ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-06-2022


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 70/2022 ಕಲಂ 78(3) ಕೆ.ಪಿ ಎಕ್ಟ್ 1963 : ಇಂದು ದಿನಾಂಕ. 06/06/2022 ರಂದು 3-00 ಪಿಎಂಕ್ಕೆ ಶ್ರೀ ಮಹೆಬೂಬ ಅಲಿ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಪ್ರಭಾರ ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 06/06/2022 ರಂದು 12-30 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಹಳೆ ಬಸನಿಲ್ದಾಣದ ಮದನಪೂರಗಲ್ಲಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 1-45 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಸಾಬಣ್ಣ ತಂದೆ ತಿಮ್ಮಣ್ಣ ವ; 24 ಜಾ; ಮಾದಿಗ ಉ; ಕೂಲಿಕೆಲಸ ಸಾ; ಗುರುಸುಣಗಿ ತಾ; ವಡಗೇರಾ ಜಿ; ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 2100=00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 06/06/2022 ರಂದು 1-45 ಪಿಎಂ ದಿಂದ 2-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 3-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ. ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 70/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 71/2022 ಕಲಂ 78(3) ಕೆ.ಪಿ ಎಕ್ಟ್ : ಇಂದು ದಿನಾಂಕ. 06/06/2022 ರಂದು 6-00 ಪಿಎಂಕ್ಕೆ ಶ್ರೀ ಮಹೆಬೂಬ ಅಲಿ ಪಿ.ಎಸ್.ಐ ಸಂಚಾರಿ ಪೊಲೀಸ್ ಠಾಣೆ ಪ್ರಭಾರ ಯಾದಗಿರಿ ನಗರ ಠಾಣೆ ರವರು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಜ್ಞಾಪನ ಹಾಗೂ ಜಪ್ತಿ ಪಂಚಾನಾಮೆ ಒಪ್ಪಿಸಿದ್ದರ ಸಾರಾಂಶವೆನಂದರೆ, ಇಂದು ದಿನಾಂಕ: 06/06/2022 ರಂದು 3-50 ಪಿಎಂಕ್ಕೆ ನಾನು ಯಾದಗಿರಿ ನಗರ ಠಾಣೆಯಲ್ಲಿದ್ದಾಗ ಯಾರೋ ಒಬ್ಬನು ಯಾದಗಿರಿ ನಗರದ ಚಕ್ರಕಟ್ಟಾದಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಭಾತ್ಮಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರು ಹಾಗೂ ಇಬ್ಬರೂ ಪಂಚರು ಕೂಡಿಕೊಂಡು ಹೋಗಿ 4-30 ಪಿಎಂಕ್ಕೆ ಹೋಗಿ ದಾಳಿ ಮಾಡಿ ಆರೋಪಿತನಿಗೆ ಹಿಡಿದು ವಿಚಾರಿಸಲು ಅವರು ತನ್ನ ಹೆಸರು ಮಹಮ್ಮದ ಖಾಸೀಫ ಖಾನ ತಂ. ಮಹಮ್ಮದ ಸಾಜೀದ ಖಾನ ವಃ 47 ಜಾಃ ಮುಸ್ಲಿಂ ಉಃ ಕಿರಾಣಿ ವ್ಯಾಪಾರ ಸಾಃ ಆಸರ ಮೊಹಲ್ಲಾ ಯಾದಗಿರಿ ಅಂತಾ ತಿಳಿಸಿದ್ದು ನಂತರ ಆತನಿಗೆ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ 1) 870=00 ನಗದು ಹಣ 2) ಒಂದು ಮಟಕಾ ಚೀಟಿ ಅಂ.ಕಿ.00-00, 3) ಒಂದು ಬಾಲ ಪೆನ್ ಅಂ.ಕಿ.00-00 ಸಿಕ್ಕಿದ್ದು ಸದರಿ ಮುದ್ದೆಮಾಲನ್ನು ಮುಂದಿನ ಪುರಾವೆ ಕುರಿತು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 06/06/2022 ರಂದು 4-30 ಪಿಎಂ ದಿಂದ 5-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟಾಪದಲ್ಲಿ ಗಣಕೀಕರಣ ಮಾಡಿ ಮುಗಿಸಿದ್ದು ನಂತರ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿಪಂಚನಾಮೆಯನ್ನು ಮುಗಿಸಿಕೊಂಡು ಮರಳಿ ಠಾಣೆಗೆ 6-00 ಪಿಎಂಕ್ಕೆ ಬಂದು ಮುಂದಿನ ಕ್ರಮಕ್ಕಾಗಿ ಯಾದಗಿರಿ ನಗರ ಪೊಲೀಸ್ ಠಾಣೆ ಠಾಣಾಧಿಕಾರಿರವರಿಗೆ ಜ್ಞಾಪನಾ ಪತ್ರದೊಂದಿಗೆ ಒಪ್ಪಿಸಿದ್ದು ಇರುತ್ತದೆ. ಸದರಿ ಆರೋಪಿ ವಿರುದ್ದ ಕ್ರಮ ಜರುಗಿಸಲು ಈ ಮೂಲಕ ಸೂಚಿಸಲಾಗಿದೆ ಅಂತಾ ಕೊಟ್ಟ ಜ್ಞಾಪನದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 71/2022 ಕಲಂ.78(3)ಕೆಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ವಡಗೇರಾ ಪೊಲೀಸ್ ಠಾಣೆ:-
ಗುನ್ನೆ ನ: 83/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ : ಇಂದು ದಿನಾಂಕ:06/06/2022 ರಂದು 6-15 ಪಿಎಮ್ ಕ್ಕೆ ಶ್ರೀ ಹಣಮಂತ ತಂದೆ ಬಸಪ್ಪ ಬೆಳಗುಂದಿ, ವ:56, ಜಾ:ಮಾದಿಗ, ಉ:ಒಕ್ಕಲುತನ ಸಾ:ಶೆಟ್ಟಿಗೇರಾ ತಾ:ಜಿ:ಯಾದಗಿರಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ಟೈಪ ಮಾಡಿದ ದೂರು ಅಜರ್ಿ ಸಲ್ಲಿಸಿದ್ದರ ಸಾರಾಂಶವೇನಂದರೆ ನಿನ್ನೆ ದಿನಾಂಕ:05/06/2022 ರಂದು ನಮ್ಮ ಸ್ವಂತ ತಮ್ಮನ ಮಗನಾದ ಬಸಪ್ಪ ತಂದೆ ಶರಣಪ್ಪ ಈತನ ನಿಶ್ಚಿತಾರ್ಥ ಕಾರ್ಯಕ್ರಮವು ವಡಗೇರಾ ತಾಲೂಕಿನ ಕ್ಯಾತ್ನಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದರು. ಸದರಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ನಮ್ಮ ಹೆಣ್ಣುಮಕ್ಕಳಿಗೆ ಅಟೋಗಳಲ್ಲಿ ಮುಂದೆ ಕಳುಹಿಸಿ, ನಾವು ನಾಲ್ಕೈದು ಜನ ಗಂಡು ಮಕ್ಕಳು ನಮ್ಮ ನಮ್ಮ ಮೋಟರ್ ಸೈಕಲಗಳ ಮೇಲೆ ಕ್ಯಾತ್ನಳ ಗ್ರಾಮಕ್ಕೆ ಹೋಗಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಸಾಯಂಕಾಲ ಮರಳಿ ನಮ್ಮ ನಮ್ಮ ಮೋಟರ್ ಸೈಕಲ್ ಗಳ ಮೇಲೆ ವಾಪಸ ನಮ್ಮೂರಿಗೆ ಹೊರಟೆವು. ನನ್ನ ಮೋಟರ್ ಸೈಕಲ್ ಮೇಲೆ ನಾನು ಮತ್ತು ದುರುಗಪ್ಪ ತಂದೆ ಮರೆಪ್ಪ ಇಬ್ಬರೂ ಹೊರಟಿದ್ದೆವು. ಇನ್ನೊಂದು ಮೋಟರ್ ಸೈಕಲ್ ಮೇಲೆ ನಮ್ಮ ಇನ್ನೊಬ್ಬ ಅಣ್ಣನಾದ ಹಳ್ಳೆಪ್ಪನ ಮಕ್ಕಳಾದ ಮೌನೇಶ ಮತ್ತು ಕರೆಪ್ಪ ಇಬ್ಬರೂ ಹೊರಟಿದ್ದರು. ಮತ್ತೊಂದು ಮೋಟರ್ ಸೈಕಲ್ ಮೇಲೆ ಮಲ್ಲಪ್ಪ ತಂದೆ ಹಳ್ಳೆಪ್ಪ ಮತ್ತು ಮಹೇಶ ತಂದೆ ಶಿವಪ್ಪ ಇವರಿಬ್ಬರೂ ಹೊರಟಿದ್ದರು. ಸಾಯಂಕಾಲ 5-30 ಗಂಟೆ ಸುಮಾರಿಗೆ ಯಾದಗಿರಿ-ಶಹಾಪೂರ ಮೇನ ರೋಡ ನಾಯ್ಕಲ್ ಬೈಪಾಸ ರೊಡ ಸಮೀಪ ನಮ್ಮ ಮುಂದುಗಡೆ ನಮ್ಮಣ್ಣನ ಮಗನಾದ ಮೌನೇಶ ತಂದೆ ಹಳ್ಳೆಪ್ಪ ಈತನು ತನ್ನ ಮೋಟರ್ ಸೈಕಲ್ ನಂ. ಕೆಎ 36 ಕ್ಯೂ 5786 ನೇದರ ಮೇಲೆ ತನ್ನ ತಮ್ಮನಾದ ಕರೆಪ್ಪನಿಗೆ ಕೂಡಿಸಿಕೊಂಡು ನಿಧಾನವಾಗಿ ಹೋಗುತ್ತಿದ್ದಾಗ ಎದುರುಗಡೆಯಿಂದ ಕಾರ ನಂ. ಕೆಎ 05 ಎಮ್.ಸಿ 0354 ನೇದ್ದನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದು ಮೌನೇಶ ಮತ್ತು ಕರೆಪ್ಪನಿಗೆ ಡಿಕ್ಕಿಪಡಿಸಿದರಿಂದ ಅವರಿಬ್ಬರು ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದುಬಿಟ್ಟರು. ನಾವು ಓಡಿ ಹೋಗಿ ನೋಡಿದಾಗ ಅಪಘಾತದಲ್ಲಿ ಮೌನೇಶನಿಗೆ ಬಲ ತಲೆಗೆ ರಕ್ತಗಾಯ, ಬಲ ಕಪಾಳಕ್ಕೆ, ಮುಖಕ್ಕೆ ಹರಿದ ರಕ್ತಗಾಯ, ಬಲ ಭುಜಕ್ಕೆ ಭಾರಿ ಗುಪ್ತ ಮತ್ತು ರಕ್ತಗಾಯ, ಬಲಗಾಲ ಪಿಕ್ಕೆ ಕಂಡಕ್ಕೆ ರಕ್ತಗಾಯವಾಗಿತ್ತು. ಕರೆಪ್ಪನ ಬಲಗೈಗೆ ಒಳಪೆಟ್ಟಾಗಿತ್ತು. ಕಾರಿನ ಚಾಲಕನು ಅಲ್ಲಿಯೇ ಕಾರ ನಿಲ್ಲಿಸಿದ್ದು, ಅವನಿಗೆ ನಾವು ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಮಲ್ಲಯ್ಯ ತಂದೆ ದಂಡಪ್ಪ ಚಿಟ್ಟಾ ಸಾ:ಹುಲಕಲ್ (ಕೆ) ತಾ:ಶಹಾಪೂರ ಎಂದು ಹೇಳಿ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋದನು. ನಂತರ ನಾವು 108 ಅಂಬ್ಯುಲೇನ್ಸಗೆ ಕರೆ ಮಾಡಿ ಉಪಚಾರ ಕುರಿತು ಗಾಯಾಳುಗಳಿಗೆ ಯಾದಗಿರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ವೈದ್ಯಾಧಿಕಾರಿಗಳು ಮೌನೇಶನಿಗೆ ಪ್ರಥಮ ಉಪಚಾರ ಮಾಡಿ ಹೆಚ್ಚಿನ ಚಿಕಿತ್ಸೆ ಕುರಿತು ತಕ್ಷಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರಿಂದ ನಾವು ಮೌನೇಶನಿಗೆ ಕಲಬುರಗಿಯ ಎ.ಎಸ್.ಎಮ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತೇವೆ. ನಮ್ಮ ತಮ್ಮನ ಮಗನಿಗೆ ಕಲಬುರಗಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿ ಈಗ ಪೊಲೀಸ್ ಠಾಣೆಗೆ ಬಂದು ದೂರು ಕೊಡಲು ತಡವಾಗಿರುತ್ತದೆ. ಕಾರಣ ಸದರಿ ಕಾರಿನ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಎಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 83/2022 ಕಲಂ: 279, 337, 338 ಐಪಿಸಿ ಸಂ 187 ಐಎಮ್ವ್ಹಿ ಎಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸ್ಶೆದಾಪೂರ ಪೊಲೀಸ್ ಠಾಣೆ:-
ಗುನ್ನೆ ನಂ: 67/2022 ಕಲಂ 143, 147, 323, 354, 504, 506 ಸಂ 149 ಐಪಿಸಿ : ದಿನಾಂಕ: 06.06.2022 ರಂದು 4-30 ಪಿ.ಎಮ್ ಕ್ಕೆ ಪಿಯರ್ಾಧಿದಾರಳು ಠಾಣೆಗೆ ಹಾಜರಾಗಿ ದೂರು ನೀಡಿದ ಸಾರಾಂಶವೇನೆಂದರೆ ದಿನಾಂಕ 21.05.2022 ರಂದು ಬೆಳಿಗ್ಗೆ 11.00 ಗಂಟೆ ಆರೋಪಿತರೆಲ್ಲರೂ ಜಮೀನು ಸವರ್ೇ ನಂಬರ 473/1 ಅ ರಲ್ಲಿ ಬಂದು ಫಿಯರ್ಾದಿ ಮತ್ತು ಆಕೆಯ ಗಂಡ ಹಾಗೂ ತಾಯಿಗೆ ಅವಾಚ್ಯವಾಗಿ ಬೈದು, ಫಿಯರ್ಾದಿಗೆ ತಲೆಯ ಕೂದಲು ಹಿಡಿದು ಎಳೆದಾಡಿದ್ದು, ಫಿಯರ್ಾದಿ ತಾಯಿಗೆ ಕಾಲಿನಿಂದ ಜಾಡಿಸಿ ಒದ್ದು ಅವಮಾನ ಮಾಡಿ ಕೈಯಿಂದ ಮುಖಕ್ಕೆ, ಬೆನ್ನಿಗೆ ಹೊಡೆಬಡೆ ಮಾಡಿದ್ದು, ಫಿಯರ್ಾದಿ ಗಂಡನಿಗೆ ಅಡ್ಡಗಟ್ಟಿ ನಿಂತು ಕೈ ಮುಷ್ಟಿ ಮಾಡಿ ಎದೆಗೆ, ಹೊಟ್ಟೆಗೆ, ಬೆನ್ನಿಗೆ ಹೊಡೆಬಡೆ ಮಾಡಿದ್ದು, ಇವತ್ತು ನಮ್ಮ ಕೈಯಾಗ ಉಳಿದಿದ್ದೀರಿ ಇನ್ನೊಮ್ಮೆ ಸಿಕ್ಕರೇ ನಿಮ್ಮನ್ನು ಜೀವ ಸಹಿತ ಬಿಡುವದಿಲ್ಲ ಅಂತ ನಮಗೆ ಜೀವ ಬೆದರಿಕೆ ಹಾಕಿದ್ದು. ಕೇಸು ದಾಖಲಿಸುವ ಬಗ್ಗೆ ಮನೆಯಲ್ಲಿ ಹಿರಿಯನ್ನು ವಿಚಾರಣೆ ಮಾಡಿಕೊಂಡು ಬಂದು ಇಂದು ಠಾಣೆಗೆ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ 6 ಜನರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂಬರ 67/2022 ಕಲಂ 143, 147, 323, 354, 504, 506 ಸಂ 149 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡೆನು

 

ಇತ್ತೀಚಿನ ನವೀಕರಣ​ : 07-06-2022 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080