Feedback / Suggestions

   ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07-05-2021
ಶಹಾಪೂರ ಪೊಲೀಸ್ ಠಾಣೆ :- 96/2021 ಕಲಂ 341, 323,504,506 ಸಂಗಡ 34 ಐ.ಪಿ.ಸಿ. : ದಿನಾಂಕ:03-05-2021 ರಂದು ಆರೋಪಿತರು ಇಬ್ಬರೂ ಕೂಡಿ ಫಿರ್ಯಾದಿ ಮತ್ತು ಆತನ ಹೆಂಡತಿಗೆ ದಾರಿಯಲ್ಲಿ ಅಡ್ಡಗಟ್ಟಿ ನಿಂತು ಫಿರ್ಯಾದಿಯ ಮಗಳ ಮದುವೆ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಕೈಯಿಂದ ಹೊಡೆದು ಬೈದು ಜೀವದ ಬೆದರಿಕೆ ಹಾಕಿದವರ ಮೇಲೆ ಕಾನುನು ಕ್ರಮ ಜರುಗಿಸಲು ವಿನಂತಿ. ಅಂತಾ ಇತ್ಯಾದಿ ಇದ್ದ ಫಿರ್ಯಾದಿಯನ್ನು ಸ್ವೀಕರಿಸಿಕೊಂಡು ಸಾರಾಂಸದ ಮೇಲಿಂದ ಠಾಣೆ ಗುನ್ನೆ ನಂ. 96/2021 ಕಲಂ. 341, 323, 504, 506 ಸಂಗಡ 34 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ಧಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇದೆ

ಗೋಗಿ ಪೊಲೀಸ್ ಠಾಣೆ :- 45/2021 391,324, 504, 506 ಸಂ: 34 ಐಪಿಸಿ : ಇಂದು ದಿನಾಂಕ: 06/05/2021 ರಂದು 11.30 ಎಎಂ ಕ್ಕೆ ಗೋಗಿ ಠಾಣೆಯ ಕೋರ್ಟ ಕರ್ತವ್ಯ ನಿರ್ವಹಿಸುವ ನಾಗಪ್ಪ ಸಿಪಿಸಿ-167 ರವರು ಕೋರ್ಟ ಕರ್ತವ್ಯಕ್ಕೆ ಹೋದವರು ಮರಳಿ ಠಾಣೆಗೆ ಬಂದು ಮಾನ್ಯ ನ್ಯಾಯಾಲಯದಿಂದ ವಸೂಲಾದ ಒಂದು ಖಾಸಗಿ ಪಿಯರ್ಾದಿ ಸಂ: 35/2021 ನೇದ್ದನ್ನು ತಂದು ಹಾಜರ ಪಡೆಸಿದ್ದು, ಸದರಿ ಖಾಸಗಿ ಪಿಯರ್ಾದಿ ಸಾರಂಶ ಏನಂದರೆ, ಆರೋಪಿ ನಂಬರ 01 ರಿಂದ 09 ನೇದ್ದವರು, ಪಿಯರ್ಾದಿದಾರರಿಗೆ ಸೇರಿದ ಹೊಲ ಸವರ್ೇ ನಂ: 537/2 ನೇದ್ದರ 8 ಎಕರೆ 15 ಗುಂಟೆ ಜಮೀನು ನೇದ್ದರಲ್ಲಿ 03.00 ಎಕರೆ ಜಮೀನು ಪಿಯರ್ಾದಿಗೆ ಬಂದಿದ್ದು ಸದರಿ ಹೊಲದಲ್ಲಿ ಬೆಳೆದ ಬೆಳೆಯನ್ನು ಆರೋಪಿತರೆಲ್ಲರೂ ಕೂಡಿ ದಿನಾಂಕ: 24/11/2020 ರಂದು 04.30 ಪಿಎಂ ಸುಮಾರಿಗೆ ಭತ್ತದ ಬೆಳೆಯನ್ನು ರಾಶಿ ಮಾಡಿಕೊಂಡಿರುತ್ತಾರೆ. ಪಿಯರ್ಾದಿ ಮತ್ತು ಪಿಯರ್ಾದಿಯವರ ಮಗನಾದ ಮಲ್ಲಿಕಾಜರ್ುನರೆಡ್ಡಿ ತಂದೆ ಸಿದ್ರಾಮರೆಡ್ಡಿ ಇಬ್ಬರು ಕೇಳಲು ಹೋದರೆ ಆರೋಪಿತರೆಲ್ಲರೂ ಕೂಡಿ ಹೊಲದಲ್ಲಿಯೇ ಆರೋಪಿ 01 ರಿಂದ 04 ನೇದ್ದವರು ಪಿಯರ್ಾದಿಗೆ ಮತ್ತು ಅವರ ಮಗನಾದ ಮಲ್ಲಿಕಾಜರ್ೂನ ಈತನಿಗೆ ಅವಾಚ್ಯವಾಗಿ ಬೈಯ್ದು, ಮೈಮೇಲಿನ ಅಂಗಿ ಹಿಡಿದು ಹೊಡೆಯಲು ಬಂದಿರುತ್ತಾರೆ ಕಾಲರ ಹಿಡಿದುಕೊಂಡು ಹೊಲದಲ್ಲಿಂದ ಹೊರಗೆ ದಬ್ಬಿ ಜೀವದ ಭಯ ಹಾಕಿರುತ್ತಾರೆ. ಆರೋಪಿ ನಂ: 04 ರಿಂದ 06 ನೇದ್ದವರು ಪಿಯರ್ಾದಿಗೆ ಹಿಂದಿನಿಂದ ಹಿಡಿದುಕೊಂಡಿದ್ದು ಆರೋಪಿ ನಂ: 07 ರಿಂದ 09 ನೇದ್ದವರು ಪಿಯರ್ಾದಿಯ ಮಗನಿಗೆ ಹಿಡಿದುಕೊಂಡಿದ್ದು, ಉಳಿದವರು ಹೊಲದಲ್ಲಿಯ ಮಾಲನ್ನು ರಾಶಿ ಮಾಡಿಕೊಂಡು ಹೊಗಿರುತ್ತಾರೆ ಕಾರಣ ಕಲಂ: ಕಲಂ, 391, 324, 504, 506 ಸಂ: 34 ಐಪಿಸಿ ಪ್ರಕಾರ ಆರೋಪಿತರ ವಿರುದ್ಧ ಕ್ರಮ ಜರುಗಿಸಬೇಕು ಅಂತಾ ಪಿಯರ್ಾದಿ ಸಾರಂಶದ ಮೇಲಿಂದ ಗೋಗಿ ಠಾಣೆ ಗುನ್ನೆ ನಂ: 45/2021 ಕಲಂ, 391, 324, 504, 506 ಸಂ: 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ನಾರಾಯಣಪೂರ ಪೊಲೀಸ್ ಠಾಣೆ :- 29/2021 ಕಲಂ: 78 (3) ಕೆ.ಪಿ ಯಾಕ್ಟ್ : ದಿನಾಂಕ 06/05/2021 ರಂದು 4:30 ಪಿ.ಎಂ ಕ್ಕೆ ಸರಕಾರಿ ತಪರ್ೆ ಶ್ರೀ ಸಿದ್ದೇಶ್ವರ ಗೆರಡೆ ಪಿ.ಎಸ್.ಐ ನಾರಾಯಣಪೂರ ಪೊಲೀಸ್ ಠಾಣೆ ರವರು ಮಾನ್ಯ ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಜ್ಞಾಪನ ಪತ್ರ ಹಾಜರು ಪಡಿಸಿದ್ದು ಸದರಿ ಜ್ಞಾಪನ ಪತ್ರದ ಸಾರಾಂಶವೆನೆಂದರೆ ತಾವು ಠಾಣೆಯಲ್ಲಿ ಇದ್ದಾಗ 11:00 ಎ.ಎಂ ಕ್ಕೆ ನಾರಾಯಣಪೂರ ಪೊಲೀಸ್ ಠಾಣಾ ವ್ಯಾಪ್ತಿಯ ನಾರಾಯಣಪೂರ ಗ್ರಾಮದ ಅಂಬೇಡ್ಕರ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರವ ಸಾರ್ವಜನಿಕರಿಗೆ ಕರೆದು ಅವರಿಂದ ಹಣವನ್ನು ಪಡೆದುಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದನ್ನು ಖಚಿತಪಡಿಸಿಕೊಂಡು ಮಟಕಾ ನಂಬರ ಬರೆದುಕೊಳ್ಳುತ್ತಿದ್ದವನ ಮೇಲೆ ಪ್ರಕರಣ ದಾಖಲಿಸಿ ಸ್ಥಳಕ್ಕೆ ಹೋಗಿ ದಾಳಿ ಮಾಡುವ ಕುರಿತು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ಪಡೆದುಕೊಂಡು ನ್ಯಾಯಾಲಯದ ಪರವಾನಿಗೆ ಪತ್ರದೊಂದಿಗೆ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರಿಂದ ಸದರಿ ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ. 29/2021 ಕಲಂ 78(3) ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. ನಂತರ ಮಾನ್ಯ ಪಿಎಸ್ಐ ಸಾಹೇಬರು 6:30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಒಬ್ಬ ಆರೋಪಿ ಹಾಗೂ ಒಂದು ಬಾಲ್ ಪೆನ್ ಒಂದು ಮಟಕಾ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ಹಾಗೂ ನಗದು ಹಣ 610/-ರೂ ಗಳನ್ನು ಜಪ್ತಿ ಪಡಿಸಿಕೊಂಡು ಜಪ್ತಿ ಪಂಚನಾಮೆಯೊಂದಿಗೆ ಮುಂದಿನ ತನಿಖೆ ಕೈಕೊಳ್ಳುವಂತೆ ಜ್ಞಾಪನ ಪತ್ರ ನೀಡಿದ್ದು ಇರುತ್ತದೆ.

ನಾರಾಯಣಪೂರ ಪೊಲೀಸ್ ಠಾಣೆ:- 28/2021 ಕಲಂ: 504, ಸಂಗಡ 34 ಐಪಿಸಿ : ದಿನಾಂಕ 05/05/2021 ರಂದು ಮದ್ಯಾಹ್ನ 1:30 ಪಿ.ಎಂ ಕ್ಕೆ ಶ್ರೀಮತಿ ಗದ್ದೆಮ್ಮ ಗಂಡ ನಿಂಗಪ್ಪ ನಾಗರಬಟ್ಟ ವ:25 ವರ್ಷ ಉ:ಕೂಲಿ ಕೆಲಸ ಜಾ:ಹಿಂದು ಬೇಡರ ಸಾ:ಹಾಳ ಬಸಾಪೂರ ತಾ:ಹುಣಸಗಿ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪು ಮಾಡಿಸಿದ ಪಿಯರ್ಾದಿ ಅಜರ್ಿಯನ್ನು ಹಾಜರುಪಡಿಸಿದು ಅದರ ಸಾರಾಂಶವೆನೆಂದರೆ ದಿನಾಂಕ 01/05/2021 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮೂರ ನಾಗಪ್ಪ ತಂದೆ ಶಂಕ್ರಪ್ಪ ಯಜಕಾರ ವ:48 ವರ್ಷ ಈತನು ಕುಡಿದು ನಮ್ಮೂರ ಬೆವಿನ ಗಿಡದ ಕಟ್ಟೆಯ ಹತ್ತಿರ ನಿಂತು ನಮಗೆ ನಾಗರಬಟ್ಟದರ ಸೂಳೆರದ ಬಹಳ ಆಗ್ಯಾದ ಸೂಳೆರ, ದಾಳೆರ ಅಂತಾ ಅವಾಚ್ಯವಾಗಿ ಬೈಯುತ್ತಿದ್ದನು ಆಗ ಮನೆಯಲ್ಲಿ ಇದ್ದ ನಮ್ಮ ಅಕ್ಕ ಹಣಮಂತಿ ಗಂಡ ಹಣಮಂತ, ನಮ್ಮ ಅತ್ತೆ ಶಾಂತಾ ಗಂಡ ಪರಮಣ್ಣ ರವರು ಅಲ್ಲಿಗೆ ಬಂದು ನಮಗೆ ಬೈಯುತ್ತಿದ್ದ ನಾಗಪ್ಪನಿಗೆ ಕುಡಿದು ಬಂದು ನಮಗೆ ಯಾಕೆ ಈ ರೀತಿ ಬೈಯುತ್ತಿ ಅಂತಾ ಕೇಳಿದಾಗ ಆಗ ನಾಗಪ್ಪನು ನಾನು ಬೈಯುವನೆ ಯಾರ ಏನು ಶಂಟ ಹರಕ್ಕೊತ್ತಿರಿ ಅಂತಾ ಅಂದನು. ಆಗ ಅಲ್ಲಿಗೆ ನಾಗಪ್ಪನ ಮಗ ಮಲ್ಲಪ್ಪನು ಬಂದನು, ಆಗ ನಾನು ಮಲ್ಲಪ್ಪನಿಗೆ ನಿಮ್ಮಪ್ಪನಿಗೆ ಹೇಳಪಾ ಅಂತಾ ಹೆಂಗ ಒದರ್ಯಾಡಕತ್ಯಾನ ನೋಡು ಅಂತಾ ಅಂದಾಗ ಮಲ್ಲಪ್ಪನು ನಾನು ನಮ್ಮ ಅಪ್ಪನಿಗೆ ಹೇಳುವದಿಲ್ಲ ಅವ ಒದರ್ಯಾಡೊನೆ ನೀವೇನು ಶಂಟ ಹರಕೊತ್ತಿರಿ ಅಂತಾ ಅವಾಚ್ಯವಾಗಿ ಮಾತನಾಡಿದನು. ಆಗ ನಾನು ಮತ್ತು ನಮ್ಮ ಅಕ್ಕ ಹಣಮಂತಿ ಹಾಗೂ ನಮ್ಮ ಅತ್ತೆ ಶಾಂತಾ ರವರು ನಮ್ಮ ಮನೆಗೆ ಹೋಗಿದ್ದು ಇರುತ್ತದೆ. ಈ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ತಡವಾಗಿ ಬಂದು ದೂರು ಅಜರ್ಿಯನ್ನು ನೀಡುತ್ತಿದ್ದು ನಮಗೆ ಬೈದ ನಾಗಪ್ಪ ಹಾಗೂ ಅವನ ಮಗ ಮಲ್ಲಪ್ಪನ ಮೇಲೆ ಕೇಸು ಮಾಡಲು ಪಿಯರ್ಾದಿ ಅಜರ್ಿ ಸಲ್ಲಿಸಿದ್ದು ಇರುತ್ತದೆ. ಪಿಯರ್ಾದಿದಾರರು ಪಿಯರ್ಾದಿ ಅಜರ್ಿಯಲ್ಲಿ ನಮೂದಿಸಿದ ವಿಷಯವು ಅಂಸಜ್ಞೆಯ ಅಪರಾಧವಾಗುತ್ತಿದ್ದರಿಂದ ಪ್ರಕರಣದಲ್ಲಿನ ಆರೋಪಿತರ ಮೇಲೆ ಗುನ್ನೆದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವಂತೆ ಮಾನ್ಯ ಜೆ.ಎಂ ಎಪ್ ಸಿ ನ್ಯಾಯಾಲಯ ಸುರಪೂರ ರವರಲ್ಲಿ ವಿನಂತಿಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲು ಇಂದು ದಿನಾಂಕ 06/05/2021 ರಂದು ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಪರವಾನಿಗೆಯನ್ನು ನೀಡಿದ್ದು ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಶ್ರೀ ಬೈಲಪ್ಪ ಪಿಸಿ-160 ರವರು ಪರವಾನಿಗೆ ಪತ್ರವನ್ನು 3:00 ಪಿ.ಎಂ ಕ್ಕೆ ಈ ಮೇಲ್ದಲ್ಲಿ ಕಳುಹಿಸಿದ್ದು ಸ್ವಿಕರಿಸಿಕೊಂಡು ಪಿಯರ್ಾದಿದಾರರ ಅಜರ್ಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 28/2021 ಕಲಂ 504 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

Last Updated: 08-05-2021 09:55 AM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

 • Copyright Policy
 • Hyperlinking Policy
 • Security Policy
 • Terms & Conditions
 • Privacy Policy
 • Help
 • Screen Reader Access
 • Guidelines

Visitors

 • Last Updated​ :
 • Visitors Counter :
 • Version :
CONTENT OWNED AND MAINTAINED BY : YADGIRI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2021, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080