದರಲ್ಲಿ ಠಾಣೆಯಿಂದ 2.40 ಪಿಎಂ ಕ್ಕೆ ಹೊರಟು ನಗನೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದ ಹತ್ತಿರ 2.55 ಪಿಎಂ ಕ್ಕೆ ಹೋಗಿ ಎಲ್ಲರೂ ಜೀಪಿನಿಂದ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬರ್ರಿ ಬರ್ರಿ ಇದು ಬಾಂಬೆ ಮಟಕಾ ಇದೆ, ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಬರುತ್ತದೆ ಬಂದು ನಿಮ್ಮ ದೈವದ ನಂಬರ ಬರೆಯಿಸಿರಿ ಅಂತಾ ಸಾರ್ವಜನಿಕರಿಗೆ ಕರೆದು ಹಣ ಪಡೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದುದನ್ನು ನೋಡಿ ಖಚಿತಪಡಿಸಿಕೊಂಡು 3.00 ಪಿಎಂ ಕ್ಕೆ ಸಿಬ್ಬಂದಿ ಮತ್ತು ನಾನು ಒಮ್ಮೆಲೇ ದಾಳಿ ಮಾಡಿದ್ದು ಮಟಕಾ ನಂಬರ ಬರೆಯುತ್ತಿದ್ದ ವ್ಯಕ್ತಿ ಸಿಕ್ಕಿದ್ದು ನಂಬರ ಬರೆಸಲು ಬಂದ ಜನರು ಓಡಿ ಹೋಗಿದ್ದು ದಾಳಿಯಲ್ಲಿ ಸಿಕ್ಕ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಾಬುರಾವ ತಂದೆ ದೇವಿಂದ್ರಪ್ಪ ಪತ್ತಾರ ವ|| 40 ಜಾ|| ವಿಶ್ವಕರ್ಮ ಉ|| ಅಕ್ಕಸಾಲಿಗ ಮತ್ತು ಮಟಕಾ ನಂಬರ ಬರೆದುಕೊಳ್ಳುವುದು ಸಾ|| ಕಿರದಳ್ಳಿ ಹಾ|| ವ|| ನಗನೂರ ತಾ|| ಸುರಪೂರ ಅಂತಾ ತಿಳಿಸಿದ್ದು ಸದರಿ ವ್ಯಕ್ತಿಯ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ್ ಪೆನ್ನು ಮತ್ತು ನಗದು ಹಣ 2100/- ರೂಪಾಯಿ ಸಿಕ್ಕಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚನಾಮೆಯನ್ನು 3.00 ಪಿಎಂ ದಿಂದ 4.00 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿ ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಈ ವರದಿಯನ್ನು ನೀಡಿದ್ದು ಮುಂದಿನ ಕ್ರಮ ಜರುಗಿಸಬೇಕೆಂದು ನೀಡಿದ ವರದಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 127/2022 ಕಲಂ 78(3) ಕೆಪಿ ಯಾಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 138/2022 ಕಲಂ 420 ಐ.ಪಿ.ಸಿ ಮತ್ತು 7, 19 ರಸಗೊಬ್ಬರ ನಿಯಂತ್ರಣ ಆಧೇಶ 1985: ಇಂದು ದಿನಾಂಕ 05/08/2022 ರಂದು ಸಾಯಂಕಾಲ 17-45 ಗಂಟೆಗೆ ಫಿಯರ್ಾದಿ ಶ್ರೀಮತಿ ಡಾ|| ರೂಪಾದೇವಿ ರೈತ ಸಂಪರ್ಕ ಕೇಂದ್ರ ಶಹಾಪೂರದಲ್ಲಿ ಕೃಷಿ ಅಧಿಕಾರಿ ಮತ್ತು ಕೀಟನಾಶಕ ಪರಿವೀಕ್ಷಕರು ಇವರು ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಮತ್ತು ಒಬ್ಬ ವ್ಯಕ್ತಿಯನ್ನು ಹಾಜರ ಪಡಿಸಿ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ಮಧ್ಯಾಹ್ನ 15-30 ಗಂಟೆಗೆ ಫಿಯರ್ಾದಿಯವರು ತಮ್ಮ ಕಛೇರಿಯಲ್ಲಿದ್ದಾಗ ಶಹಾಪೂರ ಪಟ್ಟಣದ ಮಡಿವಾಳೇಶ್ವರ ನಗರದಲ್ಲಿ ಆರೋಪಿತನಾದ ಬಾಳಪ್ಪ ತಂದೆ ಛತ್ರಪ್ಪ ಛಲವಾದಿ, ಈತನು ಹುಸೇನಿ ಪಟೇಲ ಈತನ ಮನೆಯ ಮುಂದೆ ಇರುವ ಟಿನ್ ಶೆಡ್ನಲ್ಲಿ ನೋಂದಾಯಿತವಲ್ಲದ ಕೀಟನಾಶಕಗಳನ್ನು ಕೀಟನಾಶಕಗಳೆಂದು ಮತ್ತು ನೋಂದಾಯಿತವಲ್ಲದ ರಸಗೊಬ್ಬರಗಳನ್ನು ಇಟ್ಟುಕೊಂಡು ರಸಗೊಬ್ಬರವೆಂದು ಹೇಳಿಕೊಂಡು ರೈತರಿಗೆ ವಂಚಿಸಿ ಮಾರಾಟ ಮಾಡುತಿದ್ದಾನೆ ಅಂತಾ ಫಿಯರ್ಾದಿಯವರಿಗೆ ನಿಖರವಾದ ಮಾಹಿತಿ ಬಂದ ಮೇರೆಗೆ, ತಮ್ಮ ಕಛೇರಿಯಲ್ಲಿ ಹಾಜರಿದ್ದ ತಮ್ಮ ಸಹದ್ಯೋಗಿ ಹಾಗೂ ಪಂಚರೊಂದಿಗೆ ಶಹಾಪೂರ ಪೊಲೀಸ್ ಠಾಣೆಗೆ ಬಂದು ಠಾಣೆಯಲ್ಲಿ ಹಾಜರಿದ್ದ ಶ್ರೀ ಶಾಮಸುಂದರ ಪಿ.ಎಸ್.ಐ, ನಾರಾಯಣ ಹೆಚ್.ಸಿ 49, ಭಾಗಣ್ಣ ಪಿ.ಸಿ 49 ರವರನ್ನು ದಾಳಿ ಕುರಿತು ತಮ್ಮ ಜೊತೆಯಲ್ಲಿ ಮಡಿವಾಳೇಶ್ವರ ನಗರಕ್ಕೆ ಕರೆದುಕೊಂಡು ಹೋಗಿ ಪಂಚರ ಸಮಕ್ಷಮದಲ್ಲಿ ಸಾಯಂಕಾಲ 4-05 ಗಂಟೆಗೆ ದಾಳಿ ಮಾಡಿ ಟಿನ್ ಶೆಡ್ನಲ್ಲಿದ್ದ 2,15,700=00 ರೂಪಾಯಿ ಮೌಲ್ಯದ ಕೀಟನಾಶಕದ ಔಷದಿಯ ಬಾಟಲ್ ಮತ್ತು ಆಗರ್ೇನಿಕ ರಸಗೊಬ್ಬರ ಔಷದಿಯ ಬಾಟಲ್ಗಳು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿರುತ್ತದೆ. ಬಾಳಪ್ಪ ಈತನು ಸದರಿ ಮೇಲ್ಕಂಡ ಮುದ್ದೆಮಾಲು ತಾಳಿಕೋಟಿ ತಾಲೂಕಿನ ಅಸ್ಕಿ ಗ್ರಾಮದ ಶ್ರೀ ಜಟ್ಟಿಂಗಲಿಂಗೇಶ್ವರ ಆಗ್ರೋ ಎಜೇನ್ಸಿಯ ಅಂಗಡಿಯ ಮಾಲೀಕರಿಂದ ತಂದು ಮಾರಾಟ ಮಾಡುತಿದ್ದೇನೆ ಅಂತಾ ಹೇಳಿದನು. ಸದರಿ ಆರೋಪಿತರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಇತ್ಯಾದಿ ಫಿಯರ್ಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 138/2022 420 ಐ.ಪಿ.ಸಿ ಮತ್ತು ಕಲಂ 7, 19 ರಸಗೊಬ್ಬರ ನಿಯಂತ್ರಣ ಆಧೇಶ 1985 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಇತ್ತೀಚಿನ ನವೀಕರಣ​ : 06-08-2022 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080