ಅಭಿಪ್ರಾಯ / ಸಲಹೆಗಳು

                                               ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07-06-2021
ಯಾದಗಿರ ಗ್ರಾಮೀಣ ಪೊಲೀಸ್ ಠಾಣೆ :- 79/2021 ಕಲಂ 279,304(ಎ) ಐಪಿಸಿ & 187 ಐ.ಎಮ.ವಿ ಕಾಯ್ದೆ : ಇಂದು ದಿನಾಂಕ 06-06-2021 ರಂದು 6-30 ಎ.ಎಮ್ಮ ಕ್ಕೆ ಫಿರ್ಯಾಧಿದಾರನಾದ ಶ್ರೀ ಹಣಮಂತ ತಂದೆ ಈರಪ್ಪ ಪಲಮೆನವರ ವಯ:60 ಜಾತಿ:ಕಬ್ಬಲಿಗ ಉ: ಒಕ್ಕಲುತನ ಸಾ: ಬಳಿಚಕ್ರ ಈತನು ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಸಾರಾಂಶವೇನೆಂದರೆ ನಾನು ಮೇಲ್ಕಂಡ ವಿಳಾಸ ನಿವಾಸಿಯಾಗಿದ್ದು, ಒಕ್ಕಲುತನ ಕೆಲಸ ಮಾಡಿಕೊಂಡು ನನ್ನ ಕುಟುಂಬದವ ರೊಂದಿಗೆ ಉಪಜೀವನ ಮಾಡುತ್ತೇನೆ. ನನಗೆ 5 ಜನ ಮಕ್ಕಳಿದ್ದು, ಅವರಲ್ಲಿ 3 ಜನ ಗಂಡು ಮಕ್ಕಳು 2 ಜನ ಹೆಣ್ಣು ಮಕ್ಕಳು ಇದ್ದಿರುತ್ತಾರೆ. ಮಲ್ಲಪ್ಪ ಈತನು ನನ್ನ ಹಿರಿಯ ಮಗನಿರುತ್ತಾನೆ. ಅವನು ಕೂಡಾ ಒಕ್ಕಲುತನ ಕೆಲಸ ಮಾಡಿಕೊಂಡು ನಮ್ಮೊಂದಿಗೆ ಇರುತ್ತಾನೆ. ಹೀಗಿರುವಾಗ ನಿನ್ನೆ ದಿನಾಂಕ 05-06-2021 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಮಗ ಮಲ್ಲಪ್ಪ ಈತನು ನಮ್ಮ ಸಂಬಂಧಿಕನಾದ ಮಶಪ್ಪ ತಂದೆ ರಾಯಪ್ಪ ತಾತಳಗೆರೋರ ರವರ ಹುಟ್ಟುಹಬ್ಬ ಇದೆ, ಅದಕ್ಕಾಗಿ ನಾನು ಮತ್ತು ಅವನ ತಮ್ಮನಾದ ತಾಯಪ್ಪ ತಂದೆ ರಾಯಪ್ಪ ತಾತಳಗೆರೋರ ಇಬ್ಬರೂ ಕೂಡಿಕೊಂಡು ರಾಮಸಮುದ್ರ ಗ್ರಾಮಕ್ಕೆ ಹೋಗಿ ಕೇಕ್ ತಗೆದುಕೊಂಡು ಬರುತ್ತೇವೆ ಅಂತಾ ಹೇಳಿ ಮನೆಯಿಂದ ಮೋಟಾರು ಸೈಕಲ್ ತೆಗೆದುಕೊಂಡು ಹೋದನು. ನಂತರ ನಾವೆಲ್ಲರೂ ಮನೆಯಲ್ಲಿ ಊಟ ಮಾಡಿಕೊಂಡು ಮಾತಾಡುತ್ತಾ ಕುಳಿತಿರುವಾಗ ನನ್ನ ಅಳಿಯನಾದ ಮಶಪ್ಪ ತಂದೆ ದೊಡ್ಡಪ್ಪ ಸಂಜೀವಿನಿ ವಯ:38 ವರ್ಷ ಇವರು ನನ್ನ ಮನೆಗೆ ಬಂದು ತಿಳಿಸಿದ್ದೇನೆಂದರೆ ನಾನು ಊರಲ್ಲಿ ಇರುವಾಗ ಮೈಲಾಪುರ ಗ್ರಾಮದ ಮಲ್ಲು ಕಡಿಪೌಂಟಗಿ ಇವರು ನನಗೆ ಪೋನ ಮಾಡಿ ನಾನು ವರ್ಕನಳ್ಳಿ ಕ್ರಾಸ ಹತ್ತಿರ ಇರುವಾಗ ವರ್ಕನಳ್ಳಿ ಕಡೆಯಿಂದ ಒಂದು ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ತನ್ನ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಓಡಿಸಿಕೊಂಡು ಬರುತ್ತಿದ್ದನು. ಅದೇ ಸಮಯಕ್ಕೆ ರಾಮಸಮುದ್ರ ಕಡೆಯಿಂದ ಒಂದು ಮೋಟಾರು ಸೈಕಲ್ ಸವಾರನು ಮತ್ತು ಅವನ ಹಿಂದುಗಡೆ ಒಬ್ಬನು ಕುಳಿತುಕೊಂಡಿದ್ದು ಮೋಟಾರು ಸೈಕಲ್ ಓಡಿಸಿಕೊಂಡು ಬರುತ್ತಿದ್ದನು. ರಾಮಸಮುದ್ರ ಬಳಿಚಕ್ರ ರೋಡಿನ ಮೇಲೆ ವರ್ಕನಳ್ಳಿ ಕ್ರಾಸ ಹತ್ತಿರ ಮೋಟಾರು ಸೈಕಲ್ ಸವಾರನು ಓಡಿಸಿಕೊಂಡು ಬರುವಾಗ ಟ್ರ್ಯಾಕ್ಟರ ಚಾಲಕನು ಅತಿವೇಗದಿಂದ ಓಡಿಸಿಕೊಂಡು ಬಂದು ಮೋಟಾರು ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಮಾಡಿದನು. ಆಗ ನಾನು ಓಡಿ ಹೋಗಿ ನೋಡಲಾಗಿ ನಿಮ್ಮೂರಿನ ಮೋಟಾರು ಸೈಕಲ್ ಓಡಿಸುತ್ತಿದ್ದ ಮಲ್ಲಪ್ಪ ತಂದೆ ಹಣಮಂತ ಪಲಮೆನವರ ಈತನಿಗೆ ಮತ್ತು ಅವನ ಹಿಂದುಗಡೆ ಕುಳಿತ ತಾಯಪ್ಪ ತಂದೆ ರಾಯಪ್ಪ ತಾತಳಗೆರೋರ ಇವರಿಬ್ಬರಿಗೆ ಮೈತುಂಬ ಭಾರಿ ರಕ್ತಗಾಯ, ಗುಪ್ತಗಾಯ, ಮತ್ತು ತರಚಿದ ಗಾಯಗಳಾಗಿ ಇಬ್ಬರೂ ಸ್ಥಳದಲ್ಲಿಯೇ ಸತ್ತಿರುತ್ತಾರೆ. ಈ ಅಪಘಾತ ಮಾಡಿ ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ. ಅವನ ಹೆಸರು ಮತ್ತು ವಿಳಾಸ ಗೋತ್ತಾಗಿರುವದಿಲ್ಲ. ಈ ಅಪಘಾತವು ಇಂದು ದಿನಾಂಕ 05-06-2021 ರಾತ್ರಿ 10-00 ಗಂಟೆಗೆ ನಡೆದಿರುತ್ತದೆ. ನೀನು ಬೇಗನೆ ಬಾ ಅಂತಾ ತಿಳಿಸಿರುತ್ತಾನೆ ಅಂತಾ ಹೇಳಿರುತ್ತಾನೆ. ಆಗ ನಾನು ವಿಷಯವನ್ನು ತಾಯಪ್ಪ ಮನೆಯವರಿಗೆ ತಿಳಿಸಿದೆನು. ನಂತರ ನಾನು ನನ್ನ ಹೆಂಡತಿ ಸಾಬಮ್ಮ, ನನ್ನ ಮಗ ಬನ್ನಪ್ಪ ಮತ್ತು ವೆಂಕಟೇಶ ತಂದೆ ರಾಯಪ್ಪ ತಾತಳಗೆರೋರ, ಮಲ್ಲಿಕಾಜರ್ುನ ತಂದೆ ರಾಯಪ್ಪ ತಾತಳಗೆರೋರ, ಮಶಪ್ಪ ತಂದೆ ರಾಯಪ್ಪ ತಾತಳಗೆರೋರ, ರಾಯಪ್ಪ ತಂದೆ ಮಹಾದೇವಪ್ಪ ತಾತಳಗೆರೋರ, ಶರಣಮ್ಮ ಗಂಡ ರಾಯಪ್ಪ ತಾತಳಗೆರೋರ ಮತ್ತು ಮಶಪ್ಪ ತಂದೆ ದೊಡ್ಡಪ್ಪ ಸಂಜೀವಿನಿ ಎಲ್ಲರೂ ಕೂಡಿಕೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ಈ ಮೇಲಿನಂತೆ ಘಟನೆ ನಡೆದಿತ್ತು. ಈ ಅಪಘಾತದಲ್ಲಿ ನನ್ನ ಮಗನಾದ ಮಲ್ಲಪ್ಪ ತಂದೆ ಹಣಮಂತ ಪಲಮೆನವರ ಇವನ ತಲೆಗೆ, ಎಡಗಣ್ಣಿಗೆ, ಎಡಮೆಲಕಿಗೆ ಭಾರಿ ರಕ್ತಗಾಯವಾಗಿತ್ತು, ಎಡಗೈ ಮೊಳಕೈ ಕೆಳಗೆ ಭಾರಿ ರಕ್ತಗಾಯವಾಗಿ ಕೈ ಮುರಿದಿರುತ್ತದೆ ಎಡಮುಂಡಿಗೆ ಮತ್ತು ಎಡಬಗಲಿಗೆ ಭಾರಿ ರಕ್ತಗಾಯವಾಗಿರುತ್ತದೆ, ಹೊಟ್ಟೆಗೆ, ಬೆನ್ನಿಗೆ ಕಂದು ಗಟ್ಟಿದ ತರಚಿದ ಗಾಯವಾಗಿರುತ್ತದೆ. ಎಡಕಾಲು ತೊಡೆಗೆ ಭಾರಿ ರಕ್ತಗಾಯವಾಗಿ ಕಾಲು ಮುರಿದು ಸ್ಥಳದಲ್ಲಿಯೇ ಸತ್ತಿದ್ದನು. ತಾಯಪ್ಪ ತಂದ ರಾಯಪ್ಪ ತಾತಳಗೆರೋರ ಈತನ ತಲೆಗೆ, ಹಣೆಗೆ ಭಾರಿ ರಕ್ತಗಾಯವಾಗಿದ್ದು, ತೊಡೆಸಂದಿನಲ್ಲಿ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಎಡಗಾಲು ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ಮುರಿದು ಅವನು ಕೂಡಾ ಸ್ಥಳದಲ್ಲಿಯೇ ಸತ್ತಿದ್ದನು. ಅಪಘಾತ ಮಾಡಿದ ಟ್ರಾಕ್ಟರ ನಂಬರ ನೋಡಲಾಗಿ ಟ್ರ್ಯಾಕ್ಟರ ಇಂಜೀನ ನಂ ಕೆಎ-33-ಟಿಬಿ-2787 ಮತ್ತು ಟ್ರಾಲಿಗೆ ನಂಬರ ಇರುವದಿಲ್ಲ. ಮೋಟಾರು ಸೈಕಲಗೆ ನೋಂದಣಿ ಸಂಖ್ಯೆ ಇರುವದಿಲ್ಲ, ಅದರ ಚೆಸ್ಸಿ ನಂ:ಎಮಇ4 ಜೆಸಿ65ಎಎಜೆಟಿ003772 ಮತ್ತು ಇಂಜಿನ ನಂ ಜೆಸಿ65ಇ-ಟಿ-2660000 ಅಂತಾ ಇದ್ದಿರುತ್ತದೆ. ನನ್ನ ಮಗ ಮಲ್ಲಪ್ಪ ಮತ್ತು ತಾಯಪ್ಪ ಇಬ್ಬರೂ ಮೋಟಾರು ಸೈಕಲ್ ಮೇಲೆ ಕುಳಿತುಕೊಂಡು ರಾಮಸಮುದ್ರ ಗ್ರಾಮದಿಂದ ನಮ್ಮೂರಿಗೆ ಬರುವಾಗ ರಾಮಸಮುದ್ರ ಬಳಿಚಕ್ರ ರೋಡಿನ ಮೇಲೆ ವರ್ಕನಳ್ಳಿ ಕ್ರಾಸ ಹತ್ತಿರ ಟ್ರ್ಯಾಕ್ಟರ ಚಾಲಕನು ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಬಂದು ಮೋಟಾರು ಸೈಕಲಕ್ಕೆ ಜೋರಾಗಿ ಡಿಕ್ಕಿ ಹೊಡೆದಿದ್ದರಿಂದ ನನ್ನ ಮಲ್ಲಪ್ಪ ಮತ್ತು ತಾಯಪ್ಪ ಇವರಿಬ್ಬರಿಗೆ ಈ ಮೇಲಿನಂತೆ ಭಾರಿ ರಕ್ತಗಾಯ ಗುಪ್ತಗಾಯಗಳಾಗಿ ಸ್ಥಳದಲ್ಲಿಯೇ ಸತ್ತಿರುತ್ತಾರೆ. ಈ ವಿಷಯದ ಬಗ್ಗೆ ನಾವು ಮನೆಯವರೆಲ್ಲರೂ ವಿಚಾರಣೆ ಮಾಡಿ ತಡವಾಗಿ ಇಂದು ದಿನಾಂಕ 06-06-2021 ರಂದು 6-30 ಎ.ಎಮ ಕ್ಕೆ ಠಾಣೆಗೆ ಬಂದು ಹೇಳಿಕೆ ಕೊಟ್ಟಿದ್ದು, ಸದರಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 79/2021 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಮ.ವಿ ಕಾಯ್ದೆ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ :- 102/2021 ಕಲಂ: 87 ಕೆ.ಪಿ.ಕಾಯ್ದೆ : ಇಂದು ದಿನಾಂಕ:06/06/2021 ರಂದು 12-15 ಪಿ.ಎಂ.ಕ್ಕೆ ಠಾಣೆಯ ಎಸ್.ಹೆಚ್.ಡಿ. ಕರ್ತವ್ಯಲ್ಲಿದ್ದಾಗ ಸ.ತ ಫಿರ್ಯಾದಿ ಶ್ರೀ ಚಂದ್ರಶೇಖರ್ ಪಿಎಸ್ಐ ಸಾಹೇಬರು ಜಪ್ತಿ ಪಂಚನಾಮೆ ಮತ್ತು ಮುದ್ದೆಮಾಲಿನೊಂದಿಗೆ 26 ಜನ ಆರೋಪಿತರನ್ನು ಠಾಣೆಗೆ ತಂದು ಹಾಜರು ಪಡಿಸಿ ವರದಿ ನಿಡಿದ್ದು ಸಾರಾಂಶವೆನೆಂದರೆ, ಇಂದು ದಿನಾಂಕ:06/06/2021 ರಂದು 9 ಎ.ಎಂ ಸುಮಾರಿಗೆ ಠಾಣೆಯಲ್ಲಿದ್ದಾಗ ಸುರಪೂರ ಪೊಲೀಸ್ ಠಾಣಾ ವ್ಯಾಪ್ತಿಯ ತಳವಾರಗೇರಿ ಗ್ರಾಮದ ಸೀಮಾಂತರದಲ್ಲಿರುವ ಬಯಲು ಹನುಮಾನ ದೇವರ ಗುಡಿಯ ಮುಂದಿನ ಖುಲ್ಲಾ ಸ್ಥಳದಲ್ಲಿ ಕೆಲವು ಜನರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಾಹರ ಎಂಬ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಠಾಣೆಯ ಸಿಬ್ಬಂಧಿಯವರಾದ 1) ಶ್ರೀ ಮಂಜುನಾಥ ಹೆಚ್ಸಿ-176 2) ಶ್ರೀ ಮಂಜುನಾಥ ಸಿಪಿಸಿ-271 3) ಶ್ರೀ ಹೊನ್ನಪ್ಪ ಪಿಸಿ-427, 4) ಶ್ರೀ ಸೋಮಯ್ಯ ಪಿಸಿ-235, 5) ಶ್ರೀ ಕುಮಾರ ಸಿಪಿಸಿ-139 6) ಶ್ರೀ ಮಹಾಂತೇಶ ಎಪಿಸಿ-48 ಇವರೆಲ್ಲರಿಗೂ ವಿಷಯ ತಿಳಿಸಿ ಇಬ್ಬರು ಪಂಚರಾದ 1) ಶ್ರೀ ಮಾನಪ್ಪ ತಂದೆ ತುಳಜಪ್ಪ ಮೇಲಿನಮನಿ ವ|| 33 ವರ್ಷ ಜಾ|| ಮರಾಠ ಉ||ಒಕ್ಕಲುತನ ಸಾ|| ವಾಗಣಗೇರಿ (ಪಡುಕೋಟೆ) ತಾ|| ಸುರಪುರ 2) ಶ್ರೀ ಅಯ್ಯಣ್ಣ ತಂದೆ ಪಕೀರಪ್ಪ ಟಣಕೇದಾರ ವ|| 21 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ವಾಗಣಗೇರಿ ತಾ|| ಸುರಪುರ ಇವರನ್ನು 9-30 ಎ.ಎಂ ಕ್ಕೆ ಠಾಣೆಗೆ ಬರಮಾಡಿಕೊಂಡು ಅವರಿಗೂ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮೊಂದಿಗೆ ಹಾಜರಿದ್ದು ಪಂಚರಾಗಿ ಸಹಕರಿಸಲು ಕೇಳಿಕೊಂಡ ಮೇರೆಗೆ ಅದಕ್ಕೆ ಅವರು ಒಪ್ಪಿಕೊಂಡಿದ್ದು, ಸದರ ಪಂಚರು ಮತ್ತು ಮೇಲ್ಕಂಡ ಸಿಬ್ಬಂದಿಯವರೊಂದಿಗೆ 9-35 ಎ.ಎಂ ಕ್ಕೆ ಠಾಣೆಯ ಜೀಪ್ ನಂ. ಕೆಎ-33. ಜಿ-0094 ನೇದ್ದರಲ್ಲಿ ಠಾಣೆಯಿಂದ ಹೊರಟು 10-05 ಎ.ಎಂ ಕ್ಕೆ ತಳವಾರಗೇರಿ ಗ್ರಾಮದ ಸೀಮಾಂತರದಲ್ಲಿರುವ ಹನುಮಾನ ದೇವರ ಗುಡಿಯ ಹತ್ತಿರ ಹೋಗಿ ಜೀಪ ನಿಲ್ಲಿಸಿ ಎಲ್ಲರೂ ಕೆಳಗೆ ಇಳಿದು ಮರೆಯಾಗಿ ನಿಂತು ನೋಡಲು ಹನುಮಾನ ಗುಡಿಯ ಮುಂದಿನ ಖುಲ್ಲಾ ಸ್ಥಳದಲ್ಲ್ಲಿ ಕೆಲವು ಜನರು ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ-ಬಾಹರ ಎಂಬ ಜೂಜಾಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದಿಂದ ಒಮ್ಮೇಲೆ ಅವರ ಮೇಲೆ 10-10 ಎ.ಎಂ.ಕ್ಕೆ ದಾಳಿ ಮಾಡಿ ಹಿಡಿಯಲಾಗಿ ಒಟ್ಟು 26 ಜನರು ಸಿಕ್ಕಿದ್ದು, ಅವರ ಹೆಸರು, ವಿಳಾಸ ವಿಚಾರಿಸಲಾಗಿ 1) ಮಲ್ಲಿಕಾಜರ್ುನ್ ತಂದೆ ಯಾಬಪ್ಪ ಹಾದಿಮನಿ ವ|| 48 ವರ್ಷ ಜಾ|| ಮಾದಿಗ ಉ|| ಒಕ್ಕಲುತನ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 900/- ರೂಗಳು ವಶಪಡಿಸಿಕೊಳ್ಳಲಾಯಿತು. 2) ಈರಯ್ಯ ತಂದೆ ಚಿದಾನಂದ ಹಿರೇಮಠ ವ|| 38 ವರ್ಷ ಜಾ|| ಜಂಗಮ ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 3) ಬಸವರಾಜ ತಂದೆ ಭೀಮಣ್ಣ ಬಿಚಗತ್ತಿ ವ|| 27 ವರ್ಷ ಜಾ|| ಬೇಡರು ಉ|| ಗೌಂಡಿ ಕೆಲಸ ಸಾ|| ಬಿಚಗತಗೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1100/- ರೂಗಳು ವಶಪಡಿಸಿಕೊಳ್ಳಲಾಯಿತು. 4) ಇಫರ್ಾನ್ ತಂದೆ ಇಬ್ರಾಹಿಂ ದೇವತ್ಕಲ್ ವ|| 22 ವರ್ಷ ಜಾ|| ಮುಸ್ಲಿಂ ಉ|| ಕೂಲಿ ಕೆಲಸ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1050/- ರೂಗಳು ವಶಪಡಿಸಿಕೊಳ್ಳಲಾಯಿತು. 5) ಭೀಮಣ್ಣ ತಂದೆ ಶಿವಲಿಂಗಪ್ಪ ಬೋಯರ್ ವ|| 21 ವರ್ಷ ಜಾ|| ಕುರುಬರು ಉ|| ಹಮಾಲಿ ಕೆಲಸ ಸಾ|| ಕುಂಬಾರಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1200/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಹಣಮಂತ ತಂದೆ ಯಾಬಪ್ಪ ಹಾದಿಮನಿ ವ|| 28 ವರ್ಷ ಜಾ|| ಮಾದಿಗ ಉ|| ಕೂಲಿ ಕೆಲಸ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1300/- ರೂಗಳು ವಶಪಡಿಸಿಕೊಳ್ಳಲಾಯಿತು. 7) ಹಣಮಂತ ತಂದೆ ಬಸವರಾಜ ಬಿಚಗತ್ತಿ ವ|| 22 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಹಳೆ ಬಸ್ ನಿಲ್ದಾಣ ಹತ್ತಿರ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1500/- ರೂಗಳು ವಶಪಡಿಸಿಕೊಳ್ಳಲಾಯಿತು. 8) ಶೇಖರ್ ತಂದೆ ನಾಗಪ್ಪ ತಂದೆ ಬಿಚಗತ್ತಿ ವ|| 26 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ಬಿಚಗತಗೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 650/- ರೂಗಳು ವಶಪಡಿಸಿಕೊಳ್ಳಲಾಯಿತು. 9) ರಾಮು ತಂದೆ ಗುಡ್ಡೆಕಾಯಿ ವ|| 20 ವರ್ಷ ಜಾ|| ಬೇಡರು ಉ|| ಹಮಾಲಿ ಕೆಲಸ ಸಾ|| ಡೊಣ್ಣಿಗೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 550/- ರೂಗಳು ವಶಪಡಿಸಿಕೊಳ್ಳಲಾಯಿತು. 10) ಹಣಮಂತ ತಂದೆ ಸಂಗಪ್ಪ ಪರದಾನಿ ವ|| 28 ವರ್ಷ ಜಾ|| ಕುರುಬರ ಉ|| ಡ್ರೈವರ್ ಸಾ|| ಕುರುಬರಗಲ್ಲಿ ಕುಂಬಾರ ಪೇಠ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. 11) ತಿಮ್ಮಯ್ಯ ತಂದೆ ಹಣಮಂತ ಕವಲಿ ವ|| 30 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ಡೊಣ್ಣಿಗೇರಿ ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 12) ಹುಲಗಪ್ಪ ತಂದೆ ಭೀಮಣ್ಣ ಕಟ್ಟಮನಿ ವ|| 25 ವರ್ಷ ಜಾ|| ಮಾದಿಗ ಉ|| ಡ್ರೈವರ್ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 650/- ರೂಗಳು ವಶಪಡಿಸಿಕೊಳ್ಳಲಾಯಿತು. 13) ಲೋಹಿತ್ ತಂದೆ ರಾಮಪ್ಪ ದೊಡ್ಡಮನಿ ವ|| 22 ವರ್ಷ ಜಾ|| ಹೊಲೆಯ ಉ|| ಒಕ್ಕಲುತನ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 700/- ರೂಗಳು ವಶಪಡಿಸಿಕೊಳ್ಳಲಾಯಿತು. 14) ಭೀಮಪ್ಪ ತಂದೆ ಬಸವರಾಜ ದೊಡ್ಡಮನಿ ವ|| 34 ವರ್ಷ ಜಾ|| ಮಾದಿಗ ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 15) ಹೈಯಾಳಪ್ಪ ತಂದೆ ತಿಪ್ಪಣ್ಣ ಪಾತಲಿ ವ|| 50 ವರ್ಷ ಜಾ|| ಯಾದವ ಉ|| ಒಕ್ಕಲುತನ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 1150/- ರೂಗಳು ವಶಪಡಿಸಿಕೊಳ್ಳಲಾಯಿತು. 6) ಹಣಮಂತ ತಂದೆ ಅಂಬ್ಲಪ್ಪ ಕಟ್ಟಮನಿ ವ|| 24 ವರ್ಷ ಜಾ|| ಮಾದಿಗ ಉ|| ಡ್ರೈವರ್ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 17) ಮಾನಪ್ಪ ತಂದೆ ಯಾಬಪ್ಪ ಹಾದಿಮನಿ ವ|| 30 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 950/- ರೂಗಳು ವಶಪಡಿಸಿಕೊಳ್ಳಲಾಯಿತು. 18) ನಾಗರಡ್ಡಿ ತಂದೆ ಕೃಷ್ಣಪ್ಪ ಮಳ್ಳಿದೊರಿ ವ|| 50 ವರ್ಷ ಜಾ|| ಬೇಡರು ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 650/- ರೂಗಳು ವಶಪಡಿಸಿಕೊಳ್ಳಲಾಯಿತು. 19) ಕೃಷ್ಣಪ್ಪ ತಂದೆ ನರಸಪ್ಪ ಎಲಿತೋಟ್ ವ|| 32 ವರ್ಷ ಜಾ|| ಯಾದವ ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 750/- ರೂಗಳು ವಶಪಡಿಸಿಕೊಳ್ಳಲಾಯಿತು. 20) ಈರಣ್ಣ ತಂದೆ ಗೋಪಣ್ಣ ಹುಜರತಿ ವ|| 27 ವರ್ಷ ಜಾ|| ಕಬ್ಬಲಿಗ ಉ|| ಕೂಲಿ ಸಾ|| ತಳವಾರಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 800/- ರೂಗಳು ವಶಪಡಿಸಿಕೊಳ್ಳಲಾಯಿತು. 21) ಮಾನಪ್ಪ ತಂದೆ ಗೋವಿಂದಪ್ಪ ಪೂಜಾರಿ ವ|| 25 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 400/- ರೂಗಳು ವಶಪಡಿಸಿಕೊಳ್ಳಲಾಯಿತು. 22) ರಾಯಪ್ಪ ತಂದೆ ಶಿವಪ್ಪ ನಡುಗೇರಿ ಮೇಲಿನಮನಿ ವ|| 32 ವರ್ಷ ಜಾ|| ಬೇಡರು ಉ|| ಗೌಂಡಿ ಸಾ|| ತಳವಾರಗೇರಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 600/- ರೂಗಳು ವಶಪಡಿಸಿಕೊಳ್ಳಲಾಯಿತು. 23) ರವಿಕುಮಾರ ತಂದೆ ರಾಮಣ್ಣ ದೊಡ್ಡಮನಿ ವ|| 30 ವರ್ಷ ಜಾ|| ಹೊಲೆಯ ಉ|| ಕೂಲಿ ಸಾ|| ತಳವಾಗೇರಿ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 600/- ರೂಗಳು ವಶಪಡಿಸಿಕೊಳ್ಳಲಾಯಿತು. 24) ಮಲ್ಲಪ್ಪ ತಂದೆ ಬಲವಂತ್ರಾಯ ಕುಲಕಣರ್ಿ ವ|| 45 ವರ್ಷ ಜಾ|| ಕುರುಬರ ಉ|| ಕೂಲಿ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 25) ಮುದುಕಪ್ಪ ತಂದೆ ದೇವಣ್ಣ ಉಪ್ಪಾರ ವ|| 28 ವರ್ಷ ಜಾ|| ಉಪ್ಪಾರ ಉ|| ಒಕ್ಕಲುತನ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 500/- ರೂಗಳು ವಶಪಡಿಸಿಕೊಳ್ಳಲಾಯಿತು. 26) ಭೀಮಣ್ಣ ತಂದೆ ಹಣಮಂತ ಗಂಗನಾಳ ವ|| 30 ವರ್ಷ ಜಾ|| ಬೇಡರು ಉ|| ಒಕ್ಕಲುತನ ಸಾ|| ವಾಗಣಗೇರಿ ತಾ|| ಸುರಪುರ ಎಂದು ಹೇಳಿದ್ದು, ಈತನು ತನ್ನ ಮುಂದೆ ಬರಕಾದ ಮೇಲೆ ಪಣಕ್ಕೆ ಇಟ್ಟಿದ್ದ ಹಣ 300/- ರೂಗಳು ವಶಪಡಿಸಿಕೊಳ್ಳಲಾಯಿತು. ಇದಲ್ಲದೆ ಪಣಕ್ಕೆ ಇಟ್ಟ ಹಣ 22210/-ರೂ.ನಗದು ಹಣ ಹಾಗೂ 52 ಇಸ್ಪೀಟ ಎಲೆಗಳು ಸಿಕ್ಕಿದ್ದು ಇರುತ್ತದೆ. ಸದರಿಯವರಿಂದ ಜೂಜಾಟಕ್ಕೆ ಬಳಸಿದ ಒಟ್ಟು ನಗದು ಹಣ 42210/- ರೂಗಳು ಮತ್ತು 52 ಇಸ್ಪೀಟ ಎಲೆಗಳನ್ನು ಕೇಸಿನ ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು, ಸದರಿ ಜಪ್ತಿ ಪಂಚನಾಮೆಯನ್ನು 10-10 ಎ.ಎಮ್ ದಿಂದ 11-10 ಎ.ಎಮ್ ವರೆಗೆ ಬರೆದುಕೊಂಡಿದ್ದು ಇರುತ್ತದೆ. ನಂತರ 26 ಜನ ಆರೋಪಿತರು ಮತ್ತು ಮುದ್ದೆಮಾಲನ್ನು ಠಾಣೆಗೆ ತಂದು ಹಾಜರುಪಡಿಸುತ್ತಿದ್ದು, ಸದರ ಆರೋಪಿತರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಜರುಗಿಸಲು ವರದಿ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ. 102/2021 ಕಲಂ: 87 ಕೆ.ಪಿ ಯ್ಯಾಕ್ಟ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೇನು.

 

ಶೋರಾಪೂರ ಪೊಲೀಸ್ ಠಾಣೆ :- 103/2021 ಕಲಂ: 143 147 148 323 324,354, 504 506 ಸಂಗಡ 149 ಐಪಿಸಿ : ಇಂದು ದಿನಾಂಕಃ 06/06/2021 ರಂದು 04:30 ಪಿ.ಎಮ್ ಕ್ಕೆ ಠಾಣೆಯಲ್ಲಿರುವಾಗಶ್ರೀಮತಿ ನಸೀಮಾ ಬೇಗಂ ಗಂಡಆಜಾದಖಾನ ಖಾನಸಾಬ ಜಾತಿ:ಮುಸ್ಲಿಂ ಸಾಕೀನ: ಮೋಜಂಪೂರ ಮೊಹಲ್ಲಾ ಸುರಪೂರಇವರುಠಾಣೆಗೆ ಬಂದುಗಣಕಯಂತ್ರದಲ್ಲಿಟೈಪ್ ಮಾಡಿದಒಂದುಅಜರ್ಿತಂದುಹಾಜರಪಿಸಿದ್ದು, ಸಾರಾಂಶವೆನೆಂದರೆ, ನಿನ್ನೆದಿನಾಂಕ:05-06-2021 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ ನನ್ನಗಂಡನಾದಆಜಾಧಖಾನ ಮಗನಾದಜಾವೀದಖಾನಇವರು ಮನೆಯಲ್ಲಿರುವಾಗ ನಾನು ನಮ್ಮ ಮನೆಯ ಮುಂದೆಇರುವ ಬಚ್ಚಲ ಕಡೆ ಸ್ಥಾನ ಮಾಡಲು ಹೋಗುತ್ತಿರುವಾಗ ನಮ್ಮ ಪಕ್ಕದ ಮನೆಯವನಾದ ಮುಜಮೀಲ ತಂದೆ ಶಕೀಲ ಅಹೆಮ್ಮದಚಾರಮೀನಾರ ಇವನು ತಮ್ಮ ಮನೆಯ ಮಾಳಿಗೇಯ ಮೇಲೆ ತನ್ನಕೈಯಲ್ಲಿ ಪೋನ ಹಿಡಿದುಕೊಂಡು ನಮ್ಮಕಡೆ ನೋಡುತ್ತಾತಿರುಗಾಡುತ್ತಿರುವಾಗ ನಾನು ಅವನಿಗೆ ನಾನು ಹೆಣ್ಣು ಮಗಳು ಸ್ನಾನ ಮಾಡಲು ಹೋಗುತ್ತಿದ್ದೆನೆ ನೀನೆನು ಮಾಳೀಗೇಯ ಮೇಲೆ ಏರಿ ಪೋನ ಹಿಡಿದುಕೊಂಡುತಿರುಗಾಡುತ್ತಿದ್ದಿಅಂತಾ ಕೇಳಿದಕ್ಕೆ ನಮ್ಮ ಮನೆಯ ಮಾಳಿಗೆಯ ನಾನು ತಿರುಗಾಡುತ್ತಿನಿ ನೀನೆನು ಕೇಳುತ್ತಿ ಸುಳೇ ನಮ್ಮ ಮನೆಯವರಿಗೆಕರೆದುಕೊಂಡು ಬರುತ್ತೆನೆತಡಿಇವತ್ತು ನಿಮಗೆ ಒಂದುಗತಿಕಾಣಿಸುತ್ತೆವೆಅಂತಾ ಬೈದು ಹೋಗಿದ್ದನು. ನಾನು ಸುಮ್ಮನೆ ಮನೆಯಲ್ಲಿದ್ದೆನು. ಅಂದಾಜು ಸಾಯಂಕಾಲ 7 ಗಂಟೆ ಸುಮಾರಿಗೆ ನಾನು ನನ್ನಗಂಡನಾದಆಜಾದಖಾನ ಮಗನಾದಜಾವೀದಖಾನ ಮೂವರು ಮನೆಯ ಮುಂದಿನ ಅಂಗಳದಲ್ಲಿ ಮಾತನಾಡುತ್ತಾ ಕುಳಿತಿರುವಾಗ ನಮ್ಮ ಪಕ್ಕದ ಮನೆಯ 1) ಮುಜಮೀಲ ತಂದೆ ಶಕೀಲ ಅಹೆಮ್ಮದಚಾರಮೀನಾರ ಹಾಗೂ ಅವನ ತಂದೆಯಾದ 2) ಶಕೀಲ ಅಹೆಮ್ಮದತಂದೆರಹೀಮಸಾಬ ಚಾರಮೀನಾರ, ಮುಮೀಲನ ತಾಯಿಯಾದ 3) ಸಾನೀಯಾಗಂಡ ಶಕೀಲ ಅಹೆಮ್ಮದಚಾರಮೀನಾರ, ಮುಜಮೀಲನ ತಂಗಿಯಾದ 4) ಸುಮಯ್ಯಾ ಹಾಗೂ ಅವರೊಂದಿಗೆ ನನಗೆ ಪರಿಚಯಇರಲಾರದಇತರ ಮೂರುಜನರು ಗುಂಪು ಕಟ್ಟಿಕೊಂಡು ಬಂದವರೆಅವರಲ್ಲಿಯ ಶಕೀಲ ಅಹಮ್ಮದಈತನು ಎಲೇ ಸುಳೇ ಮಕ್ಕಳೇ ನನ್ನ ಮಗ ನಮ್ಮ ಮಾಳಿಗೇಯ ತಿರುಗಾಡಿದರೆ ಬೈಯುತ್ತಿರಂತೆಅಂತಾಅಂದವರೆ ಮಜಮೀಲ ಈತನುತನ್ನಕೈಯಲ್ಲಿಯ ಹಿಡಿದುಕೊಂಡುಒಂದುರಾಡಿನಿಂದ ನನ್ನ ಮಗನಾದಜಾವೀದಖಾನತಲೆಗೆ, ಮೊಳಕಾಲುಗಳಿಗೆ ಹೊಡೆದುರಕ್ತಗಾಯ ಮಾಡಿದನು. ನನ್ನಗಂಡನಾದಆಜಾದಖಾನಈತನಿಗೆ ಶಕೀಲ ಈತನುಒಂದು ಬಡಿಗೆಯಿಂದತಲೆಗೆ ಕೈಗೆ ಕಾಲಿಗೆ ಹೊಡೆದುರಕ್ತಗಾಯ ಮಾಡಿ ಹೊಡೆ ಬಡೆ ಮಾಡಿ ಮಾಡುತ್ತಿರುವಾಗ ಬಿಡಿಸಲು ಹೋದ ನನಗೆ ಮುಜಮೀನ ಮತ್ತು ಅವನ ತಂದೆ ಶಕೀಲ ಇಬ್ಬರು ನನ್ನ ಸೀರೆ ಸೆರಗು ಹಿಡಿದು ಎಳೇದಾಡಿ ಅವಮಾನ ಮಾಡಿದವರೆ ನೆಲಕ್ಕೆ ಕೆಡವಿ ಕಾಲಿನಿಂದಒದ್ದರು. ಸಾನೀಯಾ ಇವಳು ನನ್ನ ಮಗನಾದಜಾವೀದಖಾನಈತನ ಮುಖದ ಮೇಲೆ ಕಾರಪುಡಿ ಉಗ್ಗಿದವಳೆ ನನಗೆ ಅಲ್ಲೆ ಬಿದ್ದಒಂದು ಬಡಿಗೆಯಿಂದ ನನ್ನ ಮೊಳಕಾಲಿಗೆ, ಬಾಯಿಗೆ, ಕೈಗಳಿಗೆ ಹೊಡೆದುರಕ್ತಗಾಯ ಮತ್ತುಗುಪ್ತಗಾಯ ಪಡಿಸಿದರು. ಹಾಗೂ ನನಗೆ ಪರಿಚಯವಿರಲಾರದ ಮೂರುಜನರು ಕೆಳಗೆ ಬಿದ್ದ ನನ್ನ ಮಗನಿಗೆ ಎಲ್ಲರೂಕೂಡಿ ನಿಮಗೆ ಜೀವ ಹೊಡೆಯುವದೆ ಬಿಡುವದಿಲ್ಲ ಸುಳೆ ಮಕ್ಕಳೆ ಅಂತಾಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿರುವಾಗಅದೇ ಸಮಯಕ್ಕೆ ಶಕೀಲ ತಂದೆಅಬ್ದುಲ್ಗಫೂರಸಾಬ ಕಬಾಡಗೇರಿ, ಅಹೇಮ್ಮದತಂದೆಅಹೇಮ್ಮದ ಬುರಾನ್ಇವರು ಬಂದು ಜಗಳವನ್ನು ನೋಡಿ ಬಿಡಿಸಿದರು. ನಂತರಗಾಯಗೊಂಡ ನಾವು ಉಪಚಾರಕುರಿತು ಸುರಪೂರ ಸರಕಾರಿಆಸ್ಪತ್ರೆಗೆ ಹೋಗಿ ಉಪಚಾರ ಪಡೆದುಕೊಂಡು ನಂತರ ಮನೆಗೆ ಹೋಗಿ ನಾವೆಲ್ಲ ಮನೆಯಲ್ಲಿ ವಿಚಾರ ಮಾಡಿಠಾಣೆಗೆ ಬಂದುದೂರು ನಿಡಿದ್ದುಇರುತ್ತದೆ. ನಮಗೆ ಅವಾಚ್ಯ ಶಬ್ದಗಳಿಂದ ಬೈದುರಾಡಿನಿಂದ ಬಿಡಿಗೆಯಿಂದ ಹೊಡೆದು ರಕ್ತಗಾಯಗೊಳಿಸಿ ನನ್ನ ಸೀರೆ ಹಿಡಿದು ಎಳೇದಾಡಿ ಅವಮಾನ ಮಾಡಿಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮಜರುಗಿಸಲು ವಿನಂತಿಅಂತಾಕೊಟ್ಟಅಜರ್ಿಯ ಸಾರಾಂಶದ ಮೇಲಿಂದಠಾಣೆಗುನ್ನೆ ದಾಖಲಿಸಿಕೊಂಡು ತನಿಖೆಕೈಕೊಂಡೇನು.

ಇತ್ತೀಚಿನ ನವೀಕರಣ​ : 07-06-2021 01:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080