ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-10-2022

 

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ:-
ಗುನ್ನೆ ನಂ: 41/2022 ಕಲಂ 279, 337, 338, 283, ಐ.ಪಿ.ಸಿ & 187 ಐ.ಎಮ್.ವಿ. ಆಕ್ಟ್ : ಇಂದು ದಿನಾಂಕ:05/10/2022 ರಂದು 09:00 ಎ.ಎಮ್.ಕ್ಕೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಸ್ವೀಕೃತವಾದ ಆರ್,ಟಿ.ಎ ಎಮ್.ಎಲ್.ಸಿ. ಮಾಹಿತಿ ಮೇರೆಗೆ ನಾನು ಆಸ್ಪತ್ರೆಗೆ ಭೇಟಿಕೊಟ್ಟಿದ್ದು, ಅಪಘಾತದಲ್ಲಿ ಗಾಯಗೊಂಡ ಮುದುಕಪ್ಪ ತಂದೆ ಮಾನಯ್ಯ ಟಣಕೇದಾರ, ವಯ:23 ವರ್ಷ, ಜಾತಿ:ಎಸ್.ಟಿ(ಬೇಡರು), ಉ||ವಿದ್ಯಾಥರ್ಿ,, ಸಾ||ಕನರ್ಾಳ, ತಾ||ಶೋರಾಪೂರ, ಜಿ||ಯಾದಗಿರಿ ಇವರು ಹೇಳಿಕೆ ನೀಡಿದ್ದೇನೆಂದರೆ, ನಿನ್ನೆ ದಿನಾಂಕ:04/10/2022 ರಂದು ನಾನು ಮತ್ತು ನನ್ನ ಗೆಳೆಯರಾದ 1)ಮಹೇಶ ತಂದೆ ಮಲ್ಲಯ್ಯ ಪೂಜಾರಿ, 2)ರಾಮಚಂದ್ರ ತಂದೆ ಯಂಕಣ್ಣ ಅಂಬಿಗೇರ್, 3)ಸಂದೀಪ ತಂದೆ ರಂಗಪ್ಪ ಚೌಡೇಶ್ವರಾಳ, 4)ಬಾಬು ತಂದೆ ಬಂದೇಸಾಬ ಪಿಂಜಾರ್, 5)ಭಾಗೇಶ ತಂದೆ ಯಲ್ಲಪ್ಪ ಬಿರಾದಾರ, 6)ಆಂಜನೇಯ ತಂದೆ ಕನಕಪ್ಪ ನಾಗೊಂಡ, 7)ಸಾಬಯ್ಯ ತಂದೆ ಹಣಮಂತ್ರಾಯ, 8)ದೇವಿಂದ್ರಪ್ಪ ತಂದೆ ತಿಮ್ಮಪ್ಪ, 9)ಭೀಮರಾಯ ತಂದೆ ರಂಗಪ್ಪ, 10)ತಿಮ್ಮಯ್ಯ ತಂದೆ ಹಣಮಂತ್ರಾಯ, 11)ಸಂತೋಷ ತಂದೆ ರಂಗಪ್ಪ, 12)ವಿಷ್ಣು ತಂದೆ ರಾಮಪ್ಪ, 13)ವೀರೇಶ ತಂದೆ ಭೀಮಪ್ಪ, 14)ರಾಜು ತಂದೆ ರಾಮಪ್ಪ, 15)ಸಂಜೀವಪ್ಪ ತಂದೆ ರಾಮಯ್ಯ, 16)ನಾಗರಾಜ ತಂದೆ ಬಸವರಾಜ, 17)ಆಂಜನೇಯ ತಂದೆ ಗೋಪಾಲ, 18)ಹಣಮಗೌಡ ತಂದೆ ರಾಮಯ್ಯ, 19)ಹಣಮಂತ್ರಾಯ ತಂದೆ ಗೋಪಾಲ ಹಾಗು ಇತರರು ಕೂಡಿಕೊಂಡು ನಮ್ಮೂರಿನ ಭೀಮಯ್ಯ ತಂದೆ ಹಣಮಪ್ಪ ಕಟ್ಟಿಗೋಳ ಈತನ ಬೊಲೆರೋ ಪಿಕಪ್ ವಾಹನ ನಂ:ಕೆಎ-33 ಬಿ-3268 ರಲ್ಲಿ ನಮ್ಮೂರಿನಿಂದ ನಾಲವಾರ ಸಮೀಪದ ಅಣ್ಣಿಕೇರಿ ಗ್ರಾಮಕ್ಕೆ ಕಬಡ್ಡಿ ಟೂರ್ನಮೆಂಟ್ಗೆ ಹೋಗಿದ್ದೆವು. ನಿನ್ನೆ ರಾತ್ರಿ ಕಬಡ್ಡಿ ಟೂರ್ನಮೆಂಟ್ದಲ್ಲಿ ಭಾಗವಹಿಸಿ ಇಂದು ದಿನಾಂಕ:05/10/2022 ರಂದು ಬೆಳಗಿನ ಜಾವ 04:00 ಗಂಟೆ ಸುಮಾರಿಗೆ ಅಣ್ಣಿಕೇರಿಯಿಂದ ಯಾದಗಿರಿ ಮಾರ್ಗವಾಗಿ ಕನರ್ಾಳಕ್ಕೆ ಭೀಮಯ್ಯನ ವಾಹನದಲ್ಲಿ ಹೋಗುತ್ತಿದ್ದೆವು. ಮಾರ್ಗಮಧ್ಯ ಯಾದಗಿರಿ-ವಾಡಿ ಮುಖ್ಯ ರಸ್ತೆಯ ಮೇಲೆ ಆರ್ಯಭಟ್ಟ ಶಾಲೆಯ ಸಮೀಪ ರಸ್ತೆಯ ಬದಿಯಲ್ಲಿರುವ ಹೊಟೆಲ್ ಹತ್ತಿರ ನಮ್ಮ ವಾಹನ ಚಾಲಕನಾದ ಭೀಮಯ್ಯನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದಾಗ ಡ್ರೈವರ್ ಸೀಟ್ ಪಕ್ಕದಲ್ಲಿ ಕುಳಿತಿದ್ದ ನಾನು ಆಂಜನೇಯ ಇಬ್ಬರು ವಾಹನವನ್ನು ನಿಧಾನವಾಗಿ ನಡೆಸು ಎಂದು ಭೀಮಯ್ಯನಿಗೆ ಹೇಳಿದರೂ ಕೇಳದೇ ಅದೇ ವೇಗದಲ್ಲಿ ವಾಹನವನ್ನು ನಡೆಸುತ್ತಾ ಹೋಗುವಾಗ ಬೆಳಗ್ಗೆ 05:00 ಗಂಟೆ ಸುಮಾರಿಗೆ ಒಬ್ಬ ಲಾರಿ ಚಾಲಕನು ತನ್ನ ವಾಹನವನ್ನು ಸಂಚಾರ ನಿಯಮಗಳನ್ನು ಪಾಲಿಸದೇ ಪಾಕರ್ಿಂಗ್ ಲೈಟ್ಗಳನ್ನು ಹಾಕದೇ ಮಾನವಜೀವಕ್ಕೆ ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಯ ಮೇಲೆ ನಿಲ್ಲಿಸಿದ್ದ ವಾಹನವನ್ನು ನೋಡಿ ಒಮ್ಮೆಲೆ ಕಟ್ ಹೊಡೆದಿದ್ದರಿಂದ ನಾವು ಕುಳಿತ ವಾಹನಕ್ಕೆ ಎಡಗಡೆ ಬಡಿದು ಅಪಘಾತವಾಗಿದ್ದು, ಹಿಂದುಗಡೆ ಕುಳತಿದ್ದವರೆಲ್ಲರು ವಾಹನದಿಂದ ಸಿಡಿದು ರಸ್ತೆಯ ಮೇಲೆ ಬಿದ್ದರು. ಅಪಘಾತದಲ್ಲಿ ನನಗೆ ಎಡಕಾಲಿನ ಮೊಳಕಾಲಿನ ಮೇಲೆ ಭಾರಿ ಗುಪ್ತಗಾಯವಾಗಿದ್ದು, ಆಂಜನೇಯನಿಗೆ ಬಲಕಾಲಿನ ತೊಡೆಗೆ ಗುಪ್ತಗಾಯವಾಗಿರುತ್ತದೆ. ನಾವು ವಾಹನದಿಂದ ಕೆಳಗೆ ಇಳಿದು ನೋಡಲಾಗಿ ಬೊಲೆರೋ ಪಿಕಪ್ನ ಹಿಂದಿನ ಎಡಗಡೆ ಪಾಟಕ್ ಮುರಿದಿದ್ದು, ವಾಹನದಲ್ಲಿ ಹಿಂದುಗಡೆ ಕುಳಿತಿದ್ದವರೆಲ್ಲರು ರಸ್ತೆಯ ಮೇಲೆ ಬಿದ್ದಿದ್ದು, ಅವರಿಗೆಲ್ಲಾ ಭಾರಿ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದವು. ರಸ್ತೆಯ ಮೇಲೆ ನಿಲ್ಲಿಸಿದ್ದ ಅಶೋಕ ಲೇಲ್ಯಾಂಡ್ ಲಾರಿ ನಂ:ಜಿಜೆ-18 ಬಿಟಿ-6722 ಇದ್ದು, ಅದರ ಚಾಲಕನು ನಮ್ಮನ್ನು ನೋಡಿ ಅಲ್ಲಿಂದ ಓಡಿಹೋಗಿದ್ದು, ಆತನಿಗೆ ನೋಡಿದರೆ ಗುರುತಿಸುತ್ತೇವೆ. ಆಗ ಕೂಡಲೇ ನಾವು ಮತ್ತು ಅಪಘಾತವನ್ನು ನೋಡಿ ರಸ್ತೆಯ ಮೇಲೆ ಹೋಗುತ್ತಿದ್ದವರು ಕೂಡಿಕೊಂಡು ಗಾಯಗೊಂಡವರೆಲ್ಲರನ್ನು ಅಪಘಾತಕ್ಕೀಡಾದ ನಮ್ಮ ವಾಹನದಲ್ಲಿ ಹಾಕಿಕೊಂಡು ಯಾದಗಿರಿ ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿರುತ್ತೇವೆ. ಅಪಘಾತದ ವಿಷಯವನ್ನು ನಮ್ಮ ಸಂಬಂಧಿಕ ಶಿವರಾಜ ತಂದೆ ಹಣಮಂತ ಬಿರಾದಾರ ಇವರಿಗೆ ಫೋನ್ಮಾಡಿ ತಿಳಿಸಿದ್ದು, ನಂತರ ಬಂದು ಅವರು ವಿಚಾರಿಸಿರುತ್ತಾರೆ. ಅಪಘಾತದಲ್ಲಿ ಭಾರಿಗಾಯಗೊಂಡಿದ್ದ ಸಾಬಯ್ಯ, ದೇವಿಂದ್ರಪ್ಪ, ಭೀಮರಾಯ, ತಿಮ್ಮಯ್ಯ, ಸಂತೋಷ, ವಿಷ್ಣು, ವೀರೇಶ, ರಾಜು, ಸಂಜೀವಪ್ಪ, ನಾಗರಾಜ, ಆಂಜನೇಯ ತಂದೆ ಗೋಪಾಲ, ಹಣಮಗೌಡ, ಹಣಮಂತ್ರಾಯ ಇವರಿಗೆ ಹೆಚ್ಚಿನ ಉಪಚಾರ ಕುರಿತು ಕಲಬುರಗಿಗೆ ಕಳುಹಿಸಿರುತ್ತಾರೆ. ಕಾರಣ ಅಪಘಾತಕ್ಕೆ ಕಾರಣವಾದ ಬೊಲೆರೋ ಪಿಕಪ್ ವಾಹನ ನಂ:ಕೆಎ-33 ಬಿ-3268 ಮತ್ತು ಅಶೋಕ ಲೇಲ್ಯಾಂಡ್ ಲಾರಿ ನಂ:ಜಿಜೆ-18 ಬಿಟಿ-6722 ರ ಚಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆಯನ್ನು ಲ್ಯಾಪ್ಟಾಪ್ನಲ್ಲಿ ಪಡೆದುಕೊಂಡು ಮರಳಿ ಠಾಣೆಗೆ ಬಂದು ಸದರಿ ಹೇಳಿಕೆ ಫಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಗುರಮಿಠಕಲ್ ಪೊಲೀಸ್ ಠಾಣೆ:-
ಗುನ್ನೆ ನಂ:145/2022 ಕಲಂ:323, 326, 504, 506 ಸಂ.34 ಐಪಿಸಿ. : ಸುಮಾರು 3 ತಿಂಗಳ ಹಿಂದೆ ಗಾಯಾಳು ನಿಂಗಪ್ಪ ಈತನ ಹೆಂಡತಿಯಾದ ಮಂಜೂಳಾ ಎಂಬಾಕೆಗೆ ಕೈ ಹಿಡಿದಿದ್ದ ವಿಚಾರವಾಗಿ ಆರೋಪಿತರಿಗೆ ಮಿನಾಪೂರ ಗ್ರಾಮದಲ್ಲಿ ನ್ಯಾಯ ಪಂಚಾಯತಿ ಮಾಡಿದ್ದ ವಿಚಾರವಾಗಿ ವೈಶಮ್ಯ ಬೆಳಸಿಕೊಂಡಿದ್ದ ಆರೋಪಿತರು ನಿನ್ನೆ ದಿನಾಂಕ 04.10.2022 ರಂದು ರಾತ್ರಿ 8:45 ಗಂಟೆಯ ಸುಮಾರಿಗೆ ಗಾಯಾಳು ನಿಂಗಪ್ಪ ನರವಾ ಈತನು ಎಣ್ಣೆ ಡಬ್ಬಿಯನ್ನು ಕೇಳುವ ಸಂಬಂದವಾಗಿ ಸಣ್ಣನಾಗಪ್ಪ ಈತನ ಮನೆಗೆ ಬಂದು ಎಣ್ಣೆ ಕಬ್ಬಿಯನ್ನು ಕೇಳಿದಾಗ ಆರೋಪಿತರೆಲ್ಲಾರು ನಿಂಗಪ್ಪನಿಗೆ ಅವಾಚ್ಯ ಶಬ್ದಳಿಂದ ಬೈದು ಅಲ್ಲೇ ಇದ್ದ ಒಣಕೆಯಿಂದ, ಕಬ್ಬಿಣದ ಪೈಪ್ನಿಂದ ಕೈ, ಕಾಲು, ಮೈಗೆ ಹೊಡೆ-ಬಡೆ ಮಾಡಿ ಕಾಲಿನಿಂದ ಒದ್ದಿದ್ದು ಅಲ್ಲದೇ ಜೀವದ ಬೆದರಿಕೆ ಹಾಕಿದ ಬಗ್ಗೆ ಗಾಯಾಳು ನಿಂಗಪ್ಪ ನರವಾ ಈತನ ತಾಯಿಯು ಆತನಿಗೆ ಚಿಕಿತ್ಸೆ ಕುರಿತು ಕಲಬುರಗಿಯಲ್ಲಿ ಆಸ್ಪತ್ರೆಗೆ ಸೇರಿಕೆ ಮಾಡಿದ ನಂತರ ತಡವಾಗಿ ಠಾಣೆಗೆ ಬಂದು ನೀಡಿದ ಬಾಯಿ ಮಾತಿನ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಗುರುಮಠಕಲ್ ಪೊಲೀಸ್ ಠಾಣೆ ಗುನ್ನೆ ನಂಬರ 145/2022 ಕಲಂ:323, 326, 504, 506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು.

 

ನಾರಾಯಣಪೂರ ಪೊಲೀಸ್ ಠಾಣೆ:-
ಗುನ್ನೆ ನಂ. 37/2022 ಕಲಂ: ಮನುಷ್ಯ ಕಾಣೆಯಾದ ಬಗ್ಗೆ : ದಿನಾಂಕ 22/09/2022 ರಂದು 10:30 ಎ.ಎಂ ಸುಮಾರಿಗೆ ಪ್ರಕರಣದ ಪಿಯರ್ಾದಿದಾರರ ತಂಗಿಯ ಗಂಡನಾದ ಕೇವಲರಾಮ ತಂದೆ ಖಾನಾರಾಮ ಸೋಲಂಕಿ ವ:22 ವರ್ಷ ಸಾ:ರಾಖಿ ತಾ:ಸಮದಡಿ ಜಿ:ಬಾರಮೇರ್ ರಾಜ್ಯ - ರಾಜ್ಯಸ್ಥಾನ ಹಾ:ವ: ನಾರಾಯಣಪೂರ ಮೊ.ನಂ 7090505898 ಈತನು ನಾರಾಯಣಪೂರದಲ್ಲಿ ಇರುವ ಪಿಯರ್ಾದಿಯ ಅಮರದೀಪ ಎನ್ನುವ ಕಿರಾಣಿ ಅಂಗಡಿಯಿಂದ ರಿಸ್ಸ್ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಅಂಗಡಿಗೆ ಬರದೆ ಕಾಣೆಯಾಗಿರುತ್ತಾನೆ ಅಂತಾ ಪಿಯರ್ಾದಿಯ ಸಂಕ್ಷಿಪ್ತ ಸಾರಾಂಶವಿರುತ್ತದೆ.

ಇತ್ತೀಚಿನ ನವೀಕರಣ​ : 06-10-2022 10:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080