ಅಭಿಪ್ರಾಯ / ಸಲಹೆಗಳು

 ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-03-2022


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 44/2022 ಕಲಂ 323, 498(ಎ), 504, 506 ಸಂಗಡ 34 ಐಪಿಸಿ ಮತ್ತು 3 & 4 ಡಿಪಿ ಆಕ್ಟ್ : ಇಂದು ದಿನಾಂಕ 06/03/2022 ರಂದು 8.30 ಪಿ.ಎಂ ಕ್ಕೆ ಫಿಯರ್ಾದಿ ಅಜರ್ಿದಾರರಾದ ಶ್ರೀಮತಿ ಶಿವಲೀಲಾ ಗಂಡ ಬಸವರಾಜ ಪೊಲೀಸ್ ಪಾಟೀಲ್ ವ|| 21ವರ್ಷ ಜಾ|| ಕುರುಬರ ಉ|| ಮನೆಗೆಲಸ ಸಾ|| ದಂಡಸೋಲಾಪೂರ ಹಾ|| ವ|| ಗುಂಡಾಪೂರ ರವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಸದರಿ ಅಜರ್ಿಯ ಸಾರಾಂಶವೇನೆಂದರೆ, ನನ್ನ ತವರುಮನೆಯು ಗುಂಡಾಪೂರ ಗ್ರಾಮವಾಗಿದ್ದು ನನಗೆ ನಮ್ಮ ತಂದೆ ತಾಯಿಯರು 2ವರ್ಷಗಳ ಹಿಂದೆ ದಂಡಸೋಲಾಪೂರ ಗ್ರಾಮದ ಬಸವರಾಜ ತಂದೆ ಶಾಂತಗೌಡ ಪೊಲೀಸ್ ಪಾಟೀಲ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆಯಲ್ಲಿ ನನ್ನ ಗಂಡನಿಗೆ ವರದಕ್ಷಿಣೆಯಾಗಿ 6 ತೊಲಿ ಬಂಗಾರ ನೀಡಿರುತ್ತಾರೆ. ನನ್ನ ಗಂಡನಾದ ಬಸವರಾಜನು ನಗನೂರಿನ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ದಂಡಸೋಲಾಪೂರ ಗ್ರಾಮದ ನಮ್ಮ ಮನೆಗೆ ದಿನಾಲೂ ಶಾಲೆಯಿಂದ ಹೋಗುವುದು ಬರುವುದು ಮಾಡುತ್ತಿದ್ದನು. ಮನೆಯಲ್ಲಿ ನಮ್ಮ ಅತ್ತೆ ಮತ್ತು ನಾನು ಇರುತ್ತಿದ್ದೆವು. ಮದುವೆಯಾದ ನಂತರ ನಾನು ಮತ್ತು ನನ್ನ ಗಂಡ ಇಬ್ಬರೂ ಅನ್ಯೋನ್ಯವಾಗಿ ಸಂಸಾರ ಸಾಗಿಸುತ್ತಾ ಬಂದಿದ್ದು ನಮಗೆ ಒಂದು ವರ್ಷದ ಆದ್ಯಶ್ರೀ ಅಂತಾ ಹೆಣ್ಣು ಮಗು ಇರುತ್ತದೆ. ಆದರೆ ನನಗೆ ಸುಮಾರು 1 ವರ್ಷದ ಹಿಂದೆ ಅಂದರೆ ನಾನು ಗಭರ್ಿಣಿ ಇದ್ದಾಗ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿದಾಗ ನನಗೆ ಕಾಮಾಲೆ ರೋಗ ಇರುತ್ತದೆ ಅಂತಾ ವೈದ್ಯರು ವರದಿ ನೀಡಿ ನನಗೆ ಚಿಕಿತ್ಸೆ ಕೊಟ್ಟಿದ್ದು ವೈದ್ಯರು ನೀಡಿದ ಔಷಧಿಯನ್ನು ಸೇವಿಸಿದ್ದರಿಂದ ನನಗೆ ಕಾಮಾಲೆ ರೋಗದ ಬಗ್ಗೆ ಯಾವುದೇ ಸಮಸ್ಯೆ ಅನಿಸಲಿಲ್ಲ. ಮತ್ತು ನನ್ನ ಮಗುವಿಗೂ ಯಾವುದೇ ಸಮಸ್ಯೆ ಬಂದಿಲ್ಲ. ಹೀಗಿದ್ದು ನಾನು ನನ್ನ ಹೆರಿಗೆಯಾದ 3 ತಿಂಗಳ ನಂತರ ಗಂಡನ ಮನೆಗೆ ಹೋದೆನು. ಆಗ ನನ್ನ ಗಂಡನಾದ ಬಸವರಾಜನು ತನ್ನ ತಾಯಿಯಾದ ಮಲ್ಲಮ್ಮ ಗಂಡ ಶಾಂತಗೌಡ ಪೊಲೀಸ್ ಪಾಟೀಲ್ ಮತ್ತು ಅವನ ಅಣ್ಣನಾದ ಬಾಪುಗೌಡ ತಂದೆ ಶಾಂತಗೌಡ ಪೊಲೀಸ್ ಪಾಟೀಲ್ ಇವರ ಮಾತು ಕೇಳಿ ನನಗೆ ವಿನಾಕಾರಣ ಬೈಯುವುದು, ನೀನು ಸರಿ ಇಲ್ಲ, ನಿನ್ನ ತವರುಮನೆಯಿಂದ ಇನ್ನೂ 4 ತೊಲಿ ಬಂಗಾರ ವರದಕ್ಷಿಣೆ ತೆಗೆದುಕೊಂಡು ಬಂದರೆ ನಮ್ಮ ಹತ್ತಿರ ಇಟ್ಟುಕೊಳ್ಳುತ್ತೇವೆ ಇಲ್ಲದಿದ್ದರೆ ನೀನು ನಮ್ಮ ಹತ್ತಿರ ಇರಬೇಡ, ನಿನಗೆ ಕಾಯಿಲೆಯೂ ಕೂಡಾ ಇದೆ ಅಂತಾ ಅನ್ನುವುದು ಮಾಡುತ್ತಾ ಬಂದನು. ಅವರು ಏನೇ ಅಂದರೂ ಸಹಿಸಿಕೊಂಡು ಗಂಡನ ಮನೆಯಲ್ಲಿ ಇದ್ದು ಜೀವನ ಸಾಗಿಸುತ್ತಾ ನಾನು ಗಂಡನ ಮನೆಯಲ್ಲಿ 8-10 ದಿನಗಳ ಕಾಲ ಇದ್ದರೂ ನನ್ನ ಗಂಡನು ನನಗೆ ದೂಷಿಸುತ್ತಾ ನನ್ನ ಹತ್ತಿರ ಬರದೇ ದೂರ ಇರಲು ಪ್ರಾರಂಭಿಸಿದನು. ಆಗ ನಾನು ನಮ್ಮ ತಂದೆಗೆ ಫೋನ್ ಮಾಡಿ ನಡೆದ ವಿಷಯ ತಿಳಿಸಿದಾಗ ನಮ್ಮ ತಂದೆಯವರು ಬಂದು ನನ್ನ ಗಂಡ, ಅತ್ತೆ, ಹಾಗೂ ಭಾವ ಮೂರೂ ಜನರಿಗೆ ವಿಚಾರಿಸಿ ಸರಿಯಾಗಿ ನೋಡಿಕೊಳ್ಳಿರಿ ಅಂದಾಗ ನಿಮ್ಮ ಮಗಳಿಗೆ ನಾವು ಹೇಳಿದಂತೆ ಇನ್ನೂ 4 ತೊಲಿ ಬಂಗಾರ ಕೊಡಬೇಕು ಅಂದರೆ ಮಾತ್ರ ಮನೆಯಲ್ಲಿ ಕರೆದುಕೊಳ್ಳುತ್ತೇವೆ ಅಂದಾಗ ನಮ್ಮ ತಂದೆಯು ನನಗೆ ಗಂಡನ ಮನೆಯಿಂದ ತವರುಮನೆಗೆ ಕರೆದುಕೊಂಡು ಹೋದರು. ನಾನು ನಮ್ಮ ತಂದೆ ತಾಯಿಯರ ಹತ್ತಿರ ತವರುಮನೆಯಲ್ಲಿ ನನ್ನ ಮಗಳನ್ನು ನೋಡಿಕೊಂಡು ಇದ್ದೆನು. ಹೀಗಿದ್ದು ದಿನಾಂಕ 27/02/2022 ರಂದು ರವಿವಾರದಂದು 12.30 ಪಿಎಂ ಕ್ಕೆ ನಮ್ಮ ತಂದೆಯಾದ ಬನ್ನೆಪ್ಪ ತಂದೆ ಮಲ್ಲಪ್ಪ ದೊಡ್ಡಮನಿ, ನಮ್ಮ ದೊಡ್ಡಪ್ಪನಾದ ಮಾನಪ್ಪ ತಂದೆ ನಿಂಗಪ್ಪ ದೊಡ್ಡಮನಿ ಇಬ್ಬರೂ ಕೂಡಿ ನನಗೆ ನನ್ನ ಗಂಡನ ಮನೆಗೆ ಕರೆದುಕೊಂಡು ಹೋಗಿ ನನ್ನ ಗಂಡ, ಅತ್ತೆ, ಭಾವ ಮೂರು ಜನರಿಗೆ ನಮ್ಮ ಮಗಳಿಗೆ ಸರಿಯಾಗಿ ನೋಡಿಕೊಳ್ಳಿರಿ ನೀವು ಹೇಳಿದಂತೆ 1 ತಿಂಗಳಲ್ಲಿ ಬಂಗಾರ ತಂದು ಕೊಡುತ್ತೇವೆ ಅಂತಾ ಹೇಳಿ ನನಗೆ ಗಂಡನ ಮನೆಯಲ್ಲಿ ಬಿಟ್ಟು 1.00 ಪಿಎಂ ಸುಮಾರಿಗೆ ಮನೆಯಿಂದ ಹೊರಗೆ ಹೋಗುತ್ತಿದ್ದರು. ಆಗ ನನ್ನ ಗಂಡನಾದ ಬಸವರಾಜನು ಎಲೇ ಸೂಳಿ ನಿನಗೆ ಕಾಯಿಲೆ ಇದೆ, ನೀನು ಬಂಗಾರ ತಂದರೆ ಮಾತ್ರ ಇಲ್ಲಿಗೆ ಬಾ ಅಂತಾ ಹೇಳಿದರೂ ಮತ್ತೆ ಯಾಕೆ ಬಂದಿರುವಿ ಅಂತಾ ನನಗೆ ಕಪಾಳಕ್ಕೆ ಹೊಡೆದನು. ಆಗ ನಮ್ಮ ಅತ್ತೆಯಾದ ಮಲ್ಲಮ್ಮ ಮತ್ತು ಭಾವನಾದ ಬಾಪುಗೌಡ ಇವರು ಏನಲೇ ಶಿವಲೀಲಿ ನಿಮ್ಮ ಅಪ್ಪ ಬಂದರೆ ಅಂಜುತ್ತೇವೆ ಅಂತಾ ತಿಳಿದಿ ಏನು ನಾವು ಯಾರಿಗೂ ಅಂಜಲ್ಲ, ಈಗಲೇ ಮನೆ ಬಿಟ್ಟು ಹೋಗುತ್ತಿಯೋ ಇಲ್ಲ ಹೊರಗೆ ದಬ್ಬಿ ಹಾಕೋಣ ಅಂದಾಗ ನಾನೇನು ತಪ್ಪು ಮಾಡೀನಿ ಅಂತಾ ಕೇಳಿದ್ದಕ್ಕೆ ಮೂರು ಜನರು ಕೂಡಿ ನನಗೆ ಕೈಯಿಂದ ಬೆನ್ನಿಗೆ, ಕಪಾಳಕ್ಕೆ ಹೊಡೆಯುತ್ತಾ ಮನೆಯಿಂದ ಹೊರಗೆ ದಬ್ಬಿ ಹಾಕಿ ಹೊಡೆಯುತ್ತಿದ್ದಾಗ ನಾನು ಸತ್ತೆನೆಪ್ಪೋ ಅಂತಾ ಚೀರುವ ಸಪ್ಪಳ ಕೇಳಿ ನಮ್ಮ ತಂದೆ ಹಾಗೂ ದೊಡ್ಡಪ್ಪನವರು ಬಂದು ಜಗಳ ಬಿಡಿಸಿಕೊಂಡರು. ಆಗ ಅವರು ಇದೊಂದು ಸಲ ಬಿಟ್ಟೀವಿ ಇನ್ನೊಮ್ಮೆ ನಮ್ಮ ಮನೆಯ ಹತ್ತಿರ ಬಂದರೆ ನಿನಗೆ ಜೀವ ಸಹಿತ ಹೊಡೆಯುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ಆಗ ನಮ್ಮ ತಂದೆಯವರು ನನಗೆ ತಮ್ಮೊಂದಿಗೆ ತವರುಮನೆಗೆ ಕರೆದುಕೊಂಡು ಹೋದರು. ನಾನು ಮನೆಯಲ್ಲಿ ವಿಚಾರಿಸಿಕೊಂಡು ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ನನಗೆ ಅವಾಚ್ಯವಾಗಿ ಬೈದು, ಕೈಯಿಂದ ಹೊಡೆದು, ದೈಹಿಕ, ಮಾನಸಿಕ ಹಿಂಸೆ ನೀಡಿ, ಬಂಗಾರ ತೆಗೆದುಕೊಂಡು ಬಾ ಅಂತಾ ವರದಕ್ಷಿಣೆ ಕಿರುಕುಳ ನೀಡಿ ಜೀವದ ಬೆದರಿಕೆ ಹಾಕಿ ಮನೆಯಿಂದ ಹೊರಗೆ ದಬ್ಬಿದ ನನ್ನ ಗಂಡ, ಅತ್ತೆ, ಭಾವ ಇವರ ಮೇಲೆ ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 44/2022 ಕಲಂ 323, 498(ಎ), 504, 506 ಸಂಗಡ 34 ಐಪಿಸಿ ಮತ್ತು 3 & 4 ಡಿಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 32/2022 ಕಲಂ 379 ಐಪಿಸಿ : ಇಂದು ದಿನಾಂಕ 06/03/2022 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ಫಿಯರ್ಾದಿ ಶ್ರೀ ಯೊಗೇಶಕುಮಾರ ಜೈನ್ ತಂದೆ ದಿನೇಶಕುಮಾರ ಜೈನ್ ವಯಾ 19 ವರ್ಷ, ಜಾ|| ಜೈನ್ ಉ|| ವಿದ್ಯಾಥರ್ಿ ಸಾ|| ಶಹಾಪೂರ ಪೇಠ ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕೀಕರಿಸಿದ ದೂರು ನೀಡಿದ್ದರ ಸಾರಾಂಶವೇನೆಂದರೆ. ನಮ್ಮ ತಂದೆಯಾದ ದಿನೇಶಕುಮಾರ ಜೈನ್ ಹಾಗೂ ನಮ್ಮ ಅಣ್ಣ ಯಶ್ಕುಮಾರ ಜೈನ್ ಇವರು ಅಡತಿ ಹಾಗೂ ರೀಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಇರುತ್ತಾರೆ. ಈಗ ಸದ್ಯ ಯಾದಗಿರಿ ನಗರದ ಚಿತ್ತಾಪೂರ ರೋಡಿಗೆ ಹೊಂದಿಕೊಂಡು ಆರ್.ವ್ಹಿ ಕಾಲೇಜ್ ಎದುರುಗಡೆ ಇರುವ ಸವರ್ೆ ನಂ 586/10 ನೇದ್ದರಲ್ಲಿ ಪ್ಲಾಟ್ ಡೆವಲಪ್ ಮೇಟ್ ಮಾಡುವ ಕಾರ್ಯ ನಡೆದಿರುತ್ತದೆ. ಹೀಗಿದ್ದು ನಿನ್ನೆ ನನ್ನ ತಂದೆ ಪ್ಲಾಟ್ಡೆವಲಪ್ ಮೆಂಟ್ ಮಾಡಿದವರಿಗೆ ಹಣ ಕೊಡಬೇಕಾಗಿದ್ದು, ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಂಡು ಬಾ ಅಂತಾ ನನಗೆ ತಿಳಿಸಿದ ಕಾರಣ ನಿನ್ನ ದಿನಾಂಕ 05/03/2022 ರಂದು ಮಧ್ಯಾಹ್ನ 03-15 ಗಂಟೆಯ ಸುಮಾರಿಗೆ ನಾನು ಯಾದಗಿರಿ ನಗರದ ಕೋಟರ್್ ಎದುರುಗಡೆ ಇರುವ ಎಸ್.ಬಿ.ಐ ಬ್ಯಾಂಕಿಗೆ ಹೋಗಿ, ನನ್ನ ತಂದೆಯ ಎಸ್.ಬಿ.ಐ ಖಾತೆ ನಂ 62018056259, ನೇದ್ದರಿಂದ 8,00,000/- ರೂಪಾಯಿಗಳನ್ನು ಮಧ್ಯಾಹ್ನ 3-40 ಗಂಟೆಯ ಸುಮಾರಿಗೆ ಡ್ರಾ ಮಾಡಿದೆನು. ನಂತರ ಆ ಹಣ ನನ್ನ ಕ್ಯಾಶ್ಬ್ಯಾಗಲ್ಲಿ ಇಟ್ಟುಕೊಂಡು ನನ್ನ ಹಿರೋ ಗ್ಲ್ಯಾಮರ್ ಮೋಟರ್ ಸೈಕಲ್ ನಂ ಕೆ.ಎ 33 ಇಎ 5400, ನೇದ್ದರ ಟ್ಯಾಂಕ್ ಕವರ ಮೇಲೆ ನನ್ನ ಹಣದ ಬ್ಯಾಗ ಇಟ್ಟು, ಮೋಟರ್ ಸೈಕಲ್ ಚಾಲು ಮಾಡಿದೆನು. ಬ್ಯಾಂಕ್ ಮುಂದುಗಡೆ ನನ್ನ ಮೋಟರ್ ಸೈಕಲ್ ಹೋಗಲು ದಾರಿ ಇಲ್ಲದಾಗೆ ಬಹಳಷ್ಟು ಮೋಟರ್ ಸೈಕಲ್ ನಿಲ್ಲಿದ್ದರಿಂದ ನಾನು ನನ್ನ ಕ್ಯಾಶ್ ಬ್ಯಾಗ್ ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರ ಮೇಲೆ ಇಟ್ಟು ಅಲ್ಲಿ ನಿಲ್ಲಿಸಿದ ಸದರಿ ವಾಹನಗಳನ್ನು ಸೈಡಿಗೆ ಸರಿಸುವಾಗ, ನನಗೆ ಗೊತ್ತಿಲ್ಲದಂತೆ ಯಾರೋ ಕಳ್ಳರು ನನ್ನ ಹಣದ ಕ್ಯಾಶ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ. ನಂತರ ನಾನು ನನ್ನ ಬ್ಯಾಗ್, ಬ್ಯಾಗ್ ಅಂತಾ ಅನ್ನುತ್ತಿರುವಾಗ ಅಲ್ಲಿ ಇದ್ದ ಯಾರೋ ಒಬ್ಬ ಅವರಿಚಿತ ವ್ಯಕ್ತಿ ನಿನ್ನ ಬ್ಯಾಗ್ ಯಾರೋ ಒಬ್ಬನು ತೆಗೆದುಕೊಂಡು ಮಹಾರಾಷ್ಟ್ರ ಬ್ಯಾಂಕ್ ಕಡೆ ಓಡಿ ಹೋದನು ಅಂತಾ ತಿಳಿಸಿದನು. ನಂತರ ನಾನು ಅಲ್ಲಿಯೇ ನಮ್ಮ ಬಿಲ್ಡಿಂಗ್ದಲ್ಲಿ ವಾಚ್ ಮ್ಯಾನ್ ಕೆಲಸ ಮಾಡುವ ಪ್ರೇಮಕುಮಾರ ತಂದೆ ಶಾಮಸುಂದರ್ ನಾಟೇಕಾರ ಇವರನ್ನು ಕರೆದು ನನ್ನ ಮೋಟರ್ ಸೈಕಲ್ ಮೇಲೆ ಕೂಡಿಸಿಕೊಂಡು ಅವರ ಹಿಂದೆ ಹಿಂದೆ ಹೋದರು ಯಾರ ಸುಳಿವು ಸಿಗಲಿಲ್ಲ. ನಂತರ ನಾನು ಹಣ ಕಳ್ಳತನವಾದ ಬಗ್ಗೆ ನಮ್ಮ ತಂದೆ ದಿನೇಶಕುಮಾರ ಜೈನ್ ಹಾಗೂ ನಮ್ಮ ದೊಡ್ಡಪ್ಪ ಇವರಿಗೆ ವಿಷಯ ತಿಳಿಸಿದಾಗ ಅವರು ಕೂಡ ಸ್ಥಳಕ್ಕೆ ಬಂದರು. ಎಲ್ಲರು ಕೂಡಿ ಅಲ್ಲಿ ಬ್ಯಾಂಕಿನ ಅಕ್ಕ ಪಕ್ಕದಲ್ಲಿ ಹಾಗೂ ಯಾದಗಿರಿ ನಗರದ ವಿವಿಧ ಕಡೆಗಳಲ್ಲಿ ತಿರುಗಾಡಿ ನೋಡಿದರು ಹಣ ತೆಗೆದುಕೊಂಡು ಹೋದವರ ಸುಳಿವು ಕಾಣಲಿಲ್ಲ.ಕಾರಣ ನಿನ್ನೆ ದಿನಾಂಕ 05/03/2022 ರಂದು ಮಧ್ಯಾಹ್ನ 03-40 ಗಂಟೆಯ ಸುಮಾರಿಗೆ ನಾನು ಯಾದಗಿರಿಯ ಕೋಟರ್್ ಎದುರುಗಡೆ ಇರುವ ಎಸ್.ಬಿ.ಐ ಬ್ಯಾಂಕದಲ್ಲಿ ನನ್ನ ತಂದೆಯ ಎಸ್.ಬಿ.ಐ ಖಾತೆಯಿಂದ 8,00,000/- ರೂಪಾಯಿಗಳನ್ನು ಡ್ರಾ ಮಾಡಿಕೊಂಡು ನನ್ನ ಮೋಟರ್ ಸೈಕಲ್ ಟ್ಯಾಂಕ್ ಕವರ ಮೇಲೆ ಇಟ್ಟುಕೊಂಡು ಮನೆಗೆ ಹೋಗುವಾಗ ನನಗೆ ಗೊತ್ತಿಲ್ಲದಂತೆ ನನ್ನ ಹಣದ ಕ್ಯಾಶಬ್ಯಾಗ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮನೆಯಲ್ಲಿ ವಿಚಾರಣೆ ಮಾಡಿ ಈಗ ಠಾಣೆಗೆ ಬಂದು ದೂರು ನೀಡುತ್ತಿದ್ದು ಅವರನ್ನು ಪತ್ತೆ ಮಾಡಿ, ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 32/2022 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 33/2022 ಕಲಂ. 87 ಕೆ.ಪಿ ಎಕ್ಟ್ : ಇಂದು ದಿನಾಂಕ.06/03/2022 ರಂದು 6-20 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೇಮಾಲಿನೊಂದಿಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆ ಮತ್ತು ಮುಂದಿನ ಕ್ರಮಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಒಪ್ಪಿಸಿದ್ದು ಸಾರಾಂಶವೆನಂದರೆ, ನಾನು ಇಂದು ದಿನಾಂಕ.06/03/2022 ರಂದು 3-50 ಪಿಎಮ್ ಕ್ಕೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿದ್ದಾಗ ಠಾಣಾ ವ್ಯಾಪ್ತಿಯ ಗಂಜ ಏರಿಯಾದ ಇಂದಿರಾ ಕ್ಯಾಂಟಿನ್ ಹಿಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಭಾತ್ಮೀ ಬಂದ ಮೇರೆಗೆ ನಾನು ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಸ್ಥಳಕೆ ಹೋಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 06 ಜನರನ್ನು 5-00 ಪಿಎಮ್ ಕ್ಕೆ ಹಿಡಿದು ವಿಚಾರಿಸಲು 1) ಸಾಹೇಬಗೌಡ ತಂದೆ ದೊಡ್ಡಪ್ಪಗೌಡ ಪಾಟೀಲ ವ;65 ಜಾ; ಲಿಂಗಾಯತ ಉ; ಗಂಜದಲ್ಲಿ ಗುಮಾಸ್ತ ಸಾ; ಮಾತಾಮಾಣಿಕೇಶ್ವರಿ ನಗರ ಯಾದಗಿರಿ 2) ಮಲ್ಲಿಕಾಜರ್ುನ ತಂದೆ ಸಿದ್ರಾಮಪ್ಪ ಮಠಪತಿ ವ;35 ಜಾ; ಜಂಗಮ ಉ; ಗಂಜದಲ್ಲಿ ಗುಮಾಸ್ತ ಸಾ; ಗಾಂದಿಚೌಕ ಯಾದಗಿರಿ 3) ರಾಚಯ್ಯಸ್ವಾಮಿ ತಂದೆ ಬಸ್ಸಯ್ಯಸ್ವಾಮಿ ಹಿರೇಮಠ ವ;40 ಜಾ; ಜಂಗಮ ಉ; ಗಂಜದಲ್ಲಿ ಗುಮಾಸ್ತ ಸಾ; ಚಿರಂಜೀವಿ ನಗರ ಯಾದಗಿರಿ 4) ಮಹಾದೇವಪ್ಪ ತಂದೆ ಶಂಕ್ರಪ್ಪ ಮಾಲಿ ಪಾಟೀಲ ವ;70 ಜಾ; ಲಿಂಗಾಯತ ಉ; ಗಂಜದಲ್ಲಿ ಗುಮಾಸ್ತ ಸಾ; ಅಮರ ಲೇ ಔಟ್ ಯಾದಗಿರಿ 5) ನರಸಿಂಗ ತಂದೆ ಗಂಗಣ್ಣ ಮೇಲಗಿರಿ ವ; 59 ಜಾ; ಸ್ವಕುಳಸಾಳಿ ಉ; ಗಂಜದಲ್ಲಿ ಗುಮಾಸ್ತ ಸಾ; ದುಖಾನವಾಡಿ ಯಾದಗಿರಿ 6) ಯಲ್ಲಪ್ಪ ತಂದೆ ಚಂದಪ್ಪ ಕೋರಿ ವ;58 ಜಾ; ಯಳವರ ಉ; ಗಂಜದಲ್ಲಿ ಗುಮಾಸ್ತ ಸಾ; ಶಾಂತಿನಗರ ಯಾದಗಿರಿ ಅಂತಾ ತಿಳಿಸಿದ್ದು ಸದರಿಯವರಿಂದ ನಗದು ಹಣ 6500=00 ರೂ, ನಗದು ಹಣ ಮತ್ತು 52 ಇಸ್ಪೀಟ ಎಲೆಗೆಳು ಜಪ್ತಿಪಡಿಸಿಕೊಂಡು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ 6-20 ಪಿಎಮ ಕ್ಕೆ ಬಂದು ಆರೋಪಿ ಮತ್ತು ಮುದ್ದೆಮಾಲು ಹಾಗೂ ಜಪ್ತಿಪಂಚನಾಮೆಯ ಸಮೇತ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಅಂತಾ ಕೊಟ್ಟ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.33/2022 ಕಲಂ.87 ಕೆಪಿ ಆ್ಯಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 36/2022 ಕಲಂ ಮನುಶ್ಯ ಕಾಣೆ : ಇಂದು ದಿನಾಂಕ 06/03/2022 ರಂದು 4.30 ಪಿ. ಎಮ್ ಕ್ಕೆ ಪಿಯರ್ಾದಿ ಶ್ರೀ ಬಸ್ಸಪ್ಪ ತಂ. ಶರಣಪ್ಪ ಟಣಕೆದಾರ ವ|| 45 ವರ್ಷ ಜಾ|| ಹಿಂದು ಬೇಡರ ಉ|| ವ್ಯವಸಾಯ ಸಾ|| ದಂಡ ಸೊಲ್ಲಾಪೂರ ತಾ|| ಶೋರಾಪೂರ ಇವರು ಠಾಣೆಗೆ ಹಾಜರಾಗಿ ಪಿರ್ಯಾದಿ ನೀಡಿದ್ದೇನೆಂದರೆ ತಮ್ಮ ಅಣ್ಣನಾದ ಬಾಬು ಈತನಿಗೆ ಸಿದ್ದು ಎನ್ನುವ ಮಗನಿದ್ದು ತಂದೆ ತಾಯಿ ಯಾರು ಇರುವದಿಲ್ಲ ಮೃತ ಪಟ್ಟಿದ್ದು ಇರುತ್ತದೆ ಮತ್ತು ಕೆಲವು ವರ್ಷ ನಮ್ಮ ಹತ್ತಿರ ಇದ್ದು ನಂತರ ಶ್ರೀಮತಿ ಕಮಲಾ ಗಂ. ಸಿದ್ದು ದೇಸಾಯಿ ವ|| 25 ವರ್ಷ ಜಾ|| ಹಿಂದು ಬೇಡರ ಉ|| ಮನೆಕೆಲಸ ಸಾ|| ಸಾ|| ಚಾಮನಾಳ ಹಾ|| ವ|| ಗಂಗಾನಗರ ಶಹಾಪೂರ ಇವಳೊಂದಿಗೆ ಮದುವೆ ಮಾಡಿದ್ದು ಇರುತ್ತದೆ. ಸಿದ್ದು ಈತನು ಸುಮಾರು 8-9 ತಿಂಗಳ ಹಿಂದೆ ಶಹಾಪೂರದ ಗಂಗಾನಗರದಲ್ಲಿ ತನ್ನ ಮಕ್ಕಳಾದ ಪಲ್ಲವಿ -7 ವರ್ಷ, ಭರತ-4 ವರ್ಷ ಮಕ್ಕಳೊಂದಿಗೆ ಬಾಡಿಗೆ ಕಾರು ತೆಗೆದುಕೊಂಡು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು ಹೀಗಿದ್ದು ದಿನಾಂಕ 26/11/2021 ರಂದು ಸಿದ್ದು ಈತನ ಹೆಂಡತಿಯಾದ ಕಮಾಲಾ ಇವಳು ನನಗೆ ಪೋನ ಮಾಡಿ ತಿಳಿಸಿದ್ದೇನೆಂದರೆ ದಿನಾಂಕ 24/11/2021 ರಂದು ರಾತ್ರಿ 10.00 ಗಂಟೆಗೆ ಅವಸರ ಅವಸರವಾಗಿ ಮನೆಗೆ ಬಂದು ಎಷ್ಟು ದಿನ ಅಂತ ಬಾಡಿಗೆ ಕಾರು ಓಡಿಸುವುದು ನಾನು ಬೆಂಗಳೂರಿಗೆ ಹೋಗಿ ಒಂದು ಸ್ವಂತ ಕಾರು ತರುತ್ತೇನೆಂದು ತನ್ನ ಬ್ಯಾಗ ರಡಿ ಮಾಡಿಕೊಂಡು ಬ್ಯಾಗಿನಲ್ಲಿ ಹಣ ಇಟ್ಟುಕೊಂಡು ತನ್ನ ಸೈಕಲ್ ಮೋಟರ ನಂ ಕೆಎ33-7787 ನೇದ್ದರ ಮೇಲೆ ದಿನಾಂಕ 24/11/2021 ರಂದು ರಾತ್ರಿ 10.15 ಗಂಟೆಗೆ ಮನೆಯಿಂದ ಹೋದನು ನಂತರ ನಾವು ಹುಶಾರಾಗಿ ಹೋಗಿ ಮನ್ನಿ ಎಂದು ಹೇಳಿದೇನು ನಂತರ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಮಲಗಿದೇನು ನಂತರ ಮರುದಿನ ನನ್ನ ಗಂಡನ ಮೊಬೈಲ ನಂ 9148384464 ನೇದ್ದಕ್ಕ ಕರೆಮಾಡಲಾಗಿ ಅದು ಸ್ವಿಚ್ ಆಪ್ ಆಗಿತ್ತು ನಾಳೆ ಬರುತ್ತಾನೆ ನಾಡದ್ದು ಬರುತ್ತಾನೆ ಎಂದು ನಾನು 2-3 ದಿನ ಸುಮ್ಮನಿದ್ದು ನಂತರ ಅವನ ಮೊಬೈಲ ಬಂದಾಗಿ ಅವರನು ಬರದೇ ಇದ್ದಾಗ ನನಗೆ ಪೋನ ಮಾಡಿ ತಿಳಸಿದ್ದು ಇರುತ್ತದೆ, ನಾನು ನಮ್ಮ ಅಣ್ಣತಮ್ಮಕಿಯವರ ಮಕ್ಕಳಾದ ನಿಂಗಯ್ಯ ಮತ್ತು ಶಿವಕುಮಾರ ಇವರಿಗೆ ತಿಳಿಸಿ ಎಲ್ಲರೂ ಸೇರಿ ನಮ್ಮ ಸಂಬಂದಿಕರು ಇರುವ ಊರುಗಳಲ್ಲಿ ಮತ್ತು ಟ್ಯಾಕ್ಸಿ ಸ್ಟಾಂಡಗಳಲ್ಲಿ ವಿಚಾರಿಸಿ ಹುಡುಕಾಡಲಾಗಿ ಎಲ್ಲಿಯೂ ಸಿದ್ದು ಈತನು ಕಾಣಲಿಲ್ಲ ಅಲ್ಲದೇ ನಮ್ಮ ಸಂಬಂದಿಕರು ಇರುವ ಊರುಗಳಿಗೆ ಹೋಗಿ ವಿಚಾರಿ ತಡವಾಗಿ ಇಂದು ಠಾಣೆಗೆ ಬಂದು ಪಿಯರ್ಾದಿ ನೀಡಿದ್ದು ಇರುತ್ತದೆ ಕಾರಣ ಶಹಾಪೂರದ ಗಂಗಾ ನಗರದಲ್ಲಿ ಇರುವ ಮನೆಯಿಂದ ಕಾಣೆಯಾದ ಸಿದ್ದು ತಂ. ಬಾಬು ದೇಸಾಯಿ ವ|| 28 ವರ್ಷ ಜಾ|| ಹಿಂದು ಬೇಡರ ಉ|| ಕಾರ ಚಾಲಕ ಸಾ|| ದಂಡಸೊಲ್ಲಾಪೂರ ಹಾ|| ವ|| ಗಂಗಾನಗರ ಶಹಾಪೂರ ಈತನು ಕಾಣೆಯಾದ ಕುರಿತು ಕಾನೂನು ಕ್ರಮ ಜರುಗಿಸಿ ಪತ್ತೆ ಮಾಡಿಕೊಡಲು ವಿನಂತಿ.
ಕಾಣೆಯಾದ ನನ್ನ ಗಂಡನ ಚಹರೆ ಪಟ್ಟಿ ಈ ಕೇಳಗಿನಂತಿರುತ್ತವೆ.
ಹೆಸರು ಃ- ಶ್ರೀ ಸಿದ್ದು ತಂ. ಬಾನಬು ದೇಸಾಯಿ
ವಯಸ್ಸು ಃ- 28
ಬಣ್ಣ ಃ- ಸಾದಕಪ್ಪು ಬಣ್ಣ
ಎತ್ತರ ಃ- 5.6 ಫೀಟ್ ಇದ್ದು.
ಭಾಷೆ ಃ- ಕನ್ನಡ, ಹಿಂದಿ
ಧರಿಸಿದ ಬಟ್ಟೆ ಃ- 1) ಒಂದು ಬಿಳಿ ಬಣ್ಣದ ಶರ್ಟ 2) ನೀಲಿ ಬಣ್ಣದ ಜೀನ್ಸ ಪ್ಯಾಂಟ
ಸದರಿ ಕಾಣೆಯಾದ ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ವಿನಂತಿ. ಅಂತ ಇತ್ಯಾದಿ ಫಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 36/2022 ಕಲಂ ಮನುಶ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 07-03-2022 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080