ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 06-12-2021

ಶಹಾಪೂರ ಪೊಲೀಸ ಠಾಣೆ
ಗುನ್ನೆ ನಂಬರ 244/2021 ಕಲಂ, 379 ಐ.ಪಿ.ಸಿ : ಇಂದು ದಿನಾಂಕ 05/12/2021 ರಂದು, ಸಂಜೆ 18-00 ಗಂಟೆಗೆ ಫಿರ್ಯಾದಿ ಶ್ರೀ ಮೌನೇಶ ತಂದೆ ಶಿವಪ್ಪ ಜಾರಕಿಹೊಳೆ, ವಯಸ್ಸು 27 ವರ್ಷ ಜಾತಿ ಪ.ಜಾತಿ(ಹೊಲೆಯ) ಉಃ ಸಮಾಜ ಸೇವೆ ಸಾಃ ಬಿರನೂರ ತಾಃ ಶಹಾಪೂರ ಜಿಃ ಯಾದಗಿರಿ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ನಾನು ಸಮಾಜ ಸೇವೆ ಹಾಗೂ ಇತರೆ ಖಾಸಗಿ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಮಾವನವರಾದ ಶ್ರೀ ಶಂಭುಲಿಂಗಪ್ಪ ತಂದೆ ಧರ್ಮಣ್ಣ ನಾಟೇಕಾರ, ವಯಸ್ಸು 35 ವರ್ಷ ಸಾಃ ವಿಭೂತಿಹಳ್ಳಿ ಇವರ ಹೆಸರಿನಲ್ಲಿ ಒಂದು ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ್ ಸೈಕಲ್ ನಂಬರ ಕೆಎ-33-ಜೆ-6232 ಇದ್ದು, ಚೆಸ್ಸಿ ನಂಬರಃ- ಒಃಐಊಂ10ಇಎ9ಊಏ49783 & ಇಂಜಿನ್ ನಂಬರ ಊಂ10ಇಂ9ಊಏ99442, ಮೋಟರ್ ಸೈಕಲ್ ಅಂದಾಜು 40,000=00 ರೂಪಾಯಿ ಕಿಮ್ಮತ್ತಿನದು ಇರುತ್ತದೆ. ಸದರಿ ಮೋಟರ ಸೈಕಲ್ ನನ್ನ ಖಾಸಗಿ ಕೆಲಸಗಳಿಗೆ ಉಪಯೋಗ ಮಾಡಿಕೊಂಡು, ಅಂದಾಜು 2 ವರ್ಷಗಳಿಂದ ನನ್ನ ಹತ್ತಿರವೇ ಇಟ್ಟುಕೊಂಡಿದ್ದೇನು. ಹೀಗಿರುವಾಗ ದಿನಾಂಕ 28/09/2021 ರಂದು, ನನ್ನ ಖಾಸಾ ಅಣ್ಣನಾದ ಭೀಮಾಶಂಕರ ತಂದೆ ಶಿವಪ್ಪ ಜಾರಕಿ ಹೊಳೆ ವಯಸ್ಸು 30 ವರ್ಷ ಇವರು ನಮ್ಮ ಹೊಲಕ್ಕೆ ಹತ್ತಿ ಬೆಳೆಗೆ ಎಣ್ಣೆ ಸಿಂಪಡಿಸಲು ಹೋಗಿದ್ದು ಆ ದಿನ ನನ್ನ ಅಣ್ಣನು ಮಧ್ಯಾಹ್ನದ ಊಟ ತೆಗೆದುಕೊಂಡು ಹೋಗಿರಲಿಲ್ಲ ನನಗೆ ಮಧ್ಯಾಹ್ನದ ಸುಮಾರಿಗೆ ಊಟ ತೆಗೆದುಕೊಂಡು ಬರಲು ಹೇಳಿ ಹೋಗಿದ್ದರು. ಅದರಂತೆ ನಾನು ಮಧ್ಯಾಹ್ನದ ಸುಮಾರಿಗೆ ಮನೆಯಿಂದ ಊಟ ಕೊಟ್ಟು ಬರಲು ಮೋಟರ್
ಸೈಕಲ್ ನಂ ಕೆಎ-33-ಜೆ-6232 ನೇದ್ದನ್ನು ತೆಗೆದುಕೊಂಡು ಬಿರನೂರ ಸೀಮಾಂತರದಲ್ಲಿ ದೇವದುರ್ಗ- ಹತ್ತಿಗೂಡುರ ರೋಡಿನ ಬದಿಗೆ ಇರುವ ನಾಗಣ್ಣ ಸಾಹುಕಾರ ಇವರ ಹೊಲದಲ್ಲಿ ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಮೋಟರ್ ಸೈಕಲ್ ನಿಲ್ಲಿಸಿ ನನ್ನ ಅಣ್ಣನಿಗೆ ಊಟ ಕೊಟ್ಟು ಸ್ವಲ್ಪ ಸಮಯ ಅಲ್ಲಿಯೇ ಇದ್ದು ನಂತರ ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ ನಾನು ಮೋಟರ್ ಸೈಕಲ್ ನಿಲ್ಲಿಸಿದ ಸ್ಥಳದ ಹತ್ತಿರ ಬಂದು ನೋಡಲಾಗಿ ನನ್ನ ಮೋಟರ್ ಸೈಕಲ್ ಕಾಣಲಿಲ್ಲ ನನಗೆ ಬೇಕಾದವರು ಅಲ್ಲಿಯೇ ಅಕ್ಕ-ಪಕ್ಕದಲ್ಲಿ ನಿಲ್ಲಿಸಿರಬಹುದು ಅಂತ ತಿಳಿದುಕೊಂಡು ಮೋಟರ್ ಸೈಕಲ್ ಹುಡಕಾಡಿದ್ದು ಎಲ್ಲಿಯೂ ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ನಂತರ ನನ್ನ ಅಣ್ಣನ ಹತ್ತಿರ ಹೋಗಿ ಮೋಟರ್ ಸೈಕಲ್ ಸ್ಥಳದಲ್ಲಿ ಇರದೇ ಇರುವ ಬಗ್ಗೆ ವಿಷಯ ತಿಳಿಸಿ ಇಬ್ಬರೂ ಕೂಡಿ ಹುಡಕಾಡಿದ್ದು ಸಿಕ್ಕಿರುವುದಿಲ್ಲ. ನಂತರ ಬಿರನೂರ ಕ್ರಾಸ್, ದೇವದುರ್ಗ ಕ್ರಾಸ್, ಹತ್ತಿಗೂಡುರ, ಕೊಂಗಂಡಿ, ಕೃಷ್ಣಾಪೂರ, ಎಮ್.ಕೊಳ್ಳುರ ಗ್ರಾಮದ ಕಡೆಗೆ ಹೋಗಿ ಹುಡಕಾಡಿದ್ದು ಮೋಟರ್ ಸೈಕಲ್ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನಂತರ ಈ ವಿಷಯವನ್ನು ನನ್ನ ಮಾವ ಶಂಭುಲಿಂಗಪ್ಪ ಇವರಿಗೆ ತಿಳಿಸಿದ್ದು, ನಮ್ಮ ಮಾವನವರು ಕೂಡಾ ಮೋಟರ್ ಸೈಕಲ್ ಹುಡಕಾಡಲು ನಮ್ಮ ಜೊತೆಯಲಿ ಒಂದು ದಿನ ಶಹಾಪೂರಕ್ಕೆ ಬಂದಿದ್ದರು ಆ ದಿನವು ಶಹಾಪೂರದಲ್ಲಿಯೂ ನಮ್ಮ ಮೋಟರ್ ಸೈಕಲ್ ಸಿಕ್ಕಿರುವುದಿಲ್ಲ. ಮೋಟರ್ ಸೈಕಲ್ ಇಂದಲ್ಲಾ ನಾಳೆ ಸಿಗಬಹುದು ಅಂತ ಭರವಸೆಯಲ್ಲಿ ಠಾಣೆಗೆ ಬಂದು ದೂರು ಸಲ್ಲಿಸಿರುವುದಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದರು ಮೇಲ್ಕಂಡ ಮೋಟರ್ ಸೈಕಲ್ ಸಿಗಲಾರದಿಂದ ತಡವಾಗಿ ಇಂದು ದಿನಾಂಕ 05/12/2021 ರಂದು ಠಾಣೆಗೆ ಹಾಜರಾಗಿ ಕಳುವಾದ ಮೋಟರ್ ಸೈಕಲ್ ಬಗ್ಗೆ ದೂರು ಸಲ್ಲಿಸುತಿದ್ದೇನೆ. ದಿನಾಂಕ 28/09/2021 ರಂದು ಮಧ್ಯಾಹ್ನ 12-30 ಗಂಟೆಯ ಸುಮಾರಿಗೆ ಬಿರನೂರ ಸೀಮಾಂತರದ ನಮ್ಮೂರ ನಾಗಣ್ಣ ಸಾಹುಕಾರ ಇವರ ಹೊಲದಲ್ಲಿ ಮೋಟರ್ ಸೈಕಲ್ ನಂ ಕೆಎ-33-ಜೆ-6232 ನೇದ್ದನ್ನು ನಿಲ್ಲಿಸಿ ನನ್ನ ಅಣ್ಣನಿಗೆ ಊಟ ಕೊಟ್ಟು ಬರಲು ಹೋದಾಗ, ಮಧ್ಯಾಹ್ನ 2-00 ಗಂಟೆಯ ಮಧ್ಯದ ಅವಧಿಯಲ್ಲಿ 40,000=00 ರೂಪಾಯಿ ಕಿಮ್ಮತ್ತಿನ ಮೋಟರ್ ಸೈಕಲ್ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹುಡಕಾಡಿದ್ದು ಸಿಕ್ಕಿರುವುದಿಲ್ಲ. ಕಾರಣ ಕಳುವಾದ ಮೋಟರ ಸೈಕಲ್ ಬಗ್ಗೆ ಕ್ರಮ ಜರುಗಿಸಿ ಪತ್ತೆ ಮಾಡಿ ಕೊಡಲು ವಿನಂತಿ ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 244/2021 ಕಲಂ 379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

 


ಕೆಂಭಾವಿ ಪೊಲೀಸ್ ಠಾಣೆ
ಗುನ್ನೆ ನಂ 173/2021 ಕಲಂ: 323,498[ಎ],504,506 ಸಂಗಡ 34 ಐಪಿಸಿ & 3,4 ಡಿಪಿ ಆಕ್ಟ್ : ಇಂದು ದಿನಾಂಕ 05.12.2021 ರಂದು 06.30 ಪಿ.ಎಂ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಾರದಾ ಗಂಡ ಗೋಪಾಲ ಹುಲಕಲ್ ವ|| 23 ಉ|| ಕೂಲಿಕೆಲಸ ಸಾ|| ಸುರಪೂರ ತಾ|| ಸುರಪೂರ ರವರು ಠಾಣೆಗೆ ಹಾಜರಾಗಿ ಒಂದು ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರುಪಡಿಸಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನ್ನ ತವರು ಮನೆಯು ಸುರಪೂರ ತಾಲೂಕಿನ ಮಾಲಗತ್ತಿ ಗ್ರಾಮವಾಗಿದ್ದು ನನಗೆ ದಿನಾಂಕ 20.02.2020 ರಂದು ಸುರಪೂರ ಪಟ್ಟಣದ ಗೋಪಾಲ ತಂದೆ ಗಂಗಪ್ಪ ಹುಲಕಲ ಇವರಿಗೆ ಕೊಟ್ಟು ಸುರಪೂರ ತಾಲೂಕಿನ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ. ಮದುವೆಯ ಸಮಯದಲ್ಲಿ ನನ್ನ ತಂದೆ ತಾಯಿ ವರೋಪಚಾರ ಅಂತ 50,000/- ರೂ ಹಾಗು 03 ತೊಲಿ ಬಂಗಾರವನ್ನು ಕೊಟ್ಟು ಮದುವೆ ಮಾಡಿದ್ದು ಇರುತ್ತದೆ. ಮದುವೆಯಾದ ನಂತರ ನಾವು ಗಂಡ ಹೆಂಡತಿ ಇಬ್ಬರೂ ಅನೂನ್ಯವಾಗಿ ವೈವಾಹಿಕ ಜೀವನ ನಡೆಸಿದ್ದು ಸದ್ಯ ನನಗೆ 4 ತಿಂಗಳ ಅಪರ್ಿತಾ ಎಂಬ ಹೆಣ್ಣು ಮಗಳಿರುತ್ತಾಳೆ. ನಂತರದ ದಿನಗಳಲ್ಲಿ ನನ್ನ ಗಂಡ ಗೋಪಾಲ ತಂದೆ ಗಂಗಪ್ಪ ಹುಲಕಲ್, ಮಾವ ಗಂಗಪ್ಪ ತಂದೆ ಚಂದಪ್ಪ ಹುಲಕಲ್ ನನ್ನ ಗಂಡನ ಅಣ್ಣ ರವಿ ತಂದೆ ಗಂಗಪ್ಪ ಹುಲಕಲ ಹಾಗು ಅತ್ತೆಯಾದ ಗೌರಮ್ಮ ಗಂಡ ಗಂಗಪ್ಪ ಹುಲಕಲ್ ಈ ನಾಲ್ಕು ಜನರು ಸೇರಿ ನನಗೆ ನೀನು ನಿನ್ನ ತವರು ಮನೆಯಿಂದ ಇನ್ನೂ 2 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ ಅಂತ ನನಗೆ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡಲಿಕ್ಕೆ ಹತ್ತಿದರು. ನಾನು ಸ್ವಲ್ಪ ದಿನ ಕಳೆದರೆ ಸುಮ್ಮನಿರಬಹದು ಅಂತ ಅವರ ಕಿರುಕುಳವನ್ನು ಸಹಿಸಿಕೊಂಡು ಸುಮ್ಮನಿದ್ದೆನು. ಹೀಗಿರುವಾಗ 4 ತಿಂಗಳ ಹಿಂದೆ ನನಗೆ ಹೇಣ್ಣು ಮಗುವಾಗಿದ್ದು ಇನ್ನಾದರೂ ಸಂತೋಷದಿಂದ ಇರುತ್ತಾರೆ ಅಂತ ಎಂಬ ನಂಬಿಕೆಯಿಂದ ಹೆರಿಗೆಯಾದ ನಂತರ ನಮ್ಮ ಮನೆ ಮಾಲಗತ್ತಿಗೆ ಬಂದು ಒಂದು ತಿಂಗಳವರೆಗೆ ಇದ್ದು ನಂತರ ನನ್ನ ಗಂಡನ ಮನೆಗೆ ಹೋಗಿದ್ದು ನಂತರ ನನ್ನ ಗಂಡ ಹಾಗು ಅವರ ಮನೆಯವರು ನನಗೆ ತಾತ್ಸಾರದಿಂದ ನೋಡುವದು ಹಾಗು ನಿನಗೆ ಈ ಹಿಂದೆ ಇನ್ನೂ 2 ಲಕ್ಷ ವರದಕ್ಷಿಣೆ ತರುವಂತೆ ಹೇಳಿದರು ನೀನು ಕೇಳಿಲ್ಲ ಎಂದು ನನ್ನ ಗಂಡ, ಮಾವ, ಅತ್ತೆ ಹಾಗು ಗಂಡನ ಅಣ್ಣ ಈ ನಾಲ್ಕು ಜನರು ಸೇರಿ ನನಗೆ ಸುರಪೂರದ ನನ್ನ ಗಂಡನ ಮನೆಯಿಂದ ಹೊರಗೆ ಹಾಕಿದ್ದು ಅಂದೇ ನಾನು ನನ್ನ ತವರು ಮನೆಯಾದ ಮಾಲಗತ್ತಿ ಗ್ರಾಮಕ್ಕೆ ಬಂದು ನಮ್ಮ ತಂದೆ ತಾಯಿಯ ಹತ್ತಿರ ವಾಸವಾಗಿದ್ದೆನು.ಅಲ್ಲದೇ ಹೀಗಿದ್ದು ದಿನಾಂಕ 04.12.2021 ರಂದು ಸಾಯಂಕಾಲ 5 ಗಂಟೆಯ ಸುಮಾರಿಗೆ ನಾನು ನನ್ನ ತವರು ಮನೆಯಲ್ಲಿದ್ದಾಗ ನನ್ನ ಗಂಡ ,ಅತ್ತೆ, ಮಾವ ಹಾಗು ಗಂಡನ್ ಅಣ್ಣ ಈ ನಾಲ್ಕು ಜನರು ನಮ್ಮ ಮನೆಗೆ ಬಂದು ನನ್ನ ಗಮಡ ಎನಲೇ ನಿನಗೆ ವರದಕ್ಷಿಣೆ ಹಣ ತರುವಂತೆ ಹೇಳಿದರೇ ಇನ್ನು ಇಲ್ಲಿಯೇ ಕುಂತಿದ್ದೀಯಾ ಅನ್ನುತ್ತಾ ಕೈಯಿಂದ ನನ್ನ ಕಪಾಳಕ್ಕೆ ಹೊಡೆದಿದ್ದುಅತ್ತೆಯಾದ ಗೌರಮ್ಮ ಇವಳು ಎಲೇ ಬೋಸಡಿ ನಿನ್ನ ಸೊಕ್ಕು ಬಹಾಲ ಆಗಿದೆ ಅಂತ ಅನ್ನುತ್ತಾ ನನ್ನ ಜಡೆ ಹಿಡಿದು ಎಳೆದಾಡಿದ್ದು ನನ್ನ ಮಾವನಾದ ಗಂಗಪ್ಪ ಮತ್ತು ಗಂಡನ ಅಣ್ಣನಾದ ರವಿ ಇವರು ಸಹ ಕೈಯಿಂದ ಬೆನ್ನಿಗೆ ಹೊಡೆದಿದ್ದು ನಾನು ಚೀರಾಡಲಿಕ್ಕೆ ಹತ್ತಿದಾಗ ನನ್ನ ತಾಯಿ ಶಿವಪುತ್ರವ್ವ ಮತ್ತು ಅಣ್ಣನಾದ ಮಾನಪ್ಪ ಇವರು ಬಂದು ಸಮಾದಾನ ಮಾಡಿ ಬಿಡಿಸಿಕೊಂಡಿದ್ದು ನಂತರ ಎಲ್ಲರೂ ನಾವು ಮುಂದಿನ ಬಾರಿ ಬರುವವರೆಗೆ ಹಣ ಕೊಡದಿದ್ದರೆ ನಿನ್ನನ್ನು ಖಲಾಸ ಮಾಡುತ್ತೇವೆ ಅಂತ ಜೀವದ ಭಯ ಹಾಕಿ ಹೋದರು. ಕಾರಣ ಮೇಲ್ಕಾಣಿಸಿದ ನಾಲ್ಕು ಜನರ ಮೇಲೆ ಕ್ರಮ ಜರುಗಿಸಬೇಕು ಅಂತ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 173/2021 ಕಲಂ 323,504.506.498[ಎ] ಸಂಗಡ 34 ಐಪಿಸಿ ಮತ್ತು 3 & 4 ಡಿಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 06-12-2021 10:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080