ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-09-2022

ಗುರುಮಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ: 138/2022 ಕಲಂ: 504 ಐಪಿಸಿ ಮತ್ತು ಕಲಂ. 3(1)(ಆರ)(ಎಸ್), 3(2)(ವಿಎ) ಎಸ್.ಸಿ/ಎಸ್.ಟಿ.ಪಿ.ಎ.ಎಕ್ಟ-1989.: ಇಂದು ದಿನಾಂಕಃ 05/09/2022 ರಂದು 7 ಪಿ.ಎಮ ಕ್ಕೆ ಶ್ರೀ ದುರ್ಗಪ್ಪ ತಂದೆ ಮಹಾದೇವಪ್ಪ ಸೊಂಡೆನೋರ, ಅರಕೇರಾ(ಕೆ) ಗ್ರಾಮ, ತಾ|| ಜಿ|| ಯಾದಗಿರ ಇವರು ಗುರುಮಠಕಲ್ ಪೊಲೀಸ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬರೆದ ಲಿಖಿತ ಫಿಯರ್ಾದಿ ಅಜರ್ಿ ಹಾಜರು ಪಡಿಸಿದ್ದು, ಅದರ ಸಾರಾಂಶವೆನೆಂದರೆ, ನಮ್ಮ ಸರಕಾರಿ ಪ್ರೌಢ (ಆರ.ಎಮ.ಎ.ಎಸ್.) ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ನಿವೇದಿತ ಪಟ್ಟೇದಾರ ಮತ್ತು ಕವಿತಾ ಸೊಂಪೂರ ಸಹ ಶಿಕ್ಷಕಿ, ಈ ಇಬ್ಬರೂ ಜಾತಿನಿಂದ ಮೇಲ್ವರ್ಗದವರಾಗಿದ್ದು, ಅದೇ ಶಾಲೆಯಲ್ಲಿ ನಮ್ಮ ದಲಿತ ಮಾದಿಗ ಜಾತಿಯವರಾದ ಶ್ರೀಮತಿ ಶೈಲಜಾ ಇವರು ಸುಮಾರು 17 ವರ್ಷಗಳಿಂದ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಾ ಬಂದಿರುತ್ತಾರೆ. ಆದರೆ ಯಾವುದೇ ಕೆಟ್ಟ ಉದ್ದೇಶದಿಂದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ನಿವೇದಿತ ಪಟ್ಟೆದಾರರವರು ಮತ್ತು ಶ್ರೀಮತಿ ಕವಿತಾ ಸೊಂಪೂರ ಇಬ್ಬರೂ ಸೇರಿ ದುಷ್ಟ ಕೂಟ ರಚನೆ ಮಾಡಿಕೊಂಡು ಆ ಶಾಲೆಯ ಮಕ್ಕಳನ್ನು ರಸ್ತೆಗೆ ಕೂಡಿಸಿ ರಸ್ತೆ ತಡೆ ಪ್ರತಿಭಟನೆ ಮಾಡಿಸಿದ್ದನ್ನು ಕುರಿತು ನಾವು ನಮ್ಮ ಸಮಾಜದವರಾದ ಮಲ್ಲಪ್ಪ ತಂದೆ ಭೀಮಶಪ್ಪ ಉರಸೂಲ್ ಸೇರಿ ಮತ್ತು ಇತರೆ ಜನರು ಕೂಡಿಕೊಂಡು ನಮ್ಮ ಶಾಲೆಯ ಕಚೇರಿಯಲ್ಲಿದ್ದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ನಿವೇದಿತ ಪಟ್ಟೆದಾರರನ್ನು ಮಕ್ಕಳ ಹೋರಾಟದ ಬಗ್ಗೆ ನಾವು ವಿಚಾರಿಸುತ್ತಿರುವಾಗ ಯಾರೋ ದೂರವಾಣಿಯ ಮುಖಾಂತರ ಮುಖ್ಯ ಶಿಕ್ಷಕಿಯಾದ ನಿವೇದಿತಾ ಪಟ್ಟೇದಾರ ಇವರಿಗೆ ಮಾತನಾಡಿಸುತ್ತಿರುವಾಗ ಅವರಿಗೆ ಅವಳು ಹಾಳಲ್ಲ ಸಣ್ಣ ಜಾತಿ ದಲಿತ ಶಿಕ್ಷಕಿ ಇದ್ದಾಳಲ್ಲ ಅಂತಾ ನಮ್ಮ ಜಾತಿಗೆ ಅವಮಾನ ಮಾಡಿದ್ದನ್ನು ನಾವು ಮೋಬೈಲನಲ್ಲಿ ವಿಡಿಯೋ ಮಾಡಿಕೊಂಡಿರುತ್ತೇವೆ ಮತ್ತು ಅದು ಅಲ್ಲದೆ ಈ ಒಂದು ಘಟನೆಯಿಂದ ನಿಯೋಜನೆಗೊಂಡ ನಮ್ಮ ಜಾತಿಯ ಶಿಕ್ಷಕಿಯಾದ ಶೈಲಜಾ ರವರು ಕೆಲವು ದಾಖಲಾತಿಗಳಲ್ಲಿ ಸಹಿ ಮಾಡುವಂತೆ ಕೇಳಿದಾಗ ನೀನು ನನಗೆ ಸಾರ್ವಜನಿಕರ ಎದುರಲ್ಲಿ ತಪ್ಪಾಗಿದೆ ಎಂದು ಕ್ಷಮೆ ಕೇಳಿದಾಗ ಮಾತ್ರ ಸಹಿ ಮಾಡಿಕೊಡುವದಾಗಿ ಎಂದು ಅವಮಾನಿಸಿ ವಾಪಸ್ಸು ಕಳುಹಿಸಿರುತ್ತಾಳೆ. ಇದರಿಂದ ನಮ್ಮ ಜಾತಿಗೆ ಸಂಪೂರ್ಣ ಅವಮಾನವಾಗಿರುತ್ತದೆ. ಆದುದರಿಂದ ದಯಾಳುಗಳಾದ ತಾವುಗಳು ತುತರ್ಾಗಿ ಜಾತಿವಾದಿ ಮುಖ್ಯ ಶಿಕ್ಷಕಿಯಾದ ನಿವೇದಿತಾ ಪಟ್ಟೇದಾರ ಮೇಲೆ ಮತ್ತು ಇವರ ಜಾತಿವಾದಿ ಕೆಲಸಗಳಿಗೆ ಬೆಂಬಲಕೊಡುತ್ತಿರುವ ಕವಿತಾ ಸೊಂಪೂರ ಸೇರಿ ಈ ಇಬ್ಬರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಿ ಶಿಸ್ತು ಕ್ರಮ ಕೈಕೊಳ್ಳುವಂತೆ ಈ ದೂರು ಸಲ್ಲಿಸುತ್ತಿದ್ದೇನೆ. ಈ ಘಟನೆಯು ದಿನಾಂಕಃ 18/07/2022 ರಂದು ಬೆಳಗ್ಗೆ 11.30 ಗಂಟೆಯ ಸುಮಾರಿಗೆ ಆರ.ಎಮ.ಎ.ಎಸ್. ಶಾಲೆಯಲ್ಲಿ ಮುಖ್ಯ ಶಿಕ್ಷಕಿಯ ಕೋಣೆಯಲ್ಲಿ ಜರುಗಿರುತ್ತದೆ ಅಂತಾ ವಗೈರೆ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ನಾನು ದೌಲತ.ಎನ.ಕುರಿ, ಪಿ.ಐ. ಗುರುಮಠಕಲ್ ಪೊಲೀಸ ಠಾಣೆ ಗುನ್ನೆ ನಂ. 138/2022 ಕಲಂ.504 ಐಪಿಸಿ ಮತ್ತು ಕಲಂ.3(1)(ಆರ)(ಎಸ್), 3(2)(ತಚಿ) ಎಸ್.ಸಿ/ಎಸ್.ಟಿ.ಪಿ.ಎ.ಎಕ್ಟ-1989 ನೇದ್ದರಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 06-09-2022 05:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080