ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-05-2022


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನಂ: 61/2022 ಕಲಂ: 279, 337, 338, 283 ಐಪಿಸಿ ಸಂ 122 ಐಎಮ್ವಿ ಎಕ್ಟ : ದಿನಾಂಕ:05/05/2022 ರಂದು ರಾತ್ರಿ 0200 ಗಂಟೆಗೆ ಕಲಬುರಗಿ ಕಾಮರೆಡ್ಡಿ ಆಸ್ಪತ್ರೆಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದು, ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ನಮ್ಮ ಠಾಣೆಯ ಶ್ರೀ ಸಿದ್ದವೀರಪ್ಪ ಹೆಚ್.ಸಿ 167 ರವರಿಗೆ ನೇಮಕ ಮಾಡಿ ಕಳುಹಿಸಿದ್ದು, ಸದರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಎಮ್.ಎಲ್.ಸಿ ಸ್ವಿಕೃತ ಮಾಡಿಕೊಂಡು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಶ್ರೀ ವಿಷ್ಣು @ ಬಿಷ್ಣು ತಂದೆ ನಂದನಕುಮಾರ, ವ:22, ಜಾ:ಕಮ್ಮಾರ, ಉ:ರಾಶಿ ಮಷಿನ ಆಪರೇಟರ್ ಸಾ:ಮುಸರ್ಿರಸ್ ಗೋವರ್ಧನ ಠಾಣಾ ಮಥುರಾ ಜಿಲ್ಲಾ ಉತ್ತರಪ್ರದೇಶ ರಾಜ್ಯ ಹಾ:ವ:ಗುರುಸಣಗಿ ಕ್ರಾಸ ಯಾದಗಿರಿ ಇವರು ಕಂಪ್ಯೂಟರನಲ್ಲಿ ಟೆಪ ಮಾಡಿದ ದೂರು ಹಾಜರಪಡಿಸಿದ್ದನ್ನು ಪಡೆದುಕೊಂಡು ಮರಳಿ ದಿನಾಂಕ:05/05/2022 ರಂದು ರಾತ್ರಿ 11-30 ಎಎಮ್ ಕ್ಕೆ ಠಾಣೆಗೆ ಬಂದು ಸದರಿ ಎಮ್.ಎಲ್.ಸಿ ಮತ್ತು ಫಿರ್ಯಾಧಿದಾರರು ಕೊಟ್ಟ ದೂರನ್ನು ಹಾಜರಪಡಿಸಿದ್ದರ ಸಾರಾಂಶವೇನಂದರೆ ನಾನು ಮತ್ತು ನನ್ನ ಗೆಳಯ ಧಮರ್ು ತಂದೆ ಪಡತಾಪಸಿಂಗ ಮತ್ತು ಇತರರು ಸೇರಿ ಗುರುಸಣಗಿ ಕ್ರಾಸ ಹತ್ತಿರ ಇರುವ ರಮೇಶ ಇವರ ರಾಶಿ ಮಷಿನ ಗ್ಯಾರೇಜ್ ಕಮ್ ಸವರ್ಿಸ್ ಸೆಂಟರ್ ನಲ್ಲಿ ರಾಶಿ ಮಷಿನ ಆಪರೇಟರ್, ಹೇಲ್ಪರ ಕೆಲಸ ಮಾಡಿಕೊಂಡಿರುತ್ತೇವೆ. ಹೀಗಿದ್ದು ದಿನಾಂಕ:04/05/2022 ರಂದು ನ್ಯಾಯ್ಕಲ್ ಸಮೀಪ ನಮ್ಮ ರಾಶಿ ಮಷಿನಗಳಿಂದ ಗದ್ದಗಳಲ್ಲಿ ಕವಳಿ ಕಟಾವು ನಡೆದಿತ್ತು. ನಾನು ಮತ್ತು ಧಮರ್ು ಇಬ್ಬರೂ ರಾತ್ರಿ ನಮ್ಮ ಗ್ಯಾರೇಜಿಗೆ ಬಂದು ಊಟ ಮಾಡಿಕೊಂಡು ಪುನಃ ರಾಶಿ ಮಶಿನಗಳು ನಡೆದ ಜಾಗಕ್ಕೆ ಹೋಗಲು ನಮ್ಮ ಮೋಟರ್ ಸೈಕಲ್ ನಂ. ಕೆಎ 33 ಆರ್ 9990 ನೇದ್ದರ ಮೇಲೆ ಹೊರಟೇವು. ಧಮರ್ು ಈತನು ಮೋಟರ್ ಸೈಕಲ್ ಚಲಾಯಿಸುತ್ತಿದ್ದು, ನಾನು ಹಿಂದುಗಡೆ ಕುಳಿತುಕೊಂಡಿದ್ದೇನು. ಯಾದಗಿರಿ-ಶಹಾಪುರ ಮೇನ ರೋಡ ಗುರುಸಣಗಿ ಕ್ರಾಸ ದಾಟಿದ ನಂತರ ಭಾರತ ಪೆಟ್ರೋಲ್ ಪಂಪ ಸಮೀಪ ಹೋಗುತ್ತಿದ್ದಾಗ ಒಂದು ಲಾರಿ ನಂ. ಕೆಎ 27 ಎ 0984 ನೇದ್ದನ್ನು ಅದರ ಚಾಲಕನು ರಸ್ತೆ ಮೇಲೆ ಯಾವುದೇ ಇಂಡಿಕೇಟರ್ ವೈಗೆರೆ ಹಾಕದೆ ಮುಂಜಾಗ್ರತಾ ಕ್ರಮ ಕೈಕೊಳ್ಳದೆ ಲಾರಿಯನ್ನು ರಸ್ತೆ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿ, ನಿರ್ಲಕ್ಷ ವಹಿಸಿದ್ದನು. ಅದೇ ವೇಳೆಗೆ ಧಮರ್ು ಈತನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗುತ್ತಿದ್ದು, ರಸ್ತೆ ಮೇಲೆ ಅಪಾಯಕಾರಿಯಾಗಿ ನಿಲ್ಲಿಸಿದ ಲಾರಿಗೆ ಹಿಂದಿನಿಂದ ಹೋಗಿ ಡಿಕ್ಕಿಪಡಿಸಿದನು. ನಾವು ಇಬ್ಬರೂ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಬಿಟ್ಟೆವು. ಅಪಘಾತದಲ್ಲಿ ನನಗೆ ತಲೆಗೆ ಭಾರಿ ರಕ್ತಗಾಯ ಮತ್ತು ಎಡಗಡೆ ಭುಜಕ್ಕೆ ಭಾರಿ ಒಳಪೆಟ್ಟಾಗಿತ್ತು. ಧಮರ್ು ಈತನಿಗೆ ಎಡಗಾಲ ತೊಡೆಗೆ ಭಾರಿ ರಕ್ತ ಮತ್ತು ಗುಪ್ತಗಾಯವಾಗಿದ್ದು, ಬಲಕಣ್ಣಿನ ಹತ್ತಿರ ಮತ್ತು ಬಲ ಹಣೆಗೆ ರಕ್ತಗಾಯಗಳಾಗಿದ್ದವು. ಅಪಘಾತದ ಸುದ್ದಿಯನ್ನು ನಮ್ಮ ಸಂಬಂಧಿಕ ಚೇತನ ತಂದೆ ಗನರಾಮನಿಗೆ ಫೋನ ಮಾಡಿ ಹೇಳಿದಾಗ ಅವರು ತಕ್ಷಣ ಬಂದು ನಮಗೆ ನೋಡಿ ಉಪಚಾರ ಕುರಿತು 108 ಅಂಬುಲೇನ್ಸನಲ್ಲಿ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿ, ಪ್ರಥಮ ಉಪಚಾರ ಮಾಡಿಸಿ, ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಕಾಮರೆಡ್ಡಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಸದರಿ ಲಾರಿ ಚಾಲಕನು ಅಲ್ಲಿಯೇ ಲಾರಿಯ ಮುಂದುಗಡೆ ನಿಂತಿದ್ದು, ಅವನಿಗೆ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು ಬಾಲರಾಜ ತಂದೆ ಹಣಮಂತ ರೂಬಿ ಸಾ:ಮಲ್ಕಪನಹಳ್ಳಿ ಎಂದು ಹೇಳಿದನು. ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ರಸ್ತೆ ಮೇಲೆ ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿ, ನಿರ್ಲಕ್ಷ ವಹಿಸಿರುತ್ತಾನೆ ಮತ್ತು ಮೋಟರ್ ಸೈಕಲ್ ಸವಾರ ಧಮರ್ು ಈತನು ಮೋಟರ್ ಸೈಕಲನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಹೋಗಿ ಲಾರಿಗೆ ಡಿಕ್ಕಿಪಡಿಸಿದ್ದರಿಂದ ಇಬ್ಬರ ನಿರ್ಲಕ್ಷತನದಿಂದ ಅಪಘಾತ ಸಂಭವಿಸಿ, ನಮಗೆ ಗಂಭಿರ ಸ್ವರೂಪದ ಗಾಯಗಳಾಗಿರುತ್ತವೆ. ಸದರಿ ಅಪಘಾತ ಸಂಭವಿಸಿದಾಗ ಸಮಯ ಅಂದಾಜು 8-45 ಪಿಎಮ್ ಆಗಿತ್ತು. ಕಾರಣ ಸದರಿಯವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2022 ಕಲಂ: 279, 337, 338, 283 ಐಪಿಸಿ ಸಂ 122 ಐಎಮ್ವಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ:48/2022 ಕಲಂ:323, 324, 326, 504, 506 ಸಂ. 34 ಐಪಿಸಿ : ಇಂದು ದಿನಾಂಕ. 06/05/2022 ರಂದು 12-30 ಪಿಎಂಕ್ಕೆ ಶ್ರೀ ನಾಗಪ್ಪ ತಂದೆ ಸಂಜಯ ಕರಕರ ಮಂಡರ ವಃ 19 ಜಾಃಕರಕರ ಮಂಡರ ಉಃ ಕೂಲಿಕೆಲಸ ಸಾಃ ಅಂಬೇಡ್ಕರ ನಗರ ಟಿ.ಎಮ್.ಸಿ ಕಾಲೋನಿ ಯಾದಗಿರಿ ರವರು ಠಾಣೆಗೆ ಹಾಜರಾಗಿ ಒಂದು ಹೇಳಿಕೆಯನ್ನು ಕೊಟ್ಟಿದ್ದರ ಸಾರಾಂಶವೆನೆಂದರೆ, ದಿನಾಂಕ. 02/05/2022 ರಂದು ಬೆಳೆಗ್ಗೆ 9-30 ಗಂಟೆ ಸುಮಾರಿಗೆ ನಾವು ದುರ್ಗಪ್ಪ ಈತನಿಗೆ ಪೋನ ಮಾಡಿ ಹಂದಿ ಮಾರಾಟ ಮಾಡಿದ ಹಣದ ಬಗ್ಗೆ ಮಾತನಾಡೋಣ ಬಾ ಅಂತಾ ಕರೆದಿದ್ದು ಆಗ ದುರ್ಗಪ್ಪ ತಂದೆ ಹಣಮಂತ ಮುಂಗಲೇರ, ಗಂಗಪ್ಪ ತಂದೆ ಅಶೋಕ ಮುಂಗಲೇರ, ನಾಗೇಶ ತಂದೆ ಅಶೋಕ ಮುಂಗಲೇರ, ಭೀಮರಾಯ ತಂದೆ ಹಣಮಂತ ನಾಟೇಕಾರ ರವರು ಮಾತನಾಡಲು ಬಂದಾಗ ನಾನು ಮತ್ತು ನಮ್ಮ ಅಣ್ಣ ಮೌನೇಶ@ಮಡ್ಡಿ ತಂದೆ ಸಂಜಯ ಕರಕರ ಮಂಡರ, ನಮ್ಮ ಕಾಕನ ಮಗನಾದ ನಾಗೇಶ@ಗಿಡ್ಡ ತಂದೆ ಮರೆಪ್ಪ ಕರಕರ ಮಂಡರ, ನಮ್ಮ ಅತ್ತೆ ಜಮ್ಮಕ್ಕ ಗಂಡ ದುರ್ಗಪ್ಪ ಕರಕರ ಮಂಡರ ಎಲ್ಲರೂ ಕೂಡಿಕೊಂಡು ಅಂಬೇಡ್ಕರ ಚೌಕದಲ್ಲಿಯ ನಮ್ಮ ಮನೆಯ ಹತ್ತಿರ ಇರುವ ತೋಟಗಾರಿಕೆ ಇಲಾಖೆ ಹತ್ತಿರ ಮಾತನಾಡುತ್ತಿರುವಾಗ ನಾನು ಮತ್ತು ನಮ್ಮ ಅಣ್ಣ ಮೌನೇಶ ಕೂಡಿಕೊಂಡು ದುರ್ಗಪ್ಪನಿಗೆ ನಮ್ಮ ಹಣ ಕೊಡುವಂತೆ ಕೇಳಿದಾಗ ಆತನು ಯಾವ ಹಣ ಕೋಡಬೇಕಲೆ ಸೂಳೆ ಮಕ್ಕಳೆ ನಾವು ಯಾರಿಗೂ ಹಣ ಕೊಡುವುದು ಇಲ್ಲಾ ಅಂತಾ ಅಂದಾಗ ನಾವು ಅವರಿಗೆ, ನಮಗೆ ಸಾಲ ಆಗಿದೆ ಬೇರೆಯವರಿಗೆ ಹಣ ಕೊಡಬೇಕು ಒಂದು ವರ್ಷದಿಂದ ನೀವು ಹಣ ಕೊಡುತ್ತಿಲ್ಲಾ ಸತಾಯಿಸುತ್ತಿದ್ದೇರಿ ಅಂತಾ ಅಂದಿದ್ದಕ್ಕೆ ಆಗ ದುರ್ಗಪ್ಪ ಈತನು ಈ ಬೋಸಡಿ ಮಕ್ಕಳಿಗೆ ಸೊಕ್ಕು ಬಹಳ ಬಂದಿದೆ ಇವತ್ತು ಸೊಕ್ಕು ಮುರಿಬೇಕು ಈ ಮಕ್ಕಳದು ಅಂತಾ ಅಂದವರೇ ಅರೋಪಿತರು ಕೂಡಿಕೊಂಡು ಪಿರ್ಯಾಧಿಗೆ ಮತ್ತು ಪಿರ್ಯಾದಿ ಅತ್ತೇಗೆ ಹೊಡೆ ಬಡೆ ಮಾಡಿ ಬಾರಿ ಮತ್ತು ಸಾದಾಗಾಯ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿದ್ದು ಹೊಡೆ ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.48/2022 ಕಲಂ. 323, 324, 326, 504, 506, ಸಂ. 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

 

ಶೋರಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ 409, 420 ಐಪಿಸಿ : ಇಂದು ದಿನಾಂಕ: 06/05/2022 ರಂದು 6.30 ಪಿ.ಎಂ. ಸುಮಾರಿಗೆ ಠಾಣೆಯಲ್ಲಿದ್ದಾಗ ಪಿಯರ್ಾದಿದಾರರಾದ ಶ್ರೀಮತಿ ಈರಮ್ಮ ಗಂಡ ಶಾಂತಗೌಡ ಮಾಲಿ ಪಾಟೀಲ್ ವ|| 48 ವರ್ಷ ಜಾ|| ಲಿಂಗಾಯತ ಉ|| ಮನೆಗೆಲಸ ಸಾ|| ಬೋನಾಳ್ ಇವರು ಠಾಣೆಗೆ ಹಾಜರಾಗಿ ಕೊಟ್ಟ ಪಿರ್ಯಾದಿ ಅರ್ಜಿ ಸಾರಾಂಶವೇನೆಂದರೆ, ಆಲ್ದಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ಧಿಗಾಗಿ ಸರಕಾರದಿಂದ ಅನುದಾನ ಬಂದಿದ್ದು, ಸದರಿ ಅನುದಾನವನ್ನು ಕ್ರೀಯಾ ಯೋಜನೆ ಪ್ರಕಾರ ಅವಶ್ಯಕತೆ ಇರುವ ಕಾಮಗಾರಿಗಳನ್ನು ಮಾಡಬೇಕಾಗಿದ್ದು, ಆದರೆ ಸದರಿ ಗ್ರಾಮ ಪಂಚಾಯತಿಯ ಅಧಿಕಾರಿಗಳು ನನ್ನ ಸಹಿಯನ್ನು ಫೋರ್ಜರಿ ಮಾಡಿ, ಚೆಕ್ಗಳಿಗೆ ಸಹಿ ಮಾಡಿ ಚೆಕ್ಗಳನ್ನು ಬ್ಯಾಂಕ್ನಲ್ಲಿ ಪಾಸ್ ಮಾಡಿದ್ದು ಇರುತ್ತದೆ. ಈ ಚೆಕ್ಗಳನ್ನು ದಿನಾಂಕ: 20/07/2021 ರಿಂದ ಇಲ್ಲಿಯವರೆಗೆ ಪಾಸ್ ಮಾಡಿದ್ದು ಇರುತ್ತದೆ. ಸದರಿ ಚೆಕ್ಗಳ ಮಾಹಿತಿ ಈ ಕೆಳಗಿನಂತಿರುತ್ತದೆ. 1) 227379 ಮೊತ್ತ 31,500/- ರೂ.ಗಳು 2) 608444 ಮೊತ್ತ 8,542/- ರೂ.ಗಳು 3)227400 ಮೊತ್ತ 35,000/- ರೂ.ಗಳು 4) 227398 ಮೊತ್ತ 20,642 ರೂ.ಗಳು 5) 238355 ಮೊತ್ತ 81,000/- ರೂ.ಗಳು 6) 238362 ಮೊತ್ತ 10,000/- ರೂ.ಗಳು 7) 608449 ಮೊತ್ತ 25,000/- ರೂ.ಗಳು. ಸದರಿ ಚೆಕ್ಗಳ ಮೇಲಿನ ಸಹಿಗಳನ್ನು ಪರಿಶೀಲಿಸಿ, ತನಿಖೆ ಮಾಡಿ ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ. ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.71/2022 ಕಲಂ: 409, 420 ಐಪಿಸಿ ನೇದ್ದರ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೂಕೊಂಡಿದ್ದು ಇರುತ್ತದೆ.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ 74/2022.ಕಲಂ, 323,324,354,504,506. ಐ.ಪಿ.ಸಿ. : ಇಂದು ದಿನಾಂಕ 05/06/2022 ರಂದು 19-00 ಗಂಟೆಗೆ ಪಿಯರ್ಾದಿ ಶ್ರೀಮತಿ, ಎಂ. ರಾಧಾ ಗಂಡ ಶ್ರೀನಿವಾಸ ಮನ್ನಿ ವ|| 38 ಜಾ|| ಕಮ್ಮಾ ಉ|| ಮನೆಕೆಲಸ ಸಾ|| ಹತ್ತಿಗುಡೂರ ದೇವದುರ್ಗ ಕ್ರಾಸ ಹತ್ತಿರ ಹತನೂರ ಕ್ಯಾಂಪ-9110687541.ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಿಕರಣ ಮಾಡಿದ ಅಜರ್ೀ ಹಾಜರ ಪಡಿಸಿದ್ದರ ಸಾರಾಂಶವೆನೆಂದರೆ. ಈ ಮೋದಲು ನಮ್ಮ ಕ್ಯಾಂಪಿನ ರಾಘವೇಂದ್ರ ತಂದೆ ಭೂಪತಿ ಮದ್ದಿಪುಡಿ ಈತನು ನಳದ ನೀರಿನ ಸಂಬಂದವಾಗಿ ಆಗಾಗ ನಮ್ಮೊಂದಿಗೆ ತಕರಾರು ಮಾಡುತ್ತ ಬಂದಿದ್ದು ನಾವು ಹೋಗಲಿ ಅಂತ ಸುಮ್ಮನಾಗಿದ್ದೆವು. ಹೀಗಿದ್ದು ದಿನಾಂಕ 04/05/2022 ರಾತ್ರಿ 8-15 ಗಂಟೆಗೆ ನಾನು ಮತ್ತು ನನ್ನ ಗಂಡ ಶ್ರೀನಿವಾಸ ತಂದೆ ಗಂಗರಾಜು ಮನ್ನಿ ಇಬ್ಬರು ಮಾತನಾಡುತ್ತ ನಮ್ಮ ಮನೆಯ ಮುಂದೆ ನಿಂತಾಗ ನಮ್ಮ ಸಮಾಜದ ರಾಘವೇಂದ್ರ ತಂದೆ ಭೂಪತಿ ಮದ್ದಿಪುಡಿ ಈತನು ನಮ್ಮ ಮನೆಯ ಮುಂದೆ ಬಂದವನೆ ಲೇ ಶೀನ್ಯಾ ಸೂಳಿ ಮಗನೆ ಬರಾಲೇ ನಳದ ನೀರಿನ ಸಂಬಂದವಾಗಿ ನಮ್ಮೊಂದಿಗೆ ತಕರಾರು ಮಾಡುತ್ತಿ ಇವತ್ತು ನಿನಗೆ ಬಿಡುವುದಿಲ್ಲಾ ಅಂತ ಅಂದನು. ಆಗ ನನ್ನ ಗಂಡನಾದ ಶ್ರೀನೀವಾಸನು ಯಾಕೊ ರಾಘವೇಂದ್ರ ಸುಮ್ಮನೆ ಜಗಳ ತೆಗಿತ್ತಿದ್ದಿ ನೀವೆ ನೀರಿನ ಸಂಬಂದವಾಗಿ ನಮ್ಮೊಂದಿಗೆ ಜಗಳ ಮಾಡುತ್ತಿ ಅಂತ ಅಂದಾಗ. ನನಗೆ ಎದರು ಮಾತನಾಡುತ್ತಿ ಎನಲೇ ಮಗನೆ ಅಂತ ಅಂದವನೆ. ಅಲ್ಲೆ ಬಿದ್ದಿದ್ದ ಒಂದು ಬಡಿಗೆಯನ್ನು ತೆಗೆದುಕೊಂಡು ನನ್ನ ಗಂಡ ಶ್ರೀನಿವಾಸನಿಗೆ ತಲೆಯ ಮೇಲೆ ಹೋಡೆದು ರಕ್ತಗಾಯ ಮಾಡಿದನು. ಅದೆ ಬಡಿಗೆಯಿಂದ ನನ್ನ ಗಂಡ ಶ್ರೀನಿವಾಸನ ಎಡಗೈ ಹೆಬ್ಬೆರಳು ಮತ್ತು ತೋರು ಬೆರಳು ಮದ್ಯದಲ್ಲಿ ಹೋಡೆದು ರಕ್ತಗಾಯಮಾಡಿದನು. ರಾಘವೇಂದ್ರನು ತನ್ನ ಕೈಯಿಂದ ನನಗೆ ಬಲಗೈ ಮೋಳಕೈಯಿಗೆ ಮತ್ತು ತಲೆಗೆ ಹೋಡೆದನು. ಆಗ ಅಲ್ಲೆ ಇದ್ದ ಸುರಬಾಬು ತಂದೆ ಆಧಿನಾರಾಯಣ ಚೋಡೆ ಮತ್ತು ಅಲ್ಲೆ ಹೋರಟಿದ್ದ ಸತ್ಯಬಾಬು ತಂದೆ ವೇಂಕಟರಾವ್ ದೇವಳ್ಳ., ರಾಮು ತಂದೆ ಸುಬ್ಬಾರಾವ್ ನಾಮಾಲ, ಶ್ರೀನಿವಾಸ ತಂದೆ ಕೃಷ್ಣಮುತರ್ಿ ಗೋಡಪಾಟಿ, ಇವರು ನಮಗೆ ಹೋಡೆಯುವದನ್ನು ನೋಡಿ ಬಂದು ಜಗಳ ಬಿಡಿಸಿಕೊಂಡರು. ಆಗ ರಾಘವೆಂದ್ರನು ನಮಗೆ ಇವತ್ತು ಉಳಿದುಕೊಂಡಿದ್ದಿರಿ ಮಕ್ಕಳೆ ಇನ್ನೋಮ್ಮಿ ನಮ್ಮ ತಂಟೆಗೆ ಬಂದರೆ ನಿಮ್ಮ ಜೀವಸಹಿತ ಬಿಡುವದಿಲ್ಲಾ ಅಂತ ಜೀವಬೆದರಿಕೆ ಹಾಕಿ ಹೋದನು. ಸದರಿ ಜಗಳವು ನಮ್ಮ ಮನೆಯ ಮುಂದೆ ರಾತ್ರಿ 8-15 ಗಂಟೆಗೆ ಘಟನೆ ಜರುಗಿರುತ್ತದೆ. ನಂತರ ನನ್ನ ಗಂಡನಾದ ಶ್ರೀನಿವಾಸನಿಗೆ ನಾನು ಮತ್ತು ಸುರಬಾಬು, ಸತ್ಯಬಾಬು, ರಾಮು, ಶ್ರೀನಿವಾಸ ಎಲ್ಲರು ಕೂಡಿಕೊಂಡು ಒಂದು ಖಾಸಗಿ ವಾಹನದಲ್ಲಿ ಕರೆದುಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ಇರುತ್ತದೆ, ನಮಗೆ ಉಪಚಾರ ಮಾಡಿದ ವೈದ್ಯಾಧಿಕಾರಿಗಳು ಹೆಚ್ಚಿನ ಉಪಚಾರ ಕುರಿತು ಕರೆದುಕೊಂಡು ಹೋಗಲು ತಿಳಿಸಿದ್ದರಿಂದ ಸುರಬಾಬು, ಸತ್ಯಬಾಬು, ರಾಮು, ಶ್ರೀನಿವಾಸ ಎಲ್ಲರು ಕೂಡಿಕೊಂಡು ನನ್ನ ಗಂಡನಾದ ಶ್ರೀನಿವಾಸನಿಗೆ ಒಂದು ಅಂಬುಲೇನ್ಸದಲ್ಲಿ ಕರೆದುಕೊಂಡು ಹೋಗಿ ರಾಯಚೂರಿನ ಕನ್ವಾ ಆಸ್ಪತ್ರೆಯಲ್ಲಿ ಸೇರಿಕೆಮಾಡಿದ್ದು ಇರುತ್ತದೆ. ನನಗೆ ಸಣ್ಣ ಪುಟ್ಟ ಪೆಟ್ಟಾಗಿದ್ದರಿಂದ ನಾನು ಉಪಚಾರ ಮಾಡಿಸಿಕೊಂಡಿರುವುದಿಲ್ಲಾ. ಸದ್ಯವು ನನಗೆ ಉಪಚಾರದ ಅವಶ್ಯಕತೆ ಇರುವುದಿಲ್ಲಾ. ನನ್ನ ಗಂಡನಿಗೆ ಉಪಚಾರ ಮಾಡಿಸುವದು ಅವಶ್ಯಕವಾಗಿದ್ದರಿಂದ ಉಪಚಾರ ಮಾಡಿಸಿ ಮತ್ತು ನಮ್ಮ ಹಿರಿಯರೊಂದಿಗೆ ವಿಚಾರಮಾಡಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದು ಇರುತ್ತದೆ. ಕಾರಣ ನಮಗೆ ಅವಾಶ್ಚಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿ ಜೀವದ ಭಯ ಹಾಕಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ನಿಡಿದ್ದು ಇರುತ್ತದೆ, ಸದರಿ ದೂರಿನ ಸಾರಾಂಶದ ಮೆಲಿಂದ ಠಾಣೆಯ ಗುನ್ನೆ ನಂ 74/2022 ಕಲಂ 323, 324, 354, 504, 506, ಐ,ಪಿ,ಸಿ, ನ್ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಗೆ ಕೈಕೊಂಡೆನು.


ಕೆಂಭಾವಿ ಪೊಲೀಸ್ ಠಾಣೆ:-
ಗುನ್ನೆ ನಂ 77/2022 ಕಲಂ: 87 ಕೆಪಿ ಯಾಕ್ಟ : ಇಂದು ದಿನಾಂಕ 06/05/2022 ರಂದು 6.00 ಪಿಎಮ್ ಕ್ಕೆ ಶ್ರೀ ಗಜಾನಂದ ಬಿರಾದಾರ ಪಿ.ಎಸ್.ಐ(ಕಾ.ಸು) ಕೆಂಭಾವಿ ಪೊಲೀಸ್ ಠಾಣೆ ರವರು ಠಾಣೆಗೆ ಹಾಜರಾಗಿ ಕೊಟ್ಟ ವರದಿ ಏನಂದರೆ ಇಂದು ದಿನಾಂಕ 06/05/2022 ರಂದು 4.00 ಪಿಎಂ ಕ್ಕೆ ನಾನು ಮತ್ತು ಶ್ರೀ ದೌಲತ್ ಸಿಪಿಐ ಹುಣಸಗಿ ಸಾಹೇಬರು ಠಾಣೆಯಲ್ಲಿದ್ದಾಗ ಯಾಳಗಿ ಗ್ರಾಮದ ಸೀಮಾಂತರದಲ್ಲಿ ನಾಗರಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಐಬಿಸಿ ಮೇನ ಕೆನಾಲ್ ಹತ್ತಿರ ಬಯಲು ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಪಣಕ್ಕಿಟ್ಟು ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತವಾದ ಬಾತ್ಮೀ ಬಂದ ಮೇರೆಗೆ ಮಾನ್ಯ ಶ್ರೀ ದೌಲತ್ ಸಿಪಿಐ ಸಾಹೇಬರು ಹುಣಸಗಿ ರವರ ನೇತೃತ್ವದಲ್ಲಿ ನಾನು ಮತ್ತು ಠಾಣೆಯ ತಿರುಪತಿ ಹೆಚ್.ಸಿ 140, ಆನಂದ ಪಿಸಿ 43, ಸೈಯದ್ ಪಿಸಿ 106, ಪೆದ್ದಪ್ಪಗೌಡ ಪಿಸಿ 214, ಪ್ರಭುಗೌಡ ಪಿಸಿ 361, ಬಸವರಾಜ ಪಿಸಿ 363, ಶಿವಪ್ಪ ಪಿಸಿ 326 ಮತ್ತು ಅಮರೇಶ ಪಿಸಿ 426 ರವರನ್ನು ಹಾಗೂ ಇಬ್ಬರು ಪಂಚರಾದ ಮಡಿವಾಳಪ್ಪ ತಂದೆ ಕೆಂಚಪ್ಪ ದೊಡ್ಡಮನಿ ಮತ್ತು ಮಕ್ತುಮಸಾಬ ತಂದೆ ಮಾಸುಮಸಾಬ ವಡಕೇರಿ ಇವರನ್ನು ಕರೆದುಕೊಂಡು ಠಾಣೆಯ ಜೀಪ ನಂ ಕೆಎ 33 ಜಿ 127 ನೇದ್ದರಲ್ಲಿ ಠಾಣೆಯಿಂದ 4.10 ಪಿಎಂ ಕ್ಕೆ ಹೊರಟು 4.25 ಪಿಎಂ ಕ್ಕೆ ಯಾಳಗಿ ಗ್ರಾಮದ ಸೀಮಾಂತರದಲ್ಲಿ ನಾಗರಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಐಬಿಸಿ ಮೇನ ಕೆನಾಲ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ ಎಲ್ಲರೂ ಜೀಪಿನಿಂದ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ 10-11 ಜನರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು 4.30 ಪಿಎಂ ಕ್ಕೆ ನಾನು, ಸಿಪಿಐ ಸಾಹೇಬರು ಮತ್ತು ಸಿಬ್ಬಂದಿ ಜನರು ಕೂಡಿ ಒಮ್ಮೆಲೇ ದಾಳಿ ಮಾಡಿದ್ದು ದಾಳಿಯಲ್ಲಿ 11 ಜನರು ಸಿಕ್ಕಿದ್ದು ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ಯಲ್ಲಪ್ಪ ತಂದೆ ಶರಣಪ್ಪ ಹೆಳವರ ವ|| 48 ಜಾ|| ಹೆಳವರ ಉ|| ಕೂಲಿ ಸಾ|| ಯಾಳಗಿ ತಾ|| ಸುರಪೂರ 2) ಮಲ್ಲನಗೌಡ ತಂದೆ ಪರತಪ್ಪ ಸಾಸನೂರ ವ|| 38 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಯಾಳಗಿ 3) ಸಿದ್ದಣ್ಣ ತಂದೆ ಮಹಾದೇವಪ್ಪ ಹೂಗಾರ ವ|| 40 ಜಾ|| ಹೂಗಾರ ಉ|| ಕೂಲಿ ಸಾ|| ಯಾಳಗಿ 4) ಹಳ್ಳೆಪ್ಪ ತಂದೆ ದುರ್ಗಪ್ಪ ಹಾದಿಮನಿ ವ|| 32 ಜಾ|| ಮಾದರ ಉ|| ಕೂಲಿ ಸಾ|| ಯಾಳಗಿ 5) ಬಸವರಾಜ ತಂದೆ ಶಂಕ್ರೆಪ್ಪ ಪೂಜಾರಿ ವ|| 35 ಜಾ|| ಕುರುಬರ ಉ|| ಒಕ್ಕಲುತನ ಸಾ|| ಯಾಳಗಿ 6) ಭೀಮಾಶಂಕರ ತಂದೆ ಹಣಮಂತ್ರಾಯ ಹೆಳವರ ವ|| 30 ಜಾ|| ಹೆಳವರ ಉ|| ಒಕ್ಕಲುತನ ಸಾ|| ಯಾಳಗಿ 7) ಮಡಿವಾಳಪ್ಪ ತಂದೆ ಮಲ್ಲಿಕಾಜರ್ುನ ಮಲಘಾಣ ವ|| 40 ಜಾ|| ಲಿಂಗಾಯತ ಉ|| ಕೂಲಿ ಸಾ|| ಯಾಳಗಿ 8) ಶರಣಪ್ಪ ತಂದೆ ಸೋಪಣ್ಣ ಸಗರ ವ|| 32 ಜಾ|| ಗಾಣಿಗ ಉ|| ಒಕ್ಕಲುತನ ಸಾ|| ಯಾಳಗಿ 9) ದಾವಲಸಾಬ ತಂದೆ ಗನಿಸಾಬ ದ್ಯಾಮನಾಳ ವ|| 26 ಜಾ|| ಮುಸ್ಲಿಂ ಉ|| ಕೂಲಿ ಸಾ|| ಯಾಳಗಿ 10) ಮಲ್ಲನಗೌಡ ತಂದೆ ಅಂಬ್ರೇಶಗೌಡ ನಾಲವಾರ ವ|| 36 ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಯಾಳಗಿ 11) ಶಿವಣ್ಣ ತಂದೆ ಶರಣಪ್ಪ ಗುಗ್ಗರಿ ವ|| 42 ಜಾ|| ಲಿಂಗಾಯತ ಉ|| ಒಕ್ಕಲುತನ ಸಾ|| ಯಾಳಗಿ ಅಂತ ತಿಳಿಸಿದ್ದು ಹಾಗೂ ಎಲ್ಲರ ಮಧ್ಯದ ಕಣದಲ್ಲಿ 31100/- ರೂ ಸಿಕ್ಕಿದ್ದು ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದು ಸದರಿಯವುಗಳನ್ನು ಪಂಚರ ಸಮಕ್ಷಮದಲ್ಲಿ ವಶಪಡಿಸಿಕೊಂಡಿದ್ದು ಇರುತ್ತದೆ. ಸದರಿ ಜಪ್ತಿ ಪಂಚನಾಮೆಯನ್ನು 4.30 ಪಿಎಂ ದಿಂದ 5.30 ಪಿಎಂ ದವರೆಗೆ ಮಾಡಿಕೊಂಡು ಸದರಿ ಆರೋಪಿತರು ಮತ್ತು ಮುದ್ದೆಮಾಲು ಹಾಗು ಜಪ್ತಿ ಪಂಚನಾಮೆಯ ಸಮೇತ ಮರಳಿ ಠಾಣೆಗೆ 6.00 ಪಿಎಮ್ ಕ್ಕೆ ಬಂದು ಈ ವರದಿಯನ್ನು ನೀಡಿ ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ವರದಿ ಆದಾರದ ಮೇಲಿಂದ ಠಾಣಾ ಗುನ್ನೆ ನಂಬರ 77/2022 ಕಲಂ 87 ಕೆಪಿ ಆಕ್ಟ್ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

 

ಇತ್ತೀಚಿನ ನವೀಕರಣ​ : 07-05-2022 11:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080