ಅಭಿಪ್ರಾಯ / ಸಲಹೆಗಳು

ಯಾದಗಿರ ಜಿಲ್ಲೆಯ ದೈನಂದಿನ ಅಪರಾಧಗಳ ಮಾಹಿತಿ 07-07-2022


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ 79/2022 ಕಲಂ 457, 380 ಐಪಿಸಿ : ದಿನಾಂಕ 04/07/2022 ರಂದು ಸಾಯಂಕಾಲ 10-30 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಮಗ ನರಸಿಂಹ ಇಬ್ಬರು ಕೂಡಿ ನಮ್ಮ ಮನೆ ಬೀಗ ಹಾಕಿಕೊಂಡು ನನ್ನ ಮಗ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುವುದಿಲ್ಲ ಅಂತಾ ತಿಳಿಸಿದ್ದರಿಂದ, ಅಡ್ಮೀಷನ್ ಕ್ಯಾನಸಲ್ ಮಾಡಿಸಿಕೊಂಡು ಬರಲು ಬೆಂಗಳೂರಿಗೆ ಹೊದೆವು. ದಿನಾಂಕ 05/07/2022 ರಂದು ಬೆಳಿಗ್ಗೆ 07-15 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ಮಗ ಇಬ್ಬರು ಬೆಂಗಳೂರಿನಲ್ಲಿ ಇದ್ದಾಗ ನಮ್ಮ ಮನೆಯ ಪಕ್ಕದಲ್ಲಿ ವಾಸವಿದ್ದ, ಜೈಪಾಲರೆಡ್ಡಿ ತಂದೆ ಜೈಗ್ರಾಮ ಇವರು ಪೋನ್ ಮಾಡಿ ನಿಮ್ಮ ಮನೆಯ ಬಾಗಿಲು ಕೀಲಿ ಕೊಂಡಿ ಮುರಿದು ಬಾಗಿಲು ತೆಗೆದಿದ್ದು, ಮನೆ ಕಳ್ಳತನವಾದಂತೆ ಕಂಡು ಬರುತ್ತಿದೆ ಅಂತಾ ತಿಳಿಸಿದನು. ನಂತರ ನಾನು ಸೈದಾಪೂರದಲ್ಲಿ ಇರುವ ನಮ್ಮ ತಂದೆಗೆ ಪೋನ್ ಮಾಡಿ ನಮ್ಮ ಮನೆ ಕಳ್ಳತನವಾಗಿದೆ ಅಂತಾ ನಮ್ಮ ಮನೆ ಪಕ್ಕದವರು ಪೋನ್ ಮಾಡಿ ವಿಷಯ ತಿಳಿಸಿದ್ದು, ಕೂಡಲೆ ನೀನು ನಮ್ಮ ಮನೆಗೆ ಹೋಗು ಅಂತಾ ತಿಳಿಸಿದೆನು. ನಂತರ ನಮ್ಮ ತಂದೆಯಾದ ನರಸಿಂಗಪ್ಪ ತಂದೆ ಮಲ್ಲಪ್ಪ ಮುದಕನಳ್ಳಿ ಈತನು ನಮ್ಮ ಮನೆಗೆ ಬಂದು ನೋಡಿ ಮನೆ ಕಳ್ಳತನವಾಗಿದೆ ಎಲ್ಲಾ ಕಡೆ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ ಅಂತಾ ತಿಳಿಸಿದಾಗ ನಾನು ನಾವು ಬರುವ ವರೆಗೆ ನೀನು ಮನೆ ನೋಡಿಕೊಂಡು ಅಲ್ಲೆ ಇರು ನಾನು ಬಂದ ನಂತರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡೋಣ ಅಂತಾ ಹೇಳಿದೆನು. ನಂತರ ಇಂದು ದಿನಾಂಕ 06/07/2022 ರಂದು ಬೆಳಿಗ್ಗೆ 04-30 ಗಂಟೆಯ ಸುಮಾರಿಗೆ ನಾನು ನನ್ನ ಮಗ ಇಬ್ಬರು ಕೂಡಿ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿದ್ದು, ಅಲಮರಿ ಕೂಡ ಮುರಿದಿದ್ದು ಕಂಡು ಬಂತು. ನೋಡಲಾಗಿ ಅಲಮರಿಯಲ್ಲಿ ಇದ್ದ 1] 4 ತೊಲೆ ಬಂಗಾರದ 2 ಬಳೆಗಳು, ಅ.ಕಿ 1,80,000/- ರೂ|| ಗಳು, 2] ಒಂದು 2 ತೊಲೆ ಬಂಗಾರದ ಲಾಕೇಟ್, ಅ.ಕಿ 90,000/- ರೂ|| ಗಳು, 3] ತಲಾ ಒಂದು ತೊಲೆಯ 2 ಬಂಗಾರದ ಹುಡುಗರ ಚೈನ್ಗಳು, ಅ.ಕಿ 90,000/- ರೂ|| ಗಳು, 4] ತಲಾ 05 ಗ್ರಾಂ. ಬಂಗಾರದ 2 ಉಂಗುರಗಳು, ಅ.ಕಿ 45,000/- ರೂ|| ಗಳು, 5] ಒಂದು 10 ಗ್ರಾಂ. ಬಂಗಾರದ ಬೋರಮಳ ಸರಾ, ಅ.ಕಿ 45,000/- ರೂ|| ಗಳು, 6] ತಲಾ 4 ತೊಲೆಯ 2 ಜೊತೆ ಬೆಳ್ಳಿ ಕಾಲು ಚೈನ್, 4,000/- ರೂ|| ಗಳು, 7] ಒಂದು ತೊಲೆ ಬೆಳ್ಳಿ ಬ್ರಾಸ್ ಲೈಟ್, ಅ.ಕಿ 500/- ರೂ|| ಗಳು ಮತ್ತು 8] ಒಂದು ತೊಲೆಯ ಒಂದು ಬೆಳ್ಳಿ ಉಡುದಾರ ಅ.ಕಿ 500/- ರೂ|| ಗಳು ಕಾಣಲಿಲ್ಲ. ಹೀಗೆ ಒಟ್ಟು 4,55,000/- ರೂ|| ಕಿಮ್ಮತ್ತಿನ 10 ತೊಲೆ ಬಂಗಾರದ ಆಭರಣಗಳು ಮತ್ತು 10 ತೊಲೆ ಬೆಳ್ಳಿಯ ಆಭರಣಗಳು ಕಳ್ಳತನವಾಗಿದ್ದವು. ಸುದ್ದಿ ತಿಳಿದು ಮನೆಯ ಪಕ್ಕದವರಾದ 1] ಕೆ.ಮಾದವರಾವ್ ತಂದೆ ನರಸಿಂಹರಾವ್ ಮೂತರ್ಿ ಇವರಿಗೆ ತಿಳಿಸಿದಾಗ ಅವರು ಕೂಡ ಮನೆಗೆ ಬಂದು ನೋಡಿ ಘಟನೆಯ ಬಗ್ಗೆ ವಿಚಾರಿಸಿದರು. ನಾನು ಬೆಳಗಳೂರಿನಿಂದ ಇಂದು ಠಾಣೆಗೆ ಬಂದು ದೂರು ನೀಡುತ್ತಿದ್ದು, ನಮ್ಮ ಮನೆಯಲ್ಲಿ ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಮಾನ್ಯರವರಲ್ಲಿ ವಿನಂತಿ ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 79/2022 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಯಾದಗಿರಿ ನಗರ ಪೊಲೀಸ್ ಠಾಣೆ:-
ಗುನ್ನೆ ನಂ: 80/2022 ಕಲಂ. 379 ಐಪಿಸಿ : ಇಂದು ದಿನಾಂಕ: 06/07/2022 ರಂದು 1-00 ಪಿಎಂಕ್ಕೆ ಶ್ರೀ ಚಂದ್ರಶೇಖರ ನಾರಾಯಣಪೂರ ಪಿ.ಎಸ್.ಐ (ಕಾ.ಸು) ಯಾದಗಿರಿ ನಗರ ಪೊಲೀಸ್ ಠಾಣೆ ರವರ ಠಾಣೆಗೆ ಬಂದು ಜ್ಞಾಪನಾ ಪತ್ರ ಮತ್ತು ಮುದ್ದೆ ಮಾಲನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ:06/07/2021 ರಂದು 12-00 ಪಿಎಮ್ ಸುಮಾರಿಗೆ ನಾನು ಮತ್ತು ಸಂಗಡ ಸಿಬ್ಬಂದಿಯವರಾದ ಜಗನ್ನಾಥರೆಡ್ಡಿ ಹೆಚ್.ಸಿ-10, ಮಡಿವಾಳಪ್ಪ ಪಿ.ಸಿ-105 ಇವರೊಂದಿಗೆ ಠಾಣೆಯ ಜೀಪ್ ನಂಬರ ಕೆಎ.33.ಜಿ.0075 ನೇದ್ದರಲ್ಲಿ ಯಾದಗಿರಿ ನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ ಅಂಬೇಡ್ಕರ ಚೌಕದಿಂದ ಗಾಂಧಿಚೌಕ ಕಡೆಗೆ ಹೋಗುತ್ತಿರುವಾಗ ಕನಕಚೌಕ ಕ್ರಾಸದಲ್ಲಿ ಯಾದಗಿರಿ ನಗರಸಭೆ ಕಡೆಯಿಂದ 12-10 ಪಿಎಮ್ ಸುಮಾರಿಗೆ ಒಂದು ಟ್ರಾಕ್ಟರದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಎದುರಿಗೆ ಬರುತ್ತಿದ್ದು ಆಗ ನಾವು ಕೈ ಮಾಡಿ ನಿಲ್ಲಿಸುವಂತೆ ಸೂಚನೆ ಮಾಡಿದಾಗ ಚಾಲಕನು ಟ್ರಾಕ್ಟರನ್ನು ಕನಕಕ್ರಾಸದಲ್ಲಿ ನಿಲ್ಲಿಸಿದವನೇ ಓಡಿ ಹೋಗಿದ್ದು ನಂತರ ನಾವು ಟ್ರ್ಯಾಕ್ಟರ ಹತ್ತಿರ ಹೋಗಿ ಟ್ರಾಕ್ಟರನ್ನು ಪರಿಶೀಲಿಸಲಾಗಿ ಟ್ರಾಕ್ಟರ ಇಂಜಿನ್ ಮತ್ತು ಟ್ರಾಲಿಗೆ ನೊಂದಣಿ ಸಂಖ್ಯೆ ಇರುವುದಿಲ್ಲ. ಟ್ರಾಕ್ಟರ ಚೆಸ್ಸಿ ನಂ.558362ಏಃಂಚ ಹಾಗೂ ಇಂಜೀನ್ ನಂ.ಖ3251ಅ50318 ಮತ್ತು ಟ್ರಾಲಿ ಚೆಸ್ಸಿ ನಂ. 872014 ನೇದ್ದು ಇದ್ದು ಟ್ರಾಕ್ಟರದಲ್ಲಿ ಮರಳು ತುಂಬಿದ್ದು ಟ್ರಾಕ್ಟರ ಚಾಲಕನು ಟ್ರಾಕ್ಟರ ಚಾವಿ ಬಿಟ್ಟು ಓಡಿ ಹೋಗಿದ್ದರಿಂದ ಸದರಿ ಟ್ರಾಕ್ಟರದಲ್ಲಿ ಮರಳು ತುಂಬಿರುವ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೇ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ತುಂಬಿಕೊಂಡು ಸಾಗಿಸುತ್ತಿದ್ದ ಬಗ್ಗೆ ಖಾತ್ರಿಪಡಿಸಿಕೊಂಡಿದ್ದು, ಟ್ರಾಕ್ಟರ ಚಾಲಕನು ಓಡಿ ಹೋಗಿದ್ದರಿಂದ ಚಾಲಕ ಮತ್ತು ಮಾಲೀಕನ ಹೆಸರು ತಿಳಿದು ಬಂದಿರುವುದಿಲ್ಲ. ಟ್ರಾಕ್ಟರ ಚಾಲಕ ಮತ್ತು ಮಾಲೀಕರು ಕೂಡಿಕೊಂಡು ರಾಯಲ್ಟಿ ಪಡೆಯದೇ ಸಕರ್ಾರಕ್ಕೆ ಯಾವುದೇ ರಾಜಧನ ಭರಿಸದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಟ್ರಾಕ್ಟರನ್ನು ಸಿಬ್ಬಂದಿಯವರ ಸಹಾಯದಿಂದ ಠಾಣೆಗೆ 12-30 ಪಿಎಮ್ ಕ್ಕೆ ತಂದು ಠಾಣೆಯ ಮುಂದೆ ನಿಲ್ಲಿಸಿ, ಠಾಣಾಧಿಕಾರಿಗಳಿಗೆ ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟ್ರಾಕ್ಟರ ಚೆಸ್ಸಿ ನಂ.558362ಏಃಂಚ ಹಾಗೂ ಇಂಜೀನ್ ನಂ.ಖ3251ಅ50318 ಮತ್ತು ಟ್ರಾಲಿ ಚೆಸ್ಸಿ ನಂ. 872014 ನೇದ್ದು ಅ.ಕಿ.2,00,000/-ರೂ, ಮತ್ತು ಮರಳು ಅ.ಕಿ.1,000/-ರೂ ನೇದ್ದವುಗಳನ್ನು ಒಪ್ಪಿಸಿ, ನನ್ನ ಉಕ್ತ ಲೇಖನದ ಮೇರೆಗೆ ಕಂಪ್ಯೂಟರನಲ್ಲಿ ಫಿರ್ಯಾಧಿಯನ್ನು ಟೈಪ ಮಾಡಿಸಿ, ಠಾಣೆಯಲ್ಲಿಯೇ ಪ್ರಿಂಟ್ ತೆಗೆದು ನಾನು ಸಹಿ ಮಾಡಿದ ಫಿರ್ಯಾಧಿಯನ್ನು 1-00 ಪಿಎಮ್ ಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ, ಠಾಣಾಧಿಕಾರಿಗಳು ಯಾದಗಿರಿ ನಗರ ಠಾಣೆರವರಿಗೆ ಟ್ರಾಕ್ಟರ ಚಾಲಕ ಮತ್ತು ಮಾಲೀಕರ ಮೇಲೆ ಸೂಕ್ತ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ನೀಡಿದ್ದು ಇರುತ್ತದೆ. ಅಂತಾ ನೀಡಿದ ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.80/2022 ಕಲಂ.379 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ:-
ಗುನ್ನೆ ನಂಬರ 121/2022 ಕಲಂ: 78 (3) ಕೆಪಿ ಆಕ್ಟ್ : ಇಂದು ದಿನಾಂಕ: 06/07/2022 ರಂದು 07-15 ಪಿ.ಎಮ್ ಸರಕಾರಿ ತಪರ್ೆ ಪಿರ್ಯಾದಿ ಶ್ರೀ ಬಾಬುರಾವ ಪಿ.ಎಸ್.ಐ(ಕಾಸು) ಶಹಾಪೂರ ಪೊಲೀಸ ಠಾಣೆ ರವರು ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶವೆನೆಂದರೆ ಇಂದು ದಿನಾಂಕ:06/07/2022 ರಂದು 04.00 ಪಿ.ಎಮ್.ಕ್ಕೆ ಠಾಣೆಯಲ್ಲಿದ್ದಾಗ ಸಗರ(ಬಿ) ಗ್ರಾಮದ ಬಸ್ ನಿಲ್ದಾಣದಲ್ಲಿ ರಸ್ತೆ ಮೇಲೆ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿರಿಗೆ ಕೂಗಿ ಕರೆದು ಮಟಕಾ ನಂಬರ ಬರೆದುಕೊಳ್ಳುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂದಿಯವರಾದ ಶ್ರೀ ಶಂಕರ ಎ.ಎಸ್.ಐ, ಶ್ರೀ ಶಂಕರಲಿಂಗ ಹೆಚ್.ಸಿ-131, ಶ್ರೀ ಗುರುಶೇಖರ ಪಿ.ಸಿ-186, ರವರನ್ನು ಕರೆದು ಸದರಿ ವಿಷಯವನ್ನು ತಿಳಿಸಿ, ಗುರುಶೇಖರ ಪಿ.ಸಿ-186 ರವರಿಗೆ ದಾಳಿಗಾಗಿ ಇಬ್ಬರ ಪಂಚರನ್ನು ಕರೆಯಿಸಲು ತಿಳಿಸಿದ್ದರಿಂದ ಪಂಚರಾದ 1)ಶ್ರೀ ಮಲ್ಲಣ್ಣ ತಂದೆ ದ್ಯಾವಪ್ಪ ಕೊಬ್ಬರಿ ವಯಾ: 39 ವರ್ಷ ಜಾತಿ: ಗಾಣಿಗ ಉ: ಒಕ್ಕಲುತನ ಸಾ: ಸಗರ(ಬಿ) ತಾ: ಶಹಾಪೂರ 2) ಶ್ರೀ ಶರಣು ತಂದೆ ಮಲ್ಲಿಕಾಜರ್ುನ ಇರಪಾಪೂರ ವಯಾ: 25 ವರ್ಷ ಜಾತಿ: ಗಾಣಿಗ ಉ: ಒಕ್ಕಲುತನ ಸಾ: ಸಗರ(ಬಿ) ತಾ: ಶಹಾಪೂರ ಇವರನ್ನು ಪಂಚರು ಅಂತಾ ಬರಮಾಡಿಕೊಂಡು ಸದರಿಯವರಿಗೆ ವಿಷಯ ತಿಳಿಸಿ ನಾನು, ಪಂಚರು ಮತ್ತು ಸಿಬ್ಬಂದಿವರೊಂದಿಗೆ ಠಾಣೆಯಿಂದ 04.30 ಪಿ.ಎಮ್.ಕ್ಕೆ ಒಂದು ಖಾಸಗಿ ವಾಹನದಲ್ಲಿ ಹೊರಟು 05.00 ಪಿ.ಎಮ್.ಕ್ಕೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಜನರನ್ನು ಕೂಗಿ ಕರೆಯುತ್ತಾ ಬರ್ರಿ ಬರ್ರಿ ಇದು ದೈವಲೀಲೆಯ ಆಟ ಮಟಕಾ ನಂಬರ ಬರೆಯಿಸಿ ಅದೃಷ್ಟವಂತರಾಗಿರಿ ಒಂದು ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತಾ ಕೂಗಿ ಕರೆಯುತ್ತಾ ನಂಬರ ಬರೆದುಕೊಂಡು ಚೀಟಿ ಬರೆದು ಕೊಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂದಿಯವರು ಕೂಡಿ 05.05 ಪಿ.ಎಮ್.ಕ್ಕೆ ದಾಳಿ ಮಾಡಿದ್ದು ಮಟಕಾ ನಂಬರ ಬರೆಯಿಸಲು ಬಂದಿದ್ದ ಜನರು ಓಡಿ ಹೋಗಿದ್ದು ಮಟಕಾ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಸಿಕ್ಕಿದ್ದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಕಲ್ಲಪ್ಪ ತಂದೆ ಭೀಮರಾಯ ಸಿದ್ರಾ ವಯಾ: 54 ವರ್ಷ ಜಾ: ಗಾಣಿಗ ಉ: ಮಟಕ ಬರೆದುಕೊಳ್ಳುವದು ಸಾ: ಸಗರ(ಬಿ) ತಾ: ಶಹಾಪೂರ ಅಂತಾ ತಿಳಿಸಿದ್ದು ಸದರಿಯವರಿಗೆ ಪರಿಶೀಲನೆ ಮಾಡಲಾಗಿ ಆತನ ಹತ್ತಿರ ಮಟಕಾ ಜೂಜಾಟಕ್ಕೆ ಉಪಯೋಗಿಸಿದ 1) 2850 ರೂ. ನಗದು ಹಣ 2) ಒಂದು ಮಟಕಾ ನಂಬರ ಬರೆದ ಚೀಟಿ ಅ.ಕಿ.00=00 ಮತ್ತು 3) ಒಂದು ಬಾಲ್ ಪೆನ್ ಅ.ಕಿ. 00=00 ಸಿಕ್ಕಿದ್ದು ಅವುಗಳನ್ನು ಪಂಚರ ಸಮಕ್ಷಮದಲ್ಲಿ ನಾನು ಜಪ್ತಿ ಪಂಚನಾಮೆಯನ್ನು 05.05 ಪಿ.ಎಮ್ ದಿಂದ 06:05 ಪಿ.ಎಮ್.ದ ವರೆಗೆ ಸ್ಥಳದಲ್ಲೆ ಕುಳಿತು ಪಂಚನಾಮೆಯನ್ನು ಬರೆದು ಮುಗಿಸಲಾಯಿತು. ಒಬ್ಬ ಆರೋಪಿ ಮತ್ತು ಮುದ್ದೇಮಾಲನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮರಳಿ ಠಾಣೆಗೆ ಬಂದು ವರದಿ ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ: 121/2022 ಕಲಂ: 78(3) ಕೆ.ಪಿ ಯಾಕ್ಟ ಅಡಿಯಲ್ಲಿ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.


ಕೊಡೇಕಲ್ ಪೊಲೀಸ್ ಠಾಣೆ:-
ಗುನ್ನೆ ಸಂಖ್ಯೆ 51/2022 ಕಲಂ 3 & 7 ಇ.ಸಿ.ಆಕ್ಟ್ : ಇಂದು ದಿನಾಂಕ:10.04.2022 ರಂದು 12:30 ಪಿಎಮ್ ಕ್ಕೆ ಪಿಯರ್ಾದಿ ಶ್ರೀ ಆದಯ್ಯಸ್ವಾಮಿ ತಂದೆ ರುದ್ರಯ್ಯಸ್ವಾಮಿ ಹಿರೇಮಠ ವಯ|| 42 ವರ್ಷ, ಜಾ|| ಹಿಂದೂ ಜಂಗಮ ಉ|| ಆಹಾರ ನಿರೀಕ್ಷಕರು, ಸಾ|| ನಾರಾಯಣಪೂರ ತಾ|| ಹುಣಸಗಿ ಜಿ|| ಯಾದಗಿರಿ ಹಾ.ವ||ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿಕೊಂಡು ತಂದ ಪಿಯರ್ಾದಿ ದೂರು ಅಜರ್ಿಯನ್ನು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ, ನಾನು ಸುರಪೂರ ತಾಲೂಕಿನ ಆಹಾರ ನೀರಿಕ್ಷಕ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೀಗಿದ್ದು ದಿನಾಂಕ 05.07.2022 ರಂದು ಉಪನಿದರ್ೇಶಕರು ಆಹಾರ ಸರಬರಾಜು ಇಲಾಖೆ ಯಾದಗಿರಿ ರವರಿಂದ ನಮಗೆ ಮಾಹಿತಿ ಬಂದಿದ್ದೆನೆಂದರೆ ಕಕ್ಕೇರಾ ಪಟ್ಟಣದಲ್ಲಿ ಹಣಮಂತ್ರಾಯ ತಂದೆ ಮರೆಪ್ಪ ದೊರಿ @ ಪಂಡ್ರಿ ರವರ ಹೊಲದಲ್ಲಿಯ ತಗಡಿನ ಶೆಡ್ನಲ್ಲಿ ಸಾರ್ವಜನಿಕ ಪಡಿತರ ವಿತರಣೆ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ್ದಾರೆ ಕೂಡಲೇ ನೀವು ಕ್ರಮ ಕೈಗೊಳ್ಳಿರಿ ಅಂತಾ ತಿಳಿಸಿದರು. ನಿನ್ನೆ ದಿನಾಂಕ 05.07.2022 ರಂದು 7:00 ಪಿಎಮ್ಕ್ಕೆ ಪಂಚರ ಸಮಕ್ಷಮ ಕಕ್ಕೇರಾ ಪಟ್ಟಣದ ಹಣಮಂತ್ರಾಯ ತಂದೆ ಮರೆಪ್ಪ ದೊರಿ @ ಪಂಡ್ರಿ ರವರ ಹೊಲದಲ್ಲಿಯ ತಗಡಿನ ಶೆಡ್ನಲ್ಲಿ ಸಂಗ್ರಹಿಸಿದ ಒಟ್ಟು 29.75 ಕ್ವಿಂಟಲ್ ಅಕ್ಕಿ ಅ.ಕಿ. 71400 ರೂಪಾಯಿಗಳು ಬೆಲೆ ಬಾಳುವ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿ ಜಪ್ತಿ ಪಡಿಸಿಕೊಳ್ಳಲಾಗಿದೆ. ನಿನ್ನೆ ದಿನ ರಾತ್ರಿಯಾಗಿದ್ದರಿಂದ ನಮ್ಮ ಸಿಬ್ಬಂದಿವರಾದ ಸಾಗರ ಅಂಬೂರೆ ಕಂಪ್ಯೂಟರ್ ಆಪರೇಟರ್ ರವರಿಗೆ ಸದರಿ ಅಕ್ಕಿಯ ಬೆಂಗಾವಲು ಕುರಿತು ನೇಮಿಸಿದ್ದು ಇರುತ್ತದೆ. ಸದರಿ ಶೆಡ್ನ ಮಾಲೀಕನಾದ ಹಣಮಂತ್ರಾಯ ತಂದೆ ಮರೆಪ್ಪ ದೊರಿ ಸಾ:ಕಕ್ಕೇರಾ ತಾ:ಸುರಪೂರ ಇತನು ಓಡಿ ಹೋಗಿದ್ದು ಕಾರಣ ಇತನ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ-1955 ಕಲಂ 3, 7 ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿದೆ. ಜಪ್ತಿಪಡಿಸಿಕೊಂಡ ಅಕ್ಕಿಯನ್ನು ಒಂದು ಖಾಸಗಿ ಕೆಎ-28 ಬಿ-9441 ವಾಹನದಲ್ಲಿ ಹಮಾಲರ ಸಹಾಯದಿಂದ ತುಂಬಿಸಿ ತಮ್ಮ ಠಾಣೆಗೆ ತರಲಾಗಿದೆ ಅಂತಾ ಪಿಯರ್ಾದಿಯ ದೂರು ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:51/2022 ಕಲಂ: 3 & 7 ಇಸಿ ಆಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

ಇತ್ತೀಚಿನ ನವೀಕರಣ​ : 11-07-2022 12:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಯಾದಗಿರಿ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080