Feedback / Suggestions

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 05-11-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 162/2021 ಕಲಂ. 435 ಐಪಿಸಿ : ದಿನಾಂಕ: 05-11-2021 ರಂದು ಸಾಯಂಕಾಲ 05-00 ಗಂಟೆಗೆ ಪಿಯರ್ಾಧಿ ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಂಶವೆನೆಂದರೆ ನಾವು ನಮ್ಮ ತಂದೆಯವರ ಕಾಲದಿಂದಲು ಕಡೆಚೂರ ಗ್ರಾಮದ ಪಂಚಾಯಿತಿ ಮುಂದುಗಡೆ ಒಂದು ಪಾನ್ ಶಾಪ್ ಅಂಗಡಿ ಮಾಡಿಕೊಂಡು ಇದ್ದೆವು ಈಗ ಸುಮಾರು ಎರಡು ತಿಂಗಳ ಹಿಂದೆ ಪಾನ್ ಶಾಪ್ ತೆಗೆದು ಅದನ್ನು ಚಪ್ಪಲಿ ಅಂಗಡಿ ಮಾಡಬೇಕೆಂದು ಅದರಲ್ಲಿ ಸುಮಾರು ಅಂದಾಜು 30 ಸಾವಿರ ಮೌಲ್ಯದ ಚಪ್ಪಲಿಗಳನ್ನು ತಂದು ಇಟ್ಟಿದ್ದೆವು ಇನ್ನು ಅದನ್ನು ಚಾಲು ಮಾಡಿರುವದಿಲ್ಲ ಅದನ್ನು ದಿನಾಂಕ: 01-11-2021 ರಂದು ಸೋಮವಾರ ದಂದು ಚಾಲು ಮಾಡಬೇಕಂತ ಅಂತಾ ಯೋಚನೆ ಮಾಡಿದ್ದೆವು, ನಮ್ಮ ಅಂಗಡಿ ಸುತ್ತ ಮುತ್ತ ಇನ್ನು ಕೆಲವು ಅಂಗಡಿ ಡಬ್ಬಿಗಳು ಇರುತ್ತವೆ ಅವರು ಕೂಡ ನಮ್ಮಂತೆ ಬೇರೆ ಬೇರೆ ವ್ಯಾಪರ ಮಾಡಿಕೊಂಡಿರುತ್ತಾರೆ. ದಿನಾಂಕ: 30-10-2021 ರಂದು ಬೆಳಿಗ್ಗೆ 05-00 ಗಂಟೆಗೆ ಎದ್ದು ನಾನು ನಮಾಜ್ ಮಾಡಲು ಹೋಗಿ ನಮಾಜ್ ಮುಗಿಸಿಕೊಂಡು ಬಸ್ ನಿಲ್ದಾಣದ ಹತ್ತಿರ ಬೆಳಿಗ್ಗೆ 06-00 ಗಂಟೆ ಸುಮಾರಿಗೆ ಹೋದಾಗ ನಾವು ಅಲ್ಲಿ ಇಟ್ಟ ಡಬ್ಬಿ ಸುಟ್ಟು ಕರಕಲಾಗಿ ಡಬ್ಬಿಯಲ್ಲಿ ಇಟ್ಟಿರುವ ಅಂದಾಜು 30 ಸಾವಿರ ಮೌಲ್ಯದ ಚಪ್ಪಲುಗಳು ಮತ್ತು 10 ಸಾವಿರ ಮೌಲ್ಯದ ಡಬ್ಬಿ ಸುಟ್ಟು ಕರಕಲಾಗಿರುತ್ತವೆ. ಇದನ್ನು ಯಾರು ಮಾಡಿರಬಹುದು ಅಂತಾ ಮಹಾದೇವಪ್ಪನ ಮನೆಯಲ್ಲಿಟ್ಟಿರುವ ಸಿಸಿ ಕ್ಯಾಮರಾ ಚೆಕ್ ಮಾಡಲಾಗಿ ನಮ್ಮೂರಿನ ಕರೆಣಗೌಡ (ಸ್ವಾಮಿ) ತಂದೆ ಚಂದ್ರಪ್ಪ ಕಲಾಲ ವ|| 45 ವರ್ಷ ಜಾ|| ಈಳಿಗೇರ ಸಾ|| ಕಡೆಚೂರ ಮತ್ತು ಇತರರು ಸೇರಿ ನಾವು ಇಟ್ಟಿರುವ ಡಬ್ಬಿಯನ್ನು ಸುಟ್ಟಬಿಡಬೇಕು ಎಂಬ ಉದ್ದೆಶದಿಂದ ದಿನಾಂಕ: 30-10-2021 ರಂದು ಮದ್ಯ ರಾತ್ರಿ ಅಂದಾಜು 12-10 ಗಂಟೆಯಿಂದ 02-30 ಗಂಟೆ ಅವಧಿಯಲ್ಲಿ ಡಬ್ಬಿಗೆ ಬೆಂಕಿಯನ್ನು ಹಚ್ಚಿ ಸುಟ್ಟು ಒಟ್ಟು 40 ಸಾವಿರ ರೂಪಾಯಿ ನಷ್ಟ ಮಾಡಿದ್ದು ಇರುತ್ತದೆ.

 

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 163/2021 ಕಲಂ. 302, ಐಪಿಸಿ : ದಿನಾಂಕ: 06-11-2021 ರಂದು ಮದ್ಯ ರಾತ್ರಿ 12-30 ಗಂಟೆಗೆ ಪಿಯರ್ಾಧಿದಾರನು ಠಾಣೆಗೆ ಹಾಜರಾಗಿ ಪಿಯರ್ಾಧಿ ನೀಡಿದ ಸಾರಂಶವೇನೆಂದರೆ ನಮ್ಮ ತಮ್ಮ ಸಾಬಯ್ಯ ಇವನು ಸುಮಾರು 3 ವರ್ಷಗಳಿಂದ ಬಳಿಚಕ್ರ ಹತ್ತಿರ ಇರುವ ಡಿ.ಪಿ ಜೈನ್ ಕಂಪನಿಯಲ್ಲಿ ವಾಹನಗಳ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು ದಿನಾಲು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ಹೋಗಿ ರಾತ್ರಿ 07-30 ಗಂಟೆ ಅಥವಾ 08-00 ಗಂಟೆ ಸುಮಾರಿಗೆ ಮನೆಗೆ ಬರುತಿದ್ದನು ಒಂದು ವೇಳೆ ರಾತ್ರಿ ಕೆಲಸ ಇದ್ದರೆ ಮನಗೆ ಬರುತ್ತಿರಲಿಲ್ಲ,
ದಿನಾಂಕ: 05-11-2021 ರಂದು ಬೆಳಿಗ್ಗೆ 08-30 ಗಂಟೆ ಸುಮಾರಿಗೆ ನಮ್ಮ ತಮ್ಮ ಸಾಬಯ್ಯ ಇವನು ಎಂದಿನಂತೆ ನಾನು ಕೆಲಸಕ್ಕೆ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದನು. ನಾನು ರಾತ್ರಿ ಊಟ ಮಾಡಿ ಶೇಂಗಿನ ಹೊಲಕ್ಕೆ ನೀರು ಕಟ್ಟಲು ಹೊಲಕ್ಕೆ ಹೋಗಿ ಹೊಲದಲ್ಲಿ ಶೇಂಗಿನ ಹೊಲಕ್ಕೆ ನೀರು ಕಟ್ಟುತ್ತಿರುವಾಗ ರಾತ್ರಿ 11-00 ಗಂಟೆ ಸುಮಾರಿಗೆ ನಮ್ಮೂರಿನ ಮಲ್ಲಪ್ಪ ತಂದೆ ಬುಗ್ಗಪ್ಪ ಪಲಿಮೇನೋರ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೆನೆಂದರೆ ನಿಮ್ಮ ತಮ್ಮ ಸಾಬಯ್ಯ ಈತನಿಗೆ ಏನೋ ಆಗಿದೆ ಅಂತಾ ಸರಕಾರಿ ಆಸ್ಪತ್ರೆ ಸೈದಾಪೂರದಲ್ಲಿ ಅಡಮೀಟ್ ಮಾಡಿದ್ದಾರೆ ಅಂತಾ ಬೇಗಾ ಬಾ ಎಂದು ಹೇಳಿದ್ದರಿಂದ ನಾನು ಹೊಲದಿಂದ ಮನೆಗೆ ಬಂದು ನಾನು, ನಮ್ಮೂರಿನ ಮಲ್ಲಪ್ಪ ಪಲಿಮೇನೋರ, ಮತ್ತು ಭೀಮಪ್ಪ ತಂದೆ ಬಸವರಾಜ ಶರಟಳ್ಳಿಯೋರ, ರಾಚಪ್ಪ ತಂದೆ ಹಣಮಂತ ಬೋಯಿನ್ ಎಲ್ಲರು ಮೋಟರ ಸೈಕಲ್ಗಳ ಮೇಲೆ ಸೈದಾಪೂರ ಸರಕಾರಿ ಆಸ್ಪತ್ರೆಗೆ ಬಂದೆವು. ಆಸ್ಪತ್ರೆಯಲ್ಲಿ ನನ್ನ ತಮ್ಮ ಸಾಬಯ್ಯ ತಂದೆ ಯಲ್ಲಪ್ಪ ಈತನು ಹೆಣವಾಗಿದ್ದ ನನ್ನ ತಮ್ಮನ ತಲೆಗೆ ಆಸ್ಪತ್ರೆಯ ಬ್ಯಾಂಡೇಜ್ ಹಾಕಿದ್ದರು ಮೈಯಲ್ಲಾ ರಕ್ತವಾಗಿತ್ತು. ನನ್ನ ತಮ್ಮನಿಗೆ ಏನಾಗಿದೆ ಅಂತಾ ಆಸ್ಪತ್ರೆಯಲಿದ್ದ ಆಸ್ಪತ್ರೆ ಸಿಬ್ಬಂದಿಯವರಿಗೆ ವಿಚಾರಿಸಿದಾಗ ಅವರಿಂದ ನನಗೆ ಗೋತ್ತಾಗಿದ್ದೇನೆಂದರೆ ಕರಿಬೆಟ್ಟ ಸಮೀಪ ರೋಡಿನ ಪಕ್ಕದ ಹತ್ತಿ ಬೆಳೆ ಹೊಲದಲ್ಲಿ ನನ್ನ ತಮ್ಮ ಸಾಬಯ್ಯ ಗಾಯಗಳಿಂದ ನರಳಾಡುತ್ತಿರುವಾಗ 108 ಅಂಬುಲೇನ್ಸ ವಾಹನದ ಸಿಬ್ಬಂದಿಯವರು 108 ವಾಹನದಲ್ಲಿ ಹಾಕಿಕೊಂಡು ಸೈದಾಪೂರ ಸರಕಾರಿ ಆಸ್ಪತ್ರೆಗೆ ರಾತ್ರಿ 10-30 ಗಂಟೆ ಸುಮಾರಿಗೆ ತಂದು ವೈದ್ಯಕೀಯ ಉಪಚಾರ ಕುರಿತು ಸೇರಿಕೆ ಮಾಡಿದ್ದಾರೆ ಅಂತಾ ಮತ್ತು ನನ್ನ ತಮ್ಮನ ತಲೆಗೆ, ಮುಖಕ್ಕೆ ಭಾರಿ ರಕ್ತಗಾಯಗಳಾಗಿ ಉಪಚಾರ ಹೊಂದುತ್ತಾ ರಾತ್ರಿ 10-40 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನಂತರ ನನಗೆ ಗೋತ್ತಾಗಿದ್ದೇನೆಂದರೆ ದಿನಾಂಕ: 05-11-2021 ರಂದು ಸಾಯಂಕಾಲ ನನ್ನ ತಮ್ಮ ಸಾಬಯ್ಯ ಮತ್ತು ನನ್ನ ತಮ್ಮನಂತೆ ಡಿ.ಪಿ ಜೈನ್ ಕಂಪನಿಯಲ್ಲಿ ಕೆಲಸ ಮಾಡುವ ಜನ್ನಪ್ಪ ತಂದೆ ಶರಣಪ್ಪ ಉಪ್ಪಾರ ಬಳಿಚಕ್ರ ಗ್ರಾಮ ಇವರಿಬ್ಬರು ನನ್ನ ತಮ್ಮನ ಮೋಟರ ಸೈಕಲ್ ಮೇಲೆ ಸೈದಾಪೂರ ಕಡೆಗೆ ಬಂದಿರುತ್ತಾರೆ ಅಂತಾ ಗೋತ್ತಾಗಿದೆ. ನನ್ನ ತಮ್ಮ ಸಾಬಯ್ಯನಿಗೆ ಜನ್ನಪ್ಪ ಉಪ್ಪಾರ ಈತನೇ ಯಾವುದೋ ಉದ್ದೇಶಕ್ಕೆ ಯಾವುದೋ ವಸ್ತುವಿನಿಂದ ಹೊಡೆದಿರುತ್ತಾನೆ ಅಂತಾ ನನಗೆ ಸಂಶಯ ಇರುತ್ತದೆ. ದಿನಾಂಕ: 05-11-2021 ರಂದು ಸಾಯಂಕಾಲ 05-00 ಗಂಟೆಯಿಂದ ರಾತ್ರಿ 10-00 ಗಂಟೆ ಅವಧಿಯ ಮದ್ಯದಲ್ಲಿ ಘಟನೆ ನಡೆದಿರುತ್ತದೆ. ಕಾರಣ ನನ್ನ ತಮ್ಮ ಸಾಬಯ್ಯ ತಂದೆ ಯಲ್ಲಪ್ಪ ನಾಚವಾರ ವ|| 30 ವರ್ಷ ಜಾ|| ಕಬ್ಬಲಿಗ ಉ|| ಡಿ.ಪಿ ಜೈನ್ ಕಂಪನಿಯಲ್ಲಿ ಚಾಲಕ ಕೆಲಸ ಸಾ|| ನಾಗಲಾಪೂರ ಗ್ರಾಮ ಈತನ ಸಾವಿಗೆ ಕಾರಣರಾದ ಕೋಲೆಗಾರರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಲು ಕೋರಿದೆ ಅಂತಾ ದೂರಿನ ಸಾರಂಶ ಇರುತ್ತದೆ.

 

ಯಾದಗಿರ ಗ್ರಾಮೀಣ ಪೊಲೀಸ ಠಾಣೆ
ಗುನ್ನೆ ನಂ: 149/2021 ಕಲಂ. 32,34 ಕೆ.ಇ ಕಾಯ್ದೆ : ದಿನಾಂಕ 05/11/2021 ರಂದು ಸಾಯಂಕಾಲ 7-00 ಗಂಟೆಗೆ ಶ್ರೀ ಸುರೇಶಕುಮಾರ ಪಿ.ಎಸ್.ಐ(ಕಾ.ಸು) ಸಾಹೇಬರು ಠಾಣೆಗೆ ಬಂದು ವರದಿ, ಜಪ್ತಿ ಪಂಚನಾಮೆ, ಇಬ್ಬರೂ ಆರೋಪಿತರು ಮತ್ತು ಮುದ್ದೆಮಾಲು ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶದ ಏನೆಂದರೆ ಇಂದು ದಿನಾಂಕ 05/11/2021 ರಂದು ಮಧ್ಯಾಹ್ನ 4-30 ಪಿ.ಎಂ ಕ್ಕೆ ಹಳಗೇರಾ ಗ್ರಾಮದ ಹತ್ತಿರ ಇದ್ದಾಗ ಅದೇ ವೇಳೆಗೆ ಯಾದಗಿರಿ ಗ್ರಾಮೀಣ ಠಾಣೆಯ ಶ್ರೀ ಸುರೇಶಕುಮಾರ ಪಿ.ಎಸ್.ಐ (ಕಾಸು) ರವರು ತಮ್ಮ ಸಿಬ್ಬಂಧಿಯವರಾದ ಶ್ರೀ ಕುಮಾರಿ ರೇಣುಕಾ ಪ್ರೊ ಪಿ.ಎಸ್.ಐ ಶ್ರೀ ಶಿವಪುತ್ರ ಎ.ಎಸ್.ಐ, ಶ್ರೀ ಪ್ರಭುಗೌಡ ಪಿಸಿ-361, ಶ್ರೀ ಮೋನಪ್ಪ ಪಿ.ಸಿ 263 ರವರ ಜೋತೆಗೆ ನಮ್ಮಲ್ಲಿಗೆ ಬಂದು ನಮಗೆ ತಿಳಿಸಿದ್ದೆನೆಂದರೆ ಹಳಗೇರಾ ಗ್ರಾಮದಲ್ಲಿ ಶರಣಮ್ಮ ಗಂಡ ಸಂತೋಷ ಕಲಾಲ ಮತ್ತು ಆಕೆ ಅಣ್ಣನಾದ ನಾಗಪ್ಪ ತಂದೆ ರಾಮಯ್ಯ ಕಲಾಲ ಇವರುಗಳು ಅಕ್ರಮವಾಗಿ ಕಳ್ಳಬಟ್ಟಿ ಸರಾಯಿ ಮಾರಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುತ್ತದೆ ಅಂತಾ ತಿಳಿಸಿರುತ್ತಾರೆ, ನಾವು ಅಲ್ಲಿಗೆ ಹೋಗಿ ದಾಳಿ ಮಾಡುವುದಿದ್ದು ನೀವು ನಮ್ಮ ಜೋತೆಗೆ ಬಂದು ಜಪ್ತಿ ಪಂಚನಾಮೆಗೆ ಪಂಚರಾಗಿ ಸಹಕರಿಸಿಬೇಕು ಅಂತಾ ಕೇಳಿಕೊಂಡ ಮೇರೆಗೆ ನಾವು ಉಭಯ ಪಂಚರು ಒಪ್ಪಿಕೊಂಡಾಗ ಪಿ.ಎಸ್.ಐ ರವರು ತಮ್ಮ ಸರಕಾರಿ ಜೀಪ ನಂಬರ ಕೆ.ಎ-33-ಜಿ-0115 ನೆದ್ದರಲ್ಲಿ ನಮ್ಮನ್ನು ಅವರ ಜೋತೆಯಲ್ಲಿ ಕರೆದುಕೊಂಡು ಶರಣಮ್ಮಳ ಮನೆ ಕಡೆಗೆ ಹೋಗಿ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸ್ವಲ್ಪ ಮುಂದುಗಡೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬಳು ತನ್ನ ಮನೆಯ ಮುಂದೆ ಗಿರಾಕಿಗಳಿಗೆ ಕಳ್ಳಬಟ್ಟಿ ಸರಾಯಿಯನ್ನು ಪ್ಲಾಸ್ಟಿಕ್ ಗ್ಲಾಸಗಳಲ್ಲಿ ಹಾಕಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತಪಡಿಸಿಕೊಂಡು ನಮ್ಮ ಸಮಕ್ಷಮ ಸಾಯಂಕಾಲ 5-00 ಗಂಟೆಗೆ ದಾಳಿ ಮಾಡಿ ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಶ್ರೀ ರೇಣುಕಾ ಪಿ.ಎಸ್.ಐ ಮೆಡಂ ಹಿಡಿದುಕೊಂಡರು, ಪಿ.ಎಸ್.ಐ ಮೆಡಂ ಹಿಡಿದುಕೊಂಡವಳ ಹೆಸರು ವಿಳಾಸ ವಿಚಾರಿಸಲಾಗಿ ಅವಳು ತನ್ನ ಹೆಸರು ಶರಣಮ್ಮ ಗಂಡ ಸಂತೋಷ ಕಲಾಲ ವ:29 ಜಾ:ಈಡಿಗ ಉ:ಕೂಲಿ ಕೆಲಸ ಸಾ: ಹಳಿಗೇರಾ ಅಂತಾ ತಿಳಿಸಿದಳು,ನಂತರ ಇನ್ನೂಬ್ಬ ವ್ಯಕ್ತಿಗೆ ಪಿ.ಎಸ್.ಐ ಸರ್ ವಿಚಾರಿಸಲಾಗಿ ಆತನು ತನ್ನ ಹೆಸರು ನಾಗಪ್ಪ ತಂದೆ ರಾಮಯ್ಯ ಕಲಾಲ ವ:40 ಜಾ:ಈಡಿಗ ಉ:ಕೂಲಿ ಕೆಲಸ ಸಾ:ಹಳಗೇರಾ ಸದರಿಯವರು ಕಳ್ಳಬಟ್ಟಿ ಮಾರಾಟ ಮಾಡಲಿಕ್ಕೆ ಸರಕಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧೀಕೃತವಾಗಿ ಮಾರಾಟ ಮಾಡುತ್ತಿದ್ದಾರೆ ಅಂತಾ ಖಚಿತಪಡಿಸಿಕೊಂಡು ಕಳ್ಳಬಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಸ್ಥಳದಲ್ಲಿ ಚೆಕ್ಕ ಮಾಡಿ ನೋಡಲಾಗಿ ಅಲ್ಲಿ ಒಂದು 5 ಲೀಟರಿನ ಪ್ಲಾಸ್ಟೀಕ ಡಬ್ಬಿಯಲ್ಲಿ ಅಂದಾಜು 4 ಲೀಟರದಷ್ಟು ಉಳಿದಿತ್ತು,ಇನ್ನೂಂದು ಪ್ಲಾಸ್ಟಿಕ ಕೊಡದಲ್ಲಿ 4 ಲೀಟರದಷ್ಟು ಇದರ ಅಂದಾಜ ಕಿಮ್ಮತ್ತು 800/- ರೂಪಾಯಿ ಆಗಬಹುದು. ಈ ಕಳ್ಳಬಟ್ಟಿಯನ್ನು ಪರಿಶೀಲಿಸಿ ನೋಡಲಾಗಿ ಅದು ಕೈಯಿಂದ ತಯ್ಯಾರಿಸಿದ ಕಲಬೆರಕೆ ಕಳ್ಳಬಟ್ಟಿ ಸರಾಯಿಯೆ ಇದ್ದು, ಸದರಿ ಕಳ್ಳಬಟ್ಟಿ ಸರಾಯಿ ಜಪ್ತಿಪಡಿಸಿಕೊಂಡು ನಂತರ ಸ್ಯಾಂಪಲಗಾಗಿ ಪ್ರತ್ಯಕ ಎರಡು 180 ಎಮ್.ಎಲ್.ನ ಗಾಜಿನ ಬಾಟಲನಲ್ಲಿ ಪ್ರತ್ಯೇಕವಾಗಿ ಕಳ್ಳಬಟ್ಟಿ ಸಂಗ್ರಹಿಸಿ ಅದಕ್ಕೆ ಪಿ.ಆರ್.ಎಸ್ ಎಂಬ ಇಂಗ್ಲೀಷ ಅಕ್ಷರವುಳ್ಳ ಅರಗಿನಿಂದ ಶೀಲು ಮಾಡಿ ಜಪ್ತಪಡಿಸಿಕೊಂಡು ನಂತರ ಉಳಿದ ಕಳ್ಳಬಟ್ಟಿ ಸರಾಯಿಯನ್ನು ಸಮಾಜದ ಸ್ವಾಸ್ಥದ ದೃಷ್ಟಿಯಿಂದ ನಮ್ಮ ಸಮಕ್ಷಮ ನಾಶಪಡಿಸಿದ್ದು ಇರುತ್ತದೆ.ಕ್ಯಾನ ಮತ್ತು ಪ್ಲಸ್ಟಿಕ ಕೊಡವನ್ನು ಜಪ್ತಿ ಮಾಡಿಕೊಂಡು ಮಾರಾಟ ಮಾಡಿ ಬಂದಂತ ನಗದು ಹಣ 250/ರೂ ಜಪ್ತಿಪಡಿಸಿಕೊಳ್ಳಲಾಯಿತು. ಸದರಿ ಜ್ಯಾಗೆಯ ಚಕ್ಕಬಂದಿ ಈ ಕೆಳಗಿನಂತಿದೆ. ಪೂರ್ವಕ್ಕೆ: ಊರ ಒಳಗಡೆ ಹೊಗುವ ರಸ್ತೆ ಇರುತ್ತದೆ. ಪಶ್ಚಿಮಕ್ಕೆ: ಹಣಮಂತ ಕಲಾಲ ಇವರ ಮನೆ ಇರುತ್ತದೆ, ಉತ್ತರಕ್ಕೆ: ನಾಗಣಗೌಡರ ಇಟ್ಟಿನ ಗಿರಣಿ ಇರುತ್ತದೆೆ. ದಕ್ಷಿಣಕ್ಕೆ: ದೊಡ್ಡಪ್ಪ ತಂದೆ ಖಂಡಪ್ಪ ಕೊರವರ ಇವರ ಮನೆಯಿದೆ. ಸದರಿ ಪಂಚನಾಮೆಯನ್ನು ಇಂದು ದಿನಾಂಕ 05/11/2021 ರಂದು 5-00 ಪಿ.ಎಮ್ ದಿಂದ 6-00 ಪಿ.ಎಮ್ ದವರೆಗೆ ಸ್ಥಳದಲ್ಲಿಯೇ ಮಾಡಿ ಮುಗಿಸಲಾಯಿತು.. ನಂತರ ಮರಳಿ ಠಾಣೆಗೆ 7-00 ಪಿ.ಎಂ. ಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ವರದಿ, ಜಪ್ತಿ ಪಂಚನಾಮೆ, ಇಬ್ಬರೂ ಆರೋಪಿತರು ಮತ್ತು ಮುದ್ದೆಮಾಲುಗಳನ್ನು ತಂದು ಹಾಜರಪಡಿಸಿದ್ದು, ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 149/2021 ಕಲಂ 32, 34 ಕೆ.ಇ. ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ಸಂಚಾರಿ ಪೊಲೀಸ ಠಾಣೆ
ಗುನ್ನೆ ನಂ: 54/2021 ಕಲಂ 279, 338 ಐಪಿಸಿ : ಇಂದು ದಿನಾಂಕ 05/11/2021 ರಂದು 07-15 ಪಿ.ಎಂ.ದ ಸುಮಾರಿಗೆ ಯಾದಗಿರಿ-ಚಿತ್ತಾಪುರ ಮುಖ್ಯ ರಸ್ತೆಯ ಯಾದಗಿರಿ ನಗರದ ಆಶಾಪುರಿ ಸುಪರ್ ಬಜಾರ್ ಹತ್ತಿರ ಮುಖ್ಯ ರಸ್ತೆಯ ಈ ಕೇಸಿನ ಗಾಯಾಳು ತಮ್ಮ ಮೋಟಾರು ಸೈಕಲ್ ನಂಬರ ಕೆಎ-33, ಇಎ-9096 ನೇದ್ದನ್ನು ಯಾದಗಿರಿ ನಗರದ ಅನ್ಸಾರಿ ಹೊಟೆಲ್ ಕಡೆಯಿಂದ ಆಶಾಪುರಿ ಅಂಗಡಿ ಕಡೆಗೆ ಬಲಕ್ಕೆ ಟನರ್್ ಮಾಡುತ್ತಿದ್ದಾಗ ಈ ಕೇಸಿನ ಆರೋಪಿತನು ತನ್ನ ಕಾರ್ ನಂಬರ ಕೆಎ-33, ಎಮ್-6213 ನೆದ್ದನ್ನು ಯಾದಗಿರಿ ನಗರದ ಸುಭಾಷ್ ವೃತ್ತದ ಕಡೆಯಿಂದ ವಾಡಿ ಕಡೆಗೆ ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೋಗುತ್ತಾ ಗಾಯಾಳುವಿಗೆ ನೇರವಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದು, ಸದರಿ ಅಪಘಾತದಲ್ಲಿ ಗಾಯಾಳುವಿಗೆ ಬಲಗಾಲಿನ ಪಾದದ ಮೇಲೆ ಭಾರೀ ಒಳಪೆಟ್ಟಾಗಿ ಮುರಿದಿದ್ದು, ಈ ಘಟನೆಗೆ ಕಾರಣನಾದ ಕಾರ್ ಚಾಲಕನ ಮೇಲೆ ಸೂಕ್ತ ಕಾನೂನಿನ ಕ್ರಮ ಜರುಗಿಸುವ ಬಗ್ಗೆ ಪಿಯರ್ಾದಿ ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

Last Updated: 06-11-2021 10:15 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080