ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾದಗಳ ಮಾಹಿತಿ 07-07-2021

ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ: 108/2021 ಕಲಂ 78 (3) ಕೆ.ಪಿ ಕಾಯ್ದೆ : ದಿನಾಂಕ: 06-07-2021 ರಂದು ಮದ್ಯಾಹ್ನ 01-00 ಗಂಟೆಗೆ ಪಿ..ಐ ಸಾಹೇಬರು ಠಾಣೆಗೆ ಹಾಜರಾಗಿ ಸೈದಾಪೂರ ಗ್ರಾಮದ ಬಸವೇಶ್ವರ ಚೌಕ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೋಡಗಿದ ಆರೋಪಿತನಿಗೆ ದಾಳಿಮಾಡಿ ಪಂಚರ ಸಮಕ್ಷಮದಲ್ಲಿ ಹಿಡಿದುಕೊಂಡು ಅವನಿಂದ ನಗದು ಹಣ 970=00 ರೂಪಾಯಿಗಳು, ಮಟಕಾ ಬರೆದ ಚೀಟಿ ಪೆನ್ನು ಜಪ್ತಿ ಮಾಡಿಕೊಂಡು. ಬಂದು ಜಪ್ತಿ ಪಂಚನಾಮೆ ಆರೋಪಿತನನ್ನು ಮತ್ತು ಮುದ್ದೆಮಾಲುಗಳನ್ನು ಹಾಜರುಪಡಿಸಿದ್ದು ಸದರಿ ಜಪ್ತಿ ಪಂಚನಾಮೆಯ ಸಾರಂಶದ ಆಧಾರದ ಮೇಲಿಂದ ಠಾಣಾ ಗುನ್ನೆ ನಂ.108/2021 ಕಲಂ.78(3) ಕೆ.ಪಿ ಕಾಯ್ದೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.


ಸೈದಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 109/2021 ಕಲಂ. ಮಹಿಳೆ ಕಾಣೆಯಾದ ಬಗ್ಗೆ. : ಇಂದು ದಿನಾಂಕ. 06.07.2021 ರಂದು ರಾತ್ರಿ 08-30 ಗಂಟೆಗೆ ಶ್ರೀ ಖಾಜಾ ಪಟೇಲ್ ತಂದೆ ಸಿಕಿಂದರ ಪಟೇಲ್ ವಯ||31 ವರ್ಷ, ಜಾ|| ಮುಸ್ಲಿಂ, ಉ|| ಒಕ್ಕಲುತನ ಸಾ|| ಕೊಂಡಾಪೂರ ತಾ|| ಜಿ||ಯಾದಗಿರಿ ಇವರು ಠಾಣೆಗೆ ಬಂದು ಹಾಜರಾಗಿ ದೂರು ಅಜರ್ಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ, ದಿನಾಂಕ.04.07.2021 ರಂದು 7-15 ಪಿ.ಎಮ್.ಕ್ಕೆ ನಾನು ಮನೆಯಲ್ಲಿದ್ದಾಗ ನನ್ನ ಹೆಂಡತಿ ಬಯಲು ಶೌಚಕ್ಕೆ ಹೊರಗಡೆಗೆ ಹೋದವಳು ರಾತ್ರಿ 8.00 ಗಂಟೆಯಾದರು ಮನೆಗೆ ಬರಲಿಲ್ಲ. ಅವಳು ಹೋದ ಕಡೆಗೆ ಹೋಗಿ ಗೂಡುರ ರಸ್ತೆ ಕಡೆಗೆ ಹೋಗಿ ಎಲ್ಲಾ ಕಡೆಗೆ ಹುಡುಕಾಡಲಾಗಿ ನನ್ನ ಹೆಂಡತಿ ಎಲ್ಲಿಯು ಕಂಡು ಬರಲಿಲ್ಲ. ನಂತರ ನಮ್ಮ ಸಂಬಂಧಿಕರಿಗೆ ಮತ್ತು ನನ್ನ ಹೆಂಡತಿ ತವರು ಮನೆ ಕಡೆಯವರಿಗೆ ವಿಚಾರಿಸಿದ್ದು ಅವಳ ಸುಳಿವು ಸಿಕ್ಕಿರುವದಿಲ್ಲ. ಕಾಣೆಯಾದ ನನ್ನ ಹೆಂಡತಿ ಶ್ರೀಮತಿ ಸಬಿಯಾ ಬೇಗಂ ಗಂಡ ಖಾಜಾ ಪಟೇಲ್ ವಯ|| 26 ವರ್ಷ, ಜಾ|| ಮುಸ್ಲಿಂ, ಉ|| ಕೂಲಿ ಸಾ|| ಕೊಂಡಾಪೂರ ಇವಳ ಚಹರೆ ಅಗಲವಾದ ದುಂಡು ಮುಖ, ದಪ್ಪನೆಯ ದುಂಡು ಮೂಗು, ಗೋದಿ ಕೆಂಪು ಮೈಬಣ್ಣ, ಸದೃಢ ಮೈಕಟ್ಟು, ತಲೆಯಲ್ಲಿ ಉದ್ದನೆಯ ಕಪ್ಪು ಕೂದಲು ಹೊಂದಿರುತ್ತಾಳೆ. ಎತ್ತರ 4' 8 ಇದ್ದು, ಮೈಮೇಲೆ ಪಿಂಕ ಕಲರ ಕುತರ್ಾ ಮತ್ತು ಪರ್ಪಲ್ ಕಲರ ಪೈಜಾಮ ಧರಿಸಿದ್ದು ಇರುತ್ತದೆ. ನನ್ನ ಹೆಂಡತಿ ಕಾಣೆಯಾದ ಬಗ್ಗೆ ದೂರು ದಾಖಲಿಸಿ ಮುಂದಿನ ಕ್ರಮ ಕೈಕೊಳ್ಳಬೇಕು ಅಂತ ನೀಡಿದ ದೂರು ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ.109.2021 ಕಲಂ. ಮಹಿಳೆ ಕಾಣೆಯಾದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶೋರಾಪೂರ ಪೊಲೀಸ್ ಠಾಣೆ
ಗುನ್ನೆ ನಂ : 117/2020 ಕಲಂ 279, 337, 338, 304(ಎ) ಐಪಿಸಿ : ಇಂದು ದಿನಾಂಕ: 06/07/2021 ರಂದು 11:30 ಎ.ಎಂ ಕ್ಕೆ ಠಾಣೆಯಲ್ಲಿದಾಗ ಪಿಯರ್ಾದಿ ಶ್ರೀ ಕನಕಪ್ಪ ತಂದೆ ಯಲ್ಲಪ್ಪ ಹಳ್ಳಿ ವ|| 55 ವರ್ಷ ಜಾ|| ಕುರಬರ ಉ|| ಒಕ್ಕಲುತನ ಸಾ|| ಚಿಕ್ಕನಳ್ಳಿ ತಾ|| ಸುರಪುರ ಇವರು ಠಾಣೆಗೆ ಹಾಜರಾಗಿ ದೂರು ಅಜರ್ಿ ಸಾರಾಂಶವೆನಂದರೆ, ನನಗೆ ಮರೆಪ್ಪ, ಯಲ್ಲಪ್ಪ, ಮಂಜುನಾಥ ಮೂರು ಜನ ಗಂಡು ಮಕ್ಕಳು ಇದ್ದು, ಅವರಲ್ಲಿ ಕಿರಿಯ ಮಗನಾದ ಮಂಜುನಾಥ ಇತನು ಸರಕಾರಿ ಪ್ರೌಡ ಶಾಲೆ ಬಾಚಿಮಟ್ಟಿಯಲ್ಲಿ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಹಿಗಿದ್ದು ಇಂದು ದಿನಾಂಕ:06/07/2021 ರಂದು ಮುಂಜಾನೆ 8:30 ಎ.ಎಂ ಸುಮಾರಿಗೆ ನಾನು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ನಿಂತಿದ್ದಾಗ ನನ್ನ ಮಗನಾದ ಮಂಜುನಾಥ ವ|| 16 ವರ್ಷ ಹಾಗೂ ಆತನೊಂದಿಗೆ ಬಾಚಿಮಟ್ಟಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿರುವ ನಮ್ಮೂರಿನ ನಂದನಗೌಡ ತಂದೆ ಪರಮಣ್ಣಗೌಡ ಮಾಲಿಪಾಟೀಲ್, ಚಂದ್ರಕಾಂತ ತಂದೆ ಬಸಪ್ಪ ಬಳಬಟ್ಟಿ, ಪರಮಣ್ಣ ತಂದೆ ನಂದನಗೌಡ ಮಾಲಿಪಾಟೀಲ್, ಪರಮಣ್ಣ ತಂದೆ ತಿಪ್ಪಣ್ಣ ಬಳಬಟ್ಟಿ, ಮಹೇಶ ತಂದೆ ರೇಣುಕಪ್ಪ ಚಲವಾದಿ ಎಲ್ಲರು ಕೂಡಿ ಬಾಚಿಮಟ್ಟಿ ಕಡೆಗೆ ನಡೆದುಕೊಂಡು ಹೊರಟಿದ್ದಾಗ ನಾನು ಅವರಿಗೆ ವಿಚಾರಿಸಲಾಗಿ ಬಾಚಿಮಟ್ಟಿ ಪ್ರೌಢ ಶಾಲೆಗೆ ಹೊಗಿ ಹಾಲ ಟಿಕೇಟ್ ತಗೆದುಕೊಂಡು ಬರುತ್ತೆವೆ ಅಂತ ಹೇಳಿದರು. ಆಗ ಅಷ್ಟರಲ್ಲಿ ನಮ್ಮೂರಿನ ರತ್ನಪ್ಪ ತಂದೆ ನಿಂಗಪ್ಪ ಸಂಗವಾರ ಇತನು ಟ್ರ್ಯಾಕ್ಟರ ನಂ. ಕೆಎ-36 ಟಿಬಿ-707 ನೇದ್ದನ್ನು ನಡೆಸಿಕೊಂಡು ಟಿಲ್ಲರು ಹೊಡೆಯಲು ಹೊರಟಿದ್ದನು ಆಗ ನನ್ನ ಮಗ ಹಾಗೂ ಜೊತೆಗಿದ್ದ ಆತನ ಸ್ನೇಹಿತರು ಆತನಿಗೆ ಕೈ ಮಾಡಿ ಬಾಚಿಮಟ್ಟಿಗೆ ಬರುತ್ತೆವೆ ಅಂತಾ ಹೇಳಿದಾಗ ಚಾಲಕ ರತ್ನಪ್ಪನು ಹುಡ್ಡಿನಲ್ಲಿ ತನ್ನ ಅಕ್ಕ ಪಕ್ಕದಲ್ಲಿ ಕುಡಿಸಿಕೊಂಡನು. ನಂತರ 8:50 ಎ.ಎಂ ಸುಮಾರಿಗೆ ನನ್ನ ಮಗನ ಸ್ನೇಹಿತ ನಂದನಗೌಡ ತಂದೆ ಪರಮಣ್ಣಗೌಡ ಮಾಲಿಪಾಟೀಲ್ ಇತನು ನನಗೆ ಪೊನ ಮಾಡಿ ತಿಳಿಸದ್ದೇನೆಂದರೆ, ನಾವು 6 ಜನರು ರತ್ನಪ್ಪ ಇತನ ಟ್ರ್ಯಾಕ್ಟರದಲ್ಲಿ ಬಾಚಿಮಟ್ಟಿ ಕಡೆಗೆ ಹೊಗುವಾಗ ಚಿಕ್ಕನಳ್ಳಿ-ಬಾಚಿಮಟ್ಟಿ ಮುಖ್ಯ ರಸ್ತೆಯ ಮೇಲೆ ತನ್ನ ಟ್ರ್ಯಾಕ್ಟರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊಗುತ್ತಿರುವಾಗ ನಾವು ಆತನಿಗೆ ನೀದಾನವಾಗಿ ನಡೆಸು ಅಂತಾ ಹೇಳಿದರು ಅದೇ ವೇಗದಲ್ಲಿ ನಡೆಸಿಕೊಂಡು ಹೊಗಿ ಹಿಗ್ಗೆ 8:45 ಎ.ಎಂ ಕ್ಕೆ ಷಣ್ಮುಖಪ್ಪ ಬೊನಾಳ ರವರ ಹೊಲದ ಹತ್ತಿರ ರೋಡಿನ ಮೇಲೆ ಅದೇ ವೇಗದಲ್ಲಿ ಒಮ್ಮೆಲೆ ಎಡಕ್ಕೆ ಕಟ್ಟ ಮಾಡಿದಾಗ ಟ್ರ್ಯಾಕ್ಟರ ಚಾಲಕನ ನಿಯಂತ್ರಣ ತಪ್ಪಿ ಎಡಕ್ಕೆ ಪಲ್ಟಿಯಾಗಿ ಬಿದ್ದಿತು. ಸದರಿ ಅಪಘಾತದಲ್ಲಿ ನಿನ್ನ ಮಗನಾದ ಮಂಜುನಾಥನಿಗೆ ತಲೆ ಬುರುಡೆ ಒಡೆದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಚೌಡಮ್ಮ ಮಗನಾದ ಮರೆಪ್ಪ ಎಲ್ಲರು ಕೂಡಿ ಅಪಘಾತ ಸ್ಥಳಕ್ಕೆ ಹೊಗಿ ನೊಡಲಾಗಿ ಸಂಗತಿ ನೀಜವಿದ್ದು ನನ್ನ ಮಗನ ಮೃತ ದೇಹವನ್ನು ನೋಡಿದೇವು. ಆಗ ಅಲ್ಲೆ ಇದ್ದ ನಂದನಗೌಡ ಮಾಲಿಪಾಟೀಲ್ ಎಡ ಕಪಾಳಕ್ಕೆ ತರಚಿದ ಗಾಯವಾಗಿರುತ್ತದೆ. ಚಂದ್ರಕಾಂತ ಬಳಬಟ್ಟಿ ಇತನಿಗೆ ಕುತ್ತಿಗೆಗೆ ಮತ್ತು ಬಲಗಾಲ ಮೊಳಕಾಲ ಕೆಳಗೆ ತರಚಿದ ಗಾಯವಾಗಿರುತ್ತದೆ. ಪರಮಣ್ಣ ಮಾಲಿಪಾಟೀಲ್ ಇತನಿಗೆ ತಲೆಗೆ ರಕ್ತಗಾಯ, ಎಡಗಾಲ ಮೊಳಕಾಲ ಕೆಳಗೆ ತರಚಿದಗಾಯವಾಗಿರುತ್ತದೆ. ಪರಮಣ್ಣ ಬಳಬಟ್ಟಿ ಇತನಿಗೆ ಸೊಂಟಕ್ಕೆ ತರಚಿದ ಗಾಯವಾಗಿರುತ್ತದೆ. ಮಹೇಶ ಚಲವಾದಿ ಇತನಿಗೆ ಬೆನ್ನಿಗೆ ತರಚಿದ ಗಾಯ, ಎಡಗಾಲ ಮೊಳಕಾಲಿಗೆ ರಕ್ತಗಾಯವಾಗಿರುತ್ತದೆ. ಟ್ರ್ಯಾಕ್ಟರ ಚಾಲಕನಾದ ರತ್ನಪ್ಪನಿಗೆ ಎದೆಗೆ ಭಾರಿ ಗುಪ್ತಗಾಯ, ಬಲ ಬುಜಕ್ಕೆ ತರಚಿದ ಗಾಯವಾಗಿರುತ್ತದೆ ನಂತರ ಒಂದು ಖಾಸಗಿ ವಾಹನದಲ್ಲಿ ಚಾಲಕ ರತ್ನಪ್ಪ ಹಾಗೂ ಇನ್ನೂಳಿದ ಗಾಯಾಳುದಾರರಿಗೆ ಸರಕಾರಿ ಆಸ್ಪತ್ರೆ ಸುರಪುರಕ್ಕೆ ಕಳುಹಿಸಿದೇವು. ನಂತರ ನನ್ನ ಮಗನ ಮೃತ ದೇಹವನ್ನು ಸುರಪುರ ಸರಕಾರಿ ಆಸ್ಪತ್ರೆ ಶವಗಾರ ಕೋಣೆಯಲ್ಲಿ ಹಾಕಿರತ್ತೇನೆ. ಕಾರಣ ಅತಿವೇಗ ಮತ್ತು ಅಲಕ್ಷತನದಿಂದ ಟ್ರ್ಯಾಕ್ಟರ ನಡೆಸಿ ಪಲ್ಟಿಮಾಡಿದ್ದರಿಂದ ನನ್ನ ಮಗನು ಮೃತ ಪಟ್ಟು, ಇನ್ನೂಳಿದ ಐದು ಜನರಿಗೆ ಗಾಯ ಪಡಿಸಿ ತಾನು ಗಾಯ ಹೊಂದಿರುವ ಟ್ರ್ಯಾಕ್ಟರ ಚಾಲಕನಾದ ರತ್ನಪ್ಪ ಸಾಂಗವಾರ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗಿ ವಿನಂತಿ. ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 117/2021 ಕಲಂ 279, 337, 338, 304(ಎ) ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಹುಣಸಗಿ ಪೊಲೀಸ್ ಠಾಣೆ
ಗುನ್ನೆ ನಂ : 49/2021 279, 304(ಎ) ಐಪಿಸಿ : ಇಂದು ದಿನಾಂಕ:06/07/2021 ರಂದು 14.45 ಗಂಟೆಗೆ ಠಾಣೆಯ ಸುನೀಲ ಪಿಸಿ-324 ರವರು ವಿಜಯಪುರ ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಮಾಣಿಕರೆಡ್ಡಿ ಎ.ಎಸ್.ಐ ರವರು ಮೃತ ಶ್ರೀನಿವಾಸ ಈತನ ಸಂಭಂದಿಕರಿಗೆ ವಿಚಾರಣೆ ಮಾಡಿ ಪಡೆದುಕೊಂಡ ಹೇಳಿಕೆಯನ್ನು ತಂದು ಠಾಣೆಗೆ ಹಾಜರಪಡಿಸಿದ್ದು ಸಾರಾಂಶ ಏನೆಂದರೆ, ದಿನಾಂಕ:03/07/2021 ರಂದು 12.30 ಗಂಟೆಯ ಸುಮಾರಿಗೆ ಮೃತ ಶ್ರೀನಿವಾಸ ತಂದೆ ವೆಂಕಟಪ್ಪನಾಯ್ಕ ವಯ:36 ವರ್ಷ ಜಾ:ಬೇಡರ ಉ:ಮೊಬೈಲ್ ಅಂಗಡಿ ಸಾ:ಹೊರಟ್ಟಿ ಈತನು ತನ್ನ ಮೋಟಾರ್ ಸೈಕಲ್ ಕೆಎ-33 ಡಬ್ಲೂ-7505 ನೇದ್ದರ ಮೇಲೆ ಕೊಡೇಕಲ್ ದಿಂದಾ ಹುಣಸಗಿಗೆ ಹೊರಟಾಗ ಹುಣಸಗಿ ಸೀಮಾಂತರದ ಯಲ್ಲಾಲಿಂಗ ಮಠದ ಹತ್ತಿರ ಹುಣಸಗಿ-ಕೊಡೇಕಲ್ ರೋಡಿನ ಮೇಲೆ ಒಮ್ಮೇಲೆ ಒಂದು ಆಕಳು ಬಂದು ಮೋಟಾರ್ ಸೈಕಲಗೆ ಡಿಕ್ಕಿಕೊಟ್ಟಿದ್ದರಿಂದಾ ಅಪಘಾತವಾಗಿ ಮೃತನಿಗೆ ತೆಲೆಯ ಹಿಂಭಾಗಕ್ಕೆ ಭಾರಿ ಒಳಪೆಟ್ಟಾಗಿ ಬೆಹುಸ ಆಗಿದ್ದು, ಮೃತನ ಉಪಚಾರಕ್ಕೆಂದು ಹುಣಸಗಿ ಸರಕಾರಿ ದವಾಖಾನೆಗೆ ತಂದು ಉಪಚಾರ ಪಡಿಸಿ ಹೆಚ್ಚಿನ ಉಪಚಾರಕ್ಕೆಂದು ವಿಜಯಪುರ ಬಿ.ಎಲ್.ಡಿ.ಈ ಆಸ್ಪತ್ರೆಯಲ್ಲಿ ಉಪಚಾರ ಪಡಿಸುತ್ತಿದ್ದಾಗ ದಿನಾಂಕ:06/07/2021 ರಂದು ಬೆಳಿಗ್ಗೆ 09.45 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಅಂತಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದಾ ಕ್ರಮ ಜರುಗಿಸಿದ್ದು ಇರುತ್ತದೆ.

ಇತ್ತೀಚಿನ ನವೀಕರಣ​ : 07-07-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080